-
1. ಶ್ರೀದೇವಿ ದುರ್ಗಾoಬಿಕೆ
******************
https://youtu.be/BegojKVfCRY?si=fQzraHsVSUGK0SkL
*********************
ಗಾಯನ : ಶ್ರೀಮತಿ ಲಲಿತಾ ರಮೇಶ್
ರಚನೆ : ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
https://youtu.be/nhHpX7QkEHY
https://youtube.com/shorts/Vaae3-magsw?feature=ಶೇರ್
https://youtu.be/UkR5UOH0RFc
https://youtu.be/7Qy2-htIIU4
ಜಯತು ಶ್ರೀ ದುರ್ಗೆ ಜಯತು ಶ್ರೀಗೌರಿ
ಜಯತು ಪಾಹಿಮಾo ಶ್ರೀ ಪರಮೇಶ್ವರಿ
ಭಕ್ತಿಯಲಿ ಬೇಡುವೆ ನಾ ಅನವರತವು
ಕರುಣೆಯ ತೋರಿ ಉದ್ಧರಿಸು ಸತತವು ll
ಭಕ್ತಿಯನೊಂದೆ ಬಯಸುವೆ ತಾಯಿ ನೀನು
ಭಕ್ತರ ಸಲಹುವ ಮಹಾದೇವಿ ನೀನು
ತ್ರಿಕಾಲ ಪೂಜೆಯ ಮಾಡುವೆ ಭಕ್ತಿಯಲಿ
ಒಲಿದು ಬಾರಮ್ಮ ತಾಯೆ ಲಲಿತಾಂಬಿಕೆ||
ಪರಿಪರಿ ಸುಮಗಳಿಂದ ಅರ್ಚಿಪೆನು ನಿನ್ನ
ನವವಿಧ ಭಕ್ತಿಯಲಿ ಪೂಜಿಪೆನು ನಿನ್ನ
ನಿರ್ಮಲ ಮನದಿಂದ ಬೆಳಗುವೆನಾರತಿ ನಿನಗೆ
ಅರ್ಪಿಸಿ ನೈವೇದ್ಯವ ಎರಗುವೆ ನಿನ್ನಡಿಗೆ||
-
2. ರಘುರಾಮ
https://youtu.be/der0jXJuG_k?si=ajMw5XsGdKkhaXq_
ಗಾಯನ: ಶ್ರೀಮತಿ ಸುಜಾತ ಜಿ. ಭಟ್
*********************
ಸುಂದರ ರೂಪನೆ ಚಂದದಿ ಪಾಲಿಸು
ಅಂದದ ಮುಖವನು ನೀ ತೋರು
ಬಂಧುವು ನೀನೇ ಮುಂದೆಯೆ ನಿಂತೆನು
ಬಂದಿಹ ಕಷ್ಟವ ನೀ ಕಳೆಯು ll
ಕರಗಳ ಮುಗಿಯುತ ವರಗಳ ಬೇಡುವೆ
ಕರುಣೆಯ ತೋರಿಸಿ ನೀ ಸಲಹು
ಮೊರೆಯನು ಆಲಿಸಿ ಮರೆಯದೆ ಎನ್ನನೆ
ಧರಣಿಗೆ ಅಧಿಪನೆ ನೀ ಹರಸು ll
ಸೋಮನ ಭಜಿಸುವೆ ಕೋಮಲ ವದನನೆ
ಧಾಮದ ಮಹಿಮೆಯ ಸಾರವಿದು
ರಾಮನು ನೀನೇ ಪಾಮರ ನಾನೇ
ನಾಮವ ಪಾಡುವೆ ನಾನಿಂದು ll
ದೇವನ ಪೂಜಿಸಿ ಪಾವನ ನಾಗುವೆ
ನೋವನು ಮರೆಯುವೆ ನಾನಿಂದು
ಈವನು ನೆಮ್ಮದಿ ಕಾವನು ನಮ್ಮನೆ
ಸಾವಿರ ವಂದನೆ ನಿನಗೆoದು ll
-
3. ಗಜಮುಖ
********
ಪಾರ್ವತಿ ನಂದನ
ಮಂಗಳ ಮೂರುತಿ
ಚಾಮರ ಕರ್ಣನೆ ಗಜವದನ
ಮೋದಕ ಹಸ್ತನೆ
ಮೂಷಿಕ ವಾಹನ
ಕಪಿಲನೆ ಬೆನಕನೆ ಗಜಕರ್ಣ ll
ಸುಮುಖನೆ ಗಣಪತಿ
ವಿಘ್ನವ ನೀಗಿಸು
ಭಜಿಸುವೆ ನಿನ್ನನು ವಿನಾಯಕ
ನಮಿಸುವೆ ಮೊದಲಿಗೆ
ಕರುಣಿಸು ಮಂಗಳ
ಬೇಡುವೆ ನಿತ್ಯವು ಗಣನಾಥ ll
ಮಹಿಮೆಯ ತೋರುವೆ
ಮಹಿಮಾಕರನೇ
ಗಣಗಳ ಅಧಿಪತಿ ಗಜಮುಖನು
ಪಾಲಿಸು ಅನುದಿನ
ಕೋಮಲ ವದನನೆ
ಆಲಿಸು ಭಕ್ತಿಯ ಮೊರೆಯನ್ನು ll
- 4. https://youtu.be/g18osKPdL0c?si=Z9t98QleIChGwFkm
- 5. https://youtu.be/IJaW39iiTgo?si=dJlsjysD6RBKuDqM
- ರಚನೆ, ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀಮತಿ ಸುಜಾತಾ ಜಿ ಭಟ್ .
*********************ಆದಿಮಹೇಶ್ವರಿ
************
ಆದಿಮಹೇಶ್ವರಿ ಅನ್ನಪೂರ್ಣೇಶ್ವರಿ
ಆನಂದದಾಯಿನಿ ಅಭಯದಾಯಿನಿ
ಆ ನಿನ್ನ ಮೊಗದಲಿ ಮಂದಹಾಸವು
ತೋರೆನ್ನಯ ಬದುಕಲಿ ಸಂತೋಷವು ll
ಸಾವಿತ್ರಿಯೆ ಕರುಣದಿ ಕಾಪಾಡೆನ್ನನು
ಸಾವಿರ ಸಾವಿರ ವಂದನೆಯು ನಿನಗಮ್ಮ
ಸಾಕಾರಗೊಳಿಸು ಎನ್ನಯ ಬದುಕನ್ನ
ಆ ನಿನ್ನ ಪಾದಕೆ ಮಣಿದಿಹೆನಮ್ಮ ll
ಅಂಬಿಕೆ ದುರ್ಗಾoಬಿಕೆಯೆ ಶಕ್ತಿ ಸ್ವರೂಪಿಣಿಯೆ
ನಂಬಿದೆ ನಿನ್ನನು ಬಂದೆನು ಸನ್ನಿಧಿಗೆ
ಭಕ್ತಿಯ ಅರ್ಚನೆ ನಿತ್ಯವು ಮಾಡುವೆ
ಶಕ್ತಿಯ ನೀಡಮ್ಮ ಮೂಕಾಂಬಿಕೆ ll
ಬ್ರಹ್ಮಾಂಡ ಜನನಿ ಹೇ ಶಂಕರಿಯೆ
ಬ್ರಹ್ಮಾಂಡವ ಸಲಹುವ ದುರ್ಗಾoಬಿಕೆ
ಶ್ರೀ ಚಕ್ರವಾಸಿನಿ ಆದಿಪರಾಶಕ್ತಿಯೆ
ಶ್ರೀ ದೇವಿ ದುರ್ಗೆಯೆ ಲಲಿತಾoಬಿಕೆ ll
6.
-
ಶ್ರೀ ಮಲ್ಲಿಕಾರ್ಜುನ
****************
ಶರಣು ಬಂದೆನು ಮಲ್ಲಿಕಾರ್ಜುನ
ಕರುಣೆ ತೋರಿಸು ಭಕ್ತವತ್ಸಲ
ಹರುಷದಿಂದಲಿ ಭಜಿಪೆ ನಿನ್ನನು
ಅಭಯ ನೀಡುತ ಪೊರೆಯೊ ಎನ್ನನು ll
ಹೂವು ಹಣ್ಣನು ತರುವೆ ಭಕ್ತಿಲಿ
ಗಾನ ಪಾಡುತ ನುತಿಪೆ ಶ್ರದ್ದೆಲಿ
ಪಾದಕೆರಗುತ ನಮಿಸಿ ನಿಂದೆನು
ಪಾಪ ನೀಗಿಸು ಕರುಣೆಯಿಂದಲಿ ll
ಪಾಹಿ ಶಂಕರ ದೇಹಿ ಎಂದೆನು
ಸಕಲ ಜೀವಕು ನೀನೆ ದೇವರು
ಲೋಕ ನಾಯಕ ವಿಶ್ವ ನಾಥನೆ
ಪಾರ್ವತೀಶನೆ ಸಲಹು ದೇವನೆ ll
ಹರಸು ಈಶನೆ ಶ್ರೀಶೈಲದೊಡೆಯನೆ
ಕರವ ಮುಗಿದೆನು ಚಂದ್ರಶೇಖರ
ಬುದ್ಧಿ ಶಕ್ತಿಯ ಬೇಡಿ ಬಂದೆನು
ನಿತ್ಯ ಪಾಲಿಸು ನಂದಿ ವಾಹನ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ
- 7. https://youtu.be/_wMd63q0QZI?si=gI4wMi996nYNaBkU
- 8. https://youtu.be/i8q0CS7k8tI?si=cQHnptSp1g1xKS5U
********************* -
ಕನ್ನಡ ನಾಡು
**********
ಪಾವನ ನಾಡು ಕನ್ನಡ ನಾಡು
ಸುಂದರ ನಮ್ಮಯ ಮಲೆನಾಡು
ಭಾಷೆಯು ಹಲವು ಜಾತಿಯು ಹಲವು
ಸ್ನೇಹವು ತುಂಬಿದ ನೆಲೆಬೀಡು ll
ಉತ್ತರ ಕನ್ನಡ ದಕ್ಷಿಣ ಕನ್ನಡ
ಬಳಿಯಲಿ ಇರುವುದು ವಗೆನಾಡು
ಕಲೆಯನು ಬೆಳೆಗಿಸಿ ಒಲವನು ಮೂಡಿಸಿ
ತೋಷವ ಉಳಿಸುವ ಗಡಿನಾಡು ll
ಕೋಮಲ ಹೃದಯದಿ ಸ್ನೇಹವ ತೋರುವ
ಸಾಧನೆ ಗೈದಿಯ ಕರುನಾಡು
ಸಾವಿರ ನಮನವು ಪ್ರೀತಿಯ ಮಾತೆಗೆ
ವಂದಿಸಿ ಮುಂದಕೆ ನಡೆದಾಡು ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ರಾಗಸಂಯೋಜನೆ ಗಾಯನ
ಶ್ರೀ ಮತಿ ಉಜ್ವಲ ಶೆಟ್ಟಿ.
- 9. https://youtu.be/j98aiWYPQ7Y?si=veuf0sDxZm_hATV2
*********************ಗೌರಿ ಮನೋಹರ
**************
- ಗೌರಿ ಮನೋಹರ ಸಾಂಬಸದಾಶಿವ
ಜಯ ಜಯ ಮೃತ್ಯುಂಜಯನೆ
ನೀಲಕಂಠ ಜಯ ಪಾರ್ವತಿ ರಮಣನೆ
ಕಾಯುವೆ ಭಕ್ತರ ಶಶಿಧರನೆ ll
ಕೈಲಾಸ ವಾಸ ಮೃಡಹರ ಶಂಕರ
ತ್ರಿಶೂಲ ಧಾರಿ ಪರಮೇಶ್ವರನೆ
ಅಭಯವ ನೀಡಿ ಭಕ್ತರ ಪೊರೆಯುವ
ಗಂಗಾಧರ ಶಿವ ಭವಹರನೆ ll
ಭಯವನು ನೀಗಿಸು ಭುವಿಯಲಿ ಬಾಳಿಸು
ಬೇಗನೆ ಬರುವೆ ಕರೆದಾಗ
ನಿತ್ಯವು ನಿನ್ನನೆ ಭಜಿಸುತ ಇರಲು
ಹತ್ತಿರವಾಗುವೆ ಮನದಾಗ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ ಶ್ರೀಮತಿ ಶಶಿಪ್ರಭ ವರುಂಬುಡಿ.
- 10. https://youtu.be/e7Ar5oj-meU?si=JhM_XMB6eVwABJg2
*******************
ಶ್ರೀ ಉದನೇಶ್ವರ ದೇವ
******************* - ಉದನೇಶ್ವರ ದೇವಾ ಉದನೇಶ್ವರ
ಪೆರಡಾಲ ಪುರವಾಸ ಉದನೇಶ್ವರ ( ಪಲ್ಲವಿ )
ಶಂಭೋ ಶಂಕರ ಗಿರಿಜಾ ರಮಣನೆ
ಕಾಯೋ ಎಮ್ಮನು ಶಶಿಧರನೆ
ವರದಾ ತೀರದಿ ನೆಲೆಸಿಹ ದೇವನೆ
ನಿನಗಿದೊ ವಂದನೆ ವರಮುಖನೆ ll
ಭಕ್ತರ ಪೊರೆಯಲು ಕಷ್ಟವ ಕಳೆಯಲು
ಪೆರಡಾಲ ಗ್ರಾಮದಿ ನೆಲೆಸಿರುವೆ
ಪಾರ್ವತಿಯೊಂದಿಗೆ ಸಕಲರ ಪಾಲಿಸೆ
ಕರುಣಾ ಸಾಗರ ನೀ ನಿರುವೆ ll
ಭವ್ಯದ ದೇಗುಲ ನಿನ್ನಯ ಆಲಯ
ಪಾದಕೆ ವಂದಿಸಿ ಬೇಡುವೆನು
ಕರುಣಿಸು ಮಂಗಳ ಅಭಯವ ನೀಡುತ
ಮೊರೆಯನು ಆಲಿಸಿ ನೀ ಸಲಹು ll
ಶುಭಕರ ಗುಣನಿಧಿ ಕರುಣಾ ಸಾಗರ
ಕರುಣೆಯ ತೋರಿಸು ಪರಮೇಶ
ಅಭಯವ ನೀಡುತ ಕರುಣಿಸು ವರಗಳ
ಕರವನು ಮುಗಿಯುವೆ ಜಗದೀಶ ll
ಪಾಲಿಸು ಅನುದಿನ ಶಂಭೋ ಶಂಕರ
ಆಲಿಸು ಎನ್ನಯ ಮೊರೆಯನ್ನು
ಪಾರ್ವತಿ ಪ್ರಿಯನೇ ಸುರನರ ವಂದಿತ
ತೋರಿಸು ನಿನ್ನಯ ಲೀಲೆಯನು ll
ಪೆರಡಾಲ ದೇಗುಲದಿ ಸ್ಥಿರವಾಗಿ ನೆಲಸಿರುವ
ಭಕ್ತಜನ ಪರಿಪಾಲ ಶ್ರೀ ಉದನೇಶ್ವರ ಹರಿಹರರ ಸುತನಿಲ್ಲಿ ತಾ ನೆಲೆಸಿದ
ಪಿಲಿಚಾಮುಂಡಿ ದೈವಜೊತೆ ಕುಟ್ಟಿಚ್ಚಾತನು ||
ಧನುರ್ಮಾಸ ಸಂಕ್ರಮಣ ಜಾತ್ರೊತ್ಸವ
ವೈಭವದ ಉತ್ಸವದಿ ಪಾಲ್ಗೊಳ್ಳುವ
ಅನ್ನ ಸಂತರ್ಪಣೆ ಜೊತೆಗೆ ಮನರಂಜನೆ
ಕರುಣದಲಿ ಕಾಪಾಡು ಶ್ರೀ ಉದನೇಶ್ವರನೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ, ಮೇಘನ ಹಳಿಯಾಳ್.
ಸಂಗೀತ, ವೀರು.ಬೆಂಗಳೂರು
11. https://youtu.be/6MFujajZLOw?si=KAh5nsDUIVrhSKxI
********************
ರಚನೆ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ. ಶ್ರೀ ಮತಿ ಮಾಲತಿ S N ಭಟ್ ಕಾಕುಂಜೆ.
✍️. B. Udaneshwara Prasad Mooladka.
Sung by. Malathi S N Bhat Kaakunje.
*************************************
ಶ್ರೀ ಗುರು ರಾಘವೇಂದ್ರನೆ
*******************
ಶ್ರೀ ಗುರು ರಾಘವೇಂದ್ರನೆ
ಮಂತ್ರಾಲಯ ಪುರವಾಸನೆ
ಚರಣಕೆರಗಿ ನಮಿಸೋಣ
ಮಂತ್ರಾಕ್ಷತೆಯನು ಪಡೆಯೋಣ ll
ಭಕ್ತಿಭಾವದಿ ನಮಿಸುವ
ಮುಕ್ತಿಪಥವನು ಬೇಡುವ
ಯತಿರಾಯರನು ನೆನೆಯುವ
ರಾಯರ ಒಲವನು ಗಳಿಸೋಣ ll
ಪುಣ್ಯ ಸನ್ನಿಧಿ ಮಂತ್ರಾಲಯ
ಮಾಡಿದ ಪಾಪವ ಕಳೆಯೋಣ
ಪಾವನ ನದಿಯಲ್ಲಿ ಮೀಯೋಣ
ಜನ್ಮವ ಸಾರ್ಥಕ ಮಾಡೋಣ ll
✍️ಬಿ ಉದನೇಶ್ವರ ಪ್ರಸಾದ ಮೂಲಡ್ಕ.
12. https://youtu.be/B1YHAVkDLdk?si=wmp3RXxlHW0MNb9Q
***********************
ಗಣಪತಿ ದೇವ
************
ಗಜಮುಖ ಗಣಪತಿ ನಿನಗಿದೊ ವಂದನೆ
ವಿದ್ಯಾ ಬುದ್ಧಿಯ ಬೇಡುವೆನು
ಸುಂದರ ಮೂರುತಿ ನಮಿಸುವೆ ಬೆನಕನೆ
ವಿಘ್ನವ ನೀಗಿಸಿ ನೀ ಪೊರೆಯು ll
ಮೊದಲಿಗೆ ಪೂಜೆಯ ಪಡೆಯುವ ದೇವನೆ
ಗಣಗಳ ನಾಯಕ ಶಿವಸುತನೇ
ಮೂಷಿಕ ವಾಹನ ಮೋದಕ ಪ್ರಿಯನೇ
ಪಾಲಿಸು ಎಮ್ಮನು ಗಜಮುಖನೆ ll
ಕರಗಳ ಮುಗಿಯುವೆ ನಮಿಸುವೆ ಪಾದಕೆ
ಸಾವಿರ ನಾಮವ ಭಜಿಸುವೆನು
ಪ್ರೀತಿಯ ತೋರುತ ಕರುಣಿಸು ವರಗಳ
ಚೌತಿಯ ಹಬ್ಬದ ಶುಭದಿನವು ll
ಭಕ್ತರ ಪಾಲಿಗೆ ಇಷ್ಟವ ನೀಡುವ
ವಿನಯದಿ ಕರೆಯುವೆ ಬಾ ಎಂದು
ಆಲಿಸು ಭಕ್ತರ ಕರೆಯನು ದೇವಾ
ಸಿದ್ಧಿಯ ಕರುಣಿಸು ನೀ ಬಂದು ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಸಂಗೀತ ಗಾಯನ, ಮೋಹನ ಆಚಾರ್ಯ ಪುಳ್ಕೂರು
- 13. https://youtu.be/0MCxNYtqYR4?si=Xbfy7Fi-hJ3alKcx
*********** - ಕಾರ್ಮಾರು ಶ್ರೀಮಹಾವಿಷ್ಣು
*********************
ಗರುಡ ಗಮನ ವಾಸು ದೇವ
ಮಹಾವಿಷ್ಣು ದೇವನೆ
ಎನ್ನ ಮನದಿ ನಿನ್ನ ಸ್ಮರಣೆ
ಇರಲು ಸದಾ ಬೇಡುವೆ ll
ಗೋಪಿ ಲೋಲ ಗೋಪ ಬಾಲ
ಹರುಷ ತೋರು ಬಾಳಲಿ
ತೋಷ ದಿಂದ ಬಾಳಿನಲ್ಲಿ
ಗುರುವೆ ದಾರಿ ತೋರಿಸಿ ll
ಹರನ ನೆನೆದು ಹರಿಯ ಭಜಿಸಿ
ಪಾದಕೆರಗಿ ನಮಿಸುವೆ
ಮೊರೆಯ ಕೇಳು ಬಳಿಗೆ ಬಾರೊ
ಭಕ್ತಿಯಿಂದ ಹಾಡುವೆ ll
ನಿನ್ನ ಭಜನೆ ಬರೆಯಲಿಂದು
ಮನಸು ಎನಗೆ ತೋರಿತು
ಕಣ್ಣ ಮುಚ್ಚಿ ನಿನ್ನ ಮುಂದೆ
ಕರವ ಮುಗಿದು ನಿಂದೆನು ll
ಕಾರ್ಮಾರಿನ ಪುರದಿ ನೆಲೆಸಿ
ಭಕ್ತರನ್ನು ಪೊರೆಯುವೆ
ದುರಿತ ಕಳೆದು ಒಲವಿನಿಂದ
ಭಕ್ತರನ್ನು ಸೆಳೆಯುವೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗ ಸಂಯೋಜನೆ ಗಾಯನ
ಶೀಲಾ ಜಿ ಭಟ್ ಪದ್ಯಾಣ
https://youtu.be/LR3eBMfPQyU?si=uWLpFvesI1-riLnM
14. https://youtu.be/FkPH31GMoFA?si=ORpuGpmwwwv0IY15
***********************
Lyrics : B. Udaneshwara Prasad Mooladka.
