ಅಭಿಲಾಷೆ (ಕಾದಂಬರಿ ಭಾಗ – 05)

ಸಂಚಿಕೆ -20

ಹಿಂದಿನ ಸಂಚಿಕೆಯಲ್ಲಿ

ಭಾನುವಾರದ ದಿನ ಆಶಾಳ ಮನೆಗೆ ವಿಕ್ರಮ್ ಬರಲು ಆಗಿರುವುದಿಲ್ಲ. ಮುಂದಿನ ವಾರ ಬರುತ್ತೇನೆಂದು ವಿಕ್ರಮ್ ಹೇಳಿರುತ್ತಾನೆ.

ಕಥೆಯನ್ನು ಮುಂದುವರೆಸುತ್ತಾ

ವಿಕ್ರಮ್ ಮುಂದಿನ ಭಾನುವಾರ ಬರುತ್ತೇನೆಂದಾಗ
ಆಶಾ ನಿರಾಸೆಯಿಂದ ಆಯ್ತು ಮುಂದಿನ ವಾರ ತಪ್ಪದೆ ಬರಬೇಕೆಂದು ಹೇಳಿ ಪುೋನ್ ಆಫ್ ಮಾಡುತ್ತಾಳೆ.

ಅಂದು ರಾತ್ರಿ ಊಟ ಮಾಡುತ್ತಿರುವಾಗ ಆಶಾ ಮಾತನಾಡಿ ಅಪ್ಪಾ ಹೋದ ಭಾನುವಾರ ನೀನು ಬರಲಿಲ್ಲ.ಈ ಭಾನುವಾರ ವಿಕ್ರಮ್ ಬರಲಿಲ್ಲ. ಮುಂದಿನ ಭಾನುವಾರವಾದರೂ ತಪ್ಪದೆ ವಿಕ್ರಮ್ ಗೆ ಮನೆಗೆ ಬರಲು ಹೇಳುತ್ತೇನೆ,ನೀನು ಎಲ್ಲಿಗೂ ಹೋಗಬೇಡ ಎಂದಾಗ,
ಒಂದು ಕೆಲಸ ಮಾಡು ಮಗಳೇ ಊಟವಾದ ನಂತರ ವಿಕ್ರಮ್ ಗೆ ಫೋನ್ ಮಾಡು, ನಾನು ಎರಡು ಮಾತನಾಡುತ್ತೇನೆ. ನಂತರ ಮುಂದಿನ ಭಾನುವಾರವೇ ಅವರ ಅಪ್ಪನಿಗೆ ಬರಲು ಹೇಳುತ್ತೇನೆ, ಒಟ್ಟಿಗೆ ಒಂದೇ ಸಲ ಮದುವೆಯ ಮಾತುಕತೆ ಮಾತನಾಡೋಣವೆಂಬ ಕೋದಂಡರಾಮ್ ರವರ ಮಾತಿಗೆ,
ಓ ಆಗಬಹುದಪ್ಪಾ, ಇನ್ನೂ ಒಳ್ಳೆಯದೇ ಆಯ್ತು ಎಂದು ಆಶಾ ಹೇಳಿ ಬೇಗನೇ ಊಟ ಮಾಡಿ ತನ್ನ ತಂದೆಯ ಊಟವಾದ ತಕ್ಷಣ ವಿಕ್ರಮ್ ಗೆ ಫೋನ್ ಮಾಡಿ ಈಗ ನಿಮ್ಮ ಬಾವಿ ಮಾವ ಮಾತನಾಡುತ್ತಾರಂತೆ, ನಂತರ ಮುಂದಿನವಾರವೇ ನನ್ನ ಬಾವಿ ಅತ್ತೆ ಮಾವನ ನಮ್ಮ ಮನೆಗೆ ಕರೆದುಕೊಂಡು ಬರುವಂತೆ ಹೇಳುತ್ತಾರೆಂದಾಗ
ಓಕೆ ಡಿಯರ್ ಆಗಬಹುದು ನಿಮ್ಮ ತಂದೆ ಸಮಯವನ್ನು ಉಳಿಸುವುದರಲ್ಲಿ ಬಹಳ ಬುದ್ದಿವಂತರೆಂದಾಗ
ನಮ್ಮ ತಂದೆ ಟೀಚರ್ ಜೊತೆಗೆ ಬಹಳ ವ್ಯವಹಾರಸ್ಥರು ಆದರೆ ಮಾತ್ರ ಬಹಳ ಸ್ಟ್ರಿಕ್ಟ್ ಅದಕ್ಕೆ ಹೇಳಿದ್ದಾರೆ ಎನ್ನುತ್ತಿರುವಾಗ.
