ಅಭಿಲಾಷೆ ಕಾದಂಬರಿ – 37 ನೇ ಸಂಚಿಕೆ
ಹಿಂದಿನ ಸಂಚಿಕೆಯಲ್ಲಿ
ಇನ್ಸ್ ಪೆಕ್ಟರ್ ರವರು ತಮ್ಮ ಇಬ್ಬರು ಸಿಬ್ಬಂದಿಯ ಜೊತೆಗೂಡಿ ಮಾರುವೇಷದಲ್ಲಿ ಬ್ಯಾಂಕ್ ಗೆ ಬಂದು, ಹಿಂದಿನ ದಿನ ಆಶಾಳನ್ನು ಕಿಡ್ನಾಪ್ ಮಾಡಿದ್ದ ಕಾರನ್ನು ಹಿಂಬಾಲಿಸುತ್ತಾ, ಕಾರಿನ ಡ್ರೈವರ್ ಗೆ ಸಹಾಯ ಮಾಡುತ್ತೇವೆಂದು ನಂಬಿಸಿರುತ್ತಾರೆ
ಕಥೆಯನ್ನು ಮುಂದುವರೆಸುತ್ತಾ
ಕಿಡ್ನಾಪ್ ಮಾಡಿದ್ದೆಂದು ಹೇಳಲಾದ ಕಾರಿನ ಡ್ರೈವರ್ ಗೆ ಸಹಾಯ ಮಾಡುತ್ತೇವೆಂದು ಇನ್ಸ್ ಪೆಕ್ಟರ್ ಹೇಳಿದಾಗ,
ಬೇರೆ ಮಾರ್ಗವಿಲ್ಲದೆ, ನನಗೆ ಮೋಸ ಮಾಡುವುದಿಲ್ಲವೆಂದು ಪ್ರಾಮೀಸ್ ಮಾಡಿದರೆ ನಿಮ್ಮನ್ನು ನಂಬುವುದಾಗಿ, ಕಾರಿನ ಡ್ರೈವರ್ ಹೇಳಲು
ಓ ಹೋ ಅದಕ್ಕೇನಂತೆ ನಮಗೆ ಹತ್ತು ಪರ್ಸಂಟ್ ಕಮಿಷನ್ ಬರುವಾಗ ಖಂಡಿತಾ ಪ್ರಾಮೀಸ್ ಮಾಡುತ್ತೇವೆಂದು ಇನ್ಸ್ಪೆಕ್ಟರ್ ಹೇಳಿದಾಗ
ಓಕೆ ಈಗ ನಾವೆಲ್ಲರೂ ಫ್ರೆಂಡ್ಸ್ ಅಷ್ಚೇ , ನಿಮಗೆ ಹತ್ತು ಪರ್ಸಂಟ್ ಮಾತ್ರ ಕೊಡುತ್ತೇನೆ, ನಾವುಗಳು ಪಾರ್ಟನರ್ ಅಲ್ಲವೆಂದು ಡ್ರೈವರ್ ಮಾತಿಗೆ,
ಖಂಡಿತಾ ನಾವುಗಳೂ ಪಾರ್ಟನರ್ಸ್ ಎಂದು ತಿಳಿದುಕೊಂಡಿಲ್ವ. ನೀನು ಹೇಳಿದ ಕೆಲಸಕ್ಕೆ ನಮಗೆ ಹತ್ತು ಪರ್ಸಂಟ್ ಕಮಿಷನ್ ಕೊಟ್ಟರೆ ಸಾಕು. ಹೇಗೋ ಬದುಕಿಕೊಳ್ಳುತ್ತೇವೆ ಎಂದು ಇನ್ಸ್ ಪೆಕ್ಟರ್ ನುಡಿಯುತ್ತಾರೆ.
