ಅಭಿಲಾಷೆ ಕಾದಂಬರಿ – 39 ನೇ ಸಂಚಿಕೆ

ಹಿಂದಿನ ಸಂಚಿಕೆಯಲ್ಲಿ

ಕೋದಂಡರಾಂ ರವರಿಂದ ಹಣ ವಸೂಲು ಮಾಡುತ್ತೇನೆಂದು ಹೇಳಿ ಕಿಡ್ನಾಪರ್ ಹೋದ ನಂತರ, ಇನ್ಸ್ ಪೆಕ್ಟರ್ ಆಶಾಳನ್ನು ಬಿಡುಗಡೆಗೊಳಿಸಿಕೊಂಡು, ಅಲ್ಲೇ ಇದ್ದ ಇನ್ನೊಬ್ಬ ರೌಡಿಯನ್ನು ಕರೆದುಕೊಂಡು ಸ್ಟೇಷನ್ ಗೆ ಬರುತ್ತಿದ್ದು, ಈ ಕಡೆ ಕೋದಂಡರಾಂ ರವರು ಇನ್ಸ್ ಪೆಕ್ಟರ್ ಹೇಳಿದಂತೆ ಮನೆಗೆ ವಾಪಸ್ ಬರುತ್ತಿರುತ್ತಾರೆ.

ಕಥೆಯನ್ನು ಮುಂದುವರೆಸುತ್ತಾ

ಇನ್ಸ್ ಪೆಕ್ಟರ್ ರವರು ಆಶಾಳನ್ನು ಕಿಡ್ನಾಪರ್ ನಿಂದ ಬಿಡಿಸಿಕೊಂಡು, ವಾಹನದಲ್ಲಿ ಕುಳ್ಳಿರಿಸಿಕೊಂಡು ಸೀದಾ ಸ್ಟೇಷನ್ ಗೆ ಬಂದು, ಅಲ್ಲಿ ರೌಡಿಯನ್ನು ಕೆಳಗಿಳಿಸಿದ ನಂತರ
ಆಶಾಳನ್ನು ಅವರ ಮನೆಗೆ ಬಿಡಲು ಬರುತ್ತಾ, ಕೋದಂಡರಾಂ ರವರಿಗೆ ಫೋನ್ ಮಾಡಿ, ಗುರುಗಳೇ ಎಲ್ಲಿದ್ದೀರೆಂದು ಪ್ರಶ್ನಿಸಲು
ನಾನು ಇದೇ ತಾನೇ ಮನೆಗೆ ಬಂದು ಮಗಳು ಬರುವುದನ್ನೇ ಕಾಯುತ್ತಿದ್ದೇನೆಂದು ಕೋದಂಡರಾಂ ರವರು ಹೇಳಿದಾಗ
ಗುರುಗಳೇ ನಿಮ್ಮ ಮಗಳನ್ನು ಮನೆಗೆ ಬಿಡಲು ಸ್ವತಃ ನಾನೇ ಬರುತ್ತಿದ್ದೇನೆಂದು ಹೇಳಿದ ಮಾತಿಗೆ
ಕೋದಂಡ ರಾಂ ರವರು ತುಂಬಾ ಸಂತೋಷ ಸಾರ್ ಎನ್ನುತ್ತಾ, ಬಾಗಿಲನ್ನು ತೆಗೆದು ನಡುಮನೆಯಲ್ಲಿ ಪತ್ನಿಯೊಂದಿಗೆ ಸೋಫಾ ಮೇಲೆ ಕುಳಿತಿರುತ್ತಾರೆ.
