ತಾಯಿ ಕಲಿಸಿದ ಮೊದಲ ಭಾಷೆ
ಕಂದನ ತೊದಲು ನುಡಿಗೆ ನಕ್ಕು
ಕಲಿತು ಕಲಿಸಿದ ಮೊದಲ ಭಾಷೆ

ಮಾತೃಭಾಷೆಗೆ ಕೀಳು-ಮೇಲಿಲ್ಲ
ಜಾತಿ-ಮತ ಭೇದ-ಭಾವವಿಲ್ಲ
ಅವರವರ ಭಾಷೆಯೇ ಶ್ರೇಷ್ಠ

ಜಾಗತಿಕ ಭಾಷಾ ದಿನದ ಆಚರಣೆ
ನಾಡು-ನುಡಿಯ ಶಬ್ದಗಳಾಕರ್ಷಣೆ
ಪದ-ಪುಂಜಗಳಿಗೆ ಗೌರವಾದರಣೆ

ವಿಶ್ವದಿ ಕೋಟಿ ಭಾಷೆಗಳುಂಟು
ಭಾಷಾ ಬಾಂಧವ್ಯದ ಕೊಡುಗೆ
ಜನರ ಮಧ್ಯೆ ಪ್ರೇಮದ ಬೆಸುಗೆ

ಭಾವೈಕ್ಯತೆಗೆ ಬೇಕು ಭಾಷಾ ಪ್ರೇಮ
ಪ್ರಾಣಿ-ಪಶು ಪಕ್ಷಿಗಳಿಗೂ ಭಾಷೆ ಮೂಲ
ದೇಶ ವಿಕಾಸಕೆ ವಿವಿಧ ಭಾಷೆ ಬೇಕು

ನನಗೆ ನನ್ನ ಕನ್ನಡ ಭಾಷೆಯೇ ಚೆಂದ
ಆತ್ಮೀಯ ತಾಯಿ ಭಾಷೆಯ ಅಂದ
ಉಳಿಸಿ ಬೆಳೆಸುವ ಆತ್ಮಾನಂದ

✍️ ಅನ್ನಪೂರ್ಣ ಸಕ್ರೋಜಿ, ಪುಣೆ