ಅಭಿಲಾಷೆ ಕಾದಂಬರಿ ಸಂಚಿಕೆ -46
ಆತ್ಮೀಯ ಓದುಗರಿಗೆ ವಂದನೆಯನ್ನು ತಿಳಿಸುತ್ತಾ 🙏🙏
ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 46 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.
- ಹಿಂದಿನ ಸಂಚಿಕೆಯಲ್ಲಿ
ನನ್ನ ಮಗಳು ಮದುವೆಗೆ ಒಪ್ಪಿದ್ದಾಳೆಂದು ಕೋದಂಡರಾಂ ಆರ್ಮಿ ಹುಡುಗನ ತಂದೆಗೆ ಹೇಳಿದಾಗ
ನನ್ನ ಮಗನಿಗೆ ಅರ್ಜಂಟಾಗಿ ಬರಬೇಕೆಂದು ಆರ್ಮಿ ಹೆಡ್ ಕ್ವಾರ್ಟರ್ಸ್ ನಿಂದ ಕಾಲ್ ಬಂದಿದ್ದಕ್ಕೆ ಹೋಗಿದ್ದಾನೆಂದು ಹೇಳುತ್ತಾರೆ
- ಕಥೆಯನ್ನು ಮುಂದುವರೆಸುತ್ತಾ
ತಮ್ಮ ಮಗನಿಗೆ ಆರ್ಮಿ ಹೆಡ್ ಕ್ವಾರ್ಟರ್ಸ್ ನಿಂದ ತುರ್ತಾಗಿ ಬರುವಂತೆ ಕರೆ ಬಂದಿದ್ದಕ್ಕೆ ಹೊರಟು ಹೋದ ಎಂದು ಅವರಪ್ಪ ನುಡಿದಾಗ
ಸಾರ್ ಪುನಃ ಯಾವಾಗ ಬರುತ್ತಾರಂತೆ ಎಂದು ಕೋದಂಡರಾಮ್ ಪ್ರಶ್ನಿಸಲು
ಹೇಳುವುದಕ್ಕೆ ಆಗುವುದಿಲ್ಲ, ಯಾವ ಉದ್ದೇಶ್ಯಕ್ಕೆ ಕರೆಸಿಕೊಂಡಿದ್ದಾರೋ ಗೊತ್ತಿಲ್ಲ. ಅವನು ವಾಪಸ್ ಬರಬೇಕಾದರೆ ಒಂದು ವಾರದ ಮುಂಚೆ ತಿಳಿಸುತ್ತಾನೆಂದು ಅಭಿಜಿತ್ ತಂದೆ ನುಡಿಯಲು
ಸಾರ್ ನನ್ನ ಮಗಳು ಮದುವೆಗೆ ಒಪ್ಪಿರುವ ವಿಚಾರವನ್ನು ತಿಳಿಸಿದರೆ ಬೇಗ ಬರಬಹುದೆಂದು ಕೋದಂಡರಾಂ ಹೇಳಿದ ಮಾತಿಗೆ
ಸೈನ್ಯದಲ್ಲಿ ಆ ರೀತಿ ರಜೆಯನ್ನು ಕೊಡುವುದಿಲ್ಲವೆಂಬುದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆಂದು ಅಭಿಜಿತ್ ತಂದೆ ಹೇಳಲು
