ಅಭಿಲಾಷೆ ಕಾದಂಬರಿ ಸಂಚಿಕೆ -32
ಹಿಂದಿನ ಸಂಚಿಕೆಯಲ್ಲಿ
ಒಂದು ಕೋಟಿ ರೂಪಾಯಿಗಳನ್ನು ತೆಗೆದುಕೊಂಡು ಬಂದರೆ ಮಗಳನ್ನು ವಾಪಸ್ ಕಳುಹಿಸುವುದಾಗಿ ಕೋದಂಡರಾಂ ಗೆ ಕಿಡ್ನಾಪರ್ ಫೋನ್ ಮಾಡಿರುತ್ತಾನೆ.
ಕಥೆಯನ್ನು ಮುಂದುವರೆಸುತ್ತಾ
ತಮ್ಮ ಮಗಳನ್ನು ಯಾರೋ ಕಿಡ್ನಾಪ್ ಮಾಡಿ ಒಂದು ಕೋಟಿ ರೂಪಾಯಿಗಳನ್ನು ಡಿಮ್ಯಾಂಡ್ ಮಾಡಿರುವುದನ್ನು ಕೇಳಿದ ಕೋದಂಡರಾಂ ರವರು ಭಯದಿಂದ ಅತಂಕಗೊಡು, ದುಃಖ ಉಮ್ಮಳಿಸಿ ಬರುತ್ತಿರುವುದನ್ನು ನೋಡಿದ
ಅವರ ಪತ್ನಿ ಯಾಕ್ರೀ ಅಳುತ್ತಿದ್ದೀರಾ? ಮಗಳಿಗೆ ಏನಾಗಿದೆಯಂತೆ ಎಂದು ಪ್ರಶ್ನಿಸಲು
ಕೋದಂಡರಾಂ ರವರು ಗದ್ಗದಿತರಾಗಿ, ಬಿಕ್ಕುತ್ತಾ ಮಗಳನ್ನು ಯಾರೋ ಕಿಡ್ನಾಪ್ ಮಾಡಿದ್ದಾನಂತೆ, ಅವನಿಗೆ ಒಂದು ಕೋಟಿ ರೂಪಾಯಿಗಳನ್ನು ಕೊಡಬೇಕಂತೆ ಎನ್ನುತ್ತಾರೆ
ಈ ವಿಷಯ ಕೇಳಿದ ತಕ್ಷಣ ಅವರ ಪತ್ನಿ ಅಯ್ಯೋ ನಮ್ಮ ಮಗಳಿಗೆ ಏನೂ ಮಾಡಬಾರದೆಂದು ಹೇಳ್ರೀ, ಏನು ಗತಿ ಬಂತಪ್ಪಾ, ಹೆಣ್ಣುಮಕ್ಕಳು ಧೈರ್ಯವಾಗಿ ಓಡಾಡುವಂತೆ ಇಲ್ಲದಾಗಿದೆ, ಯಾರಿಗೆ ಹೇಳೋಣ ನಮ್ಮ ದುಃಖ ಎನ್ಮುತ್ತಾ,
ಈಗ ಏನು ಮಾಡುತ್ತೀರಾ? ಬೇಗ ಇನ್ಸ್‌ಪೆಕ್ಟರ್ ಗೆ ಫೋನ್ ಮಾಡಿ ವಿಷಯ ತಿಳಿಸಿದರೆ ಅವರು ಮಗಳನ್ನು ಸೇಫಾಗಿ ಕರೆದುಕೊಂಡು ಬರುತ್ತಾರೆಂದು ಅವರ ಪತ್ನಿ ಹೇಳಿದಾಗ
ಬೇಡಾ ಕಣೇ, ಪೋಲೀಸ್ ರವರಿಗೆ ತಿಳಿಸಿದರೆ ಮಗಳ ಜೀವಕ್ಕೆ ತೊಂದರೆ ಮಾಡುತ್ತಾನಂತೆ ಎಂಬ ಕೋದಂಡರಾಂ ಮಾತಿಗೆ,
ಇದೇರೀತಿ ಇನ್ಸ್‌ಪೆಕ್ಟರ್ ಗೆ ಹೇಳಿ ಅವರೇ ಏನಾದರೂ ಉಪಾಯ ಮಾಡುತ್ತಾರೆಂದು ಅವರ ಪತ್ನಿ ಹೇಳಿದಾಗ
