ಅಭಿಲಾಷೆ ಕಾದಂಬರಿ ಸಂಚಿಕೆ -43
ಆತ್ಮೀಯ ಓದುಗರಿಗೆ ವಂದನೆಯನ್ನು ತಿಳಿಸುತ್ತಾ 🙏🙏
ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 43 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.
- ಹಿಂದಿನ ಸಂಚಿಕೆಯಲ್ಲಿ
ನಮ್ಮಿಬ್ಬರ ಒಳಿತಿಗಾಗಿ ನಮ್ಮಣ್ಣ ಕಷ್ಟಕ್ಕೆ ಸಿಲುಕುವಂತಾಯ್ತೆಂದು ವಿಕ್ರಮ್ ನು ಆಶಾಳಿಗೆ ಹೇಳಿರುತ್ತಾನೆ.
- ಕಥೆಯನ್ನು ಮುಂದುವರೆಸುತ್ತಾ
ನಮ್ಮಿಬ್ಬರ ಒಳಿತಿಗಾಗಿ ನಮ್ಮಣ್ಣ ಕಷ್ಟಕ್ಕೆ ಸಿಲುಕುವಂತಾಯ್ತೆಂದು ವಿಕ್ರಮ್ ನು ಆಶಾಳಿಗೆ ಹೇಳಿದಾಗ
ಆಶಾ ಹೌಹಾರಿ ಏನಂದೆ ನಮ್ಮ ಮದುವೆ ಮಾಡಿಸಲು ನಿಮ್ಮಣ್ಣನು ನನ್ನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಪೋಲೀಸ್ ರವರ ಕೈಲಿ ಸಿಕ್ಕಿಕೊಂಡರೆಂಬುದು ನಿಜವಾ? ನಾನು ಇದನ್ನು ನಂಬಬೇಕಾ? ಎಂದು ಕೇಳಿದಾಗ
ಹೌದು ಡಿಯರ್ ನಮಗಾಗಿಯೇ ನಮ್ಮಣ್ಣ ಈ ರೀತಿ ಮಾಡಿದ್ದಾರೆಂದು ವಿಕ್ರಮ್ ಪುನಃ ಒತ್ತಿ ಹೇಳಲು
ನೋ ವಿಕ್ರಮ್ ಇದನ್ನು ನಾನು ನಂಬುವುದಿಲ್ಲ. ನಿಮ್ಮ ತಂದೆಯ ಸಾಲ ತೀರಿಸುವುದಕ್ಕೆ ನನ್ನನ್ನು ಕಿಡ್ನಾಪ್ ಮಾಡಿದ್ದಾರೆಂದು ನೀನು ಸುಳ್ಳು ಹೇಳಬೇಡಾ ವಿಕ್ರಮ್ ಎಂದು ಆಶಾಳ ಮಾತಿಗೆ
ನನ್ನನ್ನು ನಂಬು ಡಿಯರ್ ಎಂದು ವಿಕ್ರಮ್ ಹೇಳಿದಾಗ
