ಕರಕಿಹಳ್ಳಿ ಮೌನೇಶ ಜೆಕೆ ಅವರಿಗೆ ಕರ್ನಾಟಕ ಯುವ ರತ್ನ ಪ್ರಶಸ್ತಿ ಪ್ರಧಾನ

ಕರಕಿಹಳ್ಳಿ :ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕರಕಿಹಳ್ಳಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ಬೆಳೆದ ಮೌನೇಶ. ಜೆಕೆ. ಅವರು ಸಾಹಿತಿ, ಲೇಖಕ, ಬರಹಗಾರ, ಜಾನಪದ ಹಾಡುಗಾರ, ಹಾಗೂ ಅತ್ಯುತ್ತಮ ಪ್ರಬಂಧಗಳನ್ನು ಬರೆಯುವ ಕಲೆಗಾರ, ಬಹುಮುಖ ಪ್ರತಿಭೆ ಹೊಂದಿರುವ ಇವರು ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ಸೂರ್ಯ ಪೌಂಡೇಷನ್ (ರಿ )ಬೆಂಗಳೂರು ಹಾಗೂ ಸ್ಪಾರ್ಕ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಅವರು ಕರ್ನಾಟಕ ಯುವ ರತ್ನ ಪ್ರಶಸ್ತಿ ಗೆ ಆಯ್ಕೆ ಮಾಡಿ. ದಿನಾಂಕ ಅಕ್ಟೋಬರ್ 15, 16, ರಂದು ಬೆಂಗಳೂರಿನ ಇಂಡೋಗ್ಲೋಬ್ ಗ್ರೂಪ್ ಆಫ್ ಇನ್ಸುಟ್ಯೂಷನ್ ಕಾಲೇಜಿನಲ್ಲಿ ಮೌನೇಶ. ಜೆಕೆ. ಕರಕಿಹಳ್ಳಿಯ ಯುವ ಸಾಹಿತಿಗೆ “ಕರ್ನಾಟಕ ಯುವ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಯುವಕರಲ್ಲಿ ಉತ್ಸಾಹ ತುಂಬುವ ಮತ್ತು ಸಾಹಿತ್ಯ ಕ್ಷೆತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯ ಲೋಕದ ಅತ್ಯುತ್ತಮ ಬರವಣಿಗೆ ಬರೆಯುವ ಮೌನೇಶ, ಕರ್ನಾಟಕದ ಯಲ್ಲ ಯುವಕರಿಗೆ ಸ್ಫೂರ್ತಿ ಆಗಿದ್ದಾರೆ. ಇವರ ಸಾಧನೆ ಸಮಾಜಕ್ಕೆ ಮಾದರಿ ಆಗುತ್ತೆ ಜೊತೆಗೆ ಜಾನಪದ ಕ್ಷೆತ್ರದಲ್ಲಿ ಅಪಾರವಾದ ಸಾಧನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಡೋಗ್ಲೋಬ್ ಸಂಸ್ಥಾಪಕ ಅಧ್ಯಕರಾದ ಟಿ, ಎಂ ಗೌಡ ರವರು, ಮತ್ತು ಕಾರ್ಯದರ್ಶಿ ಸಂಗೀತ ಎಸ್. ಬಿ ಉಪಸ್ಥಿತರಿದ್ದರು. ಜೊತೆಗೆ ಮುಖ್ಯ ಅತಿಥಿಗಳಾದ ಚೇತನ್ ರಾಮ್, ಆರ್ ಎಂ ಗಂಡಸಿ, ಸದಾನಂದ ಸ್ವಾಮಿ, ಮಹೇಶ್, ಸೋಮೇಶ್ ನವೋದಯ,
ಏನ್. ಜಿ. ಎಸ್ ಸಂಸ್ಥಾಪಕರಾದ ವಿನಯ್ ಕುಮಾರ ಹಾಗೂ ದೀಲಿಪ್ ಕುಮಾರ ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಮೌನೇಶ್. ಜೆಕೆ ಕರಕಿಹಳ್ಳಿ ಅವರಿಗೆ “ಕರ್ನಾಟಕ ಯುವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂದು ಸೂರ್ಯ ಪೌಂಡೇಷನ್ ಅಧ್ಯಕ್ಷರು ಮಹೇಶ್ ರವರು ತಿಳಿಸಿದ್ದಾರೆ…..

