ಅಭಿಲಾಷೆ ಕಾದಂಬರಿ ಸಂಚಿಕೆ -48
ಎಲ್ಲರಿಗೂ ವಿಜಯ ದಶಮಿಯ ಶುಭಾಶಯಗಳು,
ಆತ್ಮೀಯ ಓದುಗರಿಗೆ ವಂದನೆಯನ್ನು ತಿಳಿಸುತ್ತಾ 🙏🙏
ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 48 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ
- ಹಿಂದಿನ ಸಂಚಿಕೆಯಲ್ಲಿ
ಇನ್ನೊಂದು ಸಲ ವಿಕ್ರಮ್ ಫೋನ್ ಮಾಡಿದ್ರೆ, ನನಗೆೆ ಆರ್ಮಿ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿದೆಯೆಂದು ಹೇಳುವಂತೆ ಕೋದಂಡರಾಂ ರವರು ಆಶಾಳಿಗೆ ಹೇಳುತ್ತಾರೆ.
- ಕಥೆಯನ್ನು ಮುಂದುವರೆಸುತ್ತಾ
ಆರ್ಮಿ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿದೆಯೆಂದು ವಿಕ್ರಮ್ ಗೆ ಹೇಳುವಂತೆ ಆಶಾಳ ಅಪ್ಪ ಹೇಳಿದ ಮಾತಿಗೆ,
ಇನ್ನೂ ಆ ಹುಡುಗನಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲವೆಂದು ಅಪ್ಪನೇ ಹೇಳಿದ್ದಾರೆ, ವಿಕ್ರಮ್ ಗೆ ಹೇಗೆ ಹೇಳಲೆಂದು ಯೋಚಿಸಿ, ಏನಾದರಾಗಲೀ ವಿಕ್ರಮ್ ಕುಟುಂಬದವರಿಂದ ಇರಿಟೇಟ್ ತಪ್ಪಿದರೆ ಸಾಕು , ಇನ್ನೊಂದು ಸಲ ಅವನು ಫೋನ್ ಮಾಡಿದರೆ ನೇರವಾಗಿ ಹೇಳಬೇಕು ಎಂದುಕೊಳ್ಳುತ್ತಾಳೆ.
ಕೆಲವು ದಿನಗಳ ನಂತರ ಶನಿವಾರದ ದಿನ ರಜೆ ಇದೆಯೆಂದು ತನ್ನ ಸ್ವೇಹಿತೆಯನ್ನು ಮಾತನಾಡಿಸಿದ ನಂತರ, ಅಲ್ಲೇ ಇದ್ದ ಸ್ಟೋರ್ ನೋಡಿ ಶಾಪಿಂಗ್ ಗೆ ಬಂದು, ತನಗೆ ಬೇಕಾದ ವಸ್ತುಗಳನ್ನು ಟ್ರಾಲಿಯಲ್ಲಿ ಹಾಕಿಕೊಳ್ಳುತ್ತಾ, ಮೊಬೈಲಿನಲ್ಲಿ ಅಮ್ಮನಿಗೆ ಫೋನ್ ಮಾಡಿ, ಅಮ್ಮಾ ನಾನು ಡಿಪಾರ್ಟ್ ಮೆಂಟಲ್ ಸ್ಟೋರ್ ಗೆ ಬಂದಿದ್ದೇನೆ, ಮನೆಗೆ ಏನು ಬೇಕೆಂದು ಹೇಳಿದರೆ ತರುತ್ತೇನೆಂದು ಆಶಾ ಹೇಳಿದಾಗ
