ಅಭಿಲಾಷೆ ಕಾದಂಬರಿ ಸಂಚಿಕೆ -47

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 47 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ಆರ್ಮಿ ಹುಡುಗ ವಾಪಸ್‌ ಕೆಲಸಕ್ಕೆ ಹೋದರೆಂದು ಕೋದಂಡರಾಂ ರವರು ತಮ್ಮ ಪತ್ನಿಗೆ ಹೇಳಿದಾಗ ಬೇರೆ ಹುಡುಗನನ್ನು ನೋಡಬಾರದಾ ಎಂದು ಅವರ ಪತ್ನಿ ನುಡಿದಾಗ, ಇನ್ನೂ ಸ್ವಲ್ಪ ದಿನ ಕಾಯೋಣವೆಂದು ಕೋದಂಡರಾಂ ಹೇಳುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಹುಡುಗ ಪುನಃ ಕೆಲಸಕ್ಕೆ ವಾಪಸ್ಸಾದರೂ, ಇನ್ನೂ ಸ್ವಲ್ಪ ದಿನ ಕಾಯೋಣವೆಂಬ ಕೋದಂಡರಾಂ ಮಾತಿಗೆ
ಅಯ್ಯೋ ಬೇಡಾರೀ, ಬೇಗ ಮದುವೆ ಮಾಡಿದರೆ ಆ ದುಷ್ಟನ ಕಾಟ ತಪ್ಪುತ್ತದೆಂದು ಕೋದಂಡರಾಂ ಪತ್ನಿ ಹೇಳಿದಾಗ
ಒಳ್ಳೆಯ ಸಂಬಂಧ ಸಿಕ್ಕಿದೆ, ಇದನ್ನು ಕಳೆದುಕೊಳ್ಳುವುದು ಬೇಡ ಎನಿಸುತ್ತದೆ ಎನ್ನುತ್ತಾರೆ ಕೋದಂಡರಾಂ
ಆದಷ್ಟೂ ಬೇಗಾ ಆ ಹುಡುಗ ಬಂದು ಮದುವೆ ಶಾಸ್ತ್ರ ಮುಗಿದರೆ ಸಾಕೆನಿಸಿದೆ ಎನ್ನುತ್ತಾ ಅವರ ಪತ್ನಿ ತಮ್ಮ ಕೆಲಸಕ್ಕೆ ಹೋಗುತ್ತಾರೆ

ಪುನಃ ಒಂದು ವಾರವಾವಾದರೂ, ಆರ್ಮಿ ಹುಡುಗನ ತಂದೆ ಫೋನ್ ಮಾಡದೇ ಇರುವುದನ್ನು ಕಂಡು ಕೋದಂಡರಾಮ್ ರವರಿಗೆ ಮನಸ್ಸಿನಲ್ಲಿ ತಳಮಳ ಉಂಟಾಗಿರುತ್ತದೆ.
ಅವರ ಪತ್ನಿಯಂತೂ ಬೇರೆ ಹುಡುಗನ ನೋಡಬಾರದಾ‌? ಎಂದು ಒತ್ತಾಯ ಮಾಡುತ್ತಿದ್ದರೂ
ಪುನಃ ಇನ್ನೂ ಸ್ವಲ್ಪ ದಿನ ಕಾಯೋಣವೆಂಬ ಕೋದಂಡರಾಮ್ ಮಾತಿಗೆ
ಬೇಡಾ ರೀ ಇನ್ನೆಷ್ಚು ದಿನಾ ಕಾಯೋದು? ಮಗಳು ಕೆಲಸಕ್ಕೆ ಹೋದ‌ ನಂತರ ಅವಳು ಮನೆಗೆ ಬರುವವರೆಗೂ ಎಂದಿಗೆ ಬರುತ್ತಾಳೋ ? ಎಂದು ಮನಸ್ಸಿನಲ್ಲಿ ತುಂಬಾ ಭಯವಾಗುತ್ತಿರುತ್ತದೆ ರೀ,
ಮಗಳ ತಂಟೆಗೆ ಯಾರೂ ಬರುವುದಿಲ್ಲ. ಯಾರ್ಯಾರೋ ಸುಮ್ಮ ಸುಮ್ಮನೆ ಏಕೆ ಬರುತ್ತಾರೆ? ನೀನೇ ಹೇಳು? ಕಿಡ್ನಾಪ್ ಮಾಡಿದವನು ಕಂಬಿಯ ಹಿಂದೆ ಇದ್ದಾನೆ? ಅವನನ್ನು ಬಿಟ್ಟು ನಮ್ಮ ಮಗಳಿಗೆ ಬೇರೆ ಯಾರೂ ವೈರಿಗಳಿಲ್ಲ, ನೀನು ಧೈರ್ಯವಾಗಿರೆಂದು ಕೋದಂಡರಾಂ ರವರು ತಮ್ಮ ಪತ್ನಿಗೆ ಸಮಾಧಾನ ಮಾಡುತ್ತಾರೆ.

