ಅಭಿಲಾಷೆ ಕಾದಂಬರಿ ಸಂಚಿಕೆ -26
ಹಿಂದಿವ ಸಂಚಿಕೆಯಲ್ಲಿ
ಬಲವಂತದಿಂದ ತನ್ನ ತಂದೆಯನ್ನು ಆಶ ಊಟಕ್ಕೆ ಕರೆದುಕೊಂಡು ಬಂದು ಮೇಜಿನ ಮುಂದೆ ಕುಳಿತುಕೊಂಡು ಅಮ್ಮನಿಗೆ ಊಟ ಬಡಿಸಲು ಹೇಳುತ್ತಾಳೆ
ಕಥೆಯನ್ನು ಮುಂದುವರೆಸುತ್ತಾ
ಆಶಾ ತನ್ನ ತಂದೆಯೊಡನೆ ಊಟಕ್ಕೆ ಕುಳಿತಿದ್ದನ್ನು ಕಂಡ ಅವಳಮ್ಮನಿಗೆ ಹೇಗೋ ಅಪ್ಪ ಮಗಳು ಒಂದಾದರಲ್ಲಾ ಎಂದು ತುಂಬಾ ಸಂತೋಷವಾಗಿರುತ್ತದೆ.
ಊಟ ಮಾಡುತ್ತಿರುವಾಗ, ಕೋದಂಡರಾಂ ರವರು ಮದುವೆಯ ವಿಷಯ ಮಾತನಾಡಿದರೆ ಇನ್ನೆಲ್ಲಿ ಮಗಳು ಅರ್ಧಕ್ಕೆ ಊಟ ಬಿಟ್ಟು ಹೋಗುತ್ತಾಳೋ ಎಂಬ ಅಂಜಿಕೆಯಿಂದ ಮೌನವಾಗಿಯೇ ಊಟ ಮಾಡುತ್ತಿರುತ್ತಾರೆ.
ಆಶಾಳು ಸಹ ಮೌನವಾಗಿಯೇ ಊಟ ಮಾಡುತ್ತಿರುವ ಸಮಯದಲ್ಲಿ,
ಹದಿನೈದು ದಿನಗಳ ಹಿಂದೆ ಆಶಾಳನ್ನು ನೋಡಲು ಬಂದಿದ್ದ ಸೇನೆಯಲ್ಲಿರುವ ಹುಡುಗನ ತಂದೆಯು ಫೋನ್ ಮಾಡಿರುವುದನ್ನು ನೋಡಿ, ತಕ್ಷಣ ಹಲೋ ಸಾರ್ ನಮಸ್ಕಾರ ಎಂದಾಗ
ಆ ಕಡೆಯಿಂದ ಹುಡುಗನ ತಂದೆ ಪ್ರತಿ ನಮಸ್ಕಾರವನ್ನು ಹೇಳಿ, ನಿಮ್ಮ ಮಗಳನ್ನು ನಮ್ಮ ಮನೆಯ ಸೊಸೆಯನ್ನಾಗಿ ಮಾಡಿತೊಳ್ಳುವ ಬಗ್ಗೆ ಕಾರಣಾಂತರದಿಂದ ಬೇಗ ನಮ್ಮ ನಿರ್ಧಾರವನ್ನು ಕೆಗೆದುಕೊಳ್ಳಲು ಆಗಲಿಲ್ಲ, ಇದಕ್ಕಾಗಿ ಕ್ಷಮೆ ಕೇಳುತ್ಕಾ, ನಿಮ್ಮ ಮಗಳನ್ನು ನಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಎಲ್ಲರೂ ಒಪ್ಪಿದ್ದೇವೆ. ಆದಷ್ಟೂ ಶೀಘ್ರವಾಗಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಶುಭಕಾರ್ಯ ಬೇಗ ಮುಗಿಸಬಹುದೆಂದು ಕೇಳಿದಾಗ
ಬಹಳ ಸಂತೋಷದ ವಿಚಾರ ಆದಷ್ಚೂ ಶೀಘ್ರವಾಗಿ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇನೆ ಎನ್ನುತ್ತಾರೆ ಕೋದಂಡರಾಮ್
ಧನ್ಯವಾದಗಳೆಂದು ಹುಡುಗನ ತಂದೆ ಹೇಳಿದ ನಂತರ ವಂದನೆಗಳೆಂದು ಕೋದಂಡರಾಮ್ ರವರು ಹೇಳಿ ಫೋನ್ ಆಫ್ ಮಾಡುತ್ತಾರೆ.
