ಅಭಿಲಾಷೆ ಕಾದಂಬರಿ ಸಂಚಿಕೆ -30

ಹಿಂದಿನ ಸಂಚಿಕೆಯಲ್ಲಿ

ವಿಕ್ರಮ್ ತಂದೆ ಇಬ್ಬರು ಮಕ್ಕಳನ್ನು ಕರೆದು ಮನೆ ಹಾಗೂ ಎರಡು ಸೈಟುಗಳು ಹರಾಜಿಗೆ ಬಂದಿದೆಯೆಂದು ಹೇಳಿದಾಗ
ಮನೆಯನ್ನಾದರೂ ಉಳಿಸಿಕೊಳ್ಳಬೇಕೆಂದು ಇಬ್ಬರು ಮಕ್ಕಳು ಹೇಳುತ್ತಾರೆ

ಕಥೆಯನ್ನು ಮುಂದುವರೆಸುತ್ತಾ

ವಿಕ್ರಮ್ ತಂದೆ ಬ್ಯಾಂಕ್ ‌ನವರು ಮನೆ ಹಾಗೂ ಎರಡು ಸೈಟುಗಳನ್ನು ಹರಾಜಿಗೆ ಇಟ್ಟಿದ್ದಾರೆಂದು ಆತಂಕ‌ ವ್ಯಕ್ತಪಡಿಸಿದಾಗ
ಅಪ್ಪಾ ಏನಾದರೂ ಮಾಡಿ ಮನೆಯನ್ನಾದರೂ ‌ಉಳಿಸಿಕೊಳ್ಳಬೇಕೆಂದು ಮಕ್ಕಳು ತನ್ಮ ತಂದೆಯನ್ನು ಆಗ್ರಹಿಸುತ್ತಾರೆ.
ಹರಾಜಿಗೆ ಇನ್ನು ಹದಿನೈದು ದಿನ ಮಾತ್ರ ಇದೆ. ಅಷ್ಟರೊಳಗೆ‌ ಹೇಗಪ್ಪಾ ಎರಡು ಕೋಟಿ ರೂಪಾಯಿಗಳನ್ನು ಹೊಂದಿಸುವಪದೆಂದು ದಿಕ್ಕೇ ತೋಚುತ್ತಿಲ್ಲ, ಅಕಸ್ಮಾತ್ ನಮ್ಮ ಮನೆ ಹರಾಜಾದರೆ ನಾವು ಮರ್ಯಾದೆಯಿಂದ ಬದುಕಲು ಆಗುತ್ತೇನಪ್ಪಾ? ಎಂದು ವಿಕ್ರಮ್ ತಂದೆ‌ ವಿಷಾದ‌ ವ್ಯಕ್ತಪಡಿಸಿದಾಗ
ಏನು ಮಾಡಬೇಕೆಂದು ಹೇಳಿದರೆ ನಿಮ್ಮ ಮಾತಿನಂತೆ ನಡೆದುಕೊಳ್ಳುತ್ತೇವೆಂದು ಇಬ್ಬರು ಮಕ್ಕಳೂ ಹೇಳಿದಾಗ
ನನಗೇನೂ ತೋಚುತ್ತಿಲ್ಲ‌ ಕಣ್ರಪ್ಪಾ ಎಂದು ಇವರಪ್ಪನು ಕೈ ಚೆಲ್ಲುತ್ತಾರೆ
ಆಗ‌ ವಿಕ್ರಮ್ ಮಾತನಾಡಿ ಅಪ್ಪಾ ನನಗೊಂದು ಉಪಾಯ ಹೊಳೆದಿದೆ ಎಂದಾಗ
ಏನಪ್ಪಾ ಅದು ಬೇಗ ಹೇಳಪ್ಪಾ ಅನುಕೂಲವಾದರೆ ಮಾಡೋಣವೆಂದು ಅವರಪ್ಪ ನುಡಿಯಲು
ಅಪ್ಪಾ ಅಮ್ಮನು ಅವರ ಅಣ್ಣನ ಮೇಲೆ ಪಾರ್ಟಿಷನ್ ಸೂಟ್ ಹಾಕಿದ್ದಾರಲ್ಲಾ ಅದರಲ್ಲಿ ಅಂದಾಜು ಎಷ್ಟುಕೋಟಿ ಆಸ್ತಿ ಬರಬಹುದಪ್ಪಾ ಎಂದು ವಿಕ್ರಮ್ ಪ್ರಶ್ನಿಸಲು