ಈ ಕಡೆ ಆಶಾ ತನ್ನೊಡನೆ ಮಾತನಾಡುತ್ತಿಲ್ಲವೆಂದು‌ ನೀರಿನಿಂದ ಆಚೆ ಬಿದ್ದ ಮೀನಿನಂತೆ ವಿಕ್ರಮ್ ಒದ್ದಾಡುತ್ತಿದ್ದು, ಪುನಃ ಯಾವರೀತಿ ಆಶಾಳ‌ ಸ್ನೇಹ ಪಡೆಯಬೇಕೆಂದು ತಿಳಿಯದೆ, ಕಂಗಾಲಾಗಿರುತ್ತಾನೆ. ಆಶಾಳನ್ನು ದಾರಿ ಮದ್ಯದಲ್ಲಿ ಅಪಹರಿಸಿ ಮದುವೆಯಾಗಿಬಿಡಲಾ ? ಎಂಬ ಕೆಟ್ಟ ಆಲೋಚನೆ ಮನಸ್ಸಿನಲ್ಲಿ ಮಿಂಚಿ ಹೋದಾಗ, ಅಯ್ಯೋ ಬೇಡಪ್ಪಾ, ಆಶಾ ನನ್ನನ್ನು ಮದುವೆಯಾಗುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾಳೆ, ಅವಳಿಗೂ ನನ್ನನ್ನೇ ಮದುವೆಯಾಗಬೇಕೆಂದಿದ್ದರೆ ಪ್ರಯತ್ನಿಸಬಹುದಿತ್ತೆಂದುಕೊಳ್ಳುತ್ತಾನೆ. ಆದರೂ ಮನಸ್ಸು ತಡೆಯದೆ ಪುನಃ ಆಶಾಳಿಗೆ ಫೋನ್ ಮಾಡಿದಾಗ
ಮೊಬೈಲಿನಲ್ಲಿ ಹೊಸ ನಂಬರ್ ಬಂದಿದ್ದನ್ನು ನೋಡಿದ ಆಶಾ
ಯಾವುದೋ ತಂಪೆನಿ ಕಾಲ್ ಇರಬಹುದೆಂದುಕೊಂಡು ರಿಸೀವ್ ಮಾಡುವುದೇ ಇಲ್ಲ. ಮೂರು ಸಲ‌ ರಿಂಗ್ ಆದಾಗ ಛೇ ಪುನಃ ಆ ಘಾತುಕನೇ ಫೋನ್ ಮಾಡಿರಬಹುದು, ಮಾತನಾಡಿ ಸರಿಯಾಗಿ ಹೇಳುತ್ತೇನೆಂದುಕೊಂಡು ಹಲೋ ಎಂದು ಕೂಡಾ ಹೇಳದೆ, ನಿನಗೆ ನಾಚಿಕೆಯಾಗುವುದಿಲ್ಲವಾ? ಫೋನ್ ಮಾಡುವುದಿಲ್ಲವೆಮದು ಎಷ್ಟು ಸಲ‌ ಹೇಳಿದರೂ ನಿನ್ನ ಚಾಳಿ ನೀನು ಬಿಡುತ್ತಿಲ್ಲ. ನಿನ್ನ ಕಾಟ‌‌ ನನಗೆ ತಡೆಯಲು ಆಗುತ್ತಿಲ್ಲಾ ನನ್ನ ಪಾಡಿಗೆ ನನ್ನ ಬಿಟ್ಟು ಬಿಡೋ ನಾನು ಹೇಗೋ ಬದುಕುತ್ತೇನೆ, ಬೇಡಾ ಬೇಡವೆಂದರೂ ಪುನಃ ಪುನಃ ಫೋನ್ ಮಾಡಿ ನನ್ನನ್ನೇಕೆ ಗೋಳುಹೋಯ್ದುಕೊಳ್ಳುತ್ತಿದ್ದೀಯಲ್ಲಾ? ಪ್ಲೀಸ್ ನೆಮ್ಮದಿಯಾಗಿ ಬದುಕಲು ನನ್ನ ಬಿಟ್ಟು ಬಿಡೆಂದು ಆಶಾ ಕೇಳಿದಾಗ
ನನ್ನ ಮನಸ್ಸಿನಲ್ಲಿ ಆಸೆ ಎಂಬುದನ್ನು‌ ಬಿತ್ತಿ ಈಗ ನನ್ನ ಬಾಳಿಗೆ ಬೆಂಕಿ ಇಟ್ಟು ಹೋಗುತ್ತೀಯಾ? ಎಂದು ಏರುಧ್ವನಿಯಲ್ಲಿ ಕೇಳಲು