ಸಾರ್ ನಿಮ್ಮ ಮಗನಿಗೆ ವಿಷಯ ತಿಳಿಸಿದರೆ ರಜೆ ಪಡೆದು ಬರಲು ಅನುಕೂಲವಾಗುತ್ತದೆಂದು ಕೋದಂಡರಾಂ ಹೇಳಿದಾಗ
ಇಲ್ಲಿದ್ದಾಗ ಒಪ್ಪಿಕೊಂಡಿದ್ದ, ಹದಿನೈದು ದಿನಗಳಾದರೂ ನಿಮ್ಮ ಅಭಿಪ್ರಾಯವನ್ನು ಹೇಳದೇ ಇದ್ದಾಗ, ಅವರ ಅಹಂಕಾರ ಅವರ ಮನೆಯಲ್ಲಿಯೇ ಇರಲಿ, ಪುನಃ ಅವರ ಬಳಿ ಮದುವೆಯ ಬಗ್ಗೆ ವಿಚಾರಿಸಬೇಡವೆಂದು ಹೇಳಿದ್ದ ಈಗ ಯಾವ ರೀತಿ ಮನಸ್ಸು ಬದಲಿಸಿದ್ದಾನೋ ಗೊತ್ತಿಲ್ಲವೆಂದು ಅಭಿಜಿತ್ ತಂದೆ ಹೇಳುತ್ತಾರೆ
ಈ ವಿಚಾರ ತಿಳಿಸಿ ನೋಡಿ, ಅಕಸ್ಮಾತ್ ಒಪ್ಪಿದರೆ ಆಗಲಿ, ಇಲ್ಲದಿದ್ದರೆ ಋಣಾನುಬಂಧ ಇಲ್ಲವೆಂದು ಮುಂದಿನ ಪ್ರಯತ್ನ ಮಾಡುತ್ತೇನೆಂದು ಕೋದಂಡರಾಂ ಮಾತಿಗೆ
ಸಾರ್ ಯಾವುದಕ್ಕೂ ಒಂದು ವಾರ ಟೈಮ್ ಕೊಡಿ, ನಾನು ಫೋನ್ ಮಾಡಿದಾಗ ಅವನು ಫೋನ್ ರಿಸೀವ್ ಮಾಡಿದರೆ ಉತ್ತರ ಬೇಗ ತಿಳಿಸುತ್ತೇನೆ. ಅಕಸ್ಮಾತ್ ಅವನಿರುವ ಕಡೆ ನೆಟ್ ವರ್ಕ್ ಇಲ್ಲದೇ ಹೋದರೆ, ಆರ್ಮಿ ಹೆಡ್ ಕ್ವಾರ್ಟರ್ಸ್ ಗೆಫೋನ್ ಮಾಡಿ ನನ್ನ ಮಗನಿಗೆ ವಿಷಯ ತಿಳಿಸುವಂತೆ ಹೇಳಿ ಉತ್ತರ ಪಡೆದು ತಿಳಿಸಲು ತಡವಾಗಬಹುದೆಂದು ಅಭಿಜಿತ್ ತಂದೆ ಹೇಳಲು
ಆದಷ್ಟೂ ಬೇಗ ತಿಳಿಸಿರೆಂದು ಹೇಳಿ ಕೋದಂಡರಾಂ ರವರು ಪೋನ್ ಆಫ್ ಮಾಡಿ ಬೇಸರದಿಂದ ಮೊಬೈಲನ್ನು ನಿಧಾನವಾಗಿ ಟೀಪಾಯಿ ಮೇಲಿಟ್ಚಾಗ,
ಯಾಕ್ರೀ ಏನಾಯ್ತೂ ರೀ? ಯಾಕೋ ಬೇಜಾರ್ ಮಾಡಿಕೊಂಡಿರುವಂತಿದೆ? ಏನಾದರೂ ನೆಗೆಟಿವ್ ಆಗಿ ಆನ್ಸರ್ ಮಾಡಿದ್ರಾ ಎಂದು ಕೇಳಲು
