ಅಭಿಲಾಷೆ ಕಾದಂಬರಿ ಸಂಚಿಕೆ -54

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 54 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ಅಭಿಜಿತ್ ನಿಗೆ ಹಾಕಿದ್ದ ಆಕ್ಸಿಜನ್ ಪೈಪನ್ನು ತೆಗೆಯಲು ಬಂದಿದ್ದ ಯುವಕನನ್ನು ಅಭಿಜಿತ್ ಸ್ನೇಹಿತ ರಘುನಂದನ್ ಹಿಡಿದು ಪೋಲೀಸರಿಗೆ ಒಪ್ಪಿಸಿದ‌ ವಿಚಾರ ಕೇಳಿ ಕೋದಂಡರಾಮ್ ರವರು ಗಾಬರಿಯಿಂದ ಆಸ್ಪತ್ರೆಗೆ ಭೇಟಿ ನೀಡಿರುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಒಬ್ಬ ಯುವಕನು ಅಭಿಜಿತ್ ಗೆ ಹಾಕಿದ್ದ ಆಕ್ಸಿಜನ್ ಪೈಪನ್ನು ತೆಗೆದು ಹಾಕಲು ಬಂದಿದ್ದನೆಂಬ ಸುದ್ದಿಯನ್ನು ಕೇಳಿದ ಕೋದಂಡರಾಂ ರವರು ಆಸ್ಪತ್ರೆಗೆ ಭೇಟಿ ನೀಡಿ ಅಭಿಜಿತ್ ಆರೋಗ್ಯ ವಿಚಾರಿಸಿ ಮನೆಗೆ ಬರುತ್ತಾರೆ
ಕೋದಂಡರಾಂ ರವರು ಮನೆಗೆ ಹೊರಟು ಬಂದ ನಂತರ
ಅಭಿಜಿತ್ ಹಾಗೂ ಅವನ ತಂದೆ ತಾಯಿಯ ಸಂಭಾಷಣೆ ಮುಂದುವರೆದಿದ್ದು,
ಅಭಿಜಿತ್ ತಂದೆ ಮಾತನಾಡಿ, ನಾಳೆ ಅಳಿಯನಾಗುವವನ ಮೇಲೆ ಎಷ್ಟೊಂದು ಕಾಳಜಿ ಇದೆ ಎಂದು ನುಡಿಯಲು
ಹೌದೂ, ಅಭಿಜಿತ್, ಅವರ ಮಗಳೂ ಸಹಾ ಬಂದಿದ್ಲು, ನೀನು ಮಲಗಿರುವುದನ್ನು ನೋಡಿ ವಾಪಸ್ ಹೊರಟು ಹೋದಳು ಎಂದು ಅಭಿಜಿತ್ ತಾಯಿ ನುಡಿಯುತ್ತಾರೆ
ಅಯ್ಯೋ ಇದೇನು ಅಪ್ಪ ಅಮ್ಮ ಒಂದಾಗಿ ಹೀಗೆ ಹೇಳುತ್ತಿದ್ದೀರಲ್ಲಾ ಎಂದು ಅಭಿಜಿತ್ ಕೇಳಲು
ಇದರಲ್ಲಿ ಸ್ಪೆಶಲ್ ಏನಿದೆ? ನೀನೇ ಆ ದಿನ ಒಪ್ಪಿಗೆ ಕೊಟ್ಟಿರಲಿಲ್ಲವಾ ಎಂದು ಅವನ ತಂದೆಯ ಮಾತಿಗೆ
ಹೌದಪ್ಪಾ ಆದರೆ ಅವರು ಸರಿಯಾಗಿ ಉತ್ತರವನ್ನೇ ನೀಡಲಿಲ್ಲ. ಅದೂ ಅಲ್ಲದೆ ಆ ಹುಡುಗಿಯನ್ನು ನಾನು ಪ್ರೀತಿಸುತ್ತಿದ್ದೇನೆ ಅವಳ‌ ತಂಟೆಗೆ ಬರಬೇಡವೆಂದು ಯಾರೋ ಒಬ್ಬ ನನಗೆ ವಾರ್ನ್ ಮಾಡಿದ್ದ ಎಂದು ಅಭಿಜಿತ್ ಹೇಳಿದಾಗ