ಇಲ್ಲಾ,,,,, ವಿಕ್ರಮ್ ನಿನ್ನ ಬಾಳಿಗೆ ಬೆಂಕಿ ಇಟ್ಟವಳು ನಾನಲ್ಲಾ, ಅದೂ ನಿಮ್ಮಣ್ಣ, ನಿಮ್ಮಣ್ಣನು ನನ್ನನ್ನು ಕಿಡ್ನಾಪ್ ಮಾಡದೇ ಇದ್ದಿದ್ದರೆ ಖಂಡಿತಾ ನಿನ್ನನ್ನು ಮದುವೆಯಾಗುತ್ತಿದ್ದೆ ಎಂದು ಆಶಾ ಹೇಳಲು
ಇಲ್ಲಾ ಆಶಾ ನೀನು ನಮ್ಮಣ್ಣನ ಮೇಲೆ ತಪ್ಪು ತಿಳಿದಿದ್ದೀಯಾ, ಅವನು ನಮ್ಮ ಒಳಿತಿಗಾಗಿಯೇ ಮಾಡಿದ್ದಾನೆಂದು ವಿಕ್ರಮ್ ಹೇಳಲು
ಇಲ್ಲಾ ನಾನು ನಂಬುವುದಿಲ್ಲ, ನೀನು ಏನು ಹೇಳಿದರೂ ನಿಮ್ಮಣ್ಣನನ್ನು ನಂಬುವುದಿಲ್ಲವೆಂದು ಸಾವಿರ ಸಲ ಹೇಳುತ್ತೇನೆ ಎಂದಾಗ
ನಿನ್ನನ್ನು ಹೇಗೆ ನಂಬಿಸಲಿ ಹೇಳು ಆಶಾ ಎಂದು ವಿಕ್ರಮ್ ಕಳಕಳಿಯಿಂದ ಕೇಳಲು
ನೀನು ನನ್ನನ್ನು ನಂಬಿಸುವ ಪ್ರಯತ್ನ ಮಾಡಬೇಡಾ, ನನ್ನಿಂದ ದೂರ ದೂರ ಹೊರಟು ಹೋಗು ವಿಕ್ರಮ್ ಪ್ಲೀಸ್ ಪ್ಲೀಸ್ ಎಂದು ಆಶಾ ಗೋಗರೆಯುತ್ತಾಳೆ.
ಇಲ್ಲಾ ಆಶಾ ನೀನಿಲ್ಲದೆ ನಾನು ಬದುಕಿರಲಾರೆ ಎಂದು ಎಷ್ಟು‌ಸಲ‌ ಹೇಳಲಿ?
ನೀನು ಬದುಕಲೇ ಬೇಡಾ ನಿಮ್ಮಂತಹವರು ಬದುಕಿದ್ದರೆ ಇನ್ನೂ ಎಷ್ಟು ಜನರ ಬಾಳು ಹಾಳುಮಾಡುತ್ತೀರೋ? ಎಂದು ಆಶಾ ಖಾರವಾಗಿ ನುಡಿದಾಗ
ಆಶಾ ಏನು ಹೇಳುತ್ತಿದ್ದೀಯಾ? ನನ್ನ ಪ್ರೀತಿಸುತ್ತಿರುವ ಆಶ‌ಾಳ‌ ಬಾಯಿಂದ ಈ ಮಾತು ಬರುತ್ತದೆಂದು ನಾನು ಎಣಿಸಿರಲಿಲ್ಲವೆಂದು ವಿಕ್ರಮ್ ಹೇಳಿದಾಗ
ನಿನ್ನ ಪ್ರೀತಿಸುತ್ತಿದ್ದ ಆಶ‌ ಎಂದೋ ಸತ್ತುಹೋದಳು, ನಿನ್ನ ಪ್ರೀತಿಸುತ್ತಿರುವ ಆಶಾ ನಾನಲ್ಲವೆಂದು ಆಶಾ ನಿಷ್ಠೂರವಾಗಿ ಹೇಳಲು
ಆಯ್ತು ಆಶಾ ಇನ್ನೂ ಸ್ವಲ್ಪ ದಿನ ಕಾಯುತ್ತೇನೆ, ನಿನ್ನ ಮನಸ್ಸು ಬದಲಾಗುವವರೆಗೂ ಕಾಯುತ್ತೇನೆ. ಆಗಲಾದರೂ ಪುನಃ ನನ್ನನ್ನು ಪ್ರೀತಿಸುವ ಆಶ ಸಿಗುತ್ತಾಳೆಂದು ಕಡೇವರೆಗೂ ಕಾಯುತ್ತೇನೆಂದು ವಿಕ್ರಮ್ ನುಡಿಯಲು
