ಓದುಗರ ಅಪೇಕ್ಷೆಯ ಮೇರೆಗೆ ಇಂದಿನಿಂದ ಪ್ರೇಮಭರಿತ ಸಾಮಾಜಿಕ ಕಳಕಳಿಯುಳ್ಳ‌ ಹಾಗೂ ದೇಶಭಕ್ತಿ ಬಿಂಬಿಸುವ ಅಭಿಲಾಷೆ ಎಂಬ ಹೊಸ‌ ಕಾದಂಬರಿಯನ್ನು ಪ್ರಕಟಿಸುತ್ತಿದ್ದೇವೆ. ಎಲ್ಲರೂ ಓದಿ ಲೇಖಕರನ್ನು ಹರಸಬೇಕೆಂದು ಕೋರುತ್ತೇವೆ 🙏🙏🙏🙏

Table of Contents

ಶ್ರೀಯುತ ಎನ್. ಮುರಳೀಧರ ಅವರ 29 ನೇ ಕೃತಿ ‘ಅಭಿಲಾಷೆ’ ಕಾದಂಬರಿ

ಸಂಚಿಕೆ -01

ಆಗಸ್ಟ್ ಹದಿನೈದನೇ ತಾರೀಕು ದೇಶದಾದ್ಯಂತ ಸ್ವಾತಂತ್ರ್ಯೋತ್ಸವ ಸಂಭ್ರಮದ ದಿನ, ಶಾಲಾ ಕಾಲೇಜು ಆಫೀಸ್ ಗಳಲ್ಲಿ, ಸ್ವಾತಂತ್ರ್ರೋತ್ಸವದ ಆಚರಣೆಯ ನಿಮಿತ್ತ ಎಲ್ಲಾ ಸರ್ಕಾರಿ ಕಟ್ಟಡಗಳು, ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಭಾವುಟವನ್ಮು ಹಾರಿಸಿ ಗೌರವ‌ ಸಲ್ಲಿಸುತ್ತಿರುವುದನ್ನು ಕಂಡು ಪ್ರಜೆಗಳಲ್ಲಿ ದೇಶ ಭಕ್ತಿ ಇಮ್ಮಡಿಯಾಗಿ ದೇಶದ ಸ್ವಾತಂತ್ರ್ಸೋವದ‌ ಸಮಾರಃಭವನ್ನು ನೋಡಿ ಎಲ್ಲರೂ ಪುಳಕಿತರಾಗಿರುತ್ತಾರೆ.

