ಮದ್ದೂರು ತಾಲ್ಲೂಕಿನ ಶ್ರೀಮತಿ ಪದ್ಮ ಶ್ರೀನಿವಾಸ್ ಕೌಡ್ಲೆರವರಿಗೆ ‘ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ’
ಮದ್ದೂರು ತಾಲ್ಲೂಕಿನ ಶ್ರೀಮತಿ ಪದ್ಮ ಶ್ರೀನಿವಾಸ್ ಕೌಡ್ಲೆರವರು, ಬೆಳಗಾವಿ ಜಿಲ್ಲೆಯ, ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಜರುಗಿದ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆ ಆಗಿದೆ ಎಂದು ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರೊ. ಎಲ್.ಎಚ್. ಪೆಂಡಾರಿ(ಕವಿತ್ತ ಕರ್ಮಮಣಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಮತಿ ಪದ್ಮಶ್ರೀನಿವಾಸ್‌ರವರು, ಮದ್ದೂರು ತಾಲ್ಲೂಕು, ಕೌಡ್ಲೆ ಗ್ರಾಮದ, ತಿಮ್ಮಯ್ಯ ಚಂದ್ರಮ್ಮರವರ ಸುಪುತ್ರಿ, ಇವರು 1987ರಲ್ಲಿ ಸಮಾಜ ಸೇವಕರು ಹಾಗೂ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ರವರನ್ನು ವಿವಾಹವಾದರು.
ಇವರು ಹಲವಾರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ವಿತರಣೆ, ರಾಷ್ಟ್ರೀಯ ಹಬ್ಬಗಳಲ್ಲಿ ಸಿಹಿ ವಿತರಣೆ, ವೃದ್ಧರಿಗೆ ಉಚಿತವಾಗಿ ಆರೋಗ್ಯ ಸೇವೆ ಕಲ್ಪಿಸುವುದು ಹಾಗೂ ಮಹಿಳೆಯವರಿಗೆ ಸರ್ಕಾರದ ಅನೇಕ ಸವಲತ್ತುಗಳನ್ನು ಒದಗಿಸಿಕೊಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಇಂದಿಗೂ ಕೂಡ ಸ್ತ್ರೀ ಶಕ್ತಿ ಒಕ್ಕೂಟದ ಮದ್ದೂರು ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಮನಗಂಡು ಬೆಂಗಳೂರಿನ ರಾಜ್ಯ ಘಟಕದ ಗೌಡತಿಸೇನೆಗೆ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುತ್ತಾರೆ. ಹಲವು ಮುಖ್ಯ ರಾಜಕಾರಣಿಗಳ ಒಡನಾಟದಲ್ಲಿದ್ದು ತಾಲ್ಲೂಕು ಮತ್ತು ಹಲವಾರು ಗ್ರಾಮಗಳಿಗೆ ಸರ್ಕಾರದ ಸವಲತ್ತುಗಳನ್ನು ಕೊಡಿಸುವಲ್ಲಿ ಸಫಲರಾಗಿದ್ದಾರೆ. ಇವರ ಅಪರಿಮಿತ ಸಮಾಜ ಸೇವೆಯನ್ನು ಗುರುತಿಸಿ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.