ಅಭಿಲಾಷೆ ಕಾದಂಬರಿ ಸಂಚಿಕೆ -25
ಹಿಂದಿನ ಸಂಚಿಕೆಯಲ್ಲಿ
ಸಾಲಗಾರರ ಕುಟುಂಬಕ್ಕೆ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ಕೋದಂಡರಾಂರವರು ಹೇಳಿ ಊಟ ಮಾಡಿ ಕೈ ತೊಳೆಯಲು ಹೋಗುತ್ತಾರೆ
ಕಥೆಯನ್ನು ಮುಂದುವರೆಸುತ್ತಾ
ಕೋದಂಡರಾಂ ರವರು ಸಾಲಗಾರರ ಕುಟುಂಬಕ್ಕೆ ಮಗಳನ್ನುಕೊಡುವುದಿಲ್ಲವೆಂದು ಹೇಳಿ ನಂತರ ಕೈ ತೊಳೆದುಕೊಂಡು ಹೆಗಲ ಮೇಲಿದ್ದ ಟವಲಿನಿಂದ ಕೈ ಒರೆಸಿಕೊಳ್ಳುತ್ತಾ ಬಂದಾಗ
ಅವರ ಪತ್ನಿ ಮಾತನಾಡಿ ನೀವೇ ಡಿಸಿಷನ್ ತೆಗೆದುಕೊಂಡರೆ ಮಗಳು ಒಪ್ಪಬೇಕಲ್ಲಾ ಎಂದು ಕೇಳಲು
ಒಪ್ಪಿಸಲೇ ಬೇಕು ಬೇರೆ ದಾರಿಯೇ ಇಲ್ಲ. ಅವಳಿಗಂತೂ ಬುದ್ದಿಯಿಲ್ಲ ಲೌವ್ ಎಂದು ಅದಕ್ಕೆ ಕಟ್ಟುಬಿದ್ದಿದ್ದಾಳೆಂದರೆ ನಾವು ಸುಮ್ಮನಿರಲು ಆಗುತ್ತದಾ? ಸರಿದಾರಿಗೆ ತರಲೇಬೇಕು ಇಲ್ಲದಿದ್ದರೆ ನಾವೇ ಮಗಳನ್ಮು ಸಂಕಷ್ಟಕ್ಕೆ ತಳ್ಳಿದಂತಾಗುತ್ತದೆ. ನಾನಂತೂ ಇದರಿಂದ ಹಿಂದೆ ಸರಿಯುವುದೇ ಇಲ್ಲವೆಂದು ಖಡಾಖಂಡಿತವಾಗಿ ಹೇಳಿ ತಮ್ಮ ರೂಮಿಗೆ ಹೋಗುತ್ತಾರೆ.
ನಂತರ ರಾತ್ರಿ ಹನ್ನೊಂದು ಗಂಟೆಗೆ ವಿಕ್ರಮ್ ಆಶಾಳಿಗೆ ಫೋನ್ ಮಾಡಿದಾಗ
ಹಲೋ ವಿಕ್ರಮ್ ಊಟವಾಯ್ತಾ? ಎಂದು ಆಶಾ ಪ್ರಶ್ನಿಸಿ, ಇದೇನು ರಾತ್ರಿ ಹನ್ನೊಂದು ಗಂಟೆಗೆ ಫೋನ್ ಮಾಡುತ್ತಿದ್ದೀಯಲ್ಲಾ ನಿದ್ದೆ ಬರಲಿಲ್ಲವಾ ಎಂದಾಗ
ಸದಾ ನಿನ್ನ ನೆನಪಿನಲ್ಲಿರುವಾಗ ನನಗೆ ಎಲ್ಲಿ ನಿದ್ದೆ ಬರುತ್ತದೆ ಡಿಯರ್ ಎಂದು ವಿಕ್ರಮ್ ಹೇಳಲು
ಆದಷ್ಟೂ ಬೇಗ ಮದುವೆಯಾದರೆ ಇಬ್ಬರೂ ಜೊತೆಯಲ್ಲಿರಬಹುದಲ್ಲಾ ಎಂಬ ಆಶಾಳ ಮಾತಿಗೆ
ಹೌದು ಏನು ಮಾಡೋದು ನಮ್ಮಪ್ಪನು ಒಪ್ಪುತ್ತಿಲ್ಲವಲ್ಲಾ?
