ಅಭಿಲಾಷೆ (ಕಾದಂಬರಿ ಭಾಗ 04)
ಸಂಚಿಕೆ -19
ಹಿಂದಿನ ಸಂಚಿಕೆಯಲ್ಲಿ
ಭಾನುವಾರ ಆಶಾಳ ಪ್ರಿಯತಮ ವಿಕ್ರಮ್ ನನ್ನು ಮನೆಗೆ ಬರಲು ಹೇಳಿ, ರಾತ್ರಿ ಎಷ್ಟೊತ್ತಾದರಾ ಕೋದಂಡರಾಂ ರವರು ಮನೆಗೆ ಬಂದಿರುವುದಿಲ್ಲ
ಕಥೆಯನ್ನು ಮುಂದುವರೆಸುತ್ತಾ
ನಿಮ್ಮ ತಂದೆ ಮನೆಗೆ ಬಂದ್ರಾ ಎಂದು ಆಶಾಳಿಗೆ ವಿಕ್ರಮ್ ಫೋನ್ ಮಾಡಿ ಸಾಕಾಗಿರುತ್ತದೆ.ಆದರೂ ಕೋದಂಡರಾಂ ರವರು ಮನೆಗೆ ಬಂದಿರುವುದಿಲ್ಲ.
ಇದರಿಂದ ಆಶಾಳಿಗೂ ಬೇಸರವಾಗಿದ್ದು, ಅಪ್ಪ ಏಕೆ ಹೀಗೆ ಮಾಡಿದರೆಂದು ತಿಳಿಯದೆ ತೊಳಲಾಡುತ್ತಾಳೆ.
ರಾತ್ರಿ ಹತ್ತು ಗಂಟೆಗೆ ಕೋದಂಡರಾಂ ರವರು ಆಟೋದಲ್ಲಿ ಮನೆಗೆ ಬಂದಾಗ
ಆಶಾಳಿಗೆ ಕೋಪ ತಡೆಯಲು ಆಗುವುದಿಲ್ಲ.ಏನಪ್ಪಾ ನೀನು ವಿಕ್ರಮ್ ಗೆ ಬರಲು ಹೇಳಿ ನೀನೇ ಬರಲಿಲ್ಲ.ಅವರು ಎಷ್ಚು ಬೇಜಾರುಮಾಡಿಕೊಂಡಿದ್ದಾರೆ ಗೊತ್ತಾ? ಎಂದು ಆಶಾ ಕೋಪದಿಂದ ಪ್ರಶ್ನಿಸಲು.
ಮಗಳೇ ಈ ಭಾನುವಾರ ಇಲ್ಲದಿದ್ದರೆ ಮುಂದಿನ ಭಾನುವಾರ ಕರೆಸಮ್ಮಾ ಯಾರು ಬೇಡ ಎಂದವರು? ಎನ್ನುತ್ತಾರೆ ಕೋದಂಡರಾಮ್
ಅಪ್ಪಾ ನಿನಗೆ ಈ ಮದುವೆ ಇಷ್ಟವಿಲ್ಲ ಅದಕ್ಕೆ ನೀನು ಬೇಕಂತಲೇ ಬರಲಿಲ್ಲವೆಂದಾಗ
ಖಂಡಿತಾ ಇಲ್ಲಾ ಮಗಳೇ ಬೇಗ
ನೆ ಬರಬೇಕಂತಲೇ ಇದ್ದೆ ಆದರೆ ನನ್ನ ಸ್ನೇಹಿತ ಬಿಡಲಿಲ್ಲ ಎಂದಾಗ
ಏನು ಅವರ ಪ್ರಾಬ್ಲಮ್ ಆಗಿತ್ತೆಂದು ಆಶಾ ಪ್ರಶ್ನಿಸಲು
ಬೇಡಾ ಬಿಡಮ್ಮಾ ಅದೊಂದು ದೊಡ್ಡ ಕಥೆ ಎನ್ನುತ್ತಾರೆ ಕೋದಂಡರಾಂ
ಏನು ದೊಡ್ಡ ಕಥೆ ಹೇಳಬಾರದಾ ಎಂದು ಆಶಾ ಪುನಃ ಪ್ರಶ್ನಿಸಲು
ಸಮಯ ಬಂದಾಗ ಹೇಳುತ್ತೇನೆ ಎಂದು ಹೇಳಿ ಫ್ರೆಶ್ ಅಪ್ ಆಗಲು ಹೋಗುತ್ತಾರೆ.
