ಅಭಿಲಾಷೆ ಕಾದಂಬರಿ

ಸಂಚಿಕೆ -22

ಹಿಂದಿನ ಸಂಚಿಕೆಯಲ್ಲಿ- 

ತನ್ನಮ್ಮನು ಅಪ್ಪನಿಗೆ ತಾನು ಆಶಾಳನ್ನು ಪ್ರೀತಿಸುವ ವಿಚಾರವನ್ನು ಹೇಳಿದ್ದಾರೆಂದು ತಿಳಿದು ವಿಕ್ರಮ್ ಅಪ್ಪನ ಬಳಿ ಬಂದಾಗ,
ಅವನಪ್ಪನು ಏನು ಸಮಾಚಾರ ವೆಂದು ಕೇಳಿದ್ದಕ್ಕೆ ಉತ್ತರಿಸಲಾಗದೆ ಪುನಃ ಅಮ್ಮನ ಬಳಿ ಬರುತ್ತಾನೆ

ಕಥೆಯನ್ನು ಮುಂದುವರೆಸುತ್ತಾ-

ತಂದೆಯ ಪ್ರಶ್ನೆಗೆ ಉತ್ತರಿಸಲಾಗದೆ, ವಿಕ್ರಮ್ ಅಮ್ಮನ ಬಳಿ ಬಂದು ಏನಮ್ಮಾ ನೀನು ನನ್ನ ವಿಷಯ ಅಪ್ಪನಿಗೆ ಹೇಳೇ ಇಲ್ಲವೆಂದು ಕೋಪಿಸಿಕೊಂಡಾಗ
ಖಂಡಿತಾ ನಾನು ಹೇಳಿದ್ದೇನೆ. ನಿಮ್ಮಪ್ಪ ವ್ಯವಹಾರದಲ್ಲಿ ಮರೆತಿರಬೇಕೆಂದು ವಿಕ್ರಮ್ ಅಮ್ಮ ಹೇಳಲು
ಅಮ್ಮಾ ಅದೆಲ್ಲವೂ ನನಗೆ ಗೊತ್ತಿಲ್ಲ ಈ ದಿನ ಸಂಜೆ ಏನಾದರೂ ಮಾಡಿ ಅಪ್ಪನನ್ನು ಕರೆದುಕೊಂಡು ನನ್ನ ಜೊತೆಗೆ ಬರಬೇಕಷ್ಟೇ ಎನ್ನುತ್ತಾನೆ ವಿಕ್ರಮ್
ನಿಮ್ಮಪ್ಪನನ್ನು ಒಪ್ಪಿಸುವುದು ಅಷ್ಚೇನೂ ಸುಲಭದ ಮಾತಲ್ಲ ಎಂದು ನಿನಗೂ ಗೊತ್ತಲ್ಲಾ ವಿಕ್ರಮ್ ಎಂದು ಅವನ ಅಮ್ಮನ ಮಾತಿಗೆ,
ಅಮ್ಮಾ ಏನಾದರೂ ಮಾಡಿ ಒಪ್ಪಿಸಮ್ಮ ಇಲ್ಲದಿದ್ದರೆ ನನ್ನ ಮರ್ಯಾದೆ ಹೋಗುತ್ತದೆ. ನಾನು ಪ್ರೀತಿಸುವ ಹುಡುಗಿಗೆ ಅವಳಪ್ಪ ಬೇರೆ ಮದುವೆ ಮಾಡುತ್ತಾರೆ ಎಂದು ವಿಕ್ರಮ್ ಹೇಳಿದಾಗ
ಅಪ್ಪ ಮೇಲಿದ್ದಾರಾ ಎಂದು ವಿಕ್ರಮ್ ಅಮ್ಮ ಕೇಳಲು
