ಅಭಿಲಾಷೆ ಕಾದಂಬರಿ ಸಂಚಿಕೆ -56
ಆತ್ಮೀಯ ಓದುಗರಿಗೆ ವಂದನೆಯನ್ನು ತಿಳಿಸುತ್ತಾ 🙏🙏
ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 56 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ
- ಹಿಂದಿನ ಸಂಚಿಕೆಯಲ್ಲಿ
ತನ್ನಣ್ಣ ಕಾಣೆಯಾಗಿರುವ ಬಗ್ಗೆ ಆಶಾ ಅಭಿಜಿತ್ ಗೆ ತಿಳಿಸಿದ್ದು, ಹುಡುಕಲು ಪ್ರಯತ್ನಿಸುತ್ತೇನೆಂದು ಅಭಿಜಿತ್ ಹೇಳಿರುತ್ತಾನೆ
- ಕಥೆಯನ್ನು ಮುಂದುವರೆಸುತ್ತಾ
- ಅಭಿಜಿತ್ ನಿಮ್ಮ ಅಣ್ಣನನ್ನು ಹುಡುಕಿಕೊಡುವುದಾಗಿ ಆಶಾಳಿಗೆ ಭರವಸೆ ಹೇಳಿದಾಗ, ಆಶಾಳ ಮನಸ್ಸಿಗೆ ಸ್ವಲ್ಪ ಸಮಾಧಾನವಾಗಿರುತ್ತದೆ.
ಅಭಿಜಿತ್ ತನ್ನ ಸ್ನೇಹಿತರಿಗೆ ಆಶ ನೀಡಿದ ಫೋಟೋ ಕಳುಹಿಸಿ, ಇವರು ಯಾವುದಾದರೂ ಟ್ರೂಪ್ಸ್ ನಲ್ಲಿದ್ದಾರಾ ಎಂದು ಕಂಡು ಹಿಡಿಯಬೇಕೆಂದು ಹೇಳಿದಾಗ
ಎಲ್ಲರೂ ಒಪ್ಪಿಗೆ ಸೂಚಿಸಿ ಅವರವರ ಗ್ರೂಪ್ ಗಳಿಗೆ ಪುೋಟೋವನ್ನು ಕಳುಹಿಸಿರುತ್ತಾರೆ.
ನಂತರ ಅಭಿಜಿತ್ ತನ್ನ ಮನಸ್ಸಿನಲ್ಲಿ, ಕೋದಂಡರಾಂ ರವರು ನನ್ನ ಸ್ನೇಹಿತ ರಘುನಂದನನ್ನು ಎಲ್ಲೋ ಮೋಡಿದ್ದೇನೆಂದು ಹೇಳಿದ್ದಾರೆ. ಬಹುಷಃ ಅವರ ಸಾಫ್ಟ್ ವೇರ್ ಡೆವಲಪ್ಡ್ ಫೋಟೋ ನೋಡಿ ಹೇಳಿರಬಹುದಾ? ರಘುನಂದನನೇ ಅವರ ಮಗ ಯಾಕಾಗಿರಬಾರದೆಂದು ಅನುಮಾನಗೊಂಡು, ತಕ್ಷಣ ರಘುನಂದನ್ ಗೆ ಫೋನ್ ಮಾಡಿ ಆಶಳ ಅಣ್ಣ ಕಾಣೆಯಾಗಿರುವ ಬಗ್ಗೆ ವಿಷಯ ತಿಳಿಸಿದಾಗ
ನಮ್ಮ ಟ್ರೂಪ್ಸ್ ಸ್ನೇಹಿತರಿಗೆಲ್ಲಾ ವಿಷಯ ತಿಳಿಸುತ್ತೇನೆ ಎನ್ನುತ್ತಾನೆ ರಘುನಂದನ್.
