ಅಭಿಲಾಷೆ ಕಾದಂಬರಿ (ಸಂಚಿಕೆ – 23)

ಹಿಂದಿನ ಸಂಚಿಕೆಯಲ್ಲಿ-

ವಿಕ್ರಮ್ ತನ್ನ ಅಪ್ಪ ಅಮ್ಮನ ಜೊತೆಗೆ ಆಶಾಳ ಮನೆಗೆ ಬಂದಿದ್ದು, ಆಶಾಳ‌ ತಂದೆ ಹಾಗೂ ವಿಕ್ರಮ್ ತಂದೆ ಪರಸ್ಪರ ಪರಿಚಯವಿದ್ದಾರೆಂದು ತಿಳಿದು ಇಬ್ಬರಿಗೂ ತುಂಬಾ ಸಂತೋಷ ವಾಗಿರುತ್ತದೆ.

 ಹಿಂದಿನ ಸಂಚಿಕೆಯಲ್ಲಿ –

ಆಶಾಳ‌ ತಂದೆ ವಿಕ್ರಮ್ ತಂದೆ ಇಬ್ಬರೂ ಪರಸ್ಪರ ಪರಿಚಯವಿದ್ದಾರೆಂದು ತಿಳಿದು ಇಬ್ಬರೂ ಖುಷಿಯಾಗುತ್ತಾರೆ.
ವಿಕ್ರಮ್ ತಂದೆಯವರು ಮಾತನಾಡಿ, ನೀವೇ ಹುಡುಗಿಯ ತಂದೆ ಎಂದು ತಿಳಿದು ಬಹಳ‌ ಸಂತೋಷವಾಗಿದೆ ಎಂದಾಗ,
ಕೋದಂಡರಾಂ ರವರು ಅರೆ ಮನಸ್ಸಿನಿಂದ ನನಗೂ ಅಷ್ಟೇ ನಿಮ್ಮನ್ನು ನೋಡಿ ಸಂತೋಷವಾಗಿದೆಯೆನ್ನುತ್ತಾರೆ.
ಆ ವೇಳೆಗೆ ಆಶಾ ಎಲ್ಲರಿಗೂ ತಿಂಡಿ ತಂದು ಕೊಟ್ಟಾಗ‌
ಎಲ್ಲರೂ ತಿಂಡಿ ತಿಂದು ನಂತರ ಪುರುಷೋತ್ತಮ್ ರವರು ಮಾತನಾಡಿ, ಮದುವೆಯ ಮುಹೂರ್ತಕ್ಕೆ ನಿಮ್ಮ ಪುರೋಹಿತರನ್ನು ವಿಚಾರಿಸಿ ಸ್ವಲ್ಪ ದೂರದ ದಿನಾಂಕವನ್ನೇ ಗೊತ್ತುಪಡಿಸಿದರೆ ನಮಗೆ ಅನುಕೂಲವೆಂದು ಹೇಳಿದಾಗ
ಅದು ನನಗೆ ಗೊತ್ತೆಂಬ ಕೋದಂಡರಾಮ್ ಮಾತಿಗೆ,
ಏನಂದ್ರೀ ಬೀಗರೇ ಎಂದು ವಿಕ್ರಮ್ ತಂದೆ ಪ್ರಶ್ನಿಸಲು
ಏನೂ ಇಲ್ಲ ನೀವು ಹೇಗೆ ಹೇಳಿದರೂ ನನಗೆ ಒಪ್ಪಿಗೆ ಇದೆಯೆಂದು ಕೋದಂಡರಾಮ್ ಹೇಳುತ್ತಾರೆ.