ಅಲ್ಲೇ ಇದ್ದ ಅವರ ಪತ್ನಿಯು ಯಾರದ್ರೀ ಫೋನ್ ಬಹಳ ಸಂತೋಷವೆಂದು ಹೇಳಿದ್ರೀ? ಏನಾದರೂ ಪ್ರಮೋಷನ್ ಬಂತಾ ಎಂದು ಕೇಳಲು
ಇರೋದು ಒಂದು ವರ್ಷ ಸರ್ವೀಸ್ ಈಗ ಪ್ರಮೋಷನ್ ಯಾರಿಗೆ ಬೇಕು? ಅವರು ಕೊಟ್ಟರೂ ನಾನು ತೆಗೆದುಕೊಳ್ಳುವುದಿಲ್ಲ.
ಅಯ್ಯೋ ಯಾರಾದ್ರೂ ಬಂದ ಪ್ರಮೋಷನ್ ಬೇಡಾ ಎನ್ನುತ್ತಾರಾ ಎಂದು ಅವರ ಪತ್ನಿ ಆಶ್ಚರ್ಯಕರವಾಗಿ ಕೇಳಲು
ತುಂಬಾ ಸರ್ವೀಸ್ ಇದ್ದರೆ ಪ್ರಮೋಷನ್ ತೆಗೆದುಕೊಂಡು ಯಾವ ಊರಿಗೆ ಕಳುಹಿಸಿದರೂ ಹೋಗಬಹುದು, ಇರುವುದು ಒಂದು ವರ್ಷ ಅಷ್ಚೇ. ಈಗ ಪ್ರಮೋಷನ್ ತೆಗೆದುಕೊಂಡರೆ ಯಾವುದಾದರೂ ದೂರದ ಊರಿಗೆ ಕಳುಹಿಸಿದರೇನು ಮಾಡುವುದು? ಯಾವ ಪ್ರಮೋಷನ್ ಪಡೆಯದೆ ಇಲ್ಲೇ ಇದ್ದು ಬಂದಿರುವ ಜಮೀನಿನ ಪರಿಹಾರದ ಹಣದಲ್ಲಿ ಮಗಳ ಮದುವೆ ಮಾಡಿ ನಂತರ ಹೊಸದಾಗಿ ಸ್ವಂತ ಮನೆಯನ್ನು ಕಟ್ಚಿಕೊಂಡು ಹಾಯಾಗಿರುತ್ತೇನೆಂದು ಕೋದಂಡರಾಂ ಹೇಳಲು
ಈಗ ಬಂದಿದ್ದ ಫೋನ್ ಯಾವುದೆಂದು ಅವರ ಪತ್ನಿ ಪ್ರಶ್ನಿಸಿದಾಗ
ಓ ಅದಾ ನಿನ್ನ ಪ್ರಶ್ನೆಗೆ ಉತ್ತರಿಸುವುದರಲ್ಲಿ ಫೋನ್ ಮಾಡಿದ ವಿಷಯವೇ ಮರೆತು ಹೋಯ್ತು ನೋಡು ಎನ್ನುತ್ತಾ, ಹದಿನೈದು ದಿನಗಳ ಹಿಂದೆ ಆರ್ಮಿಯಲ್ಲಿರುವ ಹುಡುಗ ಬಂದಿದ್ದರಲ್ಲಾ ಅವರ ಮನೆಗೆ ನಮ್ಮ ಮಗಳನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಒಪ್ಪಿದ್ದಾರಂತೆ, ನಿಮ್ಮ ಅಭಿಪ್ರಾಯ ತಿಳಿಸಲು ಕೇಳಿದ್ದಾರೆಂದು ಕೋದಂಡರಾಂ ಹೇಳಲು
ಈ ವಿಷಯ ಕೇಳಿದ ತಕ್ಷಣ ಮೌನವಾಗಿ ಊಟ ಮಾಡುತ್ತಿದ್ದ ಆಶಾ