ಅವಳಪ್ಪನು ಊಟ ಮಾಡಿ ಹೆಗಲ ಮೇಲಿದ್ದ ಟವಲಿನಿಂದ ಕೈ ಒರಸಿಕೊಳ್ಳುತ್ತಾ,, ಯಾರಮ್ಮಾ ವ್ಯವಹಾರಸ್ಥರು ಸ್ಟ್ರಿಕ್ಟ್ ಎಂದು ಯಾರಿಗೆ ಹೇಳುತ್ತಿದ್ದೀಯಾ ಎಂದು ಕೇಳಿದಾಗ
ಅಪ್ಪಾ ವಿಕ್ರಮ್ ಮಾತನಾಡುತ್ತಿದ್ದಾರೆ, ನೀನು ಮಾತನಾಡಬೇಕು ಎಂದು ಹೇಳಿದೆಯಲ್ಲಾ ಎಂದು ಆಶಾ ಹೇಳಲು
ಮೊಬೈಲ್ ಕೋಡಮ್ಮಾ ಎಂದು ಕೋದಂಡರಾಮ್ ಕೇಳಿದಾಗ
ಈಗ ನಮ್ಮಪ್ಪ ಮಾತನಾಡುತ್ತಾರೆಂದು ವಿಕ್ರಮ್ ಗೆ ಹೇಳಿ
ತನ್ನ ತಂದೆಗೆ ಮೊಬೈಲ್ ಕೊಡಲು ಹೋದಾ ಸ್ಪೀಕರ್ ಆನ್ ಮಾಡು, ನಿಮ್ಮಮ್ಮನನ್ನು ಕರಿ ಎಲ್ಲರಿಗೂ ವಿಷಯ ತಿಳಿಯಲಿ ಎಂದಾಗ
ರಶ್ಮಿಯು ಮೊಬೈಲ್ ಸ್ಪೀಕರ್ ಆನ್ ಮಾಡಿ ಟೀಪಾಯಿಯ ಮೇಲಿಡುತ್ತಾಳೆ.
ವಿಕ್ರಮ್ ಮನಸ್ಸಿನಲ್ಲಿ ಅಯ್ಯೋ ಎದುರಿಗೆ ಹೋಗಿ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತು, ಮೊದಲೇ ನಮ್ಮಪ್ಪ ಬಹಳ ಸ್ಟ್ರಿಕ್ಟ್ ಎಂದು ಆಶಾ ಹೇಳಿದ್ದಾಳೆ, ಏನು ಕೇಳುತ್ತಾರೋ ಏನು ಹೇಳಬೇಕೋ ಎಂದು ಅಳುಕುತ್ತಾ, ಹಲೋ ಎನ್ನುತ್ತಾನೆ.
ಹಲೋ ನಾನು ಕೋದಂಡರಾಮ್ ಮಾತನಾಡುತ್ತಿರುವುದು ಎಂದು ಆಶಾಳ ಅಪ್ಪ ಉತ್ತರಿಸಲು
ವಿಕ್ರಮ್ ಮಾತನಾಡಿ ನಮಸ್ಕಾರ ಅಂಕಲ್ ಎನ್ನುತ್ತಾನೆ.
