-
ಶೈಲಪುತ್ರಿ
ಈ ಒಂಬತ್ತು ದಿನಗಳಲ್ಲಿ ಮಾತೃದೇವತೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ನಾರಿಶಕ್ತಿಯ ಕುರುಹಾಗಿದೆ. ನವರಾತ್ರಿಯ ಮೊದಲ ದಿನವನ್ನು ತಾಯಿ ಶೈಲಪುತ್ರಿಗೆ ಸಮರ್ಪಿಸಲಾಗುತ್ತದೆ. ಶೈಲಪುತ್ರಿ ದೇವಿಯ ಆರಾಧನೆಯು ನವರಾತ್ರಿಯ ಮೊದಲ ದಿನದಂದು ಮಾತ್ರವಲ್ಲ, ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಮುಖ್ಯವಾಗಿ ಮಾಡಬೇಕು. ಈಕೆಯ ಆರಾಧನೆಯು ನಮಗೆ ತಾಳ್ಮೆ, ಧೈರ್ಯ ಮತ್ತು ಶಾಂತಿಯ ಮಾರ್ಗವನ್ನು ತೋರಿಸುತ್ತಾಳೆ. ಆಕೆಯ ಅನುಗ್ರಹದಿಂದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಮತ್ತು ತೃಪ್ತಿಯನ್ನು ಪಡೆಯುತ್ತಾನೆ. ಶೈಲಪುತ್ರಿ ದೇವಿಯ ಹೆಸರು ಸ್ವತಃ ಶಕ್ತಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ.ಪ್ರಥಮ ದಿನದ ಉಪಾಸನೆಯಲ್ಲಿ ಸಾಧಕರು ತಮ್ಮ ಮನವನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರು ಯೋಗ ಸಾಧನೆ ಪ್ರಾರಂಭವಾಗುತ್ತದೆ. ಹಾಗಾದರೆ ದೇವಿ ಶೈಲಿ ಪುತ್ರಿಗೆ ವಂದಿಸುತ್ತಾ ಕವನ ಓದೋಣವೆ…..
- ಪ್ರಥಮ ಪೂಜಿತಳು
ಸುಂದರ ಶರನ್ನವರಾತ್ರಿಯ
ಪ್ರಥಮ ಪೂಜಿತಳು ಶಿವಸತಿ
ವೃಷಭಾರೂಢಳು ಶೈಲಪುತ್ರಿ
ಧರೆಗೆ ಬಂದಿಹಳು ದೇವಿ
ಪೂಜೆಗೊಳ್ಳಲು//
ಶ್ವೇತವಸ್ತೃಧಾರಿಣಿ ಮಾತೆ
ಜಾಜಿ ಮಲ್ಲಿಗೆ ಪುಷ್ಪ ಪ್ರಿಯೆ
ಶಾಂತಚಿತ್ತದ ಶಾಂತಿಪ್ರಿಯ
ಅಂಬೆ ಮಾ ಮುಗುಳ್ನಗುತ
ಬಂದಿಹಳು ಮನೆಗೆ//
ಉನ್ನತ ಅಧ್ಯಾತ್ಮ ಜಾಗೃತಿಗಾಗಿ
ಸಾಧಕರು ಸಾಧನೆಗೈವರು
ಮೌನ ಧ್ಯಾನದಿ ಅರಿವರು
ಮೂಲಾಧಾರಚಕ್ರದಿ
ನೆಲೆಗೊಳ್ಳುವರು//
ಹರಸಮ್ಮ ತಾಯೆ ನಮ್ಮನು
ಆಶೀರ್ವದಿಸು ರೈತರನು
ಉದ್ಧರಿಸು ದೇಶವನು
ಸುಖಸಮೃದ್ಧಿ ನೀಡಮ್ಮ
ನಮನ ನಿನಗಮ್ಮ//
ಸೌ. ಅನ್ನಪೂರ್ಣ ಸು ಸಕ್ರೋಜಿ ಪುಣೆ
-