ಓ ಕೆ ನಾವಿನ್ನು ಬರುತ್ತೇವೆಂದು ಪುರುಷೋತ್ತಮ್ ರವರು ಹೇಳಿ ಎಲ್ಲರೂ ಮನೆಗೆ ಹೊರಟ ನಂತರ,
ಆಶಾಳೂ ತನ್ನ ರೂಮಿಗೆ ಹೋಗುತ್ತಾಳೆ
ಆಶಾಳ ಅಮ್ಮ ಮಾತನಾಡಿ, ಹುಡುಗ ಪರವಾಗಿಲ್ಲ‌ ಅಲ್ಲವೇೆನ್ರೀ ಎಂದು ತನ್ನ ಗಂಡನನ್ನು ಕೇಳಿದಾಗ
ಏನೋ ಪರವಾಗಿಲ್ಲ ಅಷ್ಟೇ ಎಂಬ ಕೋದಂಡರಾಂ ಮಾತಿಗೆ
ಇದೇನ್ರೀ ಅಪಸ್ವರ ತೆಗೆಯುತ್ತಿದ್ದೀರೀ ? ನಿಮಗೇನೋ ಅರೆ ಮನಸ್ಸು ಇದ್ದಹಾಗಿದೆ ಎಂದು ಅವರ ಪತ್ನಿ ಪ್ಪಶ್ನಿಸಿದಾಗ
ಇನ್ನೆಲ್ಲಿ ನಮ್ಮ ಮಗಳು ಸಾಲದ ಸುಳಿಯಲ್ಲಿ ಸಿಲುಕುತ್ತಾಳೋ ಎಂದು ಆತಂಕವಾಗಿದೆಯೆಂದು ಕೋದಂಡರಾಂ ನುಡಿಯಲು
ಅವಳೇಕೆ ಸಾಲದ ಸುಳಿಯಲ್ಲಿ ಸಿಕ್ಕುತ್ತಾಳೆ?ನಿಮ್ಮಲ್ಲಿ ಮಗಳ ಮದುವೆ ಮಾಡುವಷ್ಟು ಹಣವಿಲ್ಲವಾ? ನಮ್ಮ ಹೊಲ‌ ರೈಲ್ವೆಗೆ ಅಕ್ವೈರ್ ಆಗಿ ಎರಡು ಕೋಟಿ ರೂಪಾಯಿ ಬಂದ ಹಣ ಏನಾಯ್ತೆಂದು ಆಶಾಳ‌ ತಾಯಿ ಪ್ರಶ್ನಿಸಿದಾಗ
ಇದೇನು ಹೀಗೆ ಕೇಳುತ್ತಿದ್ದೀಯಲ್ಲಾ ? ಅದು ಇಬ್ಬರ ಹೆಸರಲ್ಲೂ ಜಂಟಿ ಖಾತೆಯಲ್ಲಿಲ್ಲವೇ ನಾನೊಬ್ಬನೆ ಹೇಗೆ ಡ್ರಾ ಮಾಡಲಿ ಎಂಬ ಕೋದಂಡರಾಂ ಪ್ರಶ್ನೆಗೆ
ಮದುವೆಗೆ ಸಾಕಷ್ಟು ಹಣ ಇರುವಾಗ ಮಗಳೇಕೆ‌ ಸಾಲದ‌ ಸುಳಿಯಲ್ಲಿ ಸಿಗುತ್ತಾಳೆಂದು ಅದಕ್ಕೆ ಕೇಳಿದ್ದು ಎಂದು ಅವರ ಪತ್ನಿ ನುಡಿಯಲು
ಈ ಹುಡುಗನನ್ನು ಮದುವೆಯಾದರೆ ಸಾಲದ ಸುಳಿಗೆ ಸಿಗುತ್ತಾಳೆಂದು ನನಗೆ ಗೊತ್ತೆಂದಾಗ
ನಿಮಗೆ ಹೇಗೆ ಗೊತ್ತೆಂದು ಅವರ ಪತ್ನಿ ಪುನಃ ಪ್ರಶ್ನಿಸಲು
ಆ ಹುಡುಗ ಮಹಾ ಸುಳ್ಳುಗಾರ ಇದ್ದಾನೆ. ಅವನ ಅಪ್ಪ ದೊಡ್ಡ ಕೋಟ್ಯಾಧೀಶ್ವರ ಎಂದು ಹೇಳಿದ್ದಾನೆ, ಆದರೆ ಅವನ ಅಪ್ಪ ತುಂಬಾ ಸಾಲಗಾರ ಅದೆಷ್ಟು ಲಕ್ಷವೋ ಕೋಟಿಯೋ ಸಾಲ‌ ಇರಬಹುದು. ಅದನ್ನು ಹೇಳಿಕೊಳ್ಳದೆ ಕೋಟ್ಯಾಧೀಶ್ವರರೆಂದು ಸುಳ್ಳುಹೇಳಿದ್ದಾರೆಂದಾಗ