ನಿಮ್ಮ ಬಗ್ಗೆ ನನ್ನ ಮಗಳು ಎಲ್ಲಾ ಹೇಳಿದ್ದಾಳೆ. ಯಾವ ಕಂಪೆನಿಯಲ್ಲಿ ಕೆಲಸ ಮಾಡುತ್ತೀರಾ ಎಂಬ ಕೋದಂಡರಾಂ ಪ್ರಶ್ನೆಗೆ,
ನಾನು ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ‌ ಮಾಡುತ್ತಿದ್ದೇನೆ ಅಂಕಲ್ ಎಂದು ವಿಕ್ರಮ್ ಉತ್ತರಿಸುತ್ತಾನೆ
ನಿಮ್ಮ ತಂದೆ ಏನು ಮಾಡುತ್ತಿದ್ದಾರೆಂಬ ಕೋದಂಡರಾಮ್ ರವರ ಮರು ಪ್ರಶ್ನೆಗೆ
ಅಂಕಲ್ ನಮ್ಮ ತಂದೆ ದೊಡ್ಡ ಬಿಸಿನೆಸ್ ಮನ್ ಎನ್ನುತ್ತಾನೆ ವಿಕ್ರಮ್
ದೊಡ್ಡ ಬಿಸ್ ನೆಸ್‌ಮೆನ್ ಎಂದರೆ ಮಲ್ಟಿ ಮಿಲಿಯನೇರ್ ಇರಬೇಕೆಂದು ಕೋದಂಡರಾಂ ರವರು ಹೇಳಲು
ಹಾಗೇನಿಲ್ಲಾ ಅಂಕಲ್, ನಮ್ಮದೇ ಒಂದು ಫ್ಯಾಕ್ಟರಿ ಇದೆ. ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆಂದು ವಿಕ್ರಮ್ ಹೇಳಿದಾಗ
ನಿಮ್ಮದೇ ಕಂಪೆನಿಯಿರುವಾಗ, ನಿಮ್ಮ ತಂದೆಗೆ ಸಹಾಯ ಮಾಡದೆ ನೀವೇಕೆ ಹೊರಗಡೆ ದುಡಿಯುತ್ತಿದ್ದೀರಾ ಎಂದು ಕೋದಂಡರಾಮ್ ರವರು ಪ್ರಶ್ನಿಸಿದಾಗ
ಅಂಕಲ್ ನನಗೆ ನನ್ಮ ಸ್ವಂತ ಬಲದ ಮೇಲೆ ನಿಲ್ಲಬೇಕೆಂಬ ಹಂಬಲ‌ ಅದಕ್ಕೆ ನಾನು ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾನೆ ವಿಕ್ರಮ್
ಓ ಹೋ ಪರವಾಗಿಲ್ಲಾ, ಒಳ್ಳೆಯ ಸ್ವಾಭಿಮಾನಿಯೇ ಇರಬೇಕೆಂದಾ‌ಗ
ಹಾಗೇನಿಲ್ಲಾ ಅಂತಲ್‌ ಈ ಕಂಪೆನಿಯಲ್ಲಿ ಕೆಲವು ವರ್ಷಗಳು ಕೆಲಸ‌ ಮಾಡಿ ನಂತರ ನಮ್ಮಪ್ಪನ ಜೊತೆಗೆ ಸೇರಿಕೊಂಡು ಕಂಪೆನಿಯನ್ನು ನಡೆಸಿಕೊಂಡು ಹೋಗುತ್ತೇನೆ ಎಂದಾಗ
ಕೋದಂಡರಾಂ ರವರು ಆಗಲಪ್ಪಾ ದೇವರು ಒಳ್ಳೆಯದು ಮಾಡಲಿ ಎನ್ನುತ್ತಾರೆ.