ಹೌದಮ್ಮಾ ಏನೋ ಲೆಕ್ಕಾಚಾರ ಹಾಕುತ್ತಿದ್ದಾರೆಂದು ವಿಕ್ರಮ್ ಹೇಳಿದ ನಂತರ
ಅವನ ಅಮ್ಮನು ಸೀದಾ ತನ್ನ ಗಂಡನ ರೂಮಿಗೆ ಬಂದು ನಿಂತಾಗ.
ಈವರೆಗೂ ಮಗ ಬಂದಿದ್ದ, ಈಗ ಮಗನ ಪರವಾಗಿ ಮಾತನಾಡಲು ನೀನು ಬಂದಿದ್ದೀ ಅಲ್ಲವಾ ಎಂದು ಅವರ‌ ಪತಿ ಪ್ರಶ್ನಿಸಿದಾಗ
ಏನು ಮಾಡೋದು ಮಕ್ಕಳ ಮಾತು ಕೇಳಬೇಕಲ್ಲಾ ಎಂಬ ತನ್ನ ಪತ್ನಿಯ ಮಾತಿಗೆ.
ಏನು ಮಾತು ಕೇಳಬೇಕು? ಅವನು ಏನು ಹೇಳಿದ್ದಾನೆಂದು ವಿಕ್ರಮ್ ತಂದೆ ಕೇಳಿದಾಗ
ಇದೇನ್ರೀ? ಮಗನ ವಿಷಯ ಹೇಳಿದ್ದನ್ಮು ಮರೆತು ಬಿಟ್ರಾ ಎಂಬ ಅವರ ಪತ್ನಿಯ ಮಾತಿಗೆ
ನಾನೇನೂ ಮರೆತಿಲ್ಲ ಮಗನ ಬಾಯಿಂದ ಏನು ಬರುತ್ತದೋ ಎಂದು ಸುಮ್ಮನಿದ್ದೆ ಎನ್ನುತ್ತಾರೆ ಅವರ ಪತಿ
ರೀ ಇವತ್ತೇ ಭಾನುವಾರ ರೀ ಸಂಜೆ ನಾವು ಭಾವಿ ಬೀಗರ ಮನೆಗೆ ಹೋಗಬೇಕಂತೆ ಎಂದು ಅವರ ಪತ್ನಿಯ ಮಾತಿಗೆ
ಮಗನ ತಾಳಕ್ಕೆ ತಕ್ಕಂತೆ ನೀನೂ ಕುಣಿಯುತ್ತಿದ್ದೀಯಲ್ಲಾ ನಿನಗಾದರೂ ಬುದ್ದಿ ಬೇಡವಾ ಎಂದು ವಿಕ್ರಮ್ ತಂದೆ‌ ಕೇಳಲು
ಹಾಗಲ್ಲಾ ರೀ ಮಗನು ಯಾವುದೋ ಹುಡುಗಿಯನ್ನು ಲೌವ್ ಮಾಡಿದ್ದಾನೆ ಈಗ‌ ಬೇಡವೆಂದರೂ ಅವನು ಬಿಡುವುದಿಲ್ಲ. ಸಂಜೆ ಆ ಹುಡುಗಿಯ ಮನೆಗೆ ಹೋಗಿ ಬರೋಣಾ ರೀ ಎಂಬ ವಿಕ್ರಮ್ ತಾಯಿಯ ಮಾತಿಗೆ
ನನಗೆ ತುಂಬಾ ಕೆಲಸವಿದೆ. ನಾನು ಬರುವುದಕ್ಕೆ ಆಗುವುದಿಲ್ಲ ನೀವಿಬ್ಬರೇ ಹೋಗಿ ಬನ್ನಿ ಎಂದು ವಿಕ್ರಮ್ ತಂದೆ ಹೇಳುತ್ತಾರೆ