ಸ್ವಲ್ಪ ಹೊತ್ತಿನ ನಂತರ ಇನ್ಸ್ ಪೆಕ್ಟರ್ ರವರ ವಾಹನ ಕೋದಂಡರಾಂ ರವರ ಮನೆಯ ಮುಂದೆ ನಿಂತ ತಕ್ಷಣ
ಆಶಾ ಬೇಗನೇ ಕೆಳಗಿಳಿದು ಅಮ್ಮಾ ,,,ಅಮ್ಮಾ ,,,,, ಎನ್ನುತ್ತಾ, ಮನೆಯೊಳಗೆ ಓಡಿಬಂದಾಗ
ಅವಳ ಅಮ್ಮನು ಆಶಾಳನ್ನು ಆಲಂಗಿಸಿ ಮಗಳೇ ಎಂತಹ ಅಪಾಯದಲ್ಲಿ ಸಿಕ್ಕಿಕೊಂಡಿದ್ದೆಯಮ್ಮಾ? ದೇವರು ದೊಡ್ಡವನು, ನಿನ್ನ ಅದೃಷ್ಟ‌ ಚೆನ್ನಾಗಿತ್ತು, ಸೇಫ್ಟಿಯಾಗಿ ಮನೆಗೆ ಬಂದೆ ಎಂದಾಗ
ಆಶಾ ಅಮ್ಮನ ಭುಜಕ್ಕೆ ಒರಗಿ ಗಳ ಗಳನೆ ಅಳುತ್ತಿರುವುದನ್ನು ಕಂಡು ಇವಳಮ್ಮನಿಗೂ ಕರುಳು ಚುರುಕ್ ಎಂಬಂತಾಗಿ,
ಅವಳಮ್ಮನು ಅಳಬೇಡಾ‌ ಆಶಾ ಯಾವುದೋ ಕೆಟ್ಟ‌ಗಳಿಗೆ ನಿನಗೆ ತೊಂದರೆಯಾಗಿತ್ತು, ಎಂದು ತಲೆ ಸವರಿ ಸಮಾಧಾನ ಮಾಡುತ್ತಿರುವಾಗ
ಇನ್ಸ್‌ಪೆಕ್ಟರ್ ರವರು ದೇವರಂತೆ ಬಂದು ನನ್ನ ಹಣ ನಿನ್ನ ಪ್ರಾಣ ಎರಡನ್ನೂ ಉಳಿಸಿದ್ದಾರೆ ಅವರಿಗೆ ಯಾವರೀತಿ ಥ್ಯಾಂಕ್ಸ್ ಹೇಳಬೇಕೋ‌ ಗೊತ್ತಾಗುತ್ತಿಲ್ಲವೆಂದು ಕೋದಂಡರಾಂ ರವರ ಮಾತಿಗೆ
ಮನೆಯೊಳಗೆ ಬಂದ ಇನ್ಸ್ ಪೆಕ್ಟರ್ ರವರು ಮಾತನಾಡಿ, ಇದು ನಿಮ್ಮ ಶಿಷ್ಯನ ಗುರುಕಾಣಿಕೆ ಗುರುಗಳೇ, ನಿಮಗೆ ಏನೇ ತೊಂದರೆ ಬಂದರೂ, ನಾನು ಎಲ್ಲೇ ಇರಲಿ, ನೀವು ಫೋನ್ ಮಾಡಿದರೆ ಸಾಕು ನಿಮ್ಮ ತೊಂದರೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆಂದು ಇನ್ಸ್ ಪೆಕ್ಟರ್ ಹೇಳಲು
ನಿಮ್ಮಂತ ಶಿಷ್ಯರನ್ನು ಪಡೆದಿರುವುದು ನಮ್ಮ ಪುಣ್ಯವೆಂಬ‌ ಕೋದಂಡರಾಂ ಮಾತಿಗೆ
ನಿಮ್ಮಂತ‌ ಗುರುಗಳನ್ನು ಪಡೆದಿರುವುದು ನನ್ನ ಫುಣ್ಯ ಗುರುಗಳೇ ನಿಮ್ಮಿಂದ ನಾನು ನಾಲ್ಕು ಅಕ್ಷರ ಕಲಿತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಎಂದಿಗೂ ನನಗೆ ವಿದ್ಯೆ‌ಕಲಿಸಿದ ಗುರುಗಳನ್ನು ಮರೆಯುವುದಿಲ್ಲ. ಹಾಗೆಯೇ ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ಈಗ ನನಗೆ ಬಹಳ ಕೆಲಸವಿದೆ ನಾನಿನ್ನು ಬರುತ್ತೇನೆ ಎಂದಾಗ