ಅದೇ ರೀತುಯಲ್ಲಿ ತಾಲ್ಲೂಕು ಆಡಳಿತ ನಡೆಸುವ‌ ಸ್ವಾತಂತ್ರ್ಯೋತ್ಸವದ‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಮಕ್ಕಳು ಅವರಿಗಾಗಿ ಮೀಸಲಿರಿಸಿದ್ದ ಸ್ಥಳಗಳಲ್ಲಿ ಆಸೀನರಾಗಿರುತ್ತಾರೆ.
ಈ ಕಥೆಯ ನಾಯಕಿಯ ತಂದೆ ಕೋದಂಡರಾಮ್ ಒಂದು ಶಾಲೆಯ ಶಿಕ್ಷಕರಾಗಿದ್ದು, ಅವರೂ ಕೂಡಾ ತಮ್ಮ ಶಾಲೆಯ ಮಕ್ಕಳೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡಿರುತ್ತಾರೆ.
ನಂತರ, ಅವರ ಶಾಲೆಯಲ್ಲಿ ಆ ಶಾಲಾ‌ ಮಕ್ಕಳೆಲ್ಲಾ ಸೇರಿ ತಮ್ಮ ನೆಚ್ಚಿನ ಗುರುಗಳಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರಿಂದ ಮಕ್ಕಳಿಂದ ಸನ್ಮಾನ ಸ್ವೀಕರಿಸಿ ಮನೆಗೆ ಬರುವ ವೇಳೆಗೆ ಮದ್ಯಾಹ್ನವಾಗಿದ್ದು,
ಮನೆಗೆ ಬಂದು ಬೇರೆ ಕಡೆ ನಡೆದಿರುವ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ನೋಡೋಣವೆಂದು ಟಿವಿಯನ್ನು ಆನ್ ಮಾಡಿ ಕಾರ್ಯಕ್ರಮ ವೀಕ್ಷಿಸುತ್ತ ಭಾವುಕರಾಗಿ ಮೌನದಿಂದ ಇರುವಾಗ
ಅವರ ಪತ್ನಿ ಮೈಥಿಲಿಯವರು ಬಂದು ಯಾವಾಗ ಬಂದ್ರೀ? ಸ್ಕೂಲಿನಲ್ಲಿ ಕಾರ್ಯಕ್ರಮ ಚೆನ್ನಾಗಿ ನಡೀತಾ? ಎಂದು ಪ್ರಶ್ನಿಸಿದಾಗ
ಇದೇನು ಹೀಗೆ ಕೇಳುತ್ತಿದ್ದೀಯಾ? ನಾನು ಹೋಗಿದ್ದು ಸ್ವಾತಂತ್ರ್ಯೋತ್ಸವದ‌ ಹಬ್ಬದ‌ ಕಾರ್ಯಕ್ರಮಕ್ಕೆ ಚೆನ್ನಾಗಿ ನಡೆಯದೇ ಇರುತ್ತದಾ? ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು ನನಗೆ ಉತ್ತಮ ಶಿಕ್ಷಕ ಎಂದು ಸನ್ಮಾನ ಮಾಡಿದರು ಎಂದಾಗ
ಹಾಗಾದರೆ ನೀವು ದೇಶದ‌ ಬಗ್ಗೆ ದೇಶ‌ ಭಕ್ತಿಯ ಬಗ್ಗೆ ಚೆನ್ನಾಗಿಯೇ ಭಾಷಣ ಮಾಡಿರುತ್ತೀರಿ ಎಂದು ಅವರ ಪತ್ನಿ ಕೇಳಿದಾಗ
ನನ್ನ ಭಾಷಣ ನೀನು ಕೇಳಿದ್ದೀಯಾ ಹೇಗೆ ಅನ್ನಿಸುತ್ತದೆ? ಎಂದು ಅವರ ಪತಿ ಪ್ಪಶ್ನಿಸಲು
ನೀವು ಭಾಷಣ ಮಾಡಲು ಶುರು ಮಾಡಿದರೆ ಕೇಳುವವರೆಲ್ಲರೂ ಪುಳಕಿತರಾಗುತ್ತಾರೆಂಬುದು ನನಗೂ ಗೊತ್ತೆಂದು ಅವರ ಪತ್ನಿ ಹೇಳುತ್ತಾರೆ.
ನಿನ್ನ ಮಾತು ನಿಜ ಸ್ವಾತಂತ್ರ್ಯೋಚ್ಸವದಲ್ಲಿ ಮಕ್ಕಳೇ ಜಾಸ್ತಿ ಪಾಲ್ಗೊಳ್ಳುವುದರಿಂದ ಮಕ್ಕಳಿಗೆ ದೇಶದ ಮೇಲೆ ಅಭಿಮಾನ ಭಕ್ತಿ ಇಮ್ಮಡಿಯಾಗುವಂತೆ ಮಾಡಬೇಕು.. ಸುಮ್ಮನೆ ಒಣ ರಾಜಕೀಯ ಭಾಷಣ ಮಾಡಿದರೇನು ಪ್ರಯೋಜನ? ಭಾಷಣದ‌ ಜೊತೆಗೆ‌ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ವೀರರ , ವೀರ ವನಿತೆಯರ ಸಾಹಸಗಳನ್ನು ಹೇಳಿದರೆ, ಮಕ್ಕಳು ಕೂಡಾ ತಾವೂ ಅವರಂತೆ ಆಗಬೇಕೆಂದುಕೊಳ್ಳುತ್ತಾರೆಂದು ಕೋದಂಡರಾಮ್ ನುಡಿದಾಗ
ನಿಜಾ ರೀ ಪ್ರಜೆಗಳ ದೇಹದ ಕಣ ಕಣದಲ್ಲೂ ದೇಶಭಕ್ತಿಯು ತುಂಬಿ ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಯಾವ ಬಾಹ್ಯ ಬೆದರಿಕೆಗೆ ಅಂಜಬೇಕಾಗಿಲ್ಲ ಎಂಬ ಅವರ ಪತ್ನಿಯ ಮಾತಿಗೆ
