ಅಭಿಲಾಷೆ ಕಾದಂಬರಿ ಸಂಚಿಕೆ -28
ಹಿಂದಿನ ಸಂಚಿಕೆಯಲ್ಲಿ –
ಕೋದಂಡರಾಂರವರು ವಿಕ್ರಮ್ ಫೋನ್ ನಂಬರನ್ನು ಇನ್ಲ್ ಪೆಕ್ಚರ್ ಗೆ ಹಾಗೆಯೇ ಅಭಿಜಿತ್ ಫೋನ್ ನಂಬರನ್ನು ವಿಕ್ರಮ್ ಗೆ ಆಶಾ ನೀಡಿರುತ್ತಾಳೆ.
ಕಥೆಯನ್ನು ಮುಂದುವರೆಸುತ್ತಾ –
ಆಶಾ ಅಭಿಜಿತ್ ಫೋನ್ ನಂಬರನ್ನು ವಿಕ್ರಮ್ ಗೆ ನೀಡಿ ಈಗಲೇ ಅಭಿಜಿತ್ ಗೆ ಫೋನ್ ಮಾಡಿ, ನಾವಿಬ್ಬರೂ ಲವ್ ಮಾಡುತ್ತಿದ್ದೇವೆಂದು ಹೇಳಿ ಈ ಮದುವೆಯನ್ನು ಒಪ್ಪಿಕೊಳ್ಳದಂತೆ ಮಾಡಬೇಕು ಎನ್ನುತ್ತಾಳೆ.
ಹಾಗೆಯೇ ಕೋದಂಡರಾಂ ರವರು ಇನ್ಸ್ ಪೆಕ್ಟರ್ ಗೆ ವಿಕ್ರಮ್ ಫೋನ್ ನಂಬರ್ ನೀಡಿ ನಮ್ಮ ಮಗಳ ತಂಟೆಗೆ ಬರದಂತೆ ಎಚ್ಚರಿಕೆ ನೀಡಲು ತಿಳಿಸುತ್ತಾರೆ.
ಮಾರನೇ ದಿನ ವಿಕ್ರಮ್ ಅಭಿಜಿತ್ ಗೆ ಫೋನ್ ಮಾಡಿ ನೀವು ಆಶಾ ಎಂಬ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಒಪ್ಪಿರುವಿರಂತೆ ಎಂದಾಗ
ಹೌದು ಏನೀವಾಗ ಎಂದು ಅಭಿಜಿತ್ ಕೇಳಲು
ನಾನು ಆಶಾ ಮನಸಾರೆ ಪ್ರೀತಿಸುತ್ತಿದ್ದೇವೆ. ದಯವಿಟ್ಟು ಈ ಸಂಬಂಧವನ್ನು ಒಪ್ಪಬಾರದೆಂದು ವಿಕ್ರಮ್ ಹೇಳಲು
ಅದನ್ನು ಕೇಳುವುದಕ್ಕೆ ನೀನ್ಯಾರು ಎಂದು ಅಭಿಜಿತ್ ಪ್ರಶ್ನಿಸಿದಾಗ
ನಾನು ಆಶಾ ಲವರ್ ನಾನು ಆಶಾ ಮೊದಲಿನಿಂದಲೂ ಪ್ರೀತಿಸುತ್ತಿದ್ದೇವೆ. ಮದುವೆಯಾಗಲು ತೀರ್ಮಾನಿಸಿದ್ದೇವೆಂದು ವಿಕ್ರಮ್ ತಿಳಿಸುತ್ತಾನೆ
ಇವೆಲ್ಲವೂ ಫ್ರಾಂಕ್ ಕಾಲ್ ಎಂಬುದು ನನಗೆ ಗೊತ್ತು, ಸುಮ್ಮನೆ ಫೋನ್ ಆಫ್ ಮಾಡೆಂದು ಅಭಿಜಿತ್ ಹೇಳಿದಾಗ,