ಮನೆಗೆ ಬಂದಿದ್ದೀರಾ ಕಾಫಿ ಕುಡಿದುಕೊಂಡು ಹೋಗಿ ಎಂಬ ಕೋದಂಡರಾಂ ಮಾತಿಗೆ
ನನಗೆ ಇನ್ನೂ ಬಹಳ ಕೆಲಸವಿದೆ, ಆ ಕಿಡ್ನಾಪರ್ ನ ಹಿಡಿದಿದ್ದಾರಾ ಎಂದು ನೋಡಬೇಕು, ನಂತರ ಅವನು ಯಾರೆಂದು ತಿಳಿದು, ಕಾನೂನು ಪ್ರಕಾರ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿ ಗುರುಗಳೇ ಪುನಃ ಕಿಡ್ನಾಪರ್ ಫೋನ್ ಮಾಡಿದರೆ ಬರುತ್ತಿದ್ದೇನೆಂದು ಮಾತ್ರ ಹೇಳಿ, ನಿಮ್ಮ ಮಗಳು ವಾಪಸ್ ಬಂದಿರುವ ವಿಷಯವನ್ನು ಹೇಳಬೇಡಿರಿ ಗುರುಗಳೇ ಎಂದಾಗ
ಆಗಬಹುದು ಸಾರ್ ಎನ್ನುತ್ತಾರೆ ಕೋದಂಡರಾಂ.
ತಕ್ಷಣ ಕಿಡ್ನಾಪರ್ ಫೋನ್ ಮಾಡಿ ಎಲ್ಲಿದ್ದೀರೀ? ಇಷ್ಟೊತ್ತಾದರೂ ಬರಲಿಲ್ಲವೆಂದು ಏರುಧ್ವನಿಯಲ್ಲಿ ಕೇಳಿದಾಗ
ನಾನು ಬರುತ್ತಿದ್ದೇನೆ. ಇಲ್ಲಿ ಟ್ರಾಫಿಕ್ ಜಾಮ್ ಆಗಿದೆಯೆಂದು ಕೋದಂಡರಾಂ ಹೇಳುತ್ತಾರೆ.
ಓಕೆ ಓಕೆ ಬೇಗ ಬನ್ನಿ, ನೀವು ಬಂದು ಹಣ ನೀಡಿದ ತಕ್ಷಣ ನಿಮ್ಮ ಮಗಳನ್ನು ಕರೆದುಕೊಂಡು ಹೋಗಬಹುದೆಂದು ಕಿಡ್ನಾಪರ್ ಹೇಳಿದಾಗ
ನನ್ನ ಮಗಳು ಸೇಫಾಗಿದ್ದಾಳಾ ಅವಳಿಗೇನೂ ಮಾಡಬೇಡ್ರಪ್ಪಾ ಎಂದು ಕೋದಂಡರಾಮ್ ರವರು ನಾಟಕೀಯವಾಗಿ ದುಃಖದ ಧ್ವನಿಯಲ್ಲಿ ಹೇಳಿದಾಗ
ಮಾಸ್ಟ್ರೇ ನೀವೂ ವರಿ ಮಾಡೋದು ಬೇಡಾ ನಮಗೆ ಹಣ ಬೇಕಷ್ಟೇ ನೀವು ಹಣ ಕೊಟ್ಟ ತಕ್ಹಣ ನಿಮ್ಮ ಮಗಳನ್ನು ಕರೆದುಕೊಂಡು ಹೋಗಬಹುದೆಂದು ಕಿಡ್ನಾಪರ್ ಹೇಳಿ ಫೋನ್ ಆಫ್ ಮಾಡುತ್ತಾನೆ.
ಇವನು ಚಾಪೆ ಕೆಳಗೆ ತೂರಿದರೆ ನಮ್ಮ ಇನ್ಲ್ ಪೆಕ್ಟರ್ ರಂಗೋಲಿ ಕೆಳಗೆ ತೂರುತ್ತಾರೆಂಬ ವಿಷಯ ಆ ಮುಠ್ಠಾಳನಿಗೆ ಗೊತ್ತಿಲ್ಲವೆಂದು
ಮುಗುಳ್ನಗೆ ಬೀರಿದಾಗ.