ಅಯ್ಯೋ ಬೇಡಾ ಕಣೇ ಈ ವಿಷಯ ಕಿಡ್ನಾಪರ್ ಗೆ ತಿಳಿದು ನಮ್ಮ ಮಗಳ ಜೀವಕ್ಕೆ ಅಪಾಯ ಮಾಡಿದರೇನು ಮಾಡುವುದು? ಅದಕ್ಕೆ ಈಗಲೇ ಬ್ಯಾಂಕ್ ಗೆ ಹೋಗಿ ಎರಡು ಕೋಟಿ ರೂಪಾಯಿಗಳ ಎಫ್ ಡಿಯಲ್ಲಿ ಒಂದು ಕೋಟಿ ರೂಪಾಯಿ ಗಳನ್ನು ಡ್ರಾ ಮಾಡಿ ಕಿಡ್ನಾಪರ್ ಹೇಳಿರುವ ಸ್ಥಳದಲ್ಲಿ ಇಟ್ಚು ಮಗಳನ್ನು ಸೇಫಾಗಿ ಕರೆದುಕೊಂಡು ಬರುತ್ತೇನೆಂದು ಕೋದಂಡರಾಂ ಹೇಳಲು
ನೀವು ಅವನಿಗೆ ದುಡ್ಡುಕೊಟ್ಚರೂ ಮಗಳನ್ನು ಸೇಫಾಗಿ ಕಳುಹಿಸುತ್ತಾನೆಂಬ ನಂಬಿಕೆ ಇದೆಯಾ? ಅಕಸ್ಮಾತ್ ಹಣ ಪಡೆದು ಮಗಳನ್ನು ಕಳುಹಿಸದೇ ಇದ್ದರೆ ಏನು ಮಾಡಬೇಕು? ಅವನನ್ನು ನಂಬುವುದು ಬೇಡಾ, ಅವನ ಹಿಂದೆ ಎಷ್ಟು ಜನ ಇರುತ್ತಾರೋ ಯಾರಿಗೆ ಗೊತ್ತು? ನೀವೊಬ್ಬರೇ ಹೋದರೆ, ನಿಮ್ಮಲ್ಲಿರುವ ಹಣವನ್ನು ತೆಗೆದುಕೊಂಡು ನಿಮ್ಮ ಜೀವಕ್ಕೂ ಅಪಾಯ ಮಾಡಿದರೇನು ಮಾಡುವುದು? ಮೊದಲು ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ವಿಷಯ ತಿಳಿಸಿ ಅವರು ಸಿಬ್ಬಂದಿಯೊಂದಿಗೆ ಬಂದು ಕಿಡ್ನಾಪರ್ ನ ಹಿಡಿದು ಮಗಳನ್ನು ಸೇಫಾಗಿ ಕರೆದುಕೊಂಡು ಬರುತ್ತಾರೆಂದು ಅವರ ಪತ್ನಿಯು ಹೇಳಿದಾಗ
ಕೋದಂಡರಾಂರವರು ಒಲ್ಲದ ಮನಸ್ಸಿನಿಂದ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ವಿಷಯ ತಿಳಿಸಿ, ಸಾರ್ ಏನಾದರೂ ಮಾಡಿ ನಮ್ಮ ಮಗಳನ್ನು ಸೇಫಾಗಿ ಕರೆದುಕೊಂಡು ಬನ್ನಿ ಸಾರ್ ಎಂದು ದುಃಖದಿಂದ ಹೇಳುತ್ತಾರೆ
ಏನ್ ಗುರುಗಳೇ ಇದೇನು ಹೀಗೆ ಹೇಳುತ್ತಿದ್ದೀರೀ? ನಿಮ್ಮ ಮಗಳನ್ನು ಯಾವನೋ ಕಿಡ್ನಾಪ್ ಮಾಡಿ ಒಂದು ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾನಾ ಎಂದು ಇನ್ಸ್‌ಪೆಕ್ಟರ್ ಪ್ರಶ್ನಿಸಿದಾಗ