ಅಂದಾಜು ಇಪ್ಪತ್ಕೈದು ಕೋಟಿ ರೂಪಾಯಿಗಳು ಬರಬಹುದು, ಅದು ಯಾವಾಗ ಬರುತ್ತದೋ ಗೊತ್ತಿಲ್ಲವೆಂದು ಅವರಪ್ಪನ ಮಾತಿಗೆ
ನಾವೇ ಕಾಂಪ್ರಮೈಸ್ ಮಾಡಿಕೊಂಡರೆ ಅದರಲ್ಲಿ ನಮ್ಮ ಸೋದರಮಾವ ಅರ್ಧ‌ ಕೊಡುತ್ತಾರಾ ಎಂದು ವಿಕ್ರಮ್ ಪ್ರಶ್ನಿಸಿದಾಗ
ಅವರನ್ನೇ ಕೇಳಬೇಕಪ್ಪಾ ಎಂದು ವಿಕ್ರಮ್ ತಂದೆ‌ ನುಡಿಯುತ್ತಾರೆ
ನೋಡೋಣ ಹೇಗಿದ್ದರೂ ಅವರು ಅಮ್ಮನ ಅಣ್ಣ ತಾನೇ ? ನಿನಗೆ ಬಾಮೈದನೇ ಆಗಬೇಕು, ಒಂದು ಸಲ ವಿಚಾರಿಸಪ್ಪಾ ಅಕಸ್ಮಾತ್ ಹನ್ನೆರಡು ಕೋಟಿ ರೂಪಾಯಿ ಕೊಟ್ಟರೆ ಕೇಸ್ ವಾಪಸ್ ತೆಗೆದುಕೊಂಡು ಬಿಡೋಣವೆಂದು ವಿಕ್ರಮ್ ಹೇಳುತ್ತಾನೆ.
ವಿಕ್ರಮ್ ಮಾತಿಗೆ ಅವರಪ್ಪ ನಗುತ್ತಾ, ನಾವು ಒಪ್ಪಿದರೂ ಅವರು ಒಪ್ಪಹಸಬೇಕಲ್ಲವೇ ವಿಕ್ರಮ್ ಎಂದು ಅವರಪ್ಪನು ಹೇಳಿದಾಗ
ಅಪ್ಪಾ ಆತುರ ಪಟ್ಟು ಕೇಸ್ ವಾಪಸ್ ಪಡೆಯುವುದು ಬೇಡಾ, ಇಪ್ಪತ್ತೈದು ಕೋಟಿ ರೂಪಾಯಿ ಬಂದರೆ ಈ ರೀತಿಯ ಮನೆ ಹತ್ತು ತೆಗೆದುಕೊಳ್ಳಬಹದೆಂದು ದೊಡ್ಡ ಮಗ ಹೇಳಲು
ನಮ್ಮ ತಾತ ಅಪ್ಪ ಇದ್ದ‌ಮನೆ ಕಣ್ರಪ್ಪಾ ನಮ್ಮ ಹಿರಿಯರಿದ್ದ‌ ಮನೆಯನ್ನು ಮೊಮ್ಮಗನಾದ ನಾನು ಉಳಿಸದೇ ಇದ್ದರೆ ಹೇಗೆ ? ಯಾವ ಮನೆಯ‌ ಋಣ ಎಷ್ಚು ಇರುತ್ತದೋ ಅಷ್ಟೇ‌ ಲಭ್ಯವಾಗುತ್ತದೆ ಏನಾದರೂ ಆಗಲಿ, ಮುಂದೆ ಅದೃಷ್ಟವಿದ್ದರೆ ಹೊಸ‌ಮನೆ ತೆಗೆದುಕೊಳ್ಳೋಣವೆಂದು ವಿಕ್ರಮ್ ತಂದೆ ಹೇಳಲು
ಆಯ್ತಪ್ಪಾ, ನೀನು ಏನು ಹೇಳುತ್ತೀಯೋ ಅದರಂತೆ ನಡೆಯುತ್ತೇವೆಂದು ಹೇಳಿ ಇಬ್ಬರು ಮಕ್ಕಳು ತಮ್ಮ ರೂಮಿಗೆ ಬರುತ್ತಾರೆ.