ಅಭಿಜಿತ್ ಮಾತನಾಡಿ, ತನ್ನಣ್ಣನ ಬಗ್ಗೆ ಆಶ ಹೇಳಿದ್ದ ಮಾತು ನೆನಪಿಗೆ ಬಂದು, ಆಶಾಳ ಅಣ್ಣ ಯಾವುದೇ ಕ್ಲಿಷ್ಟಕರ ಕೆಲಸ ಅಂದರೆ ಯಾವುದಾದರೂ ಭಾರವಾದ ವಸ್ತುಗಳನ್ವು ಎತ್ತಿ ಸಾಗಿಸುವಾಗ ಜೈ ರಘುವೀರ ಸಮರ್ಥ ಎಂದು ಹೇಳಿತ್ತಿದ್ದರು ಈ ರೀತಿ ಯಾರಾದರೂ ಇದ್ದಾರಾ? ಎಂದು ಕೇಳಲು
ನಾನು ಕಂಡಂತೆ ಹರಹರ ಮಹದೇವ್ ಅಥವಾ ಜೈ ಶ್ರೀರಾಮ್ ಎಂದು ಹೇಳಿ ಕೆಲಸ ಆರಂಭಿಸುವುದನ್ನು ಬಹಳವಾಗಿ ನನ್ನ ಸ್ನೇಹಿತರಲ್ಲಿ ನೋಡಿದ್ದೇನೆ. ಆದರೆ ಜೈ ರಘುವೀರ ಸಮರ್ಥ ಎಂದು ಹೇಳುವುದನ್ನು ಕೇಳೂ ಇಲ್ಲಾ ನೋಡೂ ಇಲ್ಲವೆಂದು ರಘುನಂದನ್ ಹೇಳಿದಾಗ
ಹಾಗಾದರೆ ಇವರ ಅಣ್ಣನನ್ನು ಯಾವ ರೀತಿ ಹುಡುಕುವುದೆಂದು ಅಭಿಜಿತ್ ಪ್ರಶ್ನಿಸಿದಾಗ
ಅವರು ಕಾಣೆಯಾಗಿ ಎಷ್ಟೋ ವರ್ಷಗಳು ಕಳೆದಿವೆ. ಈಗ ಹೇಗೆ ಹುಡುಕುವುದು? ಎಲ್ಲಾದರೂ ಚೆನ್ನಾಗಿರಲೆಂದು ಹಾರೈಸಿ ಸುಮ್ಮನಾಗಬೇಕಷ್ಟೇ ಎಂಬ ರಘುನಂದನ್ ಮಾತಿಗೆ
ನೋ ರಘುನಂದನ್, ಅವರ ಅಪ್ಪ ನಮ್ಮಂತ ಯುವಕರನ್ನು ಕಂಡರೆ, ಎಲ್ಲೋ ನೋಡಿದ್ದೇನೆಂದು ಹೇಳುತ್ತಿರುತ್ತಾರೆಂದು ಆವರ ಮಗಳು ತಿಳಿಸಿದ್ದಾರೆ ಎಂದು ಅಭಿಜಿತ್ ಹೇಳಿದಾಗ
ಓ ಹೋ ಹಾಗಾದರೆ ಅವರಪ್ಪ ಮಗನನ್ನು ಕಳೆದುಕೊಂಡು ತುಂಬಾ ನಿರಾಶರಾಗಿದ್ದಾರೆ ಎನಿಸುತ್ತದೆ. ಅವರ ಮಗನನ್ನು ಹುಡುಕಲು ಪ್ರಯತ್ನಿಸುತ್ತೇನೆಂದು ಹೇಳಿ ರಘುನಂದನ್ ಫೋನ್ ಆಫ್ ಮಾಡುತ್ತಾನೆ.