ನೀನೊಬ್ಬಳೇ ಏಕೆ ಹೋದೆ ಆಶಾ? ಸ್ವಲ್ಪ ದಿನ ಒಬ್ಬಳೇ ಹಾಗೆಲ್ಲಾ ಹೇಳದೆ ಕೇಳದೆ ಹೋಗಬೇಡಮ್ಮಾ, ಕರೆದಿದ್ದರೆ ನಾನೂ ಬರುತ್ತಿದ್ದೆನಲ್ಲಾ ? ಯಾವ ಸ್ಟೋರಿನಲ್ಲಿದ್ದೀಯಾ ಎಂದು ಅವಳಮ್ಮ ಕೇಳಲು
ಆಶಾ ಸ್ಟೋರ್ ಹೆಸರು ವಿಳಾಸ ಹೇಳಿ ಬೇಗ ಬರುತ್ತೇನೆಂದು ಹೇಳುತ್ತಾಳೆ
ಇಲ್ಲೇ ಹತ್ತಿರದ ಅಂಗಡಿಯಲ್ಲಿ ತೆಗೆದುಕೊಂಡರಾಯಿತು ಬೇಗ ಬಾಮ್ಮಾ ಎಂದು ಅವಳಮ್ಮ ಹೇಳಲು
ಅಮ್ಮಾ ನೀನೇಕೆ ಭಯ ಪಡುತ್ತಿದ್ದೀಯಾ? ನಾನೊಬ್ಬಳೇ ಕೆಲಸಕ್ಕೆ ಹೋಗಿ ಬರುವುದಿಲ್ಲವಾ? ಎಂದು ಆಶಾ ಪ್ರಶ್ನಿಸುತ್ತಾಳೆ
ಒಂದು ಸಲ ಆಗಿದ್ದು ಗೊತ್ತಾಗಿಲ್ಲವಾ? ಪುನಃ ಅದು ರಿಪೀಟ್ ಆಗಬೇಕಾ? ಎಂದು ಅವಳಮ್ಮನ ಮಾತಿಗೆ
ಒಂದು ಸಲ ಯಾಮಾರಿದೆ ಎಂದಮಾತ್ರಕ್ಕೆ ಅದೇರೀತಿ ಆಗುತ್ತದೆಂದು ಏಕೆ ನೀನು ಯೋಚಿಸುತ್ತೀಯಾ? ನನಗೇನೂ ಆಗುವುದಿಲ್ಲ, ಈಗ ನಿನಗೇನು ಬೇಕು ಹೇಳೆಂದು ಸ್ವಲ್ಪ ಸಿಡುಕಿನಿಂದ ಕೇಳಲು
ನೀನು ಮೊದಲು ಮನೆಗೆ ಹೊರಟು ಬಾ, ಬೇಕಿದ್ದರೆ ಇಲ್ಲೇ ತೆಗೆದುಕೊಳ್ಳೋಣವೆಂದು ಅವಳಮ್ಮ ಹೇಳಿದಾಗ
ಅಮ್ಮಾ ಅಲ್ಲಿಯೂ ನಾನೇ ತರಬೇಕು, ಬೇಗ ಏನು ಬೇಕೋ ಹೇಳಮ್ಮಾ, ಪದೇ ಪದೇ ಹೋಗುವುದಕ್ಕೆ ಆಗುವುದಿಲ್ಲವೆಂದಾಗ
ರವೆ, ಸಕ್ಕರೆ ಬೇಕು ಎಂದ ತಕ್ಷಣ, ಆಶಾ ಅಲ್ಲಿ ಜೋಡಿಸಿಟ್ಟಿದ್ದ ಪ್ಯಾಕೆಟ್ ತೆಗೆದುಕೊಂಡು, ನಂತರ ಅಮ್ಮ ಹೇಳಿದ, ಇನ್ನೂ ಕೆಲವು ವಸ್ತುಗಳನ್ನು ತೆಗೆದುಕೊಂಡು ಅಷ್ಟೇನಾ ಎಂದು ಕೇಳಲು
ಅವಳಮ್ಮ ಎರಡು ಸೆಕೆಂಡ್ ಯೋಚಿಸಿ, ಕೊಬ್ಬರಿ ಎಣ್ಣೆ ತಂದರೆ ಸಾಕೆಂದು ಹೇಳಿ ಫೋನ್ ಆಫ್ ಮಾಡಿದ ನಂತರ
ಕೊಬ್ಬರಿ ಎಣ್ಣೆ ಎಂದು ಜೋರಾಗಿ ಹೇಳಿ ಇನ್ನೇನು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ
ಅವಳ ಹಿಂಬದಿಯಿಂದ ಮೇಡಮ್ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಿ ಎನ್ನುತ್ತಾ, ಮುಂದೆ ಬಂದಾಗ ನಾನೇ ತೆಗೆದುಕೊಳ್ಳುತ್ತಿದ್ದೆ, ನೀವೇಕೆ ತೊಂದರೆ,,,, ಎಂದು ಹೇಳಿ ಕೊಬ್ಬರಿ ಎಣ್ಣೆ ಕೊಟ್ಟ ವ್ಯಕ್ತಿಯ ಮುಖ ನೋಡಿದ ತಕ್ಷಣ, ಕಕ್ಕಾಬಿಕ್ಕಿಯಾಗುತ್ತಾಳೆ, ಆ ವ್ಯಕ್ತಿ ಬೇರೆ ಯಾರೂ ಆಗಿರದೆ ವಿಕ್ರಮ್ ಆಗಿದ್ದು, ಏನೂ ಮಾತನಾಡದೆ, ಬೇರೆ ವಸ್ತುಗಳನ್ನು ತೆಗೆದುಕೊಳ್ಳಲು ಹೋಗುತ್ತಿರುವಾಗ
ಆಶಾ ಪ್ಲೀಸ್ ನಿಂತುಕೋ ಎನ್ನುತ್ತಾ, ವಿಕ್ರಮ್ ಹಿಂಬಾಲಿಸುತ್ತಿದ್ದರೂ,
ಆಶ ಅಲ್ಲಿ ನಿಲ್ಲದೆ ಮುಂದೆ ಮುಂದೆ ಹೋಗುತ್ತಿರುವುದನ್ನು ವಿಕ್ರಮ್ ಗೆ ಸಹಿಸಲಾಗದೆ, ಬೇರೆ ಸಾಲಿನಿಂದ ಬಂದು ಅವಳ ಮುಂದೆ ನಿಂತು, ಆಶಾ ನನ್ನನ್ನೇಕೆ ಅವಾಯ್ಡ್ ಮಾಡುತ್ತಿದ್ದೀಯಾ? ಪ್ಲೀಸ್ ಮಾತಾಡು ಎಂದಾಗ
ಪ್ಲೀಸ್ ವಿಕ್ರಮ್ ನನ್ನ ಪಾಡಿಗೆ ನನ್ನ ಬಿಟ್ಟುಬಿಡು ಎಂಬ ಆಶಳ ಮಾತಿಗೆ
ನೋ ಆಶಾ ನಿನ್ನನ್ನು ಬಿಟ್ಟು ನಾನಿರಲಾರೆ ಎಂದು ಹಠತೊಟ್ಟವನಂತೆ ಹೇಳಿ ಆಶಾಳ ಕೈ ಹಿಡಿಯಲು ಹೋದಾಗ
ಆಶ ತನ್ನ ಕೈಯ್ಯನ್ನು ಸಡನ್ನಾಗಿ ಹಿಂದಕ್ಕೆ ಎಳೆದುಕೊಂಡು ಏಯ್ ವಿಕ್ರಮ್ ಏನು ಮಾಡುತ್ತಿದ್ದೀಯಾ? ಇಲ್ಲಿ ಎಲ್ಲಾಕಡೆಯೂ ಸಿಸಿ ಕ್ಯಾಮರಾ ಇಟ್ಟಿರುವುದು ಗೊತ್ತಿಲ್ಲವಾ? ಎಂದು ಕೋಪದಿಂದ ಹೇಳಲು
ನಾನೇನು ಮಾಡಿದೆಯೆಂದು ಕೂಗುತ್ತಿದ್ದೀಯಾ? ಎನ್ನುತ್ತಾನೆ ವಿಕ್ರಮ್
ವಿಕ್ರಮ್ ಬಂದಿದ್ದರಿಂದ ಆಶಾಳಿಗೆ ಅವಳಮ್ಮ ಹೇಳಿದ್ದ ಪದಾರ್ಥಗಳೆಲ್ಲವೂ ಮರೆತುಹೋಗಿದ್ದು, ಇವನಿಂದ ತಪ್ಪಿಸಿಕೊಂಡು ಹೋದರೆ ಸಾಕೆನಿಸಿ, ಬಿಲ್ ಮಾಡಿಸಲು ಕೌಂಟರ್ ಬಳಿ ಬರುವ ವೇಳೆಗಾಗಲೇ ವಿಕ್ರಮ್ ಹೊರಗೆ ಬಂದು ಕಾಯುತ್ತಲಿರುತ್ತಾನೆ.