ನೋ ನಿನ್ನ ಮಾತನ್ನು ನಾನು ನಂಬುವುದಿಲ್ಲ. ನಿಮ್ಮಣ್ಣ ನಮ್ಮಪ್ಪನಿಂದ ಹಣ ಪಡೆದು ನಿಮ್ಮಪ್ಪನ ಸಾಲ ತೀರಿಸಿದ ನಂತರ ನಮ್ಮ ಮದುವೆ ಮಾಡಬೇಕೆಂಬ ಒಳ್ಳೆಯ ಉದ್ದೇಶವಿದ್ದಿದ್ದರೆ, ಕಿಡ್ನಾಪ್ ಮಾಡಿದ ನನ್ನನ್ನು ಏಕೆ ಕೆಟ್ಟದಾಗಿ ನಡೆಸಿಕೊಂಡ್ರು? ನನ್ನನ್ನು ಕುರ್ಚಿಗೆ ಕಟ್ಟಿಹಾಕಿ, ಊಟ ತಿಂಡಿ ನೀಡದೆ, ಸರಿಯಾಗಿ ಕುಡಿಯಲು ನೀರು ಕೊಡದೆ, ನನಗೆ ಸುಸ್ತಾಗಿ ನೀರೂ ನೀರೂ ನೀರು ಕೊಡಿ ಎಂದರೂ ಕೇಳದೆ, ಹಿಂಸಿಸಿದರಲ್ಲಾ ಇದಕ್ಕೇನು ಹೇಳುತ್ತೀಯಾ? ವಿಕ್ರಮ್ ಎಂದು ಆಶಾ ಪ್ರಶ್ನಿಸಲು
ನಿನಗೆ ಹಿಂಸಿಸುವ ಉದ್ದೇಶ ನಮ್ಮಣ್ಣನಿಗೆ ಇರಲಿಲ್ಲ. ಬಹುಷಃ ನಿನ್ನನ್ನು ನೋಡಿಕೊಳ್ಳಲು ಕಾವಲು ಕಾಯುತ್ತನಿದ್ದನಲ್ಲಾ ಅವನಿಗೆ ಗೊತ್ತಿಲ್ಲದೆ ನಡೆಸಿಕೊಂಡಿರಬೇಕು, ದಯವಿಟ್ಟು ಆ ಸಣ್ಣ ಘಟನೆಯನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಾ ಆಶಾ, ಎಂದು ವಿಕ್ರಮ್ ಹೇಳಿದಾಗ,
ವಿಕ್ರಮ್ ನಾನು ಹೇಳುತ್ತಿರುವುದು ಸಣ್ಣ ಘಟನೆಯಾ? ನಾನು ಸಾಯುವವರೆಗೂ ಮರೆಯುವುದಿಲ್ಲವೆಂಬ ಆಶಾ ಮಾತಿಗೆ
ನಾನು ನಿನ್ನ ಜೊತೆಯಲ್ಲಿರುತ್ತೇನೆ ಇನ್ನು ಧೈರ್ಯನಾಗಿರು ಎಂದು ವಿಕ್ರಮ್ ಹೇಳಿದಾಗ
ನಿಮ್ಮ ಕುಟುಂಬದವರೇ ನಂಬಲು ಯೋಗ್ಯರಲ್ಲಾ ಹಾಗಿರುವಾಗ ನಿನ್ನನ್ನು ನಂಬಿ ಬದುಕಲು ಸಾಧ್ಯವೇ ವಿಕ್ರಮ್ ಎಂಬ ಆಶಾ ಪ್ರಶ್ನೆಗೆ
ಪ್ಲೀಸ್ ಆಶಾ ನನ್ನ ಕುಟುಂಬದ ಮೇಲೆ ಕೋಪಿಸಿಕೊಳ್ಳಬೇಡಾ ಪ್ಲೀಸ್, ನಮ್ಮ ಕುಟುಂಬವನ್ನು ನೀನೇ ಕಾಪಾಡಬೇಕು ಎಂದು ವಿಕ್ರಮ್ ದೈನ್ಯದಿಂದ ಕೇಳಲು
ನಿಮ್ಮ ಕುಟುಂಬವನ್ನು ರಕ್ಷಿಸಲು ನಾನ್ಯಾರು? ವಿಕ್ರಮ್ ಹೇಳೆನ್ನುತ್ತಾಳೆ.