ಹೌದೂ ಸಾರ್, ಏನು ಮಾಡಬೇಕೆಂಬುದೇ ತೋಚುತ್ತಿಲ್ಲವೆಂದು ಕೋದಂಡರಾಂರವರು ತಮ್ಮ ಅಸಹಾಯಕತೆಯನ್ನು ತಿಳಿಸಿದಾಗ
ನೀವು ಧೈರ್ಯವಾಗಿರಿ ಆ ಬದ್ಮಾಶ್ ನ ಹಿಡಿದು, ನಿಮ್ಮ ಮಗಳಿಗೆ ಏನೂ ಆಗದಂತೆ ಸೇಫಾಗಿ ಮನೆಗೆ ಕರೆದುಕೊಂಡು ಬರುತ್ತೇನೆಂದು ಹೇಳಿ, ಅದಿರಲಿ, ನಿಮ್ಮ ಬಳಿ ಅಷ್ಟೊಂದು ಹಣವಿದೆಯೆಂದು ಕಿಡ್ನಾಪರ್ ಗೆ ಹೇಗೆ ಗೊತ್ತೆಂದು ಇನ್ಸ್‌ಪೆಕ್ಟರ್ ಪ್ರಶ್ನಿಸಿದಾಗ
ನನ್ನ ಮಗಳು ಬಹುಶಃ ಅವಳು ಲವ್ ಮಾಡುತ್ತಿರುವವನಿಗೆ ಹೇಳಿರಬೇಕು ಸಾರ್ ಎನ್ನುತ್ತಾರೆ.
ಓ ನೀವು ಕಂಪ್ಲೇಂಟ್ ಕೊಟ್ಟು ಎಚ್ಚರಿಕೆ ನೀಡಲು ಹೇಳಿ್ದ್ದವನಾ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಲು
ಹೌದೂ ಸಾರ್ ಅವನೇ ಈ ಕೆಲಸ ಮಾಡಿದ್ದಾನೆ. ಅವನನ್ನು ಹಿಡಿದರೆ ನಮ್ಮ ಮಗಳು ಸೇಫಾಗಿ ಮನೆಗೆ ಬರುತ್ತಾಳೆಂಬ ಕೋದಂಡರಾಂ ಮಾತಿಗೆ
ಅವರನ್ನೂ ಕರೆಸಿ ವಿಚಾರಣೆ ಮಾಡುತ್ತೇನೆಂದು ಇನ್ಸ್ ಪೆಕ್ಟರ್ ಹೇಳಿದಾಗ
ದಯವಿಟ್ಚು ಬೇಗ ಕರೆಸಿ ವಿಚಾರಣೆ ಮಾಡಿ, ನಾನೀಗ ಹಣವನ್ನು ಡ್ರಾ ಮಾಡಿತೆಗೆದುಕೊಂಡು ಬರಲಾ ಎಂದು ಕೋದಂಡರಾಮ್ ಕೇಳಲು
ಕಿಡ್ನಾಪರ್ ಗೆ ಬುದ್ದಿ ಕಲಿಸಲು ಒಂದು ಖಾಲಿ ಸೂಟ್ ಕೇಸ್ ತಂದಿರಿ, ಅದರಲ್ಲಿ ಹಣ ಇಡುವುದು ಬೇಡವೆಂದು ಇನ್ಸ್‌ಪೆಕ್ಟರ್ ಹೇಳಿದಾಗ
ಸಾರ್ ಹಣ ಕೊಡದಿದ್ದರೆ ಅವನು ಏನಾದರೂ ನನ್ನ ಮಗಳಿಗೆ ತೊಂದರೆ ಮಾಡಿದರೆ ಎಂದು ಕೋದಂಡರಾಮ್ ರವರು ಆತಂಕ ವ್ಯಕ್ತಪಡಿಸಿದಾಗ
ನೀವು ಧೈರ್ಯವಾಗಿರಿ ಗುರುಗಳೇ , ನಾವು ಉಪಾಯ ಮಾಡಿ ಅವನನ್ನು ಹಿಡಿಯುತ್ತೇವೆ ಎಂದು ಇನ್ಸ್ ಪೆಕ್ಟರ್ ಹೇಳಲು.