ಹಾಗೇನಿಲ್ಲಾ, ಅವರ ಮಗನಿಗೆ ಆರ್ಮಿ ಹೆಡ್ ಕ್ವಾರ್ಟರ್ಸ್ ನಿಂದ ತಕ್ಷಣ ಬರಲು ಫೋನ್ ಬಂತೆಂದು ಹೋದರಂತೆ, ಪುನಃ ಎಷ್ಟು ದಿನಕ್ಕೆ ಬರುತ್ತಾರೋ ಗೊತ್ತಿಲ್ಲವೆಂದು ಹೇಳಿದರೆಂದು ಕೋದಂಡರಾಂ ನುಡಿಯಲು
ಹುಡುಗ ಒಪ್ರಿದ್ದಾರೆಂದು ಅವತ್ತೇ ಹೇಳಿದ್ದರಲ್ಲಾ, ಈಗ ಹುಡುಗಿ ಒಪ್ಪಿದ್ದಾಳೆಂದು ಅವರಿಗೆ ಫೋನ್ ಮಾಡಿ ತಿಳಿಸಿ, ನಾಳೆಯೇ ಮದುವೆ ಮಾಡುವುದಿಲ್ಲ, ಕಡೇಪಕ್ಷ. ಒಂದು ತಿಂಗಳಾದರೂ ಬೇಕು, ಮದುವೆಗೆ ದಿನಾಂಕ ಗೊತ್ತು ಪಡಿಸಿ ತಯಾರಿ ಮಾಡಿಕೊಳ್ಳುತ್ತಿದ್ದರೆ ಆ ವೇಳೆಗೆ ಬರಬಹುದಲ್ಲಾ ಎಂದು ಅವರ ಪತ್ನಿ ಹೇಳಿದ ಮಾತಿಗೆ
ನೀನು ಹೇಳುದಷ್ಚು ಸುಲಭವಲ್ಲಾ, ಆವಾಗ ಒಪ್ಪಿದ್ದರೂ ನಮ್ಮ ಅಭಿಪ್ರಾಯ ಬೇಗ ತಿಳಿಸಲಿಲ್ಲವೆಂದು ಮನಸ್ಸು ಬದಲಿಸಿದ್ರೆ ಏನು ಮಾಡೋದು ಎಂದು ಕೋದಂಡರಾಂ ಪ್ರಶ್ನಿಸಿದಾಗ
ಇಷ್ಟು ಬೇಗ ಮನಸ್ಸು ಬದಲಿಸಿಲ್ಲ ಎನಿಸುತ್ತದೆ ಎಂದು ಅವರ ಪತ್ನಿಯ ಮಾತಿಗೆ
ಅವರ ತಂದೆ ನಮ್ಮ ಅಭಿಪ್ರಾಯ ತಿಳಿಸುತ್ತಾರಂತೆ, ಆ ಹುಡುಗ ಏನಾದರೂ ಗ್ರೀನ್ ಸಿಗ್ನಲ್ ತೋರಿಸಿದರೆ ಓ ಕೆ ಮದುವೆಯನ್ನು ಬೇಗ ಮಾಡಿ ಮುಗಿಸಬಹುದು, ಇಲ್ಲದಿದ್ದರೆ, ಬೇರೆ ಹುಡುಗನನ್ನು ನೋಡಬೇಕಷ್ಚೇ ಎಂದು ವಿಷಾದದಿಂದ ಕೋದಂಡರಾಂ ನುಡಿದಾಗ
ನಮ್ಮ ಮಗಳಿಗೆ ಋಣಾನುಬಂಧ ಎಲ್ಲಿದೆಯೋ ಅಲ್ಲಿ ಅವರ ಜೊತೆ ಮದುವೆಯಾಗುತ್ತದೆಂದು ಅವರ ಪತ್ನಿ ತಮಗೇ ಸಮಾಧಾನ ಮಾಡಿಕೊಂಡು ಊಟ ಮಾಡಲು ಹೋಗುತ್ತಾರೆ.