ಅಲ್ಲೇ ಇದ್ದ ಇನ್ಸ್ ಪೆಕ್ಟರ್ ನಗುತ್ತಾ ಗುರುಗಳೇ ನಾವು ಇಂತಹವರಿಗೆ ಚಳ್ಳೆಹಣ್ಣು ತಿನ್ನಿಸದಿದ್ದರೆ ನಾವು ಈ ಇಲಾಖೆಯಲ್ಲಿ ಇದ್ದು ಏನೂ ಪ್ರಯೋಜನ ವಿಲ್ಲವೆಂದು ಹೇಳಿ‌ ತಕ್ಷಣ ಸ್ಟೇಷನ್ ಗೆ ಬಂದು, ಸಹಾಯಕ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಕಿಡ್ನಾಪರ್ ಸಿಕ್ಕಿದ್ನಾ ಎಂದು ಕೇಳಿದಾಗ
ಸಾರ್ ಅವನಿನ್ನೂ ಹಣ ತರುವವರನ್ನು ಕಾದಿದ್ದಾನೆಂದು ಹೇಳಲು
ನೀವೇ ಅವನನ್ನು ಸುತ್ತುವರೆದು ಹಿಡಿದು ತರಬೇಕೆಂದು ಇನ್ಸ್ಪೆಕ್ಟರ್ ಹೇಳಿದಾಗ
ನಾವು ಟ್ರೈ ಮಾಡುತ್ತಿದ್ದೇವೆ ಆದರೂ ಆಗುತ್ತಿಲ್ಲವೆಂದು ಸಹಾಯಕ ಇನ್ಸ್ ಪೆಕ್ಟರ್ ಹೇಳಿದಾಗ
ಒಬ್ಬ ಕ್ರಿಮಿನಲ್ ನ ಹಿಡಿಯಲು ಇಷ್ಟು ಕಷ್ಟವೇನ್ರೀ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಿದಾಗ
ಸಾರ್ ಅವನು ಕೈಯ್ಯಲ್ಲಿ ಗನ್ ಹಿಡಿದುಕೊಂಡೇ ಬಂಡೆಯ ಹಿಂದೆ ಅಡಗಿ ಕುಳಿತಿದ್ದಾನೆ, ನಾವುಗಳು ಹಿಂದಿನಿಂದ ಹೋಗಲು ಬಂಡೆ ಅಡ್ಡ ಇದೆ, ಅವನ ಮುಂದೆ ನಾವೇನಾದರೂ ಹೋದರೆ ನಮ್ಮ ಮೇಲೇ ಶೂಟ್ ಮಾಡಿದರೆ ಎಂದು ಸ್ವಲ್ಪ ಹಿಂದೇಟು ಹಾಕುತ್ತಿದ್ದೇವೆಂಬ ಸಹಾಯಕ ಇನ್ಸ್ ಪೆಕ್ಟರ್ ಮಾತಿಗೆ
ನಿಮ್ಮ ಕೈಲಿ ಆಗದಿದ್ದರೆ ನಾನೇ ಬರಲಾ ಎಂದು ಇನ್ಸ್‌ಪೆಕ್ಟರ್ ಕೇಳಲು
ಬೇಡಾ ಸಾರ್ ನಾವೇ ಅವನನ್ನು ಹಿಡಿದು ತರುತ್ತೇವೆಂದು ಹೇಳಿ ಸಹಾಯಕ ಇನ್ಸ್ ಪೆಕ್ಟರ್ ಫೋನ್ ಆಫ್ ಮಾಡುತ್ತಾರೆ
ಸ್ವಲ್ಪ ಹೊತ್ತಿನ ನಂತರ ಕಿಡ್ನಾಪರ್ ಪುನಃ ಕೋದಂಡರಾಂ ಗೆ ಫೋನ್ ಮಾಡಿ ನೀವು ಇಷ್ಟೊತ್ತಾದರೂ ಹಣ ತಂದುಕೊಡಲಿಲ್ಲ. ನಿಮಗೆ ನೀಡಿದ ಗಡುವು ಮುಗಿದಿದೆ, ನಾನು ನಿಮ್ಮ ಮಗಳನ್ನು ಉಳಿಸುವುದಿಲ್ಲವೆಂದು ಹೇಳಿದಾಗ
