ಕಾತ್ಯಾಯಿನಿ ದೇವಿ
ಜಗನ್ಮಾತೆ ದುರ್ಗೆಯ ಆರನೆ ರೂಪ ಕಾತ್ಯಾಯಿನಿ ದೇವಿ ಆಗಿದ್ದಾಳೆ. ಮಹರ್ಷಿ ಕಾತ್ಯಾಯನರು ಭಗವತಿಯ ಉಪಾಸನೆ ಮಾಡಿದೇವಿ ಪುತ್ರಿಯಾಗಿ ಜನಿಸಬೇಕೆಂದು ಇಚ್ಛಿಸಿದ್ದರು. ಅವರ ಪುತ್ರಿ ಯಾಗಿದ್ದಕ್ಕೆ ಕಾತ್ಯಾಯಿನಿ ಎಂದುಕರೆಯಲ್ಪಟ್ಟಳು. ಬ್ರಹ್ಮ ,ವಿಷ್ಣು, ಮಹೇಶ್ವರರು ತಮ್ಮ ತಮ್ಮ ತೇಜದ ಅಂಶವನ್ನು ಕಾತ್ಯಾಯಿನಿ ಗೆ ಕೊಟ್ಟರು.ಅದರಿಂದ ಮಹಿಷಾಸುರನ ವಧೆಯಾಯಿತು. ಇವಳ ಉಪಾಸನೆಯಿಂದ
ಸಾಧಕನ ಮನಸ್ಸು ಆಜ್ನಾಚಕ್ರದಲ್ಲಿ ಸ್ಥಿರವಾಗುತ್ತದೆ. ಯೋಗ ಸಾಧನೆಯಲ್ಲಿ ಆಜ್ನಾಚಕ್ರದ ಸ್ಥಾನ ಮಹತ್ವದ್ದಾಗಿದೆ. ಧರ್ಮ ಅರ್ಥ ಕಾಮ ಮೋಕ್ಷ ಪ್ರಾಪ್ತಿಯಾಗುತ್ತದೆ. ಅವನು ಅಲೌಕಿಕ ತೇಜ ಮತ್ತು ಪ್ರಭಾವಯುಕ್ತನಾಗುತ್ತಾನೆ. ತಾಯಿ ಕಾತ್ಯಾಯಿನಿಯು ಅಮೋಘ ಫಲದಾಯಿನಿ ಆಗಿದ್ದಾಳೆ. ಹಾಗಾದರೆ ಅವಳನ್ನು ಪ್ರಾರ್ಥಿಸುತ್ತಾ ಕವನ ವಾಚಿಸೋಣವೆ.
ಅಮೋಘ ಫಲದಾಯಿನಿ
- ಕಾತ್ಯಾಯಿನಿ ದೇವಿ
ಮಹರ್ಷಿ ಕಾತ್ಯಾಯನರ ಪುತ್ರಿ
ಸಂಕಲ್ಪಗಳನೀಡೇರಿಸುವ ಧಾತ್ರಿ
ಕರುಣೆಯ ಶ್ರೀಚರಣಗಳಿಗೆ ಪತ್ರಿ
ಏರಿಸುವೆನಮ್ಮ//
ರಕ್ತಬೀಜಾಸುರರಂಥ ಆತಂಕವಾದಿ
ಮೆರೆಯುತಿಹರಿಂದು ಜಗದಿ
ಉರಿಯುತಿಹರು ಅಟ್ಟಹಾಸದಿ
ಸಂಹರಿಸಲು ಬಾ ಅಮ್ಮ//
ಶುಂಭ ನಿಶ್ಶುಂಭರ ಹುಂಕಾರಕೆ
ನಿನ್ನ ಬಾಣಗಳ ಠೇಂಕಾರದುತ್ತರ
ಸಿಂಹಗರ್ಜನೆಯಿಂದ ಹತ್ಯೆಗೈದ
ಶ್ರೀ ಶಾಂಭವಿ ಅಮ್ಮ//
ಆಜ್ಞಾಚಕ್ರದಲಿ ಚಿತ್ತೈಕಾಗ್ರತೆಯಿಂದ
ಮೂರವಸ್ದೆ ವ್ಯಾಪಿಸುತ ಆನಂದದಿ
ಹಕ್ಕಿಯಂತೆ ಹಗುರಾಗಿಸುವ ತಾಯೆ
ಕಾತ್ಯಾಯನಿ ನನ್ನಮ್ಮ//
ಧರ್ಮಾರ್ಥ ಕಾಮ ಮೋಕ್ಷಗಳನು
ಕೊಡುವ ತಾಯೆ ಭಾರತಮಾತೆ
ದೇಶವನುದ್ಧರಿಸುವ ಭುವನೇಶ್ವರಿ
ಬೇಡುವೆ ಬಾ ನನ್ನಮ್ಮ//
ಸೌ. ಅನ್ನಪೂರ್ಣ ಸು. ಸಕ್ರೋಜಿ, ಪುಣೆ
ಶೈಲಪುತ್ರಿ
ಈ ಒಂಬತ್ತು ದಿನಗಳಲ್ಲಿ ಮಾತೃದೇವತೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ನಾರಿಶಕ್ತಿಯ ಕುರುಹಾಗಿದೆ. ನವರಾತ್ರಿಯ ಮೊದಲ ದಿನವನ್ನು ತಾಯಿ ಶೈಲಪುತ್ರಿಗೆ ಸಮರ್ಪಿಸಲಾಗುತ್ತದೆ. ಶೈಲಪುತ್ರಿ ದೇವಿಯ ಆರಾಧನೆಯು ನವರಾತ್ರಿಯ ಮೊದಲ ದಿನದಂದು ಮಾತ್ರವಲ್ಲ, ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಮುಖ್ಯವಾಗಿ ಮಾಡಬೇಕು. ಈಕೆಯ ಆರಾಧನೆಯು ನಮಗೆ ತಾಳ್ಮೆ, ಧೈರ್ಯ ಮತ್ತು ಶಾಂತಿಯ ಮಾರ್ಗವನ್ನು ತೋರಿಸುತ್ತಾಳೆ. ಆಕೆಯ ಅನುಗ್ರಹದಿಂದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಮತ್ತು ತೃಪ್ತಿಯನ್ನು ಪಡೆಯುತ್ತಾನೆ. ಶೈಲಪುತ್ರಿ ದೇವಿಯ ಹೆಸರು ಸ್ವತಃ ಶಕ್ತಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ.ಪ್ರಥಮ ದಿನದ ಉಪಾಸನೆಯಲ್ಲಿ ಸಾಧಕರು ತಮ್ಮ ಮನವನ್ನು
ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರು ಯೋಗ ಸಾಧನೆ ಪ್ರಾರಂಭವಾಗುತ್ತದೆ. ಹಾಗಾದರೆ ದೇವಿ ಶೈಲಿ ಪುತ್ರಿಗೆ ವಂದಿಸುತ್ತಾ
ಕವನ ಓದೋಣವೆ
- ಪ್ರಥಮ ಪೂಜಿತಳು
ಸುಂದರ ಶರನ್ನವರಾತ್ರಿಯ
ಪ್ರಥಮ ಪೂಜಿತಳು ಶಿವಸತಿ
ವೃಷಭಾರೂಢಳು ಶೈಲಪುತ್ರಿ
ಧರೆಗೆ ಬಂದಿಹಳು ದೇವಿ
ಪೂಜೆಗೊಳ್ಳಲು//
ಶ್ವೇತವಸ್ತೃಧಾರಿಣಿ ಮಾತೆ
ಜಾಜಿ ಮಲ್ಲಿಗೆ ಪುಷ್ಪ ಪ್ರಿಯೆ
ಶಾಂತಚಿತ್ತದ ಶಾಂತಿಪ್ರಿಯ
ಅಂಬೆ ಮಾ ಮುಗುಳ್ನಗುತ
ಬಂದಿಹಳು ಮನೆಗೆ//
ಉನ್ನತ ಅಧ್ಯಾತ್ಮ ಜಾಗೃತಿಗಾಗಿ
ಸಾಧಕರು ಸಾಧನೆಗೈವರು
ಮೌನ ಧ್ಯಾನದಿ ಅರಿವರು
ಮೂಲಾಧಾರಚಕ್ರದಿ
ನೆಲೆಗೊಳ್ಳುವರು//
ಹರಸಮ್ಮ ತಾಯೆ ನಮ್ಮನು
ಆಶೀರ್ವದಿಸು ರೈತರನು
ಉದ್ಧರಿಸು ದೇಶವನು
ಸುಖಸಮೃದ್ಧಿ ನೀಡಮ್ಮ
ನಮನ ನಿನಗಮ್ಮ//
– ಸೌ ಅನ್ನಪೂರ್ಣ ಸು ಸಕ್ರೋಜಿ ಪುಣೆ
ದೇವಿ ಬ್ರಹ್ಹಚಾರಿಣಿ
ಮಹಾನವಮಿಯ ಎರಡನೇ ದಿನವು ಬ್ರಹ್ಮಚಾರಿಣಿದೇವಿಯ ರೂಪವಾಗಿದೆ. ದೇವಿಯು ತನ್ನ ಸರಳ ರೂಪದಲ್ಲಿರುತ್ತಾಳೆ. ಸರಳವಾದ ಬಿಳಿ ಸೀರೆಯನ್ನು ಧರಿಸಿರುವ ಅವಳು ಒಂದು ಕೈಯಲ್ಲಿ ಕಮಂಡಲು
ಮತ್ತು ಇನ್ನೊಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿದ್ದಾಳೆ. ದೇವಿಯು ಪಾರ್ವತಿ ದೇವಿಯ ಅವಿವಾಹಿತ ರೂಪವಾಗಿದೆ. ಅವಳು ಧ್ಯಾನಸ್ಥ ಅಂಶವನ್ನು ಹೊಂದಿದ್ದಾಳೆ ಮತ್ತು ಅವಳ ಮುಖವು ಆನಂದ ಮತ್ತು ಶಾಂತ ಶಕ್ತಿಯನ್ನು ವ್ಯಕ್ತಪಡಿಸುತ್ತದೆ – ಅವಳು ಅನುಭವಿಸಿದ ತಪಸ್ಸಿನ ತೀವ್ರತೆಯ ಗುರುತು.
ದೇವಿಯು ತನ್ನ ಹೆಚ್ಚಿನ ಸಮಯವನ್ನು ಧ್ಯಾನದಲ್ಲಿ ಕಳೆಯುವುದರಿಂದ, ಈ ದಿನವು ಧ್ಯಾನಕ್ಕೆ ಉತ್ತಮವಾಗಿದೆ . ಉಪವಾಸ, ಮಂತ್ರಗಳನ್ನು ಪಠಿಸುವ ಮತ್ತು ಭಕ್ತಿಯಿಂದ ಧ್ಯಾನ ಮಾಡುವವರಿಗೆ ದೇವಿಯು ಪ್ರೀತಿ, ಯಶಸ್ಸು, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಅನುಗ್ರಹಿಸುತ್ತಾಳೆ. ದೇವಿಗೆ ದೃಢವಾದ ಭಕ್ತಿಯಿಂದ ಪ್ರಾರ್ಥನೆ ಮಾಡುವುದರಿಂದ ಮನುಷ್ಯರಲ್ಲಿ ತ್ಯಾಗ, ತಪಸ್ಸು, ವೈರಾಗ್ಯ,ಸದಾಚಾರ ಸಂಯಮಗಳ ವೃದ್ಧಿಯಾಗುತ್ತದೆ. ಇಂದು ಸಾಧಕನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿತವಾಗುತ್ತದೆ. ಇದರಿಂದ ದೇವಿ ಪ್ರಸನ್ನನಳಾಗುತ್ತಾಳೆ. ಹಾಗಾದರೆ ಬ್ರಹ್ಮಚಾರಿಣಿಯ ಕವನ ವಾಚಿಸೋಣವೆ.