ಆಶಾ ಇದೇನು ಹೀಗೆ ಹೇಳುತ್ತಿದ್ಗೀಯಾ? ನಾಳೆ ನೀನು ನನ್ನ ಹೆಂಡತಿಯಾಗುವವಳು, ನಮ್ಮ ಮನೆ ಸೊಸೆಯಾಗುವವಳೆಂದು ವಿಕ್ರಮ್ ಹೇಳಿದಾಗ
ಆಶಾ ಗಹಗಹಿಸಿ ನಗುತ್ತಾ, ನಾನು ನಿನ್ನ ಹೆಂಡತಿಯಾಗುತ್ತೇನೆಂಬ ಭ್ರಮೆಯಿಂದ ಹೊರಗೆ ಬಂದಿಲ್ಲವಾ ಪೂರ್ ಬಾಯ್ ಎಂದು ಆಶಾ ವಿಕ್ರಮನನ್ನು ಛೇಡಿಸಲು
ವಿಕ್ರಮ್ ಗೆ ಗಾಬರಿಯಾಗಿ, ಆಶಾ ನೀನು ಏನು ಹೇಳುತ್ತಿದ್ದೀಯಾ? ನನಗಂತೂ ಅರ್ಥವಾಗುತ್ತಿಲ್ಲವೆಂದು ವಿಕ್ರಮ್ ಆಡಿದ ಮಾತಿಗೆ
ನಾನು ಸರಿಯಾಗಿಯೇ ಹೇಳುತ್ತಿದ್ದೇನೆ ವಿಕ್ರಮ್, ಎನ್ನುತ್ತಾಳೆ ಆಶಾ
ಬೇಡಾ ಆಶಾ ಇದು ನನ್ನ ರಿಕ್ವೆಸ್ಟ್ ಎಂದು ತಿಳಿದುಕೋ, ನಾನು ನಿನ್ನ ಬಿಟ್ಚು ಇರಲು ಸಾಧ್ಯವಿಲ್ಲ ಆಶಾ ಪ್ಲೀಸ್ ನನ್ನನ್ನು ನಂಬು ಎಂದು ವಿಕ್ರಮ್ ಕೇಳಿದಾಗ
ನೋ ವಿಕ್ರಮ್ ಯಾವಾಗ ನಿಮ್ಮಣ್ಣ ನನ್ನನ್ನು ಹಣಕ್ಕಾಗಿ ಕಿಡ್ನಾಪ್ ಮಾಡಿದನೋ ಆಗಲೇ ನನ್ನ ನಿನ್ನ ಪ್ರೀತಿ ದಹಿಸಿ ಬೂದಿಯಾಯಿತು. ಇನ್ನೂ ಕೂಡಾ ನಾನು ನಿನ್ನನ್ನು ಮದುವೆಯಾಗುತ್ತೇನೆಂಬ ಭ್ರಮೆಯಿಂದ ಹೊರಗೆ ಬಾ ಎಂದು ಆಶಾ ನಿಷ್ಠೂರವಾಗಿ ಹೇಳಿದಾಗ
ಆಶಾ ಏನು ಹೇಳುತ್ತಿದ್ದೀಯಾ? ನಮ್ನಿಬ್ಬರ ಪವಿತ್ರವಾದ ಪ್ರೇಮವನ್ನು ಚಿವುಟ ಬೇಡಾ, ನೀನು ನಮ್ಮಣ್ಣನನ್ನು ಬಿಡಿಸುವ ಶಕ್ತಿ ನಿನಗಿದೆ, ನಮ್ಮಣ್ಣನನ್ನು ಕ್ಷಮಿಸಿ, ನಮ್ಮಣ್ಣನ ಮೇಲಿರುವ ಕೇಸ್ ವಾಪಸ್ ತೆಗೆದುಕೊಳ್ಳುತ್ತೇನೆಂದು ಪೋಲಿಸ್ ರವರಿಗೆ ಹೇಳಿದರೆ, ನಮ್ಮಣ್ಣ ಬಚಾವಾಗುತ್ತಾನೆ. ನಂತರ ಇಬ್ಬರೂ ಸಂತೋಷದಿಂದ ಮದುವೆಯಾಗಬಹುದೆಂದು ವಿಕ್ರಮ್ ಹೇಳಲು
ಏನು ಹೇಳುತ್ತಿದ್ದೀಯಾ ವಿಕ್ರಮ್ ? ನಾನು ನಿಮ್ಮಣ್ಣನನ್ನು ಕ್ಷಮಿಸಿ ಕೇಸ್ ವಾಪಸ್ ತೆಗೆದುಕೊಂಡು ನಿನ್ನನ್ನು ಮದುವೆಯಾಗಬೇಕಾ?ನೆವರ್ ವಿಕ್ರಮ್ ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ನಿಮ್ಮಣ್ಣ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಲೇಬೇಕು, ಆಗಲೇ ನನ್ನ ಮನಸ್ಸಿಗೆ ಸಮಾಧಾನ ವಾಗುತ್ತದೆ. ಇನ್ನು ನಮ್ಮ ಪ್ರೀತಿಯ ವಿಷಯ ಅದು ಸುಟ್ಟು ಭಸ್ಮವಾಗಿದೆ. ಇನ್ನೆಂದೂ ನನಗೆ ನಿನ್ನ ಮುಖ ತೋರಿಸಬೇಡಾ ಎಂದು ಆಶಾ ಗಳ ಗಳನೆ ಅಳುತ್ತಾಳೆ.
