ಅಭಿಲಾಷೆ ಕಾದಂಬರಿ ಸಂಚಿಕೆ -31
ನಮ್ಮಮ್ಮನ ತಂದೆಯ ಆಸ್ತಿಯಲ್ಲಿ ನಮ್ಮ ತಾಯಿಗೆ ಇಪ್ಪತ್ತೈದು ಕೋಟಿ ರೂಪಾಯಿ ಬರುವುದಿದೆಯೆಂದು ವಿಕ್ರಮ್ ಆಶಾಳಿಗೆ ಹೇಳಿರುತ್ತಾನೆ
ಕಥೆಯನ್ನು ಮುಂದುವರೆಸುತ್ತಾ
ವಿಕ್ರಮ್ ತಮಗೆ ಇಪ್ಪತ್ಕೈದು ತೋಟಿ ರೂಪಾಯಿ ಬರುತ್ತದೆಂದಾಗ
ಆರ್ ಯೂ ಶೂರ್ ಎಂದು ಹೇಳಿ ಆಶಾ ಫೋನ್ ಆಫ್ ಮಾಡಿದ ನಂತರ
ಆಶಾಳ ಅಮ್ಮನು ಆಶಾ ,,,ಆಶಾ ,,, ಎನ್ನುತ್ತಾ ರೂಮಿಗೆ ಬಂದು ಏನು ಡಿಸೈಡ್ ಮಾಡಿದೆಯೆಂದು ಕೇಳಿದಾಗ
ಇನ್ನೇನು ಡಿಸೈಡ್ ಮಾಡುವುದಿದೆ? ನನ್ನ ನಿರ್ಧಾರ ಒಂದೇ ಯಾವತ್ತೂ ಬದಲಾಗಲ್ಲವೆಂದು ಹೇಳಿದಾಗ
ಏನಮ್ಮಾ ಕಂಡೂ ಕಂಡೂ ಪಾಳು ಬಾವಿಗೆ ಬೀಳಲು ಹೋಗುತ್ತಿದ್ಗೀಯಲ್ಲಾ? ಅಪ್ಪ ನೋಡಿರುವ ಹುಡುಗನನ್ನು ಮದುವೆ ಮಾಡಿಕೊಂಡು ಸುಖವಾಗಿರಬಾರದಾ ಎಂದು ಅವಳಮ್ಮ ನುಡಿಯಲು
ಅಮ್ಮಾ ಪ್ರೀತಿಸುವವರನ್ನು ಬಿಡಲು ಸಾಧ್ಯವಿಲ್ಲಮ್ಮಾ , ಒಂದು ಸಲ ಪ್ರೀತಿಸಿ ಮನಸ್ಸು ಕೊಟ್ಟರೆ ಮುಗೀತಮ್ಮಾ , ಎಷ್ಟೇ ಕಷ್ಟವಾದರೂ ಅವರ ಜೊತೆಯಲ್ಲಿಯೇ ಹೆಜ್ಜೆ ಹಾಕಬೇಕು. ಲವ್ ಗೆ ಅಷ್ಟು ಪವರ್ ಇದೆಯೆಂದು ಆಶಾ ಹೇಳಲು.
