ಹತ್ತು ಸುತ್ತು ಒಂದು ಮುತ್ತು ಒಂದು ಅವಲೋಕನ…..

ಸಂಜಯ ಕುರಣೆಯವರು ಬೆಳಗಾವಿ ಜಿಲ್ಲೆಯ ಸಾಹಿತಿಗಳಲ್ಲಿ ಸಹ ಒಬ್ಬರು. ಸಾಹಿತ್ಯದ ವಿವಿಧ ಬಗೆಯ ರೀತಿಯಲ್ಲಿ ಸಾಹಿತ್ಯ ರಚನೆ ಮಾಡಿರುವುದು ಬಹಳ ವಿಶೇಷವಾದದು. ಪ್ರತಿಯೊಂದು ವಿಷಯ ಬಗ್ಗೆ ಅಧ್ಯಯನ ಮಾಡಿ ತಮ್ಮ ಅಂತರಾಳದಿಂದ ಬರುವ ಪ್ರತಿಯೊಂದು ಶಬ್ದವೂ ಮನ ತಟ್ಟಿದೆ ಕೂಡ.
ಪ್ರತಿಯೊಂದು ಅಕ್ಷರ ಸಾವಿರ ಕಥೆ ಹೇಳುತ್ತದೆ ದಾರಿಗೆ ದಾರಿಯಾಗುತ್ತದೆ ತಪ್ಪುಗಳ ತಿದ್ದುವ ದೀವಿಗೆಯಾಗುತ್ತದೆ
ಸಾಹಿತ್ಯ ಕಸದ ತೊಟ್ಟಿಯಲ್ಲ. ಸದಾ ಬೆಳಗುತ್ತಿರುವ ನಂದಾದೀಪ , ಶಿಕ್ಷಕರಾಗಿ ಅದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ ಇದಕ್ಕೆ ಸೂಕ್ತ ವೃಕ್ತಿ ಸಂಜಯ ಕುರಣೆಯವರು. ಈಗ ಮತ್ತೊಂದು ಕೃತಿ ಹತ್ತು ಸುತ್ತು ಒಂದು ಮುತ್ತು ಕೃತಿ ಅರ್ಥಪೂರ್ಣ ಹಾಗೂ ವೈವಿಧ್ಯತೆಯಿಂದ ಕೂಡಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾ ಪೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಶತಮಾನದ ಇತಿಹಾಸ ಹೊಂದಿದೆ 1905 ರಲ್ಲಿ ಪ್ರಾರಂಭವಾದ ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ದೇಶದ ಉತ್ತಮ ಪ್ರಜೆಯಾಗಿ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದೆ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಶಾಲೆಗೆ ಹಾಗೂ ಗ್ರಾಮಕ್ಕೆ ಹೆಸರು ತಂದಿದ್ದಾರೆ.
10 ಗಂಟೆ 15 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಎಲ್ಲ ವಿದ್ಯಾರ್ಥಿಗಳು ವಿಭಾಗವಾರು ಸರಿಯಾಗಿ ನಿಂತು ಪ್ರಾರ್ಥನೆ ಗಾಯತ್ರಿ ಮಂತ್ರ ನಾಡಗೀತೆ ಪಂಚಾಂಗ ಸುದ್ಧಿ ರಾಷ್ಟ ಗೀತೆ ನಾಣ್ಣುಡಿ ಗೀತಾ ಶ್ಲೋಕ ಸಂವಿಧಾನ ಮಗ್ಗಿ 15 ತಾರೀಖಇದ್ದರೆ ಹದಿನೈದರ ಮಗ್ಗಿ ಹೇಳುವುದು ಶಿಕ್ಷಣ ಜೊತೆ ಜೊತೆಗೆ ಒಳ್ಳೆಯ ಗುಣಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಮಾಡುತ್ತಿರುವುದು ಶ್ಲಾಘನೀಯ.
ಶ್ರೀಶೈಲ ಹೊಸೂರು ಅವರು ಅಂಕುರಿಸು ಕವನ ಸಂಕಲನ ಸುತ್ತಮುತ್ತಲಿನ ಪರಿಸರದ ಅಧ್ಯಯನಕ್ಕೆ ಸೂಕ್ತವಾಗಿದೆ ಸಂಜಯ ಕುರಣೆಯವರ ಹಿನ್ನುಡಿ
ಯೊಂದಿಗೆ ಉತ್ತಮ ಗುಣಮಟ್ಟದ ರಚನೆಯಾಗಿದೆ.