ಹಿಂದಿನ ಕಾಲದ ಜನಗಳಲ್ಲಿ ಇದೇ ರೀತಿಯ ಒಗ್ಗಟ್ಟು ಇದ್ದಿದ್ದರೆ ಸಾವಿರಾರು ವರ್ಷಗಳು ನಮ್ಮ ದೇಶದ ಜನರು ಪರಕೀಯರ ಗುಲಾಮರಾಗಬೇಕಿರಲಿಲ್ಲ. ಮೊಳಕೆಯಲ್ಲೇ ಚಿವುಟುವಂತೆ ಮೊದಲಿಗೆ ಬೆರಳಣಿಕೆಯಷ್ಟು ಬಂದ ಪರಕೀಯರನ್ನು ಒದ್ದೋಡಿಸಬಹುದಿತ್ತು, ಆದರೆ ಯಾರೂ ಕೂಡಾ ಹಾಗೆ ಮಾಡಲಿಲ್ಲ. ಪರಕೀಯರು ಹೇಳಿದಂತೆ ಕೇಳಿ ಅವರ ಸಹಾಯ ಪಡೆದು ತಮ್ಮ ದೇಶದವರನ್ನೇ ಸೋಲಿಸಿ ಪರಕೀಯರಿಗೆ ಸಹಾಯಮಾಡಿದ್ದರಿಂದ ದೇಶವು ಸಂಪೂರ್ಣವಾಗಿ, ಪರಕೀಯರ ಪಾಲಾಯಿತು. ಅವರಿಂದ ಪುನಃ ದೇಶಕ್ಕೆ ಸ್ವಾತಂತ್ರ್ರ ಪಡೆಯಲು ನಮ್ಮ ಹಿರಿಯರು ಎಷ್ಟು ಕಷ್ಟ‌ಪಡಬೇಕಾಯಿತು, ಲಕ್ಷಾಂತರ ಜನಗಳ ಬಲಿದಾನವಾಗಬೇಕಾಯಿತು. ದೇಶದ ಸ್ವಾತಂತ್ರ್ಯ ಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಡಬೇಕಾಯಿತು. ಈ ದಿನ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕ್ಕಾಗಿ ದುಡಿದ ಎಲ್ಲಾ ಮಹನೀಯರುಗಳನ್ನು ನೆನಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಈಗ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಎಷ್ಟು ಮುಖ್ಯವೋ ಅದನ್ನು ಕಾಪಾಡಿಕೊಂಡು ಹೋಗುವುದೂ ಅಷ್ಟೇ ಮುಖ್ಯ. ಅದಕ್ಕಾಗಿ ನಮ್ಮ ವೀರಯೋಧರು ಹಗಲಿರುಳೂ ಮಳೆ ಗಾಳಿ ಚಳಿ ಎನ್ನದೆ ದೇಶವನ್ನು ಕಾಯುತ್ತಲಿದ್ದಾರೆ. ಅವರಿಗೂ ಈ ದಿನ ನಮ್ಮ ಧನ್ಯವಾದಗಳನ್ನು ಅರ್ಪಿಸಬೇಕೆಂದು ಕೋದಂಡರಾಮ್ ರವರು ಹೇಳಲು
ಹೌದೂ ರೀ ನಿಮ್ಮ ಮಾತು ನಿಜ. ಈಗಲೂ ದೇಶದಲ್ಲಿ ಒಗ್ಗಟ್ಚಿನ ಅವಶ್ಯಕತೆ ಇದೆಯೆಂದು ಅವರ ಪತ್ನಿಯ ಮಾತಿಗೆ,
ನಿನ್ನ ಮಾತು ನಿಜ, ದೇಶದ‌ ವಿಚಾರ ಬಂದಾಗ ಎಲ್ವರೂ ಒಗ್ಗಟ್ಟಾಗಬೇಕು ನಂತರ ಅಧಿಕಾರ ಪಡೆಯಲು ಮತದಾನ ಎಂಬುದು ಇದ್ದೇ ಇದೆ. ಅದರಲ್ಲಿ ಸ್ಪರ್ಧಿಸಿ ಅಧಿಕಾರ ಪಡೆಯಬಹುದು. ನನಗೂ ನಮ್ಮ ಮನೆಯಲ್ಲಿ ಒಬ್ಬರು ವೀರಯೋಧರಾಗಬೇಕೆಂಬ ಆಸೆಯಿತ್ತು ಆದರೆ ಎನ್ನುತ್ತಾ ತಲೆ ತಗ್ಗಿಸಿಕೊಂಡು ತಮ್ಮ ಕಣ್ಣಂಚಿನಲ್ಲಿ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು ಮೌನವಾದಾಗ
ಹಳೆಯದನ್ನು ಜ್ಞಾಪಿಸಿಕೊಂಡು ಏಕೆ ದುಃಖಿಸುತ್ತೀರೀ ಎಂದು ಅವರ ಪತ್ನಿ ಪ್ರಶ್ನಿಸಲು
ಎಷ್ಟು ವರ್ಷಗಳಾದರೂ ಮಗನನ್ನು ಮರೆಯಲು ಆಗುತ್ತದಾ? ಎಂಬ ಕೋದಂಡರಾಮ್ ರವರ ಪ್ರಶ್ನೆಗೆ
ನಿಮ್ಮ ಮಾತು ನಿಜ ರೀ, ನಾನು ಮಗನನ್ನು ನೆನಪಿಸಿಕೊಳ್ಳದ‌‌‌ ದಿನವೇ ಇಲ್ಲಾ ಎನ್ನುತ್ತಾ ಅವರ ಪತ್ನಿಯೂ ಕೂಡಾ ಮೌನವಾಗುತ್ತಾರೆ
ನನ್ನ ಮಗ ಇದ್ದಿದ್ದರೆ ಸೈನ್ಯಕ್ಕೆ ಸೇರಿಸುತ್ತಿದ್ದೆ. ಆದರೆ ನಮ್ಮ ದುರಾದೃಷ್ಟ ನಮ್ಮ ಕಣ್ತಪ್ಪಿಸಿ ಹೋದವನು ಇದುವರೆಗೂ ಮನೆಗೆ ಬರಲೇ ಇಲ್ಲ ಈಗ ಎಲ್ಲಿದ್ದಾನೋ ಹೇಗಿದ್ದಾನೋ ಯಾರಿಗೆ ಗೊತ್ತು?
ಎಲ್ಲಾದರೂ ಊರಿಗೆ ಹೋದರೆ ಅಪ್ಪ ಅಮ್ಮನ ಜೊತೆಯಲ್ಲೇ ಇರಬೇಕೆಂದು ಗೊತ್ತಾಗುವುದೇ ಇಲ್ಲ. ಛೇ ಏನು ಹುಡುಗರೋ ಏನೋ?
ನಾನು ಎರಡು ನಿಮಿಷ ಅವನನ್ನು ಬಿಟ್ಚಿದ್ದೆ ಅಷ್ಟೇ, ಯಾವ ಮಾಯದಲ್ಲಿ ಹೊರಟು ಹೋದನೋ ಎಂದು ಅವರ ಪತ್ನಿ ನುಡಿದಾಗ,
ಪೋಲೀಸ್ ಕಂಪ್ಲೇಂಟ್ ಕೊಟ್ಟರೂ ಸಿಗಲೇ ಇಲ್ಲ ಅವನು ಮನೆಯಲ್ಲಿದ್ದು, ಸೈನ್ಯಕ್ಕೆ ಸೇರಿದ್ದರೆ ನಮ್ಮ ಮನೆಯಲ್ಲಿ ವೀರ ಯೋಧರಿದ್ದಾರೆಂದು ಹೆಮ್ಮೆ ಪಡಬಹುದಿತ್ತು ಎನ್ನುತ್ತಾರೆ ಕೋದಂಡರಾಮ್