ಅದು ಮುಗಿದು ಹೋದ ಕಥೆ ಕಣಪ್ಪಾ, ಅವನ ಅಣ್ಣನೇ ಹಣಕ್ಕಾಗಿ ಆ ಹುಡುಗಿಯನ್ನೇ ಕಿಡ್ನಾಪ್ ಮಾಡಿ ಪೋಲೀಸರಿಗೆ ಸಿಕ್ಕುಬಿದ್ದು ಈಗ ಜೈಲಿನಲ್ಲಿದ್ದಾನೆ‌. ಈ ವಿಚಾರದಿಂದ ಆ ಹುಡುಗಿಯು ನನ್ನ ಸಹವಾಸಕ್ಕೆ ಬರಬೇಡವೆಂದು ಹೇಳಿದ್ದಾಳಂತೆ ಎಂದು ಅವನ ತಂದೆಯ ಮಾತಿಗೆ
ಆದರೂ ಆ ಹುಡುಗ ಕೇಳಬೇಕಲ್ಲಾ ಎಂದು ಅಭಿಜಿತ್ ಅನುಮಾನಿದಾಗ
ಕಂಡೂ ಕಂಡೂ ತನ್ನ ಕಿಡ್ನಾಪ್ ಮಾಡಿದವರ ಮನೆಯ ಸೊಸೆಯಾಗಲು ಯಾರುತಾನೇ ಒಪ್ಪುತ್ತಾರೆ ಹೇಳೆಂದು ಅವರಪ್ಪ ಪ್ರಶ್ನಿಸುತ್ತಾರೆ
ನನಗೆ ಹಾಕಿದ್ದ ಆಕ್ಸಿಜನ್ ಪೈಪನ್ನು ತೆಗೆಯಲು ಅವನೇ ಏಕೆ ಬಂದಿರಬಾರದೆಂದು ಅಭಿಜಿತ್ ಪ್ರಶ್ನಿಸಿದಾಗ
ನನಗೂ ಅದೇ ಅನುಮಾನವಾಗುತ್ತಿದೆಯೆಂದು ಅವನಮ್ಮ ಧ್ವನಿಗೂಡಿಸುತ್ತಾರೆ.
ಪೈಪು ತೆಗೆಯಲು ಬಂದವನನ್ನು ನೋಡಿದರೆ ತಿಳಿಯುತ್ತದೆಂದು ಅಭಿಜಿತ್ ಹೇಳಿದಾಗ
ಅಯ್ಯೋ ಅವನ ಸಹವಾಸವೇ ಬೇಡಪ್ಪಾ ಡಿಸ್ಚಾರ್ಜ್‌ ಆದ ಮೇಲೆ ಮನೆಯಲ್ಲಿ ರಜೆ ಕಳೆಯುವವರೆಗೆ ಆರಾಮಾಗಿರೆಂದು ಅಭಿಜಿತ್ ತಂದೆ ಹೇಳಿದಾಗ
ಅಪ್ಪಾ ನನ್ನ ಸ್ನೇಹಿತನೇ ಅವನನ್ನು ಹಿಡಿದುಕೊಟ್ಟಿದ್ದಾನೆ. ಅವನೇ ದೂರುದಾರನಾಗಿದ್ದಾನೆ. ಅವನಿಗೆ ಸಹಾಯ ಮಾಡಿದರೆ ಆರೋಪಿಗೆ ಶಿಕ್ಷೆಯಾಗುತ್ತದಲ್ಲವೇ ಎಂದು ಅಭಿಜಿತ್ ತನ್ನ ತಂದೆಯನ್ನು ಪ್ರಶ್ನಿಸಲು,
ಅವನು ಯಾರೋ ? ಅವನ ಹಿಂದೆ ಎಷ್ಟು ಜನರಿದ್ದಾರೋ ಯಾರಿಗೆ ಗೊತ್ತು? ಎಚ್ಚರಿಕೆಯಿಂದ ಇದ್ದಷ್ಟೂ ಒಳ್ಳೆಯದೆ ಎಂದು ಅವರಪ್ಪ ನುಡಿಯುತ್ತಾರೆ.

ಮಾರನೇ ದಿನ ಆಕ್ಸಿಜನ್ ಪೈಪ್ ತೆಗೆದು ಹಾಕಲು ಬಂದಿದ್ದವನನ್ನು ಪೋಲೀಸರು ಕೋರ್ಟಿಗೆ ಹಾಜರುಪಡಿಸಿದಾಗ, ಹೆಚ್ಚಿನ ವಿಚಾರಣೆಗಾಗಿ, ಕೋರ್ಟು ಅವನಿಗೆ ಮೂರು ದಿನಗಳು ಪೋಲೀಸ್ ಕಸ್ಟಡಿಗೆ ನೀಡುತ್ತದೆ.