***********
Sung by : Ishwara Praksh Sarali
*********************************
ಓಂಕಾರ ರೂಪ ಮಹಾದೇವ
************************
ಓಂಕಾರ ರೂಪ ಮಹಾದೇವ
ನಂದಿವಾಹನ ಪಾರ್ವತಿ ರಮಣ
ನೀಲಲೋಹಿತ ದೇವ ನಾಗಾಭರಣ
ಗಿರೀಶಾಯ ಜಟಾಜೂಟ ಗಂಗಾಧರ
ಲಲಾಟಾಕ್ಷ ಸರ್ವ ಶಕ್ತ ಪರಮೇಶ್ವರ llಪ||
ಶಿವ ರಾತ್ರಿ ದಿನವಿದು ಪುಣ್ಯ ಕಾಲವು
ಶಿವನಾಮ ಪಠಿಸುತ್ತ ಜಾಗರಣೆಯು
ಬಿಲ್ವಪತ್ರೆ ಅರ್ಚನೆ ರುದ್ರಾಭೀಷೇಕವು
ಹರನೊಲಿಸೆ ನಮಗಿರುವ
ಸುಲಭ ಹಾದಿಯು ||
ಪೆರಡಾಲ ಪುರವಾಸ ಉದನೇಶ್ವರ
ಮಹಾದೇವ ಶಂಭು ಶಿವಶಂಕರ
ವರದಾ ನದಿ ತೀರದಲ್ಲಿ ತಾನು ನೆಲೆಸಿದ
ಭಕ್ತರ ಪೊರೆಯುವ
ಉಮಾಮಹೇಶ್ವರ ||
ನಿನ್ನ ನಾಮ ಹೋಮ ಹವನ
ದಿನವು ಮಾಡುವೆ
ಭಕ್ತಿಯಿಂದ ಹರನೆ ನಿನ್ನ ನಾನು ಭಜಿಸುವೆ
ಒಲವಿನಿಂದ ಹರಸು ತಂದೆ ನಾನು ಬೇಡುವೆ
ಒಲಿದು ಬಂದು ಹರಸುತಂದೆ
ನಂದಿವಾಹನ ||
✍️ : ಬಿ.ಉದನೇಶ್ವರ ಪ್ರಸಾದ್ ಮೂಲಡ್ಕ
15. https://youtu.be/3OZUSFLV3LE?si=MWuE7c-xmY32EzmP
**************
ಭಕ್ತಿಗೀತೆ :
-
ಶೀರ್ಷಿಕೆ : ತ್ರಿಶೂಲ ಧಾರಿ ಶಂಕರ
*************************
ತ್ರಿಶೂಲ ಧಾರಿಯೆ ಡಮರುಗ ಹಸ್ತನೆ
ಚಂದ್ರಕಲಾಧರ ಪರಮೇಶ
ಪಾರ್ವತಿ ರಮಣನೆ ಪಾಲಿಸು ದೇವನೆ
ಭಕ್ತಿಯ ವಂದನೆ ಗಿರಿಜೇಶ ll
ತಳಿಗಿರಿ ದೇಗುಲ ಭಕ್ತಿಯ ಆಲಯ
ಕಾಯುವೆ ಕರುಣದಿ ಭಕ್ತರನು
ಶಿವನನು ನಂಬಲು ಬಿಡದೆಯೆ ಪಾಲಿಪ
ಭಕ್ತಿಯ ಕರೆಯಾ ಕೇಳುವನು ll
ಹಸುರಿನ ಪರಿಸರ ನಡುವಲಿ ಶೋಭಿಪ
ಗಿರಿಜಾ ವಲ್ಲಭ ಜಗದೀಶ
ಜಯ ತ್ರಿಪುರಾರಿಯೆ ಶಂಭೋ ಶಂಕರ
ಅಭಯವ ಕರುಣಿಸು ಸರ್ವೇಶ ll
ಗಂಗೆಯ ಶಿರದಲಿ ಧರಿಸಿಹ ದೇವನೆ
ಕರುಣಾ ಸಾಗರ ಶುಭಕರನೆ
ಮೋದದಿ ಸಲಹುವ ಮಂಗಳ ರೂಪನೆ
ಗಾನವ ಆಲಿಸು ಮಹದೇವನೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ರಾಗಸಂಯೋಜನೆ ಗಾಯನ
ಶ್ರೀಮತಿ ಭುವನೇಶ್ವರಿ ಭಟ್ ಬೆಳ್ಳಾರೆ.
- 16. https://youtu.be/lbUZF9jv8rc?si=QXpLUBg3yd5bV03c
*********************ಸ್ವಪ್ನ ಸುಂದರಿ
***********
ಸ್ವಪ್ನ ಸುಂದರಿ ಕಣ್ಣ ಮುಂದೆಯೆ
ಬಂದು ನಿಂತಳು ಚೆಲುವಲಿ
ಅಂದ ಗಾತಿಯು ಚಂದದಿಂದಲಿ
ನಗುತ ಬಂದಳು ಒಲವಲಿ ll
ಇಂದ್ರ ಲೋಕದ ರಂಭೆ ಎನ್ನಲೆ
ಧರೆಗೆ ಇಳಿದಳೆ ಅಪ್ಸರೆ
ಕಣ್ಣ ನೋಟವು ಮೈಯ ಮಾಟವು
ಕಿವಿಯ ಓಲೆಯ ಅಂದವೆ ll
ಬೆಳ್ಳಿ ಮೋಡದ ಬಣ್ಣದಂತೆಯೆ
ದಂತ ಪಂಕ್ತಿಯು ಸುಂದರ
ಮನವ ಸೆಳೆಯುವ ನಲ್ಲೆಯಂದವು
ಬಾನ ಹುಣ್ಣಿಮೆ ಚಂದಿರ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀ ಮತಿ ಸುಜಾತಾ ಜಿ ಭಟ್.
17. https://youtu.be/KMRWOGnH_fo?si=6kCfkEqdPCU1y477
********************
ಗೌರೀಗಣೇಶ
**********
ಗಣೇಶ ನಿನ್ನಯ ನಾಮವ ಪಾಡುವೆ
ಮಾಡುವೆ ನಿತ್ಯವು ಗುಣಗಾನ
ಲಾಲಿಸು ಶಿವಸುತ ಗಣಗಳ ಒಡೆಯನೆ
ಮುದದಲಿ ಭಜಿಸುವೆ ಗಜವದನ ll
ಮೋದಕ ಪ್ರಿಯನೇ ಗೌರೀತನಯ
ಖಾದ್ಯವ ನೀಡುವೆ ಗಣನಾಥ
ಪಾಲಿಸು ನಿರತವು ಗಣದೇವ
ಪಾದಕೆ ವಂದನೆ ಗಣಪತಿಯ ll
ಗೌರೀಗಣೇಶ ಹಬ್ಬವು ಬಂದಿದೆ
ನಾಡಲಿ ಹರುಷವು ತುಂಬಿದೆ
ಚೌತಿಯ ದಿನದಲಿ ವಿಶೇಷವು
ಮಾಡುವೆ ಭಕ್ತಿಯ ಸೇವೆಯು ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 18. https://youtu.be/PpK39zoDHLU?si=e-B_YYAkttcQqj4Q
***************
https://youtu.be/PpK39zoDHLU?si=RsP16OiOMJ2zuu3j
*********************
Lyrics,
B. Udaneshwara Prasad Mooladka
***********************************
Composer
Shree, Ganesh Neerchal
************************
Singer
Keerthiprabha Badiadka
*************************ಶ್ರೀ ಗಣೇಶಾಯ ನಮಃ
******************
ಮಧುವಾಹೀನಿ ತೀರ ನಿವಾಸ ಶಂಕರ ತನಯ
ಮೊದಲೊoದಿಪೆ ನಿನಗೆ ಸಿದ್ಧಿವಿನಾಯಕ ಹೇ ಗಣನಾಥ ll
ಗಣಪ ಬಂದನೊ ದೇವ ಗಣಪ ಬಂದನು
ಇಲಿಯನೇರಿ ಬಂದನೊ ಉಮೆಯ ಕಂದನು
ಅಪ್ಪ ಕಜ್ಜಾಯ ಮೋದಕ ಪ್ರಿಯನು
ಕರುಣೆಯ ತೋರುವ ಗಣನಾಥನು ll
ಭಯ ಭಕ್ತಿಯಲಿ ಗಣಪನ ಬೇಡುವ
ಶಿರಬಾಗಿ ದೇವನ ಪಾದಕೆ ನಮಿಸುವ
ದುರಿತವ ನೀಗಿಸಿ ಕರುಣದಿ ಸಲಹುವ
ವರವನು ಕರುಣಿಪ ಜಗದೊಡೆಯ ಎನ್ನುವ ll
ವಿಘ್ನವ ನೀಗಿಸಿ ವಿದ್ಯೆಯ ಕರುಣಿಸು
ವಿದ್ಯಾಧಿ ದೇವ ವಿಜಯ ಪ್ರದಾಯಕ
ಬೇಡುವೆ ನಿನ್ನನು ಮಾಡುವೆ ಪೂಜೆಯ
ಮದವೂರ ಪುರವಾಸ ಗಣಪತಿಯ ll
ಮೂಡಪ್ಪ ಸೇವೆಯ ಪಡೆದು ಭಕ್ತರ
ಮನದ ಇಷ್ಟಾರ್ಥವ ಕರುಣಿಪ ದೇವ
ಮದನoತೇಷನೆ ಮಧುಪುರದೊಡೆಯ
ಪರಿಹರಿಸೆನ್ನಯ ಸಕಲ ಪಾಪ ದೋಷವ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
-
19. ಸದಾ ನೆನೆಯುವೆ
*************
ಅಮ್ಮಾ ನಿನ್ನಯ ಕರುಳಿನ ಕುಡಿಯು
ಶರಣು ಶರಣು ನಿನಗಮ್ಮ
ತಾಯೇ ನಿನ್ನನು ನೆನೆಯುವೆ ನಿತ್ಯವು
ಶರಣು ಶರಣು ಎನುವೆಮ್ಮ ll
ಜನುಮವ ನೀಡಿದ ಭಾಗ್ಯದೇವತೆಗೆ
ಕರವನು ಮುಗಿಯುತ ನಮಿಸುವೆನು
ಲೋಕದ ಜ್ಞಾನವ ತಿಳಿಸಿ ಕೊಟ್ಟಿರುವ
ಮಾತಾ ಪಿತರನು ನೆನೆಯುವೆನು ll
ತಾಯಿಯ ಪಾದವು ಪುಣ್ಯ ಪಾವನವು
ಎಂದೂ ಬಿಡದೇ ಪೂಜಿಸುವೆ
ಮಾತೆಯೆ ನಿನ್ನಯ ಪ್ರೀತಿ ಮಾತುಗಳು
ಇರಲಮ್ಮ ಸದಾ ನನ್ನೊಳಗೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
20.
[21/09, 8:48 am] udaneshwaraprasad bhat: https://youtu.be/h40G11kgtig?si=XruPFWu104K4EAE5
**********************
https://youtu.be/_S3ugzR7kQk?si=iVKorEerZcZKHHab
********************
ಬಾರಡ್ಕದ ಮಹಿಮೆ
****************
ಆಧಾರ ನಮಗಾಧಾರ ನಮಗಾಧಾರ ಬಾರಡ್ಕದ ವಿಷ್ಣು ದೈವ ನಮಗಾಧಾರ
ಗುಳಿಗ ದೈವ ಕೃಪೆಯಿಂದ ಸುಖ ಪರಿವಾರ
ನಿಸರಿ…
ಬಾಳಿನ ಹಾದಿಯಲ್ಲಿ ಬಾಡುತಿರೆ ನೋವಿಂದ
ಕಳಶದ ಅಭಿಷೇಕ ಪರಿಹಾರವು
ಕಂಕಣ ಬಲಬರದೆ ನೋವಿಂದ ಕುಳಿತಿರದೆ
ಬೇಡಿದರೆ ಸಿಗದಿರದು ಸುಖಸಂಸಾರ
ಸಲ್ಲದ ನುಡಿಕೇಳಿ ಮನದಲ್ಲಿ ನೊಂದಿರಲು
ಸಲ್ಲದ ನುಡಿಕೇಳಿ ಮನದಲ್ಲಿ ನೊಂದಿರಲು
ಸೋಲು ತಂದ ನೋವಿನಿಂದ ಪೂರ್ಣ ಪರಿಹಾರ
ಗುಳಿಗ ದೈವ ಕೃಪೆಯಿಂದ ತ್ವರಿತ ಪರಿಹಾರ||
ಕರುಳಿನ ಕುಡಿಯಿರದೆ ವಂಶದ ಕುಡಿಗಾಗಿ
ಬೇಡಿದರೆ ದೈವದಲಿ ವಂಶೋದ್ಧಾರ
ಬಾರಡ್ಕ ಊರಲ್ಲಿ ನೆಲೆನಿಂತಿರುವ ಶಕ್ತಿ
ವಿಷ್ಣು ಮೂರ್ತಿ ದೈವಕ್ಕೆ ಕೆಂಡ ಸೇವೆಯು
ಗುಳಿಗ,ವಿಷ್ಣು ಮೂರ್ತಿ ಕೃಪೆಯಲ್ಲಿ ಬಾರಡ್ಕ
ಗುಳಿಗ ವಿಷ್ಣು ಮೂರ್ತಿ ಕೃಪೆಯಲ್ಲಿ ಬಾರಡ್ಕ
ಊರ ಭಕ್ತ ಬಾಂಧವರ ಪುಣ್ಯ ಫಲವೇ
ದೈವ ನೆಲೆಯ ಬಲದಿಂದ ಸುಖದಿ ನಲಿವು||
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ, ಬಾಲಚಂದ್ರ ಬಿ.ಬಾರಿಕ್ಕಾಡ್
[21/09, 9:41 am] udaneshwaraprasad bhat: https://youtu.be/pxQ5lgTn-4M?si=oYaNLIsuQUxxPmfV
**********************
ಸುಮಧುರ ಗಾಯನ
*****************
ಗಣಪತಿ ಶಾರದೆ ಮನದಲಿ ಧ್ಯಾನಿಸಿ
ಗುರುವಿನ ಪಾದಕೆ ನಮಿಸೋಣ
ನಿತ್ಯವು ಹಾಡುತ ಪರಿಶ್ರಮದಿಂದಲಿ
ಬಾನಿನ ಎತ್ತರ ಏರೋಣ ll
ರಾಗಕೆ ತಾಳವು ಸುಮಧುರ ಕಂಠವು
ಸೇರಲು ಗಾಯನ ಇಂಪಾಗಿ
ಜೊತೆಯಲಿ ರಚನೆಗೆ ಜೀವವ ತುಂಬಲು
ಕೇಳಲು ಮನಸಿಗೆ ತಂಪಾಗಿ ll
ಸಾಧನೆ ಬೇಕದು ಹಾಡಲು ಕಲಿಯಲು
ಸಾಧಿಸಿ ತೋರಿಸು ಜೀವನದಿ
ಸಾಗಲಿ ಮುಂದಕೆ ಗಾಯನ ಲೋಕದಿ
ಬೆಳೆಯಿರಿ ಎಲ್ಲರು ಉತ್ಸಾಹದಿ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀಮತಿ ಸುಜಾತಾ ಜಿ ಭಟ್.
- 21. https://youtu.be/gEh1fNd-ugk?si=nKG__lmttVPVbrkc
********************
ಭಾಗ್ಯ ಲಕ್ಷ್ಮಿ
*********
ಹರಿಯ ರಮಣಿ ಸುಂದರ ವದನೆ
ಭಾಗ್ಯವ ಕರುಣಿಸು ಬಾರಮ್ಮ
ಭಾಗ್ಯಲಕ್ಷ್ಮಿಯೆ ಸೌಭಾಗ್ಯದೇವತೆ
ಒಲವಿನ ನುಡಿಯನು ಕೇಳಮ್ಮ
ಮಹಾಲಕ್ಷ್ಮಿಯ ಪೂಜೆಗೆ ಶುಭದಿನವು
ಬದುಕಲಿ ನೆಮ್ಮದಿ ನೀಡಮ್ಮ
ಹಾದಿಯಲೆಂದು ದುರಿತವ ಕಳೆಯುತ
ಶಾಂತಿಯ ನೀಡುತ ಪೊರೆಯಮ್ಮ ll
ಮನೆಯಲಿ ನೆಲೆಸುತ ಮನೆಯನು ಬೆಳಗು
ಮನದಲಿ ಒಲಿಯುತ ಬಾರಮ್ಮ
ವರವನು ನೀಡುತ ಅಭಯವ ಕರುಣಿಸು
ಮಂಗಳ ರೂಪಿಣಿ ನೀನಮ್ಮ ll
ಭಕ್ತಿಯ ಅರ್ಚನೆ ಪುಷ್ಪವನಿರಿಸಿ
ದೀಪವ ಬೆಳಗಿ ಆರತಿಯು
ಕಲಶವ ಇಟ್ಟು ಪೂಜೆಯ ಗೈಯಲು
ಕನಿಕರಿಸುವ ದೇವೀ ಮಂಗಳೆಯು ll
✍️ . ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀಮತಿ ಶಶಿಪ್ರಭ ವರುಂಬುಡಿ.