ಈಗೇಕೆ ಯೋಚಿಸುತ್ತೀರಿ? ವೀರಯೋಧನನ್ನು ಅಳಿಯನನ್ನಾಗಿ ಮಾಡಿಕೊಳ್ಳಬಹುದಲ್ಲಾ ಎಂಬ ಅವರ ಪತ್ನಿಯ ಮಾತಿಗೆ
ಅಯ್ಯೋ ಹೌದಲ್ಲವಾ ? ನನ್ನ ಬುದ್ದಿಗೆ ಹೊಳೆಯಲೇ ಇಲ್ಲವೆಂದು ಕೋದಂಡರಾಮ್ ನುಡಿಯುತ್ತಾರೆ
ನಿಮ್ಮ ಮಗಳನ್ನು ಒಂದು ಮಾತು ಕೇಳಿ ಒಪ್ಪಿಸಿದರಾಯಿತು ಎಂದು ಅವರ ಪತ್ನಿ ಹೇಳಲು
ಲೇ ಅವಳು ನನ್ಮ ಮಗಳು ಕಣೇ, ದೇಶದ‌ ವಿಷಯಕ್ಕೆ ಬಂದರೆ ಅಪ್ಪನಿಗಿಂತ ಒಂದು ಹೆಜ್ಜೆ ಮುಂದಿಡುತ್ತಾಳೆ‌. ಖಂಡಿತಾ‌ ಒಪ್ಪುತ್ತಾಳೆ ಅಕಸ್ಮಾತ್ ನನ್ನ ಮಗಳು ವೀರ ಯೋಧನ ಹೆಂಡತಿಯಾದರೆ ಬಹಳವೇ ಹೆಮ್ಮೆ ಪಡುತ್ತಾಳೆ ಎಂದಾಗ
ನೋಡೋಣ ಮೊದಲು ಗಂಡನ್ನು ನೋಡಿ ನಂತರ ಮಗಳನ್ನು ಕೇಳಿ ಎಂಬ ಅವರ ಪತ್ನಿಯ ಮಾತಿಗೆ
ಮೊದಲು ಒಪ್ಪಲಿ ನಂತರ ವರನನ್ನು ಹುಡುಕೋಣವೆಂದು ಹೇಳುತ್ತಾ, ಮಗಳು ಎಲ್ಲಿ ಹೋದಳು ಎಂದು ಕೇಳಲು
ರಜೆ ಇದೆಯಲ್ಲಾ ಹೊರಗಡೆ ಹೋಗಿದ್ದಾಳೆ ಎಂದು ಅವರ ಪತ್ನಿ ಹೇಳುತ್ತಿರುವಂಕೆ
ಮಗಳು ಆಶಾ ಮನೆಯೊಳಗೆ ಬಂದಾಗ
ಅಮ್ಮಾ ಆಶಾ ಬಾಮ್ಮ ಇಲ್ಲಿ ಎಂದು ಅವರಪ್ಪ ಕರೆದು ಪಕ್ಕದಲ್ಲಿ ಕೂಡಿಸಿಕೊಂಡು ನೋಡಮ್ಮಾ ನಿನ್ನ ವಿದ್ಯಾಭ್ಯಾಸ ಮುಗಿದಿದೆ. ಈಗ ನಿನ್ನ ಮದುವೆ ಮಾಡಿದರೆ ನನ್ನ ಜವಾಬ್ದಾರಿ ಮುಗಿದ ಹಾಗೇ ಎಂದು ಆಶಾಳ‌ ತಂದೆ ಕೋದಂಡರಾಮ್ ನುಡಿಯಲು
ಅಪ್ಪಾ ನಾನು ನಿಮಗೆ ಭಾರವಾಗಿದ್ದೇನಾ?
ಹಾಗಲ್ಲಮ್ಮಾ ಎಂದಾದರೂ ಮದುವೆ ಮಾಡಲೇಬೇಕಲ್ಲಾ ಈಗ ನೀನು ಹ್ಞೂಂ ಎಂದರೂ ಕಡೇಪಕ್ಷ ಎರಡು ವರ್ಷಕ್ಕೆ ಮದುವೆಯಾಗಬಹುದು ಎಂಬ ಅವರ ತಂದೆಯ ಮಾತಿಗೆ,
ಇಲ್ಲಪ್ಪಾ ನಾನೀಗಲೇ ಮದುವೆಯಾಗುವುದಿಲ್ಲ. ನಾನಿನ್ನು ಕೆಲಸಕ್ಕೆ ಸೇರಬೇಕು ನಿಮಗೆ ಬೇಕಾದ್ದೆಲ್ಲಾ ಕೊಡಿಸಬೇಕು ಇನ್ನೂ ಏನೇನೋ ಆಸೆಗಳಿವೆಯೆಂದು ಆಶಾ‌ ಹೇಳಲು.
ನಿನಗೆ ಕೆಲಸ ಸಿಕ್ಕಿದ ಮೇಲೆಯೇ ಮದುವೆಯಾಗುವಿಯಂತೆ, ವರನನ್ನು ಹುಡುಕಲೇನು ಅಡ್ಜಿ ಎಂದು ಅವರಪ್ಪ ಪ್ರಶ್ನಿಸಿದಾಗ
ಒಟ್ಟಿನಲ್ಲಿ ನಾನು ನಿಮ್ಮ ಕಣ್ಣಮುಂದೆ ಇರಬಾರದೂಂತ ನಿಮ್ಮ ಹುನ್ನಾರ ಅಷ್ಚೇ ತಾನೇ ಎನ್ನುತ್ತಾ ಅಲ್ಲಿ ನಿಲ್ಲದೆ ತನ್ಮ ರೂಮಿಗೆ ಹೋಗುತ್ತಾಳೆ.