- ಬ್ರಹ್ಮಚಾರಿಣಿ
ಬ್ರಹ್ಮಾನಂದದಲಿ ನಿರುತ
ಯೋಗಿನಿ ಬ್ರಹ್ಮಚಾರಿಣಿ
ಓಂಕಾರನಾದಗೈವ
ಓಂಕಾರಸ್ವರೂಪಿಣಿ//
ಜಪಮಾಲೆಯ ಕರದಲಿ
ಅಜಪಾಜಪವಗೈವ
ಸ್ವಾಧಿಷ್ಠಾನ ಚಕ್ರದಲಿ
ನಿಲುವ ಆತ್ಮಸ್ವರೂಪಿಣಿ//
ಪತಿ ಶಿವನಿಗಾಗಿ ತಪಸ್ಸು
ಮಾಡಿ ತಪ್ತಳಾಗಿ ಆಹಾರ
ತ್ಯಜಿಸಿ ಅಪರ್ಣಾಳಾದ
ನೀನು ಶಿವಸ್ವರೂಪಿಣಿ//
ಜೀವಜಲದ ಕಮಂಡಲು
ಪಿಡಿದು ನಿಂತಿಹ ತಾಯೆ
ಜೀವಿಗಳನುದ್ಧರಿಸುವ
ಕುಲೋದ್ಧಾರಿಣಿ//
ದ್ವಿತೀಯ ಮಲ್ಲಿಗೆ ಪುಷ್ಪ
ಅರ್ಪಿಸುವೆ ಅಮ್ಮಾ
ನಿನ್ನ ಕೃಪೆಯ ಕರುಣೆ
ತೋರಿಸು ನನ್ನಮ್ಮಾ//
ಸೌ ಅನ್ನಪೂರ್ಣ ಸು ಸಕ್ರೋಜಿ ಪುಣೆ
ಕೂಷ್ಮಾಂಡಾ ದೇವಿ
ನವರಾತ್ರಿ ಉತ್ಸವದ ನಾಲ್ಕನೇ ದಿನವು ಕೂಷ್ಮಾಂಡಾ ದೇವಿಯ ಆರಾಧನೆಗೆ ಸಂಬಂಧಿಸಿದ್ದು. ದುರ್ಗಾ ದೇವಿಯ ಒಂಬತ್ತು ಅವತಾರಗಳ ನಾಲ್ಕನೇ ರೂಪವನ್ನು ಈ ದಿನ ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಯ ಆರಾಧನೆಯು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ತಾಯಿ ಕೂಷ್ಮಾಂಡಾ ವಿಶ್ವವನ್ನು ಸೃಷ್ಟಿಸಿದಳು ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಅವರ ಪೂಜೆ ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ.
ಕೂಷ್ಮಾಂಡ ಎಂಬುದು ಸಂಸ್ಕೃತದ ‘ಕುಂಬಳಕಾಯಿ‘ ಎಂಬ ಪದವೂ ಆಗಿದೆ. ಇವಳ ಉಪಾಸನೆಯಿಂದ ಸಾಧಕನ ಮನಸ್ಸು ಅನಾಹತ ಚಕ್ರದಲ್ಲಿ ನಿಲ್ಲುತ್ತದೆ ತಾಯಿಯ.ಉಪಾಸನೆಯಿಂದ ಭಕ್ತರ ರೋಗ, ಶೋಕಗಳು ನಿವಾರಣೆಯಾಗುತ್ತವೆ. ತಾಯಿಗೆ ನಮಿಸುತ್ತ
ಕವನ ಓದೋಣವೆ.
