ಮಹಾರಾಷ್ಟ್ರ Education Today.Co.ಇವರ ವತಿಯಿಂದ ಪ್ರಶಸ್ತಿ ಪ್ರಧಾನ ಸಮಾರಂಭ

ಮುಂಬೈ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಡೈನಾಮಿಕ್ ಸ್ಕೂಲ್ ಅವಾರ್ಡ್

ಮುಂಬಯಿ : ಎಜ್ಯುಕೇಶನ್ ಟುಡೆ.ಕಂ ಇವರ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 04 ಅಕ್ಟೋಬರ್ 2024:ರಂದು ಸಾಯಂಕಾಲ 5 ಗಂಟೆಗೆ ಅಂಧೇರಿ ಪೂರ್ವದ ಸಹಾರಾ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿರುವ 5 ಸ್ಟಾರ್ ಲಲಿತ್ ಹೋಟೇಲಿನಲ್ಲಿ ಅದ್ದೂರಿಯಾಗಿ ನಡೆಯಿತು. ಮಹಾರಾಷ್ಟ್ರ ಎಜ್ಯುಕೇಶನ್ ಟುಡೆ.ಕಂ ಇವರು ಶೈಕ್ಷಣಿಕ ವರ್ಷ2023-2024ರಲ್ಲಿ ಉತ್ತಮವಾಗಿ ಮೂಡಿ ಬಂದ ಶಾಲೆಗಳನ್ನು ಸಮೀಕ್ಷೆ ಮಾಡಿ ರಾಷ್ಟ್ರ ಮಟ್ಟದ ಉನ್ನತ ಪ್ರತಿಷ್ಟಿತ ಶಾಲೆಗಳು, ಅತ್ಯುತ್ತಮ ಶಾಲೆಗಳು, ಮತ್ತು ಕ್ರಿಯಾಶೀಲ ಹೊಂದಿದ ಶಾಲೆಗಳಿಗೆ ವಿವಿಧ ರೀತಿಯಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮುಂಬಯಿಯ ತುಳು ಕನ್ನಡಿಗರ ಪ್ರತಿಷ್ಠಿತ ಬಿಲ್ಲವರ ಅಸೋಷಿಯೇಶನ್ ಇದು ಒಂದು.

ಈ ಅಸೋಸಿಯೇಶನ್ ಇದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಶಿಕ್ಷಣದಿಂದ ವಂಚಿತರಾಗಿರುವ ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ದ್ಯೇಯ ಉದ್ದೇಶದಿಂದ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆ ಸ್ಥಾಪಿಸುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ನೀಡುವ ವರದಾನವಾಗಿದೆ.ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ.ಹಲವಾರು ವರ್ಷ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನೂರು ಫಲಿತಾಂಶ ಪಡೆದ ಹಿರಿಮೆ ಈ ಶಾಲೆಗಿದೆ.ಆದ್ದರಿಂದ ಸಂಪೂರ್ಣವಾಗಿ ಮಾಹಿತಿ ಪಡೆದ ಮಹಾರಾಷ್ಟ್ರ ಎಜ್ಯುಕೇಶನ್.ಕಂ ಇವರು ಕ್ರಿಯಾಶೀಲ ಹೊಂದಿದ ಶಾಲೆಯೆಂದು ಪರಿಗಣಿಸಿ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ
ಡೈನಾಮಿಕ್ ಸ್ಕೂಲ್ ಅವಾರ್ಡ್ ಇದನ್ನು ಶಾಲಾ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ ಅವರಿಗೆ ಪ್ರದಾನ ಮಾಡಿ ಗೌರವಿಸಿದರು.ಈ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಶಿಕ್ಷಣ ಸಮಿತಿಯ ಮಾರ್ಗದರ್ಶಕರು ಮತ್ತು ಸಲಹೆಗಾರ ಬನ್ನಂಜೆ ರವೀಂದ್ರ ಅಮೀನ್. ಮತ್ತು ಶಿಕ್ಷಕ ಶ್ರೀ ಸಿದ್ಧರಾಮ ದಸಮಾನೆ ಅವರು ವೇದಿಕೆಯಲ್ಲಿದ್ದರು.

ಕಳೆದ ವರ್ಷ 2023-2024 ರ ಶೈಕ್ಷಣಿಕ ಈ ಶಾಲೆಗೆ ವಿಶೇಷ ಜ್ಯೂರಿ ಪ್ರಶಸ್ತಿ ಸಿಕ್ಕಿತ್ತು. ಪುನಃ ಈ ವರ್ಷದಲ್ಲಿಯೂ ಕ್ರಿಯಾತ್ಮಕವಾದಂತಹ ನಮ್ಮ
ಶಾಲೆಯನ್ನು ಪರಿಗಣಿಸಿ ಎಜ್ಯುಕೇಶನ್ ಟುಡೇ. ಕಾಮ. ವತಿಯಿಂದ ಅತ್ಯುತ್ತಮ ಪ್ರಶಸ್ತಿ ಸಿಕ್ಕಿರುವುದು ನಮ್ಮ ಸಂಸ್ಥೆಗೆ ಕೀರ್ತಿ ತಂದಿದೆ. ಎಂದು ಬಿಲ್ಲವರ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಶ್ರೀ ಹರೀಶ್ ಜಿ. ಅಮೀನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಜಯ ವಿ. ಪೂಜಾರಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸಲಹೆಗಾರ ಶ್ರೀ ಬನ್ನಂಜೆ ರವೀಂದ್ರ ಅಮೀನ್ ಅವರು ಶಾಲೆಯ ಪ್ರಗತಿಗಾಗಿ ಶ್ರಮಿಸಿದ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ್ ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದಿಸಿ ಸಲ್ಲಿಸಿ ಗೌರವಿಸಿದ್ದಾರೆ. ಎಂದು ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಹರೀಶ್ ಜಿ. ಸಾಲಿಯಾನ್ ಅವರು ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.