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯ ಅಂಶವೆನೆಂದರೆ

ಮಕ್ಕಳು ಸಮಾರಂಭಗಳಲ್ಲಿ ಪಾಲ್ಗೊಂಡಿರುವಾಗ, ಭಾಷಣ ಮಾಡುವವರು ಮಕ್ಕಳಿಗೆ ದೇಶದ ಬಗ್ಗೆ ತಿಳಿಸಬೇಕು, ದೇಶಭಕ್ತಿ ಇಮ್ಮಡಿಯಾಗುವಂತೆ ಮಾಡಬೇಕು. ಮಕ್ಕಳಿಗೆ ಬೇಸರ ರಾಜಕೀಯದ ಬಗ್ಗೆ ಹೇಳಿದರೆ ಅರ್ಥವಾಗದೆ ಗೊಂದಲ ಗೊಳಗಾಗುತ್ತಾರೆ.
ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋದಾಗ, ಅವರ ಮೇಲೆ ಹೆಚ್ಚಿನ ನಿಗ ಇಟ್ಟಿರಬೇಕು. ಹೇಗಿದ್ದರೂ ಹಿಂದೆ ಬರುತ್ತಿದ್ದಾರೆಂದುಕೊಂಡು ಮೊಬೈಲಿನಲ್ಲಿ ಮಾತನಾಡುತ್ತಾ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರೆ ಮಕ್ಕಳು ದೊಡ್ಡವರ ಜೊತೆ ರಸ್ತೆಗಳಲ್ಲಿ ಹೋಗುವಾಗ ಆಡ್ತಾ ಆಡ್ತಾ ಒಂದೊಂದು ಸಲ‌ ರಸ್ತೆಯ ಮದ್ಯಕ್ಕೆ ಬಂದು ಬಿಡುತ್ತಾರೆ. ಆಗ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ನಿಯಂತ್ರಣ ತಪ್ಪಿ ಅವರ ಮೇಲೆ ಎರಗಬಹುದು ಅಥವಾ ಬೇರೆ ರೀತಿಯಲ್ಲಿ ಅಪಘಾತವಾಗಬಹುದು.
ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲಾಗಲಿಲ್ಲ‌ ಅದನ್ನು ಮಕ್ಕಳು ಮಾಡಲೊಂದು ಅವರ ಮೇಲೆ ಒತ್ತಡ ಹೇರಬಾರದು.
ದೇಶ‌ದ ಸೇವೆ ಮಾಡುವಂತೆ ಮಕ್ಕಳನ್ನು ಹುರಿದುಂಬಿಸಬೇಕು. ದೊಡ್ಡವರಾದ ನಂತರ ಯಾವುದಾದರೂ ಕ್ಷೇತ್ರದಲ್ಲಿ ದೇಶಸೇವೆ ಮಾಡಲು ತಮ್ಮನ್ಮು ಕೊಡಗಿಸಿಕೊಳ್ಳುತ್ತಾರೆ.

ಮುಂದುವರೆಯುತ್ತದೆ……

 

‌ ಸಂಚಿಕೆ- 02

ಹಿಂದಿನ ಸಂಚಿಕೆಯಲ್ಲಿ

ಕೋದಂಡರಾಮ್ ರವರು ಅವರ ಪತ್ನಿ ಜೊತೆ ಮಾತನಾಡುತ್ತಿರುವಾಗ, ಮಗಳು ಬಂದಿದ್ದನ್ನು ನೋಡಿ ಮದುವೆ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ,
ತನಗೆ ಈಗಲೇ ಮದುವೆ ಬೇಡವೆಂದು ಹೇಳುತ್ತಾಳೆ.

ಕಥೆಯನ್ನು ಮುಂದುವರೆಸುತ್ತಾ

ಮಗಳ ನಿರ್ಧಾರವನ್ನು ಕೇಳಿದ ಅವರಮ್ಮನು ಮಾತನಾಡಿ, ಗಂಡು ಹುಡುಕಿದರೆ ತಾನೇ ಒಪ್ಪಿಕೊಳ್ಳುತ್ತಾಳೊಂದಾಗ, ಅದಕ್ಕೂ ಸ್ವಲ್ಪ ಸಮಯ ಹಿಡಿಯುತ್ತೆ,ಈಗ ಊಟ‌ ಹಾಕುತ್ತೀಯಾ ಎಂದು ಅವರ ಗಂಡ ಕೇಳಿ ಊಟ ಮಾಡಿ ವಿಶ್ರಾಂತಿ ಪಡೆಯಲು ಹೋಗುತ್ತಾರೆ.