 

ಭೂಮಿಹುಣ್ಣಿಮೆ-ಸೀಗೆಹುಣ್ಣಿಮೆ..

ಭೂಮಿತಾಯಿಗಿಂದು ಸಂಭ್ರಮದ ಶ್ರೀಮಂತ!
********((((($$$$)))))********

ಎತ್ತ ನೋಡಿದೊಡತ್ತ ಹಚ್ಚ ಹಸಿರ ಧರೆ,
ಬಿತ್ತಿಬೆಳೆದ ಹೊಲ-ಗದ್ದೆ ತುಂಬ ಪೈರುಪಚ್ಚೆ,
ನೆತ್ತಿಮೇಲೆ ಧಾನ್ಯದತೆನೆ ಹೊತ್ತುನಿಂತ ಫಸಲತೇರು,
ಚೊಚ್ಚಲ ಗರ್ಭಿಣಿಯಂತೆ ಚಂದುಳ್ಳ ಸಿರಿನಾರಿ.
ಮುತೈದೆ ಭೂತಾಯಿಗಿಂದು ಸಂಭ್ರಮದ ಸೀಮಂತ.
ಭಕ್ತಿಭಾವದೆ ಭೂಮಿ ಹುಣ್ಣಿಮೆ ರೈತರಾಚರಣೆ!!

ಎತ್ತುಗಳ ಹೆಗಲಿಗೆ ಬೇಸಾಯದ ನೊಗ,
ಉತ್ತಿ ಬಿತ್ತಿ ಬೆಳೆದ ಬೆಳೆ ಕೈಸೇರೊ ಕಾಲ,
ನೆತ್ತಿ ಮೇಲೆ ಮಳೆ ಬಿಸಿಲೆನ್ನದೆ ದುಡಿದ ಶ್ರಮ,
ಚಿತ್ತವೆಲ್ಲ ಮಳೆಯಕಡೆಗೆ,ಬೆಳೆಗೆ ಮಳೆಯಕೃಪೆ,
ಕಿತ್ತುತಗೆದು ಕಳೆಕಸ ಹಸನಾಗಿಸಿ, ಫಸಲೇಳಿಸಿ,
ಬಿತ್ತಿದಂತೆ ಬೆಳೆ,ಸಂಭೃದ್ದಿ ತೆನೆಯ ಕಿರೀಟ,
ಹೊತ್ತುನಿಂತ ಭೂತಾಯಿಗಿಂದು ಸೀಮಂತ!!

*********17.10.2024.********
ಶ್ರೀ ನಟರಾಜ್ ದೊಡ್ಡಮನಿ.
ಶಿಕ್ಷಕರು, ಶ್ರೀವೀರಭದ್ರೇಶ್ವರ ಪ್ರೌಢ ಶಾಲೆ, ಕ್ಯಾಸಿನಕೆರೆ. ಹೊನ್ನಾಳಿ. ತಾ…

 

ಮಹರ್ಷಿ ವಾಲ್ಮೀಕಿ ಜಯಂತಿ.. . ..

ರಾಮನಧ್ಯಾನದಿಂದಲೇ…ವಾಲ್ಮೀಕಿ ಮಹರ್ಷಿಯಾದ ಬೇಡ!!
*********((((($$$$)))))*******

ಪ್ರಚೇತ-ಚರಸಿ ದಂಪತಿ ಸುಪುತ್ರ.
ಪ್ರಥಮತಾ ರತ್ನಾಕರ ನಾಮಾಂಕಿತ.
ಪ್ರಸಂಗವಶ ಕಾಡಲಿ ತಪ್ಪಿಸ್ಕೊಂಡಾತ.
ಪ್ರಾರಾಬ್ದಕಳೆದ ಬಾಲಕ ಬೆದರಿ ರೋಧಿಸುತ!!