ಮೊದಲು ಈ ಕೆಲಸ ಮುಗಿಸಿ ಹಣ ಪಡೆಯೋಣ ನಂತರ ಬೇರೆ ಯಾವ ಕೆಲಸಗಳು ಬಂದರೂ ಎಲ್ಲರೂ ಕೂಡಿ ಮಾಡೋಣವೆಂದು ಕಾರಿನ ಡ್ರೈವರ್ ಹೇಳಲು
ಓಕೆ ಬ್ರದರ್ ಅರ್ಜಂಟಿಗೆ ನಮಗೆ ಸ್ವಲ್ಪ ಹಣದ ಅವಶ್ಯಕತೆ ಇದೆ
ನಿನ್ನ ಕೆಲಸ ಏನು ಮಾಡಬೇಕೆಂದು ಮೊದಲು ಹೇಳು ನಂತರ ಬೇರೆ ಕೆಲಸ ನೋಡೋಣವೆಂದು ಇನ್ಸ್ಪೆಕ್ಟರ್ ಹೇಳಿದಾಗ
ಕಾರಿನ ಡ್ರೈವರ್ ಮಾತನಾಡಿ, ಈಗ ಮಾಸ್ಟರಿಗೆ ನಾನು ಮಾತು ಕೊಟ್ಟಿರುವಂತೆ ಅವರ ಮಗಳನ್ನು ಅವರಿಗೆ ಒಪ್ಪಿಸಿ ಹಣ ಪಡೆಯಬೇಕು ಎಂದು ಕಾರಿನ ಡ್ರೈವರ್ ಹೇಳಲು
ಅಯ್ಯೋ ಎಲ್ಲಾದರೂ ಉಂಟಾ ಬ್ರದರ್ ಮೊದಲು ಅವರ ಮಗಳನ್ನು ಬಿಟ್ಚರೆ, ನಿನಗೆ ಹಣಕ್ಕೆ ಪಂಗನಾಮ ಹಾಕುತ್ತಾರೆ.
ಈ ಕೆಲಸ ನಿನಗೆ ಹೊಸದು ಎನ್ನಿಸುತ್ತದೆ, ನಮಗೆ ನೀರು ಕುಡಿದಷ್ಟು ಸುಲಭ, ನಾವು ಹೇಳಿದಂತೆ ನೀನು ಕೇಳಿದರೆ ಹಣ ಬಂದು ನಿನ್ನ ಕೈ ಸೇರುತ್ತದೆಂದು ಇನ್ಸ್ಪೆಕ್ಟರ್ ಹೇಳಲು
ಹೇಗೋ ಒಟ್ಟಿನಲ್ಲಿ ನನಗೆ ಹಣ ಬಂದರೆ ಸಾಕು, ಆ ಮಾಸ್ಟರ್ ಬ್ಯಾಂಕಿನಲ್ಲಿ ಯಾರಿಗೂ ತಿಳಿಯಬಾರದೆಂದು ಮ್ಯಾನೇಜರ್ ಛೇಂಬರ್ ಗೆ ಹೋಗಿ, ಹಣ ಎಣಿಸುತ್ತಿದ್ದರು, ಅವರ ಮಗಳನ್ನು ಬಿಡಿಸಿಕೊಂಡು ಹೋಗಲು ನನಗೆ ಹಣ ಕೊಟ್ಟೇ ಕೊಡುತ್ತಾರೆ. ಆದರೆ ಇದು ಯಾರಿಗೂ ತಿಶಿಯಬಾರದೆಂದು ಡ್ರೈವರ್ ಹೇಳಿದಾಗ
ಆ ಕೆಲಸ ನಮಗೆ ಬಿಡು ಎಲ್ಲವನ್ನೂ ನಾವುಗಳು ನೋಡಿಕೊಳ್ಳುತ್ತೇವೆ. ನಿನ್ನ ಕಡೆ ಎಷ್ಚು ಜನರಿದ್ದಾರೆ ಬ್ರದರ್ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಲು
ಇಬ್ಬರು ಮಾತ್ರ ಇದ್ದಾರೆ, ಅವರಿಗೆ ಈಗ ಇಪ್ಪತ್ತೈದು ಪರ್ಸಂಟ್ ಕೊಡಬೇಕು, ಜೊತೆಗೆ ನಿಮಗೆ ಹತ್ತು ಪರ್ಸಂಟ್ ಕೊಡಬೇಕಾಗುತ್ತದೆಂಬ ಡ್ರೈವರ್ ಮಾತಿಗೆ.
