ಬನ್ನಿವೃಕ್ಷದಲಿ ಬಚ್ಚಿಟ್ಟ ಆಯುಧಗಳು ಮತ್ತು ವಿಜಯದಶಮಿ
”'”””””””””
ಮಹಾಭಾರತದ ಜೂಜಿನ ಪಂದ್ಯದಲ್ಲಿ ಕೌರವರೂಡನೆ ಸೋತ ಪಾಂಡವರು ಹನ್ನೆರಡು ವರ್ಷ ವನವಾಸ ಮುಗಿಸಿ ಅಜ್ಞಾತವಾಸಕ್ಕೆ ತೆರಳುವಾಗ ಬನ್ನಿ ವೃಕ್ಷದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋದರೆಂದು ಕಥೆಗಳಲ್ಲಿ ಕಂಡು ಬರುತ್ತದೆ. ಅಜ್ಞಾತವಾಸದಿಂದ ಹಿಂದಿರುಗಿ ಬಂದು ನೋಡಿದಾಗ ಅವರು ಬಚ್ಚಿಟ್ಟಿದ್ದ ಆಯುಧಗಳು ಅಲ್ಲೇ ಇರುತ್ತವೆ. ಆಗ ಪಾಂಡವರು ಅವುಗಳನ್ನು ತೆಗೆದುಕೊಂಡು ಪೂಜಿಸಿ ದಾಯಾದಿಗಳಾದ ಕೌರವರೊಡನೆ ಯುದ್ಧಕ್ಕೆ ಸನ್ನದ್ಧರಾಗುತ್ತಾರೆ, ಎಂದು ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಿದೆ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಕೌರವರ ವಿರುದ್ಧ ಹೋರಾಡಿ ವಿಜಯಗಳಿಸಿದರು ಎಂಬುದು, ತಿಳಿದು ಬರುತ್ತದೆ.ಆದ್ದರಿಂದ ಗೆಲುವಿನ ಶುಭದ ಸಂಕೇತವಾಗಿ ಹಾಗೂ ಧಾರ್ಮಿಕವಾಗಿ ಬನ್ನಿ ಮರವನ್ನು ಪೂಜಿಸಲಾಗುತ್ತದೆಯೆಂಬ ಪ್ರತೀತಿಯಿದೆ. ಇದಕ್ಕೆ ಸಮಿವೃಕ್ಷವೆಂದು ಪೂಜಿಸುವುದು ಮಂಗಳಕರವೆಂದು ಕೂಡ ಹೇಳಲಾಗುತ್ತದೆ. ವಿಜಯದಶಮಿಯ ಹಿಂದಿನ ದಿನ ಆಯುಧ ಹಾಗೂ ವಾಹನಗಳನ್ನು ಹೂಹಾರಗಳಿಂದ ಅಲಂಕರಿಸಿ ಪೂಜಿಸುವ ಸಂಪ್ರದಾಯವನ್ನು ಕೂಡ ಸಂಭ್ರಮದಿಂದ ಮನೆ ಮನೆಗಳಲ್ಲಿ ಆಚರಿಸುತ್ತಾರೆ.ಬಂಧುಗಳು ಸ್ನೇಹತರಿಗೆ ಸಿಹಿಯನ್ನು ಹಂಚುವ ಮೂಲಕ ಸಂತೋಷ ಹೊಂದುತ್ತಾರೆ.ಜಾತಿ ವರ್ಗ ಧರ್ಮ ವರ್ಣ ತಾರತಮ್ಯವಿಲ್ಲದೆ ಭಾತೃತ್ವವನ್ನು ಬೆಸೆಯುವ ನಾಡಿನ ನವರಾತ್ರಿಯ ವಿಜಯೋತ್ಸವದ ಎಲ್ಲರ ಜೊತೆಗೂಡಿ ಆಚರಣೆಗೊಳ್ಳುವ ಹರ್ಷದ ಹಬ್ಬ ನವರಾತ್ರಿಯಾಗಿದೆ.
-
ವಿಜಯದಶಮಿ : ಶ್ರೀ ರಾಮನು ರಾವಣಾಸುರನನ್ನು ವರ್ಧಿಸಿದ ದಿನವೆಂದು ಆ ದಿನ ಶ್ರೀರಾಮನ ಧರ್ಮದ ಗೆಲುವಿನ ವಿಜಯದ ಸಂಕೇತ ವಿಜಯದಶಮಿಯೆಂದು ಹೇಳಲಾಗಿದೆ.