ರತ್ನಾಕರಗೆ ಬೇಟೆ ಹೊಟ್ಟೆ ಪಾಡಾಯ್ತು.
ರತ್ನಾಕರ ಪ್ರಾಯಕೆ ಮದುವೆಯಾಯ್ತು.
ರತ್ನಗೆ ಸಂಸಾರದ ಹೊರೆ ಹೆಚ್ಚಾಯ್ತು.
ರತ್ನ ಬೇಟೆ ಜೊತೆ ದರೂಢಿ ಮೈಗೂಡಿತು!!

ದಾರಿಹೋಕರಡ್ಗಟ್ಟಿ ದರೋಡೆ ನಿತ್ಯ.
ದಾರಿದ್ರ್ಯಕಂದು ಯಾರುಸಿಗದೆ ಬೇಸರ.
ದಾರಿಲಿ ನಾರದರನ್ನೊಮ್ಮೆ ಅಡ್ಡಗಟ್ಟಿದ.
ದಾರಿ ಹೋಕರ ಪೀಡನೆ ತರವಲ್ಲೆಂದರು!

ನಾನಿಂದು ಬರಿಗೈಲಿ ಮನೆಗೋದರೆ.
ನನ ಮಡದಿ ಮಕ್ಕಳು ಉಪವಾಸವೆ
ನಿನ್ನಲ್ಲಿಹ ಧನಕನಕಕೊಟ್ಬಿಡುಸುಮ್ನೆ
ನೀತರ್ಲೆ ಮಾಡಿದರುಳಿಯದೈ ಪ್ರಾಣ!

ನಾರದರಿವನ ಧಮ್ಕಿಗೆ ಬೆಚ್ಚದೆ ಕೇಳಿದರು,
ನಾನನ್ನೆಲ್ಲವನ್ನು ನಿನಗೆ ಕೊಡುತ್ತೇನಾದರೆ.
ನಿನ್ನೀಪಾಪ ಕೃತ್ಯದಿ ನಿನ್ಮಡದಿ ಮಕ್ಳು ಪಾಲ್ದಾರರೆ!
ನಿನ್ನ ಮನೆಗೋಗಿ ಕೇಳ್ಕೊಂಡು ಬಾ,ನಾನಿಲ್ಲೆ ಕಾಯ್ವೆ!!

ಬೇಟೆಗಾರ ಮನೆಗೆ ಬಂದ ಪತ್ನಿನ ಕೇಳಿದ,
ಬೇಟೆ-ದರೋಡೆಪಾಪದಲ್ಲಿನಿನ್ಪಾಲಿದೆಯಲ್ವೆ?
ಬೇಟೆಗಾರನ ಮಡದಿ ಮಕ್ಕಳು ಇಲ್ಲೆಂದರು.
ಬೇಟೆ ಆಡಿ ಪ್ರಾಣ ತಗೆದಪಾಪ ನಿಂದಲ್ದೆ ನಂದೆಲ್ಲಿದೆ!!

ಬೇಟೆಗಾರನಲಿ ತಳಮಳ ಶುರುವಾಗಿ,
ಬೇಗ ಓಡೋಡಿ ನಾರಾದರನು ಕಂಡನು.
ಬೇಟೆ ಆಡಿದ ಪಾಪದಲ್ಲವರ ಪಾಲಿಲ್ಲಂತೆಂದ,
ಬೇಟೆ-ದರೋಡೆ ಪಾಪಪೀಡೆ ಬಿಡು
ನನ್ಮಾತಂತೆನಡೆ!!