ಅಯ್ಯೋ ಅವರಿಗೆ ಈ ಮದುವೆ ಇಷ್ಟವಿಲ್ಲವಾ ಎಂದು ಗಾಬರಿಯಿಂದ ಆಶಾ ಕೇಳಿದಾಗ
ಹಾಗೇನಿಲ್ಲ, ನಮ್ಮಪ್ಪನು ಬಿಸಿನೆಸ್ ನಲ್ಲಿ ಸ್ವಲ್ಪ ಲಾಸ್ ನಲ್ಲಿದ್ದಾರೆ, ಇನ್ನು ಮೂರು ತಿಂಗಳಿಗೆ ಸರಿ ಹೋಗತ್ತೆ ಅದಕ್ಕೆ ಅವರು ಮೂರು ತಿಂಗಳಿನವರೆಗೂ ಮದುವೆ ಬೇಡವೆಂದು ಹೇಳುತ್ತಿದ್ದಾರೆ ಮೂರು ತಿಂಗಳು ತಾನೇ ಕಾಯೋಣವೆಂಬ ವಿಕ್ರಮ್ ಮಾತಿಗೆ
ಅಯ್ಯೋ ಮೂರು ತಿಂಗಳು ಮುಂದಕ್ಕೆ ಹಾಕಿದರೆ ಮುಂದಿನ ದಿನಗಳು ಚೆನ್ನಾಗಿಲ್ಲವೆಂದು ಆರು ತಿಂಗಳಿನವೆರೆಗೂ ಹೋಗಬಹುದು ಅಲ್ಲಿಯವರೆಗೆ ಕಾಯಲು ನಾನು ಸಿದ್ದಳಿಲ್ಲ. ಬೇಗ ಮದುವೆೆ ಮುಗಿದರೆ ಬೇರೆ ಯಾವ ರೀತಿಯ ತೊಂದರೆ ಬರುವುದಿಲ್ಲವೆಂದು ಆಶಾ ಹೇಳಲು
ಇದೇನು ಹೀಗೆ ಹೇಳುತ್ತಿದ್ದೀಯಾ ಆಶಾ? ನಮಗೆ ಯಾರು ತೊಂದರೆ ಕೊಡುತ್ತಾರೆಂದು ವಿಕ್ರಮ್ ಆತಂಕದಿಂದ ಕೇಳಿದಾಗ
ಆಶಾ ತನ್ನ ಮನಸ್ಸಿನಲ್ಲಿ ಅಪ್ಪನ ವಿಚಾರ ಹೇಳಿದರೆ ವಿಕ್ರಮ್ ಬೇಸರ ಪಡುತ್ತಾನೆಂದುಕೊಂಡು, ಹಾಗೇನಿಲ್ಲಾ ವಿಕ್ರಮ್ ಅಕಸ್ಮಾತ್ ಏನಾದರೂ ಆದರೆ ಎಂದು ಹೇಳಿದೆ ಅಷ್ಚೇ ಎನ್ನಲು
ನಿನ್ನ ಇಚ್ಛೆಯಂತೆ ಬೇಗ ಮದುವೆಯಾಗಲು ನನಗೆ ಸ್ವಲ್ಪ ಅಡಚಣೆ ಇದೆ ಎಂಬ ವಿಕ್ರಮ್ ಮಾತಿಗೆ
ಏನು ಅಡಚಣೆ ಇದೆ ವಿಕ್ರಮ್ ನನ್ನ ಕೈಲಾದರೆ ನಾವಿಬ್ಬರು ಸೇರಿ ಬಗೆಹರಿಸೋಣವೆಂದು ಆಶಾ ಹೇಳಲು
ಇನ್ನೇನು ಅಡಚಣೆ ಇರುತ್ತದೆ ಆಶಾ ಡಿಯರ್? ಫೈನಾನ್ಷಿಯಲ್ ಪ್ರಾಬ್ಲಮ್ ಅಷ್ಟೇ ಇನ್ನು ಮೂರು ತಿಂಗಳು ಕಳೆದರೆ ನಾವೇ ರಾಜರಾಗುತ್ತೇವೆಂದು ವಿಕ್ರಮ್ ಹೇಳಿದಾಗ
