ಕನಸರಳಿಸೊ ಕರ್ತಾರ
—————————–
ಕ ನಸುಗಳ ಕುಣಿಸೊ ಕರ್ತಾರ
ಕ ಣ್ಣುಗಳಂತೆಯೆ ಗುರುದೇವ..
ಕ ಳೆವನಿವನೆ ಬಾಳಿನ ಗೋಳ
ಕ ರ ಮುಗಿವೆ ಬಾಗಿ ಶಿರವ..
ಕಾ ಣದ ಗುರಿಯ ಬಳಿಗೆ ಕರೆಸಿ
ಕಾ ಯುವನಿವ ಸಂತಸವ..
ಕಾ ಲದ ಪಾಠವ ಅರುಹುವನು
ಕಾ ಯಕ ಯೋಗಿ ಗುರುದೈವ..
ಕಿ ರಿ ಕಿರಿಯ ಕಳೆವ ಮಹಾ ಶಕ್ತಿ
ಕಿ ರಿಯರನ್ನೂ ಸಮನೆನುತಲಿ.
ಕಿ ರೀಟ ತೊಡಿಸುವನು ಸಾಧನೆಗೆ
ಕಿ ಮ್ಮತ್ತು ದೊರೆವುದಾಗ ಬಾಳಲಿ..
ಕೀ ರ್ತಿ ಶಿಖರದಿ ಮೆರೆಸುವನೆಮ್ಮ
ಕೀ ಟಲೆಗಳಿಗೆ ಇಟ್ಟು ಕಡಿವಾಣ..
ಕೀ ರು ಸವಿದಂತೆ ಬೋಧನೆ ಶೈಲಿ
ಕೀ ಳು ಮೇಲೆನದೆ ಸಮ ಪಯಣ..
ಕು ಗ್ಗಿದ ಮನದಿ ಭರವಸೆಯ ಸಿರಿ,
ಕು ಡಿ ಚಿಗುರಲು ಆಸರೆ ಗುರು.
ಕು ಟುಕಿ ಕೆಣಕಲಾರರು ಜ್ಞಾನವಿರೆ
ಕು ಣಿವುದು ಗೆಲುವಿನ ಮೊಹರು..
ಕೂ ಡಿ ನಡೆಸುವನು ಯಶದೆಡೆಗೆ
ಕೂ ರಿಸುವನು ವಿಜಯ ಪೀಠದಿ..
ಕೂ ಡಿಟ್ಟ ಕನಸಿಗೆ ನೆಲೆಗಟ್ಟಿವನು
ಕೂ ಡಿ ಬರುವುದು ಯೋಗ ಹರ್ಷದಿ
“””””””””
✍ ದಿನೇಶ್, ಎನ್.
ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 💐💐💐