ರಾಮಧ್ಯಾನ ಮಾಡಿ ನಿನ್ನೆಲ್ಲ ಪಾಪಕಳೆ,
ರಾಮ ನಾಮ ಸ್ಮರಣೆ ಹಿಡಿ ಕೀರ್ತಿ ಪಡೆ,
ರಾಮಭಕ್ತಿ ಕಲಿಸಿದ ನಾರದರ ಚರಣಕ್ಕೆರದ,
ರಾಮ ಧ್ಯಾನದನೇಕವರ್ಷ ಕುಳಿತ,
ಬೇಟೆಗಾರ!!

ಮೈ ಮರೆತು ಏಕಾಗ್ರಚಿತ್ತದಿ ತಪಗೈಯ್ದ,
ಮೈಮೇಲೆ ಹುತ್ತ ಬೆಳೆದರು ತಪ ಬಿಡದೆ.
ಮೈಮೇಲೆ ಹುತ್ತ,ಅದೇ ವಲ್ಮಿಕದೊಳಿಂದೆದ್ದ.
ಮೈ ರೋಮ ರೋಮ ರಾಮನಾಮ
ಜ್ಞಾನ ಪಡೆದೊರಟ!!

ರಾಮಭಕ್ತಿ ಸಾರವ ಜಗಕೆಲ್ಲ ಸಾರಲಿಚ್ಛಿಸಿದ,
ರಾಮಾಯಣ ಮಹಕಾವ್ಯ ರಚನೆಯಲಿ ನಿರತ.
ರಾಮಾಯಣ ಕಾವ್ಯದಿಂದ ಜಗವ ಮೆಚ್ಚಿಸಿದ.
ರಾಮನಕೃಪೆ ಪಡೆದು ವಾಲ್ಮೀಕಿ ಮಹರ್ಷಿಯಾದ ಬೇಡ!!

*****************************
ಶ್ರೀ ನಟರಾಜ್ ದೊಡ್ಡಮನಿ.
ಶಿಕ್ಷಕರು, ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ ಕ್ಯಾಸಿನಕೆರೆ. ಹೊನ್ನಾಳಿ. ತಾ..

 

ನಿನ್ನ ತಲೆ

ನೀನು ಕಾಳಿದಾಸನಾಗಲು ಆಗುತ್ತಿಲ್ಲ
ನಿನ್ನ ತಲೆಯಲ್ಲಿ ಏನು ತುಂಬಿದೆ?
ನೀನು ಕಣಾದ ಮಹರ್ಷಿಯಾಗಲು ಆಗುತ್ತಿಲ್ಲ
ನಿನ್ನ ತಲೆಯಲ್ಲಿ ಏನು ತುಂಬಿದೆ?
ನೀನು ಸತಿಸಾವಿತ್ರಿಯಾಗಲು ಆಗುತ್ತಿಲ್ಲ
ನಿನ್ನ ತಲೆಯಲ್ಲಿ ಏನು ತುಂಬಿದೆ?
ನೀನು ಅಕ್ಕ-ಬಸವನಾಗಲು ಆಗುತ್ತಿಲ್ಲ
ನಿನ್ನ ತಲೆಯಲ್ಲಿ ಏನು ತುಂಬಿದೆ?
ನೀನು ಸತ್ಯಹರಿಶ್ಚಂದ್ರನಾಗಲು ಆಗುತ್ತಿಲ್ಲ
ನಿನ್ನ ತಲೆಯಲ್ಲಿ ಏನು ತುಂಬಿದೆ?
ಮಾನ್ಯ ಮಠದಲ್ಲಿ ಅತ್ಯಾಚಾರ, ವಿಧಾನಸೌದದಲ್ಲಿ ಲಂಚಾವತಾರ
ನಿನ್ನ ತಲೆಯಲ್ಲಿ ಏನು ತುಂಬಿದೆ?