ಅಯ್ಯೋ ಇದೇನ್ರೀ ಇವೆಲ್ಲಾ ನಿಮಗೆ ಹೇಗೆ ಗೊತ್ತು? ಅವರ ಪರಿಚಯ ಮೊದಲಿನಿಂದಲೂ ಇದೆಯಾ ಎಂದು ಅವರ ಪತ್ನಿ ಕೇಳಲು
ಹದಿನೈದು ದಿನಗಳ‌ ಹಿಂದೆ ನಾನು ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ, ನನ್ನ ಸ್ನೇಹಿತ ಇವನ ತಂದೆಗೆ ಸುಮಾರು ಐವತ್ತು ಲಕ್ಷ‌‌ ರೂಪಾಯಿ ಸಾಲ ನೀಡಿದ್ದಾನೆ. ನನ್ನ ಮದ್ಯಸ್ಥಿಕೆಯಲ್ಲಿ ಅದನ್ನು ಕೇಳಲು ಹೋದಾಗ ಪೋಸ್ಟ್ ಡೇಟೆಡ್ ಚೆಕ್ ಕೊಟ್ಟಿದ್ದಾರೆ . ಹೋದ ಭಾನುವಾರ ಕೂಡಾ ಇನ್ನೊಬ್ಬರ ಸ್ನೇಹಿತರಿಗೆ ಮುವ್ವತ್ತು ಲಕ್ಷ ರೂಪಾಯಿ ಕೊಟ್ಟಿರುವುದಕ್ಕೂ ಪೋಸ್ಟ್ ಡೇಟೆಡ್ ಚೆಕ್ ಕೊಟ್ಟಿದ್ದಾರೆ ಇನ್ನೂ ಎಷ್ಟು ಜನರಿಂದ ಸಾಲ ಮಾಡಿ ಇದೇರೀತಿ ಚೆಕ್ ಕೊಟ್ಟಿದ್ದಾರೋ ಯಾರಿಗೆ ಗೊತ್ತು? ಇಂತಹವರ ಮನೆಗೆ
ನನ್ನ ಮಗಳನ್ನು ಕೊಟ್ಟರೆ ಕಡೇವರೆಗೂ ಸಾಲದ ಸುಳಿಯಲ್ಲಿ ಸಿಕ್ಕಿ ತನ್ನ ಸಂಬಳವನ್ನೆಲ್ಲಾ ಅವರ ಸಾಲ ತೀರಿಸಲು ಕೊಡಬೇಕು ಎಂದು ಕೋದಂಡರಾಮ್ ಹೇಳಿದಾಗ
ಹಾಗಾದರೆ ಈ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಅವರ ಪತ್ನಿ ಕೇಳಲು
ನನಗೆ ಮೊದಲೇ‌ ತಿಳಿದಿದ್ದರೆ ಮನೆಗೆ ಬರಲು ಹೇಳುತ್ತಿರಲಿಲ್ಲವೆಂದು ಕೋದಂಡರಾಮ್ ಹೇೇಳುತ್ತಾರೆ.
ಮಗಳು ಅವನನ್ನೇ ಮದುವೆಯಾಗಲು ಹಠ‌ ಹಿಡಿದರೆ ಏನು ಮಾಡುವುದೆಂದು ಅವರ ಪತ್ನಿ ಕೇಳಲು
ಏನಾದರೂ ಮಾಡಿ ಅವಳ ಮನಸ್ಸು ಬದಲಿಸಲೇಬೇಕು ಎಂದು ಕೋದಂಡರಾಮ್ ಹೇಳುತ್ತಾರೆ.