ಈ ಕಡೆ ಏನು ಮಾಡಿದರೂ ಆಶ ತನ್ನ ಮಾತು ಕೇಳುತ್ತಿಲ್ಲವೆಂದು ವಿಕ್ರಮ್ ಗೆ ತುಂಬಾ ನಿರಾಸೆಯಾಗಿರುತ್ತದೆ. ಅಕಸ್ಮಾತ್ ಆರ್ಮಿಯವರನ್ನು ಮದುವೆಯಾದರೆ ಆಶ ನನ್ನಿಂದ ದೂರಾ,,,, ದೂರಾ,,,, ಹೊರಟು ಹೋಗುತ್ತಾಳೆ. ನಂತರ ಅವಳಿಲ್ಲದ ನನ್ನ ಜೀವನ ಶೂನ್ಯವಾಗುತ್ತದೆಂದು ನೆನಪಿಸಿಕೊಂಡ ಕ್ಷಣ ಮೈ ಒಂದು ಸಲ ಕಂಪಿಸಿದಂತಾಗುತ್ತದೆ. ಆಶ ಇಲ್ಲದ ಜೀವನ ಭಯಂಕರವಾಗಿರುತ್ತದೆ. ನನಗೆ ಅವಳನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲು ಇಷ್ಟವಿಲ್ಲದಾಗಿದೆ ಎಂದುಕೊಂಡು ಚಿಂತಾಕ್ರಾಂತನಾಗಿ ಕುಳಿತಿರುವಾಗ
ಮೊಬೈಲ್ ರಿಂಗ್ ಆಗುತ್ತದೆ. ಯಾರದ್ದೆಂದು ನೋಡಲು ಯಾವುದೋ ಅನ್ ನೋನ್ ನಂಬರ್ ಆಗಿದ್ದರಿಂದ ರಿಸೀವ್ ಮಾಡುವುದೋ ಬೇಡವೋ ಎಂದು ಯೋಚಿಸುವುದರೊಳಗೆ ಮೊಬೈಲ್ ರಿಂಗ್ ಆಗುವುದು ನಿಲ್ಲುತ್ತದೆ. ಪುನಃ ಹತ್ತು ನಿಮಿಷಗಳ ನಂತರ ಅದೇ ನಂಬರಿಂದ ಕರೆ ಬಂದಾಗ
ವಿಕ್ರಮ್ ಕರೆಯನ್ನು ಸ್ನೀಕರಿಸಿ ಹಲೋ ಎನ್ನಲು
ಆ ಕಡೆಯಿಂದ ನಿಮ್ಮ ಹೆಸರು ವಿಕ್ರಮ್ ಅಲ್ಲವೇ ಎಂದು ಪ್ರಶ್ನಿಸಿದಾಗ
ಹೌದು ನಾನೇ ವಿಕ್ರಮ್ ನನ್ನಿಂದೇನಾಗಬೇಕಿತ್ತೆಂದು ವಿಕ್ರಮ್ ಪ್ರಶ್ನಿಸಿದಾಗ
ನೀವು ಕೆಲವು ತಿಂಗಳುಗಳ ಹಿಂದೆ ಒಬ್ಬ ಯುವಕನು ಕಾಣೆಯಾಗಿರುವನೆಂದು, ಅವನು ಚಿಕ್ಕವನಿದ್ದಾಗಿನ ಫೋಟೋ ಜೊತೆಗೆ ಸಾಪ್ಟ್ವೇರಲ್ಲಿ ಈಗಿನ ವಯಸ್ಸಿಗೆ ತಕ್ಕಂತೆ ಡೆವಲಪ್ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದಾಗ
ಹೌದು ನಾನೇ ಆ ಫೋಟೋವನ್ನು ಸೋಸಿಯಲ್ ಮೀಡಿಯಾ ಗಳಲ್ಲಿ ಕಳುಹಿಸಿದ್ದೆ ಎಂದು ವಿಕ್ರಮ್ ಹೇಳಲು
ನೀವು ಕಳುಹಿಸಿರುವ ಫೋಟೋದಂತೆ ಒಬ್ಬ ಯುವಕ ಮುಂಬೈಯಲ್ಲಿದ್ದಾನೆ. ಅವನು ಹಿಂದಿ, ಇಂಗ್ಲೀಷ್ ,ಮರಾಠಿ ಭಾಷೆಗಳಲ್ಲಿ ಮಾತನಾಡುತ್ತಾನೆ. ಅವನ ಪೂರ್ಣ ವಿವರ ಬೇಕಾದರೆ ಕಳುಹಿಸುತ್ತೇನೆ ಎಂದಾಗ,
ವಿಕ್ರಮ್ ತನ್ನ ಮನಸ್ಸಿನಲ್ಲಿ, ಈಗ ಹೇಳಿದರೇನು ಪ್ರಯೋಜನವೆಂದುಕೊಂಡು, ತಕ್ಷಣ ಮನಸ್ಸಿಗೆ ಏನೋ ಹೊಳೆದಂತಾಗಿ ಆಯ್ತು ಕಳುಹಿಸಿರಿ ಎನ್ನುತ್ತಾನೆ.