ಆಶಾ ಪ್ಲೀಸ್ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಾ ಎಂದು ವಿಕ್ರಮ್ ಪರಿಪರಿಯಾಗಿ ಹೇಳಿದರೂ
ಆಶಾಳ ಮನಸ್ಸು ಕರಗುವುದಿಲ್ಲ. ನಿಮ್ಮಣ್ಣ ನನ್ನನ್ನು ಕಿಡ್ನಾಪ್ ಮಾಡಿದ್ದೆಂದು ನಮ್ಮಪ್ಪ ಹೇಳಿದರೂ ನಾನು ನಂಬಿರಲೇ ಇಲ್ಲ. ಇದರ ಹಿಂದೆ ಯಾರೋ ಇರಬಹುದೆಂದು ಎಣಿಸಿದ್ದೆ ಆದರೆ, ನಮ್ಮಣ್ಣನೇ ಹಣದ ಆಸೆಗೆ ಕಿಡ್ನಾಪ್ ಮಾಡಿದ್ದಾನೆಂದು ನೀನೇ ಸ್ವತಃ ಹೇಳಿದ್ದರಿಂದ ನಂಬಲೇಬೇಕು. ಇದಕ್ಕೆ ನಿಮ್ಮಣ್ಣನಿಗೆ ಕ್ಷಮೆಯೇ ಇಲ್ಲಾ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೆಂದು ಹೇಳಿ ಆಶಾ ಫೋನ್ ಆಫ್ ಮಾಡುತ್ತಾಳೆ
ಕೆಲವು ಸೆಕೆಂಡುಗಳು ವಿಕ್ರಮ್ ಆಶಾ ಆಶಾ ಎನ್ನುತ್ತಿದ್ದು, ಆಶಾ ಕಡೆಯಿಂದ ಏನೂ ಪ್ರತಿಕ್ರಿಯೆ ಬರದೇ ಇದ್ದುದ್ದರಿಂದ ಅಯ್ಯೋ ಫೋನ್ ಆಫ್ ಮಾಡಿಬಿಟ್ಟಳೆಂದು ಪುನಃ ಫೋನ್ ಮಾಡಿದಾಗ
ಆಶಾ ಫೋನ್ ರಿಸೀವ್ ಮಾಡದಿರುವುದನ್ನು ಕಂಡು, ನಾನು ಎಂತಹ ಯಡವಟ್ಟಿನ ಕೆಲಸ ಮಾಡಿದೆ, ಇದು ನಮ್ಮಣ್ಣನ ಕೃತ್ಯವಲ್ಲ, ಯಾರೋ ಬ್ಲಾಕ್ ಮೇಲ್ ಮಾಡಿ ನಮ್ಮಣ್ಣನಿಗೆ ಹೆದರಿಸಿ ನಿನ್ನ ಕಿಡ್ನಾಪ್ ಮಾಡಲು ಹೇಳಿದ್ದರೆಂದು ನಂಬಿಸಬಹುದಿತ್ತು, ಆಗ ನಮ್ಮ ಅಣ್ಣನ ಬಿಡಿಸಲು ಸಹಾಯ ಮಾಡುತ್ತಿದ್ದಳೆಂದುಕೊಂಡು ಪಶ್ಚಾತ್ತಾಪ ಪಡುತ್ತಾ ಈಗ ಆಶ ಕೋಪಿಸಿಕೊಂಡಿದ್ದಾಳೆ, ಸಮಾಧಾನವಾದ ನಂತರ ಫೋನ್ ಮಾಡೋಣವೆಂದು ಸುಮ್ಮನಾಗುತ್ತಾನೆ.