ಕೆಲವು ವಿಚಾರಗಳನ್ನು ಮಾತನಾಡಿ, ನಿಮ್ಮ ತಂದೆ ತಾಯಿಗೆ ನೀನು ನನ್ನ ಮಗಳನ್ನು ಲೌವ್ ಮಾಡುತ್ತಿರುವ ವಿಷಯ ಗೊತ್ತಾ? ಅವರಿಗೂ ಒಪ್ಪಿಗೆ ಇದೆಯಾ? ಎಂದು ಕೋದಂಡರಾಮ್ ಕೇಳಲು
ಅಂಕಲ್‌ ನಾನು ನಿಮ್ಮ ಮಗಳನ್ನು ಲೌವ್ ಮಾಡಿದ್ದೇನೆ ಮದುವೆಯಾಗುವುದಾಗಿ ಇಬ್ಬರೂ‌ ಡಿಸೈಡ್ ಮಾಡಿದ್ದೇವೆ. ನಮ್ಮಪ್ಪ ಅಮ್ಮನಿಗೂ ಹೇಳಿದ್ದೇನೆ. ಅಕಸ್ಮಾತ್ ಅವರು ಒಪ್ಪದಿದ್ದರೂ ಪರವಾಗಿಲ್ಲ, ನಾನು ಮಾತ್ರ ನಿಮ್ಮ ಮಗಳನ್ನು ಮದುವೆಯಾಗುತ್ತೇನೆ ಎಂದು ಹೇಳಿದಾಗ


ನಿಮ್ಮ ದೃಢವಾದ‌ ಪ್ರೀತಿಗೆ ತುಂಬಾ ಸಂತೋಷವಾಗಿದೆ‌‌ ವಿಕ್ರಮ್, ನಿಮ್ಮ ಸ್ವಾಭಿಮಾನ ನೀವು ಪ್ರೀತಿಗೆ ಕೊಡುವ ಮಹತ್ವ ಎಲ್ಲವನ್ನೂ ನೋಡಿ ಬಹಳ ಖುಷಿಯಾಗಿದೆ, ಮುಂದಿನ ಭಾನುನಾರ ತಪ್ಪದೆ‌ ನಮ್ಮ ಮನೆಗೆ ನಿಮ್ಮ ಅಪ್ಪ ಅಮ್ಮನನ್ನು ಕರೆದುಕೊಂಡು ಬಂದರೆ, ಮದುವೆ ಮಾತುಕತೆ ಮುಗಿಸೋಣವೆಂದಾಗ
ಖಂಡಿತ ಕರೆದುಕೊಂಡು ಬರುತ್ತೇನೆಂದು ವಿಕ್ರಮ್ ಹೇಳಲು
ಭಾನುವಾರ ಮೀಟ್ ಮಾಡೋಣವೆಂದು ಕೋದಂಡರಾಂ ರವರು ಹೇಳಿ ಫೋನ್ ಆಫ್ ಮಾಡುತ್ತಾರೆ.
ವಿಕ್ರಮ್ ಹಾಗೂ ಅವಳಪ್ಪನ ಸಂಭಾಷಣೆ ಕೇಳಿದ ಆಶಾಳಿಗಂತೂ ತುಂಬಾ ಸಂತೋಷವಾಗಿರುತ್ತದೆ.
