ಬೆಳಗಾವಿ- ಫೆಬ್ರವರಿ, ಬೆಂಗಳೂರಿನ ಬನ್ನೇರುಘಟ್ಟದ ಶ್ರೀ ಸದ್ಬಾವನ ಶಿಕ್ಷಣ ಸಂಸ್ಥೆಯ ಭವ್ಯ-ದಿವ್ಯ ಸಭಾಂಗಣದ ವೇದಿಕೆಯಲ್ಲಿ ನಡೆದ ವಿಶ್ವ ದಾಖಲೆಯ ಅಪರೂಪದ ರಾಜ್ಯ ಮಟ್ಟದ ಕರುನಾಡ ಕವಿಗಳ ಸಂಭ್ರಮದ ಸಮಾರಂಭದಲ್ಲಿ ಬೆಂಗಳೂರಿನ ಶ್ರೀ ಜನಸಿರಿ ಪೌಂಢೇಷನ್ ಸಂಸ್ಥೆಯಿಂದ ದಾವಣಗೆರೆಯ “ಸಾಂಸ್ಕೃತಿಕ ರಾಯಭಾರಿ”, “ಯಕ್ಷಗಾನ ರಾಯಭಾರಿ” ಎಂದೇ ಖ್ಯಾತರಾದ ಕಳೆದ ನಾಲ್ಕು ದಶಕಗಳಿಂದ ಕಠಿಣ ಪರಿಶ್ರಮದಿಂದ ನಿರಂತರ ಕ್ರಿಯಾಶೀಲರಾಗಿ ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿ ಎಂಬ ಪರಿವರ್ತನೆಯ ರೂವಾರಿಯಾದ ಶ್ರೀಯುತ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಅವರ ಸಾಧನೆಗಳನ್ನು ಗುರುತಿಸಿ “ಜನಸಿರಿಸ್ವಾಮಿ ವಿವೇಕಾನಂದ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದು ಈ ಸಂಘಟನೆಯ ಸಂಸ್ಥಾಪಕರಾದ ನಾಗಲೇಖರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜೃಂಭಣೆಯಿಂದ ನಡೆದ ಸಮಾರಂಭದ ಈ ಪವಿತ್ರ ವೇದಿಕೆಲ್ಲಿ ವಿವಿಧ ಮಠಗಳ ಜಗದ್ಗುರುಗಳು, ಹಿರಿಯ ಗಾಯಕ, ಸಂಗೀತ ನಿರ್ದೇಶಕ ವಿ. ಮನೋಹರ, ಖ್ಯಾತ ಹಾಸ್ಯ ನಿರೂಪಕಿ, ವಾಗ್ಮಿ ಶ್ರೀಮತಿ ಸುಧಾ ಬರಗೂರು, ಹಾವೇರಿ ಜಿಲ್ಲೆಯ ಕನ್ನಡ ಸೇವಾ ಜಿಲ್ಲಾಧ್ಯಕ್ಷರಾದ ಪಿ.ವಿ. ಮಠದ, ರಾಣೇಬೆನ್ನೂರಿನ ಯುವ ಕವಿ, ಸಾಹಿತಿ ಬಸವರಾಜ ಬಾಗೇವಾಡಿ ಮಠ ಸೇರಿದಂತೆ ಹಿರಿಯ ಸಾಹಿತಿಗಳು, ಕವ, ಕವಯತ್ರಿಯರು ಉಪಸ್ಥಿತರಿದ್ದರು.