ಸಾರ್ ಈಗಾಗಲೇ ರಾತ್ರಿ ಹತ್ತುಗಂಟೆ ಯಾಗುತ್ತಿದೆ ಆದಷ್ಟೂ ಬೇಗ ನನ್ನ ಮಗಳನ್ನು ಮನೆಗೆ ಕರೆದುಕೊಂಡು ಬನ್ನಿ ಸಾರ್ ಎಂದು ಪುನಃ ಕೋದಂಡರಾಂ ರವರು ದುಃಖದಿಂದ ಅಂಗಲಾಚುತ್ತಾ ಹೇಳಲು
ಆಯ್ತು ಗುರುಗಳೇ ನಿಮ್ಮ ಶಿಷ್ಯನನ್ನು ನಂಬಿ ಎಂದು ಹೇಳಿ ಇನ್ಸ್‌ಪೆಕ್ಟರ್ ಪೋನ್ ಆಫ್ ಮಾಡುತ್ತಾರೆ.
ಕೋದಂಡರಾಂ ರವರು ಮೊಬೈಲನ್ನು ಚೇಬಲ್ ಮೇಲಿಡುತ್ತಾ ಅಯ್ಯೋ ನನ್ನ ಮಗಳಿಗೆ ಆ ಕಿಡ್ನಾಪರ್ ಏನೂ ಮಾಡದಿರಲಪ್ಪಾ ಎಂದುಕೊಳ್ಳುತ್ತಿರುವಾಗ
ಪುನಃ ಮೊಬೈಲ್ ರಿಂಗ್ ಆಗುತ್ತದೆ. ಹೊಸ ನಂಬರ್ ಇದ್ದುದ್ದರಿಂದ ಯಾರು ಫೋನ್ ಮಾಡಿದರೋ ಎಂದುಕೊಂಡು ಭಯದಿಂದಲೇ ಹಲೋ ಎನ್ನಲು
ಅಭಿಜಿತ್ ತಂದೆ ಫೋನ್ ಮಾಡಿ, ಸಾರ್ ನಿಮಗೆ ಈ ವೇಳೆಯಲ್ಲಿ ಫೋನ್ ಮಾಡುತ್ತಿದ್ದೇನೆಂದು ಬೇಸರಪಟ್ಟುಕೊಳ್ಳಬೇಡಿರಿ ಸಾರ್ ನಿಮಗೊಂದು ವಿಷಯ ಹೇಳಬೇಕಿತ್ತು ಅದಕ್ಕೆ ಫೋನ್ ಮಾಡಿದೆ ಎನ್ನುತ್ತಾ, ಅವನು ಯಾರೋ ವಿಕ್ರಮ್ ಅಂತೆ, ನಿಮ್ಮ ಮಗಳನ್ನು ಪ್ರೀತಿಸಿದ್ದಾನಂತೆ, ನನ್ನ ಮಗನಿಗೆ ಫೋನ್ ಮಾಡಿ ಒಂದು ಕೋಟಿ ರೂಪಾಯಿ ಗಳನ್ನು ಸಾಲ ಕೇಳುತ್ತಿದ್ದಾನೆ, ಅದೂ ಹೋಗಲಿ ಎಂದರೆ, ನಾನು ಆ ಹುಡುಗಿಯ ವಿಷಯಕ್ಕೆ ಬರುವುದಿಲ್ಲ ನೀವೇ ಮದುವೆ ಮಾಡಿಕೊಳ್ಳಿ, ಆದರೆ ನನಗೆ ಕಡೇ ಪಕ್ಷ ಐದನೂರು ರೂಪಾಯಿಗಳನ್ನು ಕೊಡಿ ಮೂರು ತಿಂಗಳಲ್ಲಿ ಕೊಡುತ್ತೇನೆಂದು ಹೇಳಿದ ಎನ್ನಲು
ಹೌದೂ ಸಾರ್ ನನ್ನ ಮಗಳಿಗೂ ಹಣ ಕೊಡಬೇಕೆಂದು ತುಂಬಾ ಕಾಟ ಕೊಡುತ್ತಿದ್ದಾನೆಂದು ಕೋದಂಡರಾಂ ಹೇಳಿದಾಗ