ತಲೆಯಲ್ಲಿ ತುಂಬಿದೆ

ಮಡದಿ ಬಂದೊಡನೆ ಹೆತ್ತವರನು ಬಿಡುವುದು
ನಿನ್ನ ತಲೆಯಲ್ಲಿ ತುಂಬಿದೆ…
ಹಸಿದ ನಾಯಿ ಭಿಕ್ಷುಕನಿದ್ದರೂ ಅನ್ನ ಚೆಲ್ಲುವುದು
ನಿನ್ನ ತಲೆಯಲ್ಲಿ ತುಂಬಿದೆ…
ಕೊಳೆತು ಹೋಗುವ ದೇಹಕೆ ಕಳ್ಳಗಂಟು ಮಾಡುವುದು
ನಿನ್ನ ತಲೆಯಲ್ಲಿ ತುಂಬಿದೆ…
ರಾಜಕೀಯ ಲಾಭಕೆ ಧರ್ಮಕೆ ಜಗಳ ಹಚ್ಚುವುದು
ನಿನ್ನ ತಲೆಯಲ್ಲಿ ತುಂಬಿದೆ…
ಕ್ಷುಲ್ಲಕ ವಿರಹಕಾಗಿ ಕೊಲೆ- ಆತ್ಮಹತ್ಯೆ ಯೋಚನೆ
ನಿನ್ನ ತಲೆಯಲ್ಲಿ ತುಂಬಿದೆ…
ಪ್ರಕೃತಿ ನಾಶಪಡಿಸುತ್ತಾ ಪ್ರತಿಷ್ಠೇ ಮೆರೆಯುವುದು
ನಿನ್ನ ತಲೆಯಲ್ಲಿ ತುಂಬಿದೆ…

 

ನೀವು ಕಂಡಿದ್ದೀರಾ?

ದೇಶದ ಶಕ್ತಿ ಪ್ರೀತಿಯಲ್ಲಿ ವಿಲವಿಲ ಒದ್ದಾಡುತ್ತಿದೆ…
ನೀವು ಕಂಡಿದ್ದೀರಾ?
ಮನೆಯವರ ಕಣ್ಣು ತಪ್ಪಿಸಿ
ಬೆನ್ನು ತಾಗಿಸಿ ಕೂಡುತ್ತಾರೆ…
ನೀವು ಕಂಡಿದ್ದೀರಾ?
ಜಾತಿ-ಧರ್ಮ ಇರುವವರೆಗೂ ಪ್ರೇಮಕೆ ನೆಲೆ-ಬೆಲೆಯಿಲ್ಲ…
ನೀವು ಕಂಡಿದ್ದೀರಾ?
ಜನರ ಅಮಾತಿಗೆ ಜೈಲೂಟ
ರಾಜಕರಣಿ ಬಾಯಿಗೆ ಬೀಗವಿಲ್ಲ…
ನೀವು ಕಂಡಿದ್ದೀರಾ?
ಪ್ರಜಾಪ್ರತಿನಿಧಿಯು ಹೆಬ್ಬೆಟ್ಟು
ಹೆಚ್ಚಿಗೆ ತಿಳಿದಿಲ್ಲ…
ನೀವು ಕಂಡಿದ್ದೀರಾ?
ಮತದಾರ ಖರೀದಿಯಾದ
ಗೆದ್ದವ ದೇಶ ದೋಚಿದ…
ನೀವು ಕಂಡಿದ್ದೀರಾ?

ಯೋಚಿಸಿದ್ದೀರಾ?”