ಇನ್ನೇನು ಕಾದಿದೆಯೋ ದೇವರಿಗೆ ಗೊತ್ತೆಂದು ಅವರ ಪತ್ನಿ ಆತಂಕದಿಂದ ಹೇಳಿದಾಗ
ನಾವಿನ್ನೂ ಹುಡುಗನನ್ನು ಒಪ್ಪಿದ್ದೇವೆಂದು ಗ್ರೀನ್ ಸಿಗ್ನಲ್ ಕೊಟ್ಡಿಲ್ಲ ಅದೂ ಅಲ್ಲದೆ ಅವರು ಹೇಗಿದ್ದರೂ ತಕ್ಷಣ ಮದುವೆ ಮಾಡಲು ಅವರು ಒಪ್ಪುವುದಿಲ್ಲ.‌ ಅಷ್ಟರೊಳಗೆ ಮಗಳ‌ ಮನಸ್ಸನ್ನು ಡೈವರ್ಟ್ ಮಾಡಿ ಬೇರೆ ಮದುವೆ ಮಾಡಲು ಪ್ರಯತ್ನಿಸೋಣವೆಂದು ಹೇಳಿ ರೂಮಿಗೆ ಹೋಗುತ್ತಾರೆ.

ಆಶಾಳಿಗೆ ಯಾವುದರ ಬಗ್ಗೆಯೂ ಅರಿವಿಲ್ಲದೆ ತನ್ನ ರೂಮಿಗೆ ಹೋಗಿ ಮನೆ ತಲುಪಿದ್ರಾ ಎಂದು ವಿಕ್ರಮ್ ಗೆ ಫೋನ್ ಮಾಡಿ ವಿಚಾರಿಸಿದಾಗ
ಈಗ ತಾನೇ ಮನೆಗೆ ಬಂದೆವೆಂದು ವಿಕ್ರಮ್ ಹೇಳಲು
ನಮ್ಮಪ್ಪ ಅಮ್ಮನ ಬಗ್ಗೆ ನಿನಗೇನನ್ನಿಸಿತೆಂದು ಆಶಾ ಕೇಳಲು
ನನ್ನ ಭಾವಿ ಮಾವ ಸೂಪರ್ ಆಗಿ ಮಾತನಾಡುತ್ತಾರೆಂದು ವಿಕ್ರಮ್ ಹೇಳುತ್ತಾ
ನಮ್ಮಪ್ಪನ ಮಾತು ಕೇಳಿ ನಿನಗೇನನ್ನಿಸಿತೆಂದು ವಿಕ್ರಮ್ ಪ್ರಶ್ನಿಸಲು
ನಿಮ್ಮಪ್ಪ ತುಂಬಾ ವ್ಯವಹಾರಸ್ಥರೆಂದು ಆಶಾ ನುಡಿಯುತ್ತಾಳೆ.
ಹೌದೌದು ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುವವರು ಬಿಸ್ನೆಸ್‌ ನಲ್ಲಿ ಮಾತ್ರ ತುಂಬಾ ಸ್ಟ್ರಿಕ್ಟ್ ಇರಲೇಬೇಕಲ್ಲಾ ಎಂದು ವಿಕ್ರಮ್ ಹೇಳುತ್ತಾನೆ.
ಓಕೆ ನೀವು ಈ ವಾರವಾದರೂ ಬಂದಿದ್ದು ನಮಗೆ ಬಹಳ ಸಂತೋಷವಾಯ್ತು, ನಮ್ಮಪ್ಪ ಅಮ್ಮ, ನಿಮ್ಮಪ್ಪ ಅಮ್ಮ ನಮ್ಮಿಬ್ಬರ ಮದುವೆಗೆ ಒಪ್ಪಿದರಲ್ಲಾ ಅದಕ್ಕೆ ಇನ್ನೂ ಸಂತೋಷವಾಯ್ತೆಂದು ಆಶಾ ಹೇಳಿ ನಾಳೆ ಮಾತನಾಡೋಣವೆಂದು ಫೋನ್ ಕಟ್ ಮಾಡಿ ರೂಮಿನಿಂದ ಹೊರ ಬಂದಾಗ
ನಡುಮನೆಯಲ್ಲಿ ಸೋಫಾ ಮೇಲೆ ಕುಳಿತಿದ್ದ ಅವರಪ್ಪನು ಮಗಳನ್ನು ನೋಡಿ ಬಾರಮ್ಮಾ ಇಲ್ಲಿ ಎಂದು ಕರೆಯಲು
ಆಶಾ ನಗುತ್ತಾ ಏನಪ್ಪಾ ಎಂದು ಹತ್ತಿರ ಬಂದು ನಿಂತಾಗ
ಇಲ್ಲೇ ಕುಳಿತುಕೋ ಎಂದು ಹೇಳಿದ ನಂತರ
ಆಶಾ ಅಪ್ಪನ ಎದುರಿಗೆ ಕುಳಿತುಕೊಳ್ಳುತ್ತಾ ಮನಸ್ಸಿನಲ್ಲಿ ಮದುವೆ ಬೇಗ ಇಟ್ಟುಕೊಳ್ಳೋಣವೆಂದು ಕೇಳುತ್ತಾರೆ, ನಾನೀಗಲೇ ಬೇಡವೆಂದು ಹೇಳಿ ಸ್ವಲ್ಪ ಆಟ‌ ಆಡಿಸಬೇಕೆಂದುಕೊಂಡು ಏನಪ್ಪಾ ಎಂದಾಗ
ಮಗಳೇ ನೀನು ಆ ಹುಡುಗನನ್ನು ಮದುವೆಯಾಗಲೇ ಬೇಕಾ ಎಂದು ಅವರಪ್ಪನ ಅನಿರೀಕ್ಷಿತ ಪ್ರಶ್ನೆಗೆ
ಆಶಾ ಬೆಚ್ಚಿ ಬಿದ್ದಂತವಳಾಗಿ ಇದೇನಪ್ಪಾ ಹೀಗೆ ಕೇಳುತ್ತಿದ್ದೀಯಾ? ನಾನು ವಿಕ್ರಮ್ ನ ಲೌವ್ ಮಾಡಿದ್ದೇನೆಂದು ತಾನೇ ನೀನು ಎಲ್ಲರನ್ನು ಮನೆಗೆ ಕರೆಸಿ ಮಾತಾಡೋಣ ಎಂದಿದ್ದು? ಈಗ ಈ ರೀತಿ ಕೇಳುತ್ತಿದ್ದೀಯಲ್ಲಾ‌ ಜೋಕ್ ಮಾಡುತ್ತಿಲ್ಲಾ ತಾನೇ ಎಂದು ಕೇಳಲು
ಇಂತಹ ಸೀರಿಯಸ್ ವಿಷಯದಲ್ಲಿ ನಾನೇಕೆ ಜೋಕ್ ಮಾಡಲಮ್ಮಾ ಎಂಬ ಅವರಪ್ಪನ ಮಾತಿಗೆ,
ವಿಕ್ರಮ್ ನಲ್ಲಿ ಏನು ಡ್ರಾ ಬ್ಯಾಕ್ ನೋಡಿದೆ ಇದ್ದಕ್ಕಿದ್ದಂತೆ ಮದುವೆಯ ಬಗ್ಗೆ ಈ ರೀತಿ ಕೇಳುತ್ತಿದ್ದೀಯಲ್ಲಾ ಎಂದು ಆಶಾ ಪ್ರಶ್ನಿಸಲು.