ಹೌದಮ್ಮಾ ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ಲವ್ ಹೊಟ್ಟೆ ತುಂಬಿಸುವುದಿಲ್ಲ. ಲವ್ ನಂಬಿ ಕುಳಿತರೆ ಸಾಲ ತೀರುವುದಿಲ್ಲವೆಂಬ ಅವಳಮ್ಮನ ಮಾತಿಗೆ
ಪ್ರೀತಿಯೆಂಬುದು ನಾವಿರುವವರೆಗೂ ಶಾಶ್ವತವಾಗಿರುತ್ತದೆ ಲವ್ ಈಸ್ ಇಮ್ಮಾರ್ಟಲ್ ಅಮ್ಮಾ ಅದು ಶಾಶ್ವತ ಕಣಮ್ಮಾ, ಲವ್ ಗಾಗಿ ಪ್ರಾಣವನ್ನೇ ಕೊಡುತ್ತಾರೆಂದಾಗ
ಹೋಗೆ ಹೋಗೇ ಹುಚ್ಚೀ, ಲವ್ ಅಂತೆ ಲವ್ ಸರಿಯಾಗಿ ಜೀವನ ನಡೆಸುವುದನ್ನು ಕಲಿತುಕೊಳ್ಳಿ, ಸುಮ್ಮನೆ ಪ್ರೀತಿ ಎಂಬ ಬಿಸಿಲ್ಗುದುರೆ ಏರಲು ಹೋಗಬಾರದು, ಇದು ರಿಯಲ್ ಲೈಫ್ ರೀಲ್ ಲೈಫಲ್ಲವೆಂದು ಹೇಳಲು,
ಅಮ್ಮಾ ನೀನು ಏನು ಹೇಳಿದರೂ ನಾನು ಕೇಳುವುದಿಲ್ಲ, ನಾನು ಪ್ರೀತಿಗೆ ಬೆಲೆ ಕೊಡುವವಳು ನನ್ಮ ನಿರ್ಧಾರ ಬದಲಿಸುವುದಿಲ್ಲವೆಂದಾಗ
ಅರ್ಥವಿಲ್ಲದ ಪ್ರೀತಿಗೆ ಅಂಟಿಕೊಂಡು ಇಲ್ಲದ ಕಷ್ಟ ಪಡಬೇಡವೆಂಬ ಅವಳಮ್ಮನ ಮಾತಿಗೆ
ಅಮ್ಮಾ ಅವರಿಗೆ ಇಪ್ಪತ್ತೈದು ಕೋಟಿ ರೂಪಾಯಿ ಬರುತ್ತದಂತೆ ಎಂದು ಆಶಾ ಹೇಳಿದಾಗ
ಅದು ಕನಸಿನ ಗಂಟೆಂದು ಅವರಮ್ಮ ಹೇಳುತ್ತಾರೆ
ಏನು ಹೇಳಿದರೂ ಕೂಡ ಆಶಾ ತನ್ನ ಹಠವನ್ನೇ ಸಾಧಿಸಿದಾಗ
ಏನಾದರೂ ಮಾಡಿಕೋ ಎಂದು ಹೇಳಿ ಅವಳಮ್ಮ ಒಳಗೆ ಹೋಗುತ್ತಾರೆ.
ವಿಕ್ರಮ್ ಗೆ ತನ್ನ ತಂದೆಯ ಸಾಲದ್ದೇ ಚಿಂತೆಯಾಗಿದ್ದು, ಯಾವ ರೀತಿ ಮನೆಯನ್ನು ಉಳಿಸಿಕೊಳ್ಳಬಹುದೆಂದು ಎಷ್ಚೇ ಯೋಚಿಸಿದರೂ ಪರಿಹಾರ ಮಾತ್ರ ತೋಚುವುದೇ ಇಲ್ಲ.
ಕಡೆಗೆ ತನ್ನ ಜೇಬಿನಿಂದ ಮೊಬೈಲ್ ತೆಗೆದು ಆಶಾಳಿಗೆ ಫೋನ್ ಮಾಡಿ ನಾನು ಕೇಳಿರುವ ಒಂದು ಕೋಟಿ ರೂಪಾಯಿಗಳನ್ನು ನೀಡುವುದಕ್ಕೆ ಅರೇಂಜ್ ಮಾಡಿದೆಯಾ ಎಂದು ಪ್ರಶ್ನಿಸಿದಾಗ
ಸಾರೀ ವಿಕ್ರಮ್ ನಮ್ಮಪ್ಪ ಕೊಡಲು ಸಿದ್ದರಿಲ್ಲವೆಂದು ಆಶಾ ಹೇಳಿದ ತಕ್ಷಣ
ಓಕೆ ಎಂದಷ್ಟೇ ಹೇಳಿ ಫೋನ್ ಕಟ್ ಮಾಡುತ್ತಾನೆ
ವಿಕ್ರಮ್ ನನ್ನ ಮಾತು ಕೇಳೆಂದು ಹೇಳಿ ಫೋನ್ ಆಫ್ ಆಗಿದ್ದನ್ನು ನೋಡಿ ನನ್ನ ಮಾತು ಪೂರ್ತಿ ಕೇಳುವುದಕ್ಕೂ ಪೇಷನ್ಸ್ ಇಲ್ಲವೆಂದುಕೊಂಡು ತಾನೂ ಫೋನ್ ಆಫ್ ಮಾಡುತ್ತಾಳೆ.