ನೀನು ಎಷ್ಟೇ ದಿನ ಕಾಯುತ್ತಲಿದ್ದರೂ ಈ ಆಶಾ ಸಿಗುವುದಿಲ್ಲ. ಈ ನಂಬರನ್ನು ಬ್ಲಾಕ್ ಮಾಡುತ್ತೇನೆಂದು ಆಶ ಹೇಳಿದಾಗ
ಪ್ಲೀಸ್ ಆಶಾ ಹಾಗೆ ಮಾಡಬೇಡವೆಂದು ಕಳಕಳಿಯಿಂದ ವಿಕ್ರಮ್ ಕೇಳಿದಾಗ
ನೋ ವಿಕ್ರಮ್ ನಿನ್ನ ಹೆಸರು ಹೇಳಿದರೂ ನನಗೆ ಮುಜುಗರವಾಗುತ್ತೆ ಪ್ಲೀಸ್‌ ಫೋನ್ ಆಫ್ ಮಾಡೆಂದು ಹೇಳಿ ವಿಕ್ರಮ್ ಪುನಃ ಮಾತನಾಡುವುದರೊಳಗೆ ಆಶ ಫೋನ್ ಆಫ್ ಮಾಡಿ, ನಡುಮನೆಗೆ ಬಂದಾಗ
ಕೋದಂಡರಾಂ ರವರು ನಡುಮನೆಯ ಸೋಫಾ‌ಮೇಲೆ ಕುಳಿತುಕೊಂಡು ಶಾಲೆಯ ನೋಟ್ಸನ್ನು ಬರೆಯುತ್ತಲಿದ್ದು, ತಮ್ಮ ಮಗಳು ಬಂದಿದ್ದನ್ನು ಗಮನಿಸಿರುವುದಿಲ್ಲ.
ಆಶ ಬಂದವಳೇ ಅಪ್ಪನ ಕೈನಿಂದ ಪೆನ್ ಕಿತ್ತುಕೊಂಡಾಗ
ಯಾಕಮ್ಮಾ ಪೆನ್ ಕಿತ್ತುಕೊಂಡೆ? ಮುಂದಿನ ವಾರವೇ ಮಕ್ಕಳ‌ ಆನುಯಲ್ ಪರೀಕ್ಷೆ ಇದೆ, ಮಕ್ಕಳನ್ನು ತಯಾರಿ ಮಾಡಬೇಕು ಅದಕ್ಕೆ ನೋಟ್ಸ್ ಬರೆಯುತ್ತಿದ್ದೇನೆಂದು ಕೋದಂಡರಾಂರವರು ಹೇಳಿದಾಗ
ಇನ್ನೂ ಒಂದು ವಾರ ಇದೆಯಲ್ಲಾ, ಆಮೇಲೆ ಮಾಡಿದರೆ ಆಯ್ತು, ಈಗ ನನ್ನ ಮಾತು ಕೇಳೆಂದು ಆಶಾ ನುಡಿಯಲು
ಏನಮ್ಮಾ ನಿನ್ನ ಮಾತು ಬೇಗ ಹೇಳಮ್ಮಾ ಎಂದು ಕೋದಂಡರಾಂ ಮಾತನಾಡಲು
ಅಪ್ಪಾ ಈಗಲೇ‌ ಇನ್ಸ್‌ಪೆಕ್ಟರ್ ಗೆ ಫೋನ್ ಮಾಡಿ ಆ ಪುಂಡ ವಿಕ್ರಮ್ ನನ್ನ ಮಗಳಿಗೆ ಟಾರ್ಚರ್ ಕೊಡುತ್ತಿದ್ದಾನೆಂದು ಹೇಳಪ್ಪಾ, ಅವನಿಗೆ ಬುದ್ದಿ ಕಲಿಸಲು ಅವರೇ ಸರಿಯಾದವರು ಎಂದು ಆಶಾ‌ ಹೇಳಲು
ಯಾಕಮ್ಮಾ ಅವನು ಪುನಃ ಫೋನ್ ಮಾಡಿದ್ನಾ ಎಂದು ಅವರಪ್ಪ ಕೇಳಿದಾಗ
ಹೌದಪ್ಪಾ ಫೋನ್ ಮಾಡಿ ತುಂಬಾ ಟಾರ್ಚರ್‌ ಕೊಡುತ್ತಿದ್ದಾನೆಂದು ಆಶಾ ಹೇಳುತ್ತಾಳೆ.