ಈ ಕಡೆ ಕೋದಂಡರಾಂ ರವರು ತಮ್ಮ ಪತ್ನಿಯನ್ನು ಕರೆದು ದಿನ ಪತ್ರಿಕೆ ತೋರಿಸುತ್ತಾ ನೋಡಿಲ್ಲಿ‌ ನಿನ್ನ ಮಗಳು ಮದುವೆಯಾಗಬೇಕೆಂದಿದ್ದವನ ತಂದೆ ಬ್ಯಾಂಕಿನಿಂದ ಎರಡು ಕೋಟಿ ರೂಪಾಯಿಗಳನ್ನು ಸಾಲ‌ ಪಡೆದು ಪಾವತಿಸದೇ ಇರುವುದಕ್ಕೆ ಬ್ಯಾಂಕ್ ನವರು ಆ ಮನೆ ಜೊತೆಗೆ ಎರಡು ಸೈಟುಗಳನ್ನು ಹರಾಜು ಹಾಕುವುದಾಗಿ, ಪೇಪರಿನಲ್ಲಿ ಜಾಹೀರಾತು ನೀಡಿದ್ದಾರೆಂದು ಹೇಳಿದಾಗ
ಅಯ್ಯೋ ಹೌದೇನ್ರೀ? ನಮ್ಮ ಮಗಳು ಅವನನ್ನು ಮದುವೆಯಾಗಿದ್ದರೆ ಏನು ಗತಿ ಆಗುತ್ತಿತ್ತೂ ರೀ,,,, ಎಂದು ಆತಂಕ ವ್ಯಕ್ತಪಡಿಸಿದಾಗ
ಅವರಿಗೆ ಎಷ್ಟು ಸಾಲವಿದೆಯೋ ಯಾರಿಗೆ ಗೊತ್ತೆಂದು ಆ ಸಂಬಂಧ ಬೇಡವೆಂದು ಹೇಳಿದ್ದು, ಈ ವಿಷಯ ಮಗಳಿಗೆ ಹೇಳು, ಹೊಟ್ಟೆಗೆ ಹಾಲು ಕುಡಿದಷ್ಟು ಸಂತೋಷ ಪಡಲಿ ಎಂದು ಹೇಳಿದಾಗ
ಮೊದಲು ಹೇಳಬೇಕು, ಈ ವಿಷಯ‌ ತಿಳಿದು ಇನ್ನಾದರೂ ಆ ಹುಡುಗನನ್ನು ಮದುವೆಯಾಗುತ್ತೇನೆಂಬ ಹಠ ಬಿಡಲಿ ಎನ್ನುತ್ತಾರೆ.
ಮಗಳು ಹಠ‌ ಬಿಡುವುದೇನು? ನಾವೇ ಒಪ್ಪದಿದ್ದರೆ ಆಯ್ತು ಎಂದು ಕೋದಂಡರಾಮ್ ಮಾತಿಗೆ,
ಅವರು ಯಾರಿಗೂ ‌ಹೇಳದಂತೆ ಮದುವೆ ಮಾಡಿಕೊಂಡು ಆಶೀರ್ವಾದ ಕೇಳಲು ಬಂದರೆ
ಆಗ ನಮ್ಮ ಭಾಗಕ್ಕೆ ಮಗಳಿಲ್ಲವೆಂದು ತೀರ್ಮಾನಕ್ಕೆ ಬರಬೇಕಾಗುತ್ತದೆ ಅಷ್ಟೇ ಎಂದು ಕೋದಂಡರಾಂ ಹೇಳುತ್ತಾರೆ
ಹಾಗೆಲ್ಲಾ ಅಪಶಕುನದ‌ ಮಾತು ಆಡಬೇಡ್ರೀ, ಮಗಳನ್ನು ಕೂಡಿಸಿಕೊಂಡು ಇರುವ ವಿಷಯ ಇನ್ನೊಂದು ಸಲ ಹೇಳಿ ಮನಸ್ಸು ಬದಲಿಸುವಂತೆ ಮಾಡಿದರೆ ಸಾಕೆಂದು ಅವರ ಪತ್ನಿ ಹೇಳುತ್ತಾರೆ
ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಅಮ್ಮ ಊಟ ಹಾಕಮ್ಮಾ ಎಂದು ಆಶಾ ಊಟದ ಮೇಜಿನ ಮುಂದೆ ಕುಳಿತಾಗ