ಬಾಪು ಕಂಡಭಾರತ
ನಮ್ಮ ನಮನಗಳು ಹುತಾತ್ಮರಿಗೆ
ನಮ್ಮ ವಂದನೆಗಳು ಮಹಾತ್ಮರಿಗೆ
ನಮ್ಮ ಪ್ರಣಾಮ ಧರ್ಮಾತ್ಮರಿಗೆ
ರಾಷ್ಟ್ರಪಿತನೆಂದ ರಾಷ್ಟ್ರಧರ್ಮ
ಜಾತಿ ಧರ್ಮಗಳಿಗಿಂತ ಮಿಗಿಲು
ಸತ್ಯಅಹಿಂಸೆ ದಾರಿಯಲಿ ಸಾಗಲು
ಬಾಪೂಜಿ ಕಂಡ ಭಾರತ ಏಳಿಗೆಗೆ
ಸರ್ವತೋಮುಖ ಬೆಳವಣಿಗೆಗೆ
ಸರ್ವೋದಯದ ಸಮಾನತೆಗೆ
ದೇಶಭಕ್ತ ಮೋಹನದಾಸ ಗಾಂಧಿ
ಸ್ವಾತಂತ್ರ್ಯ ಹೋರಾಟಕೆ ನಾಂದಿ
ಸತ್ಯಾಗ್ರಹವು ಸುವರ್ಣ ಸಂಧಿ
ಮಾಡು ಇಲ್ಲವೆ ಮಡಿ ಕಿಡಿ ನುಡಿಗೆ
ಶಾಂತಿಧೂತನಾದೆ ಹೊಡಿ ಬಡಿಗೆ
ಭಾರತ ವಿಶ್ವ ಗುರುವಾಗಲು ನಡಿಗೆ
ಕಾಯಕವೇ ಕೈಲಾಸವೆಂದವರು
ಬಸವಣ್ಣನವರ ತತ್ವ ಒಪ್ಪಿದವರು
ನಿತ್ಯ ಸತ್ಯವನಾಚರಿಸಿದವರು
ಶರಣರಕರುನಾಡಿನಕಲ್ಯಾಣರಾಜ್ಯ
ರಾಮಭಕ್ತಬಾಪೂಜಿರಾಮರಾಜ್ಯ
ಬೇಕೆಮಗೆಸತ್ಯಶಾಂತಿಯಸ್ವರಾಜ್ಯ
ಬಯಸಿದರುಎಲ್ಲರಲಿಸೌಹಾರ್ದತೆ
ಸಾಧಿಸಿದರು ಜನರಲಿ ಭಾವೈಕ್ಯತೆ
ತೊಲಗಿಸಿದರು ಅಸ್ಪೃಶ್ಯತೆ
ಗಾಂಧೀಜಿ ಕಂಡ ಕನಸು ಅಂದು
ನನಸಾಗಿಸೋಣ ಬನ್ನಿ ಇಂದು
ಒಕ್ಕಟ್ಟಿನಲಿ ಬಲವಿದೆ ಎಂದೆಂದೂ
– ಅನ್ನಪೂರ್ಣ ಸು ಸಕ್ರೋಜಿ ಪುಣೆ
-
ಮಹಾತ್ಮ ಗಾಂಧೀಜಿ
“”””””””””””””””””””
ನಮ್ಮ ದೇಶದ ರಾಷ್ಟ್ರಪಿತ
ಭಾರಾತಾಂಬೆಯ ಕೀರ್ತಿ ಪುರುಷ
ಮಕ್ಕಳ ಅಕ್ಕರೆಯ ಬಾಪೂಜೀ
ಶಾಂತಿ ಸಮರಸದ ಏಳ್ಗೆಗಾಗಿ
ರಾಮರಾಜ್ಯದ ಕನಸಿನ ಬಾಳ್ಗೆಗಾಗಿ
ಸತ್ಯವ ಉಳಿಸಿ ಮಿಥ್ಯವ ಅಳಿಸಿ
ದಂಡಿಯಾತ್ರೆ ಸತ್ಯಾಗ್ರಹ ಚಳುವಳಿ ನೇತಾರ
ಸ್ವರ್ಥವ ತ್ಯಜಿಸಿ ದೇಶಸೇವೆಯೇ ಉಸಿರಾಗಿ
ಸರ್ವಜನ ಮನದಲ್ಲೂ ನೆಲಸಿಹ ಮಹಾತ್ಮ
ಸರಳ ಸೌಜನ್ಯದ ಉರೂಗೋಲಿನ ನಡಿಗೆ
ತುಂಡುಬಟ್ಟೆಯ ಉಡುಗೆ
ಸಮಯ ಪಾಲನೆಯ ನಿಷ್ಠಾವಂತ
ಬಯಸಿ ಸರ್ವರ ಶಾಂತಿ ದೇಶದ ಉನ್ನತಿ
ಆಂಗ್ಲರ ದಬ್ಬಾಳಿಕೆಯಿಂದ ದೇಶ ಮುಕ್ತಗೊಳಿಸಿ
ಭಾರತದ ಜಯಧ್ವನಿ ಮೊಳಗಿಸಿದ ಧೀಮಂತ
– Yashoda ramakrishna
-
ಗಾಂಧಿ ಬೇಡ, ಬೇಡ ಗಾಂಧಿ !