- ಕೂಷ್ಮಾಂಡಾದೇವಿ
ಅಂಡಾಕಾರದಿ ಬ್ರಹ್ಮಾಂಡ
ಸೃಷ್ಟಿಸಿದ ಕೂಷ್ಮಾಂಡಾದೇವಿ
ಬಂಡಿ ತುಂಬ ಆಹಾರ ನೀಡಿದ
ನಿನಗೆ ಮಂಡೆಯೂರಿ ನಮನ//
ಅಧರದಲಿ ಮಧುರ ನಗೆಯ
ಅನಾಹತ ಚಕ್ರದಲಿ ಅರಸುತ
ಹೃದಯ ಕಮಲವರಳಿಸುತ
ನಿಂದ ತಾಯಿಗೆ ವಂದನೆ//
ರುಧಿರ ವಸ್ತ್ರ ಧರಿಸಿದ ಧೀರೆ
ವ್ಯಾಘ್ರಾರೂಢಳಾಗಿ ಶಸ್ತ್ರದಿಂದ
ಧೂಮ್ರಲೋಚನ ಅಸುರನ
ಸಂಹರಿಸಿದ ಅಂಬೆಗೆ ನಮನ//
ನಾನೆಂಬ ಅಹಂಕಾರ ಮಮಕಾರ
ಅರಿಷಡ್ವರ್ಗವಳಿಸುವ ಅಷ್ಟಭುಜ
ಶಕ್ತಿಯೆ ತುಷ್ಟಿ ಪುಷ್ಟಿ ನೀಡುವ
ಕಷ್ಟಹಾರಿಣಿ ಮಾತೆಗೆ ವಂದನೆ//
ನವರಾತ್ರಿಯ ನವೋತ್ಸಾಹದ
ನಾಲ್ಕನೆ ದಿನ ಜಯಘೋಷ
ಮಾಡುತ ಕೆಂಪು ದಾಸವಾಳ
ಪುಷ್ಪವರ್ಪಿಸುವೆ ಸ್ವೀಕರಿಸಮ್ಮ//
ಸೌ ಅನ್ನಪೂರ್ಣ ಸು ಸಕ್ರೋಜಿ ಪುಣೆ
https://youtu.be/CBgDeBbDXuI?si=MGCKG45-JXrBHeE_
*********************
✍️ B Udaneshwara Prasad Mooladka
***********
Singing & Composed
Smt, Sumangal Suresh Bengalore
**********************************
★ ಶ್ರೀ ಕಾತ್ಯಾಯನಿ ಮಾತೆ
******************
ಕೊರಕೋಡು ಕ್ಷೇತ್ರನೀಲಯೆ
ಶ್ರೀ ದುರ್ಗಾಪರಮೇಶ್ವರಿ
ಕರುಣೆಯಲಿ ಸಲಹಮ್ಮ ಹೇ
ಕಾತ್ಯಾಯನೀ ದೇವಿಯೆ ll
ನವರಾತ್ರಿಯ ವಿಶೇಷ ಪೂಜೆಯು
ಭಕ್ತಿಭಾವದ ಭಜನೆಯ ಮಾಡುವ
ಶಕ್ತಿಯ ನೀಡೆಮಗೆ ಲಲಿತಾoಬಿಕೆ
ಆರ್ಯಕಾತ್ಯಾಯನಿ ಜಗದಂಬಿಕೆ ll
ನಿತ್ಯಾನ್ನ ಪೂರ್ಣೇಯು ಸರ್ವಮಂಗಳೆ
ಭಕ್ತಿಯ ಪಥವನು ತೋರಿಸು ಮಂಗಳೆ
ಭಕ್ತರ ಇಷ್ಟವ ಕರುಣಿಸು ಶಂಕರಿಯೆ
ನಿನ್ನನು ಕಾಣುವ ಭಾಗ್ಯವ ಕರುಣಿಸು ll
ನವರಾತ್ರಿಯ ಆರನೇ ದಿನವಿದು
ಪೂಜೆ ಪುಷ್ಪಾರ್ಚನೆ ಅಲಂಕಾರವು
ಶಂಭು ಪ್ರಿಯೆ ಶಂಕರಿ ಲೋಕಪಾಲಿನಿ
ಜಗದೊಡತಿಯೆ ಶ್ರೀ ದುರ್ಗಾಪರಮೇಶ್ವರಿ ll
ರಚನೆ , ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
◆ ಸ್ಕಂದ ಮಾತಾ
***********
ಕೈಲಾಸವಾಸಿನಿ ಸ್ಕಂದ ಮಾತಾ
ಲೋಕದಾತೆಯೆ ದೇವಿ ಮಾತಾ
ಐದನೆ ದಿನದ ಪೂಜೆಯ ಪಡೆಯುವೆ
ನವರಾತ್ರಿಯ ದಿನದಲಿ ವಿಶೇಷವೆ ll
ನವಶಕ್ತಿ ವೈಭವ ನವಶಕ್ತಿ ರೂಪಿಣಿ
ಭಕುತಿಗೆ ಒಲಿಯುವ ಸಿಂಹವಾಹಿನಿ
ಸಾಸಿರ ನಾಮದ ಅರ್ಚನೆ ಮಾಡುವೆ
ಪಾವನ ರೂಪಿಣಿ ನಿನ್ನನು ಬೇಡುವೆ ll
ಪಾದಕೆ ಮಣಿಯುವೆ ಭಕ್ತಿಭಾವದಲಿ
ಸಾರ್ಥಕವಾಗಿಸು ನಿನ್ನಯ ಕರುಣೆಯಲಿ
ಎನ್ನಯ ಬದುಕಿನ ಬವಣೆಯ ಕಳೆದು
ಸಂತಸಗೊಳಿಸುವ ಶಕ್ತಿಯು ನಿನ್ನದು ll
ಭಕ್ತಿಯ ಪೂಜೆಯು ಪುಷ್ಪಾರ್ಚನೆಯು
ಶಕ್ತಿಯ ನೀಡುತ ಮಂಗಳ ಕರುಣಿಸು
ದೀಪವ ಉರಿಸಿ ಆರತಿ ಬೆಳಗುವೆ
ದೇವಿಯ ನಿತ್ಯವು ಸ್ಮರಣೆಯ ಮಾಡುವೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
1. https://youtu.be/V32ZgFhABDo?si=ndmVWauWU3Y8Fzpw
2. https://youtu.be/KsTybLO4zX0?si=DewQOShndYgFyrIL
3. https://youtu.be/TWQyjHFmxnY?si=87rjQKeGSVevxjr5
4. https://youtu.be/U2pDUcd5v90?si=LjR60WsVZ48xvKNe
5. https://youtu.be/uxbLKFGlya8?si=oCRGvVMdAQIU7kI_
6. https://youtu.be/AQ0lvB9pl1c?si=267nKiz9c5oxa9bY
7. https://youtu.be/GSIP4SVMVAU?si=mGAdT04T6XvTZFVE
8. https://youtu.be/fttr4nMoVpg?si=smWTC0c7VKah7igs
9. https://youtu.be/SW_5BMiXNTQ?si=BACLmERUBGkI7LWY
10. https://youtu.be/182_frByPH4?si=KuAbQf8iaXywsoWE
11. https://youtu.be/KObsuFUpvb8?si=1ogP3Oquu28b-77o
12. https://youtu.be/PmzYKgVCqvk?si=2YwqJ6bK8M5Ap2y5
13. https://youtu.be/gPINrhoSbP0?si=SCDyXY2ctxj_b-wT
14. https://youtu.be/Rkc9tlKjst4?