ಒಂದು ವಾರವಾದರೂ ಅಭಿಜಿತ್ ತಂದೆಯಿಂದ ಯಾವುದೇ ಸಮಾಚಾರ ಬರದೇ ಇದ್ದುದ್ದರಿಂದ, ಕೋದಂಡರಾಂ ರವರು ಸ್ವಾಭಾವಿಕವಾಗಿ ಬೇಸರಗೊಂಡು ಪುನಃ ಫೋನ್ ಮಾಡಿದಾಗ
ಕ್ಷಮಿಸಿ ಮಾಸ್ಟ್ರೇ, ನಾನು ನಿಮ್ಮ ಅಭಿಪ್ರಾಯವನ್ನು ಅಭಿಜಿತ್ ಗೆ ಹೇಳಲು ಫೋನ್ ಮಾಡಿದಾಗ, ಅವನ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು, ಆರ್ಮಿ ಹೆಡ್ ಕ್ವಾರ್ಟರ್ಸ್ ಗೆ ಫೋನ್ ಮಾಡಿ ನನ್ನ ಮಗನಿಂದ ಫೋನ್ ಮಾಡಿಸಬೇಕೆಂದು ಕೇಳಿದಾಗ
ನನ್ನ ಮಗನು ದೇಶದ ಗಡಿ ಭಾಗದಲ್ಲಿ ಇದ್ದಾನೆಂದು ಹೇಳಿದ್ದಾರೆ, ಅಲ್ಲಿಗೆ ಯಾವುದೇ ಫೋನ್ ನೆಟ್ ವರ್ಕ್ ಇಲ್ಲವಂತೆ, ಸುಮಾರು ಅಡಿಗಳ ಮೇಲಿವ ಹಿಮರಾಶಿಯ ನಡುವೆ ಕುಳಿತು ವೈರಿಗಳು ದೇಶದೊಳಗೆ ನುಸುಳುವುದನ್ನು ತಡೆಯಲು ಗಡಿ ಕಾಯುತ್ತಿದ್ದಾನಂತೆ ಎಂದು ಹೇಳುತ್ತಾರೆ.
ಸಾರ್ ಇನ್ನೂ ಎಷ್ಚು ದಿನಗಳಾಗಬಹುದೆಂದು ಕೋದಂಡರಾಂ ಪ್ರಶ್ನಿಸಿದಾಗ
ವೈರಿಗಳನ್ನು ಸದೆಬಡಿಯುವ ಕಾರ್ಯ ಯಾವಾಗ ಮುಗಿಯುತ್ತದೋ ಯಾರಿಗೆ ಗೊತ್ತು ಮಾಸ್ಟ್ರೇ? ಆ ಕಾರ್ಯ ಮುಗಿದ ನಂತರ ಹೆಡ್ ಕ್ವಾರ್ಟರ್ಸ್ ಗೆ ಮರಳಿದಾಗ ವಿಷಯ ತಿಳಿದು ಫೋನ್ ಮಾಡುತ್ತಾನೆ ಅಲ್ಲಿಯವರೆಗೂ ಕಾಯಲೇ ಬೇಕೆಂದು ಅಭಿಜಿತ್ ತಂದೆಯ ಮಾತಿಗೆ,
ನಮ್ಮ ಮಗಳ ಮದುವೆ ಎರಡು ದಿನ ಲೇಟಾದರೂ ಚಿಂತೆಯಿಲ್ಲ ಸಾರ್ ಆದರೆ ವೈರಿಗಳು ದೇಶದ ಒಳಗೆ ನುಗ್ಗದಂತೆ ಮಾಡುವಲ್ಲಿ ನಿಮ್ಮ ಮಗನ ಟ್ರೂಪ್ಸ್ ಸಕ್ಸಸ್ ಆದರೆ ಸಾಕೆಂದು ಕೋದಂಡರಾಂ ಹೇಳಿದಾಗ
ಇದಪ್ಪಾ ಮಾಸ್ಟರ್ ರವರ ಮಾತೂ ಎಂದರೆ ಎಂದು ಅಭಿಜಿತ್ ತಂದೆಯ ಮಾತಿಗೆ
ಏಕೆ ಸಾರ್ ನನ್ನ ಮಾತಿನಲ್ಲಿ ಅಂತಹದೇನು ಕಂಡು ಹಿಡಿದ್ರೀ ? ಎಂದು ಕೋದಂಡರಾಂ ಪ್ರಶ್ನಿಸಲು
ನಿಮ್ಮ ಮಾತೇ ಎಲ್ಲರಿಗೂ ಸ್ಪೂರ್ತಿ ಇದ್ದಂತಿದೆ, ಬೇರೆ ಯಾರಾದರೂ ಆಗಿದ್ದರೆ, ನಿಮ್ಮ ಮಗ ಯಾವಾಗ ಬೇಕಾದರೂ ಬರಲಿ, ನಮ್ಮ ಮಗಳಿಗೆ ಬೇರೆ ಹುಡುಗನನ್ನು ಹುಡುಕಿ ಮದುವೆ ಮಾಡಿಸುತ್ತೇನೆಂದು ಹೇಳುತ್ತಿದ್ದರು, ಆದರೆ ದೇಶದ ಕಾಳಜಿಯೇ ಮುಖ್ಯವೆಂದು ಹೇಳಿದ್ರಲ್ಲಾ, ನಿಮ್ಮ ಮಾತು ಮೆಚ್ಚಬೇಕಾದ್ದೇ ಮಾಸ್ಟ್ರೇ, ನೀವು ಮಾಸ್ಟರ್ ಆಗಿರುವುದಕ್ಕೂ ಸಾರ್ಥಕವಾಯ್ತೆಂದು ಅಭಿಜಿತ್ ತಂದೆ ಹೇಳುತ್ತಾರೆ.