ಆಶ ತನ್ನ ಕಾರ್ಡನ್ನು ಕೊಟ್ಟು ಪಿನ್ ನಂಬರ್ ಹೇಳಿ ಬಿಲ್ ಜೊತೆಗೆ ಪದಾರ್ಥಗಳನ್ನು ತೆಗೆದುಕೊಂಡು ಹೊರಬಂದ ತಕ್ಷಣ
ಅಲ್ಲೇ ಇದ್ದ ವಿಕ್ರಮ್ ಆಶಾ ಡಿಯರ್ ನನ್ನ ಕಾರಲ್ಲೇ ಹೋಗೋಣವೆಂದಾಗ
ನೋ ನಾನು ನಿನ್ನ ಜೊತೆಯಲ್ಲಿ ಬರುವುದಿಲ್ಲ, ನಿನ್ನ ಪಾಡಿಗೆ ನೀನು ಹೋಗೆಂದು ಹೇಳಿದಾಗ
ಅಯ್ಯೋ ಎಲ್ಲಾದರೂ ಉಂಟಾ ಡಿಯರ್ ಅಪರೂಪಕ್ಕೆ ಸಿಕ್ಕಿದ್ದೀಯಾ,,,, ನಿನ್ನ ಬಿಟ್ಟು ಹೇಗೆ ಹೋಗಲಿ? ಎಂದಾಗ
ಪದೇ ಪದೇ ಆಶಾ ಡಿಯರ್ ಎಂದು ವಿಕ್ರಮ್ ನುಡಿಯುತ್ತಿರುವುದನ್ನು ಕೇಳಿ ಆಶಾಗೆ ಮೈ ಚಿವುಟಿದಂತಾಗಿ, ವಿಕ್ರಮ್ ಪ್ಲೀಸ್ ನನ್ನನ್ನು ಡಿಯರ್ ಎಂದು ಕರೆಯಬೇಡಾ ನನಗೆ ತುಂಬಾ ಇರಿಟೇಟ್ ಆಗುತ್ತದೆ ಎಂದು ಸಿಡುಕಿನಿಂದ ಹೇಳಿದಾಗ
ಓ ನಿನಗೆ ಡಿಯರ್ ಎಂದರೆ ಆಗುವುದಿಲ್ಲವೆಂದರೆ ನೀನು ಯಾವ ರೀತಿ ಕರೆಯಬೇಕೆಂದು ಹೇಳುತ್ತೀಯೋ ಹಾಗೆ ಕರೆಯುತ್ತೇನೆಂದು ವಿಕ್ರಮ್ ಮಾತಿಗೆ
ನನ್ನನ್ನು ಏನಂತಲೂ ಕರೆಯಬೇಡಾ,ನನ್ನ ಪಾಡಿಗೆ ನಾನು ಹೋಗಲು ಬಿಟ್ಟುಬಿಡೆಂದು ಆಶಾ ಹೇಳುತ್ತಾಳೆ
ನೋ ನೋ ನೋ ನೋ ಅಪರೂಪಕ್ಕೆ ಸಿಕ್ಕಿರುವ ನಿನ್ನನ್ನು ಹಾಗೆಲ್ಲಾ ಬಿಡುವುದಕ್ಕೆ ಆಗುತ್ತದಾ ಎಂದು ವಿಕ್ರಮ್ ಹೇಳಿದಾಗ
ಆಶಾಳಿಗೆ ಅಮ್ಮನ ಮಾತು ನೆನಪಿಗೆ ಬಂದು, ಮನಸ್ಸಿನಲ್ಲಿ ಸ್ವಲ್ಪ ಭಯಗೊಂಡು, ದೇಹ ಕಂಪಿಸಿದಂತಾಗಿ ಅಮ್ಮನನ್ನು ಕರೆದುಕೊಂಡು ಬಂದಿದ್ದರೆ ಚೆನ್ನಾಗಿರುತ್ತಿತ್ತೆಂದುಕೊಂಡು
ಇವನಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ಯೋಚಿಸುತ್ತಾ ಮುಂದೆ ಹೆಜ್ಜೆ ಇಡುತ್ತಿರುವಾಗ
ಆಶಾ ಎಲ್ಲಿ ಹೋಗುತ್ತಿದ್ದೀಯಾ ನಿಂತುಕೋ,,,,
ಎಂದರೂ ಆಶಾ ಅಲ್ಲಿ ನಿಲ್ವದೆ ಆಟೋಗಾಗಿ ಕೈ ಅಡ್ಡ ಹಿಡಿಯುತ್ತಿದ್ದರೂ ಯಾವ ಆಟೋಗಳು ನಿಲ್ಲಿಸುತ್ತಿರುವುದಿಲ್ಲ. ಛೇ ಬೇಕಾದಾಗ ಒಂದೂ ಆಟೋ ಸಿಗುವುದಿಲ್ಲ, ಬೇಡದೇ ಇದ್ದಾಗ, ಹತ್ತಿರ ಬಂದು ನಿಲ್ಲಿಸಿ ಎಲ್ಲಿಗೊ ಹೋಗಬೇಕೆಂದು ಕೇಳುತ್ತಾರೆ ಎಂದುಕೊಂಡು ಮೌನವಾದಾಗ
ಅಲ್ಲೇ ಇದ್ದ ವಿಕ್ರಮ್ ಆಶಾ ಡಿಯರ್ ಸದ್ಯಕ್ಕೆ ಯಾವ ಆಟೋ ಬರುವುದಿಲ್ಲ ನನ್ನ ಕಾರಿನಲ್ಲಿ ಬಾ, ನೀನು ಎಲ್ಲಿ ಹೇಳುತ್ತೀಯೋ ಅಲ್ಲಿ ನಿಲ್ಲಿಸುತ್ತೇನೆ, ಬೇಕಾದರೇ ಮನೆವರೆಗೂ ಡ್ರಾಪ್ ಕೊಡುತ್ತೇನೆಂದು ಹೇಳಲು
ನೋಡು ಪುನಃ ಪುನಃ ಡಿಯರ್ ಎನ್ಮಬೇಡವೆಂದು ಆಶಾ ಹೇಳಿದರೂ
ನೋ ನಿನ್ನನ್ನು ಆ ರೀತಿ ಕರೆದರೆ ನನಗೆ ಸಂತೋಷವೆಂದು ವಿಕ್ರಮ್ ಹೇಳುತ್ತಾನೆ
ನೋಡು ನನಗೆ ಬೇರೆಯವರ ಜೊತೆ ಮದುವೆ ಫಿಕ್ಸ್ ಆಗಿದೆ, ಇನ್ನೊಂದು ವಾರವಷ್ಟೇನಾನು ಬೇರೆಯವರ ಹೆಂಡತಿಯಾಗುತ್ತೇನೆ ಎಂದಾಗ
ಈ ಮಾತಿಗೆ ವಿಕ್ರಮ್ ಗೆ ನಿರಾಸೆಯ ಜೊತೆಗೆ ಕೋಪವೂ ಉಕ್ಕಿಬಂದು ಮುಖ ಕಪ್ಪಿಟ್ಟಂತಾಗಿ, ನೋ ಆಶಾ ನೀನು ಈ ರೀತಿ ಸುಳ್ಳು ಹೇಳಿ ನನ್ನನ್ನು ದಾರಿ ತಪ್ಪಿಸಬೇಡವೆಂದು ವಿಕ್ರಮ್ ಹೇಳಿದಾಗ
ನಾನು ಏಕೆ ನಿನ್ನ ದಾರಿ ತಪ್ಪಿಸಲಿ? ಇರುವ ವಿಷಯ ಹೇಳಿದ್ದೇನೆ ಎಂದಾಗ