ಒಂದು ವಾರ ಕಳೆದ ನಂತರ ಆಶಾಳಿಗೆ ಯಾವುದೋ ಎಂಎನ್ ಸಿ ಕಂಪೆನಿಯಿಂದ ಕೆಲಸಕ್ಕೆ ನೇಮಕದ ಆದೇಶ‌ ಬಂದಿದ್ದರಿಂದ ಸಹಜವಾಗಿ ಎಲ್ಲರಿಗೂ ಖುಷಿಯಾಗಿರುತ್ತದೆ.
ತನಗೆ ಕೆಲಸ‌ ಸಿಕ್ಕಿದ ಬಗ್ಗೆ ತನ್ನೆಲ್ಲಾ ಸ್ನೇಹಿತರಿಗೂ ಕರೆ ಮಾಡಿ, ಪಾರ್ಟಿ ಕೊಡಿಸುವುದಾಗಿ ಹೇಳಿದ್ದು, ಅದರಂತೆ ಮಾರನೇ ದಿನ ತನ್ನ ನೆಚ್ಚಿನ ಸಹಪಾಠಿಗಳೊಂದಿಗೆ ಹೋಟೆಲ್ ಗೆ ಬಂದಿದ್ದು,
ಆ ವೇಳೆಗೆ ಒಬ್ಬರು ವಾಕರ್ ಸಪೋರ್ಟ್ ನೊಂದಿಗೆ ತನ್ನ ಸ್ನೇಹಿತರ ಜೊತೆ ಹೋಟೆಲ್‌ ಗೆ ಬಂದು, ಆಶಾಳ ಬಳಿ ಬಂದೊಡನೆ ಆಯ ತಪ್ಪಿ ಬಿದ್ದು ಬಿಟ್ಟಾಗ,
ಅವರ ಜೊತೆಯಲ್ಲಿದ್ದವರು ತಕ್ಷಣ ಅವರನ್ನು ಮೇಲಕ್ಕೆತ್ತಿ, ಕೂಡಿಸಿ ಉಪಚರಿಸುತ್ತಿರುವುದನ್ನು ನೋಡುತ್ತಿದ್ದ ಅಶಾ ಈ ಅವಸ್ಥೆಯಲ್ಲೂ ಹೋಟೆಲ್ ಗೆ ಬರಬೇಕಾ? ಈಗಿನ ಕಾಲದಲ್ಲಿ ಏನು ಬೇಕೋ ಅದನ್ನು ಆರ್ಡರ್ ಮಾಡಿದರೆ ಸಾಕು ಹತ್ತು ನಿಮಿಷದಲ್ಲಿ ಮನೆಗೇ ಬರುತ್ತದೆ, ಆರಾಮವಾಗಿ ಮನೆಯಲ್ಲಿ ಕುಳಿತು ಊಟ ಮಾಡಬಹುದು, ಎಂದುಕೊಳ್ಳುತ್ತಾಳೆ. ಆ ಘಟನೆಯಿಂದ ಖುಷಿಯಾಗಿದ್ದ ಅವಳ ಮನಸ್ಸಿಗೆ ತಣ್ಣೀರೆರಚಿದಂತಾಗಿ, ಉತ್ಸಾಹವು ಜರ್ರನೆ ಇಳಿದು ಮುಖ ಪೇಲವವಾಗುತ್ತದೆ.
ಆಶಾಳ‌ ಮುಖ ಭಾವ ಕಂಡ ಅವಳ ಸಹಪಾಠಿಗಳು ಇದುವರೆಗೂ ಖುಷಿಯಿಂದ ಇದ್ದವಳಿಗೇನಾಯಿತು? ನಿನ್ನ ಮುಖ ನೋಡಿದರೆ ಬೇಸರಗೊಂಡಂತಿದೆ, ಇವತ್ತು ಪಾರ್ಟಿ ಬೇಡವೆಂದರೆ ಬೇರೆ ದಿನ ಬರೋಣವೆಂದು ಹೇಳಿದಾಗ
ಹಾಗೇನೂ ಇಲ್ಲ, ನಿಮಗೆ ಏನು ಬೇಕೋ ಅದನ್ಮು ಆರ್ಡರ್ ಮಾಡಿ ಖುಷಿಯಾಗಿ ತಿನ್ನಿ ಎಂದು ಆಶಾ ಹೇಳಲು.
ನೀನು ತಿಂದರೆ ನಾವುಗಳು ತಿನ್ನುತ್ತೇವೆ ಇಲ್ಲದಿದ್ದರೆ ಕಾಫಿ ಕುಡಿದು ಹೋಗೋಣವೆಂದು ಅವಳ ಸ್ನೇಹಿತರಲ್ಲಿ ಒಬ್ಬಳು ನುಡಿದಾಗ
ನನಗೇನೂ ಬೇಸರವಿಲ್ಲ, ನನ್ನ ಬಳಿ ಬಿದ್ದುಬಿಟ್ಚರಲ್ಲಾ ಅದನ್ನು ನೋಡಿ ಬೇಸರವಾಯ್ತು, ಎಂದಾಗ