ನೋಡಿ ಸಾರ್ ಇದು ರಿಯಲ್ ಮ್ಯಾಟರ್ ಫ್ರಾಂಕ್ ಕಾಲ್ ಅಲ್ಲವೆಂಬ ವಿಕ್ರಮ್ ಮಾತಿಗೆ
ನೋಡ್ರೀ ಯಾವುದಾದರೂ ಮದುವೆ ಫಿಕ್ಸ್ ಆದಾಗ ಇವೆಲ್ಲವೂ ಕಾಮನ್, ಹುಡುಗಿ ಹೆಸರಿಗೆ ಕೆಟ್ಟ ಹೆಸರು ತರಲು ಕೆಲವರು ಹುನ್ನಾರ ಮಾಡುತ್ತಾರೆಂಬುದೂ ಗೊತ್ತು, ಅಥವಾ ಇನ್ನೂ ಕೆಲವರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವವರಿದ್ದಾರೆ. ಅದರಲ್ಲಿ ನೀನೂ ಒಬ್ಬನಿರಬೇಕು. ನಾನು ಹಣ ಕೊಡುವುದಿಲ್ಲ ನಿನ್ನ ಬ್ಲಾಕ್ಮೇಲ್ ತಂತ್ರಕ್ಕೆ ಹೆದರುವವನು ನಾನಲ್ಲಾ, ನಿನಗೆ ಹೆದರಿ ಹಣ ಕೊಡುತ್ತೇನೆಂದು ತಿಳಿದಿದ್ದರೆ ಅದು ನಿನ್ನ ಭ್ರಾಂತಷ್ಟೇ ಎಂದು ಅಭಿಜಿತ್ ಹೇಳಲು
ನಾನ್ಯಾಕೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಲಿ? ನೀವೇ ಆಶಾಳಿಗೆ ಫೋನ್ ಮಾಡಿದರೆ ತಿಳಿಯುತ್ತದೆಂಬ ವಿಕ್ರಮ್ ಮಾತಿಗೆ,
ಒಬ್ಬರಿಗೆ ಹೆದರಿಸಿ ಬೆದರಿಸಿದರೆ ನೀನು ಹೇಳಿದಂತೆ ಕೇಳುತ್ತಾರೆ. ಸುಮ್ಮನೆ ಫೋನ್ ಆಫ್ ಮಾಡೆಂದು ಅಭಿಜಿತ್ ಏರುಧ್ವನಿಯಲ್ಲಿ ಹೇಳಿದಾಗ
ವಿಕ್ರಮ್ ಗೆ ಕೋಪ ತಡೆಯಲು ಆಗುವುದಿಲ್ಲ. ಏಯ್ ಯಾರ ಬಳಿ ಮಾತನಾಡುತ್ತಿದ್ದೀಯಾ ಎಂದು ಗೊತ್ತಾ ನಿನಗೆ ಎಂದು ವಿಕ್ರಮ್ ಕೂಡಾ ಏರು ಧ್ವನಿಯಲ್ಲಿ ಹೇಳಲು
ನೀನು ಯಾರಾದರೆ ನನಗೇನಂತೆ ಮೊದಲು ಫೋನನ್ನು ಆಫ್ ಮಾಡೆಂದು ಹೇಳಿ ಅಭಿಜಿತ್ ತಾನು ಫೋನ್ ಆಫ್ ಮಾಡುತ್ತಾನೆ.
