ಮಹಾಭಾರತ ಒಂದು ಉಪಕಥೆ

ಚಿಟಿಕೆಯಷ್ಟು ನೀಡು ಮುಷ್ಟಿಯಷ್ಟು ಪಡೆದುಕೋ, ಗೇಣೂದ್ದ ನೀಡು ಮಾರೂದ್ದ ಪಡೆದುಕೋ,, ಇದು ಭಗವಂತನ ಸಿದ್ದಾಂತ ಹಾಗೂ ನಿಯಮ.

ಇದಕ್ಕೊಂದು ಉದಾಹರಣೆ…

  • ದ್ರೌಪದಿ ಹಾಗೂ ದೂರ್ವಾಸ ಮುನಿಗಳು ಚರ್ಚಾ ಸಂದರ್ಭ

ದೂರ್ವಾಸ ಮುನಿಗಳು ಒಮ್ಮೆ ಸ್ನಾನ ಜಪ ತಪ ಮಾಡಲು ನದಿಗೆ ತೆರಳುತ್ತಾರೆ,

ಆ ಸಮಯದಲ್ಲಿ ನದಿಯ ನೀರಿನ ರಭಸಕ್ಕೆ ಅವರ ಲಂಗೋಟಿ (ಕೌಪೀನ) ನೀರಲ್ಲಿ ಕೊಚ್ಚಿಕೊಂಡು ಹೋಗುತ್ತದೆ,,
ಅವರ ವಸ್ತ್ರಗಳು ನದಿ ದಂಡೆಯ ಮೇಲಿರುತ್ತದೆ. ಸುತ್ತಲೂ ನೋಡಿ ಯಾರು ಇಲ್ಲಾ ಅಂತಾ ತಿಳಿದು ನೀರಿನಿಂದ ಆಚೆ ಬರಲು ಪ್ರಯತ್ನ ಮಾಡುತ್ತಾರೆ,,

ಆದರೆ ಅಷ್ಟರಲ್ಲಿ ದ್ರೌಪದಿ ತನ್ನ ಗೆಳತಿಯರೊಡನೆ ಬಟ್ಟೆ ತೊಳೆಯಲು ನದಿ ಹತ್ತಿರ ಬರುತ್ತಾಳೆ.

ಬಂದವಳೆ ನದಿಯಲ್ಲಿ ಋಷಿಗಳು ಸ್ನಾನ ಮಾಡುತ್ತಿರುವುದನ್ನು ನೋಡಿ, ಅವರ ಸ್ನಾನ ಮುಗಿಯಲಿ ಅಂತಾ ನದಿ ತೀರದಲ್ಲಿ ದೂರಕ್ಕೆ ನಿಂತಳು.

ಈ ಕಡೆ ನದಿಯ ಒಳಗೆ ಇರಲು ಆಗದೆ ಹೊರಗಡೆ ಬರಲು ಆಗದೆ ಗೊಂದಲದಲ್ಲಿ ಋಷಿಗಳು ಮುಳುಗಿದರು.

ಈ ಕಡೆ ಸುಮಾರು ಸಮಯ ಕಳೆದರು ಮುನಿಗಳು ನೀರಿನಿಂದ ಆಚೆ ಬರದೆ ಇರೋದನ್ನು ನೋಡಿ ,ದ್ರೌಪದಿಯು ಋಷಿಗಳೆ ದಯವಿಟ್ಟು ನೀರಿನಿಂದ ಆಚೆ ಬನ್ನಿ.. ನೀವು ಸ್ನಾನ ಮಾಡುವ ಸಮಯದಲ್ಲಿ ನಾವು ಮೈಲಿಗೆ ಕೊಳೆ ಬಟ್ಟೆಗಳನ್ನು ತೊಳೆಯಬಾರದು ಅಂದಳು..

ಅದನ್ನು ಕೇಳಿದ ಮುನಿಗಳು ಅಮ್ಮಾ ನನ್ನ ಪರಿಸ್ಥಿತಿ ಈತರ ಆಗಿದೆ ಎಂದು ವಸ್ತು ಸ್ಥಿತಿ ವಿವವರಿಸಿದರು. ನಂತರ ದ್ರೌಪದಿಗೆ ಅರ್ಥವಾಗಿ ತಾನು ತೊಟ್ಟು ಕೊಂಡಿದ್ದ ಸೀರೆಯ ತುದಿಯನ್ನು ಹರಿದು ನೀರಿಗೆ ಎಸೆದಳು. ಅದನ್ನು ತೊಟ್ಟು ದೂರ್ವಾಸ ಮುನಿಗಳು ನದಿಯಿಂದ ಆಚೆ ಬಂದು..

ದ್ರೌಪದಿಗೆ ಆಶೀರ್ವಾದ ಮಾಡುತ್ತಾರೆ ……
“ನೀ ಕೊಟ್ಟ ಈ ವಸ್ತ್ರ ಮುಂದೆ ನಿನಗೆ ಅಕ್ಷಯವಾಗಿ ನಿನ್ನ ಗೌರವ ಕಾಪಾಡುತ್ತದೆ “ಎಂದು ಶುಭ ಹಾರೈಸಿ ಹೊರಟರು..

ಮುಂದೆ ಅವಳ ವಸ್ತ್ರಾಪಹರಣದ ಸಂಧರ್ಭದಲ್ಲಿ ಅವಳ ಮಾನ‌ ಕಾಪಾಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಭಗವಂತ ಯಾವುದನ್ನೂ ಇಟ್ಟುಕೊಳ್ಳುವುದಿಲ್ಲಾ.. ನೀವು ಒಳ್ಳೆಯದು ಮಾಡಿದರೆ ಅದಕ್ಕೂ ಅದರ ಹತ್ತು ನೂರರಷ್ಟು ಮತ್ತೆ ದಯಪಾಲಿಸುತ್ತಾನೆ.. ಇದು ಭಗವಂತನ ನಿಯಮ..

ಆದ್ದರಿಂದ ಯಾವುದೇ ಅಧರ್ಮದ ಕೆಲಸ ಮಾಡುವ ಮುನ್ನ ಹತ್ತು ಸಲ ನೂರು ಸಲ ಯೋಚಿಸಿ.
ಕರ್ಮ ಧರ್ಮವನ್ನು ಭಗವಂತನಿಗೆ ಬಿಡಿ,,

ಆದರೆ ಉತ್ತಮ ಕಾರ್ಯವನ್ನು ಮಾಡುವ ಸಮಯದಲ್ಲಿ ಕ್ಷಣ ಮಾತ್ರ ಯೋಚಿಸದೆ ಕಾರ್ಯ ಪ್ರವೃತ್ತನಾಗು ಅಂತಾ ಧರ್ಮ ಶಾಸ್ತ್ರ ಹೇಳುತ್ತದೆ.