ಆಶಾಳಿಗೆ ಅಪ್ಪ ಹೇಳಿದ್ದು ನೆನಪಿಗೆ ಬಂದು ಎಂಬತ್ತು ಲಕ್ಷ ರೂಪಾಯಿ ಸಾಲದ ಬಗ್ಗೆ ಹೇಳುತ್ತಿರಬೇಕೆಂದುಕೊಂಡು
ಎಷ್ಟು ಹಣದ ಪ್ರಾಬ್ಲಮ್ ಇದೆ ವಿಕ್ರಮ್ ಎಂದು ಆಶ ಪ್ರಶ್ನಿಸಲು
ಸದ್ಯಕ್ಕೆ ಒಂದು ಕೋಟಿ ರೂಪಾಯಿ ಗಳಾದರೆ ಸಾಕು, ನಮಗೆ ಬರಬೇಕಾದ ಹಣ ಬರದೆ ಬಹಳ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದೇವೆ. ಬರುವ ಹಣ ಬಂದರೆ ಅದರಿಂದ ಬೇರೆ ಕಡೆ ಸಿಕ್ಕಿಕೊಂಡಿರುವ ಸಮಸ್ಯೆಯಿಂದ ಹೊರ ಬಹುದು. ನಂತರ ಸುಮಾರು ಇಪ್ಪತ್ತೈದು ಕೋಟಿ ರೂಪಾಯಿಗಳು ನಮ್ಮದಾಗುತ್ತವೆಂದು ವಿಕ್ರಮ್ ಹೇಳಲು
ಓ ಒಂದು ಕೋಟಿ ರೂಪಾಯಿಗಳಿಗೆ ನೀವು ಒದ್ದಾಡುತ್ತಿದ್ದೀರೀ ಅಲ್ಲವೇ ಎಂದು ಆಶಾ ಪ್ರಶ್ನಿಸುತ್ತಾಳೆ
ಹೌದು ಆಶಾ ಡಿಯರ್ ನಿನ್ನಿಂದ ಏನಾದರೂ ಒಂದು ಕೋಟಿ ರೂಪಾಯಿಗಳು ಕೊಡುವುದಕ್ಕೆ ಆಗುತ್ತದಾ? ಮೂರು ತಿಂಗಳಲ್ಲಿ ವಾಪಸ್ ಕೊಡುತ್ತೇನೆ. ಮದುವೆ ಬೇಕಾದರೆ ಸಿಂಪಲ್ ಆಗಿ ಮಾಡಲಿ ಎಂದು ವಿಕ್ರಮ್ ಹೇಳಲು
ಒಂದು ಕೋಟಿ ರೂಪಾಯಿಗಳಾದರೆ ನಮ್ಮ ತಂದೆಯನ್ನೇ ಕೇಳಬೇಕು
ನನ್ನಲ್ಲಿ ಅಷ್ಟೊಂದು ಹಣವಿಲ್ಲನೆಂದು ಆಶಾ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ
ಅಯ್ಯಯ್ಯೋ ನಿಮ್ಮಪ್ಪನನ್ನು ಕೇಳುವುದು ಬೇಡಪ್ಪಾ ನಿಮ್ಮ ತಂದೆ ತಪ್ಪು ತಿಳಿಯುತ್ತಾರೆಂಬ ವಿಕ್ರಮ್ ಮಾತಿಗೆ
ವಿಕ್ರಮ್ ಇದರಲ್ಲಿ ತಪ್ಪು ತಿಳಿಯುವುದೇನಿದೆ? ಮನುಷ್ಯನಿಗೆ ಕಷ್ಟ ಬರದೆ ಮರಕ್ಕೆ ಬರುತ್ತದಾ? ನಾಳೆ ನೀನು ನಮ್ಮ ಮನೆಯ ಅಳಿಯನಾಗುವವನು ನಿನಗೆ ಹಣ ಕೊಡದೇ ಬೇರೆಯವರಿಗೆ ಕೊಡಲು ಆಗುತ್ತದಾ ಎಂದು ಆಶಾ ಹೇಳಲು