ಅಪ್ಪ ಅಮ್ಮ ಇಬ್ಬರೂ ಒಟ್ಟಿಗೆ ಹೋದರೆ ಚೆನ್ನಾಗಿ ರುತ್ತದೆ ಮಗನಿಗಾಗಿ ಒಪ್ಪಿಕೊಳ್ರೀ ಎಂದು ದೈನ್ಯತೆಯಿಂದ ಅವರ ಪತ್ನಿ ಕೇಳಿದಾಗ
ನಿನ್ನ ಮಗ ಯಾರನ್ನು ಹೇಳಿ ಕೇಳಿ ಲೌವ್ ಮಾಡಿದಾ? ಈಗ‌ ಅಪ್ಪ ಅಮ್ಮನು ಬೇಕಾಯ್ತಾ ಎಂದು ವಿಕ್ರಮ್ ತಂದೆ ಕೋಪದಿಂದ ಪ್ರಶ್ನಿಸಿದಾಗ
ಯಾವ ಮಕ್ಕಳೂ ಕೂಡಾ ಅಪ್ಪ ಅಮ್ಮನಿಗೆ ಹೇಳಿ ಲೌವ್ ಮಾಡುವುದಿಲ್ಲ. ಲೌವ್ ಮಾಡಿದ ನಂತರವಷ್ಚೇ ಹೇಳುತ್ತಾರೆಂಬುದು ನಿಮಗೆ ಗೊತ್ತಿಲ್ಲವಾ ಎಂದು ಅವರ ಪತ್ನಿ ಕೇಳಲು
ಆಯ್ತು ಈಗೇನು ಮಾಡಬೇಕೆಂದು ವಿಕ್ರಮ್ ತಂದೆಯ ಮಾತಿಗೆ
ಈ ದಿನ ಸಂಜೆ ಅಪ್ಪ ಅಮ್ಮನನ್ನು ಕರೆದುಕೊಂಡು ಬರುವುದಾಗಿ ನಿಮ್ಮ ಮಗ ಹುಡುಗಿಯ ತಂದೆಗೆ ಹೇಳಿದ್ದಾನಂತೆ ಅವನ ಜೊತೆಯಲ್ಲಿ ಹೋಗಬೇಕಷ್ಟೇ ಎನ್ನುತ್ತಾರೆ ವಿಕ್ರಮ್ ತಾಯಿ
ನೋಡು ಈಗ ಸದ್ಯಕ್ಕೆ ಮಗನಿಗೆ ಮದುವೆ ಮಾಡಲು ಆಗುವುದಿಲ್ಲವೆಂದು ಹೇಳು ನಾನು ವ್ಯವಹಾರದಲ್ಲಿ ತುಂಬಾ ಬ್ಯುಸಿಯಾಗಿದ್ದೇನೆ. ಸ್ವಲ್ಪ ಬಿಡುವಾದರೆ ಮದುವೆ ಮಾಡಬಹುದೆಂದು ಹೇಳು ಎಂದು ವಿಕ್ರಮ್ ತಂದೆ ಹೇಳಲು
ಈಗ ಸುಮ್ಮನೆ ಹುಡುಗೀನ ನೋಡಿಕೊಂಡು ಬರೋಣ, ನಂತರ ಮದುವೆ ಮಾಡಿದರಾಯಿತು ಎಂಬ ಅವರ ಪತ್ನಿಯ ಮಾತಿಗೆ
ಹುಡುಗ ಹುಡುಗಿ ಹೇಗಿದ್ದರೂ ಒಬ್ಬರನ್ನೊಬ್ಬರು ಒಪ್ಪೇ ಇದ್ದಾರೆ. ಸಿಂಪಲ್ ಆಗಿ ಮದುವೆ ಶಾಸ್ತ್ರ ಮುಗಿಸೋಣವೆಂದು ಹುಡುಗಿಯ ಅಪ್ಪ ಹೇಳುತ್ತಾರೆ. ಅವರ ಮಾತಿಗೆ ಕಟ್ಟುಬಿದ್ದು, ಒಪ್ಪಿಕೊಂಡು ಎಷ್ಚೇ ಸಿಂಪಲ್ ಎಂದು ಹೋದರೂ ಲಕ್ಷಾಂತರ ರೂಪಾಯಿ ಖರ್ಚು ಆಗೇ ಆಗುತ್ತದೆಂದು ವಿಕ್ರಮ್ ತಂದೆ ನುಡಿಯಲು
ಆರು ತಿಂಗಳು ಮುಂದೆ ಹಾಕೋಣ ನಂತರ ಮದುವೆ ಮಾಡಿದರಾಯ್ತು ಎಂದು ವಿಕ್ರಮ್ ತಾಯಿ ನುಡಿಯುತ್ತಾರೆ
ನೀವೆಲ್ಲಿ ಬಿಡುತ್ತೀರಿ? ನಿಮಗೆ ನನ್ಮ ವ್ಯವಹಾರ ತಿಳಿದಿದ್ದರೆ ಈ ರೀತಿ ಮಾತನಾಡುತ್ತಾ ಇರಲಿಲ್ಲ, ಹೋಗಲೀ ಮುಂದಿನ ವಾರ ಹೋಗೋಣವೆಂದು ಮಗನಿಗೆ ಹೇಳೆಂದು ಅವರ ಪತಿ ನುಡಿಯುವ ವೇಳೆಗೆ
ವಿಕ್ರಮ್ ರೂಮಿಗೆ ಬಂದು ಅಪ್ಪಾ ಅಪ್ಪಾ ಈ ದಿನ ಸುಮ್ಮನೆ ಅವರ ಮನೆಗೆ ಹೋಗಿ ಬರೋಣ ಮುಂದಿನ ವರ್ಷವೇ ಮದುವೆ ಮಾಡುವಿರಂತೆ ಈ ದಿನವೇ ನಿಮ್ಮ ಮನೆಗೆ ಅಪ್ಪ ಅಮ್ಮನನ್ನು ಕರೆದುಕೊಂಡು ಬರುತ್ತೇನೆಂದು ಹೇಳಿದ್ದೇನಪ್ಪಾ ಪ್ಲೀಸ್ ಅಪ್ಪಾ ನೀವಿಬ್ಬರೂ ಬರಲೇಬೇಕೆಂದು ವಿಕ್ರಮ್ ದೈನ್ಯದಿಂದ ಅವನ ಅಪ್ಪನನ್ನು ಕೇಳಿದಾಗ
ಆಯ್ತು ನಡೆಯಪ್ಪಾ ಬರದೇ ಇದ್ದರೆ ನೀವೆಲ್ಲಿ ಬಿಡುತ್ತೀರೆಂದು ವಿಕ್ರಮ್ ತಂದೆ ಹೇಳಲು
ಥ್ಯಾಂಕ್ಸ್ ಅಪ್ಪಾ ಎಂದು ಹೇಳಿ ವಿಕ್ರಮ್ ಹೊರಗೆ ಬರುತ್ತಾನೆ