ಅವಳಮ್ಮನು ಮಾತನಾಡಿ, ಹುಡುಗ ತುಂಬಾ ಒಳ್ಳೆಯವನಿದ್ದಂತೆ ಕಾಣುತ್ತಾನೆ. ಅವನ ಮಾತು ನಡೆ ನುಡಿ ನೋಡಿ ನನಗಂತೂ ಸಂತೋಷವಾಯ್ತೆಂದು ಹೇಳಲು
ಅವನ ಅಪ್ಪ ಅಮ್ಮ ಏನು ಹೇಳುತ್ತಾರೋ ನೋಡೋಣವೆಂಬ ಕೋದಂಡರಾಂ ಮಾತಿಗೆ,
ಅವನಪ್ಪ ಅಮ್ಮ ಒಪ್ಪಲಿ ಬಿಡಲಿ ನಾನಂತೂ ನಿಮ್ಮ ಮಗಳನ್ನು ಮದುವೆಯಾಗುತ್ತೇನೆಂದು ಹೇಳಿದ್ದಾನಲ್ಲಾ, ಎಂದು ಆಶಾ‌‌ಳ ಅಮ್ಮನು ನುಡಿಯಲು,
ನಾನು ಅನಾಥನಿಗೆ ಮಗಳನ್ನು ಕೊಡುವುದಿಲ್ಲವೆಂಬ ಕೋದಂಡರಾಮ್ ರವರ ಆಶ್ಚರ್ಯಕರವಾದ ಮಾತಿಗೆ
ಯಾರಪ್ಪಾ ಅನಾಥರು? ಅವರಪ್ಪ ದೊಡ್ಡ ಬಿಸ್ನೆಸ್ ‌ಮೆನ್ ಎಂದು ಹೇಳಿದ್ದಾನೆ.ಅವರಮ್ಮನೂ ಮನೆಯಲ್ಲೇ ಇದ್ದಾರಂತೆ ಎಂದು ಆಶಾ ನುಡಿಯಲು
ಹೌದಮ್ಮಾ ಅದು ನನಗೂ ಗೊತ್ತು ಆದರೆ, ನಮ್ಮಪ್ಪ ಅಮ್ಮ ಒಪ್ಪದಿದ್ದರೂ ನಾನಂತೂ ನಿಮ್ಮ ಮಗಳನ್ನು ಮದುವೆಯಾಗುತ್ತೇನೆಂದು ಹೇಳಿದನಲ್ಲಾ ಮಗಳೇ ಎಂದು ಕೋದಂಡರಾಮ್ ‌ಹೇಳಲು
ಹೌದಪ್ಪಾ ಇದರಲ್ಲೇನು ತಪ್ಪು? ಅವರು ಅಷ್ಟರಮಟ್ಟಿಗೆ ನನ್ನ ಪ್ರೀತಿಸುತ್ತಿದ್ದಾರೆಂದು ಹೇಳಿದ್ದಾರೆ ಅಷ್ಚೇ ಎಂದು ಆಶಾ‌ ವಿಕ್ರಮ್ ನನ್ನು ಆಶಾ ಡಿಫೆಂಡ್ ಮಾಡಲು
ಹೌದಮ್ಮಾ ಅದು ನನಗೂ‌ ಗೊತ್ತಿದೆ. ಪ್ರೀತಿಯೇ ಜೀವನವಲ್ಲ, ಅದೊಂದು ನಮ್ಮ ಜೀವನದ ಒಂದು ಭಾಗವಷ್ಟೇ. ಪ್ರೀತಿ ಒಂದಿದ್ದರೆ ಹಸಿವಾಗುವುದಿಲ್ಲವಾ? ನಿದ್ದೆ ಬರುವುದಿಲ್ಲವಾ? ನಾನು ಪ್ರೀತಿಸುತ್ತಿದ್ದೇನೆಂದು ಹೇಳಿ ಕೆಲಸ ಮಾಡದೆ ಇರಲು ಆಗುತ್ತದಾ ಮಗಳೇ? ಅವನಪ್ಪ ಅಮ್ಮ ಒಪ್ಪದಿದ್ದರೆ‌ ಏನು ಮಾಡುತ್ತಾನೆ?