ನಿತ್ಯ ಜೀವನದ
ಸತ್ಯಪ್ರತಿಪಾದಕ,
ಲೋಕಪೂಜಿತ ಬಾಪು
ಲೋಕಪ್ರಭಾವಿತ,
ಕನ್ನಡಕದಲಿ ಕಾಣುವ ಗಾಂಧಿ,
ತತ್ತ್ವ ದೃಷ್ಟಿಗೆ ಕಾಣದೆ ಕುರುಡರಾದರೆ ಜನಮಂದಿ |
ಗುರುದೇವ ಕರೆದು ಸಾರಿದರು ಮಹಾತ್ಮ,
ನೇತಾಜಿ ಗೌರವಿಸಿ ರಾಷ್ಟ್ರಪಿತ ಸನ್ಮಾನ,
ಗಾಂಧಿ ತೊಟ್ಟ ಅರಿವೆ ವಸ್ತ್ರ,
ಉಪದೇಶಾಮೃತ ಸೀಮಿತ ಶಸ್ತ್ರ,
ಬಾಪುಪೂಜಿತ ಮಂತ್ರ ದಂಡ,
ಭಾರತೀಯರು
ಅರಿಯದೆ ಹೋಗಿ ಆದರೆ ದಂಡ ?
ಹಿಂದೆ ಓಡಾಡಿದ ಮಾಂಸದ ಮುದ್ದೆ,
ನರನಾಡಿಗಳಲಿ ಬೆಳೆಸಿದ್ದು ಸ್ವಾಭಿಮಾನದಿ ಸ್ವಾತಂತ್ರ್ಯದ ಗದ್ದೆ,
ಬಲುತೂಕವಾಯಿತು ನಮಗಿಂದು ಗಾಂಧಿಚಿಂತನೆಯ ಮದ್ದೆ?
ಎಚ್ಚೆತ್ತುಕೊಳ್ಳದ ಜನ ಗೊರಕೆಹೊಡೆದು ಮಾಡುತ್ತಿಹರು ನಿದ್ದೆ |
ಮೇಲೋಗರದಿ ಅಹಿಂಸೆಯ ದಂಡ,
ನಿತ್ಯ ಹಿಂಸೆಯಲಿ ಕುಯ್ಯುತ್ತಿಹರು ರುಂಡ ಮುಂಡ |
ನಾಯಕರಾಗಲು
ಸತ್ಯಾಗ್ರಹದ ಬ್ರಹ್ಮಾಸ್ತ್ರ,
ಜನರೆದುರು ತೊಡುವರು ನಡೆನುಡಿಯಲಿ ಗಾಂಧಿವಸ್ತ್ರ,
ನೇತೃತ್ವ ವಹಿಸಲು ಗಾಂಧಿ ಟೋಪಿ,
ನೇತರರಾಗಿ ಬೆಳೆದು ಭ್ರಷ್ಟಾಚಾರ ಮಾಡುತ ಆದನೆ ನಾಯಕ ಪಾಪಿ !
ಗ್ರಾಮೋದ್ಧಾರಕೆ ಬಳಕೆ ಗಾಂಧಿಗಿರಿ,
ಮತಹಾಕಲು ಹಣಹೆಂಡನೀಡಿ ದಾದಗಿರಿ,
ಊರಚೌಕದಮಧ್ಯೆ ಗಾಂಧಿ ನಿಂತ ಪುತ್ಥಳಿ,
ಯಾವ ಆದರ್ಶತೆಯಲಿ ಘನತೆ ಗೌರವ ಉಳಿಸಲಿ |
ಗಾಂಧಿ ಬೇಕು ಬೇಡದಲಿ ಸತ್ತು ಬಿದ್ದ,
ಗಾಂಧಿ ಸರಳತೆ ಸಭ್ಯತೆಯಲಿ ಮತ್ತೆ ಗುರುತಾಗಿ ಎದ್ದ,
ಗಾಂಧಿ ದೇಶೋದ್ಧಾರಕೆ ನಾಂದಿ,
ಇವನರ್ಥಮಾಡಿ ಕೊಂಡವರೆಷ್ಟು ಮಂದಿ?
ಗಾಂಧಿ ಬೇಡ ….. ಬೇಡ ಗಾಂಧಿ ?