ವಿಕ್ರಮ್ ತಕ್ಷಣ ಆಶಾ ನೋಡಲು ಬಂದಿದ್ದ ಅಭಿಜಿತ್ ಗೆ ಫೋನ್ ಮಾಡಿದಾಗ
ಅಭಿಜಿತ್ ಹಲೋ ಎನ್ನಲು
ನಮಸ್ಕಾರಾ ಸಾರ್ ಎಂದು ವಿಕ್ರಮ್ ಹೇಳಿದಾಗ
ಅಭಿಜಿತ್ ಪ್ರತಿ ನಮಸ್ಕಾರವೆಂದು ಹೇಳಿ ಏನ್ ಸಮಾಚಾರಾ ಎಂದು ಅಭಿಜಿತ್ ಕೇಳಿದಾಗ
ಏನ್ ಸಾರ್ ನೀವು? ನಾನು ನಾನು ಪ್ರೀತಿಸುವ ಹುಡುಗಿಯನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆ ಮಾಡಿಕೊಳ್ಳಿ ಎಂದು ನಿಮ್ಮ ಒಳ್ಳೆಯದಕ್ಕೆ ಹೇಳಿದರೆ ನನ್ನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದಾಗ
ಯಾರು ಕಂಪ್ಲೇಂಟ್ ಕೊಟ್ಚಿರುವುದು? ಯಾರನ್ನು ಕೇಳುತ್ತಿದ್ದೀರೆಂದು ಅಭಿಜಿತ್ ಮಾತಿಗೆ
ಏನ್ ಸಾರ್ ಏನೂ ಗೊತ್ತಿಲ್ಲದಂತೆ ಮಾತನಾಡುತ್ತಿದ್ದೀರೆಂದು ವಿಕ್ರಮ್ ಪುನರ್ ಪ್ರಶ್ನಿಸಿದಾಗ
ನೀವು ಏನು ಹೇಳುತ್ತಿದ್ದೀರೋ ಗೊತ್ತಿಲ್ಲವೆಂದು ಅಭಿಜಿತ್ ಹೇಳಲು
ತನಗೆ ಪೋಲೀಸ್ ಇನ್ಸ್ ಪೆಕ್ಟರ್ ಫೋನ್ ಮಾಡಿದ ಬಗ್ಗೆ ವಿಕ್ರಮ್ ಹೇಳಿದಾಗ
ನನಗಂತೂ ಗೊತ್ತಿಲ್ಲವೆಂದು ಅಭಿಜಿತ್ ಹೇಳುತ್ತಾನೆ
ಸಾರ್ ಆ ವಿಷಯ ಬಿಡಿ ಸಾರ್ ಈಗ ನನಗೊಂದು ಸಮಸ್ಯೆಯಾಗಿದೆ ಅದನ್ನು ನೀವೇ ಸರಿಪಡಿಸಬೇಕು ಸಾರ್ ಎನ್ನುತ್ತಾನೆ ವಿಕ್ರಮ್
ಏನಪ್ಪಾ ನಿನ್ನ ಪ್ರಾಬ್ಲಮ್? ನಾನೇನು ಮಾಡಲಿ ಎಂದು ಅಭಿಜಿತ್ ಪ್ರಶ್ನಿಸಲು
ದಯವಿಟ್ಟು ತಪ್ಪು ತಿಳಿಯಬೇಡ್ರೀ ಸಾರ್
ನನಗೆ ಅರ್ಜಂಟಾಗಿ ಒಂದು ಕೋಟಿ ರೂಪಾಯಿಗಳ ಅವಶ್ಯಕತೆ ಇದೆ, ಇನ್ನು ಮೂರು ತಿಂಗಳಲ್ಲಿ ವಾಪಸ್ ಕೊಡುತ್ತೇನೆಂದು ವಿಕ್ರಮ್ ಹೇಳಲು