ಮಾತನಾಡಿ, ಅಪ್ಪಾ ಅವರು ಹೇಳಿದ ತಕ್ಷಣ ನಮ್ಮ ಮಗಳಿಗೆ ಮದುವೆ ಗೊತ್ತಾಗಿದೆ ಎಂದು ಹೇಳಬಾರದಿತ್ತಾ ಎಂದು ಆಕ್ಷೇಪಿಸಿದಾಗ
ಮಗಳೇ ಅವರು ನಮ್ಮ ಮನೆತನ, ನಿನ್ನ ಗುಣವನ್ನು ಮೆಚ್ಚಿ ಒಪ್ಪಿದ್ದೇವೆಂದು ಹೇಳಿದ ತಕ್ಷಣ ನಾವು ಅವರ ಮುಖದ ಮೇಲೆ ಹೊಡೆದಂತೆ ಮದುವೆ ನಿಶ್ಚಿತವಾಗಿದೆ ಎಂದು ಹೇಳುವುದು ಸಮಂಜಸವಲ್ಲಮ್ಮಾ ಅದು ಹೃದಯವಂತರ ಲಕ್ಷಣ ಕೂಡಾ ಅಲ್ಲವಮ್ಮಾ, ಈ ವಿಚಾರವನ್ನು ನಿಧಾನವಾಗಿ ಹೇಳಬೇಕೆಂದು ಕೋದಂಡರಾಂ ನುಡಿಯಲು
ಆಯ್ಕಪ್ಪಾ ನಿಧಾನವಾಗಿಯೇ ಎರಡು ದಿನಗಳ ನಂತರ ನನ್ನ ಮಗಳಿಗೆ ಮದುವೆ ನಿಶ್ಚಯವಾಗಿದೆ ನೀವು ಲೇಟಾಗಿ ಹೇಳಿದ್ರೀ ಸಾರಿ ಎಂದು ಹೇಳಿ ಕೈ ತೊಳೆದುಕೋ ಎಂದು ಆಶ ಸಿಡುಕಿನಿಂದ ಹೇಳುತ್ತಾಳೆ.
ಮಗಳೇ, ಇಷ್ಟಕ್ಕೂ ನಿನಗೆ ಮದುವೆ ಎಲ್ಲಿ ಗೊತ್ತಾಗಿದೆಯಮ್ಮಾ ? ಎಂದು ಕೋದಂಡರಾಮ್ ಮಾತಿಗೆ
ಅಪ್ಪಾ ಪುನಃ ಹಿಂದಿನ ವಿಷಯಕ್ಕೆ ಹೋಗಿ ಅನ್ ಸೀನ್ ಕ್ರಿಯೇಟ್ ಮಾಡಬೇಡಪ್ಪಾ, ನಾನು ವಿಕ್ರಮ್ ನ ಪ್ರೀತಿಸುತ್ತಿದ್ದೇನೆ ಮದುವೆಯಾದರೆ ಅವರನ್ನೇ ಆಗುತ್ತೇನೆ. ಇದರಿಂದ ಯಾವ ರೀತಿಯಲ್ಲೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಆಶಾ ಹೇಳಲು
ಸಾಲಗಾರನಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಿಲ್ಲವೆಂದು ಅವತ್ತೇ ಹೇಳಿಲ್ಲವಾ? ಅವರು ಸಾಲದಿಂದ ಮುಕ್ತರಾಗಿ ಬರಲಿ ನಂತರವಷ್ಟೇ ನಿನ್ನನ್ನು ಅವರಿಗೆ ಮದುವೆ ಮಾಡಿ ಕೊಡುತ್ತೇನೆ ಇಲ್ಲದಿದ್ದರೆ ಈಗ ಬಂದಿರುನ ಹುಡುಗನ ಜೊತೆ ಮದುವೆ ಮಾಡಿ ಮುಗಿಸುತ್ತೇನೆ. ನೀನು ಯಾವ ಸಾಲದ ಚಿಂತೆಯಿಲ್ಲದೆ ಹಾಯಾಗಿರಬಹುದೆಂಬ ಕೋದಂಡರಾಂ ಮಾತಿಗೆ