15. https://youtu.be/4MsZM1HKImA?si=A66YcL101bBJl5ke
● ಚಂದ್ರಘಂಟಾ ದೇವಿ
****************
ಚಂದಿರ ವದನೆ ಚಂದದಿ ಪಾಲಿಸು
ಚಂದದ ಮುಖವನು ನೀ ತೋರು
ಚಂದ್ರಘoಟಾ ದೇವಿಯೆ ನಮಿಸುವೆ
ಭಕ್ತಿಯಲೆಂದು ಪ್ರಾರ್ಥನೆಯು ll
ಜಗವನು ಪೊರೆದು ಭಕ್ತರ ಪಾಲಿಸಿ
ಹರುಷವ ಕೊಡುವಳು ತಾಯಿಯು
ನವಶಕ್ತಿ ರೂಪದಿ ಕಾಣುವ ದೇವಿಗೆ
ಪೊಡಮಡುವೆನು ನಾ ಪಾದಕೆ ll
ತ್ರಿಶೂಲ ಧಾರಿಣಿ ಶ್ರೀಚಕ್ರವಾಸಿನಿ
ಸಿಂಹವಾಹಿನಿ ಸುರಜನ ಜನನಿ
ಮೋಕ್ಷಪ್ರದಾಯಿನಿ ಅಭಯದಾಯಿನಿ
ಸುಂದರ ಶೀಲೆ ಪರಮ ಪಾವನಿ ll
ಅಂಬಿಕೆ ಚಂಡಿಕೆ ದುರ್ಗೆಯೆ ಶಂಕರಿ
ಮೋದದಿ ಸಲಹಲು ಬಾರಮ್ಮ
ನಿತ್ಯವು ಬೇಡುವೆ ನಿನ್ನನು ಭಕ್ತಿಲಿ
ತೋಷವ ನೀಡುತ ಪೊರೆಯಮ್ಮ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
◆ ದೇವಿ ಬ್ರಹ್ಮಚಾರಿಣಿ
****************
ಲೋಕ ಮಾತೆ ದೇವಿ ಜನನಿ
ತೋರಿಸಮ್ಮ ಒಲವನು
ತುಂಬು ಮನದಿ ನಿನ್ನ ಭಜಿಸಿ
ಬೇಡಿಕೊಂಬೆ ವರವನು ll
ಪಾಲಿಸಮ್ಮ ಬಂದು ನೀನು
ಶ್ವೇತವಸ್ತ್ರ ಧಾರಿಣಿ
ಲಾಲಿಸಮ್ಮ ನಿರತ ನೀನು
ಮಾತೆ ಬ್ರಹ್ಮಚಾರಿಣಿ ll
ಕರುಣೆ ತೋರು ಒಲವಿನಲ್ಲಿ
ಹರನ ಒಲವ ಶುಭದಿನ
ಪೂಜೆ ತಪವ ಮಾಡಲಂದ
ಹರುಷದಿಂದ ಅನುದಿನ ll
ದುರಿತ ಕಳೆದು ಪೊರೆಯೆ ದುರ್ಗೆ
ಕರವ ಮುಗಿದು ಬೇಡುವೆ
ಒಲಿದು ಬಂದು ಹರಸು ನೀನು
ದಿನವು ನಾಮ ಪಾಡುವೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
¶ಶಾರದಾ ಮಾತೆ,ವಿದ್ಯಾಮಾತೆ
**********************
ವಿದ್ಯಾ ಬುದ್ಧಿಯ ಕರುಣಿಸು ಮಾತೆ
ವಿದ್ಯಾದಾಯಿನಿ ಶಾರದೆ
ನಿತ್ಯವು ನಿನ್ನನು ಭಜಿಸುವೆ ತಾಯೆ
ಅಭಯವ ನೀಡುತ ನೀ ಪೊರೆಯೇ ll
ಹಂಸವಾಹಿನಿ ಬ್ರಹ್ಮನ ರಾಣಿ
ನಾರದ ಜನನಿ ಶ್ರೀವಾಣಿ
ಕೋಮಲ ವದನೆ ಸುಗುಣೆ ಶೀಲೆ
ಶ್ವೇತವಸ್ತಧಾರಿಣಿ ವೀಣಾಪಾಣಿಯೆ ll
ಸಂಗೀತ ಸಾಹಿತ್ಯ ರಾಗರಂಜಿನಿ
ಸಾಮಗಾನವಿಶಾರದೆ ಮಾತೆ
ತುoಗಾ ತೀರನಿವಾಸಿನಿ ಭಾರತಿ
ವರವನು ನೀಡುವ ವರದಾಯಿನಿ ll
ಸಿದ್ಧಿಯ ಕರುಣಿಸು ಜ್ಞಾನದಾತೆ
ಭಕ್ತಿಯಲಿ ಬೇಡುವೆನು
ಕಂಗಳ ತೆರೆದು ಎನ್ನನು ನೋಡು
ನಿನ್ನನೆ ನೋಡುತ ನಿಂದಿಹೆನು ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
https://youtu.be/C2C0_r1pkO4?si=URG1F5_uGvVOztbe
*********************
¶ ಮಂಗಳ ರೂಪಿಣಿ
**************
ಮಂಗಳ ರೂಪಿಣಿ ಶಂಕರಿಯೆ
ಕಂಗಳ ತೆರೆಯೇ ಅಂಬಿಕೆಯೆ
ವಂದಿಪೆ ಪಾದಕೆ ಭಗವತಿಯೆ ll
ಜಗವನು ಪೊರೆಯುವ ತಾಯೇ
ಮಗನನು ಕರುಣದಿ ಕಾಯೇ