ಅಭಿಜಿತ್ ತನ್ನ ಮಾತು ಕೇಳುತ್ತಿಲ್ಲವೆಂದು ವಿಕ್ರಮ್ ಗೆ ತಡೆಯಲಾರದ ಕೋಪ
ಬಂದಿದ್ದರೂ ತಾಳ್ಮೆ ಕಳೆದುಕೊಳ್ಳದೆ ಪುನಃ ಅಭಿಜಿತ್ ಗೆ ಫೋನ್ ಮಾಡಿದಾಗ
ಪುನಃ ವಿಕ್ರಮ್ ಫೋನ್ ಮಾಡುತ್ತಿದ್ದಾನೆಂದು ಅಸಹನೆಯಿಂದ ನಿಮ್ಮ ಪ್ರಾಬ್ಲಮ್ ಏನೆಂದು ಅಭಿಜಿತ್ ಕೇಳಲು
ನಿಮ್ಮನ್ನು ಪರ್ಸನಲ್ ಆಗಿ ಭೇಟಿ ಮಾಡಿ ಸಂಪೂರ್ಣವಾಗಿ ವಿಷಯ ತಿಳಿಸಬೇಕು ಎಲ್ಲಿ ಸಿಗುತ್ತೀರಾ ಎಂದು ಕೇಳಿದಾಗ
ನೋಡಿ ನನ್ನಲ್ಲಿ ನೀವು ಮಾತನಾಡುವುದು ಏನೂ ಇಲ್ಲ. ಸುಮ್ಮನೆ ತೊಂದರೆ ಕೊಡಬೇಡಿರಿ, ಫೋನ್ ಆಫ್ ಮಾಡಿ ಎಂಬ ಅಭಿಜಿತ್ ಮಾತಿಗೆಸಾರ್ ಸಾರ್ ದಯವಿಟ್ಟು ನಮ್ಮ ನಿಷ್ಕಲ್ಮಶ ಪ್ರೀತಿಗೆ ಅಡ್ಡಬಂದು ನಮ್ಮನ್ನು ದೂರ ಮಾಡಬೇಡಿರಿ, ನಾನು ಫೋನ್ ಮಾಡಿದರೆ ನಿಮಗೆ ನಂಬಿಕೆ ಬರುತ್ತಿಲ್ಲ ಫ್ರಾಂಕ್ ಕಾಲ್ ಎಂದು ಹೇಳುತ್ತಿದ್ದೀರಾ ದಯವಿಟ್ಟು ನನಗೆ ನಿಮ್ಮನ್ನು ಭೇಟಿ ಮಾಡಲು ಅವಕಾಶ ಕೊಡಿ ಎಂದು ರಿಕ್ವೆಸ್ಟ್ ಅಭಿಜಿತ್ ಮಾಡಿದಾಗ
ಓಕೆ ನಿಮಗೆ ನನ್ನನ್ನು ಭೇಟಿ ಮಾಡಲೇಬೇಕೆಂದಿದ್ದರೆ ನಾನು ಹೇಳುವ ಸ್ಥಳಕ್ಕೆ ನಾಳೆ ಬಂದು ಸಂಜೆ ಭೇಟಿ ಮಾಡಬಹುದು ಎಂದು ಹೇಳಿ ಅಭಿಜಿತ್ ಹೋಟೆಲ್ ನ ವಿಳಾಸ ಕೊಡುತ್ತಾನೆ.
ವಿಕ್ರಮ್ ಥ್ಯಾಂಕ್ಸ್ ಸಾರ್ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ
ಮಾರನೇ ದಿನ ಸಂಜೆ ಅಭಿಜಿತ್ ಹೇಳಿದ್ದ ಹೋಟೆಲ್ ಗೆ ಬಂದು ಒಂದು ಲೋಟ ಕಾಫಿ ಆರ್ಡರ್ ಮಾಡಿ ಹೀರುವಷ್ಚರಲ್ಲಿ, ಅಭಿಜಿತ್ ಬಂದು ಫೋನ್ ಮಾಡಿ ಎಲ್ಲಿದ್ದೀರಾ ಎಂದು ಕೇಳಿದಾಗ
ಹೋಟೆಲ್ ಒಳಗೆ ಇರುವನೆಂದು ವಿಕ್ರಮ್ ಹೇಳಲು
ಅಭಿಜಿತ್ ಹೋಟೆಲ್ ಒಳಗೆ ಬಂದು ಅಕ್ಕ ಪಕ್ಕ ನೋಡುತ್ತಿರಲು