ಯುವಜನತೆಯ ವಿರಹ, ಹತ್ಯೆ-ಅತ್ಯಾಚಾರಗಳು ನಿಲ್ಲಬೇಕು…
ಶಾಂತಿಕೇಂದ್ರ ತೆರೆಯಲು ಯೋಚಿಸಿದ್ದೀರಾ?
ಶಾಸನ ಮಾಡುವವರಿಗೆ ಸಹಿ ಬಂದರೆ ಸಾಕೇ…?
ವಿಶ್ವವಿದ್ಯಾಲಯ ಸ್ಥಾಪಿಸಲು ಯೋಚಿಸಿದ್ದೀರಾ?
ಎಲ್ಲರಲ್ಲೂ ರಕ್ತವಿದೆ ಆದರೂ ರೋಗಿ‌ ಸಾಯುತ್ತಾನೆ…
ಊರಿಗೊಂದು ‘ರಕ್ತಗುಂಪು ಪುಸ್ತಕ’ ಮಾಡಲು ಯೋಚಿಸಿದ್ದೀರಾ?
ಸತ್ಯ ಸತ್ತು ಹೋಗಿದೆ ಸುಳ್ಳು ಮೆರೆಯುತ್ತಿದೆ…
ಮತ್ತೆ ಹರಿಶ್ಚಂದ್ರನನ್ನು ಹುಟ್ಟಿಸಲು ಯೋಚಿಸಿದ್ದೀರಾ?
ಮಾದ್ಯಮ, ಸರ್ಕಾರ ಪತ್ರಗಳಲ್ಲಿ ಕಾಗುಣಿತ ತಪ್ಪುತ್ತಿದೆ…
ಸರಿಪಡಿಸಲು ಎಂದಾದರೂ ಯೋಚಿಸಿದ್ದೀರಾ?
ಮಕ್ಕಳೇ, ಮಂತ್ರ, ಸೂರೆಗಳನು ಕಂಠಪಾಠ ಮಾಡುವ ಬದಲು…
ಸಂವಿಧಾನ ಕಂಠಪಾಠ ಮಾಡಿ ಅಂಬೇಡ್ಕರ್ ಆಗಬಹುದು; ಹುದ್ದೆ ಗಿಟ್ಟಿಸಬಹುದು ಎಂದಾದರೂ ಯೋಚಿಸಿದ್ದೀರಾ? 

 

ಕೋಜಾಗಿರಿ ಹುಣ್ಣಿಮೆ

कोजागिरी पौर्णिमा

ಚಂದಿರ ನಗುತಿಹನಿಂದು
ಮಂದಿರದಲಿರದೆ ಅಕ್ಕ
ಇಂದಿರಾ ಭೂಲೋಕಕೆ ಹೋಗುವಳೆಂದು
ಮಂದಗಮನೆಯಾಗಿ
ಸುಂದರವದನೆ ನಗುತ
ಮಂದಹಾಸ ಬೀರುತ ಐಶ್ವರ್ಯ ನೀಡಲು

ಕೇಸರಿಯುಕ್ತ ಹಾಲಲಿ
ಶಶಿ ತನ್ನ ಪ್ರತಿಬಿಂಬ ಕಂಡ
ಪಸರಿಸಿದ ಶೀತಲತೆಯ ಕಿರಣಗಳನು
ಆಸೆಯ ಕಂಗಳಿಂದ ಜನ
ನಸುನಕ್ಕು ವಂದಿಸುತ
ಗ್ಲಾಸಿನಲಿಯ ಹಾಲು ಕುಡಿದರು

ಕವನ – ಜಾನಪದ ಸೊಗಡಿನಲ್ಲಿ

ಚರಗಾ ಚೆಲ್ಲುವಾ

ಸಂಗಪ್ಪಾ ಬಸಪ್ಪಾ ನೀಲವ್ವ ನಿಂಗವ್ವ
ಹರ್ಯಾಗೆದ್ದ ಅಡಗಿ ಮಾಡೀರಿಲ್ಲೊ
ಎತ್ತಿನ ಮೈ ತೊಳದು ಚಕ್ಕಡಿ ಪೂಜಾ
ಸುದ್ದಾ ಆತು ಬರ್ರಿ ಚರಗಾ ಚೆಲ್ಲಾಕ
ಬರ್ರಿ ಹೋಗೂಣು//