ಅವರ ಫೋಟೋ ಕಳುಹಿಸಿದರೆ ನಮಗೇನು ಕೊಡುತ್ತೀರಿ ಎಂದು ಆ ಕಡೆಯಿಂದ ಪ್ರಶ್ನಿಸಲು
ನಿಮಗೆ ಖಂಡಿತಾ ಬಹುಮಾನ ಇದ್ದೇ ಇರುತ್ತದೆಂದು ವಿಕ್ರಮ್ ತಿಳಿಸಿದಾಗ
ಈಗ ತಕ್ಷಣಕ್ಕೆ ಹತ್ತು ಸಾವಿರ ರೂಪಾಯಿ ಕಳುಹಿಸಿ, ನಿಮ್ಮವರು ಅವರೇ ಎಂದು ದೃಢಪಟ್ಟಲ್ಲಿ ನಮಗೆ ಎರಡು ಲಕ್ಷ ರೂಪಾಯಿಗಳನ್ನು ಕೊಡುತ್ತೀರಾ ಎಂದು ಪ್ರಶ್ನಿಸಿದಾಗ
ವಿಕ್ರಮ್ ಅನುಮಾನಿಸುತ್ತಾ, ಓಕೆ ಈಗ ಹತ್ತು ಸಾವಿರ ರೂಪಾಯಿ ಕೊಡುತ್ತೇನೆ. ಅವರೇ ನಮ್ಮವರೆಂದು ದೃಢಪಟ್ಟನಂತರ ನೀವು ಕೇಳಿದಂತೆ ಎರಡು ಲಕ್ಷ ರೂಪಾಯಿ ನಿಮಗೆ ಕೊಡುತ್ತೇನೆಂದು ವಿಕ್ರಮ್ ಮಾತಿಗೆ
ಮೊದಲು ಹತ್ತು ಸಾವಿರ ರೂಪಾಯಿ ಕಳುಹಿಸಿ ಎನ್ನುತ್ತಾರೆ.
ವಿಕ್ರಮ್ ಹತ್ತು ಸಾವಿರ ರೂಪಾಯಿ ಕಳುಹಿಸಿದ ತಕ್ಷಣ
ವಿಕ್ರಮ್ ವಾಟ್ಸಪ್ ಗೆ ಹುಡುಗನ ಫೋಟೋ ಹಾಗೂ ವಿಳಾಸ ಬರುತ್ತದೆ. ಅದನ್ನು ನೋಡಿದ ವಿಕ್ರಮ್ ಇವರೇ ಆಶಾಳ ಅಣ್ಣನೆಂದುಕೊಂಡು ಥ್ಯಾಂಕ್ಸ್ ಎಂದು ಹೇಳಿ ಫೋನ್ ಆಫ್ ಮಾಡುತ್ತಾನೆ.
ಮಾರನೇ ದಿನವೇ ವಿಕ್ರಮ್ ಮುಂಬೈಗೆ ಹೋಗಿ ಫೋನಿನಲ್ಲಿ ಕಳುಹಿಸಿದ್ದ ವಿಳಾಸವನ್ನು ಪತ್ತೆ ಹಚ್ಚಿ ಅವರ ಮನೆಗೆ ಹೋದಾಗ
ಯಾರು ನೀವು ಎಂದು ಹಿಂದಿಯಲ್ಲಿ ಕೇಳಲು
ತಾನು ಬೆಂಗಶೂರಿನಿಂದ ಬಂದಿದ್ದೇನೆಂದು ತನ್ನ ಪರಿಚಯ ಮಾಡಿಕೊಂಡಾಗ
ಏತಕ್ಕೆ ಬಂದಿದ್ದೀರೀ? ನಮ್ಮಿಂದ ಏನಾಗಬೇಕೆಂದು ಪುನಃ ಕೇಳಲು
ತನ್ನ ಪರ್ಸಿನಲ್ಲಿದ್ದ ಫೋಟೋ ತೋರಿಸಿ ಇವರು ಯಾರೆಂದು ಕೇಳಿದಾಗ
ಆ ಮನೆಯವರು ನಮ್ಮ ಮಗನೆಂದು ಹೇಳುತ್ತಾರೆ.