ಹೌದು ಸಾರ್ ಅವನ ಕಾಟ ತಡೆಯುವುದಕ್ಕೆ ಆಗುತ್ತಿಲ್ಲವೆಂದು ಅಭಿಜಿತ್ ತಂದೆಯ ಮಾತಿಗೆ
ಅವನೇ ನನ್ನ ಮಗಳನ್ನು ಕಿಡ್ನಾಪ್ ಮಾಡಿ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಅವನನ್ನು ಕಂಡು ಹಿಡಿದರೆ ನನ್ನ ಮಗಳು ಬಚಾವಾಗುತ್ತಾಳೆಂದು ಕೋದಂಡರಾಂ ಮಾತಿಗೆ
ಇದೇನ್ ಸಾರ್ ಹೀಗೆ ಹೇಳುತ್ತಿದ್ದೀರೀ? ನಿಮ್ಮ ಮಗಳು ಕಿಡ್ನಾಪ್ ಆಗಿದ್ದಾಳಾ? ಹುಷಾರಾಗಿ ಡೀಲ್ ಮಾಡಿ ಸಾರ್ ಎಂದು ಅಭಿಜಿತ್ ತಂದೆ ಹೇಳಿದಾಗ
ನನ್ನ ಶಿಷ್ಯನೇ ಇನ್ಸ್ ಪೆಕ್ಟರ್ ಇದ್ದಾರೆ ಅವರಿಗೆ ವಿಷಯ ತಿಳಿಸಿದ್ದೇನೆ. ಪುನಃ ಈ ವಿಚಾರ ತಿಳಿಸಿ ಅವನನ್ನು ಸ್ಟೇಷನ್ ಗೆ ಕರೆಸಿ ವಿಚಾರಣೆ ಮಾಡಲು ಹೇಳುತ್ತೇನೆ ಎನ್ನುತ್ತಾರೆ.
ಆಗಲೀ ಸಾರ್ ಹುಷಾರು ಎಂದು ಹೇಳಿ ಅಭಿಜಿತ್ ತಂದೆಯು ಫೋನ್ ಕಟ್ ಮಾಡುತ್ತಾರೆ.
ತಕ್ಷಣ ಕೋದಂಡರಾಂ ರವರು ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ, ವಿಕ್ರಮ್ ಒಂದು ಕೋಟಿ ರೂಪಾಯಿ ಸಾಲ ಕೇಳಿದ್ದನೆಂಬ ವಿಷಯ ತಿಳಿಸಿದಾಗ
ಸಾಲ ಕೇಳಿದರು ಎಂದ ತಕ್ಷಣ ಅವರನ್ನೇ ಕಿಡ್ನಾಪರ್ ಎಂದು ಹೇಳಲು ಸಾಧ್ಯವಿಲ್ಲ ಗುರುಗಳೇ, ಆದರೂ ಒಂದು ಸಲ ವಿಚಾರಣೆ ಮಾಡುತ್ತೇನೆಂದು ಹೇಳಿ ಇನ್ಸ್ಪೆಕ್ಟರ್ ಫೋನ್ ಆಫ್ ಮಾಡಿ ತಕ್ಷಣ
ತಮ್ಮಲ್ವಿದ್ದ ವಿಕ್ರಮ್ ಫೋನ್ ನಂಬರ್ ಗೆ ಫೋನ್ ಮಾಡಿ ಎಲ್ಲಿದ್ದೀಯಪ್ಪಾ ಎಂದು ಪ್ರಶ್ನಿಸಲು