ಆ ವೇಳೆಗೆ ವಿಕ್ರಮ್ ಪುನಃ ಆಶಾಳಿಗೆ ಫೋನ್ ಮಾಡಿ ನಿಮ್ಮ ತಂದೆ ಬಂದ್ರಾ ಎಂದು ಪ್ರಶ್ನಿಸಿದಾಗ
ಈಗತಾನೇ ಬಂದ್ರು ಎನ್ನುತ್ತಾಳೆ ಆಶಾ
ಈಗಲೇ ನಿಮ್ಮ ಮನೆಗೆ ಬರಲಾ ಎಂದು ವಿಕ್ರಮ್ ಕೇಳಲು
ಅಪ್ಪನನ್ನು ಕೇಳುತ್ತೇನೆಂದು ಹೇಳು,
ಫ್ರೆಶ್ ಅಪ್ ಆಗಿ ಹೊರಗೆ ಬಂದ ಅವಳಪ್ಪನನ್ನು ಅಪ್ಪಾ ಈಗ ವಿಕ್ರಮ್ ಈಗ ಮನೆಗೆ ಬರಲಾ ಎಂದು ಕೇಳುತ್ತಿದ್ದಾರೆ ಎಂದು ಆಶಾ ಅವಳಪ್ಪನನ್ನು ಕೇಳಿದಾಗ.
ಕೋದಂಡರಾಮ್ ಈಗ ಟೈಮ್ ಎಷ್ಟಮ್ಮಾ ಎನ್ನುತ್ತಾರೆ
ಒಂಬತ್ತೂ ವರೆಯಾಗಿದೆ ಎಂದು ಆಶ ಹೇಳಿದಾಗ
ನಿನ್ನ ಸ್ನೇಹಿತ ಇರುವುದೆಲ್ಲಿ ಎಂಬ ಕೋದಂಡರಾಂ ಪ್ರಶ್ನೆಗೆ
ಜೆಪಿ ನಗರದಲ್ಲಿದ್ದಾರೆಂದು ಆಶಾ ಹೇಳಿದಾಗ
ಯಾರಮ್ಮಾ ನಿನ್ನ ಸ್ನೇಹಿತ? ಸ್ವಲ್ಪವಾದರೂ ಕಾಮನ್ ಸೆನ್ಸ್ ಇಲ್ಲವಾ ಅವನಿಗೆ? ಅವನು ಬರುವುದಕ್ಕೆ ಏನಿಲ್ಲಾ ಎಂದರೂ ಒಂದು ಗಂಟೆಯಾಗುತ್ತದೆ. ಅಂತಹ ಅರ್ಜಂಟೇನಿದೆ? ಮುಂದಿನ ವಾರ ಬೆಳಿಗ್ಗೆಯೇ ಬರಲು ಹೇಳು ಎನ್ನುತ್ತಾ ತಮ್ಮ ರೂಮಿಗೆ ಹೋಗುತ್ತಾರೆ.
ನಂತರ ಆಶಾ ವಿಕ್ರಮ್ ಗೆ ಫೋನ್ ಮಾಡಿ ಮುಂದಿನ ವಾರ ಬರಲು ಹೇಳಿದಾಗ
ಅಯ್ಯೋ ಇನ್ನೂ ಒಂದು ವಾರ ಕಾಯಬೇಕಾ ಎಂದುಕೊಂಡು ಬೇಸರದಿಂದ ಆಯ್ತು ಎಂದು ಹೇಳಿ ವಿಕ್ರಮ್ ಫೋನ್ ಆಫ್ ಮಾಡುತ್ತಾನೆ.
ವಿಕ್ರಮ್ ಗೆ ಒಂದು ವಾರ ಹೇಳಿರುವುದು ಒಂದು ವರ್ಷದಂತೆ ಆಗಿರುತ್ತದೆ. ಎಂದಿಗೆ ಪುನಃ ಭಾನುವಾರ ಬರುತ್ತದೋ ತಾನು ಯಾವಾಗ ಆಶಾಳ ಅಪ್ಪನೊಂದಿಗೆ ಮಾತನಾಡಿ ಮದುವೆಗೆ ಒಪ್ಪಿಸುತ್ತೇನೆಯೋ ಎಂದು ಬಕಪಕ್ಷಿಯಂತೆ ಕಾಯುತ್ತಿರುತ್ತಾನೆ.
ಅಂದು ಭಾನುವಾರವೂ ಬಂದಿದ್ದು,
ಆಶಾ ಬೇಗನೆ ಎದ್ದು, ರಡಿಯಾಗಿ, ತನ್ನ ತಂದೆಗೆ ಎಲ್ಲಿಗೂ ಹೋಗದಂತೆ ತಾಕೀತು ಮಾಡಿರುತ್ತಾಳೆ.