ಜಾಸ್ತಿ ಹೊಗಳಿಕೆ ಬೇಡಾ ಸಾರ್, ನನ್ನ ಮಾತಲ್ಲೇನೂ ವಿಶೇಷತೆ ಇಲ್ಲಾ, ದೇಶದ ಪ್ರಜೆಯಾದವನು ದೇಶದ ಹಿತ ಬಯಸದೆ ಇದ್ದರೆ ಹೇಗೆ ಸ್ನಾಮೀ? ಎಂದು ಕೋದಂಡರಾಂ ಪ್ರಶ್ನಿಸಲು
ನಿಮ್ಮ ಮಾತು ನಿಜ ಮೇಷ್ಟ್ರೇ, ನಮ್ಮ ದೇಶದಲ್ಲಿ ಹುಟ್ಟಿ ಬೆಳೆದು ಪ್ರತಿಯೊಂದು ಸವಲತ್ತುಗಳನ್ನು ಅನುಭವಿಸಿ, ದೇಶಾಭಿಮಾನವನ್ನು ಹೊಂದದಿದ್ದರೆ ಹೇಗೆ? ಇದು ಎಲ್ಲರ ಕರ್ತವ್ಯವೂ ಆಗಿದೆ ಅಲ್ಲವೇ ಎಂದು ಅಭಿಜಿತ್ ತಂದೆ ಹೇಳಿದ್ದಕ್ಕೆ
ಕರ್ತವ್ಯವಲ್ಲಾ ಸಾರ್ ದೇಶಾಭಿಮಾನ, ಪರಸ್ಪರ ಒಗ್ಗಟ್ಟು ಹೃದಯಾಂತರಾಳದಿಂದ ಬರಬೇಕೆಂಬ ಕೋದಂಡರಾಂ ಮಾತಿಗೆ
ಹೌದು ಮೇಷ್ಟ್ರೇ ಎಲ್ಲರಲ್ಲೂ ಒಗ್ಗಟ್ಟು ಇರಲೇಬೇಕು, ಈ ಒಗ್ಗಟ್ಟು ನಮ್ಮಲ್ಲಿ ಮೊದಲಿನಿಂದಲೂ ಇದ್ದಿದ್ದರೆ, ನಾವು ಸಾವಿರಾರು ವರ್ಷಗಳು ಪರಕೀಯರ ಗುಲಾಮರಾಗಬೇಕಿರಲಿಲ್ಲ, ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನ ಬಲಿದಾನ ಮಾಡುವ ಸನ್ನಿವೇಶವೇ ಬರುತ್ತಿರಲಿಲ್ಲವೆಂದು ಅಭಿಜಿತ್ ತಂದೆ ಹೇಳುತ್ತಾ, ನೋಡಿ ನಿಮ್ಮ ಜೊತೆ ಮಾತನಾಡುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ, ಇನ್ನೂ ಮಾತಾಡಲೇ ಬೇಕೆನುಸುತ್ತದೆ ಮೇಷ್ಟ್ರೇ ಎಂದಾಗ
ಬೀಗರಾದ ಮೇಲೆ ನಮಗೆ ಇನ್ನೇನು ಕೆಲಸ ಯಾವಾಗಲೂ ಮಾತನಾಡುತ್ತಿರಬಹುದೆಂದು ಕೋದಂಡರಾಂ ಮಾತಿಗೆ
ಆ ದಿನ ಬೇಗ ಬರಲೆಂದು ಆಶಿಸುತ್ತೇನೆಂದು ಅಭಿಜಿತ್ ತಂದೆ ಹೇಳಿದ ನಂತರ
ಆಗಲಿ ನೋಡೋಣವೆಂದು ಕೋದಂಡರಾಂ ರವರು ಫೋನ್ ಆಫ್ ಮಾಡುತ್ತಾರೆ.