ನಗುವನು ಬೀರುವ ಮಾಯೇ ll
ಬಂದೆನು ನಿನ್ನಯ ಸನ್ನಿಧಿಗೆ
ನಿಂದೆನು ಶಿರಬಾಗಿ ನಮಿಸುತಲಿ
ಕಂಡೆನು ನಿನ್ನ ದಿವ್ಯ ರೂಪವನು ll
ಅಂಬೆಯು ನೀನೇ ಜಗದಂಬೆ
ಭಕ್ತರ ರಕ್ಷಿಸಿ ಕಾಯುವ ದೇವಿಯೆ
ಕೊಲ್ಲೂರ ಮೂಕಾಂಬಿಕೆ ತಾಯೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
¶ ದತ್ತವಿಷಯ : ಶೈಲ ಪುತ್ರಿ
ಶೀರ್ಷಿಕೆ : ದೇವಿ ಮಾತೆ
*******************
ಶೈಲ ಪುತ್ರಿಯೆ ನಿನಗೆ ವಂದನೆ
ಕರುಣೆಯಿಂದಲಿ ಸಲಹು ಮಾತೆ
ಕರವ ಮುಗಿದು ಬೇಡಿ ನಿಂತೆನು
ಹಿಮಗಿರಿತನಯೆ ಹರಸು ಎನ್ನನು ll
ಪರಮ ಪಾವನೆ ಲೋಕ ಪಾಲಕಿ
ನಿತ್ಯ ರಕ್ಷಣೆ ಮಾಡು ನಾಯಕಿ
ಅರಿವು ನೀಡಲು ನಿನ್ನ ಸ್ತುತಿಸುವೆ
ಮೊರೆಯ ಆಲಿಸು ದೇವಿ ಶಂಕರಿ ll
ಕಮಲ ವದನೆ ಪ್ರೀತಿ ತೋರಿಸು
ನಮನ ನಿನಗೆ ನಿತ್ಯ ಪಾಲಿಸು
ಅನಂತ ಶಕ್ತಿಯ ಭಜಿಸಿ ಪೂಜಿಪೆ
ಬಂದ ದುರಿತವ ದೂರಗೊಳಿಸು ll
ದೇವಿ ಕೋಮಲೆ ದುರ್ಗಾ ದೇವಿಯೆ
ಚಂದದಿಂದಲಿ ಹರಸು ಮಾತೆಯೆ
ಮೋದದಿಂದಲಿ ನಿನ್ನ ಕರೆಯುವೆ
ಒಲಿದು ಬಂದು ಪೊರೆಯೆ ಅಂಬಿಕೆ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ
¶ದತ್ತವಿಷಯ : ಶೈಲ ಪುತ್ರಿ
ಶೀರ್ಷಿಕೆ : ದೇವಿ ಮಾತೆ
*******************
ಶೈಲ ಪುತ್ರಿಯೆ ನಿನಗೆ ವಂದನೆ
ಕರುಣೆಯಿಂದಲಿ ಸಲಹು ಮಾತೆ
ಕರವ ಮುಗಿದು ಬೇಡಿ ನಿಂತೆನು
ಹಿಮಗಿರಿತನಯೆ ಹರಸು ಎನ್ನನು ll
ಪರಮ ಪಾವನೆ ಲೋಕ ಪಾಲಕಿ
ನಿತ್ಯ ರಕ್ಷಣೆ ಮಾಡು ನಾಯಕಿ
ಅರಿವು ನೀಡಲು ನಿನ್ನ ಸ್ತುತಿಸುವೆ
ಮೊರೆಯ ಆಲಿಸು ದೇವಿ ಶಂಕರಿ ll
ಕಮಲ ವದನೆ ಪ್ರೀತಿ ತೋರಿಸು
ನಮನ ನಿನಗೆ ನಿತ್ಯ ಪಾಲಿಸು
ಅನಂತ ಶಕ್ತಿಯ ಭಜಿಸಿ ಪೂಜಿಪೆ
ಬಂದ ದುರಿತವ ದೂರಗೊಳಿಸು ll
ದೇವಿ ಕೋಮಲೆ ದುರ್ಗಾ ದೇವಿಯೆ
ಚಂದದಿಂದಲಿ ಹರಸು ಮಾತೆಯೆ
ಮೋದದಿಂದಲಿ ನಿನ್ನ ಕರೆಯುವೆ
ಒಲಿದು ಬಂದು ಪೊರೆಯೆ ಅಂಬಿಕೆ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ
¶ಶ್ರೀ ದುರ್ಗಾoಬಿಕೆ
**************
ಕಟೀಲು ಮಾತೆ ಶುಭದಾತೆ
ಕರುಣದಿ ಸಲಹು ಜಗನ್ಮಾತೆ
ನಂಬಿದೆ ನಿನ್ನನೆ ವರದಾತೆ
ಅಭಯ ಕರುಣಿಸು ಸುಖದಾತೆ ll
ನಂದಿನಿ ತಟದಲಿ ನೆಲೆಸಿರುವೆ
ಅಂಬೆಯೆ ನಿನಗಿದೋ ವಂದಿಸುವೆ
ಭಕ್ತಿಯ ಪೂಜೆಯ ಸಲ್ಲಿಸುವೆ
ಶಕ್ತಿಯ ನೀಡುತ ನೀ ಪೊರೆಯೆ ll
ಅರುಣಾಸುರಗೆ ಮೋಕ್ಷವ ನೀಡಿದೆ
ದೇವತೆಗಳನು ರಕ್ಷಣೆ ಮಾಡಿದೆ
ಮಲ್ಲಿಗೆ ಹೂವಿನ ಮಾಲೆಯು ನಿನಗೆ
ಹೂವಿನ ಪೂಜೆಗೆ ನೀ ಒಲಿವೆ ll
ದೀಪಾರಾಧನೆ ಸೊಬಗನು ನೋಡಿದೆ
ಬಾಳಿಗೆ ಬೆಳಕನು ನೀ ನೀಡಿದೆ
ಬಂದಿಹ ದುರಿತವ ಕಳೆಯುತ ಕಾಯುವೆ
