ದೈವಿಕತೆ ಹಾಗೂ ಮಾನವೀಯತೆ..!

ಮನುಷ್ಯನ ಗುಣ ನಿಸ್ವಾರ್ಥ. ಮನುಷ್ಯನ ಜನ್ಮ ನಿಸ್ವಾರ್ಥ ಬದುಕಿನ ಹೃದಯ ವೈಶಾಲ್ಯತೆ. ಸ್ವಾರ್ಥ ಮನಸ್ಥಿತಿಯ ಆಕ್ರಮಣ ಎನ್ನುವುದು ಬಿಗಿಯನ್ನು ಹೆಚ್ಚಿಸುತ್ತದೆ ಹೊರತು ಮನಸ್ಸಿನ ಕಟ್ಟುಪಾಡುಗಳನ್ನು ಇನ್ನೊಬ್ಬರ ಮೇಲೆ ಹೇರುವುದಕ್ಕಿಂತ, ತಮ್ಮನ್ನು ತಾವು ನಿಸ್ವಾರ್ಥ ಆಲೋಚನೆಗಳಲ್ಲಿ ಬೆಳಗಿಸಿಕೊಳ್ಳುತ್ತಾ, ಸ್ವಾರ್ಥ ಮನಸ್ಥಿತಿಯ ಆಲೋಚನೆಗಳ ಬಂಧನಗಳಿಂದ ಬಿಡಿಸಿಕೊಳ್ಳುತ್ತಾ, ಸಾಗುತ್ತಿರಬೇಕಾದರೆ ಎಲ್ಲರೂ ಎಲ್ಲರಲ್ಲೂ ದೇವರನ್ನು ದೈವತ್ವವನ್ನು ಕಾಣುತ್ತಿದ್ದರು. ಯಾವಾಗ ಒಬ್ಬರನ್ನೊಬ್ಬರು ತನ್ನ ಅನುಕೂಲಕ್ಕಾಗಿಯೇ ನಿನ್ನ ಜನ್ಮ ಎನ್ನುವುದು ಎಂದು ತಮ್ಮ ಆಲೋಚನೆಗಳಿಂದ ಬಿಗಿಯಲ್ಪಟ್ಟಾಗ, ಮನುಕುಲದ ಉದ್ದಾರವನ್ನು ಕಲ್ಲು ಮಣ್ಣುಗಳ ಚೈತನ್ಯದಲ್ಲಿ, ವೃಕ್ಷ ರಾಶಿಗಳ ಜೀವಂತಿಕೆಯಲ್ಲಿ ಮಾನವ ಸಹಜ ಗುಣವನ್ನು ಕಂಡುಕೊಳ್ಳಲು ಹಾಗೂ ನಿಸ್ವಾರ್ಥವಾದ ಆಲೋಚನೆಗಳಲ್ಲಿ ಎಲ್ಲರೂ ಒಟ್ಟಿಗೆ ಕೂಡಿ ಬಾಳಲು, ಹಂಚಿ ತಿನ್ನುವ ಮಾನವೀಯತೆಯ ಗುಣವನ್ನು ದೈವಿಕ ಕಟ್ಟು ಪಾಡುಗಳಲ್ಲಿ ಹೆಚ್ಚಿಸಲು ಬಂದಂತಹ ಮಾನವ ನಿಸ್ವಾರ್ಥ ಭದ್ರಕೋಟೆಯೇ ಆಲಯಗಳಾಗಿರುತ್ತವೆ. ಕಠಿಣ ಮನಸ್ಸಿನ ಕ್ರೂರತ್ವವನ್ನು ಕರಗಿಸುವುದು ಮತ್ತೊಂದು ಕಠಿಣ ಶಕ್ತಿಯೇ ಆಗಿರಬೇಕೆನ್ನುವುದೇ ದೈವಿಕ ಶಿಲಾ ರೂಪದ ಚೈತನ್ಯವಾಗಿರುತ್ತದೆ. ಹೃದಯದಲ್ಲಿ ಪ್ರೇಮ ಚೈತನ್ಯವನ್ನು ಹೊತ್ತರೆ ಗುಡಿ ಗೋಪುರಗಳ ಚೈತನ್ಯಕ್ಕಿಂತ ಮಾನವೀಯತೆಯ ಮೌಲ್ಯದ ಚೈತನ್ಯ
ಅಮೃತ ಜ್ಞಾನ ಸಾಗರದಲ್ಲಿ ಸಮಸ್ತರ ಉದ್ದಾರಕ್ಕಾಗಿ, ತನ್ನಂತೆ ಎಲ್ಲರೂ, ತನ್ನ ಚೈತನ್ಯದಂತೆ ಎಲ್ಲರಲ್ಲೂ ದೈವತ್ವವಿದೆ ಎಂದು ಕಂಡುಕೊಳ್ಳುವುದೇ ಮಾನವೀಯತೆಯ ಧರ್ಮದ ಶ್ರೇಷ್ಠತೆಯಾಗಿರುತ್ತದೆ.
ಮೊದಲು ಮಾನವೀಯ ಧರ್ಮವನ್ನು ಪಾಲಿಸಿದರೆ, ಶರೀರವೇ ದೇಗುಲವಾಗಿ, ಆಲೋಚನೆಗಳೇ ಅಮೃತತ್ವದ ಮಹಾ ಚೈತನ್ಯ ಗೋಪುರವಾಗಿ ಬೆಳಗುತ್ತದೆ. ನಮ್ಮದು ಮನುಕುಲ, ಮನುಕುಲದ ಸಹಜ ಮೌಲ್ಯಗಳನ್ನು ಎಲ್ಲರಿಗೂ ದಾರಿ ತೋರುವ ದೀಪಗಳಾಗಿ ಬೆಳಗಿಸಬೇಕೇ ಹೊರತು, ಕುಲದ ಚೈತನ್ಯವನ್ನು ಮೀರಿ ಬೆಳೆದಂತಹ ಆಲೋಚನೆಗಳನ್ನು,
ಸ್ವಾರ್ಥ ಆಲೋಚನೆಗಳ ಕಟ್ಟುಪಾಡಲ್ಲಿ ಬಿಗಿಯಬಾರದು. ಮನುಜ ಧರ್ಮ ಶ್ರೇಷ್ಠ ಧರ್ಮ, ಮಾನವೀಯತೆಯ ಗುಣ ನಿಸ್ವಾರ್ಥ ಮನಸ್ಸಿನ ಪ್ರೀತಿ, ಪ್ರೇಮ, ವಾತ್ಸಲ್ಯ, ಕರುಣೆ. ಇದನ್ನೇ ಅಲ್ಲವೇ ಮಾನವ ಭಗವಂತನಿಂದ ಬಯಸುವುದು. ಎಲ್ಲರಿಗೂ ಸಮಾನತೆಯ ಚೈತನ್ಯವನ್ನು ತನ್ನ ಆಲೋಚನೆಗಳಲ್ಲಿ, ನಿಸ್ವಾರ್ಥ ಆಲೋಚನೆಯ ಮನಸ್ಸಿನಲ್ಲಿ ನೀಡುತ್ತಾ ಹೊರಟಾಗ ದೈವತ್ವವನ್ನು ತನ್ನವರಿಂದಲೇ ಪಡೆಯಲು ಸಾಧ್ಯವಿರುತ್ತದೆ. ನಾವು ಮಾನಸಿಕವಾಗಿ ಜಗತ್ತನ್ನು ದ್ವೇಷಿಸಿದರೆ, ಜಗತ್ತು ನಮಗೆ ಅದನ್ನೇ ನೀಡುತ್ತದೆ. ನಾವು ನಿಸ್ವಾರ್ಥ ಮನಸ್ಸಿನಲ್ಲಿ ಜಗತ್ತಿಗೆ ಪ್ರೇಮ ಶಕ್ತಿಯಲ್ಲಿ ಅನುಕೂಲಿಸಿದರೆ, ಇಡೀ ಜಗತ್ತು ನಮ್ಮನ್ನು ದೈವತ್ವವಾಗಿ ನಡೆಸುತ್ತದೆ.