ಅಯ್ಯೋ ನನ್ನ ಮಗಳಿಗೆ ಏನೂ ಮಾಡಬೇಡಪ್ಪಾ ಇನ್ನು ಅರ್ಧಗಂಟೆಯಲ್ಲಿ ಬರುತ್ತೇನೆಂದು ಕೋದಂಡರಾಂ ‌ಹೇಳಲು
ನಿಮಗೆ ಅರ್ಧಗಂಟೆ ಮಾತ್ರ ಟೈಮ್ ಕೊಡುತ್ತೇನೆ ಹಣ ತರದೇ ಇದ್ದರೆ ಒಂದು ಗಂಟೆಯೊಳಗೆ ಇದೇ ಜಾಗದಲ್ಲಿ ನಿಮ್ಮ ಮಗಳ‌ ಶವವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆಂದು ಹೇಳಿ ಫೋನ್ ಆಫ್ ಮಾಡಿ, ಅರ್ಧ ಗಂಟೆಯವರೆಗೂ ಅಲ್ಲೇ ಕುಳಿತಿರುತ್ತಾನೆ
ಮುಕ್ಕಾಲು ಗಂಟೆಯಾದರೂ ಕೋದಂಡರಾಂ ‌ರವರ ಸುಳಿವು ಇಲ್ಲದ್ದನ್ನು ಕಂಡು ಕೋಪಗೊಂಡ ಕಿಡ್ನಾಪರ್ ಇವರಿಗೆ ಹೆದರಿಸಿ ಪ್ರಯೋಜನವಿಲ್ಲ, ಇವರ ಮಗಳಿಗೆ ಚಿತ್ರ ಹಿಂಸೆ ಕೊಡುವುದನ್ನು ವಿಡಿಯೋ ಮೂಲಕ ಕಳುಹಿಸಿದರೆ ಆಗ ಹೆದರಿಕೊಂಡು ಹಣ ನೀಡುತ್ತಾರೆಂದುಕೊಂಡು, ಆಶಾಳನ್ನು ಕಟ್ಟಿಹಾಕಿದ್ದಲ್ಲಿಗೆ ಬರಲು ಕಾರಿನತ್ತ ಹೆಜ್ಜೆ ಹಾಕುತ್ತಿರುವ ಸಮಯದಲ್ಲಿ
ಸಹಾಯಕ ಇನ್ಸ್ ಪೆಕ್ಟರ್ ‌ನಿಂತುಕೋ ಬದ್ಮಾಶ್ ಎಂದು ಕೂಗಿದ ತಕ್ಷಣ
ಕಿಡ್ನಾಪರ್ ಹಿಂದಿರುಗಿ ನೋಡಿ ತನ್ನ ಹಿಂದೆ ಇಪ್ಪತ್ತು ಜನ ಪೋಲೀಸ್ ರವರು ಇರುವುದನ್ನು ಕಂಡು ಭಯಭೀತನಾಗಿ ಕಾರು ಇದ್ದಲ್ಲಿಗೆ ಓಡಲು ಪ್ರಯತ್ನಿಸಿದಾಗ
ಲೇಯ್ ಅಲ್ಲೇ ನಿಂತುಕೊಳ್ಳೋ ಇಲ್ಲದಿದ್ದರೆ ಶೂಟ್‌ ಮಾಡುತ್ತೇನೆಂದು ಸಹಾಯಕ ‌ಇನ್ಸ್ ಪೆಕ್ಟರ್ ಹೇಳಿದರೂ ಕಿಡ್ನಾಪರ್ ಅಲ್ಲಿ ನಿಲ್ಲದೆ ಓಡುತ್ತಿರುವಾಗ