- 22. https://youtu.be/e7Ar5oj-meU?si=JhM_XMB6eVwABJg2
*******************
ಶ್ರೀ ಉದನೇಶ್ವರ ದೇವ
*******************
ಉದನೇಶ್ವರ ದೇವಾ ಉದನೇಶ್ವರ
ಪೆರಡಾಲ ಪುರವಾಸ ಉದನೇಶ್ವರ ( ಪಲ್ಲವಿ )
ಶಂಭೋ ಶಂಕರ ಗಿರಿಜಾ ರಮಣನೆ
ಕಾಯೋ ಎಮ್ಮನು ಶಶಿಧರನೆ
ವರದಾ ತೀರದಿ ನೆಲೆಸಿಹ ದೇವನೆ
ನಿನಗಿದೊ ವಂದನೆ ವರಮುಖನೆ ll
ಭಕ್ತರ ಪೊರೆಯಲು ಕಷ್ಟವ ಕಳೆಯಲು
ಪೆರಡಾಲ ಗ್ರಾಮದಿ ನೆಲೆಸಿರುವೆ
ಪಾರ್ವತಿಯೊಂದಿಗೆ ಸಕಲರ ಪಾಲಿಸೆ
ಕರುಣಾ ಸಾಗರ ನೀ ನಿರುವೆ ll
ಭವ್ಯದ ದೇಗುಲ ನಿನ್ನಯ ಆಲಯ
ಪಾದಕೆ ವಂದಿಸಿ ಬೇಡುವೆನು
ಕರುಣಿಸು ಮಂಗಳ ಅಭಯವ ನೀಡುತ
ಮೊರೆಯನು ಆಲಿಸಿ ನೀ ಸಲಹು ll
ಶುಭಕರ ಗುಣನಿಧಿ ಕರುಣಾ ಸಾಗರ
ಕರುಣೆಯ ತೋರಿಸು ಪರಮೇಶ
ಅಭಯವ ನೀಡುತ ಕರುಣಿಸು ವರಗಳ
ಕರವನು ಮುಗಿಯುವೆ ಜಗದೀಶ ll
ಪಾಲಿಸು ಅನುದಿನ ಶಂಭೋ ಶಂಕರ
ಆಲಿಸು ಎನ್ನಯ ಮೊರೆಯನ್ನು
ಪಾರ್ವತಿ ಪ್ರಿಯನೇ ಸುರನರ ವಂದಿತ
ತೋರಿಸು ನಿನ್ನಯ ಲೀಲೆಯನು ll
ಪೆರಡಾಲ ದೇಗುಲದಿ ಸ್ಥಿರವಾಗಿ ನೆಲಸಿರುವ
ಭಕ್ತಜನ ಪರಿಪಾಲ ಶ್ರೀ ಉದನೇಶ್ವರ ಹರಿಹರರ ಸುತನಿಲ್ಲಿ ತಾ ನೆಲೆಸಿದ
ಪಿಲಿಚಾಮುಂಡಿ ದೈವಜೊತೆ ಕುಟ್ಟಿಚ್ಚಾತನು ||
ಧನುರ್ಮಾಸ ಸಂಕ್ರಮಣ ಜಾತ್ರೊತ್ಸವ
ವೈಭವದ ಉತ್ಸವದಿ ಪಾಲ್ಗೊಳ್ಳುವ
ಅನ್ನ ಸಂತರ್ಪಣೆ ಜೊತೆಗೆ ಮನರಂಜನೆ
ಕರುಣದಲಿ ಕಾಪಾಡು ಶ್ರೀ ಉದನೇಶ್ವರನೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ, ಮೇಘನ ಹಳಿಯಾಳ್.
ಸಂಗೀತ, ವೀರು.ಬೆಂಗಳೂರು
- 23. https://youtu.be/I4VVWuwnrM8?si=sV84xV__jXiX7CV9
******************
ಆ ರವಿ ಜಾರಿದ ಧಾಟಿಯಲ್ಲಿ
***********************
ವಯ್ಯಾರಿ ನೀ ಬಾರೆಯ
********************
ಹೂ ಚೆಲುವಾಗಿದೇ ನೀ ಮಧು ಹೀರಿದೇ
ಓ ಓ ಓ ಓ ಹೋ ಹೋ ಓ ಓ ,,,,
ದುಂಬಿಯ ಸೆಳೆಯಿತು ಹೂವಿನ ಅಂದ
ಗಂಧವ ಬೀರುವ ಹೂವಿನ ಚಂದ
ಕರೆಯಲು ಬಂದ ಬಳಿಯಲಿ ನಿಂದ
ಸೇರೆ ಗೆಳತಿ ಈಗ ನಾ ಕೂಡಿ ಕೊಳುವೆ ಬೇಗ..
ಹೂ ಚೆಲುವಾಗಿದೆ ನೀ ಮಧು ಹೀರಿದೇ
ಸಂತೋಷದಿಂದ ಬಂದೆ ನಾನಿಂದು..
ಉಲ್ಲಾಸದಲ್ಲಿ ತೇಲಿ ಹೋಯಿತಿಂದು..
ಹೂ ಚೆಲುವಾಗಿದೆ ನೀ ಮಧು ಹೀರಿದೇ..
ಸಂತೋಷದಿಂದ ಬಂದೆ ನಾನಿಂದು..
ಉಲ್ಲಾಸದಲ್ಲಿ ತೇಲಿ ಹೋಯಿತಿಂದು …
ಸುರಿಸಿಲ್ಲಿ ಸವಿಯಾದ ಮಕರಂದವೇ
ಉಸಿರಲ್ಲಿ ಉಸಿರಾಗಿ ಮೆರೆದಾಡುವೇ
ಹಸಿರಾದ ಗಿಡದಲ್ಲಿ ನಲಿದಾಡುವೇ
ಹಸಿರಾದ ಗಿಡದಲ್ಲಿ ನಲಿದಾಡುವೇ
ಆ ಬಾನಲ್ಲಿಯೇ….
ಆ ಬಾನಲ್ಲಿ ಹಾರೋಣ ಜೊತೆಯಾಗಿ ಬಾ …
ಹೂ ಚೆಲುವಾಗಿದೆ ನೀ ಮಧು ಹೀರಿದೇ
ಸಂತೋಷದಿಂದ ಬಂದೆ ನಾನಿಂದು
ಉಲ್ಲಾಸದಲ್ಲಿ ತೇಲಿ ಹೋಯಿತಿಂದು..
ಆ ಗಾನ ಸಂಗೀತ ಬಾ ಕೇಳುವಾ
ಆ ಬಾನ ಚಂದ್ರಮನ ಬಾ ನೋಡುವಾ
ಈ ನಿನ್ನ ನಗುವಲ್ಲಿ ಕುಣಿದಾಡುವಾ
ಈ ನಿನ್ನ ನಗುವಲ್ಲಿ ಕುಣಿದಾಡುವಾ
ಸಂತೋಷವೇ.. ಸಂಗೀತ ವಯ್ಯಾರಿ ನೀ ಬಾರೆಯಾ…
ಹೂ ಚೆಲುವಾಗಿದೆ ನೀ ಮಧು ಹೀರಿದೇ
ಸಂತೋಷದಿಂದ ಬಂದೆ ನಾನಿಂದು..
ಉಲ್ಲಾಸದಲ್ಲಿ ತೇಲಿ ಹೋಯಿತಿಂದು….
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ. ,ಶ್ರೀಯುತ,ವಸಂತ ಬಾರಡ್ಕ.
- 24. https://youtu.be/3OZUSFLV3LE?si=jPdxKoktWoJ2G1Ax
*********************
ಭಕ್ತಿಗೀತೆ :
ಶೀರ್ಷಿಕೆ : ತ್ರಿಶೂಲ ಧಾರಿ ಶಂಕರ
*************************
ತ್ರಿಶೂಲ ಧಾರಿಯೆ ಡಮರುಗ ಹಸ್ತನೆ
ಚಂದ್ರಕಲಾಧರ ಪರಮೇಶ
ಪಾರ್ವತಿ ರಮಣನೆ ಪಾಲಿಸು ದೇವನೆ
ಭಕ್ತಿಯ ವಂದನೆ ಗಿರಿಜೇಶ ll
ತಳಿಗಿರಿ ದೇಗುಲ ಭಕ್ತಿಯ ಆಲಯ
ಕಾಯುವೆ ಕರುಣದಿ ಭಕ್ತರನು
ಶಿವನನು ನಂಬಲು ಬಿಡದೆಯೆ ಪಾಲಿಪ
ಭಕ್ತಿಯ ಕರೆಯಾ ಕೇಳುವನು ll
ಹಸುರಿನ ಪರಿಸರ ನಡುವಲಿ ಶೋಭಿಪ
ಗಿರಿಜಾ ವಲ್ಲಭ ಜಗದೀಶ
ಜಯ ತ್ರಿಪುರಾರಿಯೆ ಶಂಭೋ ಶಂಕರ
ಅಭಯವ ಕರುಣಿಸು ಸರ್ವೇಶ ll
ಗಂಗೆಯ ಶಿರದಲಿ ಧರಿಸಿಹ ದೇವನೆ
ಕರುಣಾ ಸಾಗರ ಶುಭಕರನೆ
ಮೋದದಿ ಸಲಹುವ ಮಂಗಳ ರೂಪನೆ
ಗಾನವ ಆಲಿಸು ಮಹದೇವನೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ರಾಗಸಂಯೋಜನೆ ಗಾಯನ
ಶ್ರೀಮತಿ ಭುವನೇಶ್ವರಿ ಭಟ್ ಬೆಳ್ಳಾರೆ.
- 25. https://youtu.be/hATIc8Gbdck?si=fKHhxw25AzAKSCfK
*********************
ಭಾವಗೀತೆ
********
ರಚನೆ, ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
ರಾಗಸಂಯೋಜನೆ &ಗಾಯನ
ಬಾಲಕೃಷ್ಣ ಆಚಾರ್ಯ ಪುತ್ತಿಗೆ
ಸಂತೋಷ
*********
ಸಂಗೀತವೇ ನಿನ್ನ ಸಂಗೀತವೇ
ಸಂತೋಷವೇ ನಿನ್ನ ಸಂತೋಷವೇ ll
ಸಾಹಿತ್ಯ ಗಾಯನ ರಾಗವು
ಮನದಲಿ ಮೂಡಿದ ಭಾವವು ll
ಹಾಡುತ ಭಾವನೆ ತುಂಬಲು
ಕೇಳುತ ಮರೆಯುವ ನೋವನು ll
ಹರುಷದ ಮನಸಲಿ ಸೇರಲು
ಕರುಣೆಯ ತೋರಿಸು ನೀನಿoದು ll
ಹೂವಿನ ಹಾಗೆಯೆ ನಗುತಿರು
ನೀರಿನoತೆಯೆ ಹರಿಯುತಿರು ll
ಸುಂದರ ನಗುವನು ಬೀರುವೆ
ಚಂದಿರ ಕಾಂತಿಯ ಚೆಲುವೆಯೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 26. ಶ್ರೀ ಮಲ್ಲಿಕಾರ್ಜುನ
****************
ಶರಣು ಬಂದೆನು ಮಲ್ಲಿಕಾರ್ಜುನ
ಕರುಣೆ ತೋರಿಸು ಭಕ್ತವತ್ಸಲ
ಹರುಷದಿಂದಲಿ ಭಜಿಪೆ ನಿನ್ನನು
ಅಭಯ ನೀಡುತ ಪೊರೆಯೊ ಎನ್ನನು ll
ಹೂವು ಹಣ್ಣನು ತರುವೆ ಭಕ್ತಿಲಿ
ಗಾನ ಪಾಡುತ ನುತಿಪೆ ಶ್ರದ್ದೆಲಿ
ಪಾದಕೆರಗುತ ನಮಿಸಿ ನಿಂದೆನು
ಪಾಪ ನೀಗಿಸು ಕರುಣೆಯಿಂದಲಿ ll
ಪಾಹಿ ಶಂಕರ ದೇಹಿ ಎಂದೆನು
ಸಕಲ ಜೀವಕು ನೀನೆ ದೇವರು
ಲೋಕ ನಾಯಕ ವಿಶ್ವ ನಾಥನೆ
ಪಾರ್ವತೀಶನೆ ಸಲಹು ದೇವನೆ ll
ಹರಸು ಈಶನೆ ಶ್ರೀಶೈಲದೊಡೆಯನೆ
ಕರವ ಮುಗಿದೆನು ಚಂದ್ರಶೇಖರ
ಬುದ್ಧಿ ಶಕ್ತಿಯ ಬೇಡಿ ಬಂದೆನು
ನಿತ್ಯ ಪಾಲಿಸು ನಂದಿ ವಾಹನ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
-
27 ಮನೆಯೊಡತಿ
***********
ಮಡದಿಯು ಒಬ್ಬಳು ಜೊತೆಯಲಿ ಇದ್ದರೆ
ನನಗದು ಮನದಲಿ ಉಲ್ಲಾಸ
ಮಡದಿಯು ಒಬ್ಬಳು ಹತ್ತಿರ ವಿದ್ದರೆ
ನನ್ನಯ ಬಾಳಲಿ ಸಂತೋಷ ll
ಅವಳಿಗು ಇರುವುದು ಆಸೆಯು ಮನಸಲಿ
ನಡೆಸುವೆ ಚಂದದಿ ನಾನಿಂದು
ತುಂಬಿದ ಕೊಡವದು ತುಳುಕದು ಎಂದೂ
ತುಂಬಿಸು ಈಗಲೆ ನೀ ಬಂದು ll
ಜನ್ಮದ ಜನ್ಮದ ಬಂಧುವು ನೀನೂ
ಜಗದಲಿ ನೀನೇ ಮುಂದಿರುವೆ
ಪತಿಯೇ ಪರದೈವ ಎನ್ನುವ ತತ್ವವಾ
ಸಾರಿದೆ ನೀನೂ ಜಗದೊಳಗೆ ll
ಹೊತ್ತಿಗೆ ಊಟವ ನೀಡುತ ನಗುವಲಿ
ದೇವರ ಹಾಗೆಯೆ ಕಾಣುತಲಿ
ಮಕ್ಕಳ ಹಡೆಯುತ ಮುದ್ದಿಸಿ ಸಾಕುವೆ
ಸುಂದರ ಕುಟುಂಬ ನಡೆಸುತಲಿ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
-
27. ಸವಿಯ ಮಾತು
************
ಅರಳಿ ಮರದ ಕೆಳಗೆ ನಿಂತೆನು
ಸುರಿವ ಮಳೆಯ ಜೊತೆಯಲಿ
ಕರದಲೊಂದು ಕೊಡೆಯು ಇಲ್ಲದೆ
ಹೊರಟೆ ನೆನೆದು ಮಳೆಯಲಿ ll
ನೆನೆದು ಬಂದೆ ಎಂದು ಬೈವಳು
ಮನದ ಒಡತಿ ಜೋರಲಿ
ಸನಿಹ ಬಂದು ಸ್ನೇಹ ತೋರಿಸು
ಮುನಿಸು ಬೇಡ ಮನದಲಿ ll
ಸುಮನ ಎಂಬ ಮಡದಿ ಸುಂದರಿ
ಕಮಲದಂತ ಮೊಗದಲಿ
ಹಿಮದ ಹಾಗೆ ಕರಗಿ ಹೋಗುವೆ
ಗಮನ ಹರಿಸು ನನ್ನಲಿ ll
ವದನ ಕಂಡು ಮೋಹಗೊಂಡೆನು
ಕದನ ಬೇಡ ನಮ್ಮಲಿ
ಸುದಿನ ಇದುವೆ ಬಾಳ ಪಯಣಕೆ
ಉದಯ ರವಿಯ ಬೆಳಕಲಿ ll
ಭುವಿಯ ಚಂದ ನೋಡು ಬಾರೇ
ಅವನಿ ಹಚ್ಚ ಹಸುರಲಿ
ಸವಿಯ ಮಾತನಾಡು ಕೋಮಲೆ
ಕವಿಯ ಮನಸು ತಿಳಿಯಲಿ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
-
28. ದೇವರೊಲುಮೆ
************
ಚಂದದ ನಗುವಲಿ ಅಂದದ ಮೊಗದಲಿ
ಚಂದಿರನಂತೆಹೆ ಶೋಭಿಸುವೆ
ಮುದ್ದಿನ ಮಾತಲಿ ಸೆಳೆದೆಯ ಒಲವಲಿ
ಸುಂದರ ಕಂಗಳ ಓ ಚೆಲುವೆ ll
ಗಾಯನ ಲೋಕದಿ ಹೆಸರನು ಗಳಿಸಿದೆ
ಗುರುಗಳು ತೋರಿದ ದಯೆಯಿಂದ
ಮರೆಯದೆ ಎಲ್ಲರ ಸ್ನೇಹವ ಆಶಿಸಿ
ಮೆರೆಯುವೆ ಪ್ರೀತಿಯ ನುಡಿಯಿಂದ ll
ಸಾಧನೆ ಮಾಡಿದೆ ಸಾಧಿಸಿ ತೋರಿದೆ
ಆದರು ಮುಗಿಯದು ಕಲಿತಷ್ಟು
ಕಲಿಯುವ ಮನಸಲಿ ಬೆಳೆಯುವ ಹಂಬಲ
ದೇವರ ಒಲುಮೆಯು ಬಹಳಷ್ಟು ll
ರಾಗವ ಹಾಕುತ ಗಾನವ ಪಾಡುತ
ಮರೆಯುವೆ ನೋವನು ಮನದಲ್ಲಿ
ಭಾವನೆ ಉಕ್ಕಲು ಸೊಗಸಲಿ ಹಾಡುತ
ಮೋದವ ಹೊಂದುವೆ ತನ್ಮಯದಿ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
-
29. ಓ ಚೆಲುವೆ
********
ಒಲವಿನ ನಗುವಲಿ ಸೆಳೆದೆಯ ಮನಸನು
ಕೋಮಲ ಹೃದಯದ ಓ ಚೆಲುವೆ
ಸಲುಗೆಯೆ ಎನ್ನಲಿ ಪ್ರೀತಿಯ ನುಡಿಗಳು
ಆಡಲು ಕುಳಿತೆಯ ಓ ಮನಸೆ ll
ಮಲ್ಲಿಗೆ ಮಾಲೆಯ ಮುಡಿದಿಹ ರಮಣಿಯೆ
ಸುಂದರ ಕನಸಲು ನೀ ಬರುವೆ
ಎದುರಲಿ ಬಂದೆಯ ಕನಸಿನ ರಾಣಿಯೆ
ತೋಷವ ತೋರಿಸಿ ನೀ ನಗುವೆ ll
ಹಸುರಿನ ರವಿಕೆಯ ತೊಟ್ಟಿಹ ಚಂದವು
ಭಾರತ ಮಾತೆಯ ಮಡಿಲಲ್ಲಿ
ಹಣೆಯಲಿ ಗಂಧವು ಕೊರಳಲಿ ಮಾಲೆಯು
ಅಂದದಿ ಕಾಣುವೆ ನೀನಿಲ್ಲಿ ll
ಕರದಲಿ ಬಳೆಗಳ ಧರಿಸಿಹ ಶೋಭೆಯು
ಹೆಚ್ಚಿದೆ ನಿನ್ನೀ ಮುಖದಲ್ಲಿ
ಸೀರೆಯ ಬಣ್ಣವು ಕಣ್ಣಿನ ನೋಟವು
ವರ್ಣಿಸಲಾಗದು ಮಾತಲ್ಲಿ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
- 30. https://youtu.be/NcG91_yByqg?si=Dc-s-pOFvPJPcQoQ
***************ರೂಪ ರಾಶಿ
**********
ಹಸುರಿನ ಸೀರೆಯ ಉಟ್ಟಿರುವೆ
ಕರದಲಿ ಬಳೆಯನು ತೊಟ್ಟಿರುವೆ
ತಲೆಯಲಿ ಮಲ್ಲಿಗೆ ಮುಡಿದಿರುವೆ
ಚೆಲುವಿನ ನಗುವನು ಬೀರುತ ನಿಂತಿರುವೆ ll
ಕೊರಳಲಿ ಮಾಲೆಯು ಧರಿಸಿರುವೆ
ಚಂದದಿ ಕಾಣುವ ಸುಂದರಿಯೆ
ಸುಂದರ ನಗುವನು ಚೆಲ್ಲಿರುವೆ
ಮೋಹದ ನೋಟದಿ ನೋಡುವ ಓ ಚೆಲುವೆ ll
ಇನಿಯನ ಹಾದಿಯ ಕಾದಿರುವೆ
ಹೂನಗು ಚೆಲ್ಲುತ ನೀ ಸೆಳೆವೆ
ಚಂದಿರ ಮೊಗದಲಿ ಚೆಲು ನಗುವೇ
ಚಂದದಿ ಶೃಂಗಾರ ಮಾಡಿರುವ ಸುಂದರಿಯೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ,ರಾಗಸಂಯೋಜನೆ
ಗೋಪಾಲಕೃಷ್ಣ ಭಟ್.
-
31. ನಗುವ ಸುಂದರಿ
*************
ಹಣೆಯಲಿ ಗಂಧವು ಕೊರಳಲಿ ಮಾಲೆಯು
ಮುಡಿದಿಹೆ ಮಲ್ಲಿಗೆ ಅಂದದಲಿ
ಕಂಗಳ ಸೆಳೆತವು ನಿನ್ನನು ನೋಡಲು
ಬಳೆಗಳ ನಾದವು ಚಂದದಲಿ ll
ನಗುತಲಿ ಕುಳಿತಿಹೆ ಎನ್ನನೆ ನೋಡುತ
ಚಂದದ ಸೀರೆಯ ಉಟ್ಟಿರುವೆ
ಶೃoಗಾರ ಮಾಡುತ ಕಾಯುವೆ ಯಾರನೊ
ತುಟಿಯಲಿ ನಗೆಯನು ಚೆಲ್ಲಿರುವೆ ll
ಅಂದದ ಮೊಗದಲಿ ಸುಂದರ ನಗುವಲಿ
ಸೆಳೆದೆಯ ನೀನೂ ಅರಗಿಣಿಯೆ
ಕರದಲಿ ಬಳೆಗಳ ಸದ್ದನು ಮಾಡುತ
ಕರೆದೆಯ ಒಲವಲಿ ಸುರಗಿಣಿಯೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 32. https://youtu.be/I4VVWuwnrM8?si=v9tadzGIjbv_kbwE
******************ಆ ರವಿ ಜಾರಿದ ಧಾಟಿಯಲ್ಲಿ
***********************
ವಯ್ಯಾರಿ ನೀ ಬಾರೆಯ
********************
ಹೂ ಚೆಲುವಾಗಿದೇ ನೀ ಮಧು ಹೀರಿದೇ
ಓ ಓ ಓ ಓ ಹೋ ಹೋ ಓ ಓ ,,,,
ದುಂಬಿಯ ಸೆಳೆಯಿತು ಹೂವಿನ ಅಂದ
ಗಂಧವ ಬೀರುವ ಹೂವಿನ ಚಂದ
ಕರೆಯಲು ಬಂದ ಬಳಿಯಲಿ ನಿಂದ
ಸೇರೆ ಗೆಳತಿ ಈಗ ನಾ ಕೂಡಿ ಕೊಳುವೆ ಬೇಗ..
ಹೂ ಚೆಲುವಾಗಿದೆ ನೀ ಮಧು ಹೀರಿದೇ
ಸಂತೋಷದಿಂದ ಬಂದೆ ನಾನಿಂದು..
ಉಲ್ಲಾಸದಲ್ಲಿ ತೇಲಿ ಹೋಯಿತಿಂದು..
ಹೂ ಚೆಲುವಾಗಿದೆ ನೀ ಮಧು ಹೀರಿದೇ..
ಸಂತೋಷದಿಂದ ಬಂದೆ ನಾನಿಂದು..
ಉಲ್ಲಾಸದಲ್ಲಿ ತೇಲಿ ಹೋಯಿತಿಂದು …
ಸುರಿಸಿಲ್ಲಿ ಸವಿಯಾದ ಮಕರಂದವೇ
ಉಸಿರಲ್ಲಿ ಉಸಿರಾಗಿ ಮೆರೆದಾಡುವೇ
ಹಸಿರಾದ ಗಿಡದಲ್ಲಿ ನಲಿದಾಡುವೇ
ಹಸಿರಾದ ಗಿಡದಲ್ಲಿ ನಲಿದಾಡುವೇ
ಆ ಬಾನಲ್ಲಿಯೇ….
ಆ ಬಾನಲ್ಲಿ ಹಾರೋಣ ಜೊತೆಯಾಗಿ ಬಾ …
ಹೂ ಚೆಲುವಾಗಿದೆ ನೀ ಮಧು ಹೀರಿದೇ
ಸಂತೋಷದಿಂದ ಬಂದೆ ನಾನಿಂದು
ಉಲ್ಲಾಸದಲ್ಲಿ ತೇಲಿ ಹೋಯಿತಿಂದು..
ಆ ಗಾನ ಸಂಗೀತ ಬಾ ಕೇಳುವಾ
ಆ ಬಾನ ಚಂದ್ರಮನ ಬಾ ನೋಡುವಾ
ಈ ನಿನ್ನ ನಗುವಲ್ಲಿ ಕುಣಿದಾಡುವಾ
ಈ ನಿನ್ನ ನಗುವಲ್ಲಿ ಕುಣಿದಾಡುವಾ
ಸಂತೋಷವೇ.. ಸಂಗೀತ ವಯ್ಯಾರಿ ನೀ ಬಾರೆಯಾ…
ಹೂ ಚೆಲುವಾಗಿದೆ ನೀ ಮಧು ಹೀರಿದೇ
ಸಂತೋಷದಿಂದ ಬಂದೆ ನಾನಿಂದು..
ಉಲ್ಲಾಸದಲ್ಲಿ ತೇಲಿ ಹೋಯಿತಿಂದು….
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ. ,ವಸಂತ ಬಾರಡ್ಕ.
33. https://youtu.be/h40G11kgtig?si=XruPFWu104K4EAE5
**********************
https://youtu.be/_S3ugzR7kQk?si=iVKorEerZcZKHHab
********************
ಬಾರಡ್ಕದ ಮಹಿಮೆ
****************
ಆಧಾರ ನಮಗಾಧಾರ ನಮಗಾಧಾರ ಬಾರಡ್ಕದ ವಿಷ್ಣು ದೈವ ನಮಗಾಧಾರ
ಗುಳಿಗ ದೈವ ಕೃಪೆಯಿಂದ ಸುಖ ಪರಿವಾರ
ನಿಸರಿ…
ಬಾಳಿನ ಹಾದಿಯಲ್ಲಿ ಬಾಡುತಿರೆ ನೋವಿಂದ
ಕಳಶದ ಅಭಿಷೇಕ ಪರಿಹಾರವು
ಕಂಕಣ ಬಲಬರದೆ ನೋವಿಂದ ಕುಳಿತಿರದೆ
ಬೇಡಿದರೆ ಸಿಗದಿರದು ಸುಖಸಂಸಾರ
ಸಲ್ಲದ ನುಡಿಕೇಳಿ ಮನದಲ್ಲಿ ನೊಂದಿರಲು
ಸಲ್ಲದ ನುಡಿಕೇಳಿ ಮನದಲ್ಲಿ ನೊಂದಿರಲು
ಸೋಲು ತಂದ ನೋವಿನಿಂದ ಪೂರ್ಣ ಪರಿಹಾರ
ಗುಳಿಗ ದೈವ ಕೃಪೆಯಿಂದ ತ್ವರಿತ ಪರಿಹಾರ||
ಕರುಳಿನ ಕುಡಿಯಿರದೆ ವಂಶದ ಕುಡಿಗಾಗಿ
ಬೇಡಿದರೆ ದೈವದಲಿ ವಂಶೋದ್ಧಾರ
ಬಾರಡ್ಕ ಊರಲ್ಲಿ ನೆಲೆನಿಂತಿರುವ ಶಕ್ತಿ
ವಿಷ್ಣು ಮೂರ್ತಿ ದೈವಕ್ಕೆ ಕೆಂಡ ಸೇವೆಯು
ಗುಳಿಗ,ವಿಷ್ಣು ಮೂರ್ತಿ ಕೃಪೆಯಲ್ಲಿ ಬಾರಡ್ಕ
ಗುಳಿಗ ವಿಷ್ಣು ಮೂರ್ತಿ ಕೃಪೆಯಲ್ಲಿ ಬಾರಡ್ಕ
ಊರ ಭಕ್ತ ಬಾಂಧವರ ಪುಣ್ಯ ಫಲವೇ
ದೈವ ನೆಲೆಯ ಬಲದಿಂದ ಸುಖದಿ ನಲಿವು||
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ, ಬಾಲಚಂದ್ರ ಬಿ.ಬಾರಿಕ್ಕಾಡ್
- 34. https://youtu.be/pxQ5lgTn-4M?si=oYaNLIsuQUxxPmfV
**********************ಸುಮಧುರ ಗಾಯನ
*****************
ಗಣಪತಿ ಶಾರದೆ ಮನದಲಿ ಧ್ಯಾನಿಸಿ
ಗುರುವಿನ ಪಾದಕೆ ನಮಿಸೋಣ
ನಿತ್ಯವು ಹಾಡುತ ಪರಿಶ್ರಮದಿಂದಲಿ
ಬಾನಿನ ಎತ್ತರ ಏರೋಣ ll
ರಾಗಕೆ ತಾಳವು ಸುಮಧುರ ಕಂಠವು
ಸೇರಲು ಗಾಯನ ಇಂಪಾಗಿ
ಜೊತೆಯಲಿ ರಚನೆಗೆ ಜೀವವ ತುಂಬಲು
ಕೇಳಲು ಮನಸಿಗೆ ತಂಪಾಗಿ ll
ಸಾಧನೆ ಬೇಕದು ಹಾಡಲು ಕಲಿಯಲು
ಸಾಧಿಸಿ ತೋರಿಸು ಜೀವನದಿ
ಸಾಗಲಿ ಮುಂದಕೆ ಗಾಯನ ಲೋಕದಿ
ಬೆಳೆಯಿರಿ ಎಲ್ಲರು ಉತ್ಸಾಹದಿ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀಮತಿ ಸುಜಾತಾ ಜಿ ಭಟ್.
35. https://youtu.be/hATIc8Gbdck?si=fKHhxw25AzAKSCfK
*********************
ಭಾವಗೀತೆ
********
ರಚನೆ, ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
ರಾಗಸಂಯೋಜನೆ &ಗಾಯನ
ಬಾಲಕೃಷ್ಣ ಆಚಾರ್ಯ ಪುತ್ತಿಗೆ
-
ಸಂತೋಷ
*********
ಸಂಗೀತವೇ ನಿನ್ನ ಸಂಗೀತವೇ
ಸಂತೋಷವೇ ನಿನ್ನ ಸಂತೋಷವೇ ll
ಸಾಹಿತ್ಯ ಗಾಯನ ರಾಗವು
ಮನದಲಿ ಮೂಡಿದ ಭಾವವು ll
ಹಾಡುತ ಭಾವನೆ ತುಂಬಲು
ಕೇಳುತ ಮರೆಯುವ ನೋವನು ll
ಹರುಷದ ಮನಸಲಿ ಸೇರಲು
ಕರುಣೆಯ ತೋರಿಸು ನೀನಿoದು ll
ಹೂವಿನ ಹಾಗೆಯೆ ನಗುತಿರು
ನೀರಿನoತೆಯೆ ಹರಿಯುತಿರು ll
ಸುಂದರ ನಗುವನು ಬೀರುವೆ
ಚಂದಿರ ಕಾಂತಿಯ ಚೆಲುವೆಯೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 35. https://youtu.be/3OZUSFLV3LE?si=jPdxKoktWoJ2G1Ax
*********************ಭಕ್ತಿಗೀತೆ :
ಶೀರ್ಷಿಕೆ : ತ್ರಿಶೂಲ ಧಾರಿ ಶಂಕರ
*************************
ತ್ರಿಶೂಲ ಧಾರಿಯೆ ಡಮರುಗ ಹಸ್ತನೆ
ಚಂದ್ರಕಲಾಧರ ಪರಮೇಶ
ಪಾರ್ವತಿ ರಮಣನೆ ಪಾಲಿಸು ದೇವನೆ
ಭಕ್ತಿಯ ವಂದನೆ ಗಿರಿಜೇಶ ll
ತಳಿಗಿರಿ ದೇಗುಲ ಭಕ್ತಿಯ ಆಲಯ
ಕಾಯುವೆ ಕರುಣದಿ ಭಕ್ತರನು
ಶಿವನನು ನಂಬಲು ಬಿಡದೆಯೆ ಪಾಲಿಪ
ಭಕ್ತಿಯ ಕರೆಯಾ ಕೇಳುವನು ll
ಹಸುರಿನ ಪರಿಸರ ನಡುವಲಿ ಶೋಭಿಪ
ಗಿರಿಜಾ ವಲ್ಲಭ ಜಗದೀಶ
ಜಯ ತ್ರಿಪುರಾರಿಯೆ ಶಂಭೋ ಶಂಕರ
ಅಭಯವ ಕರುಣಿಸು ಸರ್ವೇಶ ll
ಗಂಗೆಯ ಶಿರದಲಿ ಧರಿಸಿಹ ದೇವನೆ
ಕರುಣಾ ಸಾಗರ ಶುಭಕರನೆ
ಮೋದದಿ ಸಲಹುವ ಮಂಗಳ ರೂಪನೆ
ಗಾನವ ಆಲಿಸು ಮಹದೇವನೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ರಾಗಸಂಯೋಜನೆ ಗಾಯನ
ಶ್ರೀಮತಿ ಭುವನೇಶ್ವರಿ ಭಟ್ ಬೆಳ್ಳಾರೆ.
- 36. https://youtu.be/lmjPsvGyCd0?si=jGzJB_Z8tGXp2P2q
**************
Lyrics : B Udaneshwara Prasad Mooladka
******************************************
Singer : smt Lalitha Ramesh
*****************************
ಎಲ್ಲರಿಗೂ ನಮಸ್ಕಾರ 🙏🙏🙏
“ಭಕ್ತಿ ಪುಷ್ಪಾಂಜಲಿ” ಬಳಗದ ನಾಲ್ಕನೇ ವರ್ಷದ ವಾರ್ಷಿಕೋತ್ಸವಕ್ಕೆ ಹಾರ್ದಿಕ ಶುಭಾಶಯಗಳು 🌹🌺🙏
*****************************ಶುಭಾಶಯಗೀತೆ
*************
ದೇವರ ಬಗೆಗಿನ ಭಕ್ತಿಯ ಹೆಚ್ಚಿಸೊ
ಸಾರ್ಥಕ ಕಾರ್ಯದ ಬಳಗವಿದು
ಭಕ್ತಿ ಪುಷ್ಪಾಂಜಲಿ ಎನ್ನುವ ಹೆಸರಲಿ
ನಾಲ್ಕನೆ ವರ್ಷವು ಸಂದಿಹುದು ll
ಹೆಮ್ಮೆಯ ಬಳಗಕೆ ಶುಭವನು ಕೋರುವೆ
ಸಂತಸದಿಂದಲೆ ನಾನಿಂದು
ಹೀಗೆಯೆ ಕಾರ್ಯವು ನಡೆಯುತಲಿರಲಿ
ಎನ್ನುವ ಬಯಕೆಯು ನನಗಿಂದು ll
ಸುಂದರ ಬಾನಲಿ ಹೊಳೆಯುವ ರವಿಯಂತೆ
ಬೆಳಗಲಿ ಭಕ್ತಿಯ ಪುಪ್ಪಾoಜಲಿ
ಭಕ್ತಿಯ ಸಾಹಿತ್ಯ ಹಾಡುತ ಇರುವಾಗ
ಕೇಳುತ ಪಡೆಯುವೆ ಆನಂದ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 37. https://youtu.be/NCeH0EKoJ28?si=1N5iV_betCilAg67
*************#ಶಂಕರಿ ಅಂಬಿಕೆ
**************
ಶಂಕರಿ ಅಂಬಿಕೆ ಭವಾನಿ ತಾಯೇ
ಸಂಕಟ ಕಳೆಯಲು ನೀ ಬಾರೆ
ಶಂಕರನರಸಿಯೆ ದಯೆಯನು ತೋರೆಯೆ
ಕಿಂಕರಗೊಲಿಯುತ ನೀ ಪೊರೆಯೆ ll
ಬದುಕಿನ ಕಷ್ಟವ ನೀಗಿಸು ಮಾತೇ
ಸದ್ಗುಣ ಕರುಣಿಸು ಬೇಡುವೆನು
ಕದವನು ತೆರೆಯುವೆ ಹೃದಯದಿ ನೆಲೆಸಲು
ಪದತಲದಲ್ಲಿಯೆ ನಮಿಸುವೆನು ll
ಕರುಣೆಯ ಹರಿಸುವ ತಾಯಿಗೆ ವಂದನೆ
ಮೊರೆಯನು ಆಲಿಸು ನೀನೀಗ
ಸುರಿಸುವೆ ಕಂಬನಿ ಎನ್ನಯ ಕಣ್ಣಲಿ
ಸರಿಯಲಿ ದುರಿತವು ಬಲುಬೇಗ ll
ನಿನ್ನಯ ಪಾದವ ನಂಬಿದೆ ಈಶ್ವರಿ
ನಿನ್ನನು ಭಜಿಸುವೆ ಎಂದೆಂದು
ಬನ್ನವ ಕಳೆಯುತ ಮನವನು ಬೆಳಗಿಸಿ
ಎನ್ನನು ಪಾಲಿಸು ನೀನೆಂದು ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶೀಲಾ ಜಿ ಭಟ್ ಪದ್ಯಾಣ .
-
38. ಶರಷಟ್ಪದಿಯಲ್ಲಿ ಒಂದು ಪ್ರಯತ್ನ
ಭಾಗ್ಯದ ನಿಧಿ
**********
ಹೊಗಳಿಕೆ ನುಡಿಗಳು
ತೆಗಳುವ ಜನಗಳು
ಸಿಗುವರು ಮಂದಿಯು ಬಳಗದೊಳು
ಹಗೆಯನು ಸಾಧಿಸಿ
ನಗೆಯನು ಬೀರುವ
ಬಗೆಬಗೆ ಬಣ್ಣದ ಮಾತುಗಳು ll
ಸೊಗಸನು ಮೆರೆಸುವ
ಮೊಗವದು ಸುಂದರ
ಮುಗಿಯದು ದಿನದಿನ ಬರೆದಂತೆ
ಮುಗಿಯುವ ಕರಗಳ
ಬಗೆದರೆ ದೇವರು
ಸಿಗುವುದು ಭಾಗ್ಯದ ನಿಧಿಯಂತೆ ll
ಬಿಡದೆಯೆ ಪೂಜಿಸಿ
ಪಡೆಯುವ ನೆಮ್ಮದಿ
ಹಿಡಿಯುವ ದೇವನ ಪಾದವನು
ಸಿಡುಕನು ಮಾಡದೆ
ಕೆಡುಕನು ಬಯಸದೆ
ನಡೆಯುವುದೊಳ್ಳೆಯ ಹಾದಿಯೊಳು ll
✍️ . ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
-
39. ಲೀಲಾ ಮೂರುತಿ ಶ್ರೀಕೃಷ್ಣ
*********************
ದೇವಕಿ ಉದರದಿ ಜನಿಸಿದ ನೀತನು
ಮಾನವ ರೂಪದಿ ಬಂದವನು
ಸೋದರ ಮಾವನು ಹೂಡಿದ ತಂತ್ರವ
ಬೇಧಿಸಿ ನಗುತಲಿ ನಿಂದವನು ll
ಕೃಷ್ಣನ ವಧಿಸಲು ಹಬ್ಬದ ನೆಪದಲಿ
ಕಂಸನು ಹೂಡಿದ ಹಬ್ಬವದು
ಕೃಷ್ಣನ ಕರೆಯಲು ಬಂದನು ಅಕ್ರೂರ
ಹೋಗಲು ಕರೆದನು ರಾಮನನು ll
ಸಾಗುತ ಬಂದರು ಜೊತೆಯಲಿ ಆಗಲೆ
ರಜಕನು ಎದುರಿಗೆ ಸಿಗಲಾಗ
ಕೃಷ್ಣನು ಕೇಳಿದ ವಸ್ತ್ರವ ನೀಡಲು
ಉಡಲಿಕೆ ಬೇಕಿದೆ ಬಲುಬೇಗ ll
ಕೊಡುವೆನೆ ನಾನಿದು ರಾಜರ ವಸ್ತ್ರವು
ಎನ್ನಲು ರಜಕನು ಆವಾಗ
ಬುದ್ಧಿಯ ಹೇಳಲು ಕೇಳದ ರಜಕಗೆ
ಬುದ್ಧಿಯ ಕಲಿಸಿದ ಹರಿಯಾಗ ll
ಮತ್ತದು ಬಂದಿಹ ಅಸುರರ ತರಿದನು
ಕಂಸನು ಮಾತ್ರವೆ ಇನ್ನೀಗ
ಹಿಂದಿನ ದಿನವೇ ಕನಸಲಿ ಬೆಚ್ಚಿದ
ಕೃಷ್ಣನ ಮಾಯೆಯ ಕಂಡಾಗ ll
ಸೋದರ ಮಾವನು ಯುದ್ಧದಿ ಸೋಲಲು
ಮುಕ್ತಿಯ ಕರುಣಿಸೆ ಶ್ರೀಕೃಷ್ಣ
ದುಷ್ಟರ ವಧಿಸಲು ಶಿಷ್ಟರ ಪೊರೆಯಲು
ಭಕ್ತಿಲಿ ಕರೆಯುವೆ ಹರಿಕೃಷ್ಣ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 40. https://youtu.be/ni8DNQQz8J8?si=ANxMbOTi8vmd9Yxp
**********************ಬಾಳ ದೋಣಿ
***********
ದೂರ ತೀರವ ಸೇರ ಬೇಕಿದೆ
ಬಾಳ ದೋಣಿಯು ವೇಗದಿ
ಬೀಸೊ ಗಾಳಿಗೆ ಗುರಿಯ ತಪ್ಪದೆ
ಸಾಗ ಬೇಕಿದೆ ಜೊತೆಯಲಿ ll
ಸುರಿವ ಮಳೆಯನು ಬಿಸಿಲ ಬೇಗೆಯ
ಸಹಿಸಿ ಕೊಳ್ಳುವ ಜೀವನ
ಪ್ರೀತಿ ಪ್ರೇಮದಿ ಒಲವ ತೋರುವ
ಸ್ನೇಹವೊಂದೇ ಅನುದಿನ ll
ಜನುಮ ಜನುಮದ ಪುಣ್ಯ ಫಲವಿದು
ನೀನು ಬಂದಿಹೆ ಬಾಳಿಗೆ
ನೋವು ನಲಿವಿನ ಎರಡು ಮುಖಗಳು
ಬದುಕಿನುದ್ದಕೆ ಸಾಗಿದೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶೀಲಾ ಜಿ ಭಟ್ ಪದ್ಯಾಣ .
- 41. https://youtu.be/wNzvkeUGGnU?si=p97zbfdooApGo_g6
********************
ಸಾಹಿತ್ಯ : ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
ಹಾಡಿದವರು : ಶ್ರೀಮತಿ ಲಲಿತಾ ಸರಸ್ವತಿ
**********************************
ಬರೆದೆ ನೀನು ನಿನ್ನ ಹೆಸರ ಧಾಟಿ
*************************ತಾಯಿಯ ಮಮತೆ
****************
ಜನನಿ ನಿನ್ನ ಮಡಿಲ ಸ್ವರ್ಗ ಪಡೆದ ನಾನು ಧನ್ಯನು
ನೆನೆವೆ ತಾಯೆ ಬಿಡದೆ ನಿನ್ನ ಕಳೆವೆ ಸುಖದಿ ದಿನವನು ll
ತುತ್ತು ತಿನಿಸಿ ಸಾಕಿ ಸಲಹಿ ಹೃದಯ ತುಂಬ ಪ್ರೀತಿಸಿ
ಬಾಳಿನಲ್ಲಿ ನಗುವ ತಂದೆ
ಮನದ ನೋವ ಮರೆಯಿಸಿ ll
ಮಾತೆ ನೀನು ಬಳಿಯಲೆಂದು ಇರಲು ನನ್ನ ಜೀವನ
ನಿನ್ನ ಕರುಣೆ ನೆರಳಿನಲ್ಲಿ ನನ್ನ ಬದುಕು ಪಾವನ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 42. https://youtu.be/RMjXET57kqs?si=DU7a2Zdz57KQ2TjT
*********************
Lyrics, B Udaneshwara Prasad Mooladka
**********
Singer, smt, Sumangala Suresh Bengalore
************ಮಂಗಳ ರೂಪಿಣಿ
**************
ಮಂಗಳ ರೂಪಿಣಿ ಶಂಕರಿಯೆ
ಕಂಗಳ ತೆರೆಯೇ ಅಂಬಿಕೆಯೆ
ವಂದಿಪೆ ಪಾದಕೆ ಭಗವತಿಯೆ ll
ಜಗವನು ಪೊರೆಯುವ ತಾಯೇ
ಮಗನನು ಕರುಣದಿ ಕಾಯೇ
ನಗುವನು ಬೀರುವ ಮಾಯೇ ll
ಬಂದೆನು ನಿನ್ನಯ ಸನ್ನಿಧಿಗೆ
ನಿಂದೆನು ಶಿರಬಾಗಿ ನಮಿಸುತಲಿ
ಕಂಡೆನು ನಿನ್ನ ದಿವ್ಯ ರೂಪವನು ll
ಅಂಬೆಯು ನೀನೇ ಜಗದಂಬೆ
ಭಕ್ತರ ರಕ್ಷಿಸಿ ಕಾಯುವ ದೇವಿಯೆ
ಕೊಲ್ಲೂರ ಮೂಕಾಂಬಿಕೆ ತಾಯೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
43. https://youtu.be/RVtehIHWkg8?si=nW-TSG7KKJ1NN5B3
******************
✍️.Lyrics. B Udaneshwara
Prasad Mooladka
********************
Singer, smt, Chaithanya Balakrishna
Venur
*******
ಭಕ್ತಿಗೀತೆ :
ದತ್ತವಿಷಯ : ಮಾಧವ
ಶೀರ್ಷಿಕೆ : ಶ್ರೀಹರಿ
***************
ವಾಸುದೇವ ರಂಗ ಬಂದನೊ
ವಾಸುಕಿಶಯನ ನಾರಾಯಣ
ಸಾಸಿರನಾಮದ ಮಾಧವನೆ
ಸಾಸಿವೆಯಷ್ಟು ಭಕ್ತಿಯುಯೆನ್ನದು ll
ವಾಮನ ರೂಪದಿ ಬಂದವನ
ನಾಮವ ಭಜಿಸುತ ನಿಂದೆನು
ಕಾಮಹರನ ಮಿತ್ರ ನಂದನು
ತಾಮಸವೇತಕೆ ಎನ್ನ ಬಳಿಬರಲು ll
ಯುದ್ಧವ ಮಾಡಿದೆ ಕಂಸನಲ್ಲಿ
ಗೆದ್ದುಕೊಂಡಿಹೆ ಮಥುರಾ ನಗರವ
ಕದ್ದುಮುಚ್ಚಿ ಬೆಣ್ಣೆಯ ಕದಿಯಲು
ಮುದ್ದು ಕೃಷ್ಣ ಸಿಕ್ಕಿ ಬಿದ್ದ ಯಶೋದೆ ಕೈಯಲಿ ll
ಕಟ್ಟಿ ಹಾಕಿದ ಕೃಷ್ಣನ ಗೆಳೆಯರು ಬಿಡಿಸೆ
ತಟ್ಟನೆ ಓಡಿ ಕಾಳಿಂಗನ ಮೆಟ್ಟಿದ
ದುಷ್ಟರನೆಲ್ಲ ಬಿಡುವನೆ ಶ್ರೀಹರಿ
ಶಿಷ್ಟರ ಪಾಲಿಪಾ ಮುಕುಂದ ಕೇಶವನೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ ರಾಗಸಂಯೋಜನೆ
ಶ್ರೀಮತಿ ಚೈತನ್ಯ ಬಾಲಕೃಷ್ಣ ವೇಣೂರು.
- 44. https://youtu.be/s7x5Zlf7F1I?si=f26ods1kByhOejWX
*********************ಶ್ರೀ ರುದ್ರ ದೇವನೆ
*************
ಶ್ರೀ ರುದ್ರ ದೇವನೆ ವೀರ ಭದ್ರನೆ
ಚಂದ್ರಶೇಖರ ರಕ್ಷಿಸು
ರೌದ್ರ ರೂಪವ ತಾಳ ಬೇಡವೊ
ಶಾಂತನಾಗಿಯೆ ಕಾಣಿಸು ll
ನಂದಿವಾಹನ ನೀಲ ಕಂಧರ
ಲೋಕ ನಾಯಕ ಶಂಕರ
ಬಂಧು ಬಳಗವು ನೀನೆ ಈಶ್ವರ
ನಂಬಿ ಬಂದೆನು ಹರಹರ
ಪಾಪ ನಾಶಕ ಭಕ್ತ ವತ್ಸಲ
ವಿಶ್ವ ನಾಥನೆ ನಮಿಸುವೆ
ವರದ ಹಸ್ತವ ಪಿಡಿದ ದೇವನೆ
ನಿತ್ಯ ನಿನ್ನನು ಭಜಿಸುವೆ ll
ಬಿಲ್ವ ಪ್ರಿಯನೇ ಭಸ್ಮ ಧರನೇ
ನಾಗ ಭೂಷಣ ಪಾಲಿಸು
ಕರುಣೆಯಿಂದಲಿ ಒಲವ ತೋರಿಸು
ಕುಂದು ಕೊರತೆಯ ನೀಗಿಸು ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀಮತಿ ಸುಜಾತಾ ಜಿ ಭಟ್
- 45. https://youtu.be/3qTnBlizi7M?si=DhiSU28hvzBWZlO5
*********************ಗಂಗಾಧರ
*********
ಗಂಗಾಧರ ದೇವ ಪರಮೇಶ್ವರ
ಮಂಗಳಕರ ಶಿವ ಶಶಿಶೇಖರ
ಮಂದಾರ ಪುಷ್ಪವ ಅರ್ಚಿಸುವೆ
ಬಂಧು ಬಳಗವು ಎಲ್ಲ ನೀನೇ ll
ಭಾವ ಬಂಧುರ ಹೇ ಶಂಕರ
ಕಾವ ದೇವನೆ ಉದನೇಶ್ವರ
ನೋವ ಮರೆಸುವ ಜಗದೀಶ್ವರ
ನಾವು ಮಾಡುವ ನಮಸ್ಕಾರ ll
ಎಂದು ನಿನ್ನ ನಾಮವೊಂದೇ
ಬಂದು ಸಲಹು ದೇವ ನೀನೇ
ಕುಂದು ಕೊರತೆಯ ನೀಗಿಸಿ
ಕಂದನಲ್ಲಿ ಒಲವ ತೋರಿಸಿ ll
ಜೀವ ಭಾವವು ನಿನ್ನ ಕಾಣಲು
ಹಂಬಲಿಸೆ ಭಕ್ತಿಯಿಂದ ಬೇಡಿದೆ
ಎನ್ನ ಮನದೊಳು ಬಂದೆ ನೀನು
ದಿವ್ಯ ಮಂಗಳ ರೂಪದಿಂದಲಿ ll
ಧನ್ಯನಾದೆನು ಕಂಡ ಕ್ಷಣದಲ್ಲಿ
ಇನ್ನು ಏನು ಬೇಕು ಬಾಳಲಿ
ನೀನು ಮಾತ್ರ ಎನ್ನ ಮನದಲಿ
ನಾನು ಇರುವೆ ನಿನ್ನ ಬಳಿಯಲಿ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
ಗಾಯನ ಶ್ರೀಮತಿ ಚೈತನ್ಯ ಬಾಲಕೃಷ್ಣ ವೇಣೂರು
- 46. https://youtu.be/TJjZyRcLM78?si=hVWeWR7l5xP7TGau
*********************
Singer : Ganesh Neerchal
**************************ಮೂಷಿಕ ವಾಹನ
***************
ಪರಶಿವ ತನಯ ಮೂಷಿಕ ವಾಹನ
ಕರುಣೆಯ ತೋರು ಹೇ ಗಣನಾಥ
ಮುದದಲಿ ವಂದಿಸಿ ಬೇಡುವೆ ನಿನ್ನನು
ಮದವನು ಬಿಡಿಸೋ ಗೌರಿನಂದನ ll
ಮಧುಪುರ ದೊಡೆಯ ವಿಘ್ನವಿನಾಶಕ
ಭಕುತಿಲಿ ಪೂಜಿಪೆ ವರವನು ನೀಡೋ
ಮೋದಕ ಹಸ್ತ ವಿದ್ಯಾದಾಯಕ
ಮೂರ್ಲೋಕ ವಂದ್ಯನೆ ಪಾಶಾoಕುಶಧರ ll
ಪಾಲಿಸು ಅನವರತ ಕಾರುಣ್ಯ ನಿಧಿಯೇ
ಪಾಪವ ಕಳೆಯೊ ಪಾವನ ರೂಪನೆ
ಮಧು ವಾಹಿನಿ ತೀರ ನಿವಾಸನೆ
ಮೂಡಪ್ಪ ಸೇವೆಗೆ ಒಲಿಯುವ ದೇವನೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ರಾಗಸಂಯೋಜನೆ ಗಾಯನ
ಶ್ರೀ ಯುತ ಗಣೇಶ್ ನೀರ್ಚಾಲ್ .
- 47. https://youtu.be/m9sr6WrvDGU?si=iVG0Ly7hOHislnlk
******************ಶ್ರೀ ಸುಬ್ರಹ್ಮಣ್ಯ
*************
ಒಲಿದೊಲಿದು ಬಾರೋ ಶ್ರೀಸುಬ್ರಹ್ಮಣ್ಯ
ಭಕ್ತರ ಬಾಳಲಿ ಬೆಳಕಾಗಿ ಬಾರೋ
ನಲಿನಲಿದು ಬಾರೋ ನವಿಲನೇರುತ
ಕರುಣೆಯ ತೋರಿಸಿ ವರವಾಗಿ ನೀನು ll
ವೇದದ ಅಧಿಪತಿ ಶಂಕರ ತನಯ
ಮೋದದಿ ಸಲಹೆoದು ಕಾರ್ತಿಕೇಯ
ಒಲವನ್ನು ತೋರಿ ಮುನ್ನಡೆಸು ದೇವ
ಬಲವನ್ನು ನೀಡಿ ನಿಗ್ರಹಿಸು ನೋವ ll
ಗಣಪತಿ ಸೋದರ ಕುಮಾರ ಬಾಲನೆ
ಕ್ಷಣದಲಿ ತೋರುವೆ ನಿನ್ನಯ ಲೀಲೆಯ
ವಿಶ್ವ ರೂಪದಿ ದರುಶನ ನೀಡಲು
ಧನ್ಯನಾದೆನು ನಾನಿoದು ದೇವನೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀ ಮತಿ ಗಂಗಾ ದೇವಿಕುಮಾರ್ ಭಟ್ .
48. https://youtu.be/jTT3vHkG9qo?si=frCrGlnnWyvuBC76
*******************
ರಚನೆ, ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
ಗಾಯನ, ಶ್ರೀಮತಿ ಗಂಗಾದೇವಿ ಕುಮಾರ್ ಭಟ್ ಸುಬ್ರಹ್ಮಣ್ಯ
-
ಶಂಕರ ತನಯ
************
ಕರುಣಾ ಸಾಗರ ಲಂಬೋದರನೇ
ಕರಗಳ ಜೋಡಿಸಿ ಬೇಡುವೆನು
ಹರಸಲು ಬಾರೋ ಶಂಕರ ತನಯನೆ
ಪರಿಹರಿಸೆನ್ನಯ ದುರಿತವನು ll
ಮೊದಲಿಗೆ ಪೂಜೆಯ ಪಡೆಯುವ ದೇವನೆ
ಮಧುಪುರದೊಡೆಯನೆ ಗಣರಾಜ
ಪದಗಳು ಸಾಲದು ನಿನ್ನನು ಪೊಗಳಲು
ಪದತಲದಲ್ಲಿಯೆ ಶರಣೆನುವೆ ll
ಅಭಯವ ಕರುಣಿಸು ಮಂಗಳ ರೂಪನೆ
ಪ್ರಭುವರ ನಗೆಯನು ಚೆಲ್ಲುತಲಿ
ಅಭಿನಯ ಮಾಡೆನು ನಿನ್ನಯ ಎದುರಲಿ
ಅಭೀಷ್ಠವನ್ನು ಕರುಣಿಸಿ ಸಲಹೆoದು ll
ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
- 48. https://youtu.be/HM87xASinbQ?si=2nQ8wtOM47_bEWQs
**********************
Lyrics, B Udaneshwara Prasad Mooladka
**********
Singer, smt Chaithanya Balakrishna kaamettu Venur
******ಗಜಮುಖ
*********
ಕರವ ಮುಗಿದು ನಮಿಸಿ ನಿಂದೆನು
ಪಾದಕೆರಗಿ ವಂದನೆ
ಪೊರೆಯೊ ದೇವ ಹರಸು ಎನ್ನನು
ನಿರತ ನಿನ್ನ ಭಜಿಸುವೆ ll
ಮುದ್ದು ಮುಖದ ಗೌರಿ ನಂದನ
ಕಷ್ಟ ಕಳೆಯೊ ಗಜಮುಖ
ಎದ್ದು ಬಾರೊ ವರವ ನೀಡಲು
ಶಕ್ತಿ ನೀಡೊ ವರಮುಖ ll
ಇಲಿಯನೇರಿ ಬರುವ ದೇವನ
ಪಾದವನ್ನು ನಂಬಿರಿ
ಒಳ್ಳೆ ಗುಣವ ನೀಡು ನೀನೂ
ಏಕದಂತ ಗುಣನಿಧಿ ll
ವಿದ್ಯೆ ಬುದ್ಧಿ ನೀಡಿದಂತೆಯೆ
ವಿಜಯವನ್ನು ಕರುಣಿಸು
ಮೋದದಿಂದ ಸಲಹು ಗಣಪತಿ
ವಿದ್ಯಾ ದಾತ ಪಾಲಿಸು ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
49. https://youtu.be/H8izayh-JdQ?si=vcY9UMtLhQ3-PuLW
*******
✍️ B Udaneshwara Prasad Mooladka.