ನಿನ್ನಂತಹವಳನ್ನು ಹೆಂಡತಿಯಾಗಿ ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೇನೆಂಬ ವಿಕ್ರಮ್ ಮಾತಿಗೆ
ಬೇಡಪ್ಪಾ ನನ್ನನ್ನು ಹೊಗಳಿ ಅಟ್ಟಕ್ಕೇರಿಸಬೇಡ, ನಾನು ನಮ್ಮಪ್ಪನನ್ನು ಕೇಳಿ ಒಂದು ಕೋಟಿ ರೂಪಾಯಿಗಳನ್ಮು ಕೊಡಿಸುತ್ತೇನೆ. ಮೂರು ತಿಂಗಳೊಳಗೆ ಕೊಟ್ಟರೆ ಸಾಕೆಂದಾಗ
ಓ ಕೆ ಆಶಾ ಡಿಯರ್ ಆದಷ್ಟೂ ಬೇಗ ಹಣವನ್ನು ಅರೇಂಜ್ ಮಾಡು ಪ್ಲೀಸ್ ಎಂದಾಗ
ಓ ಕೆ ವಿಕ್ರಮ್ ಎಂದು ಹೇಳಿ ಆಶ ಫೋನ್ ಕಟ್ ಮಾಡಿ, ವಿಕ್ರಮ್ ಗೆ ಹಣ ಕೊಡುತ್ತೇನೆಂದು ಹೇಳಿದ್ದಾಯಿತು. ಈಗ ಅಪ್ಪನಿಗೆ ಹಣ ಕೊಡುವಂತೆ ಹೇಗೆ ಕೇಳಲೆಂದು ಯೋಚಿಸುತ್ತಾ ಹಾಗೇ ಮಲಗುತ್ತಾಳೆ
ಮೂರು ದಿನ ಕಳೆದರೂ ಅಪ್ಪನ ಬಳಿ ಹೇಗೆ ಹಣ ಕೇಳಬೇಕೆಂದು ಆಶಾಳಿಗೆ ತೋಚುವುದಿಲ್ಲ, ಪುನಃ ಅಪ್ಪನು ಮದುವೆ ವಿಚಾರ ಮಾತನಾಡಿದರೆ ಈ ವಿಚಾರ ತಿಳಿಸೋಣವೆಂದು ಸುಮ್ಮನಾಗುತ್ತಾಳೆ
ಅದಾದ ಎರಡು ದಿನಗಳ ನಂತರ ವಿಕ್ರಮ್ ನೇ ಫೋನ್ ಮಾಡಿ ಹಣದ ವಿಷಯ ಏನು ಮಾಡಿದೆಯೆಂದು ಆಶಾಳನ್ನು ಕೇಳಲು
ಆಶ ತನ್ನ ಅಸಹಾಯಕತೆಯನ್ನು ಹೇಳಿದಾಗ
ಆಶಾ ಡಿಯರ್ ನೀನು ಕೇಳದೆ ಸುಮ್ಮನಿದ್ದರೆ ನಿಮ್ಮಪ್ಪನಿಗೆ ವಿಷಯ ತಿಳಿದು ಹಣ ಕೊಡುವ ಬಗೆ ಹೇಗೆ? ನೀನೇ ಏನಾದರೂ ಮಾಡಿ ಮದುವೆ ವಿಷಯ ಪ್ರಸ್ತಾಪಿಸಿ ಹಣದ ಬಗ್ಗೆ ಹೇಳಿದರೆ ಖಂಡಿತಾ ಕೊಡುತ್ತಾರೆಂದು ವಿಕ್ರಮ್ ಹೇಳಲು
ಅಯ್ಯೋ ವಿಕ್ರಮ್ ಗೇನು ಗೊತ್ತು ನಮ್ಮಪ್ಪ ಆಡಿದ ಮಾತುಗಳೆಂದುಕೊಂಡು ಪ್ರಯತ್ನಿಸುತ್ತೇನೆಂದು ಹೇಳಿ ಫೋನ್ ಕಟ್ ಮಾಡುತ್ತಾಳೆ.