ವಿಕ್ರಮ್ ಕೈ ಎತ್ತಿ ಹಾಯ್ ಎನ್ನುತ್ತಾನೆ
ಅಭಿಜಿತ್ ವಿಕ್ರಮ್ ಇದ್ದಲ್ಲಿಗೆ ಬಂದಾಗ
ಗ್ಲಾಡ್ ಟು ಮೀಟ್ ಯು ಎಂದು ಹೇಳಿ, ನಿನ್ನೆ ಫೋನ್ ಮಾಡಿದ್ದೆ ಆದರೆ ನಿಮಗೆ ನಂಬಿಕೆ ಬರಲಿಲ್ಲ.ಅದಕ್ಕೆ ಪರ್ಸನಲ್ ಆಗಿ ಮೀಟ್ ಮಾಡೋಣವೆಂದು ಹೇಳಿದ್ದೆ ಎಂದು ವಿಕ್ರಮ್ ಹೇಳಲು
ಅಭಿಜಿತ್ ಅಸಹನೆಯಿಂದಲೇ ಈಗ ಏನು ಹೇಳಬೇಕೆಂದಿದ್ದೀರೋ ಹೇಳಿ ನಾನು ಬೇಗ ಹೋಗಬೇಕೆಂದು ತಿಳಿಸಲು
ನಾನು ಬೇರೆ ಏನೂ ಹೇಳುವುದಿಲ್ಲ, ನಾನು ಆಶಾ ಇಬ್ಬರೂ ತುಂಬಾ ಪ್ರೀತಿಸುತ್ತಿದ್ದೇವೆಂದು ತನ್ನ ಮೊಬೈಲಿನಲ್ಲಿದ್ದ ತಾನೂ ಹಾಗೂ ಆಶಾ ಜೊತೆಯಾಗಿ ತೆಗೆಸಿಕೊಂಡಿದ್ದ ಕೆಲವು ಫೋಟೋಗಳನ್ನು ಅಭಿಜಿತ್ ಗೆ ತೋರಿಸಿ ದಯವಿಟ್ಟು ನಮ್ಮ ಪ್ರೀತಿಗೆ ಅಡ್ಜಬರದೆ ಬೇರೆ ಯಾವುದಾದರೂ ಹುಡುಗಿಯನ್ನು ನೋಡಿ ಮದುವೆ ಮಾಡಿಕೊಂಡು ಸುಖವಾಗಿರಿ ಎಂಬ ವಿಕ್ರಮ್ ಮಾತಿಗೆ
ಅಭಿಜಿತ್ ಕೂಡಾ ಇದರಲ್ಲಿ ನಮ್ಮಿಬ್ಬರ ಮದ್ಯೆ ವೈಮನಸ್ಯವೇಕೆ ನೀವಿಬ್ಬರೂ ಪ್ರೀತಿಸುತ್ತಿರುವಾಗ ನಿಮ್ಮ ಪ್ರೀತಿಗೆ ಭಂಗ ಉಂಟು ಮಾಡಲು ನಾನು ಇಚ್ಛಿಸುವುದಿಲ್ಲ. ನಮ್ಮ ತಂದೆಗೆ ಹೇಳಿ ಈ ಸಂಬಂಧವನ್ಮು ಡ್ರಾಪ್ ಮಾಡುವಂತೆ ಹೇಳುತ್ತೇನೆಂದಾಗ
ವಿಕ್ರಮ್ ನಗುತ್ತಾ ಅಭಿಜಿತ್ ಕೈ ಕುಲುಕಿ ತುಂಬಾ ಥ್ಯಾಂಕ್ಸ್ ಸಾರ್ ಎಂದು ಹೇಳಿದಾಗ
ಓಕೆ ನಾನಿನ್ನು ಬರುತ್ತೇನೆಂದು ಹೇಳಿ ಅಭಿಜಿತ್ ಹೊರಟ ನಂತರ
ವಿಕ್ರಮ್ ಕೂಡಾ ಮನೆಗೆ ಬರುತ್ತಾನೆ.
ಮಾರನೇ ದಿನ ವಿಕ್ರಮ್ ಮೊಬೈಲ್ ರಿಂಗಣಿಸಿದಾಗ, ವಿಕ್ರಮ್ ಯಾವುದೆಂದು ನೋಡಲು ಹೊಸ ನಂಬರ್ ಆಗಿದ್ದರಿಂದ ರಿಸೀವ್ ಮಾಡದೆ ಸುಮ್ಮನಾಗಿರುತ್ತಾನೆ.