ಯಾರು ನೀವು ಎಂದು ವಿಕ್ರಮ್ ಪ್ರಶ್ನಿಸಿದಾಗ
ನಾನು ಇನ್ಸ್ ಪೆಕ್ಟರ್ ಮಾತನಾಡುತ್ತಿರುವುದು ಎಂದ ತಕ್ಷಣ
ನಮಸ್ಕಾರಾ ಸಾರ್ ನಾನು ಮನೆಯಲ್ಲೇ ಇದ್ದೇನೆ ಯಾಕೆ ಸಾರ್ ಎಂದು ವಿಕ್ರಮ್ ಪುನಃ ಕೇಳುತ್ತಾನೆ
ಈಗಲೇ ಸ್ಟೇಷನ್ ಗೆ ಬಾ ಎಂಬ ಇನ್ಸ್ ಪೆಕ್ಟರ್ ಮಾತಿಗೆ
ಏಕೆ ಸಾರ್ ಮೊನ್ನೆಯೆಲ್ಲಾ ನನ್ನನ್ನು ವಿಚಾರಣೆ ಮಾಡಿ ಎಚ್ಚರಿಕೆ ಕೊಟ್ಟಿದ್ದೀರಿ ಅದರಂತೆ ಸುಮ್ಮನಿದ್ದೇನೆ ಎಂದು ವಿಕ್ರಮ್ ಹೇಳಲು
ನಾನು ಎಚ್ಚರಿಕೆ ಕೊಟ್ಟರೂ ನಿವ್ನ ಕಂತ್ರಿ ಬುದ್ದಿ ಬಿಟ್ಟಿಲ್ಲ ಈಗಲೇ ಸ್ಟೇಷನ್ ಗೆ ಬಾ ಎನ್ನುತ್ತಾರೆ
ಏಕೆ ಬರಬೇಕು ಸಾರ್ ಎಂದು ವಿಕ್ರಮ್ ಪುನಃ ಪ್ರಶ್ನಿಸಿದಾಗ
ಸುಮ್ಮನೆ ಬರುತ್ತೀಯೋ ಅಥವಾ ನಿನ್ನನ್ನು ಮನೆಯಿಂದಲೇ ಎಳೆದುಕೊಂಡು ಬರಬೇಕಾ ಎಂದು ಇನ್ಸ್ ಪೆಕ್ಟರ್ ರವರು ಏರುಧ್ವನಿಯಲ್ಲಿ ಹೇಳಿದಾಗ
ಈಗಲೇ ಬರುತ್ತೇನೆ ಸಾರ್ ಎಂದು ವಿಕ್ರಮ್ ಹೇಳಿ ಫೋನ್ ಆಫ್ ಮಾಡಿ ಅರ್ಧಗಂಟೆಯೊಳಗೆ ಸ್ಟೇಷನ್ ಗೆ ಬಂದು ಇನ್ಸ್ ಪೆಕ್ಟರ್ ಛೇಂಬರ್ ಗೆ ಹೋಗಿ ನಮಸ್ಕಾರಾ ಸಾರ್ ಎನ್ನುತ್ತಾನೆ
ಮಾಸ್ಚರ್ ಮಗಳನ್ನು ಕಿಡ್ನಾಪ್ ಮಾಡಿ ಎಲ್ಲಿ ಇಟ್ಟಿದ್ದೀಯಾ ಎಂದು ಪ್ರಶ್ನಿಸಿದಾಗ
ಏನು ಹೇಳುತ್ತಿದ್ದೀರಾ ಸಾರ್ ? ಯಾರು? ಯಾವ ಮಾಸ್ಟರ್ ಮಗಳನ್ನು ಕಿಡ್ನಾಪ್ ಮಾಡಿದ್ದಾರೆ? ಅದಕ್ಕೂ ನನಗೂ ಏನು ಸಂಬಂಧ ಸಾರ್ ? ಯಾರ್ ಸಾರ್ ಕಿಡ್ನಾಪ್ ಮಾಡಿರುವರೆಂದು ವಿಕ್ರಮ್ ಕೇಳಲು .