ಈ ಕಡೆ ವಿಕ್ರಮ್ ಅಣ್ಣನ ಮೇಲೆ ಎಫ್ ಐಆರ್ ದಾಖಲಿಸಿ, ಕೋರ್ಟಿಗೆ ಹಾಜರುಪಡಿಸಿದಾಗ
ನ್ಯಾಯಾಲಯವು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸುತ್ತದೆ.
ಇದರಿಂದ ವಿಕ್ರಮ್ ಹಾಗೂ ಅವರಪ್ಪನಿಗೆ ತಡೆಯಲಾರದ ದುಃಖವಾಗಿದ್ದು, ಕೇಸ್ ನಡೆಸಿ ಜಾಮೀನು ಪಡೆಯಲು ವಕೀಲರನ್ನು ನೇಮಿಸಿರುತ್ತಾರೆ.
ಎರಡು ದಿನಗಳ ನಂತರ ಪುನಃ ವಿಕ್ರಮ್ ಆಶಾಳಿಗೆ ಫೋನ್ ಮಾಡಿ, ನಮ್ಮಣ್ಣನಿಗೆ ನ್ಯಾಯಾಲಯವು ಹದಿನಾಲ್ಕು ದಿನ ನ್ಯಾಯಾಂಗ ಬಂಧನ ವಿಧಿಸಿದೆ. ನೀನು ಮನಸ್ಸು ಮಾಡಿದರೆ ಶಿಕ್ಷೆ ತಪ್ಪಿಸಬಹುದೆಂದು ಹೇಳಿದಾಗ
ನಿಮ್ಮಣ್ಣನ ಮೇಲೆ ಕಂಪ್ಲೇಂಟ್ ಕೊಟ್ಟಿರುವುದು ನಾನಲ್ಲಾ, ನಮ್ಮಪ್ಪ ಅವರನ್ನು ಬೇಕಾದರೆ ಕೇಳಿ ನಿಮ್ಮಣ್ಣನ ಶಿಕ್ಷೆ ತಪ್ಪಿಸುವಂತೆ ಮಾಡಿಕೋ, ಈ ವಿಚಾರವಾಗಿ ನನ್ನನ್ನೇನೂ ಕೇಳಬೇಡವೆಂದು ಹೇಳಿ ಆಶಾ ಫೋನ್ ಆಫ್ ಮಾಡುತ್ತಾಳೆ.
ವಿಕ್ರಮ್ ಮೊಬೈಲನ್ನು ಜೇಬಿಗಿಳಿಸುತ್ತಾ, ಎಲ್ಲವೂ ನಮ್ಮಣ್ಣನಿಂದಲೇ ಆಗಿದ್ದು, ಎರಡು ದಿನ ಸುಮ್ಮನೆ ಇದ್ದಿದ್ದರೆ, ಅವಳಪ್ಪ ಒಪ್ಪಲಿ ಬಿಡಲಿ ದೇವಸ್ಥಾನದಲ್ಲೇ ತಾಳಿಕಟ್ಟಿ ಮದುವೆ ಮಾಡಿಕೊಳ್ಳಬಹುದಿತ್ತೆಂದು ಪಶ್ಚಾತ್ತಾಪ ಪಡುತ್ತಾನೆ. ಈಗ ಅವಳು ನಮ್ಮ ಕುಟುಂಬದ ಮೇಲೆ ಕೋಪಿಸಿಕೊಂಡಿದ್ದಾಳೆ. ಸದ್ಯಕ್ಕಂತೂ ಈ ವಿಚಾರ ಮಾತನಾಡಲು ಆಗುವುದೇ ಇಲ್ಲವೆಂದುಕೊಳ್ಳುತ್ತಾನೆ.