ನೀವು ಯಾರನ್ನ ಹಣ ಕೇಳುತ್ತಿದ್ದೀರೀ ಎಂದು ಗೊತ್ತಿದೆಯಾ? ಎಂದು ಅಭಿಜಿತ್ ಮಾತಿಗೆ
ಸಾರ್ ಅಭಿಜಿತ್ ರನ್ನೇ ಕೇಳುತ್ತಿದ್ದೇನೆಂದು ಗೊತ್ತು ಸಾರ್ ಎಂದು ವಿಕ್ರಮ್ ಹೇಳಿದಾಗ
ನನ್ನ ಬಳಿ ಅಷ್ಚೊಂದು ಹಣವಿಲ್ಲ ಕಣಪ್ಪಾ ಎಂದು ಅಭಿಜಿತ್ ಹೇಳುತ್ತಾನೆ.
ಸಾರ್ ದಯವಿಟ್ಟು ನಾನು ನಿಮಗೆ ಮೂರು ತಿಂಗಳಲ್ಲೇ ವಾಪಸ್ ಕೊಡುತ್ತೇನೆ ನನ್ನನ್ನು ನಂಬಿ ಎಂದು ವಿಕ್ರಮ್ ಹೇಳಿದಾಗ
ಇಲ್ಲಪ್ಪಾ ನಮ್ಮ ಬಳಿ ಅಷ್ಟೊಂದು ಹಣವಿಲ್ಲವೆೆಂದು ಅಭಿಜಿತ್ ಪುನಃ ಹೇಳುತ್ತಾನೆ
ದಯವಿಟ್ಟು ಐವತ್ತು ಲಕ್ಷ ರೂಪಾಯಿಗಳನ್ನಾದರೂ ಕೊಡಲೇ ಬೇಕೆಂದು ವಿಕ್ರಮ್ ಕೇಳಲು
ಸಾರಿ ವಿಕ್ರಮ್ ನನ್ನಲ್ಲಿ ಅಷ್ಟೊಂದು ಹಣವಿಲ್ಲವೆಂದು ಪುನಃ ಹೇಳಲು
ಇಲ್ಲಾ ಸಾರ್ ನೀವು ಸುಳ್ಳುಹೇಳುತ್ತಿದ್ದೀರಿ ನಿಮ್ಮ ಬಳಿ ಹಣವಿದ್ದರೂ ಕೊಡುತ್ತಿಲ್ಲವೆಂಬ ವಿಕ್ರಮ್ ಮಾತಿಗೆ
ನಾನು ದೇಶಕಾಯುವ ಒಬ್ಬ ನಿಷ್ಠಾವಂತ ಯೋಧ, ರಾಜಕಾರಣಿಯಲ್ಲ ನನ್ನ ಉದ್ದೇಶ ದೇಶಸೇವೆಯೇ ಹೊರತು ಹಣ ಸಂಪಾದಿಸಬೇಕೆಂಬ ಆಕಾಂಕ್ಷೆಯಿಲ್ಲ. ರಾಜಕಾರಣಿಯಾಗಿದ್ದರೆ ಅದರ ಕಥೆಯೇ ಬೇರೆ ಎಂದು ಹೇಳಿದರೂ ಕೂಡಾ ವಿಕ್ರಮ್ ಕೇಳದೆ , ಸಾರ್ ಆಶಾಳನ್ನು ನೀವೇ ಮದುವೆಯಾಗಿ ನಾನು ನಿಮ್ಮ ತಂಟೆಗೆ ಬರುವುದಿಲ್ಲ. ನಮ್ಮ ಮನೆಯನ್ನು ಹರಾಜಿನಿಂದ ತಪ್ಪಿಸಬೇಕೆಂಬುದೇ ನನ್ನ ಉದ್ದೇಶ. ನಮ್ಮ ಮನೆ ಹರಾಜಿನಿಂದ ಬಿಡುಗಡೆಯಾದರೆ, ನಮ್ಮ ತಂದೆ ನೆಮ್ಮದಿಯಿಂದ ಇರುತ್ತಾರೆ. ಅವರ ಪೂರ್ವಜರ ಮನೆಯು ತನ್ನ ತಪ್ಪಿನಿಂದ ಹರಾಜಿಗೆ ಒಳಗಾಗುತ್ತಿದೆ, ಅದರಿಂದ ತಪ್ಪಿಸಿ ಮನೆಯನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮಪ್ಪನ ಆಸೆ ಎಂದು ವಿಕ್ರಮ್ ಹೇಳಲು