ದಂತಕಥೆ ನನ್ನವಳು
ನಾನು ಅವಳಿಗೆ ಅವಳು
ನನಗೆ ನೆನಪಾದರೆ ನಮಗೆ
ನಾವೇ ಭವ್ಯಇತಿಹಾಸ
ಪ್ರೀತಿಯ ಮಡಿಲೊಳಗಿನ ಕನವರಿಕೆಯೊಂದಿಗೆ ಕವಿತೆಯು ಅಂಕುರಿಸು ಸಂಕಲನದೊಳಗೆ ಇಂತಹ ಪ್ರೀತಿ ಪ್ರೇಮದ ಒಂದೇ ಸೂರಿನಡಿ ಹಲವಾರು ಕವಿತೆಗಳು ಗಿರಕಿ ಹೊಡೆಯುತ್ತಾ ಮೂಡಿ ಬಂದಿದೆ.
ಹಿರಿಯ ಲೇಖಕರಾದ ಎಸ್.ಕೆ. ಹೊಳೆಪ್ಪ ನವರ ಯವರು ರಚನೆ ಮಾಡಿರುವ ಅಂಬಿಗರ ಚೌಡಯ್ಯ ಕೃತಿ 12ನೇ ಶತಮಾನದಲ್ಲಿ ಶರಣರ ಸರಳ ವಿಚಾರದ ವಚನಗಳು ಜನರ ನಾಲಿಗೆಯ ಮೇಲೆ ಕುಳಿತು ಕಿವಿಗಳಲ್ಲಿ ಸುಳಿದು ಹೃದಯ ಹೃದಯದಲ್ಲಿ ಇಳಿದು ಮನದಲ್ಲಿ ಉಳಿದು ಜನಪದ ಬೆಳೆದು ಹೊಳೆಯಾಗಿ ಹರಿದು ಶಿಲಾಶಾಸನಗಳಲ್ಲಿ ಮೂಡಿ ಬಂದಿವೆ
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು ನಂಬಿದರೆ ಒಂದೇ ಹುಟ್ಟಲಿ ಕಡೆದು ಹಾಯಿಸುವ ಅಂಬಿಗರ ಚೌಡಯ್ಯ
ತಮ್ಮ ಕಾರ್ಯದ ಅನುಭವದ ನುಡಿಗಳನ್ನು ವಚನಗಳ ಮುಖಾಂತರ ರಚನೆ ಮಾಡಿದ್ದಾರೆ.
ರಾಜು ಸನದಿಯವರದು ಗುಡದ ಕುಂಡ ಕೃತಿಯಲ್ಲಿರ ಕವಿತೆ ಹಾಗೂ ಚುಟುಕುಗಳು ಒಳಗೊಂಡಿವೆ ತಮ್ಮ ಸಂಕಟದುಗುಡದ ದುಮ್ಮಾನಗಳ ಬಂಡಾಯ ಬರಹ ಕವಿತೆಗಳ ಮುಖಾಂತರ ವೃಕ್ತಪಡಿಸಿದ್ದಾರೆ.
ಹಕ್ಕಿಯ ಹಾಡಿಗೆ
ನಗುವ ಮಗುವಿಗೆ
ಯಾವ ಧರ್ಮದ ಮುದ್ರೆಯಿದೆ?
ದಯವಿಲ್ಲದ ಧರ್ಮಕ್ಕೆ ಯಾವ
ಎದೆ ಅರಳುತ್ತದೆ?
ಆಕಾಶದೆತ್ತರಕ್ಕೆ ಹಾರಾಡುವ ಹಕ್ಕಿಗಳ ಹಾಡಿಗೆ ಬಂಧನ ಇರುವುದಿಲ್ಲ ವಿಶ್ವಮಾನವನಾಗಿ ಹುಟ್ಟಿದ ಮಗುವಿಗೆ ಹತ್ತಾರು ಬಂಧನದ ಕಟ್ಟಳೆಗಳ ಬೇಲಿ ನಿಮಿ೯ಸುತ್ತೇವೆ.
ಹರಿದಾಸ ಬಿ.ಸಿ.ರಾವ್ ಶಿವಪುರ ಇವರ ಅಂತರಾಳದ ನುಡಿ ವಿಚಾರ ರಶ್ಮಿ ಕೃತಿ ಅನೇಕ ವಿಚಾರಗಳನ್ನು ವ್ಯಕ್ತ ಪಡಿಸಿದ್ದಾರೆ. ಬಾಳಿಗೊಂದು ಗುರಿಯಿರಲಿ ಪ್ರಾಣಿಗಳೇ ಗುಣದಲ್ಲಿ ಮೇಲು.ಶಿಕ್ಷಕನೇ ಶಿಕ್ಷಣದಶಕ್ತಿ ಬದುಕುವ ಕಲೆ ಸಂಕಲ್ಪ ಶಕ್ತಿ ದೇವರು ಇಂತಹ ಹಲವಾರು ವಿಷಯಗಳ ಬಗ್ಗೆ ವಿವರಿಸಿದ್ದಾರೆ.