ಯಾರವನು ನಿನ್ನ ಕೈ ಹಿಡಿಯುವವನು ಎಂದು ವಿಕ್ರಮ್ ಕೇಳಲು
ನೀನು ಒಂದು ದಿನ ಫೋನ್ ಮಾಡಿ ನಾನು ಪ್ರೀತಿಸುತ್ತಿರುವ ಹುಡುಗಿಯ ತಂಟೆಗೆ ಬರಬೇಡವೆಂದು ಹೇಳಿದ್ದೆಯಲ್ಲಾ ಅವರೇ ಎಂದು ಆಶಾ ಹೇಳುತ್ತಾಳೆ
ಓ ಎಲ್ಲಾ ಸುಳ್ಳು ನೀನು ಅವರನ್ನು ಅವತ್ತೇ ರಿಜೆಕ್ಟ್ ಮಾಡಿದ್ದೆ ಇದನ್ನು ನಾನು ನಂಬಬೇಕಾ? ನನ್ನಿಂದ ತಪ್ಪಿಸಿಕೊಳ್ಳಲು ಈ ರೀತಿ ಸುಳ್ಳು ಹೇಳುತ್ತಿದ್ದೀಯಾ ಎಂಬುದು ನನಗೆ ಗೊತ್ತೆಂದು ವಿಕ್ರಮ್ ನುಡಿಯಲು
ನೋ ವಿಕ್ರಮ್ ನಾನು ಸುಳ್ಳು ಹೇಳುತ್ತಿಲ್ಲಾ ಇಟ್ ಈಸ್ ರಿಯಲೀ ಟ್ರೂ ಎನ್ನುತ್ತಾಳೆ
ಹಾಗಾದರೆ ಅವರ ಹೆಸರೇನು? ಎಲ್ಲಿದ್ದಾರೆಂದು ವಿಕ್ರಮ್ ಪ್ರಶ್ನಿಸಲು
ಅವರು ಒಬ್ಬರು ದೇಶಕಾಯುವ ಯೋಧರು ಈಗ ಕೆಲಸದ ಮೇಲೆ ಹೋಗಿದ್ದಾರೆ, ಅವರು ಪುನಃ ಬಂದ ತಕ್ಷಣ ಮದುವೆಯ ಏರ್ಪಾಡು ಮಾಡುತ್ತಾರೆಂದು ಆಶಾ ಹೇಳಲು
ಅವರು ಈಗ ಎಲ್ಲಿ ಕೆಲಸ ಮಾಡುತ್ತಿದ್ದಾರೆಂದು ಪುನಃ ವಿಕ್ರಮ್ ಪ್ರಶ್ನಿಸಿದಾಗ
ಈಗ ಅವರು ಹಿಮದ ರಾಶಿಯ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರಂತೆ, ಅಂತಹ ದೇಶಸೇವೆ ಮಾಡುವವರೇ ನನ್ನ ಪತಿಯಾಗುತ್ತಿರುವುದು ನನಗೆ ಹೆಮ್ಮೆಯಾಗಿದೆ ನಿನ್ನಂತ ಕಿಡ್ನಾಪರ್ ಕುಟುಂಬವಲ್ಲ ಅವರದ್ದು ಎಂದು ಆಶಾ ವಿಕ್ರಮ್ ನನ್ನು ಛೇಡಿಸುತ್ತಾಳೆ.
ಆಶಾಳ ಮಾತಿನಿಂದ ವಿಕ್ರಮ್ ಗೆ ಸಹಿಸಲಾರದ ಕೋಪ ಬರುತ್ತದೆ.