ರಾತ್ರಿ ಎಂದಿನಂತೆ ಒಂಬತ್ತು ಗಂಟೆಗೆ ತನಗೂ ಅಪ್ಪನಿಗೂ ತಟ್ಟೆ ಹಾಕುತ್ತಾ, ಅಮ್ಮಾ ಊಟ ಬಡಿಸಮ್ಮಾ ಎಂದು ಊಟದ ಮೇಜಿನ ಮುಂದೆ ಮೇಲೆ ಕುಳಿತುಕೊಳ್ಳುತ್ತಾಳೆ
ಅಪ್ಪನನ್ನು ಕರೆಯಮ್ಮಾ ಎಂದು ಅವಳಮ್ಮ ಹೇಳಿದಾಗ
ಆಶಾ ಅಪ್ಪನ ರೂಮಿಗೆ ಬಂದು ಅಪ್ಪಾ ಊಟಕ್ಕೆ ಬಾಪ್ಪಾ ಎನ್ನುತ್ತಾಳೆ
ಕೋದಂಡರಾಂರವರು ತಮಗೆ ಹೆದ್ದಾರಿಯವರು ತಮ್ಮ ಜಮೀನಿಗೆ ಪರಿಹಾರ ನೀಡಿದ್ದ ಹಣವನ್ನು ಫಿಕ್ಸೆಡ್ ಡಿಪಾಜಿಟ್ ಮಾಡಿದ್ದನ್ಮು ರಿನ್ಯೂ ಮಾಡಿಸಿಕೊಂಡು ಬಾಂಡನ್ನು ಟೀಪಾಯಿಯ ಮೇಲೆ ಇಟ್ಟಿರುವುದನ್ನು ನೋಡಿದ ಆಶಾ ಇದೇನಪ್ಪಾ ಬಾಂಡ್ ಎಂದು ಕೇಳಲು
ಜಮೀನಿನ ಪರಿಹಾರದ ಹಣ ನಿನ್ನ ಮದುವೆಗೆ ಫಿಕ್ಸೆಡ್ ಮಾಡಿದ್ದೇನೆ, ನಿನ್ನ ಮದುವೆ ಗೊತ್ತಾದ ತಕ್ಷಣ ಬಾಂಡನ್ನು ಕ್ಲೋಸ್ ಮಾಡಿ ಮದುವೆಯನ್ನು ಮುಗಿಸುತ್ತೇನೆ ಎನ್ನುತ್ತಾ
ನಾವಿಬ್ಬರೂ ಜೊತೆಯಲ್ಲಿ ಊಟ ಮಾಡಿ ಬಹಳ ದಿನಗಳೇ ಕಳೆಯಿತು, ಈ ದಿನ ಪುನಃ ನನ್ನನ್ನು ಊಟಕ್ಕೆ ಕರೆಯಲು ಬಂದಿದ್ದೀಯಾ ಎಂದು ಛೇಡಿಸಿದಾಗ
ಅಪ್ಪಾ ಊಟದಲ್ಲಿ ಕೋಪಿಸಿಕೊಳ್ಳಬಾರದಪ್ಪಾ, ಇನ್ನೆಷ್ಟು ದಿನ ನಾನೂ ನೀನೂ ಒಟ್ಟಿಗೆ ಊಟ ಮಾಡುತ್ತೇವೆ ಅಬ್ಬಬ್ಬಾ ಎಂದರೆ ಮೂರು ತಿಂಗಳಷ್ಟೇ ಎಂಬ ಆಶಾ ಮಾತಿಗೆ
ಇದೇನಮ್ಮಾ ಹೀಗೆ ಹೇಳುತ್ತಿದ್ದೀಯಾ ಮೂರು ತಿಂಗಳ ನಂತರ ಯಾರು ಎಲ್ಲಿಗೆ ಹೋಗುತ್ತಾರೆಂದು ಅವಳಪ್ಪ ಪ್ರಶ್ನಿಸಲು.