ವಿಕ್ರಮ್ ನ ಮೊಬೈಲ್ ಮೂರು ಸಲ ರಿಂಗಣಿಸಿದಾಗ ಛೇ ಯಾರಿವರು ಇಷ್ಟೊಂದು ಸಲ ಫೋನ್ ಮಾಡುತ್ತಿದ್ದಾರೆಂದುಕೊಂಡು ಅಸಹನೆಯಿಂದ ಹಲೋ ಎನ್ನಲು
ಆ ಕಡೆಯಿಂದ ವಿಕ್ರಮ್ ಎನ್ನುವವರು ನೀವೇನಾ ಎಂದು ಪ್ರಶ್ನಿಸಿದಾಗ
ಹೌದು ನಾನೇ ವಿಕ್ರಮ್ ನೀವು ಯಾರೆಂದು ಕೇಳಲು
ನಾನು ಪೋಲೀಸ್ ಇನ್ಸ್ಪೆಕ್ಟರ್ ಮಾತನಾಡುತ್ತಿರುವುದು ಎನ್ನುತ್ತಾರೆ
ನನಗೆ ಏಕೆ ಸಾರ್ ಫೋನ್ ಮಾಡಿದ್ರೀ? ನಾನೇನು ಮಾಡಿದ್ದೇನೆಂದು ವಿಕ್ರಮ್ ಪ್ರಶ್ನಿಸಲು
ಇನ್ಸ್ ಪೆಕ್ಟರ್ ರವರು ನಿಮ್ಮ ಮೇಲೆ ಕಂಪ್ಲೇಂಟ್ ಬಂದಿದೆ ಎನ್ನುತ್ತಾರೆ
ವಿಕ್ರಮ್ ಗೆ ಗಾಬರಿಯಾಗಿ ಯಾರು ಸಾರ್ ನನ್ನ ಮೇಲೆ ಕಂಪ್ಲೇಂಟ್ ಕೊಟ್ಟಿರುವುದೆಂದು ವಿಕ್ರಮ್ ಪ್ರಶ್ನಿಸಿದಾಗ
ಪುರುಷೋತ್ತಮ್ ರವರು ನಿಮ್ಮ ಮೇಲೆ ಕಂಪ್ಲೇಂಚ್ ಕೊಟ್ಟಿದ್ದಾರೆಂದು ಇನ್ಸ್ ಪೆಕ್ಟರ್ ತಿಳಿಸಿದಾಗ
ಪುರುಷೋತ್ತಮ್ ಯಾರೆಂದು ವಿಕ್ರಮ್ ಪ್ರಶ್ನಿಸಲು
ಅಭಿಜಿತ್ ಎಂಬುವವರ ತಂದೆ ಎಂದು ಹೇಳಿದಾಗ
ಸಾರ್ ನಾನೇನು ಮಾಡಿದೆನೆಂದು ನನ್ನ ಮೇಲೆ ಕಂಪ್ವೇಂಟ್ ಕೊಟ್ಟಿದ್ದಾರೆಂದು ವಿಕ್ರಮ್ ಪ್ರಶ್ನಿಸುತ್ತಾನೆ.