ಸಹಾಯಕ ಇನ್ಸ್ ಪೆಕ್ಟರ್ ನೇರವಾಗಿ ಕಿಡ್ನಾಪರ್ ಗೆ ಶೂಟ್ ಮಾಡುತ್ತಾರೆ. ಶೂಟ್ ಮಾಡಿದಾಗ ಅವರ ಗನ್ ನಿಂದ ಹಾರಿಬಂದ ಗುಂಡು ನೇರವಾಗಿ ‌ಕಿಡ್ನಾಪರ್ ಕಾಲಿಗೆ ಬಂದು ಬಡಿದು ರಕ್ತ ಚೆಲ್ಲಿದಾಗ ನೋವು ತಡೆಯಲಾರದೆ
ಅಯ್ಯೋ ಅಮ್ಮಾ ಎನ್ನುತ್ತಾ, ಕುಂಟುತ್ತಲೇ ತನ್ನ ಕಾರಿನತ್ತ‌ ಹೋಗುತ್ತಿರುವಾಗ
ಸಹಾಯಕ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ‌ಓಡಿ ಹೋಗಿ ಅವನನ್ನು ಹಿಡಿದು ಅವನ ಕಾಲಿಗೆ ಬಟ್ಟೆ ಕಟ್ಟಿ
ವಾಹನದಲ್ಲಿ ಕುಳ್ಳಿರಿಸಿಕೊಂಡು ಸೀದಾ ಆಸ್ಪತ್ರೆಗೆ ಬಂದು ಅಡ್ಮಿಟ್ ಮಾಡಿದ ನಂತರ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ನಡೆದ‌ ಘಟನೆ ಹೇಳುತ್ತಾರೆ
ಒಳ್ಳೆಯ ಕೆಲಸ ಮಾಡಿದ್ರೀ ನಾನೀಗಲೇ‌ ಬರುತ್ತೇನೆಂದು ಹೇಳಿ ಸಿವಿಲ್ ಡ್ರೆಸ್ ನಲ್ಲಿಯೇ ಸೀದಾ ಆಸ್ಪತ್ರೆಗೆ ಬಂದು ಕಿಡ್ನಾಪರ್ ನ ಅಡ್ಮಿಟ್‌ ಮಾಡಿದ್ದ ವಾರ್ಡ್ ನಂಬರ್ ತಿಳಿದು ವಾರ್ಡಿನೊಳಕ್ಕೆ ಕಾಲಿಟ್ಟ ತಕ್ಷಣ
ನನ್ನನ್ನು ಇಲ್ಲಿಗೆ ಸೇರಿಸಿದ್ದಾರೆಂದು ನಿಮಗೆ ಹೇಗೆ ಗೊತ್ತಾಯ್ತು? ಯುವತಿ ಅಲ್ಲೇ ಇದ್ದಾಳಾ? ನನಗೆ ಹಣ ಕೊಡದೆ ಆ ಮುದುಕ ಮೋಸ‌ ಮಾಡಿಬಿಟ್ಟ‌ ಎಂದ ತಕ್ಷಣ
ತನ್ನ ಗುರುಗಳನ್ನು ಏಕವಚನದಿಂದ ಕರೆದಿದ್ದನ್ನು ಕಂಡು ಇನ್ಸ್ ಪೆಕ್ಟರ್ ಗೆ ತಡೆಯಲಾರದ‌ ಕೋಪ ಬಂದು ಅವನಿದ್ದ ಸ್ಥಿತಿಯನ್ನೂ ನೋಡದೆ, ಕಪಾಳಕ್ಕೆ ಒಂದು ಹೊಡೆಯುತ್ತಾರೆ
ಅಯ್ಯಯ್ಯೋ ಅಮ್ಮಮ್ಮಾ ನನಗೇಕೆ ಹೊಡೆಯುತ್ತಿದ್ದೀಯಾ? ನಿನಗೆ ಹಣ ಕೊಡಲಿಲ್ಲವೆಂದು ಕೋಪವಾ? ಅವರೇ ಹಣ ಕೊಡದಿದ್ದ ಮೇಲೆ ನಿಮಗೆ ಹೇಗೆ ಕೊಡಲಿ ಎಂದು ಅಳುತ್ತಾ ಕೇಳಿದಾಗ