ಈ ಕಡೆ ಅಭಿಜಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿಯೇ ಇದ್ದಾಗ,
ಅವನ ಸ್ನೇಹಿತ ರಘುನಂದನ್ ಯೋಗಕ್ಷೇಮ ವಿಚಾರಿಸಲು ಅಭಿಜಿತ್ ಮನೆಗೆ ಬಂದಿರುತ್ತಾನೆ.
ಆ ವೇಳೆಗೆ ಕೋದಂಡರಾಂ ರವರು ಸಹ ಅಭಿಜಿತ್ ಡಿಸ್ಚಾರ್ಜ್ ಆದ ವಿಷಯ ತಿಳಿದು ಅಭಿಜಿತ್ ನ ಮನೆಗೆ ಬಂದಾಗ
ಅಭಿಜಿತ್ ತಂದೆ ಮುಗುಳ್ನಗೆಯಿಂದ ಸ್ವಾಗತಿಸಿ, ಕಾಫಿ ನೀಡಿದ ನಂತರ ಇಬ್ಬರೂ ಕುಡಿಯುತ್ತಿರುವಾಗ,
ಅಭಿಜಿತ್ ಜೊತೆ ಮಾತನಾಡಿದ ನಂತರ ರಘುನಂದನ್ ನಾನಿನ್ನು ಬರುತ್ತೇನೆಂದು ಹೇಳಿ ರೂಮಿನಿಂದ ಹೊರಬಂದಾಗ
ಅಭಿಜಿತ್‌ ತಂದೆ ರಘುನಂದನ್ ನನ್ನು ನೋಡಿ ಹೊರಟು ಬಿಟ್ರಾ? ಆಗಾಗ್ಗೆ ಬರುತ್ತಿರಿ ಎಂದು ಹೇಳಿ, ಕೋದಂಡರಾಂ ರವರ ಕಡೆ ತಿರುಗಿ, ಆ ದಿನ ಆಸ್ಪತ್ರೆಯಲ್ಲಿ, ನನ್ನ ಮಗನ ಆಕ್ಸಿಜನ್ ಪೈಪ್ ತೆಗೆದುಹಾಕಲು ಬಂದಿದ್ದವನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದವರು ಇವರೇ ಎಂದು ಹೇಳಿದಾಗ
ಕೋದಂಡರಾಂ ರವರು ನಿಮ್ಮಿಂದ ಬಹಳ ಉಪಕಾರವಾಯಿತೆಂದು ಹೇಳುತ್ತಾ, ರಘುನಂದನ್ ನನ್ನೇ ದಿಟ್ಟಿಸಿ ಮೋಡುತ್ತಾ, ನೀವು ಮೈಸೂರಿನವರಾ ಎಂದು ನೇರವಾಗಿ ಕೇಳಿದಾಗ
ಹೌದು ನಾವು ಮೈಸೂರಿನವರು, ನನ್ನ ಸ್ನೇಹಿತ ಅಭಿಜಿತ್ ನನ್ಮು ನೋಡಲು ಬಂದಿದ್ದೇನೆ ಎಂದು ರಘುನಂದನ್ ಮಾತಿಗೆ
ನಿಮ್ಮನ್ನು ಎಲ್ಲೋ ನೋಡಿದಂತಿದೆ ಎಂದು ಕೋದಂಡರಾಂ ಹೇಳುತ್ತಾರೆ.
ರಘುನಂದನ್ ನಗುತ್ತಾ ಅಂಕಲ್ ನೀವು ನನ್ನನ್ನು ನೋಡಿರಲು ಸಾಧ್ಯವೇ ಇಲ್ಲ. ನಾನು ಕೆಲಸಕ್ಕೆ ಎಲ್ಲೂ ಸೇರದೆ ನೇರವಾಗಿ ಸೈನ್ಯಕ್ಕೆ ಸೇರಿದವನು ಎಂದು ರಘುನಂದನ್ ಮಾತಿಗೆ
ಅಂದರೆ ನೀವೂ ಕೂಡಾ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದೀರಾ ಎಂದಾಗ.