ಅವನ ವ್ಯಕ್ತಿತ್ವವೇ ಡ್ರಾ ಬ್ಯಾಕ್ ಕಣಮ್ಮಾ ಎಂದು ಕೋದಂಡರಾಮ್ ಹೇಳಿದ ಮಾತಿಗೆ
ಅಪ್ಪಾ ಅವರನ್ನು ನೋಡಿದ ತಕ್ಷಣ ಅವರ ವ್ಯಕ್ತಿತ್ವದ ಬಗ್ಗೆ ನಿನಗೇನು ಅನುಮಾನ ಬಂದಿದೆ? ಎಂಬ ಆಶಾಳ‌ ಪ್ರಶ್ನೆಗೆ
ಮಗಳೇ ಆ ಹುಡುಗನ ವ್ಯಕ್ತಿತ್ವ ಒಂದೇ ಅಲ್ಲಮ್ಮಾ ಅವರಪ್ಪನ ವ್ಯಕ್ತಿತ್ವವೂ ಸರಿಯಿಲ್ಲವೆಂದು ಕೋದಂಡರಾಮ್ ಹೇಳಲು
ಅಪ್ಪಾ ನಿನಗೆ ಈ ಮದುವೆ ಇಷ್ಟವಿಲ್ಲವೆಂದು ಅಪ್ಪ ಮಗನ ಮೇಲೆ ಏನೇನೋ ಹೇಳಬೇಡಪ್ಪಾ ಎಂದು ಆಶ‌ ಖಾರವಾಗಿ ನುಡಿಯಲು
ಮಗಳೇ ನಿನ್ನ ಸಂತೋಷವೇ ನಮ್ಮ ಸಂತೋಷವಲ್ಲವೇನಮ್ಮಾ? ನೀನು ಒಂದು ಹುಡುಗನನ್ನು ಪ್ರೀತಿಸಿದ್ದೇನೆಂದು ಹೇಳಿದ ತಕ್ಷಣ ನಾನು ಒಪ್ಪಿ ಹುಡುಗನನ್ನು ಮನೆಗೆ ಕರೆದುಕೊಂಡು ಬರುವಂತೆ ಹೇಳಲಿಲ್ಲವಾ? ಈಗ ಹುಡುಗನನ್ನು ನೋಡಿದ್ದಕ್ಕೆ ಅವರ ಯೋಗ್ಯತೆ ತಿಳಿಯಿತೆಂದು ಕೋದಂಡರಾಂ ಹೇಳಲು.


ಅಪ್ಪಾ ಅವರ ಯೋಗ್ಯತೆ ಬಗ್ಗೆ ನಿನಗೇನು ಗೊತ್ತೆಂದು ಆಶಾ ಪ್ರಶ್ನಿಸಲು
ಅಪ್ಪ ಮಗ ಇಬ್ಬರೂ ತುಂಬಾ ಸುಳ್ಳುಗಾರರಮ್ಮಾ ಎಂದು ಕೋದಂಡರಾಂ ಜೋರಾಗಿ ಹೇಳುತ್ತಾರೆ.
ಅಪ್ಪಾ ಅವರು ದೊಡ್ಡ ಬಿಸಿನೆಸ್ ಮೆನ್ ಸ್ವಲ್ಪ ಹೆಚ್ಚು ಕಡಿಮೆ ಮಾತನಾಡಿರಬಹುದು ಅಷ್ಟಕ್ಕೇ ನೀನು ಅಪ್ಪ ಮಗ ಇಬ್ಬರೂ ಸುಳ್ಳುಗಾರರೆಂದು ಬಿರುದು ಕೊಡುತ್ತಿದ್ದೀಯಲ್ಲಾ ಇದು ಸರೀನಾ ಅಪ್ಪಾ ಎಂದು ಆಶಾ‌ ಪ್ರಶ್ನಿಸಿದಾಗ
ಮಗಳೇ ನಿನಗೆ ಹೇಗೆ ಹೇಳಲಿ? ಅವರ ವ್ಯವಹಾರದ ಆಂತರ್ಯ‌ ನೋಡಿದರೆ ನಿನಗೇ ತಿಳಿಯುತ್ತದೆಂದು ಕೋದಂಡರಾಂ ಹೇಳಿದಾಗ
ಇದನ್ನು ನಾನು ನಂಬುವುದಿಲ್ಲಪ್ಪಾ ಎನ್ನುತ್ತಾಳೆ ಆಶಾ
ಕೋದಂಡರಾಂರವರು ವಿಕ್ರಮ್ ಅಪ್ಪನ ಸಾಲದ ವಿಚಾರ ಹೇಳಿ ಪೋಸ್ಟ್ ಡೇಟೆಡ್ ಚೆಕ್ ವಿಷಯ‌ ತಿಳಿಸಿದಾಗ