ಅಂಬಿಕೆ ಚಂಡಿಕೆ ದುರ್ಗಾoಬಿಕೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
¶ಶ್ರೀದೇವಿ ಜಗನ್ಮಾತೆ
***************
ಜಯ ಜಯ ಶಂಕರಿ ಹೇ ಅಭಯoಕರಿ
ಜಯ ಜಯ ಶಂಕರಿ ಹೇ ಗುಣಶಂಕರಿ ll
ದುರಿತ ನಿವಾರಿಣಿ ಭವ ಭಯ ಹಾರಿಣಿ
ಮಂಗಳ ರೂಪಿಣಿ ಜಗನ್ಮಾತೆ
ವಿದ್ಯಾ ಮಾತೆಯೆ ಶಾರದಾoಬೆಯೆ
ಬುದ್ಧಿಯ ಕರುಣಿಸು ಸರಸ್ವತಿಯೆ ll
ಶುoಭ ನಿಶುoಭ ಚಂಡಮುಂಡರ
ಶಿರವನು ತರಿದ ಭಗವತಿಯೆ
ನಾನಾ ರೂಪದಿ ದುಷ್ಟರ ಸಂಹಾರ
ಗೈದಿಹ ಆದಿಶಕ್ತಿ ಸ್ವರೂಪಿಣಿಯೆ ll
ಕರುಣದಿ ಪೊರೆಯೆ ತಾಯೆ ಅಂಬಿಕೆ
ಕರಗಳ ಮುಗಿದು ಬೇಡುವೆನು
ದುಗುಡವ ಕಳೆದು ಸದ್ಗತಿ ನೀಡುತ
ಬದುಕನು ಪಾವನಗೊಳಿಸು ದುರ್ಗಾoಬಿಕೆ ll
✍️ . ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
¶ಬಾಳಿನ ಗೆಳತಿ
***********
ಎತ್ತಿ ನಡೆಯುವೆ ನಿನ್ನನೆಂದಿಗು
ಇಳಿಸಲಾರೆನು ಭೂಮಿಗೆ
ಕಾಲು ನೋವುದು ನಡೆಯ ಬೇಡಲೆ
ಒಲವಿನಿಂದಲೆ ಹೇಳಿದೆ ll
ನಿನ್ನ ನಗೆಯದು ಏನು ಚಂದವೊ
ನನ್ನ ಬಾಳಿನ ಗೆಳತಿಯೆ
ಉಸಿರು ಉಸಿರಲಿ ನಿನ್ನ ಸೇರಿದೆ
ಹಸಿರು ಸೀರೆಯ ಬೆಡಗಿಯೆ ll
ಹೊತ್ತು ಹೋದರು ಗೊತ್ತೆ ಆಗದು
ನೀನು ಬಳಿಯಲಿ ಇದ್ದರೆ
ಸುತ್ತಿ ಬಂದೆನು ಎತ್ತಿ ನಿನ್ನನು
ಅತ್ತ ಇತ್ತಲು ಎಲ್ಲಿಗೊ ll
ಕಣ್ಣ ನೋಟದಿ ಸೆಳೆದೆ ನನ್ನನು
ಮರೆಯಲಾರದ ಜನುಮವೆ
ಹರೆಯ ತುಂಬಿದ ಹರುಷ ತೋರಿಸಿ
ಕರವ ಚಾಚಿದೆ ನಿನಗಿದೊ ll
ಬಾಳ ಪಯಣಕೆ ನೀನೆ ಕೀರ್ತಿಯು
ಬಂತು ಈಗಲೆ ಸ್ಫೂರ್ತಿಯು
ನೋವು ನಲಿವಲಿ ಜೊತೆಗೆ ಬರುವಳು
ಜೀವನದ ಜೊತೆಗಾತಿಯು ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ
¶ಸುಬ್ರಮಣ್ಯನೆ
***********
ಈಶ ಪುತ್ರನೇ ಸುಬ್ರಮಣ್ಯನೆ
ಕಾರ್ತಿಕೇಯನೆ ನಮಿಸುವೆ
ಶೂರಪದ್ಮನ ತರಿದ ದೇವನೆ
ಸುಬ್ರಮಣ್ಯದಿ ನೆಲೆಸಿದಾತನೆ ll
ನಾಗ ದೋಷವ ಕಳೆಯುವಾತನೆ
ಭಕ್ತಿಯಿಂದಲಿ ಭಜಿಸುವೆ
ದಿವ್ಯ ಮೂರ್ತಿಯೆ ದಿವ್ಯ ಶಕ್ತಿಯೆ
ಸುರಸೇನಾಧಿಪಗೆ ವಂದಿಪೆ ll
ಶೋಕ ನೀಗಿಸು ಬಾಧೆ ಹೋಗಿಸು
ಕರುಣದಿಂದಲಿ ಸಲಹು ದೇವನೆ
ಕೋಪ ತಾಪವ ಬಿಡುವ ಮನಸನು
ನೀಡಿ ಹರಸು ಸುಬ್ರಮಣ್ಯನೆ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ
¶ಶ್ರೀ ದೇವಿ ದುರ್ಗಾoಬಿಕೆ
*******************
ದೇವಿ ಪಾರ್ವತಿ ಸಿಂಹ ವಾಹಿನಿ
ತ್ರಿಶೂಲ ಧಾರಿಣಿ ದುರ್ಗೆಯೆ
ಕರುಣಿಸೆಮ್ಮನು ಮಾತೆ ಭಾರತಿ
ವರುವ ನೀಡುತ ಅಂಬಿಕೆ ll
ಅಷ್ಟಭುಜದಿ ಇಷ್ಟ ಕರುಣಿಪ
ಭಕ್ತ ವತ್ಸಲೆ ಮಾತೆಯು
ಅಭಯದಾತೆಯೆ ಮಂಗಳಾoಬೆಯೆ