ಒಂದು ಅರ್ಥದಲ್ಲಿ ಒಂಬತ್ತರ ಸಂಖ್ಯೆಯು ಶುಭಫಲದ ಸಂಕೇತವು ಆಗಿದೆ. ಎನ್ನಬಹುದು.ಪ್ರತಿ ವರ್ಷವೂ ಅಕ್ಟೋಬರ್ 9ನೇ ತಿಂಗಳಲ್ಲೇ ಬರುವ ಶರನ್ನವರಾತ್ರಿಯ ಆಚರಣೆಯು ವಿಶೇಷತೆಯಿಂದ ಕೂಡಿದೆ. ಸಾಮಾನ್ಯವಾಗಿ ತಾಯಿಗೆ ನವಮಾಸಗಳು ತುಂಬುತ್ತಿದ್ದಾಗಲೇ ಗರ್ಭದಿಂದ ಶಿಶುವು ಹೊರ ಬಂದಾಗ ಜಗತ್ತು ಜನರು ಎಲ್ಲವೂ ಹೊಸದು.ಮಗು ಕತ್ತಲೆಯಿಂದ ಬೆಳಕಿನ ಪ್ರಪಂಚಕ್ಕೆ ಕಾಲಿಡುತ್ತದೆ. ಮಾತೃತ್ವದ ಮಹತ್ವತೆಗೆ ಬೆಲೆ ಕಟ್ಟಲಾಗದು.
ಅದೇ ರೀತಿ ನವ ದುರ್ಗೆಯರು ಪ್ರಕೃತಿ ಮಾತೆಯ ರೂಪದಲ್ಲಿ ಶಕ್ತಿಮಾತೆ ಜಗನ್ಮಾತೆಯಾಗಿ ಸಕಲ ಜೀವಾತ್ಮರನ್ನು ಪೋಷಿಸುತ್ತಾಳೆ. ನಾವು ಮನೆಯಲ್ಲಿ ಯಾವುದೇ ಪೂಜಾಕಾರ್ಯ ವಿಧಿಗಳನ್ನು ಮಾಡುವಾಗ ನವಗ್ರಹ ಶಾಂತಿಯನ್ನು ಕೂಡ ಮಾಡುತ್ತೇವೆ. ಆಗಲೂ ಕೂಡ ಒಂಬತ್ತು ಬಗೆಯ ಧಾನ್ಯಗಳು ವಸ್ತ್ರಗಳನ್ನು ಇಟ್ಟು ನಮಗೆ ಒಳ್ಳೆಯ ಫಲ ಸಮೃದ್ಧಿ ಸಿಗಲೆಂದು ಪುರೋಹಿತರಿಗೆ ದಾನವಾಗಿ ನೀಡುತ್ತೇವೆ. ಕೆಲವರಿಗೆ ಒಂಬತ್ತರ ಸಂಖ್ಯೆಯು ಅದೃಷ್ಟವೆಂದು ಹೇಳಲಾಗುತ್ತದೆ.
ನವರಾತ್ರಿ::: ಮಹಾಲಯ ಅಮಾವಾಸ್ಯೆಯ ಮರುದಿವಸವೇ ನವರಾತ್ರಿಯ ಪ್ರಾರಂಭ.ನವರಾತ್ರಿ ಎಂದರೆ ಒಂಬತ್ತು ದಿನಗಳ ಕಾಲ ದುರ್ಗಾ ಮಾತೆಯರನ್ನು ಬೇರೆ ಬೇರೆ ರೂಪಗಳಲ್ಲಿ ವಸ್ತ್ರಾಭರಣಗಳಿಂದ ಅಲಂಕರಿಸಿ ಪೂಜಿಸುವ ಸಂಪ್ರದಾಯ ಹಿಂದೂಗಳ ಧಾರ್ಮಿಕತೆ ಹಾಗೂ ಸಂಸ್ಕ್ರತಿಯಾಗಿದೆ.