ಈಗ ಅವನ ಅಣ್ಣ ಜೈಲಿನಲ್ಲಿದ್ದಾನೆ. ನಾನು ಅವನ ತಮ್ಮನ ಮೇಲೆ ಕಂಪ್ಲೇಂಟ್ ಕೊಟ್ಟರೆ ,,,,,,
ಅವನನ್ನೂ ಒಳಗೆ ಹಾಕುತ್ತಾರಲ್ಲವಾ ? ಹಾಕಲಿ ಬಿಡಪ್ಪಾ, ಅಣ್ಣ ತಮ್ಮ ಇಬ್ಬರೂ ಅಲ್ಲೇ ಕೊಳೆಯುತ್ತಿರಲಿ ಎಂದು ಆಶಾ‌ ಕೋಪದಿಂದ ಹೇಳಿದಾಗ
ಬೇಡಾ ಮಗಳೇ ಇಬ್ಬರ ವಿರುದ್ಧವಾಗಿ ನಾವೇ ಕೋರ್ಟಿನಲ್ಲಿ ಸಾಕ್ಷಿ ಹೇಳಹೇಕಾಗುತ್ತದೆ. ಇನ್ನೊಂದು ಸಲ‌‌ ಅವನು ಫೋನ್ ಮಾಡಿದರೆ
ನನ್ನ ಮದುವೆ ಯೋಧನ ಜೊತೆ ಗೊತ್ತಾಗಿದೆ ಎಂದು ಹೇಳಿ ಹೇಗಾದರೂ ಮಾಡಿ ಅವನಿಂದ ನುಣುಚಿಕೊಳ್ಳಮ್ಮಾ, ಸ್ಟೇಷನ್ ಕೋರ್ಟ್‌ಎಂದು ಅಲೆಯುವುದು ಬೇಡವೆಂದು ಕೋದಂಡರಾಮ್ ಹೇಳಿದ ಮಾತಿಗೆ
ಸರೀ ಆಯ್ತಪ್ಪಾ ಇದೊಂದು ಸಲ ಹೇಳಿ ನೋಡುತ್ತೇನೆ ಎನ್ನುತ್ತಾ ತನ್ನ ರೂಮಿಗೆ ಹೋಗುತ್ತಾಳೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ

ತಾಳಿದವನು ಬಾಳಿಯಾನು ಎಂಬಂತೆ ಯಾವ ಕೆಲಸ ಮಾಡಲು ಹೋದರೂ ಅಕಸ್ಮಾತ್ ಅದಕ್ಕೆ ಅಡಚಣೆಗಳಾಗಿ ಮುಂದುವರೆಯಲು ಆಗದೆ ಇದ್ದ ಪಕ್ಷದಲ್ಲಿ, ಆತುರ ಪಡದೆ ಸ್ವಲ್ಪ ದಿನ ಕಾದು ಕೆಲಸವನ್ನು ಪೂರೈಸಬೇಕು. ಆ ಕೆಲಸ ಆಗುವುದಿಲ್ಲವೆಂದು ನಿರ್ಧರಿಸಿ, ಅದನ್ನು ಅರ್ಧಕ್ಕೆ ಬಿಟ್ಟರೆ ಸಮಯ ಹಣ ಎರಡೂ ವೇಸ್ಟ್ ಆಗುತ್ತದೆ., ಬೇರೆ‌ ಕೆಲಸವಾದರೂ ಆಗುತ್ತದೆಂಬ ಭಕವಸೆ ಇರುವುದಿಲ್ಲ.

ಹಾಗೆಯೇ ಬೇರೆಯವರು ತೊಂದರೆ ಕೊಡುತ್ತಿದ್ದರೆ ನಾವು ಅದನ್ನು ಸಹಿಸಿಕೊಂಡು ಕುಳಿತರೆ, ತೊಂದರೆ ಕೊಡುವವರು ಇನ್ನೂ ಜಾಸ್ತಿ ಮಾಡುತ್ತಾರೆ. ಅವರ ಜೊತೆ ಘರ್ಷಣೆಗೆ ಇಳಿಯದೆ ಸಾಧ್ಯವಾದ ಮಟ್ಟಿಗೂ ಉಪಾಯದಿಂದ ತಪ್ಪಿಸಿಕೊಳ್ಳಲು ಪ್ರಯತ್ವಿಸಬೇಕು.