ಇವರು ಈಗ ಎಲ್ಲಿದ್ದಾರೆಂದು ವಿಕ್ರಮ್ ಪ್ರಶ್ನಿಸಿದಾಗ
ನಮ್ಮ ಮಗನಿಗೆ ನಾವು ಸಾಕು ತಂದೆ ತಾಯಿಯೆಂದು ಹೇಗೋ ತಿಳಿಯಿತು. ಅಂದಿನಿಂದ ಮನೆಗೆ ಸರಿಯಾಗಿ ಬರುತ್ತಿಲ್ಲ. ಬಂದರೂ ಸರಿಯಾಗಿ ಊಟ ಮಾಡುತ್ತಿಲ್ಲ. ನನ್ನ ನಿಜವಾದ ತಂದೆ ತಾಯಿ ಯಾರೆಂದು ಕೇಳುತ್ತಾನೆ. ನಮಗೆ ಗೊತ್ತಿಲ್ಲವೆಂದರೆ ಕೋಪಿಸಿಕೊಂಡು ಹೋಗುತ್ತಾನೆ. ನಾವು ಚಿಕ್ಕಂದಿನಿಂದ ಇವನನ್ನು ಸಾಕಿ ಸಲಹಿ ದೊಡ್ಡವನನ್ನಾಗಿ ಮಾಡಿದ್ದಕ್ಕೆ ಬೆಲೆಯೇ ಇಲ್ಲಪ್ಪಾ, ನಾವೇ ಇವನನ್ನು ಅಪಹರಿಸಿಕೊಂಡು ಬಂದೆವೆಂದು ಹೇಳುತ್ತಾನೆ ಎಂದು ದುಃಖಿತರಾದಾಗ
ಇವರು ನಿಮಗೆ ಹೇಗೆ ಸಿಕ್ಕಿದರೆಂದು ವಿಕ್ರಮ್ ಕೇಳಲು
ನಾವು ಬೆಂಗಳೂರಿನಿಂದ ರೈಲಿನಲ್ಲಿ ಮುಂಬೈಗೆ ಬರುತ್ತಿದ್ದೆವು. ರೈಲಿನ ಒಂದು ಕಡೆ ಮೂಲೆಯಲ್ಲಿ ಇವನು ಕುಳಿತಿದ್ದ. ನಾವು ಯಾರಪ್ಪಾ ಎಂದು ವಿಚಾರಿಸಿದಾಗ, ಕನ್ನಡದಲ್ಲಿ ಉತ್ತರಿಸಿದ. ನಮಗೆ ಅರ್ಥವಾಗಲಿಲ್ಲ. ಪೋಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಟ್ಟು ಇಲ್ಲಿನ ಪೇಪರ್ ನಲ್ಲಿಯೂ ಪ್ರಕಟಿಸಿದೆವು. ಆದರೆ ಯಾರೂ ಕೂಡಾ ಬರಲಿಲ್ಲ. ಇವನ ಅಪ್ಪ ಅಮ್ಮ ಸಿಗುವವರೆಗೂ ನಿಮ್ಮ ಮನೆಯಲ್ಲಿಯೇ ಇಟ್ಟುಕೊಂಡಿರಿ ಎಂದು ಪೋಲೀಸ್ ರವರು ಹೇಳಿದರು. ಇಲ್ಲಿಯವರೆಗೂ ಯಾರೂ ಬಂದಿಲ್ಲ. ನಮ್ಮ ಮನೆಯಲ್ಲೇ ಇದ್ದಾನೆ. ದಯವಿಟ್ಟು ಇವರ ಅಪ್ಪ ಅಮ್ಮ ಯಾರೆಂದು ನಿಮಗೆ ಗೊತ್ತಿದ್ದರೆ ಇವನನ್ನು ಅವರ ಮನೆಗೆ ಸೇರಿಸಿ ನಮಗೂ ನೆಮ್ಮದಿಯಾಗುತ್ತದೆ. ಇವನಿಗೂ ಸಂತೋಷವಾಗುತ್ತದೆಂದು ಹೇಳಿದಾಗ
ನೀವೇನೂ ಯೋಚಿಸಬೇಡಿರಿ, ನಮ್ಮ ಸ್ನೇಹಿತರ ಮಗನೇ ಇವರಾಗಿದ್ದಾರೆ. ಅವರ ಮನೆಗೆ ತಲುಪಿಸುವ ಕೆಲಸ ನನ್ನದೆಂದು ಹೇಳಿ ವಾಪಸ್ ಮನೆಗೆ ಬಂದು, ಈಗ ಆಶಾಳನ್ನು ಮದುವೆಯಾಗಲು ಒಳ್ಳೆಯ ಅವಕಾಶ ಸಿಕ್ಕಿತೆಂದುಕೊಂಡು ಬಹಳ ಖುಷಿಯಾಗುತ್ತಾನೆ.