ಅಪ್ಪಾ ಅವರಿಗೆ ಇರುವುದು ಕೇವಲ ಒಂದು ಕೋಟಿ ಸಾಲವಷ್ಟೇ ಕಣಪ್ಪಾ, ಅವರಿಗೆ ಬರುವ ಹಣವೆಲ್ಲಾ ಬರದೆ ನಿಂತು ಹೋಗಿದೆಯಂತೆ ಎಲ್ಲಾ ಹಣ ಬಂದರೆ ಒಟ್ಟು ಇಪ್ಪತ್ತೈದು ಕೋಟಿಗಳಿಗಿಂತ ಹೆಚ್ಚಿಗೆ ಬರುತ್ತದಂತೆ ಎಂದು ಆಶ ಹೇಳಲು
ಅವರು ಹೇಳಿದರು ನೀನು ಕೇಳಿದೆ ಅಲ್ಲವಾ?, ಇಪ್ಪತ್ತೈದು ಕೋಟಿ ರೂಪಾಯಿ ಬರಬೇಕೆಂದು ಎಣ್ಣೆ ಗಡಿಗೆ ಮೇಲೆ ಬರೆದಿಟ್ಟುಕೊಳ್ಳುವಂತೆ ಅವರಿಗೆ ಹೇಳು, ನೋಡು ಅವೆಲ್ಲಾ ಸುಳ್ಳು ನೀನು ನಂಬಿ ಮೋಸ ಹೋಗಿ ನಂತರ ಪಶ್ಚಾತ್ತಾಪ ಪಡಬೇಡವೆಂಬ ಕೋದಂಡರಾಂ ಮಾತಿಗೆ,
ಅಪ್ಪಾ ಒಂದು ಕೋಟಿ ರೂಪಾಯಿ ಕೊಟ್ಚರೆ ಮೂರು ತಿಂಗಳೊಳಗೆ ವಾಪಸ್ ಕೊಡುತ್ತಾರಂತೆ, ಅವರ ಮನೆಯ ಸೊಸೆಯಾಗುವವಳು ಅಷ್ಟೂ ಸಹಾಯ ಮಾಡದಿದ್ದರೆ ಹೇಗಪ್ಪಾ ಎಂದು ಆಶಾ ನುಡಿಯಲು
ಧಾರಾಳವಾಗಿ ಕೊಡಮ್ಮಾ ನಿನ್ನನ್ನು ಯಾರು ಬೇಡವೆನ್ನುತ್ತಾರೆಂಬ ಕೋದಂಡರಾಂ
ಆಶಾಳಿಗೆ ಖುಷಿಯಾಗಿ, ಅಪ್ಪಾ ಯಾವಾಗ ಕೊಡಲೆಂದು ಕೇಳಿದಾಗ
ಯಾವಾಗ ಹೇಕಾದರೂ ಕೊಡಮ್ಮಾ ನಾಳೆಯೇ ಕೊಟ್ಚು ಅವರನ್ನು ಋಣ ಮುಕ್ತರನ್ನಾಗಿ ಮಾಡಿದರೆ ನಾನು ಈ ಮದುವೆಗೆ ಒಪ್ಪುತ್ತೇನೆಂದು ಕೋದಂಡರಾಂ ಹೇಳುತ್ತಾರೆ
ಆಶಾ ನಗುತ್ತಾ ಹಾಗಾದರೆ ನಾಳೆಯೇ ಅವರಿಗೆ ಕೊಡುತ್ತೇನೆ ಎಂದು ಪುನಃ ಆಶಾ ಹೇಳಲು
ನಾನು ಆಗಲೇ ಕೊಡೆಂದು ಹೇಳಿದನಲ್ಲಾ ಮಗಳೇ ಎಂದಾಗ
ಹಾಗಾದರೆ ಒಂದು ಕೋಟಿ ರೂಪಾಯಿ ಅವರಿಗೆ ಕೊಡಪ್ಪಾ ಮೂರು ತಿಂಗಳೊಳಗೆ ಕೊಡುತ್ತಾರೆ, ನಂತರ ಮದುವೆ ಮಾಡುವಿಯಂತೆ ಎಂದಾಗ