ಅಪ್ಪಾ ಇಷ್ಚಕ್ಕೇ ಅವರನ್ನು ಸುಳ್ಳುಗಾರರೆಂದು ಡಿಸೈಡ್ ಮಾಡಿಬಿಟ್ಚೆಯಾ ? ನಾನು ಬೇರೆ ಏನೋ ವಿಷಯ ಇದೆ ಎಂದುಕೊಂಡಿದ್ದೆ ಎನ್ನುತ್ತಾಳೆ ಆಶಾ
ಅದು ಹಾಗಲ್ಲಮ್ಮಾ ಅವರು ಸಾಲದ ಸುಳಿಗೆ ಸಿಕ್ಕಿಕೊಂಡು ಒದ್ದಾಡುತ್ತಿದ್ದಾರೆ, ಆ ಹುಡುಗ ನಮ್ಮಪ್ಪ ಕೋಟ್ಯಾಧೀಶನೆಂದು ಸುಳ್ಳು ಹೇಳುತ್ತಿದ್ದಾನೆ ಎಂದು ಕೋದಂಡರಾಂ ಹೇಳಲು
ಅಪ್ಪಾ ಬಿಸಿನೆಸ್‌, ಫ್ಯಾಕ್ಟರಿ ಎಂದರೆ ಅಸೆಟ್ಸ್‌ ಇರುತ್ತದೆ ಕ್ಯಾಪಿಟಲ್ ಅಸೆಟ್ಸ್ ಇರುತ್ತದೆ ಇದರ ಜೊತೆಗೆ ಲಯಬಲಟೀಸ್‌ ಕೂಡಾ ಇರುತ್ತದೆ. ಬರುವ ಲಾಭದಲ್ಲಿ ಸಾಲ‌ ತೀರಿಸುತ್ತಾರೆ, ಅಷ್ಟಕ್ಕೇ ನೀನು ಸುಳ್ಳುಗಾರರೆಂದು ಬಿರುದು ಕೊಟ್ಟುಬಿಟ್ಟೆಯಾ ಚೆನ್ನಾಗಿದೆ ನಿನ್ನ ಮಾತು, ವ್ಯಾಪಾರಸ್ಥರು ಅದಕ್ಕೆಲ್ಲಾ ಚಿಂತಿಸುತ್ತಾ ಕುಳಿತಿದ್ದರೆ ಯಾರೂ ವ್ಯಾಪಾರವನ್ನೇ ಮಾಡಲು ಆಗುತ್ತಿರಲಿಲ್ಲ, ವ್ಯಾಪಾರಂ ದ್ರೋಹ ಚಿಂತನಂ ಕಣಪ್ಪಾ
ನಾನೇಕೆ ಅವರ ಸಾಲದ ಬಗ್ಗೆ ಯೋಚನೆ ಮಾಡಲೆಂದು ಆಶಾ ನುಡಿಯುತ್ತಾಳೆ

ಮುಂದುವರೆಯುತ್ತದೆ

ಡಾ. ಎನ್. ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯ ವಾದ ಅಂಶನೇನೆಂದರೆ-

ಎಲ್ಲರೂ ಋಣ ಮುಕ್ತರಾಗಬೇಕೆಂದು ಹಂಬಲಿಸುತ್ತಾರೆ. ಅಕಸ್ಮಾತ್ ಮನೆ ಕಟ್ಟಲೋ ಮದುವೆ ಮಾಡಲೋ ಅಥವಾ ಮಕ್ಕಳ ವಿದ್ಯಾಭ್ಯಾಸ ಕ್ಕೆ ಬೇರೆ ಯಾವುದಕ್ಕಾದರೂ ಸಾಲ ಮಾಡಿದರೆ ಆ ಸಾಲ ತೀರುವವರೆಗೂ ನೆಮ್ಮದಿಯಿಂದ ಇರುವುದಿಲ್ಲ. ತಮ್ಮ ಸಾಲ ತೀರಿದರೆ ಸಾಕೆಂದು ಪರಿತಪಿಸುವಾಗ, ಕಂಡೂ ಕಂಡೂ ಬೇರೆಯವರ ಸಾಲವನ್ನು ತಮ್ಮ ಮೇಲೆ ಎಳೆದುಕೊಳ್ಳಲು ಯಾರೂ ಬಯಸುವುದಿಲ್ಲ.‌ ಏನಾದರೂ ಬೇರೆಯವರು ಸಾಲ ಪಡೆಯಲು ಜಾಮೀನು ನೀಡಿದ್ದರೆ, ಅವರು ಸಾಲ ತೀರಿಸುವವರೆಗೂ ನೆಮ್ಮದಿಯಿಂದ ಇರುವುದಿಲ್ಲ.