ಈಗ ನಮ್ಮ ಮಾತು ಕೇಳಿದರೆ ನಿನಗೆ ಇಪ್ಪತ್ತೈದು ಪರ್ಸಂಟ್ ಉಳಿಸುತ್ತೇವೆ, ಅದರಲ್ಲಿ ನಮಗೆ ಐದು ಪರ್ಸಂಟ್ ಕೊಟ್ಟರೆ ಸಾಕು ಎಂದು ಇನ್ಸ್ಪೆಕ್ಟರ್ ಹೇಳಲು
ಅವರು ಸಾಮಾನ್ಯದವರಲ್ಲಾ ಈ ವಿಚಾರಗಳಲ್ಲಿ ತುಂಬಾ ಪಳಗಿದ್ದಾರೆಂಬ, ಡ್ರೈವರ್ ಮಾತಿಗೆ
ಅವರು ನಿನ್ನ. ನೆಚ್ಚಿನ ಭಂಟರಾ ಎಂದು ಇನ್ಸ್ಪೆಕ್ಟರ್ ಪ್ರಶ್ನಿಸಿದಾಗ
ಹಾಗೇನೂ ಇಲ್ಲಾ, ಈ ಕೆಲಸಕ್ಕೆ ಮಾತ್ರ ಅವರನ್ನು ನೇಮಿಸಿಕೊಂಡಿದ್ದೇನೆ. ಈ ಕೆಲಸ ಮುಗಿದ ತಕ್ಷಣ ಅವರಿಗೆ ಗೇಟ್ ಪಾಸ್ ಕೊಡುತ್ತೇನೆಂದು ಡ್ರೈವರ್ ಹೇಳುತ್ತಾನೆ.
ಬ್ರದರ್ ನನ್ನ ಮಾತು ಕೇಳು ಈಗಲೇ ಅವರನ್ನು ಕಳುಹಿಸಿ ಬಿಡು ಎಂದು ಇನ್ಸ್ ಪೆಕ್ಟರ್ ಮಾತಿಗೆ
ಅಯ್ಯೋ ಇಲ್ಲಪ್ಪಾ ಈಗ ಅವರನ್ಮು ವಾಪಸ್ ಕಳುಹಿಸಿದರೆ , ಅವರಿಗೆ ನನ್ನ ಮೇಲೆ ಕೋಪ ಬಂದು ನನ್ನ ಪ್ಲಾನ್ ಎಲ್ಲವನ್ನೂ ಹಾಳುಮಾಡುತ್ತಾರೆಂದು ಡ್ರೈವರ್ ಹೇಳುತ್ತಾನೆ
ಆಯ್ತು ನೇಮಿಸಿಕೊಂಡ ಮೇಲೆ ವಾಪಸ್ ಕಳುಹಿಸಿದರೆ ಕೋಪ ಬಂದು ಪೋಲೀಸ್ ಗೆ ಇನ್ಪಾರ್ಮ್ ಮಾಡಬಹುದು, ಅವರೂ ಇರಲಿ, ಕೆಲಸ ಮುಗಿದ ಮೇಲೆ ಹಣ ಕೊಡದೆ ವಾಪಸ್ ಕಳುಹಿಸು, ಉಳಿದಿದ್ದು ನಾವು ನೋಡಿಕೊಳ್ಳುತ್ತೇವೆ ಎಂಬ ಇನ್ಸ್ ಪೆಕ್ಟರ್ ಮಾತಿಗೆ
ಈ ಸಲ ಒಪ್ಪಂದವಾಗಿದೆ, ನಷ್ಟವಾದರೂ ಪರವಾಗಿಲ್ಲ ಹಣ ಕೊಟ್ಟು ಕಳುಹಿಸುತ್ತೇನೆ ಎಂದು ಡ್ರೈವರ್ ಹೇಳಲು
ಓ ಕೆ ಬ್ರದರ್ ಆದರೆ ಮಾಸ್ಟರ್ ಕೊಡುವ ಹಣವನ್ನು ತಕ್ಷಣ ಅವರಿಗೆ ಕೊಡಬೇಡ ಎಂದು ಇನ್ಸ್ಪೆಕ್ಟರ್ ಹೇಳಿದಾಗ
ಹಾಗಾದರೆ ನಾನೇನು ಮಾಡಲಿ ಎಂಬ ಡ್ರೈವರ್ ಪ್ರಶ್ನೆಗೆ
ಇನ್ನೇನು ಸಂಜೆಯಾಗುತ್ತಿದೆ, ಯಾರಿಗೂ ತಿಳಿಯದಂತೆ ಒಂದು ಪ್ಲಾನ್ ಮಾಡೋಣವೆಂದು ಇನ್ಸ್ ಪೆಕ್ಟರ್ ಹೇಳಿದಾಗ
ಓ ಆಗಬಹುದು ಏನೆಂದು ಪ್ಲಾನ್ ಹೇಳಿದರೆ ಅದರಂತೆ ಅರೇಂಜ್ ಮಾಡಬಹುದೆಂದು ಕಾರಿನ ಡ್ರೈವರ್ ಹೇಳಲು
ಮೊದಲಿಗೆ ಆ ಮಾಸ್ಟರ್ ಏನಾದರೂ ಪೋಲೀಸ್ ಗೆ ತಿಳಿಸಿ ಅವರ ಸಪೋರ್ಟ್ ತೆಗೆದುಕೊಂಡು ಬಂದಿದ್ದಾರಾ ಎಂದು ತಿಳಿಯಬೇಕು, ನಂತರ ಪೋಲೀಸ್ ರವರು ಯಾರಿಲ್ಲವೆಂದು ಖಚಿತ ಪಡಿಸಿಕೊಂಡು ಫೋನ್ ಮೂಲಕ ನಾನು ನಿಮ್ಮ ಮಗಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ ನೀವು ಹಣ ಕೊಟ್ಟರೆ ವಾಪಸ್ ಕರೆದುಕೊಂಡು ಹೋಗಬಹುದೆಂದು ಅನೌನ್ಸ್ ಮಾಡಬೇಕು, ಹಣ ಕೊಟ್ಟ ನಂತರವಷ್ಟೇ ಅವರಿಗೆ ಮಗಳನ್ನು ಒಪ್ಪಿಸಬೇಕು ಎಂಬ ಇನ್ಸ್ ಪೆಕ್ಟರ್ ಮಾತಿಗೆ
ಕಾರಿನ ಡ್ರೈವರ್ ಗುಡ್ ಐಡಿಯಾ ಎನ್ನುತ್ತಾನೆ
ಈಗ ನೀವಿರುವ ಜಾಗ ತೋರಿಸಿದರೆ ನಾವೂ ಜೊತೆಗೆ ಬರುತ್ತೇವೆ. ನೀನು ಹಣದ ಜವಾಬ್ದಾರಿ ತೆಗೆದುಕೊಂಡು ಅವರಿಂದ ಹಣ ಪಡೆಯಲು ಹೋಗು
ನಾವುಗಳು ಆ ವೇಳೆಗೆ ಯುವತಿಯನ್ನು ಕರೆದುಕೊಂಡು ಬಂದಿರುತ್ತೇವೆ. ಅವರು ಹಣ ಕೊಟ್ಟರು ಎಂದ ತಕ್ಷಣ ಯುವತಿಯನ್ನು ಬಿಟ್ಟು ಬಿಡುತ್ತೇವೆ, ಇಲ್ಲದಿದ್ದರೆ ವಾಪಸ್ ಕರೆದುಕೊಂಡು ಬಂದು ನೀನಿರುವ ಜಾಗದಲ್ಲಿ ಬಿಡುತ್ತೇವೆ ಎಂದು ಇನ್ಸ್ ಪೆಕ್ಟರ್ ಹೇಳಲು,
ಓಕೆ ಒಳ್ಳೆಯ ಐಡಿಯಾನೇ ಮಾಡಿದ್ದೀರಾ ಎಂದು ಡ್ರೈವರ್ ಹೊಗಳಿದಾಗ.