ನೀವು ಅವರು ಮದುವೆಯಾಗಬೇಕೆಂದಿರುವ ಹುಡುಗಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದೀರಂತೆ ಅದೂ ಅಲ್ಲದೆ ಆ ಹುಡುಗಿಯನ್ನು ಮದುವೆಯಾದರೆ ನೆಟ್ಟಗಿರುವುದಿಲ್ಲವೆಂದು ಅಭಿಜಿತ್ ಎಂಬುವವರಿಗೆ ಧಮ್ಕಿ ಹಾಕಿರುವುದಲ್ಲದೆ ಜೀವ ಬೆದರಿಕೆಯನ್ನೂ ಹಾಕಿದ್ದೀರೆಂದು ಇನ್ಸ್ ಪೆಕ್ಟರ್ ಹೇಳಲು
ಸಾರ್ ನಾನು ಯಾರಿಗೂ ಧಮ್ಕಿ ಹಾಕಿಲ್ಲಾ ಸಾರ್ ಜೀವ ಬೆದರಿಕೆಯನ್ನೂ ಹಾಕಿಲ್ಲವೆಂದು ವಿಕ್ರಮ್ ಹೇಳಿ, ಅಭಿಜಿತ್ ಮದುವೆಯಾಗಬೇಕೆಂದಿರುವ ಹುಡುಗಿ ನಾನು ಮೊದಲಿನಿಂದಲೂ ಪ್ರೀತಿಸುತ್ತಿದ್ದೇವೆಂಬ ವಿಚಾರ ಮಾತ್ರ ಅವರಿಗೆ ತಿಳಿಸಿ ನಮ್ಮ ಪ್ರೀತಿಗೆ ಅಡ್ಡಬರಬೇಡವೆಂದು ಕೇಳಿದ್ದೆ ,ಅದಕ್ಕೆ ಅವರೂ ಒಪ್ಪಿದ್ದರು ಸಾರ್ ಅಷ್ಟೇ ಎಂದು ವಿಕ್ರಮ್ ಹೇಳಲು
ನೋಡ್ರೀ ಅದೆಲ್ಲಾ ನನಗೆ ಗೊತ್ತಿಲ್ಲ ಇನ್ನೊಂದು ಸಲ ಈ ರೀತಿ ನಿಮ್ಮ ಮೇಲೆ ಕಂಪ್ಲೇಂಟ್ ಬಂದರೆ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆಂದು ಹೇಳಿ ಇನ್ಸ್ ಪೆಕ್ಟರ್ ರವರು ಫೋನ್ ಆಫ್ ಮಾಡುತ್ತಾರೆ
ಈ ಅಭಿಜಿತ್ ನ ನಂಬಲೇಬಾರದು, ನನ್ನೆದುರಿಗೆ ನಿಮ್ಮ ಪ್ರೀತಿಗೆ ಅಡ್ಡಬರುವುದಿಲ್ಲವೆಂದು ಹೇಳಿ ಈಗ ನನ್ನ ಮೇಲೆ ಕಂಪ್ಲೇಂಟ್ ಕೊಟ್ಟು ತನ್ನ ಕಂತ್ರಿ ಬುದ್ದಿ ತೋರಿಸಿದ್ದಾನೆ. ಇವನನ್ನು ಸುಮ್ಮನೆ ಬಿಡಬಾರದೆಂದು ವಿಕ್ರಮ್ ನಿಶ್ಚಯಿಸುತ್ತಾನೆ.
ಮುಂದುವರೆಯುತ್ತದೆ
ಡಾ. ಎನ್. ಮುರಳೀಧರ್ ವಕೀಲರು ಹಾಗೂ ಸಾಹಿತಿ ನೆಲಮಂಗಲ
-
ಈ ಸಂಚಿಕೆಯಿಂದ ತಿಳಿದು ಬರುವ ಮುಖ್ಯವಾದ ಅಂಶ ವೇನೆಂದರೆ ::
- ಮನುಷ್ಯ ತಾನು ಒಳ್ಳೆಯ ರೀತಿ ಹೋಗಬೇಕೆಂದುಕೊಂಡು ಎಷ್ಟೇ ಪ್ರಯತ್ನಪಟ್ಟರೂ ಕೆಲವೊಮ್ಮೆ ಪರಿಸ್ಥಿತಿಯು ಅನಿರೀಕ್ಷಿತ ತಿರುವು ಪಡೆದು ಅವನ ವಿರುದ್ಧವೇ ಬಂದು ನಿಲ್ಲುತ್ತದೆ. ಆಗ ಎಲ್ಲರಿಗೂ ಆ ಮನುಷ್ಯನೇ ತಪ್ಪಿತಸ್ಥನೆಂಬ ಭಾವನೆ ಮೂಡುತ್ತದೆ. ಇದರಿಂದ ಅನಾವಶ್ಯಕವಾಗಿ ದ್ವೇಷ ಉಂಟಾಗುತ್ತದೆ. ಇದಕ್ಕೆ ಕಾರಣರಾರು ಎಂದು ತಿಳಿಯುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ.