ಅಭಿಲಾಷೆ ಕಾದಂಬರಿ – 36ನೇ ಸಂಚಿಕೆ

ಆತ್ಮೀಯ ಓದುಗರಿಗೆ ಡಾ. ಎನ್. ಮುರಳೀಧರ್, ವಕೀಲರು ಸಾಹಿತಿ, ನೆಲಮಂಗಲ ಆದ ನನ್ನ ವಂದನೆಗಳನ್ನು ತಿಳಿಸುತ್ತಾ ಇಂದು ನನ್ನ 29 ನೇ ಕೃತಿ ಅಭಿಲಾಷೆ ಕಾದಂಬರಿಯ 36 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.

ಹಿಂದಿನ ಸಂಚಿಕೆಯಲ್ಲಿ

ಡ್ರೈವರ್ ಹಿಂದಿನ ರಾತ್ರಿ ನಡೆದ ಘಟನೆಯನ್ನು ಇನ್ಸ್ಪೆಕ್ಟರ್ಗೆ ಹೇಳಲು ಶುರು ಮಾಡುತ್ತಾನೆ.

ಕಥೆಯನ್ನು ಮುಂದುವರೆಸುತ್ತಾ

ಡ್ರೈವರ್ ಹಿಂದಿನ ದಿನದ ಘಟನೆಯನ್ನು ಇನ್ಸ್ಪೆಕ್ಟರ್ ಗೆ ವಿವರಿಸುತ್ತಾ,
ಸಾರ್ ನಿನ್ನೆ ರಾತ್ರಿ ಆ ಯುವತಿ ಯಾರೋ ನನಗೆ ಗೊತ್ತಿಲ್ಲಾ ಸಾರ್ ಅವರು ನನ್ನ ಆಟೋ ಬುಕ್ ಮಾಡಿದರು ನಾನು ಕರೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಇಬ್ಬರು ನನ್ನ ಆಟೋಗೆ ಕಾರನ್ನು ಅಡ್ಡ ನಿಲ್ಲಿಸಿ ಆ ಯುವತಿಯನ್ವು ಬಲವಂತ ಮಾಡಿ ಕಿಡ್ನಾಪ್ ಮಾಡಿಕೊಂಡು ಹೋದರೆಂದು ಡ್ರೈವರ್ ಹೇಳಿದಾಗ
ಆ ಕಾರಿನ ನಂಬರ್ ಏನು? ಯಾವ ಬಣ್ಣದ ಕಾರೆಂದು ಡ್ರೈವರನ್ನು ಇನ್ಸ್‌ ಪೆಕ್ಟರ್ ಪ್ರಶ್ನಿಸಲು
ಬಿಳಿ ಬಣ್ಣದ ಕಾರು ಸಾರ್, ಆ ಕಾರಿನ ನಂಬರ್ ಗೊತ್ತಿಲ್ಲಾ ಆದರೆ ಆ ಕಾರಿನ ಹಿಂದಿನ ಗ್ಲಾಸ್ ಮೇಲೆ, “ಇಲ್ಲೇ ಸ್ವರ್ಗ ಇಲ್ಲೇ ನರಕ” ವೆಂದು‌ ಬರೆದಿತ್ತೆಂದು ಹೇಳಿದಾಗ
ಓಕೆ ಪುನಃ ವಿಚಾರಣೆಗೆ ಕರೆದಾಗ‌ ಬರಬೇಕೆಂದು ಇನ್ಸ್ ಪೆಕ್ಟರ್ ರವರು ಆಟೋ ಡ್ರೈವರ್ ಗೆ ಹೇಳಿದ ನಂತರ, ಕಂಟ್ರೋಲ್ ರೂಮಿಗೆ ಫೋನ್ ಮಾಡಿ ಕಾರಿನ ವಿವರ ತಿಳಿಸಿ ಶೀಘ್ರವಾಗಿ ಆ ಕಾರನ್ನು ಕಂಡು ಹಿಡಿಯುವಂತೆ ಹೇಳಿರುತ್ತಾರೆ.