ಆಶಾ ಯಾವಾಗಲೂ ನಮ್ಮ ಕುಟುಂಬವನ್ನು ಕಿಡ್ನಾಪರ್ ಕುಟುಂಬ ಸುಳ್ಳು ಕುಟುಂಬವೆಂದು ಕ್ರಿಟಿಸೈಸ್ ಮಾಡಬೇಡಾ, ಇದು ನನಗೆ ಸರಿ ಕಾಣುವುದಿಲ್ಲವೆಂದು ವಿಕ್ರಮ್ ಹೇಳಿದಾಗ
ನೀನು ನನ್ನನ್ನು ಡಿಯರ್ ಎಂದು ಕರೆಯಬೇಡವೆಂದು ಆಶಾ ಹೇಳುತ್ತಾಳೆ
ಇಲ್ಲಾ ನಾನು ಆ ರೀತಿ ನಿನ್ನನ್ನು ಕರೆದರೆ ಮಾತ್ರ ಮನಸ್ಸಿಗೆ ಖುಷಿ ಹಾಗೆಯೇ ಏನೋ ಒಂದು ರೀತಿಯ ಸಮಾಧಾನ ವಾಗುತ್ತದೆಂದು ವಿಕ್ರಮ್ ಹೇಳಲು
ನೀನು ಆ ರೀತಿ ಕರೆದರೆ ನನಗೆ ತುಂಬಾ ಇರಿಟೇಟ್ ಆಗುತ್ತದೆಂದು ಆಶಾ ಹೇಳುತ್ತಾ, ಆಟೋ ನಿಲ್ಲಿಸಿ ತಕ್ಷಣ ಕುಳಿತುಕೊಂಡು ಬೇಗ ನಡೆಯಪ್ಪಾ ಎಂದು ಹೇಳಿ ಸದ್ಯ ಇವನಿಂದ ತಪ್ಪಿಸಿಕೊಂಡೆನಲ್ಲಾ ಎಂದುಕೊಂಡು ಇನ್ನೇನು ಆಟೋ ಹೊರಡಬೇಕು ಎನ್ನುವಷ್ಟರಲ್ಲಿ, ಆಶಾ,,,, ಆಶಾ ,,,, ಎಂದು ಯಾರೋ ಕೂಗಿದಂತಾಗಿ,
ಯಾವುದೋ ಪರಿಚಿತ ಧ್ವನಿ ಕೇಳಿದಂತಿದೆಯಲ್ಲಾ ಯಾರು ಬಂದರೆಂದು ತಕ್ಷಣ ತಿಳಿಯದೆ ಆಶಾ ಆಟೋವನ್ನು ನಿಲ್ಲಿಸುತ್ತಾಳೆ
ಮುಂದುವರೆಯುತ್ತದೆ
- ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶನೇನೆಂದರೆ
ಒಂದು ಸಲ ತಿಳಿಯದೆ ಅಪಾಯಕ್ಕೆ ಸಿಲುಕಿ ಅದೃಷ್ಟವಶಾತ್ ಬಚಾವ್ ಆಗಿ ಬಂದಿದ್ದ ಅನುಭವವಾಗಿದ್ದರೂ, ಸಹ ಪುನಃ ಅದೇರೀತಿ ಅಪಾಯಕ್ಕೆ ಸಿಲುಕಿಕೊಳ್ಳುತ್ತೇನೆಂಬ ಅರಿವಿದ್ದರೂ, ಅಥವಾ ಬೇರೆಯವರು ಎಚ್ಚರಿಸಿದ್ದರೂ ಅದನ್ನು ಉಪೇಕ್ಷೆ ಮಾಡಿ, ಒಂದು ಸಲ ನನಗೆ ತಿಳಿಯದೆ ಸಿಲುಕಿಕೊಂಡೆ ಈಗ ಯಾರು ಬರುತ್ತಾರೋ ನೋಡೇ ಬಿಡುತ್ತೇನೆಂದು ಮೊಂಡು ಧೈರ್ಯದಿಂದ ಹೋಗಿ ಸಂಕಟಕ್ಕೆ ಸಿಲುಕಿಕೊಳ್ಳುವವರೇ ಕಡು ಮೂರ್ಖರು.