ಮಾರನೇ ದಿನ ಆಶಾ ಕೆಲಸಕ್ಕೆ ಹೋಗಲು ರಡಿಯಾಗಿ, ಅಮ್ಮಾ ನಾನು ಕೆಲಸಕ್ಕೆ ಹೋಗಿ ಬರುತ್ತೇನೆ ಬೇಗ ತಿಂಡಿ ಕೊಡಮ್ಮಾ ಎಂದು ಕೇಳಿದಾಗ
ನಡುಮನೆಯಲ್ಲಿ ಸೋಫಾ ಮೇಲೆ ಕುಳಿತು ಪೇಪರ್ ಓದುತ್ತಿದ್ದ ಕೋದಂಡರಾಂ ರವರು, ಓದುತ್ತಿದ್ದ ಪೇಪರನ್ನು ಪಕ್ಕಕ್ಕೆ ಸರಿಸಿ ಕನ್ನಡಕವನ್ನು ಎಡಗೈಲಿ ಹಿಡಿದುಕೊಂಡು ಈ ದಿನ ಸುಧಾರಿಸಿಕೊಂಡು ನಾಳೆ ಕೆಲಸಕ್ಕೆ ಹೋಗಬಾರದಾ ಮಗಳೇ ಎಂದು ಕೇಳಿದಾಗ
ಅಪ್ಪಾ ನಾನಿನ್ನು ಕೆಲಸಕ್ಕೆ ಹೊಸದಾಗಿ ಸೇರಿದ್ದೇನೆ, ಜಾಸ್ತಿ ರಜೆ ಸಿಕ್ಕುವುದಿಲ್ಲಪ್ಪಾ ಈ ದಿನ ಹೋಗಲೇ ಬೇಕೆಂದು ಆಶಾ ಹೇಳಲು
ಹುಶಾರಾಗಿ ಹೋಗಿ ಬಾಮ್ಮಾ, ಸಂಜೆಯಾಗುತ್ತಿದ್ದಂತೆ ಮನೆಗೆ ಬಂದು ಬಿಡಮ್ಮಾ, ಎಂದು ಅವಳಪ್ಪ ಹೇಳಿದಾಗ
ಆಶ ತನ್ನ ಮನಸ್ಸಿನಲ್ಲಿ, ಛೇ ನಾನು ಅಪ್ಪನ ಮಾತನ್ನು ನಂಬದೆ, ನಿಷ್ಠೂರ ಮಾಡಿದೆ, ಈಗಲೇ ಅಪ್ಪನ ಬಳಿ ಕ್ಷಮೆ ಕೇಳಲೇ ಎನಿಸಿದರೂ, ಬೇಡಾ ಬೇಡಾ ಸಂಜೆ ಬಂದು ನಿಧಾನವಾಗಿ ಮಾತನಾಡಿ ಅಪ್ಪನನ್ನು ಸಮಾಧಾನ ಮಾಡೋಣವೆಂದುಕೊಳ್ಳುತ್ತಿರುವಾಗ
ಯಾಕಮ್ಮಾ ಮೌನವಾದೆ? ನನ್ನ ಈ ಮಾತೂ ನಿನಗೆ ಸಹ್ಯವಾಗಲಿಲ್ಲವಾ ಎಂದು ಕೋದಂಡರಾಮ್ ಕೇಳಲು
ಅಪ್ಪಾ ಹಾಗೇನಿಲ್ಲಪ್ಪಾ, ಆದಷ್ಟೂ ಬೇಗ ಬರುತ್ತೇನೆಂದು ಹೇಳಿ ತಿಂಡಿ ತಿಂದು ಮನೆಯಿಂದ ಹೊರಟು ಬರುತ್ತಾಳೆ.
