ವಿಶ್ವಾಸ್ ಡಿ. ಗೌಡರಿಗೆ “ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ರಾಜ್ಯಮಟ್ಟದಲ್ಲಿ ಗುರುತಿಸಿ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಕೊಡ ಮಾಡುವ “ಕರ್ನಾಟಕ ಮುಕುಟಮಣಿ” ಪ್ರಶಸ್ತಿಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶ್ರೀ ವಿಶ್ವಾಸ್.ಡಿ. ಗೌಡರು ಭಾಜನರಾಗಿದ್ದಾರೆ .
ಸಕಲೇಶಪುರ ತಾಲ್ಲೂಕಿನ, ಹಾಸನ ಜಿಲ್ಲೆಯ ಬಹುಮುಖ ಪ್ರತಿಭೆಯಾದ ಸಾಹಿತಿ, ಲೇಖಕರು ,ಉದ್ದಿಮೆದಾರರು, ಸಮಾಜ ಸೇವಕರು , ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರು (ಸಕಲೇಶಪುರ ತಾಲ್ಲೂಕು) ಹಾಗೂ “ಸಾಹಿತ್ಯ ಸಿರಿ“,”ಸ್ವರ್ಣ ಸಿರಿ “ಮುಂತಾದ ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದು ಗುರುತಿಸಿಕೊಂಡಿರುವ ಹಾಗೂ ಇತ್ತೀಚಿಗೆ 2024ನೆಯ ಸಾಲಿನ “ಕರ್ನಾಟಕ ಮುಕುಟ ಮಣಿ” ರಾಜ್ಯ ಪ್ರಶಸ್ತಿಗೆ ವಿಶ್ವಾಸ್.ಡಿ.ಗೌಡರನ್ನು ಆಯ್ಕೆ ಮಾಡಲಾಗಿದ್ದು ಬರುವ ಡಿಸೆಂಬರ್ 1 ರಂದು ದಾವಣಗೆರೆಯ ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ವಿವಿಧ ವೇದಿಗಳಲ್ಲಿ ವಿಶ್ವಾಸ್ .ಡಿ.ಗೌಡರವರು ಸಾಹಿತ್ಯ ಕ್ಷೇತ್ರದ ಛಾಪು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ತಮ್ಮ ಬರಹದ ಮೂಲಕ ಹಾಗೂ ಕವನಗಳ ಮೂಲಕ ಮತ್ತು ಅನೇಕ ಸ್ಪರ್ಧಾತ್ಮಕ ವೇದಿಕೆಗಳಲ್ಲಿ ತಮ್ಮದೇ ಆದ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.