ಇಪ್ಪತ್ತು ಜನ ಸಿಬ್ಬಂದಿಗೆ ಕಿಡ್ನಾಪರ್ ಹೇಳಿರುವ ಜಾಗದಲ್ಲಿ ಮೂರು ಗಂಟೆಗೆ ಇರುವಂತೆ ಇನ್ಸ್ ಪೆಕ್ಟರ್ ಹೇಳಿದ್ದು,
ಅದರಂತೆ ಒಂದು ವಾಹನದಲ್ಲಿ ಇಪ್ಪತ್ತು ಜನ ಸಿಬ್ಬಂದಿ ಕುಳಿತು ಕೊಂಡ ನಂತರ
ವಾಹನವು ಕಿಡ್ನಾಪರ್ ಹೇಳಿದ ಜಾಗಕ್ಕೆ ಬಂದ ಸ್ವಲ್ರ ಹೊತ್ತಿಗೆ
ಕಿಡ್ನಾಪರ್ ಕೋದಂಡರಾಂ ಗೆ ಫೋನ್ ಮಾಡಿ ಮಾಸ್ಟ್ರೇ ನಿಮ್ಮ ಕಂತ್ರಿ ಬುದ್ದಿ ತೋರಿಸಿಬಿಟ್ಟರಲ್ಲಾ ಎನ್ನುತ್ತಾನೆ
ಕೋದಂಡರಾಂ ರವರಿಗೆ ಗಾಬರಿಯಾಗಿ ಏನ್ ಏನ್ ಹೇಳುತ್ತಿದ್ದೀಯಾ ನೀನು? ನಾನೇನು ಕಂತ್ರಿ ಬುದ್ದಿ ತೋರಿಸಿದ್ದೇನೆ? ನೀನು ಹೇಳಿದಂತೆ ಹಣ ಹೊಃದಿಸಿ ತರುತ್ತೇನೆ. ಇದರಲ್ಲಿ ಅನುಮಾನ ಬೇಡವೆಂದು ಹೇಳಲು
ಲೋ ಮಾಸ್ಟರಾ ಹಣ ತರುವವನು ಮೂರು ಘಂಟೆಯಾಗುತ್ತಿದ್ದರೂ ನೀನಿನ್ನು ಬ್ಯಾಂಕಿಗೆ ಹೋಗಿಲ್ಲಾ, ನನಗೆ ಹಣ ಹೇಗೆ ಕೊಡುತ್ತೀಯಾ? ಹಣ ಕೊಡಲು ಬೇರೆ ಏನು ಅರೇಂಜ್ ಮಾಡಿದ್ದೀಯಾ? ಎಂದು ಕೇಳಲು
ನಾನು ಬ್ಯಾಂಕಿಗೆ ಹೋಗಲೀ ಬಿಡಲೀ? ನಿನಗೇನಾಗಬೇಕು? ನಿನಗೆ ಹಣ ತಲುಪಿದರೆ ಸಾಕಲ್ಲಾ ಎಂದು ಕೋದಂಡರಾಮ್ ‌ಪ್ರಶ್ನಿಸಲು
ನಿನ್ನ ಮಗಳು ಸೇಫಾಗಿ ಮನೆಗೆ ಬರಬೇಕಾದರೆ ಹಣ ಕೊಡಲೇಬೇಕು, ಏನಾದರೂ‌ ಮಂಗಾಟ ಆಡಿದೆಯೋ ನಿನ್ನ ಮಗಳ ಪ್ರಾಣ ನನ್ನ ಕೈಲಿದೆ ಎಂದಾಗ
ಅಯ್ಯೋ ನನ್ನ ಮಗಳಿಗೆ ಏನೂ ಮಾಡಬೇಡಪ್ಪಾ, ನಿನಗೆ ಹಣ ತಂದುಕೊಡುತ್ತೇನೆಂದು ಕೋದಂಡರಾಂ ದೈನ್ಯತೆಯಿಂದ ಕೇಳಿದಾಗ
ಹಣ ತಂದುಕೊಟ್ಚ ತಕ್ಷಣ ನಿಮ್ಮ ಮಗಳನ್ನು ಬಿಡುಗಡೆ ಮಾಡುತ್ತೇನೆ ಹ್ಞಾಂ ಹ್ಞಾಂ ಹಣವನ್ನು ಈ ದಿನ ಬೇರೆ ಕಡೆ‌‌ ತಂದುಕೊಡಬೇಕೆಂದು ಕಿಡ್ನಾಪರ್ ಹೇಳಲು
ಆಯ್ತಪ್ಪಾ ನೀನು ಎಲ್ಲಿಗೆ ತಂದುಕೊಡಬೇಕೆಂದು ಹೇಳುತ್ತೀಯೋ ಅಲ್ಲಿಗೆ ತಂದುಕೊಡುತ್ತೇನೆಂದು ಕೋದಂಡರಾಂ ಮಾತಿಗೆ
ನಾನೀಗಲೇ ಪ್ಲೇಸ್ ಹೇಳುವುದಿಲ್ಲ, ಸಂಜೆ ಹೇಳುತ್ತೇನೆ ಎನ್ನುತ್ತಾ ಕಿಡ್ನಾಪರ್ ಫೋನ್ ಆಫ್ ಮಾಡುತ್ತಾನೆ.