ರಾತ್ರಿ ಹನ್ನೊಂದು ಗಂಟೆಗೆ ವಿಕ್ರಮ್ ಆಶಾಳಿಗೆ ಹೊಸ ನಂಬರಿಂದ ಫೋನ್ ಮಾಡಿದಾಗ,
ಯಾವುದೋ ಕಂಪೆನಿಯ ನಂಬರೆಂದು ರಿಸೀವ್ ಮಾಡುವುದಿಲ್ಲ.
ವಿಕ್ರಮ್ ಪುನಃ ಪುನಃ ಫೋನ್ ಮಾಡಿದಾಗ
ಛೇ ಯಾರಿದು? ವಿಕ್ರಮ್ ಫೋನ್ ಮಾಡಿರಬೇಕೆಂದು, ಅವನಿಗೆ ಸರಿಯಾಗಿ ಹೇಳುತ್ತೇನೆಂದು ಹಲೋ ಎನ್ನಲು
ಆಶಾ ಹೇಗಿದ್ದೀಯಾ? ಎಂದು ವಿಕ್ರಮ್ ಪ್ರಶ್ನಿಸಲು
ನಾನು ಹೇಗಾದರೂ ಇರುತ್ತೇನೆ ನಿನಗೇನು? ನನಗೆ ಫೋನ್ ಮಾಡಬೇಡವೆಂದು ಹೇಳಿರಲಿಲ್ಲವಾ? ಪುನಃ ಏಕೆ ಫೋನ್ ಮಾಡಿದೆ ಎಂದು ಆಶಾ ಕೋಪದಿಂದ ಪ್ರಶ್ನಿಸಿದಾಗ
ಆಶಾ ನಿನಗೊಂದು ಒಳ್ಳೆಯ ಸುದ್ದಿ ಹೇಳುತ್ತೇನೆ ಎಂದು ವಿಕ್ರಮ್ ಹೇಳಲು.
ಏನದು ಒಳ್ಳೆಯ ಸುದ್ದಿ ಎಂದು ಆಶಾ ಪ್ರಶ್ನಿಸಿದಾಗ
ನಿಮ್ಮಣ್ಣ ಸಿಕ್ಕಿದ್ದಾರೆ ಎಂದ ತಕ್ಷಣ
ಎಲ್ಲಿದ್ದಾರೆಂದು ಆಶ ಉತ್ಸುಕದಿಂದ ಕೇಳಲು
ನಿಮ್ಮಣ್ಣ ಸಿಕ್ಕಿರುವುದು ನಿಜ. ಆದರೆ ಅವರು ಎಲ್ಲಿದ್ದಾರೆ? ಅವರ ವಿಳಾಸ ಫೋನ್ ನಂಬರ್ ಕೊಡಬೇಕು ಎಂದರೆ ನೀನು ನನ್ನ ಕಂಡೀಷನ್ ಗೆ ಒಪ್ಪಿಕೊಳ್ಳಬೇಕು ಎಂದು ವಿಕ್ರಮ್ ಹೇಳಲು
ನಿನ್ನ ಕಂಡೀಷನ್ ನನಗೆ ಗೊತ್ತು ನಿಮ್ಮಣ್ಣನ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳಬೇಕೆಂದು ಹೇಳುತ್ತೀಯಾ ಎಂದು ಗೊತ್ತಿದೆ ಎಂಬ ಆಶಾ ಮಾತಿಗೆ
ನೋ ನೋ ನೋ ನೋ ಅದೊಂದೇ ಅಲ್ಲಾ ಆಶಾ,,, ನೀನು ನನ್ನ ನಮ್ಮಣ್ಣನ ಮೇಲಿನ ಕೇಸನ್ನು ವಾಪಸ್ ತೆಗೆದುಕೊಳ್ಳುವುದರ ಜೊತೆಗೆ ನನ್ನನ್ನು ಮದುವೆಯಾದರೆ ಮಾತ್ರ ನಿಮ್ಮಣ್ಣನನ್ನು ಹುಡುಕಿ ಕೊಡುತ್ತೇನೆಂದು ಹೇಳುತ್ತಾನೆ
ಆಗ ಆಶ ಇಕ್ಕಟ್ಟಿಗೆ ಸಿಲುಕುತ್ತಾಳೆ.
ಮುಂದುವರೆಯುತ್ತದೆ.