ಮುಂದುವರೆಯುತ್ತದೆ
- ಈ ಸಂಚಿಕೆಯಲ್ಲಿ ತಿಳಿದುಬರುವ ಮುಖ್ಯವಾದ ಅಂಶವೇನೆಂದರೆ
ನಮಗೆ ಆತ್ಮೀಯರಾದರೆಂದ ಮಾತ್ರಕ್ಕೆ ನಮ್ಮ ಎಲ್ಲಾ ಮಾತುಗಳನ್ನು ಅವರು ಕೇಳುತ್ತಾರೆಂದು, ಹಾಗೆಯೇ ನಾವು ಏನು ತೊಂದರೆ ಕೊಟ್ಟರು ಸ್ನೇಹದಿಂದ ಸ್ವೀಕರಿಸುತ್ತಾರೆಂಬುದು ಭ್ರಮೆಯಷ್ಟೇ. ಅವರಿಗೆ ತಮ್ಮದೇ ಆದ ಭಾವನೆಗಳಿರುತ್ತವೆಂದು, ತಿಳಿದು ಮಾತನಾಡಬೇಕು. ತಮ್ಮ ಮನಸ್ಸಿಗೆ ನೋವಾದರೆ ನೋವು ಕೊಟ್ಟವರು ಯಾರೇ ಆಗಿರಲಿ, ಕಡೆಗೆ ಹೆತ್ತವರೇ ತೊಂದರೆ ಕೊಟ್ಟರೂ ಸಹಿಸುವುದಿಲ್ಲ.
ಮಕ್ಕಳು ಹೆತ್ತವರಿಗೆ ಎಷ್ಟೇ ಬೇಸರಪಡಿಸಿದರೂ ಮಕ್ಕಳಿಗೆ ಏನೂ ಆಗಬಾರದೆಂದು ಅವರ ಕರುಳು ಮಿಡಿಯುತ್ತದೆ. ಆದರೆ ಹೆತ್ತವರ ಭಾವನೆಯನ್ನು ಅರ್ಥಮಾಡಿಕೊಳ್ಳಲು ಕೆಲವು ಸಲ ಮಕ್ಕಳು ವಿಫಲರಾಗಿ, ಹೆತ್ತವರೇನಾದರೂ ಸ್ವಲ್ಪ ಕಿರಿಕ್ ಮಾಡಿದರೂ ಸಾಕು ಇವರಿಂದ ಬಿಡುಗಡೆ ಯಾವಾಗೆಂದು ಯೋಚಿಸುತ್ತಾರೆ. ಇಲ್ಲದಿದ್ದರೆ ವೃದ್ದಾಶ್ರಮಕ್ಕೆ ಸೇರಿಸಲು ನಿರ್ಧರಿಸುತ್ತಾರೆ. ಹೆತ್ತವರಾದರೂ ಅವರಿಂದ ನಾಲ್ಕು ಕಾಸು ಸಂಪಾದನೆಯಾಗುತ್ತಿದೆಯೆಂದರೆ ಅಥವಾ ಅವರ ಹೆಸರಿನಲ್ಲಿ ಆಸ್ತಿ ಇದ್ದರೆ ಮಾತ್ರ ಹೇಗೋ ಸಹಿಸಿಕೊಂಡಿರುತ್ತಾರೆ. ಆದ್ದರಿಂದಲೇ, ಹೆತ್ತವರು ತಮ್ಮ ಕಡೇಕಾಲಕ್ಕೆ ಅನುಕೂಲವಾಗಲು ತಮ್ಮ ಹೆಸರಿನಲ್ಲಿ ಹಣವನ್ನಾಗಲೀ ಆಸ್ತಿಯನ್ನಾಗಲೀ ಇಟ್ಟುಕೊಂಡಿದ್ದರೆ ಒಳ್ಳೆಯದು.