ಆಗಲಮ್ಮಾ ಆ ನಿನ್ನ ಸ್ನೇಹಿತ ಈ ದಿನ ಬರಲಿ, ಅವನ ಬಳಿ ಮಾತನಾಡಿ, ನಂತರ ಅವನ ಅಪ್ಪ ಅಮ್ಮ ಕರೆಸಿ ಮಾತನಾಡೋಣವೆನ್ನುತ್ತಾರೆ ಕೋದಂಡರಾಂ
ಥ್ಯಾಂಕ್ ಯೂ ಅಪ್ಪ ಎಂದು ಹೇಳಿ ವಿಕ್ರಮ್ ಗೆ ಫೋನ್ ಮಾಡಿದಾಗ
ಇನ್ನು ಅರ್ಧಗಂಟೆಯಲ್ಲಿ ನಿಮ್ಮ ಮನೆಯಲ್ಲಿರುತ್ತೇನೆಂದು ವಿಕ್ರಮ್ ಹೇಳಿದಾಗ.
ಬೇಗ ಬರಬಾರದಾ? ನಮ್ಮಪ್ಪ ಎಲ್ಲಾದರೂ ಹೋದರೆ ಹೋದ ವಾರದಂತೆ ಆಗುತ್ತದೆಂದು ಆಶಾ ಹೇಳಲು
ರಡಿಯಾಗಿದ್ದೇನೆ ಇನ್ನು ಐದು ನಿಮಿಷದಲ್ಲಿ ಹೊರಟು ಬರುತ್ತೇನೆಂದು ಹೇಳಿ ವಿಕ್ರಮ್ ಫೋನ್ ಆಫ್ ಮಾಡುತ್ತಾನೆ
ಹನ್ನೆರಡು ಗಂಟೆಯಾದರೂ ವಿಕ್ರಮ್ ಬರದೇ ಇರುವುದನ್ನು ಅವಳಪ್ಪ ನೋಡಿ ಇದೇನಮ್ಮಾ ಹೋದವಾರ ನಾನು ಲೇಟಾಗಿ ಬರುವಂತಾಯಿತು ಈ ವಾರ ನಿನ್ನ ಸ್ನೇಹಿತನೇ ಪತ್ತೆ ಇಲ್ಲವೆಂದು ಕೋದಂಡರಾಮ್ ನುಡಿದಾಗ.
ಇನ್ನೇನು ಬರುತ್ತಾರೆ ಇರಪ್ಪಾ ಎಂದು ಆಶಾ ಅವಳಪ್ಪನಿಗೆ ಸಮಾಧಾನ ಮಾಡುತ್ತಾಳೆ
ಊಟದ ಸಮಯವಾದರೂ ವಿಕ್ರಮ್ ಸುಳಿವೇ ಇಲ್ಲದಿರುವುದರಿಂದ ಆಶಾಗೆ ಸಹಜವಾಗಿ ಬೇಸರವಾಗಿರುತ್ತದೆ.
ಆಶಾ ಪದೇ ಪದೇ ವಿಕ್ರಮ್ ಗೆ ಫೋನ್ ಮಾಡಿ ಎಷ್ಟೋತ್ತಾಗುತ್ತದೆಂದು ಕೇಳುತ್ತಿರಲು
ಯಾವಾಗ ಕೇಳಿದರೂ ಹತ್ತು ನಿಮಿಷವೆಂದೇ ಹೇಳುತ್ತ ಕಡೆಗೆ ಸಂಜೆಯೂ ಆಗಿರುತ್ತದೆ.
ಕೋದಂಡರಾಂ ರವರು ಆಶಾಳನ್ನು ಕರೆದು ನಿನ್ನ ಸ್ನೇಹಿತ ಬರುವಂತೆ ಕಾಣುತ್ತಿಲ್ಲ, ನನಗೆ ಸ್ವಲ್ಪ ಕೆಲಸವಿದೆ ಹೊರಗಡೆ ಹೋಗಿ ಬರುತ್ತೇನೆ. ಅಕಸ್ಮಾತ್ ನಿನ್ನ ಸ್ನೇಹಿತ ಬಂದರೆ ತಕ್ಷಣ ಫೋನ್ ಮಾಡು ಬಂದು ಬಿಡುತ್ತೇನೆಂದು ಹೇಳಿದಾಗ
ಅಪ್ಪಾ ಈ ವಾರವೂ ಹೋದವಾರದಂತೆ ಮಾಡುತ್ತೀಯಾ ದಯವಿಟ್ಚು ಇವತ್ತು ಎಲ್ಲೂ ಹೋಗಬೇಡಪ್ಪಾ ಎಂದು ಆಶ ಹೇಳಲು.