ಸಿಂಹವಾಹಿನಿಯಾಗಿ ಚಾಮುಂಡಿ ಮಾತೆಯು ಮಹಿಷಾಸುರನನ್ನು ಮರ್ಧಿಸಿ ಜನರಿಗೆ ಸುಖ ಶಾಂತಿಯನ್ನು ನೀಡಿದ ದಿವಸವು ವಿಜಯದ ಸಂಕೇತವಾದ ವಿಜಯದಶಮಿಯ ಸಂಭ್ರಮಾಚರಣೆಯು ಆಗಿದೆ. ದುಷ್ಟ ಸಂಹಾರ ಶಿಷ್ಟರನ್ನು ಪರಿಪಾಲಿಸುವ ಶುಭದಾಯಿನಿ ಶಿವಶಕ್ತಿ ರೂಪಿಣಿಯು ದುರ್ಗಾದೇವಿ ಆಗಿದ್ದಾಳೆ. ಶಾಂತಿ ಸಮೃದ್ಧಿ ನೆಲಸಲೆಂದು ಸರ್ವ ಜನರು ನಾಡಿನಾದ್ಯಂತ ಮಾತೃ ಸ್ವರೂಪಿಣಿ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತೇವೆ. ಮೈಸೂರಿನ ಬೆಟ್ಟದ ಮೇಲೆ ನೆಲೆಯಾಗಿ ನೆಲೆಸಿರುವ ಆದಿಶಕ್ತಿ ಚಾಮುಂಡೇಶ್ವರಿಯನ್ನು ಅರಮನೆಯ ಆವರಣದಿಂದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮಂಗಳ ದ್ರವ್ಯಗಳಿಂದ ಅಲಂಕರಿಸಿ ವಾದ್ಯ ಘೋಷಗಳಿಂದ ಬನ್ನಿ ಮಂಟಪದವರೆಗೆ ಮೆರವಣಿಗೆ ಮಾಡಲಾಗುತ್ತದೆ. ಶೈಲಪುತ್ರಿ, ಬ್ರಹ್ಮಚಾರಿಣಿ,ಲಕ್ಷ್ಮಿ, ಸರಸ್ವತಿ, ಪಾರ್ವತಿ,ಕಾಳಿ,ಕಾತ್ಯಾಯಿನಿ, ದುರ್ಗಾದೇವಿ,ಗೌರಿ ಹೀಗೆ ನಾನು ಹೆಸರುಗಳಿಂದ ದೇವಿಯರು ನವರಾತ್ರಿಯಲ್ಲಿ ಸರ್ವಾಲಂಕಾರ ಭೂಷಿತರಾಗಿ ಆರಾಧಿಸಲ್ಪಡುತ್ತಾರೆ.
“ಸರ್ವಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಿಕೆ ಶರಣ್ಯೆ ತ್ರ್ಯಂಬಕೆ ದೇವಿ ನಾರಾಯಣಿ ನಮೋಸ್ತುತೆ “ ನಮ್ಮ ಎಲ್ಲಾ ಸಂಕಷ್ಟಗಳನ್ನು ವಿಘ್ನಗಳನ್ನು ನಿವಾರಿಸಿ ನಮ್ಮಅಭೀಷ್ಟಗಳನ್ನು ನೆರವೇರಿಸೆಂದು ಭಕ್ತಿಯಿಂದ ದುರ್ಗಾಮಾತೆಗೆ ಶರಣಾಗುತ್ತೇವೆ.
ಅರ್ಥ,ಕಾಮ,ಮೋಕ್ಷಗಳನ್ನು ಕರುಣಿಸಿ ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿಗೆ ನವರಾತ್ರಿಯು ಆಧ್ಯಾತ್ಮ ಹಾಗೂ ಧಾರ್ಮಿಕವಾಗಿ ಎಲ್ಲರನ್ನು ಜಾಗೃತಿಗೊಳಿಸುವ ಆತ್ಮಜ್ಞಾನವಾಗಿದೆ. ದೇವಾನು ದೇವತೆಗಳಲ್ಲಿ ಭಕ್ತಿ ನಂಬಿಕೆ ಯಾವುದೇ ಕಾಯಕದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡ ವ್ಯಕ್ತಿಗೆ ಕರ್ಮಯೋಗ ಭಕ್ತಿ ಯೋಗ ಜ್ಞಾನಯೋಗ ಫಲವು ಭಗವಂತನ ಅನುಗ್ರಹದಲ್ಲಿ ಲಭಿಸುತ್ತದೆ. ಸಕಲರಿಗೂ ಧರ್ಮ ಸನ್ಮಾರ್ಗದ ದಾರಿದೀಪೋಕ್ತಿಯಾಗಿ ಸನ್ಮಂಗಳವನ್ನು ಉಂಟುಮಾಡಲೆಂದು ಚಾಮುಂಡೇಶ್ವರಿಯನ್ನು ಪ್ರಾರ್ಥಿಸೋಣ.
ಲೇಖಕರು: ಯಶೋಧ ರಾಮಕೃಷ್ಣ ಮೈಸೂರು