ನಾನು ಕೊಡುತ್ತೇನೆಂದು ಹೇಳಲಿಲ್ಲ, ನಿನ್ನ ಬಳಿ ಇದ್ದರೆ ಕೊಡಮ್ಮಾ ಎಂದು ಹೇಳಿದೆ ಎಂದಾಗ
ಅಪ್ಪಾ ಪ್ರತಿಯೊಂದಕ್ಕೂ ಜೋಕ್ ಮಾಡಬೇಡಪ್ಪಾ, ನನ್ನ ಬಳಿ ಅಷ್ಟೊಂದು ಹಣ ಎಲ್ಲಿಂದ ಬರಬೇಕು? ಕೆಲಸಕ್ಕೆ ಸೇರಿ ಇನ್ನೂ ಆರು ತಿಂಗಳು ಕೂಡಾ ಆಗಿಲ್ಲವೆಂದು ಆಶಾ ಹೇಳಲು
ನನ್ನ ಬಳಿಯೂ ಅಷ್ಟೊಂದು ಹಣವಿಲ್ಲಮ್ಮಾ ಎನ್ನುತ್ತಾರೆ ಕೋದಂಡರಾಂ
ಅಪ್ಪ ಜಮೀನು ಪರಿಹಾರದ ಹಣ ಎರಡು ಕೋಟಿ ರೂಪಾಯಿ ಬಂದಿದೆ ಅದರಲ್ಲಿ ನನ್ನ ಮದುವೆ ಮಾಡಿ ಉಳಿದ ಹಣದಲ್ಲಿ ಹೊಸದಾಗಿ ಮನೆ ಕಟ್ಟುತ್ತೇನೆಂದು ಈಗತಾನೆ ಹೇಳಿದೆ ಎಂದು ಆಶಾ ನುಡಿಯಲು
ಹೌದಮ್ಮಾ ಎರಡು ಕೋಟಿ ರೂಪಾಯಿ ಬಂದಿರುವುದೂ ನಿಜ ಅದನ್ನು ಎಫ್.ಡಿ ಮಾಡಿರುವುದೂ ನಿಜ ಕಣಮ್ಮಾ, ಆದರೆ ಅದರಲ್ಲಿ ಒಂದು ಕೋಟಿ ರೂಪಾಯಿ ಕೊಟ್ಟರೆ ನಿನ್ಮ ಮದುವೆ ಖರ್ಚಿಗೆ ನಾನೆಲ್ಲಿ ಹೋಗಲಿ ಎಂಬ ಕೋದಂಡರಾಂ ಮಾತಿಗೆ,
ಒಂದು ಕೋಟಿ ರೂಪಾಯಿ ಕೊಟ್ಟರೆ ಮೂರು ತಿಂಗಳಲ್ಲೇ ಕೊಡುತ್ತಾರೆ ನಂತರ ಮದುವೆ ಮಾಡಬಹುದೆಂದು ಆಶಾ ಹೇಳುತ್ತಾಳೆ
ನನಗೆ ಅವರ ಮೇಲೆ ನಂಬಿಕೆಯೂ ಇಲ್ಲ ನಾನು ಹಣವನ್ನೂ ಕೊಡುವುದಿಲ್ಲ, ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವ ಕೆಲಸ ನಾನು ಮಾಡುವುದಿಲ್ಲಮ್ಮಾ, ನಮ್ಮ ಪಾಡಿಗೆ ನಾವು ಇದ್ದರೂ ನಮ್ಮ ಬುಡಕ್ಕೆ ತಂದಿಡುತ್ತಿದ್ದೀಯಲ್ಲಾ? ಮದುವೆ ಖರ್ಚಿದೆ ಹೊಸದಾಗಿ ಮನೆ ಕಟ್ಟುವ ಯೋಚನೆ ಇದೆ ಎಂದು ಅವಳಪ್ಪ ನುಡಿಯಲು
ಅಪ್ಪಾ ಮದುವೆಯನ್ನು ಸಿಂಪಲ್ಲಾಗಿ ಮಾಡಿದರೆ ಹಣ ಉಳಿಯುತ್ತದೆಂಬ ಆಶಾ ಮಾತಿಗೆ,