ನಿನ್ನ ಹಣ ಯಾರಿಗೆ ಬೇಕೋ‌ ಬದ್ಮಾಶ್ ನಾನು ಯಾರೆಂದು ತಿಳಿದಿದ್ದೀಯಾ ಎನ್ನುತ್ತಾ ತಮ್ಮ ಐಡಿ ಕಾರ್ಡ್ ತೋರಿಸಿದಾಗ
ಕಿಡ್ನಾಪರ್ ಗರಬಡಿದವನಂತಾಗಿ, ಸಾ,,,,ಸಾ,,,, ಸಾರ್ ನೀ,,,,ನೀ,,,,ನೀವು ಪೋ,,,,ಪೋ,,,,ಪೋಲೀಸ್ ಇ,,,ಇ,,,ಇನ್ಸ್ ಪೆಕ್ಟರ್ ಎಂದಾಗ
ಹೌದು ಕಣೋ ಬದ್ಮಾಶ್ ನಿಮ್ಮಂತಹವರನ್ನು ಹಿಡಿಯಲು ಆಡಿದ ನಾಟಕ ಎಂದಾಗ
ಅಯ್ಯೋ ನಿಮ್ಮನ್ನು ನಂಬಿ ನಾನು ಹಾಳಾಗಿಹೋದೆ ಎಂದು ಮರುಗುತ್ತಾನೆ.

ಮುಂದುವರೆಯುತ್ತದೆ

ಈ ಸಂಚಿಕೆಯಲ್ಲಿ ತಿಳಿದು ಬರುವ ಮುಖ್ಯ ವಾದ ಅಂಶನೇನೆಂದರೆ ಮಕ್ಕಳಿಗೆ ತೊಂದರೆಯಾಗದಂತೆ ಅವರಿಗೆ ಬುದ್ದಿ ಬರುವವರೆಗೆ ಹೆತ್ತವರು ಎಚ್ಚರವಹಿಸಿದ್ದರೂ ಕೂಡಾ, ಕೆಲವೊಮ್ಮೆ ಮಕ್ಕಳು, ಹೆತ್ತವರ ಮಾತು ಕೇಳದೆ ಅಪಾಯಕ್ಕೆ ಸಿಲುಕುತ್ತಾರೆ. ಆಗ ಹೆತ್ತವರಿಗೆ‌ ಸಹಿಸಲಾರದ‌ ದುಃಖವಾಗಿ, ಮಕ್ಕಳ‌ ಅಜಾಗರುಕತೆಯನ್ನು ನಿಂದಿಸದೆ ಅವರ ನೋವನ್ನು ಹೋಗಲಾಡಿಸಲು ಪ್ರಯತ್ನಿಸಬೇಕಾಗುತ್ತದೆ. ಕೆಲವು ಘಟನೆಗಳು ಸಾಮಾನ್ಯವಾಗಿದ್ದರೂ, ಅದು ಮಕ್ಕಳ‌ ಉದಾಸೀನತೆಯಿಂದ ನಡೆದಿರುತ್ತದೆ. ಮಕ್ಕಳು ಸ್ವಂತ ವಾಹನದಲ್ಲಿ ಹೋಗಬೇಕಾದರೆ ಅತಿ ವೇಗವಾಗಿ ಹೋಗಬೇಡಾ ಅಪಾಯವಾಗುತ್ತದೆಂದು ಹೆತ್ತವರು ಹೇಳಿದರೂ ಕೂಡಾ ಅವರ ಮಾತನ್ನು ನಿರ್ಲಕ್ಷಿಸಿ ವೇಗವಾಗಿ ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಂಡರೆ ಅಥವಾ ಗಂಭೀರ ಗಾಯಗಳಾದಾಗ, ಹೆತ್ತ ಕರುಳು ಆ ನೋವನ್ನು ಸಹಿಸಿಕೊಳ್ಳಲಾಗುವುದಿಲ್ಲ.
ಅಕಸ್ಮಾತ್ ಯಾರಾದರೂ ತಮ್ಮ ಆತ್ಮೀಯರನ್ನು ಕೆಟ್ಟದಾಗಿ ನಿಂದಿಸುವುದನ್ನು ಯಾರೂ ಸಹಿಸುವುದಿಲ್ಲ.