ನಾನು ಮದುನೆಯಾಗಿ ಗಂಡನ ಮನೆಗೆ ಹೋದರೆ ಆಗ ನೀನೊಬ್ಬನೇ ಊಟ ಮಾಡಬೇಕಲ್ಲಾ ಎಂದು ಆಶಾ ಹೇಳಿದಾಗ
ಇನ್ನೂ ಗಂಡೇ ಹುಡುಕಿಲ್ಲ ಆಗಲೇ ಮದುವೆ ಮಾತು ಆಡುತ್ತಿದ್ದೀಯಲ್ಲಾ? ಕಾಲ ಕೂಡಿ ಬಂದರೆ ಮದುವೆಯಾಗುವುದೇನೂ ಕಷ್ಟವಲ್ಲವೆಂದು ಕೋದಂಡರಾಂ ಹೇಳಲು
ಅಪ್ಪಾ ಕೈಯ್ಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅತ್ತರಂತೆ ಹಾಗಾಯ್ತು ನಿನ್ನ ಮಾತೆಂದು ಆಶಾ ಹೇಳಿದಾಗ
ಏನಮ್ಮಾ ನಿನ್ನ ಒಗಟಿನ ಮಾತೆಂದು ಕೋದಂಡರಾಮ್ ಪ್ರಶ್ನಿಸಲು
ಇದೇನಪ್ಪಾ ಹೀಗೆ ಕೇಳುತ್ತಿದ್ದೀಯಾ? ಪುನಃ ಮೊದಲಿನಿಂದ ಹೇಳಬೇಕಾ? ನಾನು ಲೌವ್ ಮಾಡಿರುವ ವಿಕ್ರಮ್ ನನ್ನೇ ಮದುವೆಯಾಗುವುದಾಗಿ ಡಿಸೈಡ್ ಮಾಡಿದ್ದೇನೆಂದು ನಿನಗೆ ಹೇಳಿಲ್ಲವಾ ಎಂದು ಆಶಳ ಮಾತಿಗೆ
ಅವರ ಸಾಲ ತೀರುವ ತನಕ ಅವನಿಗೆ ನಿನ್ನ ಕೊಟ್ಚು ಮದುವೆ ಮಾಡುವುದಿಲ್ಲವೆಂದು ಹೇಳಿಲ್ಲವಾ?ಎಂದು ಕೋದಂಡರಾಮ್ ಪ್ರತಿಯಾಗಿ ಉತ್ತರಿಸಲು
ಸಾಲ ತೀರಿಸಿದರೆ ಆಯ್ತು ಅದಕ್ಕೇಕೆ ಚಿಂತೆ ಮಾಡುತ್ತೀಯಾ ಎಂದು ಆಶಾ ಹೇಳುತ್ತಾಳೆ
ಅದು ಹೇಗಮ್ಮಾ ಸಾಲ ತೀರುತ್ತೆ ಎಂದು ಕೋದಂಡರಾಮ್ ಪ್ರಶ್ನಿಸುತ್ತಾರೆ
ಈಗ ಊಟಕ್ಕೆ ಬಾ, ಊಟವಾದ ನಂತರ ಎಲ್ಲಾ ಹೇಳುತ್ತೇನೆಂದು ಅಮ್ಮಾ ಊಟ ಹಾಕಮ್ಮಾ ಅಪ್ಪನೂ ಬಂದರೆಂದು ಆಶಾ ಅವಳಮ್ಮನಿಗೆ ಹೇಳಿ ಮೇಜಿನ ಮುಂದೆ ಕುಳಿತುಕೊಳ್ಳುತ್ತಾಳೆ.
ಮುಂದುವರೆಯುತ್ತದೆ
ಡಾ. ಎನ್. ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ
ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶನೇನೆಂದರೆ
ಕೆಲವರಿಗೆ ತಮ್ಮ ಕೆಲಸವಾಗಬೇಕಾದರೆ ಹೇಗೆ ಬೇಕಾದರೂ ಬಾಗುತ್ತಾರೆ, ನಿನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ನೀನೇ ಇಂದ್ರ ಚಂದ್ರ ದೇವೇಂದ್ರ ಎಂದು ಹಾಡಿ ಹೊಗಳಿ ಅಟ್ಟಕ್ಕೇರಿಸುತ್ತಾರೆ ಹಾಗೆಯೇ ಹೇಳಿದಂತೆ ಕೇಳುತ್ತಾರೆ. ಕೆಲಸವಾದ ನಂತರ ಅಥವಾ ಕೆಲಸವಾಗುವುದಿಲ್ಲವೆಂದು ತಿಳಿದ ತಕ್ಷಣ ನೀನೆಲ್ಲೋ ನಾನೆಲ್ಲೋ ನೀಯಾರೋ ನಾಯಾರೋ ಎನ್ನುವಂತೆ ದೂರ ಸರಿಯುತ್ತಾರೆ. ಇನ್ನೂ ಕೆಲವರು ದ್ವೇಷ ಸಾಧಿಸಲೂ ಬಹುದು. ಇಲ್ಲಿ ಆಶಾಳಿಗೆ ಹಣ ಬೇಕಿದ್ದರಿಂದ ಪುನಃ ಅಪ್ಪನನ್ನು ಒಳ್ಳೆಯದು ಮಾಡಿಕೊಳ್ಳಲು ಒಟ್ಟಿಗೆ ಊಟ ಮಾಡುವಂತೆ ಬಲವಂತ ಮಾಡುತ್ತಿದ್ದಾಳೆ.