ಕೋದಂಡರಾಮ್ ರವರು ನಗುತ್ತಾ, ಹೌದಮ್ಮಾ ನಾವು ಎಷ್ಟೇ ಸಿಂಪಲ್ಲಾಗಿ ಮಾಡುತ್ತೇವೆಂದು ಹೇಳಿದರೂ ಒಂದರ ಹಿಂದೆ ಇನ್ನೊಂದು ಖರ್ಚು ಉಂಟಾಗಿ ಹಣ ಖರ್ಚಾಗುವುದೇ ಗೊತ್ತಾಗುವುದಿಲ್ಲಮ್ಮಾ, ಇರುವ ಒಬ್ಬ ಮಗಳ ಮದುವೆ ಅದ್ದೂರಿ ಇಲ್ಲದಿದ್ದರೂ ಕಡೇಪಕ್ಷ ನೆಂಟರು ಸ್ನೇಹಿತರು ಗಳನ್ನು ಕರೆಯಲೇ ಬೇಕು,ಖರ್ಚು ಆಗುವುದು ಆಗೇ ಆಗುತ್ತದೆಂದು ಹೇಳಲು
ನನ್ನ ಮದುವೆಗೆ ಎಷ್ಟು ಖರ್ಚು ಮಾಡಬೇಕೆಂದಿದ್ದೀಯೋ ಅದನ್ನು ನನಗೇ ಕೊಟ್ಟುಬಿಡು, ನಾನು ಏನಾದರೂ ಮಾಡಿಕೊಳ್ಳುತ್ತೇನೆಂದು ಆಶಾ ಹೇಳಲು.
ಹಣವೇನೂ ಹುಣಸೇಬೀಜವಲ್ಲಮ್ಮಾ ನಿನ್ನ ಇಷ್ಟಬಂದಂತೆ ಮಾಡಿಕೊಳ್ಳಲು ಎಂದು ಅವಳಪ್ಪನ ಮಾತಿಗೆ
ಅಪ್ಪಾ ಕಡೆಯದಾಗಿ ಕೇಳುತ್ತಿದ್ದೇನೆ, ನನಗೆ ಹಣವನ್ನಾದರೂ ಕೊಡು ಇಲ್ಲದಿದ್ದರೆ ಆಸ್ತಿಯಲ್ಲಿ ನನ್ನ ಭಾಗ ಕೊಟ್ಟುಬಿಡು ನಾನಂತೂ ಅವರ ಸಾಲ ತೀರಿಸಲೇ ಬೇಕು ಎಂದು ಹೇಳಿದಾಗ
ಈ ಮಾತೆಲ್ಲವನ್ನೂ ನೀನು ಲೌವ್ ಮಾಡಿದ್ದೀನೆಂದು ಹೇಳುತ್ತಿದ್ದೀಯಲ್ಲಾ ಆ ಮನೆಹಾಳ ಹೇಳಿಕೊಟ್ಟನಾ ಎಂದು ಕೋದಂಡರಾಂರವರು ಕೋಪದಿಂದ ಕೇಳಿದಾಗ
ಅಪ್ಪಾ ಅವರು ತುಂಬಾ ಒಳ್ಳೆಯವರು ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡಬೇಡಾ ನಾನೇ ಅವರಿಗೆ ಹಣವನ್ನು ಕೊಡುತ್ತೇನೆಂದು ಹೇಳಿದ್ದೇನೆಂದು ಆಶಾ ಹೇಳಲು
ನೋಡು ನೀನು ಅವರಿಗೆ ಹಣವನ್ನೂ ಕೊಡುವುದು ಬೇಡಾ, ಅವನನ್ನು ಮದುನೆಯಾಗುವುದೂ ಬೇಡಾ, ಬಂದಿರುವ ಹುಡುಗ ತುಂಬಾ ಒಳ್ಳೆಯವನಿದ್ದಾನೆ, ಪ್ರಮೋಷನ್ ಬಂದರೆ ಸೈನ್ಯದಲ್ಲಿ ಒಳ್ಳೆಯ ಹುದ್ದೆ ಸಿಗುತ್ತದೆಂದು ಕೋದಂಡರಾಂ ಹೇಳಲು