ಹೌದು ಅಂಕಲ್ ಎಂದು ರಘುನಂದನ್ ಹೇಳಿದ ತಕ್ಷಣ
ಕೋದಂಡರಾಮ್ ರವರು ಎದ್ದು ನಿಂತು ಸೆಲ್ಯೂಟ್ ಹೊಡೆದಾಗ
ರಘುನಂದನ್ ಚಕಿತನಾಗಿ, ಇದೇನು ಅಂಕಲ್ ನೀವು ದೊಡ್ಜವರೆಂದು ಹೇಳಲು
ನಾನು ವಯಸ್ಸಿನಲ್ಲಿ ದೊಡ್ಜವನಿರಬಹುದು, ಆದರೆ ನೀವು ದೇಶವನ್ನು ಕಾಯುವ ಹೆಮ್ಮೆಯ ಸೈನಿಕರು, ನಾನು ಮಾಸ್ಟರಾಗಿ ನನ್ಮ ಗೌರವವನ್ನು ಕೊಡುತ್ತಿದ್ದೇನೆಂದು ಹೇಳಿದಾಗ
ಸಾರ್ ನಿಜಕ್ಕೂ ನಿಮ್ಮ ಪಾಠ‌ ಕೇಳುವ ಹುಡುಗರು ತುಂಬಾ ಧನ್ಯರು ಸಾರ್‌ ಎಂದು ರಘುನಂದನ್ ಕೈ ಮುಗಿದಾಗ
ಅಭಿಜಿತ್ ತಂದೆ ಮಾತನಾಡಿ, ಇವರ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಳ್ಳಬೇಕೆಂದು ಇವರ ಮನೆಗೆ ಹೋಗಿದ್ದಾಗಲೂ ಸಹಾ ನನ್ನ ಮಗನಿಗೆ ಇದೇರೀತಿ ಗೌರವ ನೀಡಿದರು ಎಂದಾಗ
ಮೊದಲು ಅವರು ಸೈನಿಕರು ಅವರಿಗೆ ನಮ್ಮ ಗೌರವ ಕೊಡಬೇಕು, ನಂತರ ಸಂಬಂಧದ ವಿಷಯವೆಂದು ಕೋದಂಡರಾಂ ಹೇಳುತ್ತಾರೆ
ರಿಯಲೀ ಯು ಆರ್ ಗ್ರೇಟ್ ಸಾರ್ ಎನ್ನುತ್ತಾ ನಾನಿನ್ನು ಬರುತ್ತೇನೆ ಅಂಕಲ್ ಎಂದು ಹೇಳಿ ರಘುನಂದನ್ ಹೋದ‌ ನಂತರ
ಕೋದಂಡರಾಂರವರು ಮಾತನಾಡಿ, ಅಯ್ಯೋ ನಾನು ಅವರಪ್ಪನ ಹೆಸರು ಕೇಳಬೇಕಿತ್ತು ಎಂದಾಗ
ಓ ಅದಕ್ಕೇನಂತೆ ನನ್ನ ಮಗನಿಗೆ ಕೇಳಿದರೆ ಹೇಳುತ್ತಾನೆ ಎನ್ನುತ್ತಾರೆ ಅಭಿಜಿತ್ ತಂದೆ.
ಕೋದಂಡರಾಂ ಮಾತನಾಡಿ, ನನ್ನದೊಂದು ಕೋರಿಕೆ ಎಂದು ಹೇಳಿದಾಗ
ಏನು ಹೇಳಿ ಪರವಾಗಿಲ್ಲವೆಂದು ಅಭಿಜಿತ್ ತಂದೆ ಹೇಳಲು
ನಿಮ್ಮ ಹುಡುಗನು ಮನೆಗೆ ಬಂದಾಯ್ತು, ರಜೆ ಮುಗಿಸಿಕೊಂಡು ಹೋಗುವುದರೊಳಗೆ ಮದುವೆ ಶಾಸ್ತ್ರ ಮುಗಿಸೋಣವೆಂಬುದು ನನ್ನ ಅಭಿಲಾಷೆ ಎಂದು ಕೋದಂಡರಾಂ ರವರು ಹೇಳಿದಾಗ
ನನ್ನ ಮಗ ಪುನಃ ಯಾವತ್ತು ಹೋಗಬೇಕೋ ಗೊತ್ತಿಲ್ಲ, ಅಷ್ಟರೊಳಗೆ ಮದುವೆ ಹೇಗೆ ಮಾಡಿ ಮುಗಿಸುವುದು ಎಂದು ಅಭಿಜಿತ್ ತಂದೆ ಪ್ರಶ್ನಿಸಲು.