ರಾತ್ರಿ ಏಳುಗಂಟೆಗೆ ಪುನಃ ಅವನಮ್ಮನಿಗೆ ಹೋಗೋಣವೆಂದು ವಿಕ್ರಮ್ ಹೇಳಲು
ನಿಮ್ಮಪ್ಪನನ್ನು ಕರೆಯಪ್ಪಾ ಎನ್ನುವ ವೇಳೆಗೆ
ವಿಕ್ರಮ್ ತಂದೆಯು ನಾನು ರಡಿ ಎನ್ನುತ್ತಾ ಬಾಗಿಲ‌ ಬಳಿ ಹೋಗಿ ನಿಲ್ಲುತ್ತಾರೆ.
ಐದು ನಿಮಿಷ ಬಂದೆ ಎಂದು ಹೇಳಿ ಅವರಮ್ಮನೂ ರೆಡಿಯಾಗಿ ಬರುವ ವೇಳೆಗೆ
ವಿಕ್ರಮ್ ಅಣ್ಣನೂ ಹೊರಗಿನಿಂದ ಬಂದು ವಿಚಾರ‌ ತಿಳಿದು ತಾನೂ ಬರುತ್ತೇನೆಂದಾಗ
ನಾಲ್ಕು ಜನರೂ ಕಾರಿನಲ್ಲಿ ಕುಳಿತು ಆಶಾ ಮನೆಗೆ ಬಂದು ಕರೆಗಂಟೆ ಒತ್ತಿದಾಗ
ಆಶಾಳ‌ ತಂದೆಯೇ ಬಂದು ಬಾಗಿಲು ತೆಗೆದು ಎದುರಿಗೆ ಮೂರು ಜನರು ನಿಂತಿರುವುದನ್ನು ನೋಡಿ ಬನ್ನಿ ಒಳಗೆ ಎನ್ನುತ್ತಾ,
ನಿಮ್ಮ ತಂದೆ ಬರಲಿಲ್ಲವಾ ಎಂದು ಆಶಾಳ ತಂದೆ ವಿಕ್ರಮ್ ನ ಕೇಳಲು
ಬಂದಿದ್ದಾರೆ ಅಂಕಲ್ ಹೊರಗಡೆ ಫೋನಿನಲ್ಲಿ ಮಾತನಾಡುತ್ತಿದ್ದಾರೆ ಎಂದು ವಿಕ್ರಮ್ ಹೇಳಿದಾಗ
ಬಹಳ ಸಂತೋಷವಾಯಿತು ಬನ್ನಿ ಒಳಗೆ ಎನ್ನುತ್ತಾರೆ ಕೋದಂಡರಾಂ.
ಮೂರು ಜನರೂ ಒಳಗೆ ಬಂದಾಗ.ಸೋಫಾ ಮೇಲೆ ಕುಳಿತುಕೊಳ್ಳುವಂತೆ ಹೇಳಿ ತಾವೂ ಕೂಡಾ ಎದುರಿಗೆ ಕುಳಿತುಕೊಳ್ಳುವ ವೇಳೆಗೆ‌ ಆಶಾ ಕಾಫಿ ತೆಗೆದುಕೊಂಡು ಬಂದು ಮೂರು ಜನರಿಗೂ ಕೊಡುತ್ತಿರುವಾಗ
ವಿಕ್ರಮ್ ಆಶಾಳನ್ನೇ ನೋಡಿಕೊಂಡು ಮುಗುಳ್ನಗುತ್ತಾ ಕಾಫಿಯ ಲೋಟನನ್ನು ನಿಧಾನವಾಗಿ ತೆಗೆದುಕೊಳ್ಳುತ್ತಾನೆ
ಹತ್ತು ನಿಮಿಷವಾದರೂ ವಿಕ್ರಮ್ ತಂದೆ ಫೋನಿನ ಸಂಭಾಷಣೆ ಮುಂದುವರೆದಿರುತ್ತದೆ.