ಸಾರಿ ವಿಕ್ರಮ್ ನಾವಿಬ್ಹರೂ ಪ್ರೀತಿಸುತ್ತಿದ್ದೇವೆ ನೀವು ಬೇರೆ ಹುಡುಗಿಯನ್ನು ನೋಡಿ ಮದುವೆಯಾಗಿ ಎಂದಿದ್ದಕ್ಕೆ, ನಾನವತ್ತೇ ಈ ಮದುವೆ ಬೇಡವೆಂದು ನಿಶ್ಚಯಿಸಿದೆ. ಈಗ ನೀವು ಆ ಹುಡುಗಿಯನ್ನು ಮದುವೆಯಾಗಲು ಹೇಳಿದರೂ ನಾನು ಮದುವೆಯಾಗಲು ತಯಾರಿಲ್ಲ. ನೀವಿಬ್ಬರೂ ಪ್ರೀತಿಸಿದ್ದೀರಿ ನೀವೇ ಮದುವೆಯಾಗಿ ಸುಖವಾಗಿರಿ ಎಂದು ಅಭಿಜಿತ್ ಹೇಳಲು
ಆಶಾಳನ್ನು ಮದುವೆರಯಾದರೇನು ಪ್ರಯೋಜನ? ನಮ್ಮ ಮನೆ ಹರಾಜಿನಿಂದ ಉಳಿಯುತ್ತಾ? ಅಥವಾ ನಮ್ಮಪ್ಪ ಮಾಡಿರುವ ಸಾಲ ತೀರುತ್ತಾ? ಅಷ್ಟಕ್ಕೂ ನಮ್ಮ ಮನೆಯ ಸಾಲ ತೀರುವವರೆಗೂ ನನಗೆ ಮಗಳನ್ನು ಕೊಟ್ಟು ಮದುವೆ ಮಾಡುವುದಿಲ್ಲವಂತೆ ಎಂದು ವಿಕ್ರಮ್ ಹೇಳಲು
ನಿಮ್ಮ ಭಾವಿ ಮಾವನವರನ್ನೇ ಒಂದು ಕೋಟಿ ರೂಪಾಯಿ ಕೊಡಿರೆಂದು ಕೇಳಿದರೆ ಅವರು ಕೊಡುವುದಿಲ್ಲವಾ? ಎಂದು ಅಭಿಜಿತ್ ಪ್ರಶ್ನೆಗೆ
ಮಗಳು ಕೇಳಿದರೂ ಕೊಡುವುದಿಲ್ಲವೆಂದು ಹೇಳಿದರು ಎನ್ನುತ್ತಾನೆ ವಿಕ್ರಮ್
ಹಾಗಾದರೆ ನೀವು ಲವ್ ಮಾಡಿರುವ ಹುಡುಗಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿದರೆ ನೀವು ಭಗ್ನ ಪ್ರೇಮಿಯಾಗುತ್ತೀರಲ್ಲಾ ಎಂಬ ಅಭಿಜಿತ್ ಪ್ರಶ್ನೆಗೆ
ಸಾರ್ ಪ್ರೀತಿಯ ಹಿಂದೆ ಹೋದರೇನು ಸಿಗುತ್ತದೆ? ಕಷ್ಟ ನಷ್ಟ ಎಲ್ಲರ ನಿಷ್ಠೂರ ಕಟ್ಚಿಕೊಂಡು ಮದುವೆಯಾದರೂ ಕಷ್ಟತಪ್ಪುತ್ತದಾ? ಪ್ರೀತಿ ಎಂಬ ಮಾಯೆ ಬಹಳ ಮೋಸ ಸಾರ್, ಹೇರಳ ಹಣವಿದ್ದರೆ ಮಾತ್ರ ಪ್ರೀತಿ ಮಾಡಬೇಕೆಂದು ನನಗೆನಿಸುತ್ತಿದೆ ಸಾರ್ ಎಂದು ವಿಕ್ರಮ್ ಹೇಳಲು