ನೀವು ಹ್ಞೂಂ ಎಂದು ಹೇಳಿ, ಒಂದು ವಾರದಲ್ಲೇ ಮದುವೆ ಮಾಡಿ ಮುಗಿಸೋಣವೆನ್ನುತ್ತಾರೆ ಕೋದಂಡರಾಂ
ನನ್ನ ಮಗನನ್ನು ವಿಚಾರಿಸಿ ಹೇಳುತ್ತೇನೆ ಎಂದಾಗ
ಆಗಬಹುದು ಸಾರ್ ನೀವು ಇಂದಲ್ಲಾ ನಾಳೆ ವಿಚಾರಿಸಿ ಹೇಳಿ, ಎನ್ನುತ್ತಾ, ಕೋದಂಡರಾಂ ರವರು ನಾನಿನ್ನು ಬರುತ್ತೇನೆಂದಾಗ
ಓಕೆ ಮಾಸ್ಟ್ರೇ ಎನ್ನುತ್ತಾರೆ ಅಭಿಜಿತ್ ತಂದೆ.
ಕೋದಂಡರಾಂ ರವರು ಸಮಾಧಾನ ‌ಚಿತ್ತದಿಂದ ಮನೆಗೆ ಬಂದು ತನ್ನ ಪತ್ನಿ ಹಾಗೂ ಆಶಾಳಿಗೆ ವಿಷಯ ಹೇಳಿದಾಗ
ಬೇಗ ಒಪ್ಪಿಗೆ ಕೊಟ್ಟರೆ ಮದುವೆ ಬೇಗ ಮುಗಿಸಬಹುದೆಂದು ಅವರ ಪತ್ನಿ ನುಡಿಯುತ್ತಾರೆ.
ನಮ್ಮ ಭಾವಿ ಅಳಿಯನ ಸ್ನೇಹಿತ ರಘುನಂದನ್ ಅವರ ಮನೆಗೆ ಬಂದಿದ್ದರು. ಅವರು ಚಿಕ್ಕಂದಿನಲ್ಲೇ ಸೈನ್ಯಕ್ಕೆ ಸೇರಿದ್ದರಂತೆ ಎಂದು ಕೋದಂಡರಾಂ ಹೇಳಿದಾಗ
ಹಾಗಾದರೆ ಪ್ರಮೋಷನ್ ಬರಬಹುದೆಂದು ಅವರ ಪತ್ನಿ ನುಡಿಯುತ್ತಾರೆ
ಬಂದೇ ಬರುತ್ತದೆ ಅವರೂ ನಮ್ಮ ಭಾವಿ ಅಳಿಯಂದಿರು ಇಬ್ಬರೂ ಮಿಲಿಟರಿ ಅಧಿಕಾರಿಗಳಾಗುತ್ತಾರೆಂದು ಕೋದಂಡರಾಂ ಹೇಳಿದಾಗ
ಬೇಗ ಇಬ್ಬರಿಗೂ ಪ್ರಮೋಷನ್ ಬರಲೆಂದು ಅವರ ಪತ್ನಿ ಹಾರೈಸಿದ ನಂತರ
ಅವರನ್ನು ಎಲ್ಲೋ‌ ನೋಡಿದ ಜ್ಞಾಪಕ‌‌ ಎಂಬ ಕೋದಂಡರಾಂ ಮಾತಿಗೆ
ಅಲ್ರೀ ಅವರಿರುವುದು ಮೈಸೂರು, ಯಾವಾಗಲೋ ಬಂದು ಯಾವಾಗಲೋ ಹೋಗುತ್ತಾರೆ. ಅವರನ್ನು ನೀವು ಹೇಗೆ ನೋಡಲು ಸಾಧ್ಯ ಎಂದು ಅವರ ಪತ್ನಿ ಪ್ರಶ್ನಿಸಿದಾಗ
ಅಪ್ಪ ಪ್ಪಂಚದಲ್ಲಿ ಏಳು ಜನ ಒಂದೇ ರೀತಿ ಇರುತ್ತಾರೆಂದು ಕೇಳಿಲ್ಲವಾ ಎಂಬ ಆಶಾಳ ಮಾತಿಗೆ
ಇದ್ದರೂ ಇರಬಹುದೆಂದು ಹೇಳಿ, ತಮ್ಮ ರೂಮಿಗೆ ಹೋಗುತ್ತಾರೆ.

ಮುಂದುವರೆಯುತ್ತದೆ.