ಇಲ್ಲಾ ಮಗಳೇ ಈ ದಿನ ಬೇಗ ಬಂದು ಬಿಡುತ್ತೇನೆ. ಸಿಗುವುದು ಭಾನುವಾರ ಒಂದು ದಿನ ರಜೆ ನನ್ನ ಸ್ನೇಹಿತರನ್ನು ಮಾತನಾಡಿಸಿ ಬರುತ್ತೇನೆಂದು ಹೇಳಿ ಹೊರಗೆ ಹೋಗುತ್ತಾರೆ.
ಕೋದಂಡರಾಂ ರವರು ಬೇಗ ಮನೆಗೆ ಬಂದಾಗ
ಆಶಾಳಿಗೆ ನಿಟ್ಟುಸಿರು ಬಿಟ್ಟಂತಾಗಿ ತಕ್ಷಣ ವಿಕ್ರಮ್ ಗೆ ಫೋನ್ ಮಾಡಲು
ಸಾರಿ ಆಶಾ ಈ ದಿನ ಬಹುಶಃ ಬರುವುದಕ್ಕೆ ಆಗುತ್ತಿಲ್ಲವೆಂದು ವಿಕ್ರಮ್ ಹೇಳಲು
ಈಗ ಎಲ್ಲಿದ್ದೀರಯಾ? ವಿಕ್ರಮ್ ? ಎಂದು ಆಶಾ ಪ್ಪಶ್ನಿಸಲು
ಅಯ್ಯೋ ಏನು ಹೇಳಲಿ, ಬೆಳಗ್ಗಿನಿಂದ ಈವರೆಗೂ ಕರಡಿ ಕೈಯ್ಯಲ್ಲಿ ಸಿಕ್ಕಿಕೊಂಡಂತೆ ನಮ್ಮಫ್ಪನ ಕೈಲಿ ಸಿಕ್ಕಿಕೊಂಡಿದ್ದೇನೆ. ನಮ್ಮಪ್ಪ ಬಿಡುತ್ತಲೇ ಇಲ್ಲ ಆಶಾ ಎಂದು ವಿಕ್ರಮ್ ತನ್ನ ಅಸಹಾಯಕತೆಯನ್ನು ಹೇಳಿದಾಗ
ಬೆಳಿಗ್ಗೆಯೇ ಹೊರಟುಬಾರದಿತ್ತಾ ಎಂಬ ಆಶಾಳ ಪ್ರಶ್ನೆಗೆ
ನಾನು ಬೇಗನೇ ಎದ್ದು ಸಡಗರದಿಂದ ರಡಿಯಾಗಿ ನಿನ್ನ ಮನೆಗೆ ಬರಲು, ಅಮ್ಮಾ ಸ್ವಲ್ಪ ಕೆಲಸ ಇದೆ ಹೋಗಿ ಬರುತ್ತೇನೆಂದು ನಮ್ಮಮ್ಮನಿಗೆ ಹೇಳಿ ಬಾಗಿಲ ಬಳಿ ಬರುವಷ್ಟರಲ್ಲಿ ನಮ್ಮಪ್ಪನು ವಿಕ್ರಮ್ ಈಗ ಎಲ್ಲಿಗೂ ಹೋಗಬೇಡ ನನ್ನ ಜೊತೆಗೆ ಬಾ ಬಹಳ ಮುಖ್ಯವಾದ ಕೆಲಸವಿದೆ ಎಂದು ಹೇಳಿ ಕರೆದುಕೊಂಡು ಬಂದವರು ಈವರೆಗೂ ನನ್ನನ್ನು ಬಿಟ್ಚಿಲ್ಲಾ ಆಶಾ ಈ ಸಲ ನನ್ನಿಂದ ಮಿಸ್ ಆಗಬಹುದು. ಮುಂದಿನವಾರ ಖಂಡಿತಾ ಬರುತ್ತೇನೆಂದು ವಿಕ್ರಮ್ ನುಡಿಯಲು
ಆದಷ್ಟೂ ಬೇಗ ಬಾ ಪ್ಲೀಸ್ ಎಂದು ಹೇಳಿ ಫೋನ್ ಆಫ್ ಮಾಡುತ್ತಾಳೆ
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು
ಹಾಗೂ ಸಾಹಿತಿ ನೆಲಮಂಗಲ