ಅದೇ ಕಣಪ್ಪಾ ನೀನು ಲವ್ ಮಾಡುತ್ತಿದ್ದೀನೆಂದು ಹೇಳುತ್ತಿರುವ ಆ ಹುಡುಗಿಯನ್ನೇ ಕಿಡ್ನಾಪ್ ಮಾಡಿ ಈಗ ಒಂದು ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡುತ್ತಿದ್ದೀಯಂತೆ ಎಂದು ಇನ್ಸ್ ಪೆಕ್ಟರ್ ಕೇಳಲು
ಏನ್ ಸಾರ್ ನನ್ನ ಆಶಾಳನ್ನು ,,,ಯಾ,,,,,ಯಾ,,,,ಯಾರೋ ಕಿಡ್ನಾಪ್ ಮಾಡಿದ್ದಾರಾ? ನಾನು ಅವಳನ್ನು ಮನಸಾರೆ ಪ್ರೀತಿಸುತ್ತಿದ್ದೇನೆ ನಾನೇಕೆ ಕಿಡ್ನಾಪ್ ಮಾಡಲಿ ಸಾರ್ ಎಂದು ವಿಕ್ರಮ್ ಹೇಳಲು
ಏಯ್ ನನ್ನ ಬಳಿಯೇ ಸುಳ್ಶುಹೇಳುತ್ತಿದ್ದೀಯಾ? ಒಂದು ಕೋಟಿ ರೂಪಾಯಿ ಕೊಡಿ ಮೂರು ತಿಂಗಳಲ್ಲಿ ವಾಪಸ್ ಕೊಡುತ್ತೇನೆ. ನಾನು ಪ್ರೀತಿಸಿರುವ ಹುಡುಗಿಯನ್ನು ನೀವೇ ಮದುವೆ ಮಾಡಿಕೊಳ್ಳಿ ಎಂದು ಹೇಳಿದ್ದೆಯಂತೆ, ಇದೇನಾ ನಿನ್ನ ನಿರ್ಮಲ ಪ್ರೀತಿ ? ನಿನ್ನ ನಾಟಕ ನನ್ನ ಬಳಿ ನಡೆಯುವುದಿಲ್ಲ, ನಿನ್ನ ಮೊಬೈಲ್ ಕೊಡು, ಕಾಲ್ ಲಿಸ್ಟ್ ನೋಡಬೇಕೆಂದಾಗ
ವಿಕ್ಪಮ್ ಅಳುಕುತ್ತಾ, ತನ್ನ ಜೇಬಿನಲ್ಲಿದ್ದ ಮೊಬೈಲನ್ನು ಟೇಬಲ್ ಮೇಲಿಡುತ್ತಾನೆ.
ಮುಂದುವರೆಯುತ್ತದೆ
ಡಾ. ಎನ್. ಮುರಳೀಧರ್ ವಕೀಲರು ಹಾಗೂ ಸಾಹಿತಿ ನೆಲಮಂಗಲ
-
ಈ ಸಂಚಿಕೆಯಲ್ಲಿ ತಿಳಿದುಬರುವ ಮುಖ್ಯವಾದ ಅಂಶ ಏನೆಂದರೆ
- ಈಗಿನ ಕಾಲದಲ್ಲಿ ಹಣದ ಮುಂದೆ ಯಾವ ಪ್ರೀತಿ ವಿಶ್ವಾಸಕ್ಕೂ ಬೆಲೆಯೇ ಇಲ್ಲ. ಹಣದ ಮುಂದೆ ಎಲ್ಲವೂ ಗೌಣವಾಗುತ್ತಿದೆ. ಹಣ ಅಂತಸ್ತು ಇದ್ದರೆ ಹತ್ತಿರ ಬಾ ಎಂದು ಹೇಳುತ್ತಾರೆ. ಹಣವಿಲ್ಲದಿದ್ದರೆ ಕೇಳುವವರೇ ಇರುವುದಿಲ್ಲವಾಗುತ್ತಿದೆ.
ಒಬ್ಬ ಶ್ರೀಮಂತ ಬೇಕಾದರೆ ತನ್ನ ಹಣದ ಬಲದಿಂದ ಏನು ಬೇಕಾದರೂ ಗೆಲ್ಲಬಲ್ಲನೆಂದು ಹೇಳುತ್ತಾನೆ.
ಆದರೆ ಸತ್ಯ ನಿಷ್ಠೆ ಇರುವ ಒಬ್ಬ ಸಾಮಾನ್ಯ ಮನುಷ್ಯನಿಗೆ ಈಗಿನ ಕಾಲದಲ್ಲಿ ತನ್ನಲ್ಲಿ ಸತ್ಯವಿದ್ದರೂ ತಾನು ಗೆದ್ದೇ ಗೆಲ್ಲುತ್ತೇನೆಂದು ಹೇಳುವ ಧೈರ್ಯ ಇಲ್ಲದಂತಾಗುತ್ತಿದೆ. ಗೆಲ್ಲುವುದಂತೂ ಹೋಗಲೀ ಕಡೇಪಕ್ಷ ಆತನಿಗೆ ಸಾಂತ್ವನ ಹೇಳುವವರೂ ಇಲ್ಲ. ಅದೇ ಹಣ ಇರುವವನು ಎಷ್ಟೇ ತಪ್ಪು ಮಾಡಿದ್ದರೂ ಅವನನ್ನು ಸಮರ್ಥಿಸಿಕೊಳ್ಳುವವರೇ ಜಾಸ್ತಿ.