ಆ ವೇಳೆಗೆ ಅವರ ಪತ್ನಿ ಬಂದು ಇಷ್ಟೊತ್ತು ಯಾರ ಜೊತೆಯಲ್ಲಿ ಮಾತನಾಡುತ್ತಿದ್ರೀ ಎಂದು ಕೇಳಲು
ಆರ್ಮಿ ಹುಡುಗನ ತಂದೆಗೆ ಫೋನ್ ಮಾಡಿದ್ದೆ ಎಂದು ಹೇಳಿದ ಕೋದಂಡರಾಂ ಮಾತಿಗೆ
ಮಗನು ಅಭಿಪ್ರಾಯ ಹೇಳಿದ್ರಂತಾ? ಅವರು ಯಾನಾಗ ಬರುತ್ತಾರಂತೆ ಎಂದು ಅವರ ಪತ್ನಿ ಕೇಳಿದಾಗ
ಅಭಿಜಿತ್ ತಂದೆ ಹೇಳಿದ್ದನ್ನು ಕೋದಂಡರಾಂ ರವರು ವಿವರವಾಗಿ ಅವರ ಪತ್ನಿಗೆ ತಿಳಿಸಲು
ಬೇರೆ ಹುಡುಗನನ್ನು ನೋಡಿ ಬೇಗ ಮದುವೆ ಮಾಡಬಾರದಾ ಎಂದು ಅವರ ಪತ್ನಿ ಹೇಳಿದ್ದಕ್ಕೆ
ಇನ್ನೂ ಸ್ವಲ್ಪ ದಿನ ಕಾಯುವುದರಲ್ಲಿ ತಪ್ಪೇನಿದೆ? ಎನ್ನುತ್ತಾ ತಮ್ಮ ರೂಮಿಗೆ ಹೋಗುತ್ತಾರೆ.
ಮುಂದುವರೆಯುತ್ತದೆ
- ಈ ಸಂಚಿಕೆಯಲ್ಲಿ ತಿಳಿದು ಬರುವ ಮುಖ್ಯವಾದ ಅಂಶವೇನೆಂದರೆ
ಯಾರಿಗಾದರೂ ಅಭಿಪ್ರಾಯ ಹೇಳುವುದಿದ್ದರೆ, ಆದಷ್ಟೂ ಬೇಗ ತಿಳಿಸುವುದು ಉತ್ತಮ, ಹೌದು ಅಥವಾ ಇಲ್ಲವೆಂದು ಸತಾಯಿಸದೆ ಹೇಳಿಬಿಟ್ಟರೆ, ಅಭಿಪ್ರಾಯಕ್ಕಾಗಿ ಕಾಯುತ್ತಿರುವವರು ತವಕಿಸುವುದು ತಪ್ಪಿ ಅವರು ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಅವರೇ ಫೋನ್ ಮಾಡಲೀ ನಾವ್ಯಾಕೆ ಫೋನ್ ಮಾಡಬೇಕೆಂದು ಹೇಳಿದರೆ ಅದು ದುರಹಂಕಾರದ ಪರಮಾವಧಿಯಾಗುತ್ತದೆ.