ಆಶಾ ಕೋಪದಿಂದ ನಾನು ಮದುವೆಯಾದರೆ ವಿಕ್ರಮ್ ನನ್ನೇ ಆಗುತ್ತೇನೆಂದು ಊಟ ಮಾಡುತ್ತಿದ್ದವಳು ತಟ್ಟೆಯನ್ನು ಪಕ್ಕಕ್ಕೆ ತಳ್ಶಿ ಕೈ ತೊಳೆಯಲು ಹೋಗುತ್ತಾಳೆ
ಪ್ರೀತಿ ಇಲ್ಲದೆ ಮನಸ್ಸಿಲ್ಲದ ಮನಸ್ಸಿನಿಂದ ಊಟಕ್ಕೆ ಕರೆದರೆ ಹೀಗೇ ಆಗುವುದೆಂದು ಕೋದಂಡರಾಂ ಹೇಳಿ ತಾವೂ ಕೈ ತೊಳೆಯಲು ಹೋಗುತ್ತಾರೆ
ಮದುವೆ ಮುಗಿಯುವವರೆಗೂ ಅಪ್ಪ ಮಗಳ ಈ ರಾದ್ಧಾಂತ ತಪ್ಪಿದ್ದಲ್ಲವೆಂದು ಅವಳಮ್ಮ ಗೊಣಗುತ್ತಾ ಅಡಿಗೆ ಮನೆಗೆ ಹೋಗುತ್ತಾರೆ
ಮುಂದುವರೆಯುತ್ತದೆ
ಡಾ. ಎನ್.ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ
-
ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ
ಒಂದುಸಲ ಮನಸ್ಥಾಪ ಬಂದು ಬಿಟ್ಟರೆ ಅದನ್ಮು ಪುನಃ ಒಂದು ಮಾಡುವುದಕ್ಕೆ ಆಗುವುದೇ ಇಲ್ಲ. ಅನ್ಯೋನ್ಯತೆಯಿಂದ ಇದ್ದಾಗ ಅಕಸ್ಮಾತ್ ಏನಾದರೂ ಬಾಯಿ ತಪ್ಪಿ ಹೇಳಿದರೂ ಅದನ್ನು ಹಗುರವಾಗಿ ತೆಗೆದುಕೊಂಡು ಬೇಕಂತ ಹೇಳಿಲ್ಲವೆಂದು ಸಮರ್ಥಿಸುತ್ತಾರೆ. ಆದರೆ ಸ್ವಲ್ಪ ನಿಷ್ಠೂರ ಬಂದ ತಕ್ಷಣ ಎಷ್ಚೇ ಸಣ್ಣ ವಿಷಯವಾದರೂ ಅದನ್ನು ದೊಡ್ಡದಾಗಿ ಮಾಡಿ ಇನ್ನೂ ಹೆಚ್ಚಿಗೆ ದ್ವೇಷಿಸುತ್ತಾರೆ.
ಇನ್ನೊಂದು ವಿಚಾರ ಮಕ್ಕಳಿಗೆ ಹಣದ ಬೆಲೆ ಅದರ ಜವಾಬ್ದಾರಿ ಸರಿಯಾಗಿ ತಿಳಿಯುವ ತನಕ ದೊಡ್ಡವರು ತಮ್ಮ ವ್ಯವಹಾರವನ್ನು ಹೇಳಬಾರದು. ಮಕ್ಕಳು ನಮ್ಮವರೆಂದು ಎಲ್ಲವನ್ನೂ ಹೇಳಿಬಿಟ್ಚರೆ ಜವಾಬ್ದಾರಿಯನ್ನು ಮರೆತು ಹೇಗಿದ್ದರೂ ಅಪ್ಪನ ಬಳಿ ಹಣವಿದೆ ಬಿಂದಾಸಾಗಿ ಇರಬಹುದೆಂದು ಯೋಚಿಸಲೂ ಬಹುದು.