Singer, smt Sumangal Suresh Bengalore
-
ಲಂಬೋದರ
***********
ಕರುಣೆಯ ತೋರುತ
ಕರುಣಿಸು ದೇವನೆ
ಕರಗಳ ಜೋಡಿಸಿ ನಿಂದಿರುವೆ l
ಚರಣದಿ ಬಾಗುತ
ಕರೆಯುತ ನಿನ್ನನು
ವರವನು ಬೇಡಲು ಬಂದಿರುವೆ ll
ಮುದದಲಿ ಭಜಿಸುವೆ
ಮಧುಪುರ ದೊಡೆಯನ
ಪದತಲದಲ್ಲಿಯೆ ಶರಣೆನುವೆ l
ವಿಧವಿಧ ಪೂಜೆಯ
ಪಡೆಯುವ ದೇವನೆ
ಬಿಡದೆಲೆ ಸಲಹುವ ಗಣಪತಿಯೆ ll
ನಂಬಿದೆ ನಿನ್ನನು
ಇಂಬನು ನೀಡುತ
ಲಂಬೋದರನೇ ನೀ ಪೊರೆಯೊ l
ಅಂಬಾಸುತನೇ
ಕುಂಬಿನಿ ಗೊಡೆಯನೆ
ತುಂಬಿದ ಮನದೊಳು ಪ್ರಾರ್ಥಿಸುವೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 50. https://youtu.be/Zs_qbsdOSx8?si=Btrf2NuyP44ALQyq
********************
✍️ B Udaneshwara Prasad Mooladka
**********
Sung by : smt, Lalitha Ramesh
********************************ಮದವೂರ ಗಣಪತಿ
****************
ಕೈಯಲಿ ಮೋದಕ ಹಿಡಿದಿಹ ಗಣಪ
ವಿಘ್ನವಿನಾಶಕ ವಿದ್ಯಾಧರನೇ
ಆದಿಯು ಅಂತ್ಯವು ನೀನಲ್ಲವೆ ದೇವ
ಅಂತಃಕರಣದ ಶೋಕವಿನಾಶಕ ll
ಮದವೂರ ಪುರವಾಸ ಗಣನಾಥ
ಮೊದಲೊoದಿಪೆ ನಿನಗೆ ಗೌರೀ ಸುತ
ವರಮುಖ ಗಿರಿಜಾ ನಂದನ ದೇವ
ನಡೆಸೆನ್ನ ನೀನು ವಿಜಯ ಪ್ರದಾಯಕ ll
ಕರೆಯುವ ಭಕ್ತರ ಬಳಿಗೋಡಿ ಬರುವ
ಗಣನಾಥ ಬಂಧು ಹಿತವನ್ನು ತರುವ
ಚೌತಿಯ ದಿನದಾ ಚಂದ್ರನ ದರ್ಶನ
ಪರಿಹಾರ ನೀಡುವ ದೇವ ಗಜಾನನ ll
✍️ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
- 51. https://youtu.be/Ap3gvUkUoH8?si=eNnBG-ze8CFjjJe1
************
✍️ B Udaneshwara Prasad Mooladka
**********
Sung by : smt. Lalitha Ramesh
*********ಗುರುವಾಯೂರಪ್ಪ ಶರಣು
**********************
ಮುದ್ದು ಮುಖದ ಚೆಲುವನೆ
ಶ್ರೀ ಗುರುವಾಯೂರಪ್ಪನೆ
ನಂದನ ಕಂದ ಗೋಪಾಲಕನೆ
ಭಕ್ತರ ಪಾಲಿಗೆ ಪಾಲಕನು ನೀನೆ ll
ಹಾಲು ಪಾಯಸ ಪ್ರಿಯನು ನೀನೆ
ಬೆಣ್ಣೆ ನೈವೇದ್ಯವನು ನೀಡುವೆ
ದರುಶನಕೆ ಭಕ್ತರ ಸಾಲು ಸಾಲು
ಅಭಯ ಕರುಣಿಸು ನೀನು ಮೊದಲು ll
ಭಕ್ತಿಯಿಂದಲಿ ನಾನು ಭಜಿಸುವೆ
ನಿನ್ನ ಪೂಜೆ ಭಕ್ತಿಯಲಿ ಮಾಡುವೆ
ದಯೆದೋರು ಮುರಹರ ಬೇಡುವೆ
ಕಾಯುವುದು ಭಕುತರ ತಂದೆ ಗಿರಿಧರ ll
ಗುರು ಮತ್ತು ವಾಯು ಸೇರಿ ಕೃಷ್ಣನ
ಮೂರ್ತಿಯನ್ನು ಸ್ಥಾಪಿಸಿದ ಕಾರಣ
ಗುರುವಾಯೂರು ಎಂಬ ಹೆಸರಾಯಿತು
ಕರುಣೆಯಿಂದ ಸಲಹು ಗುರುವಾಯೂರಪ್ಪನೆ ll
✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ .
- 52. https://youtu.be/elkOGRt0Me4?si=XHjWb4dju8VJFwPm
**********************ಸಾಂಬಸದಾಶಿವನೆ
***************
ಶಂಕರ ಶುಭಕರ ಗುಣನಿಧಿ ಸ್ಮರಹರ
ಸಾಂಬಸದಾಶಿವನೆ
ಮೃಡಹರ ಶಶಿಧರ ಗೌರೀ ಮನೋಹರ
ಜಯ ಮೃತ್ಯುಂಜಯನೆ…. ll
ಮಾಡಿದ ಪಾಪವ ಆಕ್ಷಣ ನೀಗುವ
ಕರುಣಾ ಸಾಗರನೆ
ಈಶ ಗಿರೀಶ ಉಮೇಶ ಮಹೇಶ
ಜಯ ಜಯ ವಿಶ್ವoಬರನೆ…. Il
ಸುಂದರ ಪುರಹರ ಗಿರಿಜಾ ವಲ್ಲಭ
ಶೂಲಿಕಪರ್ಧಿ ತ್ರಿನೇತ್ರನೆ
ತ್ರಿಯಂಬಕ ಜಯ ತ್ರಿಪುರಾoತಕ
ಜಯ ಜಯ ಶಂಕರನೆ…. Il
ಭಕ್ತಿಯ ತಪಸಿನ ಪುಣ್ಯದ ಫಲವು
ನಾಡಿದು ಬೆಳಗುತಲಿ
ಲೋಕದಿ ಪಾಪದ ಕೊಡವು ತುಂಬಲು
ನೀನಾಗುವೆ ಪ್ರಳಯಾಂತಕನೆ… Il
ಭಕ್ತಿಯ ಮನದಲಿ ನಿನ್ನನು ಪೂಜಿಸೆ
ಒಲಿಯುವ ಪರಮೇಶ್ವರನೆ
ಜಗವನು ಪೊರೆಯುವ ಗಣಪತಿ ಪಿತನೇ
ನಂಬಿದೆ ನಿನ್ನನು ಕರುಣಾಮಯನೇ…. Il
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ, ಶ್ರೀಮತಿ ಮಾಲತಿ ಯಸ್ ಯನ್ ಭಟ್ ಕಾಕುಂಜೆ
- 53. https://youtu.be/Md100tz37vs?si=ZYNvP2R6B7BO5OQ9
**********************ಮುಕುಂದ ಮಾಧವ ಕಣಿಪುರೇಶ
**************************
ಕಣಿಪುರದೊಡೆಯನೆ ಕರುಣಾ ಸಾಗರ
ಮುಕುಂದ ಮಾಧವ ಗಿರಿಧರನೆ
ನಂದನ ಕಂದನೆ ಮೂಜಗದೊಡೆಯನೆ
ದಾರಿಯ ತೋರಿಸು ವಾಮನನೆ ll
ಸುರಜನ ವಂದಿತ ಮೋಕ್ಷಪ್ರದಾಯಕ
ದೇವಕಿ ತನಯನೆ ನುತಿಸುವೆನು
ಸುಂದರ ರೂಪನೆ ಪಂಕಜ ಲೋಚನ
ನಿತ್ಯವು ನಿನ್ನನು ಭಜಿಸುವೆನು ll
ಮುರಳೀ ಲೋಲನೆ ರುಕ್ಮಿಣಿಗೊಡೆಯನೆ
ರಾಧಾ ರಮಣನೆ ಶ್ರೀ ಲೋಲ
ಅಗಣಿತ ಗುಣನಿಧಿ ಮಹಿಮಾಕರನೇ
ಅಚ್ಚುತ ಕೇಶವ ಶ್ರೀ ಬಾಲ ll
ಪಾಪವ ನೀಗಿಸು ಪಾವನ ಮೂರುತಿ
ಪಾಲಿಸು ಎನ್ನನು ಕರುಣೆಯಲಿ
ಶಂಕರ ಮಿತ್ರನೇ ಮೋದದಿ ಕರೆಯುವೆ
ಭಕ್ತಿಯ ಪೂಜೆಯ ಮಾಡುತಲಿ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ರಾಗಸಂಯೋಜನೆ ಗಾಯನ
ಶ್ರೀಯುತ ಗೋಪಾಲಕೃಷ್ಣ ಭಟ್ .
54. https://youtu.be/7CFV5r40k5k?si=1Ksj42e-79v-5jvg
*********
Lyrics : B Udaneshwara Prasad Mooladka
Singing Sujatha G Bhat
- ಕನ್ನಡ ಭಕ್ತಿಗೀತೆ
*************ಗುರುವಾಯೂರಪ್ಪನೆ
******************
ಗುರುವಾಯೂರಪ್ಪನೆ ಆನಂದ ಕಣ್ಣನೆ
ಸೇವೆಯ ಗೈಯುವೆ ಅನವರತ
ಬದುಕಲಿ ಬಂದಿಹ ತಾಪವ ಕಳೆಯೊ..
ಕರುಣೆಯ ತೋರಿಸಿ ನೀ ಸತತ ….
ನಿನ್ನನು ಭಜಿಸಿ ಮುಕ್ತಿಯ ಪಡೆಯುವೆ
ಮೋಹವ ಬಿಡಿಸೊ ಮುಕುಂದ..
ದಯಾಸಾಗರ ಮುರಳೀ ಲೋಲನೆ
ಗುರುವಾಯೂರಪ್ಪ ಶ್ರೀಕೃಷ್ಣ….
ದೀಪಾರಾಧನೆ ಸೊಬಗನು ಕಂಡೆನು
ನಾಮವ ಭಜಿಸುತ ನಾನಿಂದು..
ಹಾಲನು ತಂದಿಹೆ ಬೆಣ್ಣೆಯನಿಟ್ಟಿಹೆ
ಸ್ವೀಕರಿಸೀಗಲೆ ನೀ ಬಂದು….
ಕರ್ಪೂರದಾರತಿ ಬೆಳಗುವ ಎಲ್ಲರು
ಶ್ರೀ ಗುರುವಾಯೂರಪ್ಪನಿಗೆ..
ನಗುವನು ಬೀರುತ ಭಕ್ತರ ಪೊರೆಯುವ
ಶ್ರೀಹರಿ ಕೃಷ್ಣನಿಗೆ….
✍️ ಬಿ ಉದನೇಶ್ವರ ಪ್ರಸಾದ ಮೂಲಡ್ಕ
55. https://youtu.be/kyy-IwQokLs?si=8HrszevG1icrD-Q9
****
MUSIC & SINGER : GANESH NEERCHAL,
LYRICS & EDITING
B UDANESHWARA PRASAD
MOOLADKA
PROGRAMMING & MIXING : SWARAJ UPPALA
RECORDING STUDIO BY : GURU BAYAR
- SPECIAL THANKS TO SHREE KANTTAPADY KKUKKAMKUDLU TEMPLE CCOMMITTEE
***************
ಶ್ರೀ ಕಂಠಪ್ಪಾಡಿ ಸುಬ್ರಹ್ಮಣ್ಯ ಸ್ವಾಮೀ
*******ಶ್ಲೋಕ
*****
ಶಂಭು ಕುಮಾರ ಜಯ ಜಯ ತ್ರಿಜಗ ವಂದಿತನೆ
ಶಂಕರ ತನಯ ವಿದ್ಯಾಧಿಪನ ಸೋದರನೆ ವೇದಾಧಿ ಪತಿಯೇ ವಂದೇ ಗುಹo ಶರಣo ಪ್ರಪದ್ಯೆ ವಂದೇ ಗುಹo ಶರಣo ಪ್ರಪದ್ಯೆ
ನಿನ್ನಯ ಪಾದಕೆ ಸಾಷ್ಟಾoಗ ವಂದನೆ ಭಕ್ತಿಯ ಗಾಯನವು ಸಮರ್ಪಣೆ ಕಾರ್ತಿಕೇಯನೆ ಸುಬ್ರಹ್ಮಣ್ಯನೆ . ಆ.ಆ.ಆ.ಆ.
ಹಿಮಗಿರಿ ಒಡೆಯನ ಪ್ರಿಯ ಸುತನೆ
ಭಕ್ತಿಯಿಂದ ಕರೆದಾಗ ಬರುವ ಸ್ವಾಮಿಯೇ
ಪುಷ್ಪಾoಜಲಿ ಸಹಸ್ರ ನಾಮದ ಅರ್ಚನೆ
ಮನಸಿನ ನೋವನು ಕಳೆಯಲು ನಿನ್ನ ಪ್ರಾರ್ಥನೆ ll
ಭಾಗ್ಯ ಸೂಕ್ತ ಕುಂಕುಮಾರ್ಚನೆ ಹೂವಿನ
ಮಾಲೆಯು ನಿನಗೆ ಭಕ್ತಿಯ ಸಮರ್ಪಣೆ
ಬೇಡಿದ ವರವ ಕರುಣಿಪ ದೇವನ ಪಾದಕೆ
ನಾವು ಭಕ್ತಿಯಲಿ ಮಾಡುವ ವಂದನೆ ll
ನಿನ್ನ ಸನಿಹ ಗಣಪತಿ ಶಾಸ್ತಾರ ರಕ್ತೇಶ್ವರಿಯು
ನೆಲೆಸಿರುವ ಭವ್ಯ ದಿವ್ಯ ಶಕ್ತಿಯ ಕೇಂದ್ರವೂ
ಗರಿಕೆ ಮಾಲೆ ದೂರ್ವ ಹೋಮದಿಂ ಭಕ್ತರಿಗೆ
ಬರುವ ವಿಘ್ನವನು ದೂರ ಮಾಡು ದೇವನೆ ll
ಆಶ್ಲೇಷ ಬಲಿಯು ಕಾರ್ತಿಕ ಪೂಜೆಯು
ಸಕಲ ದೋಷ ಪರಿಹಾರ ನಿನ್ನಿಂದಲೆ
ಬರುವ ಕಷ್ಟ ದೂರ ಮಾಡು ಸ್ವಾಮಿಯೆ
ಕಂಠಪ್ಪಾಡಿಯ ಪುರವಾಸ ಕಾರ್ತಿಕೇಯನೆ ll
ರಚನೆ : ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
56. https://youtu.be/gPINrhoSbP0?si=BJfrJMregFewCkmB
[24/09, 10:28 pm] udaneshwaraprasad bhat: https://youtu.be/EQDHTL3o0es?si=HRe14eiL8Cb2ddWs
*********************
✍️. ಬಿ. ಉದನೇಶ್ವರ ಪ್ರಸಾದ ಮೂಲಡ್ಕ.
ರಾಗಸಂಯೋಜನೆ. ಗಾಯನ. ಶ್ರೀಮತಿ ಶ್ರೀವಿದ್ಯಾ.ಪಿ. ಭಟ್.
-
ಅನ್ನಪೂರ್ಣೇಶ್ವರಿ
***************
ಸಲಹು ನೀ ದುರ್ಗಾಪರಮೇಶ್ವರೀ
ಜ್ಞಾನ ಬುದ್ಧಿಯ ಕರುಣಿಸು ಜಗದೀಶ್ವರೀ
ಭಕ್ತಿಯ ನಾಮಾರ್ಚನೆ ನಾ ಮಾಡುವೆ
ಆರೋಗ್ಯವ ಕರುಣಿಸು ಎನುತ ಬೇಡುವೆ ll
ಅಗಲ್ಪಾಡಿಯ ಅನ್ನಪೂರ್ಣೇಶ್ವರಿಯ
ನಿತ್ಯವು ಸ್ಮರಿಸುವೆ ದುರ್ಗಾಪರಮೇಶ್ವರಿಯ
ಭವ್ಯ ದೇಗುಲದಿ ನೆಲೆಸಿರುವ ಭುವನೇಶ್ವರಿಯ
ಭಜಿಸುತ ಪಡೆಯುವೆನು ನೆಮ್ಮದಿಯ ll
ಅನ್ನದಾನವು ಬರುವ ಭಕ್ತರಿಗೆ ದಿನನಿತ್ಯ
ತೀರ್ಥ ಪ್ರಸಾದ ಸ್ವೀಕರಿಸುವೆ ಭಕ್ತಿಯಲಿ
ಕುಂಕುಮಾರ್ಚನೆ ತುಪ್ಪದೀಪವು ನಿನಗೆ
ಅನುಗ್ರಹಿಸು ಮಂಗಳ ದಾಯಿನಿ ಅಂಬಿಕೆ ll
ಶಕ್ತಿಯ ಕೊಡು ನೀ ಭಕ್ತಿಯಲಿ ಸ್ತುತಿಸುವೆ
ನಿರತವು ನಿನ್ನ ನಾಮ ಭಜನೆಯ ಗೈಯುವೆ
ಅರಿಯದೆ ಮಾಡಿದ ಪಾಪದಿ ನೊಂದಿರುವೆ
ಸಲಹು ನೀನು ಎಂದಿಗೂ ಲಲಿತಾಂಬಿಕೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
57. https://youtu.be/Cwz4XbHyoeo?si=UrQ2jj7K_vkltxgQ
*********
from Udaneshwara Prsad Mooladka
Lyrics : B Udaneshwara Prasad Mooladka
Singer : Thasmai P R Acharya
- ಸಾಹಿತ್ಯ
*******ಸುಂದರ ಚಿಟ್ಟೆ
************
ಬಣ್ಣದ ಚಿಟ್ಟೆ ಸುಂದರ ಚಿಟ್ಟೆ
ಗಿಡದಲಿ ಏತಕೆ ಕುಳಿತಿರುವೆ ||2
ಏನನು ಯೋಚನೆ ಮಾಡುತಲಿರುವೆ
ನನ್ನಯ ಬಳಿಯಲಿ ನೀ ಹೇಳು ll
ಹೂಗಳ ಮೇಲೆಯೆ ಕುಳಿತಿಹೆಯಲ್ಲ
ಬಂಧುಗಳೆಲ್ಲ ಎಲ್ಲಿಹರು
ಗಿಡದಿಂದ ಗಿಡಕ್ಕೆ ಹಾರುವ ಚಿಟ್ಟೆಯೆ ||2c
ಏನನು ಅರಸುವೆ ನೀ ಹೇಳು ll
ಉದರವು ತುಂಬದೆ ಹಾರಲು ಆಗದೆ
ಬಳಲಿಕೆಯಾಯಿತೆ ನಿನಗೀಗ
ಸಂಗೀತ ಸುಧೆಯನು ಹರಿಸುತಲಿರುವೆ ||2c
ರಾಗವು ಯಾವುದು ಹೇಳೀಗ ll
ವೇಗದಿ ಹಾರುವೆ ಜೇನನು ಸವಿಯಲು
ಆತುರವೇತಕೆ ನಿನಗೀಗಾ
ಹಾರುತ ಹಾರುತ ಎಲ್ಲಿಗೆ ಹೋಗುವೆ||2c
ಕಳೆಯುವೆ ಸಮಯವ ನಲಿಯುತ್ತಾ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 58. https://youtu.be/ZtnD1l52FCU?si=CgTnjqJLeKE_bbR-
*******************
✍️ B Udaneshwara Prasad
Mooladka
**********
Singing : Shree Prbhakara Bhat B
*******ಗಂಗಾಧರ
********
ಕೈಲಾಸವಾಸ ಶ್ರೀ ಪರಮೇಶ್ವರ
ಭಕ್ತರಿಗಿಷ್ಟವ ಕರುಣಿಪ ಶಂಕರ
ಪಂಚಾಕ್ಷರಿ ಮಂತ್ರ ಪಠನೆಯಲಿ
ಭಜಿಸುವೆನು ನಿತ್ಯವು ಭಕುತಿಯಲಿ ll (ಪ)
ಜಟಾಜೂಟ ಚಂದ್ರಕಲಾಧರ
ಪಾರ್ವತೀಶ ಗಜ ಚರ್ಮಾಂಬರ
ಕೈಲಾಸವಾಸ ಹೇ ಧೀನ ಬಂಧು
ಸಲಹು ದೇವನೆ ಕರುಣಾಸಿಂಧು ll
ಗಣಪತಿ ಸುಬ್ರಹ್ಮಣ್ಯರು ಜೊತೆಯಲಿ
ಪಾರ್ವತಿ ಪರಮೇಶ್ವರರ ಮಡಿಲಿನಲಿ
ಮೋದದಿ ಕುಳಿತಿಹ ಚಂದವ ನೋಡುತ
ಪಾವನವಾಯಿತು ಈ ಕಣ್ಣುಗಳು ll
ವಿಘ್ನವ ನೀಗಿಸಿ ವಿದ್ಯಾಬುದ್ಧಿಯ
ಬೇಡುವೆ ಮೊದಲಲಿ ಗಣಪತಿ ದೇವರ
ಚರಣದಿ ವಂದಿಸಿ ಗಜಮುಖ ಗಣಪಗೆ
ಕರುಣೆಯ ತೋರುತ ಪಾಲಿಸು ಅನವರತ ll
✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ .
59. https://youtu.be/8ZIq8tyKPac?si=IZReHWGzeB4mn3IR
**********************
Lyrics : B . Udaneshwara Prasad
Mooladka
Singer : smt, Chaithanya Balakrishna
-
ಅಮ್ಮನ ಮಡಿಲು ಅಪ್ಪನ ಹೆಗಲು
**************************
ಹಾಯಾಗಿ ಮಲಗಿರು ನೀನು
ಅಮ್ಮನ ಮಡಿಲಲ್ಲಿ
ಹಾಯಾಗಿ ಕುಳಿತಿರು ನೀನು
ಅಪ್ಪನ ಹೆಗಲಲ್ಲಿ
ಪ್ರೀತಿಯು ತುಂಬಿದ ಮನದಲ್ಲಿ
ಮಮತೆಯು ತುಂಬಿದ ಕಡಲಲ್ಲಿ ll
ಬಾನಲಿ ಹುಣ್ಣಿಮೆ ಚಂದ್ರನ ತೋರಿಸಿ
ಬಾಲೆಯ ಹಸಿವನು ನೀಗಿಸುವೆ
ದಾರಿಯು ತಪ್ಪದೆ ಬಾಳಲಿ ಮುಂದಕೆ
ಬಾಳಿನ ಹಾದಿಯ ತೋರಿಸುವೆ
ಅಳುತಿಹ ಬಾಲೆಯ ಮುದ್ದಿಸಿ ರಮಿಸುವೆ
ಜೋಗುಳ ಹಾಡಿ ಮಲಗಿಸುವೆ ll
ಸ್ನೇಹದ ಮಾತಲಿ ಒಲವನು ತೋರುತ
ಸ್ನೇಹಿತನoತೆ ನೀನಿರುವೆ
ತಪ್ಪನು ತಿದ್ದುತ ಬುದ್ಧಿಯ ಹೇಳುತ
ಅಕ್ಷರ ಕಲಿಸುವೆ ಗುರುವಾಗಿ
ಜೀವನವನ್ನೇ ಮುಡಿಪಾಗಿರಿಸಿದ
ಋಣವದು ತೀರದು ಬಾಳಿನಲಿ ll
✍️. ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ .
-
60. ಜೈ ಶ್ರೀ ರಾಮ ಕನ್ನಡ ಸಾಹಿತ್ಯ ಪರಿಷತ್ತು.
*******************************
ಸಂಜೆಯ ಕಾರ್ಯಕ್ರಮ
೧೫/೭/೨೪ ಸೋಮವಾರ
ವಿಷಯ: ಚಿತ್ರ ಕವನ
ಸ್ಪರ್ಧೆಗಾಗಿ
ಶೀರ್ಷಿಕೆ : ರಘುಕುಲೋತ್ತಮ
***********************
ರಘುಕುಲೋತ್ತಮ ಶ್ರೀರಾಮ
ದಯಾನಿಧಿ ಶ್ರೀರಾಮ
ಅಲಂಕಾರದಿಂದ ಶೋಭಿಪ
ಜಯ ಜಯ ಶ್ರೀರಾಮ ll
ಸೀತಾ ವಲ್ಲಭ ಶ್ರೀರಾಮ
ದಶರಥ ನಂದನ ಮುನಿ-
ಕುಲೋತ್ತಮನೆ ಶ್ರೀರಾಮ
ದಯಾಕರನೆ ಶ್ರೀರಾಮ ll
ಸದ್ಗುಣ ಭರಿತನೆ ಶ್ರೀರಾಮ
ಹನುಮತ್ಸೇವಿತ ಶ್ರೀರಾಮ
ದುರಿತ ಹರಣ ಭವದುಃಖ-
ನಾಶಕ ಶ್ರೀರಾಮ ಶ್ರೀರಾಮ ll
ವಾಲಿಯ ಮರ್ದನ ಶ್ರೀರಾಮ
ಪಾಲಿಸು ದೇವ ಶಿವರಾಮ
ಭಕ್ತಿಯ ಪಥದಲಿ ನಡೆಸುತ
ಸೌಖ್ಯವ ಕರುಣಿಸು ಹರೆರಾಮ ll
✍️. ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
- 61. https://youtu.be/gmjc7qgWfR4?si=bR7bBNFeOqoV__6q
*********************ಮುಕುಂದ ಬಾರೋ
****************
ಕಂದ ಬಾರೋ ಮುಕುಂದ ಬಾರೋ
ನಂದ ಕಂದನೆ ನೀನು ಬಾರೋ
ಗೋಪ ಬಾಲನೆ ಬಾಲಕೃಷ್ಣನೆ
ನಮಿಪೆ ನಿನ್ನಯ ದಿವ್ಯ ಚರಣಕೆ ll
ನಗುವ ಬೀರುತ ನೀನು ನೋಡುವೆ
ತಲೆಯ ಮೇಲೆಯೆ ನವಿಲ ಗರಿಯಿದೆ
ಅಂದ ಉಡುಪನು ಧರಿಸಿ ಮಲಗಿದೆ
ಹುಲ್ಲುಗಾವಲು ನಿನ್ನ ಹಾಸಿಗೆ ll
ಮುರಳಿ ಮಾಧವ ಗೋಪಿ ಲೋಲನೆ
ಹರಸು ದೇವನೆ ದೇವ ದೇವನೆ
ಹರನ ಮಿತ್ರನೆ ದುರಿತ ಕಳೆಯುವೆ
ಕರುಣೆಯಿಂದಲಿ ಸಲಹು ದೇವನೆ ll
ಕಂಸ ಮರ್ದನ ರಾಮಕೃಷ್ಣನೆ
ಗಿರಿಯನೆತ್ತಿದ ಮುದ್ದು ರಂಗನೆ
ಭಕ್ತಿಯಿಂದಲಿ ನಿನ್ನ ನೆನೆಯುವೆ
ನಿತ್ಯ ನಿನ್ನಯ ನಾಮ ಭಜಿಸುವೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ : ಶ್ರೀಯುತ ಬಾಲಕೃಷ್ಣ ಆಚಾರ್ಯ ಪುತ್ತಿಗೆ.
- 62. ಜೈ ಶ್ರೀ ರಾಮ ಕನ್ನಡ ಸಾಹಿತ್ಯ ಪರಿಷತ್ತು .
🔶🔶🔶🔶🔶🔶🔶
೮/೭/೨೪ ಸೋಮವಾರ
ಇಂದಿನ ಸಂಜೆಯ
ಕಾರ್ಯಕ್ರಮ ಕವನ ಬರಹ
ವಿಷಯ : ಒಲವೇ ಜೀವನಶೀರ್ಷಿಕೆ : ಸುಖದ ಜೀವನ
*********************
ಒಲವೇ ಜೀವನ ಮನಸೇ ಹೂಬನ
ಅಂದದ ಗಾಯನ ಕಿವಿಗಿoಪು
ಚೆಲುವಿನ ನಯನವು ಸುಮಧುರ ಭಾವನೆ
ಕಂಗಳ ತುಂಬಲು ಬಲು ತಂಪು ll
ಕನಸಲಿ ಬಂದರೆ ನನಸಾಗುವುದೇ
ಎಂಬುದು ಬಂದಿಹ ಬಲುಚಿಂತೆ
ತಿಳಿದರೆ ಉತ್ತಮ ತಿಳಿವುದು ಹೇಗೇ
ಎನ್ನುವ ಉತ್ತರ ಹಲವಂತೆ ll
ಚಿಂತೆಯ ಬಿಟ್ಟರೆ ತೋಷವ ಹೊಂದುವೆ
ನೆಮ್ಮದಿ ಜೀವನ ಆವಾಗ
ಕಷ್ಟವ ಸಹಿಸುತ ನಿಷ್ಠೆಯ ವ್ರತದಲೇ
ಸುಖವನು ಕಾಣುವೆ ಬಲುಬೇಗ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 62. https://youtu.be/NFGMZqQCL2w?si=frjFXlUSdJXnb3Oi
******************ಶ್ರೀ ಗುರು ನಮನ
**************
ಗುರುವಿನ ಚರಣಕೆ ಮಣಿಯುವೆ ದಿನವೂ
ಕರುಣೆಯ ತೋರಿಸು ಗುರುವರ್ಯ
ನಿತ್ಯವೂ ದೀಪವ ಬೆಳಗಿಸಿ ನಿಮ್ಮನು
ನೆನೆಯದೆ ಮಾಡೆನು ಶುಭಕಾರ್ಯ ll
ಗುರುವನು ಭಜಿಸುವೆ ರಾಘವ ರಾಮನೆ
ಪೀಠಕೆ ನಮಿಸುವೆ ದಯತೋರು
ಪಾದಕೆ ಎರಗುತ ಪಾದವ ತೊಳೆಯುವೆ
ಪಾಪವ ಕಳೆಯುತ ಶುಭಕೋರು ll
ಗುರುವಿನ ಆಜ್ಞೆಯ ಶಿರದಲಿ ಹೊರುವೆನು
ಮಾಡುವೆ ದಿನವೂ ಸೇವೆಯನು
ಮತಿಯನು ಬೆಳಗಿಸಿ ಗತಿಯನು ಕರುಣಿಸಿ
ಮುಂದಕೆ ನಡೆಸುವ ರಾಘವನು ll
ಗುರುವಿನ ಒಲುಮೆಯ ಪಡೆಯಲು ನಾವೂ
ದೇವನ ಕೃಪೆಯನು ಪಡೆದಂತೆ
ರಾಘವೇಶ್ವರ ಸ್ವಾಮಿಯ ಭಜಿಸಲು
ಸರಿವುದು ಬದುಕಲಿ ಬಲುಚಿಂತೆ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ ಶೀಲಾ ಜಿ ಭಟ್ ಪದ್ಯಾಣ
- 64. https://youtu.be/lMlwla-Yorc?si=98FaFMNzKl6Kpenm
**********************ದುರ್ಗಾ ಮಾತೆ
************
ಹರಸು ನೀನು ಒಲಿದು ಬಂದು
ಕರುಣೆಯಿಂದ ಅಂಬಿಕೆ
ವರವ ನೀಡು ಒಲವಿನಿಂದ
ಮೊರೆಯ ಇಡುತ ನಂಬಿದೆ ll
ಮರೆಸು ಮನದ ನೋವನಿಂದು
ಕರೆವೆ ನಿನ್ನ ದೇವಿಯೆ
ನಡೆಸು ಎನ್ನ ನೀನು ಮುಂದೆ
ಭಕ್ತಿಯಿಂದ ಬೇಡುವೆ ll
ಶಕ್ತಿಯನ್ನು ನೀಡಿ ಸಲಹು
ದೇವಿ ದುರ್ಗಾ ಮಾತೆಯೆ
ಭಜಿಸಿ ನಿತ್ಯ ನಿನ್ನ ಸೇವೆ
ಮಾಡುವಂತೆ ಕರುಣಿಸು ll
ತುಂಬು ಮನದಿ ಬೇಡಿಕೊಂಬೆ
ದಯವ ಪಾಲಿಸು ಶಂಕರಿ
ನಂಬಿ ನಿಂತೆ ನಿನ್ನ ಚರಣದಿ
ಪಾಲಿಸೆನ್ನಾ ಅಭಯ ದಾತೆಯೆ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀಮತಿ ಗಂಗಾ ದೇವಿಕುಮಾರ್ ಭಟ್
- 65. https://youtu.be/DEOBQ5VYPHk?si=fJYoOi_R4ghXkui1
**********************
✍️B Udaneshwara Prasad Mooladka
Singer, smt Chaithanya Balakrishna Venur
******ಶ್ರೀಮಾರಿಕಾಂಬೆ
************
ಕಲ್ಯಾಣಪುರ ವಾಸಿನಿ ಮಾರಿಕಾಂಬೆ
ಕರುಣದಿಂದ ಎಮ್ಮನು ರಕ್ಷಿಸಮ್ಮ
ಸಹ್ಯಾದ್ರಿ ಶಿಖರದ ಸುತ್ತಲೂ ನಿನ್ನಯ
ಪ್ರಭೆಯ ಶಕ್ತಿಯು ಹರಡಿತಮ್ಮ ll
ಸೋಂದೆಯ ಸದಾಶಿವರಾಯರೇ
ಸ್ಥಾಪನೆಗೈದಿಹ ಶ್ರೀದೇವಿಯೆ
ಭಕ್ತರ ಹರಸುತ ಭಕ್ತಿಗೆ ಒಲಿದಿಹೇ
ನಂಬಿದೆ ನಿನ್ನನು ಮಾರಿಕಾಂಬೆ ll
ಮಹಿಮೆಯ ಸಾರುವ ಶಿರಸಿಯ ಮಾತೆಯು
ಕಣ್ಮನ ಸೆಳೆಯುವ ಜಾತ್ರೆಯು
ಕನ್ನಡ ನಾಡಿನ ಹಿರಿಮೆಯ ಸಾರುತಲಿ
ಭಕ್ತಬಾಂಧವರ ರಕ್ಷಣೆಯು ll
ಮನಸಲಿ ತುಂಬಿದ ಭಕ್ತಿಯ ಭಜನೆಯು
ಹಲವಾರು ನಾಮವು ನಿನಗಮ್ಮ
ಸರ್ವಶಕ್ತಿ ರೂಪಿಣಿ ನಮ್ಮನು ಪಾಲಿಸಮ್ಮ
ಶಿವಮ್ಮ ಜಯಮ್ಮ ಜಗದಮ್ಮ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ .
ಗಾಯನ, ಶ್ರೀಮತಿ ಚೈತನ್ಯ ಬಾಲಕೃಷ್ಣ ಕಾಮೆಟ್ಟು ವೇಣೂರು.
-
ಕಿಟ್ಟು ಪುಟ್ಟು
**********
ಶಾಲೆಯ ಬಿಟ್ಟು ಬಂದನು ಕಿಟ್ಟು
ತಾಯಿಯು ಮಾಡಿದ ತಿಂಡಿಯು ಪುಟ್ಟು
ತಿನ್ನೆನು ಎಂದು ಹಟವನು ಮಾಡಲು
ತಾಯಿಗೆ ಬಂತು ತಾಳದ ಸಿಟ್ಟು ll
ಶಬ್ದವ ಕೇಳಿ ಬಂದರು ತಂದೆ
ಬೇಸರವೇತಕೆ ಕೊಡಿಸುವೆ ನಿನಗೆ
ಕಪ್ಪಿನ ಬಣ್ಣದ ಮಿನುಗುವ ಬೂಟು
ನಂತರ ತಿನ್ನು ಮುನಿಯದೆ ಪುಟ್ಟು ll
ಪೇಟೆಗೆ ಹೋದರು ಪುತ್ರನ ಜೊತೆಗೆ
ಬೂಟನು ಕೊಂಡು ತಂದರು ಮನೆಗೆ
ತಾಯಿಗೆ ಕೋಪವು ಹೋಯಿತು ಕೊನೆಗೆ
ತಿಂಡಿಯ ಕೊಟ್ಟಳು ಮುದ್ದಿಸಿ ಮಗನಿಗೆ ll
ತಾಯಿಯ ಹೃದಯದ ಪ್ರೀತಿಯ ಮಮತೆ
ತಂದೆಯು ಕಷ್ಟವ ಪಡುವರು ಜೊತೆಗೆ
ಮಕ್ಕಳು ಮುಂದೆ ಗೌರವವನ್ನು
ತೋರಲೆ ಬೇಕು ತಂದೆ ತಾಯಿಗೆ ll
✍️. ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.
- 66. https://youtu.be/F17YZTPd8Pk?si=rSzXdxQiImbueKmE
******************ಒಲವಿನ ಮಾತು
*************
ಸರಸದಿ ಬಂದೆ ಹರುಷವ ತೋರಿ
ಸರಿಸಿದೆ ಮನದ ನೋವನ್ನು
ಕರವನು ಪಿಡಿದು ಸಾoತ್ವನ ನೀಡಿ
ಸುರಿಸಿದೆ ಪ್ರೀತಿಯ ಮಳೆಯನ್ನು ll
ಚೆಲುವಿನ ಮೊಗದ ಸ್ನೇಹವ ಕಂಡು
ಒಲವಿನ ಮಾತು ನುಡಿಯಲ್ಲಿ
ಕಲಹವ ಬಿಡಿಸಿ ಗೆಳೆತನ ಬೆಳೆಸಿ
ಸಲಿಪುದು ನಮನ ಮನದಲ್ಲಿ ll
ಹೊಸತನ ಇರದು ಹಳೆಯದು ಎಲ್ಲ
ಕಸದಲಿ ರಸವ ತೆಗೆದಂತೆ
ಸಸಿಯನು ನೆಟ್ಟು ನೀರನು ಎರೆದು
ಹಸುರಿನ ಚಿಗುರು ಮೊಳೆವಂತೆ ll
ಗೆಳೆತನ ಎಂಬುದು ಅಳಿಸಲು ಆಗದು
ಸುಳಿಯದು ಇಲ್ಲಿ ವಂಚನೆಯು
ಗಳಿಕೆಯು ಇರಲಿ ಜ್ಞಾನದ ಜೊತೆಗೆ
ಉಳಿಕೆಯು ಬೇಕು ಹಂಚಲೂ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ ರಾಗಸಂಯೋಜನೆ
ಶ್ರೀ ಮತಿ ಮಾಲತಿ ಎಸ್ ಎನ್ ಭಟ್ ಕಾಕುಂಜೆ.
- 67. https://youtu.be/ZpHiqFipK-g?si=64BBwbnuGVdSd5mV
***********************ಶ್ರೀ ಗಣನಾಥ
***********
ಲಂಬೋದರನೆ ಅಂಬಾಸುತನೆ
ಕುಂಬಿನಿಗೊಡೆಯನೆ ಗಣರಾಜ
ಕರುಣಾಸಾಗರ ಮುನಿಜನ ವಂದಿತ
ವಿದ್ಯಾಪ್ರದಾಯಕ ಗಣನಾಥ ll
ಪಾಶಾಂಕುಶಧರ ವಿಘ್ನನಿವಾರಕ
ಅಭಯವ ನೀಡುತ ನೀ ಸಲಹು
ಆಲಿಸು ಅನುದಿನ ಭಕ್ತರ ಮೊರೆಯಾ
ಪಾಲಿಸು ಅನುದಿನ ಭಕ್ತರನು ll
ಚಂದಿರ ವದನನೆ ಸಿದ್ಧಿವಿನಾಯಕ
ಕರುಣಿಸು ವರವನು ಗುಣನಿಧಿಯೆ
ನಂಬಿದೆ ನಿನ್ನಯ ಚರಣವ ನಿತ್ಯವು
ಬುದ್ಧಿಪ್ರದಾಯಕ ಗಣಪತಿಯೆ ll
✍️ . ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ, ಬಾಲಚಂದ್ರ ಬಾರಿಕ್ಕಾಡ್.
- 68. https://youtu.be/p19qS7YolKE?si=b-3lMiL2MHS5-raV
******************ಶೀರ್ಷಿಕೆ : ಮಂಗಳಗೌರಿ
******************
ಕರುಣೆಯ ತೋರಿಸು ಮಂಗಳಗೌರಿಯೆ
ಕರುಣಿಸು ಮಂಗಳ ಮಹಮಾತೆ
ಶಂಕರನರಸಿಯೆ ಭಗವತಿ ಶಂಕರಿ
ಪಾಲಿಸು ನಿರತವು ದುರ್ಗಾoಬೆ ll
ಶ್ರಾವಣ ಮಾಸದ ಶುಭದಿನ ಬಂದಿದೆ
ಪೂಜೆಯು ನಡೆವುದು ಎಲ್ಲೆಡೆಯು
ಕಂಗಳ ತೆರೆಯಲು ಭಾಗ್ಯದ ದೇವತೆ
ತುಂಬಲು ಸಂತಸ ಮನೆಯಲ್ಲು ll
ಭಕ್ತಿಯ ಭಾವನೆಯಿಂದಲಿ ಮನದಲಿ
ಭಜಿಸುವೆ ನಿತ್ಯವು ದೇವಿಯನು
ಒಳಿತನು ಕರುಣಿಸು ದುರಿತವ ನೀಗಿಸು
ಬದುಕಲಿ ನೆಮ್ಮದಿ ನೀ ತೋರು ll
ಅಭಯವ ನೀಡುತ ಕರುಣಿಸು ವರಗಳ
ಕಂಗಳ ತುಂಬಿದ ಕಂಬನಿಯು
ಚರಣದಿ ವಂದಿಸಿ ಬೇಡುವೆ ತಾಯೇ
ಭಯವನು ನೀಗಿಸಿ ನೀ ಸಲಹು ll
✍️ . ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀ ಮತಿ ಸುಮಂಗಲ ಸುರೇಶ್ ಬೆಂಗಳೂರು.
- 69. https://youtu.be/DCsP9R7m7WA?si=ko3ADP184PL5mQn2
***********************ಸ್ವಾಮೀ ಅಯ್ಯಪ್ಪ
****************
ಕರುಣೆಯಿಂದಲಿ ಜಗವನು ಪೊರೆಯುವ
ಹರಿಹರ ಸುತನೇ ಮಣಿಕಂಠ
ಹರುಷದಿ ಬಾರೋ ಕರೆಯುವೆ ನಿನ್ನನು
ಹರಸಲು ಬಾರೋ ಅಯ್ಯಪ್ಪ
ಸ್ವಾಮೀ ಶರಣಂ ಅಯ್ಯಪ್ಪ ll
ಮನದಲಿ ತುಂಬಿದ ಭಕುತಿಯ ಭಾವನೆ
ಸನಿಹದಿ ಇರುವನು ಗಣಪತಿಯು
ವಿಘ್ನವ ನೀಗಿಸಿ ಬೆಟ್ಟವ ಏರಲು
ಕಾಣುವ ಆಸೆಯು ಮನದಲಿ ಮೂಡಿದೆ
ದರುಶನ ನೀಡೆಯ ಸ್ವಾಮೀ
ಅನುದಿನ ನಿನ್ನಯ ನಾಮವ ಸ್ಮರಿಸುವೆ
ಅಭಯವ ನೀಡೋ ಅಯ್ಯಪ್ಪ
ವಿಜಯದ ಪ್ರಭುವಾಗಿ ll
ಅಯ್ಯಪ್ಪನ ಧ್ಯಾನದಲ್ಲಿ ಸನ್ನಿಧಿಗೆ ಬಂದು
ನಾದೋಪಾಸನೆ ಮಾಡಿ
ನಿನ್ನಯ ನಾದೋಪಾಸನೆ ಮಾಡಿ
ಸಹಸ್ರ ನಾಮವನು ಭಜಿಸುತ ನಿನ್ನ
ಸನಿಹದಿ ಭಕ್ತಿಯಲಿ ಬಂದಿಹೆನು
ಕಷ್ಟವನು ಪರಿಹರಿಸು ಬೇಗನೆ ದೇವ
ಬಾಳಿಗೆ ಬೆಳಕಾಗಿ
ನನ್ನ ಪಾಲಿಗೆ ವರವಾಗಿ ll
✍️ . ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ, ಶ್ರೀಯುತ
ಬಾಲಚಂದ್ರ ಬಾರಿಕ್ಕಾಡ್
- 70. https://youtu.be/nWyeBRihXIg?si=usYYIR_b52fFYYa-
***********ನಂದಕುಮಾರ
************
ಕೇಶವ ನಿನ್ನ ಮೋದದಿ ಕರೆಯುವೆ
ಬೇಡುವೆ ನಿನ್ನ ಒಲವನ್ನು
ಪಾಡುವೆ ನಿನ್ನ ನಾಮದ ಭಜನೆ
ಪಾಲಿಸು ದೇವ ಎನ್ನನ್ನು ll
ನಂದಕುಮಾರ ನವನೀತ ಚೋರ
ಕಣಿಪುರದರಸ ನೀ ಬಾರೋ
ಸಲಹೋ ಗಿರಿಧರ ಗೋಪಾಲಕೃಷ್ಣ
ಭಕ್ತಿಯ ಮೊರೆಯು ಕೇಳಿಸದೆ ll
ಕುಣಿತದ ಭಜನೆಗೆ ಕುಣಿಯುತ ಬಾರೋ
ಮುದ್ದಿನ ಮುಖವನು ನೀ ತೋರೋ
ಕುಳಿತರೆ ನಿಂತರೆ ನಿನ್ನದೇ ಧ್ಯಾನ
ಕಾಣದೆ ಬಿಡೆ ನಾ ಪಾದವನು ll
ಭಕ್ತರ ರಕ್ಷಿಪ ದೇವನು ನೀನೂ
ಗೋವನು ಕಾಯುವ ಗೋವಿಂದ
ಸರಿಯಲಿ ದುರಿತವು ಕೃಷ್ಣನ ಕೃಪೆಯಲಿ
ಮುದ್ದಿನ ನಗುವಿನ ಹರಿ ಕೃಷ್ಣ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ,ರಾಗಸಂಯೋಜನೆ,ಶ್ರೀಯುತ ಎನ್ ಮಹಾಲಿಂಗ ಭಟ್ ನೇರೋಳು.
-
71. ವಿನಯದ ಮಾತು
***************
ನಯವಾದ ನಡೆಯಲಿ ವಿನಯದಾ ಮಾತು
ಇರಬೇಕು ಜೀವನ ಸುಖವಾಗಲು
ಸಂತೋಷದಿಂದಲಿ ಸಂಗೀತ ಸುಧೆಯು
ಬರಬೇಕು ಬಳಗದಿ ಹಿತವಾಗಲು ll
ತುಂಬೆಲ್ಲ ಒಲುಮೆಯ ಉತ್ಸಾಹವಿರಲು
ಪ್ರೀತಿಯ ನಗುವಿನ ಮುಖದಲ್ಲಿ
ಕಳೆಯುವುದು ಮನಸಿನ ವೇದನೆಯು ಬೇಗ
ತಿಳಿಯುವುದು ಆಗಲೆ ಹುರುಪಲ್ಲಿ ll
ಸೌಂದರ್ಯ ದೇವತೆ ಕಂಡಾಗಲೆ ಅವಳು
ಬಂದಳು ಬಾಳಿಗೆ ಬೆಳಕಾಗಿ
ಒಲವಿನಾ ಪ್ರೀತಿಯ ಒಸಗೆಯನು ಜೊತೆಗೆ
ಸ್ನೇಹವನು ತೋರುತ ಉಸಿರಾಗಿ ll
✍️ . ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 72. https://youtu.be/8igxXnTuFk0?si=6JHDdas_0u3F5D58
************ರಕ್ಷಾಬಂಧನ
**********
ಮನದಲಿ ಮೂಡಿದ ಸುಂದರ ಕ್ಷಣವೆ
ಸೋದರ ಸೋದರಿ ಭಾವನೆಯು
ಜನುಮವ ನೀಡಿದ ತಾಯಿಯ ಮಮತೆಯು
ಬಾಳಲು ಕಲಿಸಿತು ಸ್ನೇಹದೊಳು ll
ಒಲವಿನ ನುಡಿಗಳು ಸೋದರಿ ಪ್ರೀತಿಯು
ಬಲವನು ಕೊಟ್ಟಿತು ಈ ದಿನವು
ರಕ್ಷಣೆ ನೀಡಿತು ಸೋದರಿ ಕಟ್ಟಿದ
ರಾಖಿಯ ಹಬ್ಬದ ಶುಭದಿನವು ll
ನಡೆಯಲು ನುಡಿಯಲು ತಿಳಿಸಿದ ಸೋದರಿ
ತುಂಬಿದ ಹರುಷವು ವರವಾಗಿ
ಅನುದಿನ ತೋಷವು ಹಂಚುತ ಇರುವಳು
ಜೊತೆಯಲಿ ಮಮತೆಯ ಕಡಲಾಗಿ ll
ರಕ್ಷೆಯ ಬಂಧನ ನಿತ್ಯವು ಇರಲೀ
ಸುರಿಯಲಿ ಪ್ರೀತಿಯ ಮಳೆಯಾಗಿ
ತಾಯಿಯ ಕರುಣೆಯ ಮುದ್ದಿನ ಮಕ್ಕಳು
ಸೋದರ ಸೋದರಿ ಜೊತೆಯಾಗಿ ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜಕರು
ಶ್ರೀ ಮತಿ ಸುಮಂಗಲ ಸುರೇಶ್ ಬೆಂಗಳೂರು.
- 73. https://youtu.be/gEh1fNd-ugk?si=nKG__lmttVPVbrkc
********************ಭಾಗ್ಯ ಲಕ್ಷ್ಮಿ
*********
ಹರಿಯ ರಮಣಿ ಸುಂದರ ವದನೆ
ಭಾಗ್ಯವ ಕರುಣಿಸು ಬಾರಮ್ಮ
ಭಾಗ್ಯಲಕ್ಷ್ಮಿಯೆ ಸೌಭಾಗ್ಯದೇವತೆ
ಒಲವಿನ ನುಡಿಯನು ಕೇಳಮ್ಮ
ಮಹಾಲಕ್ಷ್ಮಿಯ ಪೂಜೆಗೆ ಶುಭದಿನವು
ಬದುಕಲಿ ನೆಮ್ಮದಿ ನೀಡಮ್ಮ
ಹಾದಿಯಲೆಂದು ದುರಿತವ ಕಳೆಯುತ
ಶಾಂತಿಯ ನೀಡುತ ಪೊರೆಯಮ್ಮ ll
ಮನೆಯಲಿ ನೆಲೆಸುತ ಮನೆಯನು ಬೆಳಗು
ಮನದಲಿ ಒಲಿಯುತ ಬಾರಮ್ಮ
ವರವನು ನೀಡುತ ಅಭಯವ ಕರುಣಿಸು
ಮಂಗಳ ರೂಪಿಣಿ ನೀನಮ್ಮ ll
ಭಕ್ತಿಯ ಅರ್ಚನೆ ಪುಷ್ಪವನಿರಿಸಿ
ದೀಪವ ಬೆಳಗಿ ಆರತಿಯು
ಕಲಶವ ಇಟ್ಟು ಪೂಜೆಯ ಗೈಯಲು
ಕನಿಕರಿಸುವ ದೇವೀ ಮಂಗಳೆಯು ll
✍️ . ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ರಾಗಸಂಯೋಜನೆ ಗಾಯನ
ಶ್ರೀಮತಿ ಶಶಿಪ್ರಭ ವರುಂಬುಡಿ.
- 74. https://youtu.be/TpQIiTUGjGw?si=VFqzZTEdVnBIbzJw
********************
Lyrics : B Udaneshwara Prsad
MooladKa
***********
Singer : smt, Bhagyalakshmi Bhat
Pdpu
******ಪುತ್ತೂರು ಶ್ರೀ ಮಹಾಲಿಂಗೇಶ್ವರ
************************
ಲಿಂಗದ ರೂಪದಿ ದರುಶನ ನೀಡುವೆ
ಮಹಾಲಿಂಗೇಶ್ವರನೇ ಮಹಾಲಿಂಗೇಶ್ವರನೇ
ಚರಣಕೆ ಎರಗುತ ಬೇಡುತಲಿರುವೆನು
ಮೋಕ್ಷಪ್ರದಾಯಕನೇ ಮೋಕ್ಷಪ್ರದಾಯಕನೇ ll
ಪುತ್ತೂರ ಮುತ್ತು ಮಹಾಲಿಂಗೇಶ್ವರ
ಹತ್ತೂರ ಒಡೆಯ ಪರಮೇಶ್ವರ
ನಿತ್ಯ ನಿನ್ನ ನಾಮವೇ ಸರ್ವೇಶ್ವರ
ಕರುಣೆ ತೋರಿ ಮುನ್ನಡೆಸು ಜಗದೀಶ್ವರ ll
ಬೇಡಿದ ವರವನು ಆ ಕ್ಷಣ ನೀಡುವ
ಕರುಣಾಸಾಗರನೇ ಕರುಣಾಸಾಗರನೇ
ಅರಿಯದೆ ಮಾಡಿದ ಪಾಪವ ನೀಗುವ
ಪಾಪವಿನಾಶಕನೇ ಪಾಪವಿನಾಶಕನೇ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
-
75. ಶ್ರೀ ಗಣನಾಥ
***********
ಲಂಬೋದರನೆ ಅಂಬಾಸುತನೆ
ಕುಂಬಿನಿಗೊಡೆಯನೆ ಗಣರಾಜ
ಕರುಣಾಸಾಗರ ಮುನಿಜನ ವಂದಿತ
ವಿದ್ಯಾಪ್ರದಾಯಕ ಗಣನಾಥ ll
ಪಾಶಾಂಕುಶಧರ ವಿಘ್ನನಿವಾರಕ
ಅಭಯವ ನೀಡುತ ನೀ ಸಲಹು
ಆಲಿಸು ಅನುದಿನ ಭಕ್ತರ ಮೊರೆಯಾ
ಪಾಲಿಸು ಅನುದಿನ ಭಕ್ತರನು ll
ಚಂದಿರ ವದನನೆ ಸಿದ್ಧಿವಿನಾಯಕ
ಕರುಣಿಸು ವರವನು ಗುಣನಿಧಿಯೆ
ನಂಬಿದೆ ನಿನ್ನಯ ಚರಣವ ನಿತ್ಯವು
ಬುದ್ಧಿಪ್ರದಾಯಕ ಗಣಪತಿಯೆ ll
ಪಾವನ ರೂಪನೆ ಮಂಗಳಕಾರಕ
ಭಕ್ತಿಯ ಪೂಜೆಗೆ ಒಲಿವಾತ
ಮೋಕ್ಷಪ್ರದಾಯಕ ಗಿರಿಜಾ ನಂದನ
ಬಂದಿಹ ದುರಿತವ ಕಳೆವಾತ ll
✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
- 76. https://youtu.be/LR3eBMfPQyU?si=RfZybeBA5PNGQW31
**********************
ರಾಗ ಸಂಯೋಜನೆ : ಗಣೇಶ್ ನೀರ್ಚಾಲು,
#ಸಾಹಿತ್ಯ : ಉದನೇಶ್ವರ ಭಟ್ ಮೂಲಡ್ಕ,
ಗಾಯನ : ಭಾಗ್ಯ ಶ್ರೀ ಮುಳ್ಳೇರಿಯ
ನಿರ್ಮಾಪಕರು – ಮಹೇಶ್ ವಳಕುಂಜ (ಶ್ರೀ ರಕ್ಷಾ)
ಕೊಳಲು – ಸಂತೋಷ್ ವಿಟ್ಲ
ಮ್ಯೂಸಿಕ್ ಪ್ರೋಗ್ರಾಮಿಂಗ್ : ಸ್ವರಾಜ್ ಉಪ್ಪಳ,
ರೆಕಾರ್ಡಿಂಗ್, ಮಿಕ್ಸಿಂಗ್ & ಮಾಸ್ಟರಿಂಗ್ – ಲವ ಕುಮಾರ್ ಐಲ (ನಾದ ರಂಜಿನಿ ಸ್ಟುಡಿಯೋ ಐಲ)
Lyrics : B Udaneshwara Prasad Mooladka
Music Compose : Ganesh Neerchal
Singing & Acting : Bhagyashree Bhat Mulleria
Producer : Mahesh Valakunja (Shree Raksha )
Flute : Santosh Vitla
Music Programming : Swaraj Uppala
Recording, Mixing & Mastering : Lava kumar ila
Camera & Editing
Nithin Amr
Dream Cliqs Wedding Co. Kumbla
Camera Assistant
Balu Bhat Movvar
****************
#ಅಲಂಕಾರಪ್ರಿಯಕಾರ್ಮಾರು ಶ್ರೀ ಮಹಾವಿಷ್ಣು
**********************
ಅಂತರಂಗದಲಿ ನೋಡಿದೆ ದಿವ್ಯ ರೂಪವ
ಬೇಡಿದ ವರವನು ಆ ಕ್ಷಣ ನೀಡುವ …
ಹಾಡಿದೆ ಪಾಡಿದೆ ನಿನ್ನಯ ಗುಣಗಾನವ
ನಂಬಿದೆ ನಿನ್ನಯ ಪರಮ ಪಾದವ…
ಕಾರ್ಮಾರಿನ ಪುರವಾಸ ಶ್ರೀವಿಷ್ಣುವೇ
ಕರುಣೆಯ ಹರಿಸುವ ಮಹಾವಿಷ್ಣುವೇ
ಬದುಕಿನ ಬವಣೆಯ ನೀಗಿಸು ಸ್ವಾಮಿಯೇ
ಇಂಬನು ನೀಡುತ ಸಲಹು ದೇವನೇ ll
ಪನ್ನಗ ಶಯನ ನಾರಾಯಣ
ಲಕ್ಷ್ಮೀರಮಣ ನಾರಾಯಣ
ಕಾರ್ಮಾರಲಿ ವಾಸ ನಾರಾಯಣ
ನಾರಾಯಣ ಹರಿ ನಾರಾಯಣ (ಕೋರಸ್ )
ಹಸಿರು ಪರಿಸರದಲ್ಲಿ ನೆಲೆಸಿರುವ ನೀ ನಮ್ಮ
ಉಸಿರಾಗಿ ನಿಂತಿರುವೆ ಭಕ್ತ ಜನರಿಗೆ
ಭಕ್ತಿ ಭಾವದಿಂದ ಪೂಜಿಪರು ನಿನ್ನನು
ಲಾಲಿಸಿ ಪಾಲಿಸು ಜಗದೊಡೆಯನೆ ll
ಪನ್ನಗ ಶಯನ ನಾರಾಯಣ
ಲಕ್ಷ್ಮೀರಮಣ ನಾರಾಯಣ
ಕಾರ್ಮಾರಲಿ ವಾಸ ನಾರಾಯಣ
ನಾರಾಯಣ ಹರಿ ನಾರಾಯಣ
ಅಲಂಕಾರಪ್ರಿಯನೇ ಭಕ್ತ ಲೋಲನೆ
ಹಾಲು ಪಾಯಸ ನೈವೇದ್ಯ ನೀಡುವೆ ನಾ ಭಕ್ತಿಯಲಿ
ಸ್ವೀಕರಿಸು ನೀ ಬಂದು ಲಕ್ಷ್ಮಿ ರಮಣನೆ
ಸಂತಾನ ಭಾಗ್ಯವನು ಕರುಣಿಸು ಹರಿಯೆ ll
ಪನ್ನಗ ಶಯನ ನಾರಾಯಣ
ಲಕ್ಷ್ಮೀರಮಣ ನಾರಾಯಣ
ಕಾರ್ಮಾರಲಿ ವಾಸ ನಾರಾಯಣ
ನಾರಾಯಣ ಹರಿ ನಾರಾಯಣ
ಸ್ಮರಣೆಯಿಂದಲೇ ಕಳೆಯಲು ನಾ ಪಾಪವ
ಅಜ್ಞಾನ ನೀಗಿಸು ನೀ ಸುಜ್ಞಾನವ ಕರುಣಿಸು
ಜನುಮ ಜನುಮದ ನನ್ನ ಪುಣ್ಯದ ಫಲವು
ದೊರಕಿತು ಸೇವೆಯ ಮಾಡೊ ಭಾಗ್ಯವು ll
ಪನ್ನಗ ಶಯನ ನಾರಾಯಣ
ಲಕ್ಷ್ಮೀರಮಣ ನಾರಾಯಣ
ಕಾರ್ಮಾರಲಿ ವಾಸ ನಾರಾಯಣ
ನಾರಾಯಣ ಹರಿ ನಾರಾಯಣ
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
77. https://youtu.be/F1cXqtQCRCA?si=pODcsR-dUtMNVToS
78. https://youtu.be/yltaKxVd2Rk?si=qZubbU_f8iI827Er
79. https://youtu.be/tHW60iHxrkg?si=kxwbRoFWT_-37TYT
80. https://youtu.be/fe8ia9aoh7U?si=IuCBUiHdwBy83lcQ
81 https://youtu.be/Bf5QycmfvXM?si=wGeaExV8YTN9s7so