ಸೀಗಿ ಹುಣ್ಣಿಮಿ ಅಂದ್ರ ಖುಷಿ
ಭಾಳ ನನ್ನ ಹಿರ್ಯಾಗ ಒದರಾಕತ್ತಾನ
ನೀಲವ್ವಾ ಮಕ್ಳು ಮೊಮ್ಮಕ್ಳನ ಕರಿ
ಏ ಪಾರು ಶಿವಾ ಹತ್ರಿ ಚಕ್ಕಡ್ಯಾಗ ನಡ್ರಿ
ಬರ್ರಿ ಹತ್ತೋಣ//

ಬಣ್ಣಾ ಹಚ್ಚಿದ ಎತ್ತಿನ ಕೋಡಿಗೆ
ನಾಕನಾಕು ಕ್ವಾಡಬಳಿ ಹಾಕೀದ್ರಿಲ್ಲೊ
ಬೆನ್ನಮ್ಯಾಗ ಝೂಲಾ ಹೊಚ್ಚೀರಿಲ್ಲೊ
ಭೂತಾಯಿಗೆ ಸೀರಿಏರ್ಸಿ ಹಾಡ್ಕೊಂತ
ಆರ್ತಿ ಮಾಡೋಣ //

ಗಿಡದನೆಳ್ಳಿಗೆ ಕುಂತಕಲ್ಲಿಟ್ಟುಪೂಜಾ
ಮಾಡಿ ತಂದ ಬುತ್ರೊಟ್ಟಿ ಕಡಬು
ಸೆಜ್ಜಿರೊಟ್ಟಿಕಾಳಪಲ್ಯಾಸ್ಯಾಂಡ್ಗಿಹಪ್ಳಾ
ದೇವ್ರಗೆ ತೋರ್ಸಿಬರ್ರಿ ಪೋರಾ
ಚರಗಾ ಚೆಲ್ಲೋಣ//

ರೈತರಂದ್ರ ಅನ್ನ ಕೊಡೊ ದೇವ್ರು
ಛೊಲೊ ಬೆಳಿ ಬೆಳ್ಯಾಕ ಬಿಸಲು
ಮಳಿಗಾಳಿ ಭೂತಾಯಿ ಹಕ್ಕಿಪಕ್ಷಿಗಳ್ನ
ನೆನೆಸ್ಕೊಂತ ತಿನ್ನಾಕ್ಕೊಟ್ಟು ನಮಸ್ಕಾರ
ಮಾಡೋಣ//

ಅನ್ನಪೂರ್ಣ ಸಕ್ರೋಜಿ ಪುಣೆ

ಕಣ್ತೆರೆದ ನ್ಯಾಯ ದೇವತೆ

ನಾರಿ ಶಕ್ತಿಯ ಪ್ರತೀಕ
ಸೀರೆಯುಟ್ಟ ಸಾತ್ವಿಕ
ಭವ್ಯ ಪರಂಪರೆಯ ನ್ಯಾಯದೇವತೆ
ಕಣ್ತೆರೆದು ನೋಡುತ
ನ್ಯಾಯಾನ್ಯಾಯಗಳ
ಸಮಾನತೆಯ ತಕ್ಕಡಿ ಬಲಗೈಯಲ್ಲಿ
ಲಿಂಗಭೇದ ಜಾತಿಭೇದ
ತೊಡೆದ ಸಮಾನತೆಯ
ನ್ಯಾಯನೀತಿಗಳಪುಸ್ತಕ ಎಡಗೈಯ್ಯಲಿ
ಬದಲಾದ ನ್ಯಾಯ ದೇವತೆ
ಬದಲಾಗದಸಂವಿಧಾನಬದ್ಧ
ಸತ್ಯನೀತಿಯಕಾನೂನಿಗೆ ನಮನಗಳು

ಅನ್ನಪೂರ್ಣ ಸು ಸಕ್ರೋಜಿ ಪುಣೆ