ನೀವು ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಬಿಡುತ್ತೀರಾ ಎಂದು ಅಭಿಜಿತ್ ಕೇಳಲು
ನಮ್ಮ ಕುಟುಂಬದ ಸಾಲ ತೀರಿದರೆ ಮಾತ್ರ ನಾನು ಪ್ರೀತಿಸಿರುವ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತೇನೆ ಇಲ್ಲದಿದ್ದರೆ ನನಗೆ ಆ ಪ್ರೀತಿ ಪ್ರೇಮದ ಸಹನಾಸವೇ ಬೇಡವೆನ್ನುತ್ತಾನೆ ವಿಕ್ರಮ್
ಸಾರಿ ವಿಕ್ರಮ್ ನಿಮಗೆ ಐವತ್ತು ಲಕ್ಷ ರೂಪಾಯಿ ಕೊಡುವಷ್ಟು ನನ್ನ ಬಳಿ ಹಣವಿಲ್ಲವೆಂದಾಗ
ಛೇ ಎನ್ನುತ್ತಾ, ವಿಕ್ರಮ್ ಫೋನ್ ಆಫ್ ಮಾಡುತ್ತಾನೆ
ಮಾರನೇ ದಿನ ರಾತ್ರಿ ಒಂಬತ್ತು ಗಂಟೆಯಾದರೂ ಆಶಾ ಮನೆಗೆ ಬಂದಿಲ್ಲದಿರುವುದನ್ನು ನೋಡಿದ ಅವಳಮ್ಮನಿಗೆ ಗಾಬರಿಯಾಗಿ,
ರೀ ಮಗಳು ಇನ್ನೂ ಮನೆಗೆ ಬಂದಿಲ್ಲ ಫೋನ್ ಮಾಡಿ ಎಲ್ಲಿದ್ದಾಳೋ ಕೇಳ್ರೀ ಎಂದು ತನ್ನ ಗಂಡನಿಗೆ ಹೇಳಿದಾಗ
ಇನ್ನೂ ಒಂಬತ್ತು ಗಂಟೆ ಸ್ವಲ್ಪ ಹೊತ್ತಿಗೆ ಬರಬಹುದೆಂದು ಕೋದಂಡರಾಂ ಹೇಳುತ್ತಾರೆ
ಇಲ್ಲಾ ರೀ ಅವಳು ದಿನವೂ ಎಂಟು ಗಂಟೆಯೊಳಗೆ ಮನೆಗೆ ಬರುತ್ತಾಳೆ. ಕಾಲ ಸರಿಯಿಲ್ಲಮ್ಮಾ ಯಾವಾಗ ಏನಾಗುತ್ತದೋ ಯಾಕೆ ಯಾಕೆ ರಿಸ್ಕ್ ತೆಗೆದುಕೊಂಡು ಲೇಟಾಗಿ ಹೋಗಬೇಕೆಂದು ಬೇಗ ಬಂದು ಬಿಡುತ್ತೇನೆಂದು ಹೇಳುತ್ತಾಳೆಂದು ಅವರ ಪತ್ನಿ ನುಡಿಯಲು
ಓ ಹಾಗೇನು ಎನ್ನುತ್ತಾ, ಕೋದಂಡರಾಂ ರವರು ಮಗಳಿಗೆ ಫೋನ್ ಮಾಡಿದಾಗ ಮಗಳ ಮೊಬೈಲ್ ಸ್ವಿಚ್ ಆಫ್ ಬರುತ್ತದೆ.
