ಪವಿತ್ರ ಕುರ್ ಆನ್ ಸಂದೇಶಗಳು: ಕವಿತ್ತ ಕರ್ಮಮಣಿ
-
ಸರ್ವಲೋಕಗಳ ಒಡೆಯನಾದ ಅಲ್ಲಾಹು ನಮ್ಮೆಲ್ಲರಿಗೆ ಕರುಣಿಸಿದ
ಪ್ರಕೃತಿಯನ್ನು ವಿಕೃತಿಗೊಳಿಸದೆ
ಸಂಸ್ಕೃತಿಯನ್ನು ಸಂಹಾರ ಮಾಡದೆ
ಸುಕೃತಿ ಬದಲಾಗಿ ದುಷ್ಕೃತಿ ಎಸಗದೆ
ಎಲ್ಲರೊಂದಿಗೆ ಪ್ರೇಮದಿಂದಿದ್ದು, ಬಡವರಿಗೆ, ಅನಾಥರಿಗೆ, ಅಂಗವಿಕಲರಿಗೆ, ಹಸಿದವರಿಗೆ ಉಣಬಡಿಸುತ್ತ ಅಲ್ಲಾಹುವಿನ ಸ್ಮರಣೆ ಮಾಡುವ ಪ್ರತಿಯೊಬ್ಬರಲ್ಲಿಯೂ ಕುರ್ ಆನ್’ನ ವಚನಗಳು ಪ್ರಕೃತಿದತ್ತವಾಗಿ ಬಂದಿದ್ದು ಅವರೆಲ್ಲರಿಗೂ ಸ್ವರ್ಗದಲ್ಲಿ, ಪುನರ್ಜನ್ಮದಲ್ಲಿ ಸುಖ, ಶಾಂತಿ, ನೆಮ್ಮದಿ ಇದೆ ಎಂದು ಕುರ್ ಆನ್’ನಲ್ಲಿ ತಿಳಿಸಲಾಗಿದೆ. -
ಕುರಾನ್ ಇದು ಸರ್ವಲೋಕಗಳ ಒಡೆಯನಾದ ಅಲ್ಲಾಹುವಿನ ಮೇಲೆ ಹಾಗೂ ಪುನರ್ಜನ್ಮದಲ್ಲಿ ನಂಬಿಕೆವುಳ್ಳವರಿಗೆ ಅತ್ಯುನ್ನತ ದಾರಿ ತೋರಿಸುತ್ತದೆ. ಪುನರ್ಜನ್ಮವಿದೆ, ಪುನರ್ಜನ್ಮವಿದೆ.., ಪುನರ್ಜನ್ಮವಿದೆ….. ಎಂದು ಕುರಾನ್’ನ ಉದ್ದಗಲಕ್ಕೂ ಸಾರಿ ಸಾರಿ ಆನೆ ಹಾಕಿ.. ಹಾಕಿ…. ಒತ್ತಿ.. ಒತ್ತಿ…. ಹೇಳಲಾಗಿದೆ.
-
ಜೊತೆಗೆ ಪುನರುತ್ಥಾನದ ದಿನ ನಮ್ಮೆಲ್ಲರ ಪಾಪ-ಪುಣ್ಯಗಳೊಂದಿಗೆ ಅಲ್ಲಾಹುವಿನ ಸಮ್ಮುಖದಲ್ಲಿ ಹಾಜರು ಪಡಿಸಲಾಗುತ್ತದೆ. ಮಾನವ ಜನ್ಮತಃ ಅಕ್ರಮಿಯಾಗಿದ್ದು, ಆತನ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ನಮಾಜ್ ಅನ್ನು ಕಡ್ಡಾಯಗೊಳಿಸಿದ್ದಾರೆ.
-
ಪವಿತ್ರ ಕುರ್ ಆನ್ ಸಂದೇಶಗಳು:-
-
Follow my thoughts on the YourQuote app at https://www.yourquote.in/
lalasabpendari