ಅವಳಮ್ಮನು ತಟ್ಟೆ ಹಾಕಿ ಊಟ‌ ಬಡಿಸುತ್ತಾ, ಪೇಪರಿನಲ್ಲಿ ಬಂದಿದ್ದ ವಿಷಯ ಹೇಳಿದಾಗ
ಆಶಾ ಏನೂ ಮಾತನಾಡದೆ ಮೌನವಾಗಿ ಊಟ‌ ಮಾಡಿ ಕೈತೊಳೆದುಕೊಂಡು ತನ್ನ ರೂಮಿಗೆ ಹೋಗಿ, ತಕ್ಷಣ ವಿಕ್ರಮ್ ಗೆ ಫೋನ್ ಮಾಡಿ ನಿಮ್ಮ ಮನೆ ಹರಾಜಿನ ಬಗ್ಗೆ ಪೇಪರಿನಲ್ಲಿ ಬಂದಿದೆಯಂತೆ ಎಂದು ಪ್ರಶ್ನಿಸಿದಾಗ
ಅದಕ್ಕೇ ಅಲ್ಲವೇ ನಿನ್ನನ್ನು ಒಂದು ಕೋಟಿ ರೂಪಾಯಿ ಕೊಡೆಂದು ಕೇಳಿದ್ದು ಎನ್ನುತ್ತಾನೆ ವಿಕ್ರಮ್.
ನೀನು ಕೇಳಿದ್ದು ಒಂದು ಕೋಟಿ ರೂಪಾಯಿ, ಆದರೆ ನಿಮಗೆ ಕಮಿಟ್ ಮೆಂಟ್ ಇರುವುದು ಮೂರು ಕೋಟಿ ರೂಪಾಯಿ ಅದನ್ನು ಹೇಗೆ ಹೊಂದಿಸುತ್ತೀರೆಂದು ಆಶಾ ಪ್ರಶ್ನಿಸಲು
ನಮ್ಮಮ್ಮನ ತಂದೆಯ ಆಸ್ತಿಯಲ್ಲಿ ಇಪ್ಪತ್ಕೈದು ಕೋಟಿ ರೂಪಾಯಿ ಭಾಗ ಬರುವುದಿದೆ. ಅದರಲ್ಲಿ ಬೇರೆ ಮನೆ ತೆಗೆದುಕೊಳ್ಳುತ್ತೇವೆಂದು ವಿಕ್ರಮ್ ಹೇಳಿದಾಗ.
ಆರ್ ಯೂ ಶೂರ್ ಎಂದು ಆಶಾ ಪ್ರಶ್ನಿಸುತ್ತಾಳೆ
ಎಕ್ಸಾಟ್ಲೀ ಎಂದು ವಿಕ್ರಮ್ ಹೇಳಲು
ಓ ಕೆ ಎಂದು ಹೇಳಿ ಪೋನ್ ಆಫ್ ಮಾಡುತ್ತಾಳೆ.

ಮುಂದುವರೆಯುತ್ತದೆ

ಡಾ. ಎನ್. ಮುರಳೀಧರ್ ವಕೀಲರು ಹಾಗೂ ಸಾಹಿತಿ ನೆಲಮಂಗಲ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶ ಏನೆಂದರೆ

ಯಾವ ಸಂಬಂಧವೇ ಸ್ನೇಹವೇ ಆಗಲೀ, ಹಣ ಕಾಸಿನ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸ ವಾದರೆ ಮೊದಲಿನ ವಿಶ್ವಾಸ ಉಳಿಯುವುದಿಲ್ಲ. ಇದರ ಜೊತೆಗೆ ಕೋರ್ಟಿನಲ್ಲಿ ದಾವೆ ಹೂಡಿದ ತಕ್ಷಣ ಸಂಬಂಧದ ಕೊಂಡಿ ಕಳಚುತ್ತದೆ.