ಅವರಿಗೆ ಆಕ್ಸಿಡೆಂಟ್ ಆಗಿ, ಪಾಪ ಕಾಲು‌ ಕಳೆದುಕೊಂಡಿರಬಹುದು ಎಂದು ಅವಳ‌ ಸ್ನೇಹಿತೆಯರು ಹೇಳಿದಾಗ
ಅಷ್ಟರೊಳಗೆ ಇನ್ನೊಬ್ಬ ಸಹಪಾಠಿ ಬಂದು, ಅವರು ಆರ್ಮೀಲಿ ಇದ್ದರಂತೆ, ಯುದ್ದದಲ್ಲಿ ಕಾಲು ಕಳೆದುಕೊಂಡರಂತೆ ಪಾಪ ಎಂದು ಹೇಳಿದಾಗ
ಎಲ್ಲರೂ ಪಶ್ಚಾತ್ತಾಪ ಪಟ್ಟು, ಅವರ ಬಳಿ ಹೋಗಿ, ಸಾರ್ ಯುದ್ದದಲ್ಲಿ ನಿಮ್ಮ ಕಾಲಿಗೆ ಪೆಟ್ಟಾಯಿತೆಂದು ಕೇಳಿ ಬೇಸರವಾಯಿತು, ನಿಮ್ಮಂತಹ ಸೈನಿಕರು ನಮ್ಮ ದೇಶದ ಆಸ್ತಿ ಸಾರ್, ಹ್ಯಾಟ್ಸ್ ಅಪ್ ಸರ್ ಎಂದಾಗ
ಓಕೆ ಓಕೆ ನೀವು ಸೈನಿಕರಿಗೆ ಕೊಡುವ ಗೌರವ ಕಂಡು ನನಗೆ ಬಹಳ‌ ಖುಷಿಯಾಗಿದೆ ನೀವೆಲ್ಲರೂ ಸ್ನೇಹಿತರೆಂದು ತಿಳಿಯುತ್ತದೆ. ನೀವು ಏನು ಬೇಕಾದರೂ ತೆಗೆದುಕೊಳ್ಳಿ ಬಿಲ್ ನಾನು ಪೇ ಮಾಡುತ್ತೇನೆಂದು ಯೋಧ‌ನ ಮಾತಿಗೆ
ಅಯ್ಯೋ ಎಲ್ಲಾದರೂ ಉಂಟಾ ಸಾರ್ ನೀವು ದೇಶದ‌ ರಕ್ಷಣೆಗಾಗಿ ಹೋರಾಡಿ ಬಂದವರು ನಾವುಗಳೇ ನಿಮಗೆ ನಿಮ್ಮ ಸ್ನೇಹಿತರ ಬಿಲ್ ಪೇ ಮಾಡುತ್ತೇವೆಂದು ಹೇಳಿ
ಎಲ್ಲರೂ ತಮಗೆ ಬೇಕಾದ‌ ತಿಂಡಿ ತಿಂದು ಊಟ ಮಾಡಿದ ನಂತರ ಆಶಾಳೇ ಪೂರ್ತಾ ಬಿಲ್ ಪಾವತಿಸಿರುತ್ತಾಳೆ.
ಅದರಲ್ಲಿದ್ದ ಆಶಾ ಸಹಪಾಠಿಯು ಮಾತನಾಡಿ, ಸಾರ್ ನೀವು ಯುದ್ದ ಭೂಮಿಯಲ್ಲಿ ಹೋರಾಡಿದ ರೋಚಕ ಸಾಹಸಮಯ ಘಟನೆಯನ್ನು ನಿಮಗಾದ ಅನುಭವವನ್ನು ಕೇಳಬೇಕೆಂದಾಗ ಒಂದು ಘಟನೆಯನ್ನು ಮಾತ್ರ ಹೇಳಿ ನಂತರ ಇನ್ನೊಂದು ಘಚನೆಯು ಬಹಳ ದೊಡ್ಡ ಕಥೆ ಐದು ಹತ್ತು ನಿಮಿಷದಲ್ಲಿ ಹೇಳಲು ಸಾಧ್ಯವಿಲ್ಲ‌ ಕಡೇಪಕ್ಷ ಅರ್ಧಗಂಟೆಯಾದರೂ ಬೇಕೆಂದು ಯೋಧರು ಹೇಳಿದಾಗ
ಆಶಾಳ ಸಹಪಾಠಿಯೊಬ್ಬಳು ಸರ್ ನಿಮ್ಮ ಮೊಬೈಲ್ ನಂಬರ್ ಕೊಡಿ ನಿಮಗೆ ಬಿಡುವಾದಾಗ ಹೇಳುವಿರಂತೆ ಎಂದು ಆ ಯೋಧನ‌ ಮೊಮೈಲ್ ನಂಬರ್ ಪಡೆದಿರುತ್ತಾಳೆ.
ಎಲ್ಲರೂ ಪಾರ್ಟಿ ಮುಗಿಸಿ ಮನೆಗೆ ಬಂದರೂ ಆಶಾಳಿಗಂತೂ ಆ ಯೋಧನ ತ್ಯಾಗ ದೇಶಭಕ್ತಿಯು ನೆನಪಾಗುತ್ತಲೇ ಇರುತ್ತದೆ.