ನಡೆದು ಬಿಡಬೇಕು ಮಾನವೀಯತೆಯಲ್ಲಿ, ಮಾನವೀಯ ಚೈತನ್ಯದ ಮಹಾಗೋಪುರದ ಎತ್ತರದಲ್ಲಿ.

ಧರ್ಮ ಎನ್ನುವುದು ಭದ್ರಕೋಟೆಯಾಗಿರಬೇಕೆ ಹೊರತು, ಮನುಕುಲದ ಉದ್ಧಾರವನ್ನು ಛಿದ್ರಗೊಳಿಸುವಂತಹ ಆಕ್ರಮಣಕಾರಿ ಬಲವಂತದ ಹೇರಿಕೆ ಆಗಬಾರದು. ನಾನು ಶ್ರೇಷ್ಠ ನಾನೇ ಶ್ರೇಷ್ಠ ಎನ್ನುವುದು, ಎಂದಿಗೂ ಮಾನವೀಯತೆಯನ್ನು ಬೆಳಗಿಸುವುದಿಲ್ಲ. ನಾವು ಶ್ರೇಷ್ಠ ನಾವೆಲ್ಲರೂ ಶ್ರೇಷ್ಠ ಎನ್ನುವುದೇ ಧರ್ಮಶಕ್ತಿಯ ಮೂಲ ಜ್ಞಾನವಾಗಿರುತ್ತದೆ.
ನಮಗೆ ನೋವಾದರೆ, ಕಣ್ಣಿನಲ್ಲಿ ನೀರು ಬರುತ್ತದೆ
ಹಿಂಸೆಯಲ್ಲಿ ಮಾನವೀಯತೆಯು ನಲಗುತ್ತದೆ ಎನ್ನುವುದಾದರೆ, ಎಲ್ಲರಲ್ಲೂ ನೋವನ್ನು ನೀಡದಂತಹ ದೈವಿಕ ಚೈತನ್ಯವನ್ನು, ನಿಸ್ವಾರ್ಥ ಪ್ರೇಮದ ಆಲೋಚನೆಯನ್ನು ಹೆಚ್ಚಿಸಿಕೊಳ್ಳುವುದೇ ದೈವಿಕತೆಯ ಮಾನವೀಯತೆಯ ಮೌಲ್ಯವಾಗಿರುತ್ತದೆ.

ವಿಶ್ವಾಸ್ .ಡಿ .ಗೌಡ, ಸಕಲೇಶಪುರ