ಸಲಹು ಗಜವದನ
*~~~~~~~~~~~*

*ಗ* ಜವದನ ನೀ ಹರಸೆಮ್ಮ,
*ಗ* ರಿಕೆ, ಮೋದಕವಿಡುವೆವು..
*ಗ* ದ್ದುಗೆಯು ನಿನ್ನಾಸೀನಕೆ
*ಗ* ಳಿಸುವಾಸೆ ನಿನ್ನೊಲವು..

*ಜ* ಗವ ಗೆಲ್ಲೊ ಧೀರ ನೀನು
*ಜ* ಯ ಕರುಣಿಸು ನಮಗೂ.
*ಜ* ನ್ಮ ಪಾವನ ನಿನ್ನ ಭಜಿಸಲು
*ಜ* ನ ಮನವ ಪೊರೆ ಎಂದಿಗೂ..

*ವ* ಕ್ರತುಂಡನೆ  ವಂದಿಸುವೆವು
*ವ* ಧಿಸು ನೀ ಸುಳಿದ ನೋವ.
*ವ* ರ ಪ್ರದಾಯಕನೆ ಸಲಹೆಮ್ಮ ,
*ವ* ರ್ಧಿಸಲಿ ಏಳ್ಗೆಯ ವೈಭವ.

*ದ* ಯೆ ತೋರಿ ಕನಸ ಕುಣಿಸು,
*ದ* ಮನವಾಗಲಿ ತಲ್ಲಣ.
*ದ* ಡ ತಲುಪಿಸು ಬಾಳ ಪಥದಿ
*ದ* ರಿದ್ರವಳಿಯಲಿ ಅನುಕ್ಷಣ.

*ನ* ಮಿಸುವೆವೆಲ್ಲ ಭಕ್ತಿಯಲಿ
*ನ* ಲಿಸು ನೀ ಶುಭವ ಹರಸಿ.
*ನ* ಗುವರಳಲಿ ಇಳೆಯೊಡಲಲಿ
*ನ* ಡೆಸು ಕಹಿಯ ಅಳಿಸಿ…

🍃

.….✍ ದಿನೇಶ್, ಎನ್

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು
🌹🔆🌹