ಅಪ್ಪ ಅಮ್ಮ ಒಪ್ಪಲಿ ಬಿಡಲಿ ನಾನಂತೂ ನಿಮ್ಮ ಮಗಳನ್ನು ಮದುವೆಯಾಗುತ್ತೇನೆಂದು ಹೇಳಿದ್ದಾರಲ್ಲಾ? ಅಪ್ಪ ಎಂದು ಆಶಾ ಪುನಃ ಹೇಳಲು
ಹೌದಮ್ಮಾ ಅಪ್ಪ ಅಮ್ಮ ಒಪ್ಪದೆ ಮದುವೆಯಾದರೆ ಇವನನ್ನು ಮನೆಗೆ ಸೇರಿಸುವುದಿಲ್ಲ, ಆಗ ,ಅಪ್ಪ ಅಮ್ಮ ಇದ್ದರೂ ಬೇರೆ ಬಂದರೆ ಅನಾಥನಾಗುವುದಿಲ್ಲವಾ? ಎಂದು ಕೋದಂಡರಾಮ್ ಕೇಳಿದಾಗ
ಅಪ್ಪಾ ಎಷ್ಟೋ ಜನ ಅಪ್ಪ ಅಮ್ಮ ಇದ್ದರೂ ಬೇರೆ ಮನೆಯಲ್ಲಿ ಜೀವನ ನಡೆಸುತ್ತಿಲ್ಲವಾ? ಅಥವಾ ವೃದ್ದಾಶ್ರಮಕ್ಕೆ ಸೇರಿಸಿಲ್ಲವಾ ಅವರೆಲ್ಲಾ‌ ಅನಾಥರಾ ಎಂದು ಆಶ ಪ್ರಶ್ನಿಸಿದಾಗ
ನನಗೆ ಬೇರೆಯವರ ವಿಷಯ ಬೇಡಮ್ಮಾ, ನನ್ನ ಅಳಿಯನಾಗುವವನು ಅಪ್ಪ ಅಮ್ಮನ ಜೊತೆಯಲ್ಲಿ ಇರಬೇಕಷ್ಟೇ ಎಂಬ ಕೋದಂಡರಾಮ್ ಮಾತಿಗೆ
ಅಯ್ಯೋ ಇದೇನು ಅಪ್ಪ ಮಗಳು ಈ ರೀತಿ ಜಗಳವಾಡುತ್ತಿದ್ದೀರಲ್ಲಾ?
ಮುಂದಿನ ಭಾನುವಾರ‌ ಆ ಹುಡುಗನ ಅಪ್ಪ ಅಮ್ಮ ಬರದೇ, ಹುಡುಗ ಒಬ್ಹನೇ ಬಂದರೆ ಆಗ ಈ ಮದುವೆ ಅಪ್ಪ ಅಮ್ಮನಿಗೆ ಇಷ್ಟವಿಲ್ಲವೆಂದು ಡಿಸೈಡ್‌ ಮಾಡಬಹುದು. ಅಲ್ಲಿಯವರೆಗೆ ಸುಮ್ಮನಿರಿ ಎಂದು ಅವಳಮ್ಮ ರೇಗಿಕೊಂಡಾಗ
ಹೋಗಲೀ ಬಿಡಮ್ಮಾ ಈಗ ಆ ಮಾತು ಬೇಡ, ಭಾನುವಾರ‌ ನೋಡೋಣವೆಂದು ಹೇಳಿ ಕೋದಂಡರಾಮ್ ರವರು ಮಲಗಲು ಹೋಗುತ್ತಾರೆ

ಮುಂದುವರೆಯುತ್ತದೆ

ಡಾ. ಎನಿಸ್. ಮುರಳೀಧರ್ ವಕೀಲರು ಹಾಗೂ ಸಾಹಿತಿ ನೆಲಮಂಗಲ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯ‌ ಅಂಶವೇನೆಂದರೆ

ಹೆತ್ತವರನ್ನು ಸಾಕಲಾಗದೆ ವೃದ್ಧಾಶ್ರಮಕ್ಕೆ ಮಕ್ಕಳು ಸೇರಿಸಿದರೆ, ಅಂತಹ ಮಕ್ಕಳು ಹೆತ್ತವರಿದ್ದರೂ ಅನಾಥರೇ ಹಾಗೆಯೇ ಮಕ್ಕಳಿದ್ದು ವೃದ್ದಾಶ್ರಮದಲ್ಲಿರುವ ಹೆತ್ತವರೂ ಕೂಡಾ ಒಂದು ರೀತಿಯಲ್ಲಿ ಅನಾಥ ರಾಗಿರುತ್ತಾರೆಂಬುದು ಕಹಿಸತ್ಯವಲ್ಲವೇ?