ವಿಕ್ರಮ್ ತಾಯಿ ಬಂದು ಎಲ್ಲರೂ ಕಾಯುತ್ತಿದ್ದಾರೆ ಆಮೇಲೆ ಮನೆಗೆ ಹೋಗಿ ಫೋನ್ ಮಾಡಬಾರದಾ ಎಂದು ಹೇಳಲು
ಒಂದು ನಿಮಿಷ ಬಂದೆ ಎಂದು ಹೇಳಿ ಪುನಃ ಫೋನಿನಲ್ಲಿ ಸಂಭಾಷಣೆ ಯನ್ನು ಮುಂದುವರೆಸಿರುತ್ತಾರೆ.
ಒಳಗಡೆ ಆಶಾ ತಂದೆಯು ಮೂರು ಜನರ ಬಳಿ ಉಭಯ‌ ಕುಶಲೋಪರಿ ಮಾತನಾಡುತ್ತಿರುವಾಗ ಅವರಿಗೂ ಫೋನ್ ಬಂದಿದ್ದು, ಕ್ಷಮಿಸಿ ಎರಡು ನಿಮಿಷ ಬರುತ್ತೇನೆಂದು ಹೇಳಿ ತಮ್ಮ ರೂಮಿಗೆ ಹೋಗಿ ಫೋನ್ ರಿಸೀವ್ ಮಾಡಿ ಮಾತನಾಡುತ್ತಿದ್ದು
ಐದು ನಿಮಿಷವಾದ‌ ನಂತರ ವಿಕ್ರಮ್ ತಂದೆ ಮನೆಯ ಒಳಗೆ ಬಂದಾಗ
ಆಶಾ ಎದ್ದುನಿಲ್ಲುತ್ತಾಳೆ
ಕುಳಿತುಕೊಳ್ಳಮ್ಮಾ ಪರವಾಗಿಲ್ಲವೆಂದು ಹೇಳಿ ತಾವೂ ಕುಳಿತುಕೊಂಡು ನಿಮ್ಮ ತಂದೆ ಶಿಕ್ಷಕರೆಂದು ನನ್ನ ಮಗನೇ ಹೇಳಿದ್ದಾನೆ ನಿಮ್ಮ ತಂದೆಯ ಹೆಸರೇನಮ್ಮಾ ಎಂದು ಕೇಳುವ ವೇಳೆಗೆ ಕೋದಂಡರಾಂ ರವರು ಫೋನಿನ ಸಂಭಾಷಣೆ ಮುಗಿಸಿ ನಡುಮನೆಗೆ ಬಂದಾಗ
ನಮ್ಮಪ್ಪನೇ ಬಂದರೆಂದು ಆಶ ಹೇಳಿದ ನಂತರ
ವಿಕ್ರಮ್ ತಂದೆ ಹಾಗೂ ಆಶಾ ತಂದೆ ಒಬ್ಬರನೊಬ್ಬರು ನೋಡಿದ ತಕ್ಷಣ
ವಿಕ್ರಮ್ ತಂದೆಗೆ ಸ್ವಲ್ಪ ಕಸಿವಿಸಿಯಾಗುತ್ತದೆ ಆದರೂ ಮಾತನಾಡಿ ಓ ಕೋದಂಡರಾಂ ನೀವೇ ಎಂದು ತಿಳಿಯಲಿಲ್ಲವೆಂದು ಹೇಳಿದಾಗ.
ನಿಮ್ಮ ಹೆಸರನ್ನು ನನ್ನ ಮಗಳು ಹೇಳಲೇ ಇಲ್ಲ‌ ಈಗ ನಿಮ್ಮನ್ನು ನೋಡಿದಾಗ ತಿಳಿಯಿತು ಎಂದು ಕೋದಂಡರಾಮ್ ‌ಹೇಳುತ್ತಾರೆ
ಯಾರನ್ನೋ ನನ್ನ ಮಗಳು ಪ್ರೀಸಿಸಿದ್ದಾಳೆಂದು ತಿಳಿದಿದ್ದೆ. ನಮಗೆ ಪರಿಚಯದವರೇ ಆಗಿದ್ದಾರೆ ಪರವಾಗಿಲ್ಲವೆಂದು ವಿಕ್ರಮ್ ತಂದೆಯು ನುಡಿಯಲು
ಋುಣಾನುಬಂಧ ಯಾರಿಗೆ ಗೊತ್ತು ಎಂದು ಆಶಾ ತಂದೆ ನುಡಿಯುತ್ತಾರೆ
ವಿಕ್ರಮ್ ಹಾಗೂ ಆಶಾ ಇಬ್ಬರಿಗೂ ತಮ್ಮ ತಂದೆಯವರುಗಳು ಒಬ್ಬರಿಗೊಬ್ಬರು ಪರಿಚಯವಿದ್ದಾರೆಂದು ತಿಳಿದು ಇನ್ನೂ ಸಂತೋಷವಾಗಿರುತ್ತದೆ.