ಎಂ.ಕೆ.ಶೇಖ್ ಯವರು ಬರೆದ ನೂಲು ಕಥಾಹಂದರ ಹದಿನೆಂಟು ಕಥೆಗಳು ಮೂಡಿಬಂದಿವೆ ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಗಟ್ಟಿ ಧ್ವನಿಯಾಗಿ ಸಾಗುವ ಕಥೆಗಳಾಗಿವೆ.
ಬದುಕಿನ ಕವಲು ದಾರಿಯಲ್ಲಿ ನಮ್ಮ ನಮ್ಮ ದಿಕ್ಕು ಬದಲಾದರೂ ಈ ರಾಖಿ ಮಾತ್ರ ನಮ್ಮ ಬಾಂಧವ್ಯಗಟ್ಟಿಗೊಳಿಸುತ್ತದೆ. ರಕ್ಷಾಬಂಧನದ ರಾಖಿಯೊಂದಿಗೆ ಕೆಟ್ಟ ಗಳಿಗೆ ಮರೆತು ಸಹೋದರತೆಯ ಭಾವದಲ್ಲಿ ತೇಲಿ ಬರುವ ರೀತಿಯಲ್ಲಿ ಕಥೆ ಸಾಗುವುದು.
ಶ್ರೀಮತಿ ಶೃತಿ ಹೆಗ್ಗೆಯವರು ಬರೆದ ಬಣ್ಣದ ಗರಿ ಕವನ ಸಂಕಲನ ಸುಂದರವಾಗಿ ಮೂಡಿಬಂದಿದೆ ಸೋತೆ ಎಂದು ನೀ ಮುಂದಿನ ಹೆಜ್ಜೆ ಹಿಂದಿಡಬೇಡ ಏಕೆಂದರೆ ಯಾರಿಗೂ ಗೊತ್ತು ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು.
ಆದೆಷ್ಟೋ ನನಸಾಗದ ಕನಸುಗಳು
ಹಿಡಿದು ಸಾಗುತಲಿವೆ ಕಣ್ಣುಗಳು.
ಏರು ತಗ್ಗುಗಳಿರುವ ಪಯಣಗಳು ತೋಚಿದ ಕಡೆ ನಡೆಯುತ್ತಾ ಕಾಲುಗಳು.
ಕನಸಿನ ಲೋಕದ ಮೆಟ್ಟಲುಗಳು ಜೀವನದ ಏರುತಗ್ಗುಗಳಲ್ಲಿ ಪಯಣದ ದಾರಿ ತೋಚಿದ ಹಾಗೆ ಸಾಗುತ್ತಿವೆ.
ಶ್ರೀಶೈಲಸಂಗಮ ಯವರು ಬರೆದ ಹೊನ್ನಸಿರಿ ಧಾರೆ ಕೃತಿಯಲ್ಲಿ ಮೂಡಿ ಬಂದ ಕವಿತೆ.
ಸುಖ-ದುಃಖದ ಸಾಲಿನಲ್ಲಿ ಬಾಳ ಪಯಣ ಸಾಗುವಲ್ಲಿ ಪ್ರೀತಿ ಭಾವ ಬೆಳಗಿಸು ಮನುಕುಲದ ರೀತಿಯಲ್ಲಿ
ಸತಿಪತಿಯ ಬಾಳಪಯಣದೊಳಿಗೆ ನೋವು ಮತ್ತು ಸುಖದ ಚಕ್ರವು ಸತತ ತಿರುಗುವುದು. ಒಮ್ಮೆ ಸುಖ ಬಂದರೆ ಅದರ ಹಿಂದೆ ದುಃಖ ಬರಬಹುದಲ್ಲವೆ?
ಶ್ರೀ ಜಯನಂದ ಮಾದರ ಪುಂಡಿ ಪಲ್ಲೆ ಕಥಾ ಸಂಕಲನದಲ್ಲಿ ಒಟ್ಟು ಇಪ್ಪತ್ತು ಎರಡು ಕಥೆಗಳು ಹಳ್ಳಿ ಬದುಕಿನ ಹಲವು ವಿಷಯ ವಸ್ತು ತೆಗೆದುಕೊಂಡು ಉತ್ತಮ ಕಥೆ ರಚಿ ನೆ ಮಾಡಿದ್ದಾರೆ. ಕಥೆಯೊಂದಿಗೆ ಪ್ರಾರಂಭಗೊಂಡು ಓಣಿಯೊಳಗೆ ತಿರುಗಾಡಿ ತರಕಾರಿ ಮಾರುವ ನಿತ್ಯದ ವ್ಯವಹಾರದೊಳಗ ತಂಗೆವ್ವನ ಪಾತ್ರ ಹಾಗೂ ತರಕಾರಿ ತೆಗೆದುಕೊಳ್ಳುವವರ ಸಂಭಾಷಣೆ ಚಿತ್ರಣ ಹಾಗೂ ತರಕಾರಿ ಕದ್ದ ಮಲ್ಲವ್ವನ ಮಗನ ಪ್ರಾಮಾಣಿಕತೆಯ ಕಥೆ
ಚೆನ್ನಾಗಿ ಮೂಡಿಬಂದಿದೆ.