ಕರುಣೆ ತೋರುತ ರಕ್ಷಿಸು ll
ಅಮ್ಮ ನಿನ್ನನು ನಂಬಿ ಬಂದೆನು
ನಮ್ಮ ಕಾಯೆ ಲಲಿತೆಯೆ
ಅನ್ನಪೂರ್ಣೇಯೆ ಹಸಿವ ನೀಗಿಸು
ಶಂಕರನರಸಿಯೆ ಪಾವನೆ ll
ವಿದ್ಯೆ ಬುದ್ಧಿಯ ದಯದಿ ನೀಡುತ
ವಿಜಯವನ್ನು ಕರುಣಿಸು
ಮೋದದಿಂದಲಿ ಸಲಹು ದಾತೆಯೆ
ಬಂದು ಹರಸು ನಮ್ಮನು ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ
¶ https://youtu.be/yhRhDSKTnlE?si=zBV2pJpiRl6RTAuA
********************
ಬಾಳ ಚೆಲುವೆ
***********
ಅರಳಿ ನಿಂತ ಕುಸುಮದಂತೆ
ನಿನ್ನ ಮೊಗವು ಸುಂದರ
ಹೊಸದು ಆಸೆ ಮೂಡಿ ಮನಸು
ಬೆಳಗೆ ಹೃದಯ ಮಂದಿರ ll
ಮುಡಿದೆ ಹೂವು ಜಡೆಯ ತುಂಬಾ
ನಡಿಗೆ ಸ್ವಲ್ಪ ಮೆಲ್ಲಗೆ
ಸಡಿಲ ಮಾಡು ಮನಸ ನಿಂದು
ನುಡಿಯೆ ಮಾತು ಮಲ್ಲಿಗೆ ll
ಸೀರೆ ರವಿಕೆ ತೊಟ್ಟು ಕೊಂಡ
ಹುಡುಗಿ ನೀನು ಸುಂದರಿ
ಕಾಲ ಗೆಜ್ಜೆ ಕಟ್ಟಿ ಕೊಡುವೆ
ಬಾಳ ಚೆಲುವೆ ಮಾಧುರಿ ll
ಪ್ರೇಮಗಾನ ಮೋಹ ಬಂಧ
ಇರಲಿ ಸದಾ ನಮ್ಮೊಳು
ಪ್ರೀತಿ ಸ್ನೇಹ ತೋರಿ ನಾವು
ಬಾಳಬೇಕು ಸುಖದೊಳು ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ, ವಸಂತ ಬಾರಡ್ಕ
ಅರಳಿದ ಸುಮ
************
ಅರಳಿ ನಿಂತ ಸುಮದ ಹಾಗೆ
ನಗುವ ನಿನ್ನ ವದನವೆ
ಸೆಳೆದೆ ಬಳಿಗೆ ಮನಸನಿಂದು
ಕವನ ಬರೆವ ಸ್ಫೂರ್ತಿಯೆ ll
ತೋಷದಿಂದ ಮೆರೆವೆ ನಾನು
ಭಾವಪೂರ್ಣವಾಗಿದೆ
ನೋವನಿoದು ಮರೆವೆ ನಾನು
ಮನಸು ಇಂದು ಅರಳಿದೆ ll
ಹೃದಯ ತೆರೆದು ಹೇಳಬೇಕು
ಅದರ ತುಂಬ ನಗುವಿದೆ
ಮುಖವ ಮುಚ್ಚಿಕೊಂಡರೇನು
ಮನಸು ತುಂಬಿ ನಿಂತಿದೆ ll
ಹರುಷದಿಂದ ಬರುವೆ ಈಗ
ಕರೆಯು ಬರಲು ಕಾಯುವೆ
ಹೊಸದು ಆಸೆ ಮನದಲಿಂದು
ಇನಿಯನತ್ತ ಸೆಳೆದಿದೆ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ
https://youtu.be/x5He3RRS1fg?si=baeFI9fQIIDsDhgN
*******************
¶ಪಾರ್ವತಿ ನಂದನ ಗಜವದನ
**********************
ಪಾರ್ವತಿ ನಂದನ
ಮಂಗಳ ಮೂರುತಿ
ಚಾಮರ ಕರ್ಣನೆ ಗಜವದನ
ಮೋದಕ ಹಸ್ತನೆ
ಮೂಷಿಕ ವಾಹನ
ಕಪಿಲನೆ ಬೆನಕನೆ ಗಜಕರ್ಣ ll
ಸುಮುಖನೆ ಗಣಪತಿ
ವಿಘ್ನವ ನೀಗಿಸು
ಭಜಿಸುವೆ ನಿನ್ನನು ವಿನಾಯಕ
ನಮಿಸುವೆ ಮೊದಲಿಗೆ
ಕರುಣಿಸು ಮಂಗಳ
ಬೇಡುವೆ ನಿತ್ಯವು ಗಣನಾಥ ll
ಮಹಿಮೆಯ ತೋರುವೆ
ಮಹಿಮಾಕರನೇ
ಗಣಗಳ ಅಧಿಪತಿ ಗಜಮುಖನು
ಪಾಲಿಸು ಅನುದಿನ
ಕೋಮಲ ವದನನೆ
ಆಲಿಸು ಭಕ್ತಿಯ ಮೊರೆಯನ್ನು ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀ ಮತಿ ಮಾಲತಿ ಎಸ್ ಎನ್ ಭಟ್ ಕಾಕುಂಜೆ.