ಅಯ್ಯೋ ಇದೇನೇ ಸ್ವಿಚ್ ಆಫ್ ಬರುತ್ತಿದೆ? ಎಲ್ಲಿಗೆ ಹೋದಳು? ಎಲ್ಲಿಗಾದರೂ ಹೋಗಿ ಬರುತ್ತೇನೆಂದು ನಿನಗೆ ಹೇಳಿ ಹೋಗಿದ್ದಾಳಾ ಎಂದು ಕೋದಂಡರಾಮ್ ಪ್ರಶ್ನಿಸಲು
ಇಲ್ಲಾ ರೀ ನನಗೇನೂ ಹೇಳಿ ಹೋಗಿಲ್ಲ, ನನಗೇಕೋ ಭಯವಾಗುತ್ತಿದೆ ಪೋಲೀಸ್ ಕಂಪ್ಲೇಂಟ್ ಕೊಡ್ರೀ. ಹೇಗಿದ್ದರೂ ನಿಮ್ಮ ಶಿಷ್ಯರೇ ಇನ್ಸ್ ಪೆಕ್ಟರ್ ಇದ್ದಾರಲ್ಲಾ ಅವರಿಗಾದರೂ ಹೇಳಿ ಎಂದು ಅವರ ಪತ್ನಿ ಭಯದಿಂದ ಹೇಳಲು.
ಸ್ವಲ್ಪ ಹೊತ್ತು ಬಿಟ್ಚು ಫೋನ್ ಮಾಡುತ್ತೇನೆ ನೋಡೋಣವೆಂದು ಹೇಳಿ , ಸ್ವಲ್ಪ ಹೊತ್ತಿನ ನಂತರ ಕೋದಂಡರಾಂ ರವರು ಪುನಃ ಮಗಳಿಗೆ ಫೋನ್ ಮಾಡಿದರೂ ಮಗಳ ಮೊಬೈಲ್ ಸ್ವಿಚ್ ಆಫ್ ಬರುತ್ತದೆ
ಆಗ ಕೋದಂಡರಾಂ ರವರಿಗೂ ಭಯವಾಗಿದ್ದು, ಇನ್ಸ್ ಪೆಕ್ಟರ್ ಗೆ ಫೋನ್ ಮಾಡಬೇಕು ಎನ್ನುವಷ್ಚರಲ್ಲಿ, ಕೋದಂಡರಾಂ ಮೊಬೈಲ್ ರಿಂಗ್ ಆಗುತ್ತದೆ. ಮಗಳ ಹೆಸರು ಇರುವುದನ್ನು ನೋಡಿ ಮಗಳೇ ಆಶಾ ಎಲ್ಲಿದ್ದೀಯಮ್ಮಾ? ಯಾಕೆ ಲೇಟು ಎಂದು ಪ್ರಶ್ನಿಸಲು.