ಕೋದಂಡರಾಂರವರು ಕಿಡ್ನಾಪರ್ ಹೇಳಿದ ವಿಷಯವನ್ನೆಲ್ಲಾ ಇನ್ಸ್‌ ಪೆಕ್ಟರ್ ಗೆ ಹೇಳಿ ಸಾರ್ ನಾನು ಬ್ಯಾಂಕಿಗೆ ಹೋಗದೇ ಇದ್ದರೆ ಅವನಿಗೆ ಅನುಮಾನ ಬರುತ್ತದೆ ಸಾರ್ ಎಂದು ಆತಂಕ ವ್ಯಕ್ತಪಡಿಸಿದಾಗ
ಗುರುಗಳೇ ಒಂದು ಕೆಲಸ ಮಾಡಿ ಈಗಲೇ ಒಂದು ದೊಡ್ಡ ಬ್ಯಾಗಿನೊಂದಿಗೆ ಬ್ಯಾಂಕಿಗೆ ಬನ್ನಿ ಎಂದು ಇನ್ಸ್ ಪೆಕ್ಟರ್ ಹೇಳಿದ ಮಾತಿಗೆ
ಆಯ್ತು ಸಾರ್ ಎಂದು ಹೇಳಿ ಕೋದಂಡರಾಂ ರವರು ಒಂದು ದೊಡ್ಡ ಬ್ಯಾಗನ್ನು ತೆಗೆದುಕೊಂಡು ಬ್ಯಾಂಕ್ ಗೆ ಬರುವ
ವೇಳೆಗಾಗಲೇ ಇನ್ಸ್ ಪೆಕ್ಟರ್ ರವರು ಬ್ಯಾಂಚ್ ಮ್ಯಾನೇಜರ್ ಗೆ ಫೋನ್ ಮಾಡಿ ನಿನ್ನೆ ಬಂದಿದ್ದ ವ್ಯಕ್ತಿ ಇಂದೂ ಬಂದಿದ್ದಾನಾ ಸಿಸಿ ಟಿವಿ ನೋಡಿ ಹೇಳಿ ಎನ್ನಲು
ಸಾರ್ ಐದು ನಿಮಿಷವೆಂದು ಹೇಳಿ, ಸಿಸಿ ಟಿವಿ ಚೆಕ್‌ ಮಾಡಿ ಸಾರ್‌ ನಿನ್ನೆ ಬಂದಿದ್ದ ಯುವಕ ಬಂದು ಹೋಗಿದ್ದಾನೆ‌ ಸಾರ್ ಎನ್ನುತ್ತಾರೆ
ಓಕೆ ಎಂದು ಇನ್ಸ್ ಪೆಕ್ಟರ್ ಫೋನ್ ಆಫ್ ಮಾಡಿದ ತಕ್ಷಣ
ಮ್ಯಾನೇಜರ್ ರವರು ಪುನಃ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ, ಸಾರ್ ಅವನು ಪುನಃ ಬಂದು ಕುಳಿತಿದ್ದಾನೆಂದು ಹೇಳಿದಾಗ
ನಾನೀಗಲೇ ಬರುತ್ತೇನೆಂದು ಹೇಳಿ ಫೋನ್ ಆಫ್ ಮಾಡಿದ ತಕ್ಷಣ ಇನ್ಸ್ ಪೆಕ್ಟರ್ ರವರು ಸಿವಿಲ್ ಡ್ರಸ್‌ ಹಾಕಿಕೊಂಡು ಇಬ್ಬರು ಸಿಬ್ಬಂದಿಗೂ ಸಿವಿಲ್ ಡ್ರೆಸ್ ಹಾಕಿಕೊಂಡು ಬರುವಂತೆ ಹೇಳಿ ಸೀದಾ‌ ಬ್ಯಾಂಕ್ ಗೆ ಹೊರಟು ಬಂದು ಸೀದಾ ಒಳಗೆ ಹೋಗಿ ಗ್ರಾಹಕರ ಸೋಗಿನಲ್ಲಿ ಮ್ಯಾನೇಜರ್ ಛೇಂಬರಿನಲ್ಲಿ ಕುಳಿತುಕೊಂಡು ಆ ಯುವಕ ಎಲ್ಲಿದ್ದಾನೆಂದು ಕೇಳಲು
ಸಾರ್ ಈವರೆಗೂ ಇಲ್ಲೇ ಕುಳಿತಿದ್ದ ಈಗ ಎಲ್ಲೋ ಹೊರಟು ಹೋಗಿದ್ದಾನೆಂದು ಹೇಳಿದಾಗ
ಆ ಯುವಕ ಪುನಃ ಏನಾದರೂ ಬರುತ್ತಾನಾ ಎಂದು ಹೊರಗಡೆ ಬಂದು ಸಿಬ್ಬಂದಿಗಳೊಂದಿಗೆ ಹೊರಗಡೆ‌ ಕಾಯುತ್ತಿರುವಾಗ
ಕೋದಂಡರಾಂ ರವರು ಬ್ಯಾಂಕಿನೊಳಗೆ ಬಂದು ಮ್ಯಾನೇಜರ್ ಬಳಿ ಹೋಗಿ ಕುಳಿತುಕೊಂಡು ತಮ್ಮ ಮಗಳನ್ನು ಕಿಡ್ನಾಪ್ ಮಾಡಿದ ವಿಷಯವನ್ನು ಹೇಳಲು
ಇನ್ಸ್ ಪೆಕ್ಟರ್ ರವರು ನಿಮ್ಮ ವಿಷಯ ಹೇಳಿದ್ದಾರೆಂದು ಮ್ಯಾನೇಜರ್ ಹೇಳಿ ಮಾತನಾಡುತ್ತಿರುವಾಗ
ಕ್ಯಾಷಿಯರ್ ಬ್ಯಾಂಕ್ ಗೆ ಸಂಬಂಧಪಟ್ಚ‌ ಹಣವನ್ನು ಮ್ಯಾನೇಜರ್ ಮುಂದೆ ತಂದಿಟ್ಚು ಅದನ್ನು ಎಣಿಸುತ್ತಿರುವಾಗ
ಯಾರೋ ಕಿಟಕಿಯಿಂದ ನೋಡುತ್ತಿರುವುದನ್ನು ಮ್ಯಾನೇಜರ್ ಗಮನಿಸಿ ತಕ್ಷಣ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ವಿಷಯ ತಿಳಿಸಿದಾಗ
ಇನ್ಲ್ ಪೆಕ್ಟರ್ ರವರು ನಿಂತಿದ್ದ ಸ್ವಲ್ಪ ದೂರದಲ್ಲಿ ಒಂದು ಕಾರು ಕ್ರಾಸ್ ಮಾಡಿಕೊಂಡು ಹೋಗುತ್ತಿದ್ದು, ಕಾರಿನ ಹಿಂಭಾಗದ‌ ಗ್ಲಾಸಿನ ಮೇಲೆ ಆಟೋ‌ ಡ್ರೈವರ್ ಹೇಳಿದ್ದ “ಇಲ್ಲೇ ಸ್ವರ್ಗ‌ ಇಲ್ಲೇ ನರಕ” ಎಂದು ಬರೆದಿರುವುದನ್ನು ಗಮನಿಸಿದ ಇನ್ಸ್ ಪೆಕ್ಟರ್ ರವರು ತಕ್ಷಣ ತಮ್ಮ ವಾಹನದಲ್ಲಿ ಕುಳಿತು ಮುಂದೆ ಹೋ‌ದ‌ ಕಾರನ್ನು ಹಿಂಬಾಲಿಸುವಂತೆ ತಮ್ಮ ಡ್ರೈವರ್ ಗೆ ಹೇಳಲು
ಅದರಂತೆ ಇನ್ಸ್ ಪೆಕ್ಟರ್ ವಾಹನದ ಡ್ರೈವರ್ ಕಾರನ್ನು ಹಿಂಬಾಲಿಸುತ್ತಿರುವುದನ್ನು ಮುಂದೆ ಹೋಗುತ್ತಿದ್ದ ಕಾರಿನ ಡ್ರೈವರ್ ಕನ್ನಡಿಯಲ್ಲಿ ನೋಡಿ ತನ್ನ ಕಾರಿನ ವೇಗವನ್ನು ಹೆಚ್ಚಿಸುತ್ತಾನೆ.
ಅದರಂತೆ ಇನ್ಸ್ ಪೆಕ್ಟರ್ ಕುಳಿತಿದ್ದ ಕಾರಿನ ಡ್ರೈವರ್ ಕೂಡಾ ಅಷ್ಟೇ ವೇಗವಾಗಿ ಕಾರನ್ನು ಚಲಾಯಿಸುತ್ತಾ, ಕಾರನ್ನು ಹಿಂಬಾಲಿಸುತ್ತಿರುತ್ತಾನೆ.
ಮುಂದೆ ಹೋಗುತ್ತಿರುವ ಕಾರಿನ ವೇಗ ಹೆಚ್ತಾಗುತ್ತಿದ್ದಂತೆ
ಇನ್ಸ್ ಪೆಕ್ಟರ್ ಡ್ರೈವರ್ ಕೂಡಾ ವೇಗವನ್ನು ಹೆಚ್ಚಿಸುತ್ತಾ, ಸಿನಿಮಾದಲ್ಲಿ ಛೇಸ್ ಮಾಡುವಂತೆ ಮಾಡಿ, ಸ್ವಲ್ಪ ದೂರದಲ್ಲಿ ಕಾರಿಗೆ ಅಡ್ಡಲಾಗಿ ತಂದು ನಿಲ್ಲಿಸಿದಾಗ
ರಸ್ತೆಗೆ ಅಡ್ಜಲಾಗಿ ಕಾರನ್ನು ನಿಲ್ಲಿಸಿರುವುದನ್ನು ನೋಡಿದ ಆ ಡ್ರೈವರ್ ಗೆ ಕೋಪ ಬಂದು ಕಾರಿನಿಂದಿಳಿದು ದಢಾರನೆ ಕಾರಿನ ಬಾಗಿಲನ್ನು ಹಾಕಿ ಮುಂದಕ್ಕೆ ಬಂದು ಯಾರೋ ನೀನು? ನನ್ನ ಕಾರನ್ನೇಕೆ ಹಿಂಬಾಲಿಸುತ್ತಿರುವೆ ಎಂದು ಪ್ರಶ್ನಿಸಿದಾಗ
ಪೋಲಿಸ್ ಸಿಬ್ಬಂದಿಯವರು ಮಾತನಾಡಲು ಹೋದಾಗ
ಇನ್ಸ್‌ಪೆಕ್ಟರ್ ರವರು ಸುಮ್ಮನಿರುವಂತೆ ಸಿಬ್ಬಂದಿಗೆ ಕೈ ಸನ್ನೆ ಮಾಡಿ
ಕಾರಿನ ಡ್ರೈವರ್ ಹತ್ತಿರ ಬಂದು ಬ್ರದರ್ ನಾವುಗಳು ನಿಮ್ಮ ಸ್ನೇಹಿತರೆಂದು ತಿಳಿದುಕೋ ಎನ್ನಲು
ನೀವ್ ಯಾವ ಸೀಮೇ ನನಗೆ ಫ್ರೆಂಡ್ಸ್‌ ಎಂದು ಕೋಪದಿಂದ ಕಾರಿನ ಡ್ರೈವರ್ ಕೇಳಿದಾಗ
ಕೋಪ ಬೇಡಾ ಬ್ರದರ್ ನಿಮ್ಮ ವಿಷಯವೆಲ್ಲಾ ನಮಗೆ ಗೊತ್ತಿದೆ ಎಂದ‌ ತಕ್ಷಣ‌
ನ,,,,,,ನ,,,,ನನ್ನ ವಿ,,ವಿ,,ವಿಷಯ‌ ಏ,,,ಏ,,,,ಏನ್ ನಿಮಗೆ ಗೊತ್ತಿದೆ‌, ನನ್ನಲ್ಲಿ ಅಂತಹ‌ ವಿಷಯವೇನಿದೆ ಎಂದು ಪ್ರಶ್ನಿಸಿದಾಗ
ಬ್ರದರ್ ನಿಮ್ಮ ವಿಷಯವನ್ನೆಲ್ಲಾ ನಿನ್ನ ಅಸಿಸ್ಟಂಟ್ ನಮಗೆ ಹೇಳಿದ್ದಾರೆ. ನಿಮಗೆ ಸಹಾಯ ಮಾಡಬೇಕೆಂದು ಕೂಡಾ ಹೇಳಿದ್ದಾರೆ ಅದಕ್ಕೆ ನಿಮ್ಮನ್ನು ಫಾಲೋ‌ ಮಾಡಿಕೊಂಡು ಬಂದಿದ್ದೇವೆ ಎಂದು ಇನ್ಸ್ ಪೆಕ್ಟರ್ ಹೇಳಿದಾಗ
ನನ್ನಲ್ಲಿ ಅಂತಹ ವಿಷಯ ಏನೂ ಇಲ್ಲಾ ,ನೀವು ಬೇಕಂತಲೇ ಏನೇನೋ ಹೇಳುತ್ತಿದ್ದೀರಾ ದಯವಿಟ್ಟು ಇಲ್ಲಿಂದ ಹೊರಟು ಹೋಗಿ ನನಗೆ ಬೇರೆ ಕೆಲಸವಿದೆಯೆಂದು ಆ ಡ್ರೈವರ್ ಗಾಬರಿಯಿಂದ ಹೇಳಿದ ಮಾತಿಗೆ
ಬ್ರದರ್ ನೀನು ಗಾಬರಿಯಾಗಬೇಡಾ, ನಾವುಗಳು ನಿಮ್ಮ ಸಹಾಯಕ್ಕೆ ಬಂದಿದ್ದೇವೆಂಬ ಇನ್ಸ್ ಪೆಕ್ಟರ್ ಮಾತಿಗೆ
ನೋ ನೀವು ಯಾರೋ ನನಗೆ ಗೊತ್ತಿಲ್ಲ ದಯವಿಟ್ಟು ಇಲ್ಲಿಂದ ಹೆೊರಟು ಹೋಗಿ ಎಂದು ಆ ಡ್ರೈವರ್ ಜೋರಾಗಿ ಕೂಗುತ್ತಾನೆ .
ಬ್ರದರ್ ಕೂಗಾಡಬೇಡಾ, ನೀನು ಜೋರಾಗಿ ಕೂಗಿದರೆ ಎಲ್ಲರೂ ಬರುತ್ತಾರೆ. ಆಗ ನಿನಗೇ ಲಾಸ್ ಆಗುತ್ತದೆಂದು ಇನ್ಸ್ ಪೆಕ್ಟರ್ ಹೇಳಿದ ಮಾತಿಗೆ
ನನಗೇನೂ ಲಾಸ್ ಆಗುವುದಿಲ್ಲ ನೀವು ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ ಎನ್ನುತ್ತಾನೆ
ಬ್ರದರ್ ನಾವು ನಿನಗೆ ಒಳ್ಳೆಯ ರೀತಿಯಲ್ಲಿ ಹೇಳಿದರೆ ನೀನು ನಮ್ಮ ಮಾತನ್ನು ನಂಹುವುದಿಲ್ಲ. ನಿನ್ನ ವಿಷಯ ಏನೆಂದು ನಾವೇ ಹೇಳಿದರೆ ನಿಮಗೆ ನಮ್ಮ ಮೇಲೆ ನಂಬಿಕೆ ಬರುತ್ತದೆಂದು ಇನ್ಸ್‌ಪೆಕ್ಟರ್ ಹೇಳಲು
ನಿಮಗೇನು ಗೊತ್ತಿದೆ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದಾಗ
ಬ್ರದರ್ ನೀನು ಒಂದು ಹುಡುಗಿಯನ್ನು ಕಿಡ್ನಾಪ್ ಮಾಡಿ ಎರಡು ಕೋಟಿ ರೂಪಾಯಿಗೆ ಡಿಮ್ಯಾಂಡ್ ಇಟ್ಟಿರುವ ವಿಷಯವನ್ನು
ನಮ್ಮ ಬಾಯಿಂದಲೇ ಕೇಳಬೇಕಾ ಎಂದ‌ ತಕ್ಷಣ
ಆ ಕಾರಿನ ಡ್ರೈವರ್ ಹಾವು ತುಳಿದವನಂತೆ ಬೆದರಿ ಹ್ಞಾಂ ಏನು ಹೇಳುತ್ತಿದ್ದೀರೀ? ನಾನು ಯಾರನ್ನೂ ಕಿಡ್ನಾಪ್ ಮಾಡೂ ಇಲ್ಲ‌,ಹಣಕ್ಕೂ ಬೇಡಿಕೆ ಇಟ್ಟಿಲ್ಲವೆಂದು ಹೇಳಿದಾಗ
ಎಲ್ಲವೂ ನಮಗೆ ಗೊತ್ತು ನೀನೇನೂ ಹೆದರ ಬೇಡಾ ಬ್ರದರ್ ನಿನ್ನ ಸಹಾಯಕ್ಕೆ ನಾವಿದ್ದೇವೆ, ನಿನಗೆ ಹಣ ಕೊಡಿಸುವುದಕ್ಕೆ ಸಹಾಯ ಮಾಡುತ್ತೇವೆ. ನಮಗೆ ಜಾಸ್ತಿ ಹಣ ಕೊಡಬೇಡಾ‌‌ ಜಸ್ಟ್ ಹತ್ತು ಪರ್ಸೆಂಟ್‌ ಕಮಿಷನ್ ಕೊಟ್ಟರೆ ಸಾಕೆಂದು ಇನ್ಸ್ ಪೆಕ್ಟರ್ ಹೇಳಲು
ಕಾರಿನ ಡ್ರೈವರ್ ಇನ್ಸ್ ಪೆಕ್ಟರ್ ‌ನ ನಂಬುವುದೋ ಬಿಡುವುದೋ ಎಂಬ ಸಂಧಿಗ್ದಕ್ಕೆ ಸಿಲುಕುತ್ತಾನೆ. ಲೇಟ್ ಮಾಡಿದರೆ ಕೋದಂಡರಾಮ್ ಗೆ ಹೇಳಿದ ಗಡುವು ಮುಗಿದು ಹೋಗುತ್ತದೆ, ನನಗೆ ಹಣ ಬರುವುದಿಲ್ಲ, ಇವರನ್ನು ಸೇರಿಸಿಕೊಂಡರೆ ಹತ್ತು ಪರ್ಸೆಂಟ್ ಕೊಡಬೇಕು, ಬೇಡವೆಂದು ಹೇಳಿ ಕಳುಹಿಸಿದರೆ, ಊರೆಲ್ಲಾ ಡಂಗೂರ ಹೊಡೆಯುತ್ತಾರೆ. ಇದರ ಜೊತೆಗೆ‌ ನನ್ನನ್ನು ಬಿಡುವುದಿಲ್ಲ, ನಾನೊಬ್ಬ ಇದ್ದೇನೆ, ಇವರು ಮೂರು ಜನರಿದ್ದಾರೆ ಎಂದುಕೊಳ್ಳುತ್ತಿರುವಾಗ
ಯಾಕೆ ಬ್ರದರ್ ನಮ್ಮ ಮೇಲೆ ಅನುಮಾನವಾ ಎಂದು ಇನ್ಸ್ ಪೆಕ್ಟರ್ ಹೇಳಲು
ನನಗೆ ಮೋಸ ಮಾಡುವುದಿಲ್ಲವೆಂದು ಪ್ರಾಮೀಸ್ ಮಾಡಿದರೆ ಮಾತ್ರ ನಿಮ್ಮನ್ನು ನಂಬುತ್ತೇನೆಂದು ಡ್ರೈವರ್ ಹೇಳುತ್ತಾನೆ

ಮುಂದುವರೆಯುತ್ತದೆ