ಮುಂದುವರೆಯುತ್ತದೆ

ಡಾ. ಎನ್. ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ

  • ಈ ಸಂಚಿಕೆಯಲ್ಲಿ ಕಂಡುಬರುವ ಅಂಶನೇನೆಂದರೆ

ತಂದೆಯ ಗೌರವ‌ ಮರ್ಯಾದೆ ಹೇಗೆ ಮುಖ್ಯವೋ ಅದೇರೀತಿ ಮಕ್ಕಳ‌ ಗೌರವವೂ ಅಷ್ಟೇ ಮುಖ್ಯವಾದದ್ದು, ತಾನು‌ದೊಡ್ಡ ಮನುಷ್ಯ ನನ್ನಿಂದ ನನ್ನ ಮಕ್ಕಳಿಗೆ ಮರ್ಯಾದೆ ಗೌರವ ಬರುತ್ತದೆ.‌ ಎಂದು ತಿಳಿಯುವುದು ಬಹಳ‌ ತಪ್ಪು.
ಅಕಸ್ಮಾತ್ ಯಾರಾದರೂ ಮಕ್ಕಳನ್ನು ತಂದೆಯ ಹೆಸರು ಹೇಳಿ ಗುರುತಿಸಿದಾಗ
ಮಕ್ಕಳಿಗೆ ಹೆಮ್ಮೆ ಎನಿಸುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ‌ಮಕ್ಕಳ ಹೆಸರು ಹೇಳಿ ತಂದೆಯನ್ನು ಗುರುತಿಸಿದರೆ ಕೆಲವರಿಗೆ ಹೆಮ್ಮೆ ಎನಿಸಿದರೆ.
ಇನ್ನೂ ಕೆಲವರಿಗೆ ಕಸಿವಿಸಿಯಾಗಬಹುದು.