ಆ ಕಡೆಯಿಂದ ಲೋ ಮುದುಕಾ ನಿನ್ನ ಮಗಳು ಮನೆಗೆ ಸೇಫಾಗಿ ಬರಬೇಕೆಂದಿದ್ದರೆ, ನಾನು ಹೇಳುವ ಸ್ಥಳಕ್ಕೆ ಒಂದು ಕೋಟಿ ರೂಪಾಯಿಗಳನ್ನು ತೆಗೆದುಕೊಂಡು ಬಾ, ಇಲ್ಲದಿದ್ದರೆ ನಿನ್ನ ಮಗಳು ಕಚಕ್ ಎಂದು ಹೇಳಿದಾಗ
ಅಯ್ಯೋ ನನ್ನ ಮಗಳಿಗೆ ಏನೂ ಮಾಡಬೇಡ್ರಪ್ಪಾ ಎಂದು ಕೋದಂಡರಾಮ್ ರವರು ಅಳುತ್ತಾ ಹೇಳುತ್ತಾರೆ
ಹಾಗಾದರೆ ನಾನು ಹೇಳುವ ಸ್ಥಳಕ್ಕೆ ನಾಳೆ ಸಂಜೆಯೊಳಗೆ ಒಂದು ಕೋಟಿ ರೂಪಾಯಿ ಹಣವನ್ನು ತಂದಿಡು ಬೇರೆ ಮಾತು ಬೇಡ, ಪೋಲೀಸ್ ರವರಿಗೆ ಏನಾದರೂ ಹೇಳಿದೆಯೋ ನಿನ್ನ ಮಗಳ ಜೀವ ಉಳಿಯಲ್ಲ, ಹಣ ತಂದಿಡಬೇಕಾದ ಜಾಗವನ್ನು ಹೇಳಿ ಕಿಡ್ನಾಪರ್ ಫೋನ್ ಆಫ್ ಮಾಡುತ್ತಾನೆ
ಮುಂದುವರೆಯುತ್ತದೆ
ಡಾ.ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ನೆಲಮಂಗಲ
-
ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ
ಹಣದ ಮುಂದೆ ಯಾವ ಪ್ರೀತಿ ಪ್ರೇಮವೂ ನಿಲ್ಲುವುದಿಲ್ಲ. ಹಣ ಹೆಚ್ಚಿದಷ್ಟೂ ತನ್ನವರಿಂದ ನಿಷ್ಠೂರವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಯಾರಾದರೂ ಸ್ನೇಹಿತರಾಗಲೀ ಸಂಬಂಧಿಕರಾಗಲೀ ಸಾಲ ಕೇಳಿದರೆ, ಕೊಡುವ ಹಾಗಿಲ್ಲ ಬಿಡುವಂತಿಲ್ಲ. ಸಾಲವಾಗಿ ಹಣ ಕೊಟ್ಟರೆ ವಾಪಸ್ ಬರುತ್ತದೆಂಬ ನಂಬಿಕೆ ಇರುವುದಿಲ್ಲ. ಹಣ ವಾಪಸ್ ಕೇಳಿದ ತಕ್ಷಣ ನಿಷ್ಠೂರ ಬಂದು ಬಿಡುತ್ತದೆ. ಹಣ ಕೊಡುವುದಿಲ್ಲವೆಂದು ಹೇಳಿದರೂ ಕೂಡಾ ಅಷ್ಟೊಂದು ಹಣ ಇಟ್ಟುಕೊಂಡಿದ್ದಾನೆ ಸ್ನೇಹಿತ ಸಾಲ ಕೇಳಿದರೂ ಕೊಡಲಿಲ್ಲವೆಂದು ದೂರುತ್ತಾರೆ. ಸಾಲ ಕೊಟ್ಟರೂ ಕಷ್ಟ ಕೊಡದಿದ್ದರೂ ಕಷ್ಟ.
ತನ್ನ ಮನೆಗೆ ನಿಷ್ಠೆ ತೋರುವುದು ಉತ್ತಮ ಮಕ್ಕಳ ಸ್ವಭಾವ.