✍️ಮುಕ್ತ ಮನಸು
-
ರಾಮರಾಜ್ಯದ ಕನಸು
ರಾಮ ರಾಜ್ಯದ ಕನಸು ಹಾಗೇ
ಉಳಿಯಿತು ಗಾಂಧಿ ಮಹಾತ್ಮ
ರಾಶಿ ರಾಶಿ ಭರವಸೆಗೆ ಬಳಲಿ
ರೋಸಿ ಹೋಗಿದೆ ಅಂತರಾತ್ಮ!
ರಾವಣಾದಿ ರಾಕ್ಷಸರು
ಮೇಲು ಗೈ ಸಾಧಿಸಿಹರು,
ಜರಾಸಂಧನಂತಹ ಜನರು
ಜಗತ್ತಿಗೆ ಮುಳ್ಳಾಗಿಹರು,
ಕೀಚಕನ ಕುಚುಕು ಗೆಳೆಯರು
ಕಿರಾತಕ ಕೃತ್ಯದಿ ನಿರಂತರ ನಿರತರು,
ಯಮ ಕಿಂಕರರ ಅನುಯಾಯಿಗಳೋ
ಯದ್ವಾತದ್ವಾ ಅಮಾನುಷ ಪುರುಷರು!
ತನು ಮನ ಧನ ಸ್ವಚ್ಛ ಮಾಡುವ ಬದಲು
ತುಚ್ಛರಾಗಿ ತುಷ್ಟೀಕರಿಸಿ
ಅಸಮತೆಯ ಅಸ್ಮಿತೆಗೆ ಪುಷ್ಠಿ ನೀಡಿಹರು,
ಸರ್ವೋದಯವನು ಬದಿಗಿಟ್ಟು
ಸ್ವಾರ್ಥಕ್ಕೆ ಆಸ್ತಿ ಆದಾಯದ ಗಾತ್ರ
ದ್ವಿಗುಣ ತ್ರಿಗುಣ ಮಾಡಿ ಕೊಂಡಿಹರು,
ಸಮನ್ವಯತೆಯನ್ನು ಮೂಲೆಗೆ ತಳ್ಳಿ
ಭ್ರಾತೃತ್ವದ ಬುಡಕ್ಕೆ ಬೆಂಕಿ ಹಚ್ಚಿ
ತೆರೆ ಮರೆಯಲಿ ನಿಂತು ಗಹಗಹಿಸಿ ನಗುತಿಹರು!?
ಸತ್ಯ ಶಾಂತಿ ಅಹಿಂಸಾ ತತ್ವವನ್ನು
ಗಾಳಿಗೆ ತೂರಿ, ಗಾಳಕ್ಕೆ ಸಿಲುಕಿಸಿ
ದ್ವೇಷ, ಅಸೂಯೆ, ಕೋಮು ದಳ್ಳುರಿಯ
ವಿಷ ಬೀಜ ಬಿತ್ತಿ ಪೋಷಿಸುವ
ಸ್ವತಂತ್ರ ಭಾರತದ ಭ್ರಷ್ಟಾಚಾರದ
ಅಕ್ಟೋಪಸ್ ಗಳಿವರು!
ಸರಳ ಜೀವನ ಉದಾತ್ತ ಚಿಂತನದ
ಆದರ್ಶಗಳನ್ನು ಒಸಗಿ ಹಾಕಿ
ಆಡಂಬರದ ಆಡಂಬೊಲದಿ
ಮೆರೆಯುತಿಹ ದುರುಳ ದುರ್ಯೋಧನ
ದುಶ್ಯಾಸನರ ಪ್ರತಿಕೃತಿಗಳಿವರು!?
ರಾಮ ರಾಜ್ಯದ ಕನಸು ಹಾಗೇ….
ಉಳಿಯಿತು ಗಾಂಧಿ ಮಹಾತ್ಮ
ದಂಡಿ ದಂಡಿ ಭರವಸೆಗಳಿಗೆ…
ಬಳಲಿ ಬೆಂಡಾಗಿದೆ ಅಂತರಾತ್ಮ!?
******************
ಮಹಾಂತೇಶ್.ಬಿ.ನಿಟ್ಟೂರು,
ದಾವಣಗೆರೆ.
-
ಕಾಕ- ಪಾಪ-ಪಿತೃಗಳು
——————
ಪತ್ರ ಬರೆಯದೆ, ಚಿತ್ರ ಇಳಿಸದೆ,ವಿಚಿತ್ರ ಭಾವ ಅಭಿವ್ಯಕ್ತ ಪಡಿಸದೆ
ಬರೀ ಶ್ರದ್ಧೇಯಿಂದಲೇ ಪಿತೃಗಳ ಧರೆಗೆ ಕರೆಸಿ ,ನಮಿಸಿ, ಅವರನ್ನ ಹಿಡಿಯನ್ನವಿಟ್ಟು
ನಮಿಸಿದೊಡೆ …
ನಿರ್ಮೋಹಿ ಕಾಕಗಳು ತಮ್ಮ ಬಂಧುಗಳೊಂದಿಗೆ ಬಂದು ತಾವುಂಡು ಹರಿಸುವವು.
ಇಟ್ಟ ಶ್ರದ್ಧೆಗೆ ಪೂರ್ಣ.ಕರುಣಿಸುವವು.
ಇಡೀ ಮೈ ,ಮನಸ್ಸು ಮನೆಗಳಾದಿಗಳಲಿ ಅಗಣಿತ ಶಾಂತಿ ನೆಮ್ಮದಿಯ ತರಿಸುವವು.
ಬಡ ಜನರ ಕರೆಸಿ ಹಿಡಿ ಅನ್ನ ಉಣಿಸಿ,ಕೊಡಿಸಿದರೆ ಹೊಸ ವಸನ ವಸ್ತ್ರಗಳಾದಿ ಮಡಿಮನಸ್ಸಿನಿಂದ ನಮ್ಮ ಪಿತೃಗಳಾದಿಗಳ ಸಹೀತ ಹರಿ ಹರ ಬಮ್ಮ ಮತ್ತವರ ಸತಿಯರಾಗಮಿಸಿ,
ಘಳಿಸಿರುವ ಪುಣ್ಯ. ದ್ವಿಗುಣ ಗೊಳಿಸುವರು.
ಹೊಸ ಪಾಪ ಮಾಡುವುದಕೆ ನಿರ್ಭಂಧ ಹೇರುವರು.ಷಡ್ ವರ್ಗಗಳಿಗೆ ಮುಕುತಿಯ ನೀಡುವರು.
*ಪಿತೃ ಸ್ಮರಣೆಯ ಪರ್ವವಿದು* ಸ್ಮರಿಸಬೇಕೆಲ್ಲರು. ಎಲ್ಲರನು ಪೂಣ್ಯ ಪ್ರಾಪ್ತಿಯ ಸಹೀತ ಸಂಚಯ ಪಾಪವನು ಕಳೆಯಲು.
ಪಾಪ ಕಳೆಯದಿದ್ದರೂ ಹೊಸ ಪಾಪ. ತಗುಲದಂತೆ ಸದ್ಬುದ್ಧಿ ಪಡೆಯಲು.
*ಪಿತೃಪರ್ವದ ಆಚರಣೆ ಮಾಡಬೇಕೆಲ್ಲರು*
ಪ್ರೊ.ಪ್ರವೀಣ. ವಿ.ಕುಲಕರ್ಣಿ.
ಬಿದಿಗೆಚಂದ್ರ✒️
ಕಲಬುರಗಿ/ ಜಮಖಂಡಿ
(ಆತ್ಮೀಯರೇ ಇದೇ ಕೇವಲ ನನ್ನ ವೈಯಕ್ತಿಕ ಅಭಿವ್ಯಕ್ತಿ ಮಾತ್ರ)
ಇದೆಲ್ಲಾ ಮಾಡದಿದ್ದರೆ ಜೀವನ ವ್ಯರ್ಥ.12ರ ಒಳಗೆ ಆಡಿದ ಆಟಗಳು.18ರ.ಒಳಗೆಕಲಿಯದ.ವಿದ್ಯೆ.28ರ ಒಳಗೆ ಮಾಡಿದ ಉದ್ಯೋಗ.34ರ ಒಳಗೆ ಉಳಿದ ಮದುವೆ.40ರ ಒಳಗೆ ಪಡೆಯದಸಂತಾನ.48ರ ಒಳಗೆ ಗಳಿಸಿದ ಸಂಪತ್ತು.56ರ ಒಳಗೆ ನೋಡದ ತಾಣಗಳು.64ರ ಒಳಗೆ ಮಾಡಿದ ದಾನ ಧರ್ಮ ಗಳು.72ರ ಒಳಗೆ ಸಿಗದ ಕೀರ್ತಿ.80ರ ಒಳಗೆ ಬಾರದ ಮರಣ.
8zh8e4