ನಮಗೆ ಇದೆಲ್ಲಾ ಕಾಮನ್ ಎನ್ನುತ್ತಾರೆ ಇನ್ಸ್ ಪೆಕ್ಟರ್
ಈಗ ನಾನೇನು ಮಾಡಲೆಂದು ಡ್ರೈವರ್ ಕೇಳಿದಾಗ
ಮೊದಲು ಮಾಸ್ಟರ್ ಗೆ ಫೋನ್ ಮಾಡಿ ಹಣ ತರಲು ಹೇಳು, ಅವರು ಇಲ್ಲಿಗೆ ಹಣ ತರಲು ಒಂದು ತಾಸಾದರೂ ಬೇಕೆಂದು ಇನ್ಸ್ ಪೆಕ್ಟರ್ ಹೇಳಲು
ಇನ್ಸ್ ಪೆಕ್ಟರ್ ಮಾತಿಗೆ ಡ್ಕೈವರ್ ಮರು ಮಾತಾಡದೆ ಕೋದಂಡರಾಂ ಗೆ ಫೋನ್ ಮಾಡಿ, ಹಣವನ್ನು ಮೊದಲು ಹೇಳಿದ್ದ ಸ್ಥಳಕ್ಕೇ ತರಬೇಕೆಂದು ಹೇಳುತ್ತಾನೆ.
ಕೋದಂಡರಾಂ ರವರು ಆಗಲಪ್ಪಾ ನಾನು ಈಗಲೇ ಬರುತ್ತೇನೆಂದು ಹೇಳಿ ತಕ್ಷಣ ದೊಡ್ಡ ಸೂಟ್ ಕೇಸ್ ಹಿಡಿದುಕೊಂಡು ಅಲ್ಲೇ ಇದ್ದ ಆಟೋ ಹಿಡಿದು ಬರುತ್ತಿರುತ್ತಾರೆ.
ಈ ಕಡೆ ಇನ್ಸ್ ಪೆಕ್ಟರ್ ರವರು ಮಾತನಾಡಿ, ಬ್ರದರ್ ನೀನು ಹುಡುಗಿಯನ್ನು ಕಿಡ್ನಾಪ್ ಮಾಡಿ ಇಟ್ಟಿರುವ ಸ್ಥಳನನ್ನು ತೋರಿಸಿದರೆ ನಾವುಗಳು ಆ ಹುಡುಗಿಯನ್ನು ಕರೆದುಕೊಂಡು ಬರುತ್ತೇವೆ.
ನೀನು ಹಣವನ್ನು ಪಡೆದ ತಕ್ಷಣ ನಾವು ಹುಡುಗಿಯನ್ನು ಅವರಿಗೆ ಒಪ್ಪಿಸುತ್ತೇವೆಂದು ಹೇಳಲು
ಓ ಆಗಬಹುದು ನನ್ನ ಅರ್ಧ ಕೆಲಸವನ್ನು ಕಡಿಮೆ ಮಾಡಿದ್ದೀರೆಂದು ಹೇಳಿ ಕಾರನ್ನು ಯುವತಿ ಇದ್ದ ಕಡೆ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗ
ಇನ್ಸ್ ಪೆಕ್ಟರ್ ರವರು ತಮ್ಮ ಸಿಬ್ಬಂದಿಯೊಂದಿಗೆ ಅವನ ಕಾರನ್ನು ಹಿಂಬಾಲಿಸುತ್ತಾರೆ
ಮುಂದುವರೆಯುತ್ತದೆ
ಈ ಸಂಚಿಕೆಯಲ್ಲಿ ತಿಳಿದುಬರುವ ಅಂಶ ಏನೆಂದರೆ
ಯಾರೂ ಕೂಡಾ ತಕ್ಷಣ ಬೇರೆಯವರನ್ನು ನಂಬಬಾರದು, ಅವರು ನಂಬುವಂತೆ ಬ್ರೈನ್ ವಾಶ್ ಮಾಡುವುದರ ಬಗ್ಗೆ ಎಚ್ಚರದಿಂದಿರಬೇಕು ಅಲ್ಲವೇ?