ಕೈಲಾಸ ಮದಬಾವಿ ಯವರು ಕಾಲದ ಕುಣಿತ ಕವನ ಸಂಕಲನ ಇಂದಿನ ವಾತಾವರಣಕ್ಕೆ ಹೋಲಿಸಿಕೊಂಡು ಬರೆದಿರುವುದು ವಿಶೇಷವಾದದು.
ಬೇಡ ಮಹಡಿ ಮನೆ
ಗುಡಿಸಲಾಗಲಿ ಅರಮನೆ.
ಚಿನ್ನ ಬೆಳ್ಳಿ ಏಕೆ ಬೇಕು?
ತೃಪ್ತಿ ಸಿಗಲಿ ಪ್ರಾರ್ಥನೆ.
ಸಂತೃಪ್ತಿಯ ಕವಿತೆಯೊಳಗೆ ಇರುವುದರಲ್ಲಿ ತೃಪ್ತಿಪಡು ಇರದೇ ಇರುವುದಕ್ಕೆ ಆಶೆ ಪಡದ ಸುಖ ಶಾಂತಿ ನೆಮ್ಮದ್ಧಿ ಇರುವ ಸೌಲಭ್ಯದಲ್ಲಿ ಪಡೆದು ಅದನ್ನು ಸಂತೃಪ್ತಿಯಿಂದ ಅನುಭವಿಸುವ ನೀತಿ ನಿತ್ಯದಾಗಲಿ.
ಶ್ರೀ ಎಲ್.ಎಸ್. ಚೌರಿಯವರು ಚೌರೀಶನ ಕಥೆವಿಶೇಷ ಎಂದು ಹೇಳಬಹುದು ಒತ್ತಕ್ಷರವಿಲ್ಲದ ಕಥಾ ಸಂಕಲನ ಯಾರು ಮಾಡದ ಸಾಹಸ ಚೌರಿಯವರು ಮಾಡಿದ್ದಾರೆ.
ಶ್ರೀ ವಡಗೋಲ ಶಿವಾನಂದ ಭಾಗಾಯಿ ಯವರು ಬರೆದ ಬಡವನ ಬುತ್ತಿ ಬಿಚ್ಚಿದಾಗ ಕವನ ಸಂಕಲನದಲ್ಲಿ ಮೂಡಿ ಬಂದ ಕವನ . ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ
ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ.
ಪುಸ್ತಕವಿಲ್ಲದ ಮನೆ
ಆತ್ಮವಿಲ್ಲದ ಶರೀರ.
ಬರಹಗಾರನ ಅಂತರಾಳದೊಳಗ ಅಡಗಿರುವ ವಿಚಾರ ಕ್ರಮಬದ್ಧತೆ ಬರಹ ರೂಪ ತಾಳಿದಾಗ ಮಾತ್ರ ಒಂದು ಸುಂದರ ಕವನವಾಗಬಲ್ಲದು.
ಕಲಾವಿದೆ ವಿಜಯಲಕ್ಷ್ಮಿ ಕುರುಣೆಯುವ ಪ್ರತಿಭೆ ರಂಗೋಲಿ ಕಲೆಗಾರಿಕೆ ಜೊತೆ ಬರೀ ಪೆನ್ಸಿಲ್ ದಿಂದ ಚಿತ್ರ ಸುಂದರವಾಗಿ ಮೂಡಿಬಂದಿವೆ. ಮೆಹಂದಿ ತೆಗೆಯುವುದು ಇಂತಹಉತ್ತಮ ಗುಣಗಳನ್ನು ಅಳವಡಿಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿ. ಹೀಗೆ ಪ್ರಯತ್ನ ಸದಾ ನಿರಂತರವಾಗಿರಲಿ.
ಸಾಹಿತಿಗಳಾದ ಸಂಜಯ ಕುರಣೆಯವರ ಸಾಹಿತ್ಯ ಕೃಷಿ ಹೀಗೆ ನಿರಂತರವಾಗಿರಲಿ. ಹರಿಯುವ ಗಂಗೆಯಾಗಿ ಮಿನುಗುವ ನಕ್ಷತ್ರಗಳಂತೆ ಹಾಗೆ ಗಡಿನಾಡಿನ ಅಕ್ಷರ ಸಂತ ಸಂಜಯ ಕುರಣೆಯವರಿಗೆ ತುಂಬು ಹೃದಯದ ಅಭಿನಂದನೆಗಳು.

ದಯಾನಂದ ಪಾಟೀಲ (ಲೇಖಕರು )
ಭಾರತೀಯಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ..