ಅಭಿಲಾಷೆ ಕಾದಂಬರಿ – 35ನೇ ಸಂಚಿಕೆ

ಹಿಂದಿನ ಸಂಚಿಕೆಯಲ್ಲಿ

ಒಂದು ಕೋಟಿ ರೂಪಾಯಿ ಬದಲಿಗೆ ಎರಡು ಕೋಟಿ ರೂಪಾಯಿಗಳನ್ನು ತರಬೇಕೆಂದು ಕೋದಂಡರಾಂ ರವರಿಗೆ ಕಿಡ್ನಾಪರ್ ಹೇಳಿದಾಗ,ಇನ್ಸ್ ಪೆಕ್ಟರ್ ಸೂಚನೆ ಮೇರೆಗೆ ಆಯ್ತಪ್ಪಾ ತಂದು ಕೊಡುತ್ತೇನೆಂದು ಕೋದಂಡರಾಂ ರವರು ಹೇಳಿರುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ಎರಡು ಕೋಟಿ ರೂಪಾಯಿಗಳನ್ನು ತೆಗೆದುಕೊಂಡು ನಾಳೆ ಸಂಜೆ‌ ನಾನು ಹೇಳುವ ಜಾಗಕ್ಕೆ ತಂದುಕೊಡಬೇಕೆಂದು ಕಿಡ್ನಾಪರ್ ಕೋದಂಡರಾಂ ರವರಿಗೆ ಹೇಳಿದಾಗ
ಬೇರೆ ಮಾರ್ಗವಿಲ್ಲದೆ ಕೋದಂಡರಾಂ ರವರು ಒಪ್ಪಿಕೊಂಡು, ದುಃಖ ಭರಿತರಾಗಿ, ಸಾರ್‌‌ ಮಗಳನ್ನು ಬೆಳಿಗಿನ ಜಾವವೇ ಬಿಡಿಸಿಕೊಂಡು ಬರಬಹುದೆಂದು ಆಸೆ ಹೊಂದಿದ್ದೆ, ಈಗ ಸಂಜೆವರೆಗೂ ಕಾಯಬೇಕಲ್ಲಾ‌ ಸಾರ್ ಎಂದು ಇನ್ಸ್ ಪೆಕ್ಟರ್ ಗೆ ಹೇಳಿದಾಗ
ಸಮಾಧಾನ ಮಾಡಿಕೊಳ್ಳಿ ಗುರುಗಳೇ, ಹನ್ನೆರಡು ಗಂಟೆಗಳಲ್ಲಿ ಅವನು ಯಾರು? ಎಲ್ಲಿದ್ದಾನೆಂದು ಕಂಡು ಹಿಡಿದು ನಿಮ್ಮ ಮಗಳನ್ನು ಸೇಫಾಗಿ ನಿಮ್ಮ ಮನೆಗೆ ತಲುಪಿಸುತ್ತೇವೆಂಬ ಇನ್ಸ್ ಪೆಕ್ಟರ್ ಮಾತಿಗೆ
ಸಾರ್ ಅಲ್ಲಿಯವರೆಗೆ ನನ್ನ ಮಗಳು ಆ ದುಷ್ಟನ‌ ಕೈಲಿ ಸೇಫಾಗಿರುತ್ತಾಳಾ ಎಂದೇ ಭಯವಾಗಿದೆಯೆಂದು ಕೋದಂಡರಾಂ ರವರು ತಮ್ಮ ಆತಂಕವನ್ನು ವ್ಯಕ್ತಪಡಿಸಿದಾಗ
ಗುರುಗಳೇ ಅವನಿಗೆ ಹಣ ಬೇಕಷ್ಟೇ ಹಣ ಕೊಡುತ್ತಾರೆಂಬ ಆಸೆಯಿಂದ ನಿಮ್ಮ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ. ಹಣ ಸಿಕ್ಕ‌ ತಕ್ಷಣ ಬಿಡುಗಡೆ ಮಾಡುತ್ತಾನೆ ನೀವು ಧೈರ್ಯವಾಗಿರಿ ಎನ್ನುತ್ತಾರೆ
ಸಾರ್ ಅವನಿಗೆ ಹಣವನ್ನೇ ಕೊಡುವುದಿಲ್ಲ, ಇದರಿಂದ‌ ಕೋಪ‌ ಬಂದು ನನ್ನ ಮಗಳಿಗೆ ಏನಾದರೂ ‌ತೊಂದರೆ ಮಾಡಿದರೆ ಎಂದು ಕೋದಂಡರಾಮ್ ಇನ್ಲ್ ಪೆಕ್ಟರ್ ರವರನ್ನು ಪ್ರಶ್ನಿಸಿದಾಗ
ಗುರುಗಳೇ ನಾಳೆ ಸಂಜೆವರೆಗೂ ಸಮಯವಿದೆಯಲ್ಲಾ ಆ ವೇಳೆಗೆ‌ ಕಿಡ್ನಾಪರ್ ಯಾರೆಂದು ಕಂಡು ಹಿಡಿದು ನಿಮ್ಮ ಹಣವನ್ನೂ ಉಳಿಸಿ,ಜೊತೆಗೆ ಮಗಳನ್ನೂ ಸೇಫಾಗಿ ಕರೆದುಕೊಂಡು ಬರುತ್ತೇವೆ ಎಂದಾಗ
ನನ್ನ ಮಗಳು ಮನೆಗೆ ಬರುವವರೆಗೂ ಮನಸ್ಸಿಗೆ ನೆಮ್ಮದಿ‌ ಇಲ್ಲಾ ಸಾರ್ ಆದಷ್ಟೂ ಬೇಗ ವ್ಯವಸ್ಥೆ ಮಾಡಿರೆಂದು ಕೋದಂಡರಾಂ ರವರು ಹೇಳುತ್ತಾರೆ

ಮಾರನೇ ದಿನ ಬ್ಯಾಂಕ್ ತೆಗೆದ‌ ತಕ್ಷಣ ಇನ್ಸ್ ಪೆಕ್ಟರ್ ರವರು ಬ್ಯಾಂಕ್ ಮ್ಯಾನೇಜರ್ ಬಳಿ ಬಂದು ನಿನ್ನೆ ನಿಮ್ಮ ಬ್ಯಾಂಕಿಗೆ ಯಾರು ಬಂದಿದ್ದರು? ಎಫ್ ಡಿ ಸೆಕ್ಷನ್ ನ ಸಿಸಿ ಕ್ಯಾಮರಾ ದೃಶ್ಯವನ್ನು ನೋಡಬೇಕಿತ್ತು ಎಂದು ಕೇಳಲು
ಮ್ಯಾನೇಜರ್ ರವರು ಸಿಸಿ ಟಿವಿಯನ್ನು ಆನ್ ಮಾಡಿ ಹಿಂದಿನ ದಿನದ ದೃಶ್ಯಾವಳಿಗಳನ್ನು ತೋರಿಸಿದಾಗ
ಅದರಲ್ಲಿ, ಕೋದಂಡರಾಂ ರವರು ಕುಳಿತು ಎಫ್ ಡಿ ಬಾಂಡನ್ನು ರಿನ್ಯೂ ಮಾಡಿಸುತ್ತಿರುವುದನ್ನು
ಅವರ ಪಕ್ಕದಲ್ಲಿ ಒಬ್ಬ ಯುವಕ ಕುಳಿತುಕೊಂಡು ಎಫ್‌ಡಿ ಯನ್ನೇ ನೋಡುತ್ತಿರುವುದು ಸಿಸಿ ಟಿವಿಯಲ್ಲಿ ಕಂಡು ಬಂದಿದ್ದು,
ಸಾರ್ ನನಗೆ ಈ ಯುವಕ ಯಾರು,? ಇವನ ಫೋನ್ ನಂಬರ್ ಬೇಕೆಂದು ಇನ್ಸ್ ಪೆಕ್ಟರ್ ಕೇಳಿದ
ತಕ್ಷಣ ಮ್ಯಾನೇಜರ್ ರವರು ಎಫ್ ಡಿ ಸೆಕ್ಷನ್ ಸಿಬ್ಬಂದಿಯನ್ನು ಕರೆಸಿ ಅವರಿಗೂ ಸಿಸಿ ಟಿವಿಯಲ್ಲಿದ್ದ ಯುವಕನನ್ನು ತೋರಿಸಿ ಇವರು ಯಾರು? ನಿಮ್ಮಲ್ಲಿಗೆ ಏಕೆ ಬಂದಿದ್ದರೆಂದು ಕೇಳಲು
ಸಾರ್ ಇವರು ಎರಡು ಲಕ್ಷ ರೂಪಾಯಿಗಳ ಎಫ್ ಡಿಯನ್ನು ರಿನ್ಯೂ ಮಾಡಿಸಲು ಬಂದಿದ್ದರೆಂದು ಸಿಬ್ಬಂದಿ ಹೇಳಲು
ಅವರ ಹೆಸರು ಫೋನ್ ನಂಬರ್ ಕೊಡಿರೆಂದು ಕೇಳಿದಾಗ
ಸಿಬ್ಬಂದಿಯು ತನ್ನ ಸೀಟಿಗೆ ಬಂದು ಕಂಪ್ಯೂಟರ್ ನಲ್ಲಿದ್ದ ಆ‌‌ ಯುವಕನ ಫೋನ್ ನಂಬರ್ ಹಾಗೂ ಹೆಸರು ವಿಳಾಸವನ್ನು ತೆಗೆದುಕೊಂಡು ಬಂದು ಇನ್ಸ್ ಪೆಕ್ಟರ್ ಗೆ ಕೊಟ್ಟ ಬಳಿಕ
ಇನ್ಸ್‌ಪೆಕ್ಟರ್ ರವರು ಸಿಸಿ ಫುಟ್ ಟೇಜ್‌ ಕೊಡಬೇಕೆಂದು ಕೇಳಿ ಪಡೆದು ಸೀದಾ‌ ಕೋದಂಡರಾಂ ಮನೆಗೆ ಬಂದು,
ಕಿಡ್ನಾಪರ್ ಫೋನ್ ನಂಬರ್ ಕೊಡಿರೆಂದು ಕೇಳಿದಾಗ
ಕೋದಂಡರಾಂ ರವರು ಕಿಡ್ನಾಪರ್ ‌ಫೋನ್ ನಂಬರ್ ಕೊಟ್ಟಿರುವುದನ್ನು ಬ್ಯಾಂಕ್ ಸಿಬ್ಬಂದಿಯು ನೀಡಿದ್ದ ಮೊಬೈಲ್ ನಂಬರಿಗೂ ತಾಳೆ ಮಾಡಿ ನೋಡಿದಾಗ , ಅದು ಕಿಡ್ನಾಪರ್ ‌ಮೊಬೈಲ್ ಹೊಂದಾಣಿಕೆಯಾಗುವುದಿಲ್ಲ. ಛೇ ಈ ಯುವಕನಿಗೂ ಕಿಡ್ನಾಪರ್ ಗೂ ಯಾವುದೇ ಸಂಬಂಧವಿಲ್ಲವೆಂದು ಇನ್ಸ್ ಪೆಕ್ಟರ್ ರವರು ತೀರ್ಮಾನಕ್ಕೆ ‌ಬಂದು, ಈಗ ಕಿಡ್ನಾಪರ್ ನ ಹಿಡಿಯುವುದೇ ಒಂದು ದೊಡ್ಡ‌ ಸವಾಲಾಗಿದೆಯಲ್ಲಾ? ಈಗೇನು ಮಾಡುವುದು? ಸಮಯ ಮೀರುತ್ತಿದೆ, ಸಂಜೆಯೊಳಗೆ ಕಿಡ್ನಾಪರ್ ‌‌ಯಾರೆಂದು ಕಂಡು ಹಿಡಿದು‌ ಅವರ ಮಗಳನ್ನು ರಕ್ಷಣೆ ಮಾಡಲೇಬೇಕಾಗಿದೆ ಎಂದುಕೊಂಡು ಕಾರ್ಯೋನ್ಮುಖರಾಗುತ್ತಾರೆ.

ಇನ್ಸ್‌ಪೆಕ್ಟರ್ ರವರು ಹಿಂದಿನ ದಿನ ವಿಕ್ರಮ್ ಹೇಳಿದ್ದ ಆಟೋ‌ರಿಕ್ಷಾವನ್ನು ಹುಡುಕಲು ಎಲ್ಲಾ ಕಂಟ್ರೋಲ್ ರೂಂಗಳಿಗೂ ಇನ್ಫರ್ ಮೇಷನ್ ಕಳುಹಿಸಿದ್ದು ಎಲ್ಲಿಯೂ ಆಟೋರಿಕ್ಷಾ ಕಂಡು ಬರುವುದಿಲ್ಲ. ತಕ್ಷಣ‌ ಎಲ್ಲಾ ಕಂಟ್ರೋಲ್ ರೂಂಗೆ ಪುನಃ ಫೋನ್ ಮಾಡಿ ನಿಮ್ಮ ನಿಮ್ಮ ಏರಿಯಾದಲ್ಲಿರುವ ಎಲ್ಲಾ ಗ್ಯಾರೇಜ್ ಗೆ ಹೋಗಿ ಆಟೋ ನಂಬರ್ ಪ್ಲೇಟ್ ಯಾರಾದರೂ ಫಿಟ್ ಮಾಡಿಸಿಕೊಂಡು ಹೋದರಾ ಎಂದು ವಿಚಾರಿಸಿ ಹೇಳಬೇಕೆಂದು ಮೆಸೇಜ್ ನೀಡಿದ್ದು ಇದರ ಜೊತೆಗೆ ಇನ್ಸ್ ಪೆಕ್ಟರ್ ರವರೇ ಸ್ವತಃ ಎಲ್ಲಾ ಗ್ಯಾರೇಜಿಗೂ ಹೋಗಿ ಪರಿಶೀಲಿಸುತ್ತಿರುವಾಗ ಎಲ್ಲರೂ ಆಟೋ ನಂಬರ್ ಪ್ಲೇಟ್ ಬದಲಿಸಲು ಬಂದಿರಲಿಲ್ಲವೆಂದೇ ಹೇಳುತ್ತಿದ್ದರಿಂದ,, ಇನ್ನೂ ಸ್ವಲ್ಪ ದೂರ ಬಂದು ಇನ್ನೊಂದು ಗ್ಯಾರೇಜಿನಲ್ಲಿ ವಿಚಾರಿಸಿದಾಗ
ಅಲ್ಲಿಯೂ ಆ ಗ್ಯಾರೇಜ್ ಓನರ್ ಯಾರೂ ಬಂದಿಲ್ಲವೆಂದು‌
ಹೇಳುತ್ತಾನೆ
ಇನ್ಸ್‌ಪೆಕ್ಟರ್ ರವರು ಓ ಕೆ ಎನ್ನುತ್ತಾ ವಾಪಸ್‌ ಬರುತ್ತಿರುವಾಗ‌
ಒಂದು ವಾಹನದ‌ ಪಕ್ಕದಲ್ಲಿ ಅರ್ದ ಕತ್ತರಿಸಿದ ಆಟೋ‌ ಪ್ಲೇಟ್‌ ಇರುವುದನ್ನು ನೋಡಿದ‌ ತಕ್ಷಣ ಹಿಂದಿರುಗಿ ಬಂದು
ಏಯ್ ನಿನ್ನ ಬಳಿ ಆಟೋ ಪ್ಲೇಟ್ ಬದಲಿಸಿಕೊಳ್ಳಲು ಬಂದಿದ್ದರೂ ನೀನು ಬಂದಿಲ್ಲವೆಂದು ಸುಳ್ಳು ಹೇಳುತ್ತಿದ್ದೀಯಾ ‌ನಡೀ‌ ಸ್ಟೇಷನ್ ಗೆ
ಎಂದು ಗದರಿದಾಗ
ಸಾ,,,,ಸಾ,,,,,ಸಾರ್ ನನಗೇನೂ ಗೊತ್ತಿಲ್ಲಾ ಸಾರ್ ನಮ್ಮ ಹುಡುಗರು ನಂಬರ್ ಪ್ಲೇಟ್ ಚೇಂಜ್ ಮಾಡಿ ಕಳುಹಿಸಿರಬೇಕು, ಎಂದಾಗ
ಹೋಗಲೀ ಯಾವ ನಂಬರ್ ಪ್ಲೇಟ್‌ ಹಾಕಿಸಿಕೊಂಡು ಹೋದರೆಂದು ಗೊತ್ತಾ ಎನ್ನಲು
ಸಾರ್ ಅದೂ ನನಗೆ ಗೊತ್ತಿಲ್ಲವೆನ್ನಲು
ಇನ್ಸ್ ಪೆಕ್ಟರ್ ಗೆ ಕೋಪ ಬಂದು ಏಯ್ ಯಾರು ಬಂದು ಕೇಳಿದರೂ ಅವರ ನಂಬರ್ ಪ್ಲೇಟ್ ಬದಲಾಯಿಸಿ ಕೊಡುತ್ತೀಯಾ? ಯಾವ ನಂಬರ್ ಪ್ಲೇಟ್ ಬದಲಾಯಿಸಿರುವೆನೆಂದು ಎಂಟ್ರಿ ಮಾಡಬೇಡವಾ ಎಂದಾಗ
ಸಾರೀ ಸಾರ್ ಇನ್ನುಮುಂದೆ ಎಂಟ್ರಿ ಮಾಡುತ್ತೇನೆ ಎನ್ನುತ್ತಾರೆ.
ಇನ್ಸ್‌ಪೆಕ್ಟರ್ ರವರು ಸುತ್ತಲೂ ನೋಡುತ್ತಿರುವಾಗ‌ ಸಿ ಸಿ ಕ್ಯಾಮರಾವನ್ನು ಕಂಡು ಇದರಲ್ಲಿ ಯಾವ‌ ನಂಬರ್ ಪ್ಲೇಟ್‌ ಬದಲಿಸಿರುವುದು ಗೊತ್ತಾಗುತ್ತದೆ, ಸಿಸಿ ಟಿವಿ ರೀವೈಂಡ್ ಮಾಡ್ರೀ ಎನ್ನಲು
ಗ್ಯಾರೇಜ್ ಓನರ್ ಸಿಸಿ‌ ಟಿವಿಯಲ್ಲಿ ರೀವೈಂಡ್ ಮಾಡಿದಾಗ
ಅದರಲ್ಲಿ ಆಟೋ ಪ್ವೇಟ್‌ ಬದಲಿಸುತ್ತಿರುವುದು ರೆಕಾರ್ಡ್ ಆಗಿದ್ದು, ಅದನ್ನು ನೋಡಿ ಅದರ ನಂಬರ್ ಪಡೆದು ತಕ್ಷಣ ಆರ್ ಟಿಓಗೆ ಫೋನ್ ಮಾಡಿ, ಆಟೋ ನಂಬರ್ ಕೊಟ್ಟು ಈ ಡ್ರೈವರ್ ಅಡ್ರಸ್ ನೀಡುವಂತೆ ಕೇಳಿದ ನಂತರ ಎಲ್ಲಾ ಕಂಟ್ರೋಲ್ ರೂಂಗೂ ಫೋನ್ ಮಾಡಿ ಆಟೋ ನಂಬರ್ ನೀಡಿ ಈ ಆಟೋವನ್ನು ಹಿಡಿಯಲು ಹೇಳಿದ ಒಂದು ಗಂಟೆಯೊಳಗೆ, ನಂಬರ್ ಪ್ಲೇಟ್ ಬದಲಿಸಿದ್ದ ಆಟೋವನ್ನು ಕಂಡು ಹಿಡಿದು, ಇನ್ಸ್‌ಪೆಕ್ಟರ್ ಗೆ ತಿಳಿಸುತ್ತಾರೆ.
ಆಟೋ ಡ್ರೈವರನ್ನು ನನ್ನ ಸ್ಟೇಷನ್ ‌ಗೆ ಕರೆದುಕೊಂಡು ಬರಲು ಹೇಳಿ, ತಾವೂ ಸ್ಟೇಷನ್ ಗೆ ಬರುವ ವೇಳೆಗೆ‌ ಆಟೋ ಡ್ರೈವರ್ ಬಂದಿರುತ್ತಾನೆ
ಆಟೋ ಡ್ರೈವರ್ ‌ನ ನೋಡಿದ ತಕ್ಷಣ ಏಯ್ ನಿನ್ನೆ ರಾತ್ರಿ ಎಂಟು ಗಂಟೆ ಸಮಯದಲ್ಲಿ ಒಬ್ಬಳು ಯುವತಿ ನಿನ್ನ ಆಟೋದಲ್ಲಿ ಕುಳಿತ ನಂತರ ಆ ಯುವತಿಯನ್ನು ಮನೆಗೆ ತಲುಪಿಸಿದೆಯಾ ಎಂದು ಕೇಳಲು
ಹೌ,,,ಹೌ,,,,ಹೌದು ಸಾರ್ ಎನ್ನುತ್ತಾನೆ
ಏಯ್ ಸುಳ್ಳು ಹೇಳಬೇಡಾ ಆ ಯುವತಿ ಮನೆಯನ್ನು ತಲುಪಿಲ್ಲ.ದಾರಿ ಮದ್ಯೆಯಲ್ಲಿ ಅವರನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ, ಅದು ನಿನಗೆ ಗೊತ್ತಿದೆ ಆದರೂ ನೀನು ಹೇಳುತ್ತಿಲ್ಲಾ, ನಿನಗೂ ಕಿಡ್ನಾಪರ್ ಗೂ ಏನ್ ಸಂಬಂದಾ? ನೀನೂ ಆ‌ ಯುವತಿ ಕಿಡ್ನಾಪ್ ನಲ್ಲಿ ಭಾಗಿಯಾಗಿದ್ದೀಯಾ ಎಂದು ನಿನ್ನ ಅರೆಸ್ಟ್‌ ಮಾಡುತ್ತಿದ್ದೇನೆಂದು ಇನ್ಸ್‌ಪೆಕ್ಟರ್ ಹೇಳಲು
ಇಲ್ಲಾ‌ ಸಾರ್ ನನಗೂ ಆ ಯುವತಿ ಕಿಡ್ನಾಪ್ ಗೂ ಸಂಬಂಧವಿಲ್ಲಾ ಸಾರ್ ಎಂದು ಆಟೋ ಡ್ರೈವರ್ ಹೇಳಲು
ಹಾಗಾದರೆ ಆ ಯುವತಿಯನ್ನು ಕಿಡ್ನಾಪ್ ಮಾಡಿದ್ದು ಯಾರೆಂದು ಇನ್ಲ್ ಪೆಕ್ಟರ್ ಏರುಧ್ವನಿಯಲ್ಲಿ ಕೇಳಿದ ತಕ್ಷಣ
ನನಗೆ ಗೊತ್ತಿಲ್ಲವೆಂದು ಡ್ರೈವರ್ ಪುನಃ ಹೇಳುತ್ತಾನೆ
ನಿನಗೆ ಎಲ್ಲಾ ಗೊತ್ತಿದೆ, ಆ ಯುವತಿ ಮನೆ ತಲುಪಿಲ್ಲ,ಅರ್ಧ‌ ದಾರಿಯಲ್ಲೇ ಆ ಯುವತಿ ಕಿಡ್ನಾಪ್ ಆಗಿದ್ದಾರೆ, ಯಾರು ಕಿಡ್ನಾಪ್ ಮಾಡಿದ್ದು? ನಿಜ ಹೇಳು ಇಲ್ಲದಿದ್ದರೆ ಎನ್ನುತ್ತಾ ತಮ್ಮ ಕೈಲಿದ್ದ ಲಾಠಿಯನ್ನು ನೆಲಕ್ಕೆ ಬಡಿದಾಗ
ಸಾರ್ ಸಾರ್ ಎಲ್ಲವನ್ನೂ ಹೇಳುತ್ತೇನೆ ಎನ್ನುತ್ತಾನೆ ಡ್ರೈವರ್
ಹ್ಞೂಂ ಬೇಗ ಹೇಳೆಂದು ಇನ್ಸ್ ಪೆಕ್ಟರ್ ಮಾತಿಗೆ,
ಡ್ರೈವರ್ ಹಿಂದಿನ ರಾತ್ರಿ ನಡೆದ ಘಟನೆ ಹೇಳಲು ಶುರು ಮಾಡುತ್ತಾನೆ

ಮುಂದುವರೆಯುತ್ತದೆ

ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯ ವಾದ ಅಂಶ ಏನೆಂದರೆ

ತಮ್ಮ ಎದುರಿಗೆ ನಡೆಯುವ ಯಾವುದಾದರೂ ಕ್ರಿಮಿನಲ್ ಕಾರ್ಯವನ್ನು ತಕ್ಷಣ ಪೋಲಿಸ್ ರವರಿಗೆ ತಿಳಿಸಿದರೆ ಆರೋಪಿಗಳನ್ನು ಹಿಡಿಯಲು ಅನುಕೂಲವಾಗುತ್ತದೆ. ನನಗೇನಾಗಬೇಕು? ಪೋಲೀಸ್ ರವರಿಗೆ ಹೇಳಿದರೆ ತನ್ನನ್ನು ಸಾಕ್ಷಿಯಾಗಿ ಕರೆಯುತ್ತಾರೆಂದು ತಿಳಿದು ಸುಮ್ಮನಾದರೆ ಆರೋಪಿಗಳು‌ ತಪ್ಪಿಸಿಕೊಂಡು ನಿರಪರಾಧಿಗಳು ಅವರಿಂದ ಕಷ್ಟ ಅನುಭವಿಸಬಹುದಲ್ಲವೇ?