ರಾತ್ರಿ ಅಪ್ಪ ಮಗಳು ಊಟ ಮಾಡುತ್ತಿರುವಾಗ, ಆಶಾ ಮಾತನಾಡಿ, ಅಪ್ಪಾ ಇವತ್ತು ನಾನು ನನ್ನ ಸ್ನೇಹಿತರೊಂದಿಗೆ ಹೋಟೆಲ್ ಗೆ ಹೋಗಿರುವಾಗ, ಒಬ್ಬ ಯೋಧರು ಬಂದಿದ್ದರಪ್ಪಾ, ಪಾಪ ಅವರಿಗೆ ಯುದ್ದ ಮಾಡುವಾಗ ಕಾಲು ಹೋಯಿತಂತೆ, ಆದರೂ ಅವರ ಮುಖದಲ್ಲಿ ಒಂದು ಚೂರು ಪಶ್ಚಾತ್ತಾಪ ಇರಲೇ ಇಲ್ಲಪ್ಪ, ನಾನು ನನ್ನ ತಾಯ್ನಾಡಿಗೆ ಮಾಡಿದ ಸೇವೆ, ಇದರಿಂದ ನನಗೇನೂ ಬೇಸರವಿಲ್ಲ ಯುದ್ದದಲ್ಲಿ ದೇಶ‌ರಕ್ಷಣೆ ಮಾಡುವಾಗ ನನ್ನ ಜೀವ ಹೋಗಿದ್ದರೂ ಸಂತೋಷಿಸುತ್ತಿದ್ದೆ ಎಂದು ಹೇಳಿದ್ರಪ್ಪಾ, ನಿಜವಾಗಿಯೂ ಅವರಲ್ಲಿದ್ದ ದೇಶ ಭಕ್ತಿಗೆ ನಾನು ಮೂಕಳಾದೆ ಎಂಬ ಆಶಾಳ ಮಾತಿಗೆ
ಹೌದು ಮಗಳೇ ದೇಶದ ಯೋಧರಾಗಿ ಸೇರಿದರೆ, ಅವರಿಗೆ ದೇಶ‌ರಕ್ಷಣೆಯನ್ನು ಬಿಟ್ಚರೆ ಬೇರಾವ ಯೋಚನೆಯಾಗಲೀ ಗುರಿಯಾಗಲೀ ಇರುವುದಿಲ್ಲ, ಅವರಿಗೆ ದೇಶ ರಕ್ಷಣೆಯೇ ಮುಖ್ಯ ಗುರಿಯಾಗಿರುತ್ತದೆ.ಕಣಮ್ಮಾ ಅಂತಹ‌ ಮಕ್ಕಳನ್ನು ಪಡೆದ ಆ ತಂದೆತಾಯಿಗಳು ಧನ್ಯ ಕಣಮ್ಮಾ ಆ ಭಾರತಮಾತೆಯೂ ಧನ್ಯಳಮ್ಮಾ ಎನ್ನುತ್ತಾರೆ.
ಅವರು ಹೇಳಿದ ಯುದ್ದಭೂಮಿಯಲ್ಲಿನ ಅನುಭವ ಕೇಳಿದಾಗ ನರನಾಡಿಗಳು ಜುಂಮ್ ಎಂದವಪ್ಪಾ? ಅದೇನು ಧೈರ್ಯ ಅದೇನು ಸಾಹಸ ನಿಜವಾಗಿಯೂ ಮೆಚ್ಚಬೇಕಾದ್ದೇ ಕಣಪ್ಪಾ ಪಾಪ ಅವರಿಗಿನ್ನೂ ಬಹುಷಃ ಮುವ್ನತ್ತು ವರ್ಷ ಇರಬಹುದಷ್ಟೇ ಕಣಪ್ಪಾ ಈಗಲೇ ಅವರು ಕಾಲು ಕಳೆದುಕೊಂಡಿರುವುದಕ್ಕೆ ಸ್ವಲ್ಪವೂ ವಿಷಾದವಿರಲಿಲ್ಲ. ಸ್ವಲ್ಪ ದಿನ ಕಳೆದರೆ ಆರ್ಟಿಫಿಷಿಯಲ್ ಲೆಗ್ ಹಾಕಿಸಿಕೊಂಡು ಎಲ್ಲರಂತೆ ಓಡಾಡುತ್ತೇನೆಂದು ದೃಢ ವಿಶ್ವಾಸದಿಂದ ಹೇಳಿದರಪ್ಪಾ ಎಂದು ಆಶಾ‌ ನುಡಿಯಲು
ಆಶಾಳ ಅಪ್ಪ ಮಾತನಾಡಿ, ನಿನ್ನ ಗಂಡ ಯೋಧನೇ ಆದರೆ ನೀನು ಖುಷಿ ಪಡುತ್ತೀಯಾ ಎಂದು ಅವರಪ್ಪ ಪ್ಪಶ್ನಿಸಲು.
ಏನಪ್ಪಾ ನೀನು? ಈಗತಾನೇ ಕೆಲಸ‌ ಸಿಕ್ಕಿದೆ, ಒಂದೆರಡು ವರ್ಷ ಮನೆಯಲ್ಲಿ ಆರಾಮಾಗಿ ಇರೋಣವೆಂದರೆ ಮದುವೆ ಮಾಡಿ ಕಳುಹಿಸುತ್ತೇನೆಂದು ಹೇಳುತ್ತಿದ್ದೀಯಲ್ಲಾ ? ಛೇ ಹೆಣ್ಣುಮಗಳಾಗಿ ಹುಟ್ಚಲೇ ಬಾರದು, ಮಾತೆತ್ತಿದರೆ ಮದುವೆ,, ಮದುವೆ,,,, ಎಂದು ಪೀಡಿಸುತ್ತಾರೆ. ನಾನು ನಿಮಗೆ ಭಾರವಾಗಿದ್ದೇನಾ? ನಿಮ್ಮ ತಲೆ ಮೇಲೆ ಕುಳಿತಿರುವಂತಾಡುತ್ತಿದ್ದೀರಾ ಎಂದು ಮುಖವನ್ಮು ಸಿಂಡರಿಸುತ್ತಾಳೆ.
ಹಾಗಲ್ಲಮ್ಮಾ ನಾನು ಹೇಳಿದ್ದು, ನಿನ್ನಲ್ಲಿ ವಿಚಾರ ಕೇಳಿದೆ ಅಷ್ಟೇ ಎಂದಾಗ
ನಾನು ಮದುವೆಯಾಗಿ ಹೋದರೆ ಮನೆಯಲ್ಲಿ ನೀವಿಬ್ಬರೇ ಇರುತ್ತೇವೆಂದು ಅನ್ನಿಸುವುದಿಲ್ಲವಾ? ಎಂದು ಆಶಾ ಪ್ಪಶ್ನಿಸಲು
ಅದೂ ನನಗೂ ಗೊತ್ತಮ್ಮಾ ನಿಮ್ಮಣ್ಣ ಇದ್ದಿದ್ದರೆ ಆ ಯೋಧನ ವಯಸ್ಲಿನವನು ಆಗಿರುತ್ತಿದ್ದನು. ಏನು ಮಾಡೋದು ನಮ್ಮ ದುರಾದೃಷ್ಟ ‌ನಮ್ಮನ್ನು ಬಿಟ್ಚು ಹೋದ ಎಂದು ಇದುವರೆಗೂ ಆಶಾಳ ಬಳಿ ನಿಮಗೊಬ್ಬ ಅಣ್ಣನಿದ್ದ ಅವನು ತಪ್ಪಿಸಿಕೊಂಡು ಹೋದ ಎಂಬ ಮುಚ್ಚಿಟ್ಟಿದ್ದ ವಿಷಯವನ್ನು ಬಾಯಿ ತಪ್ಪಿ ಹೇಳಿದ ತಕ್ಷಣ
ಆಶಾ ದಿಗ್ಭ್ರಾಂತಳಾಗಿ, ಅಪ್ಪಾ ಏನು ಹೇಳುತ್ತಿದ್ದೀಯಾ? ನನಗೊಬ್ಬ ಅಣ್ಣನಿದ್ದನಾ? ಇದುವರೆಗೂ ನನಗೇಕೆ ಹೇಳಿರಲಿಲ್ಲ? ಅವನು ಏನಾದ ಎಂದು ಪ್ರಶ್ನೆಗಳ‌ ಮಳೆಯನ್ನೇ ಸುರಿಸಿ, ಅವನೇನಾದರೂ ಮೃತನಾದನಾ ಎಂದು ಪ್ರಶ್ನಿಸಿದಾಗ
ಅಲ್ಲಿಯೇ ನಿಂತಿದ್ದ ಅವರಮ್ಮ ಆಶಾ ಬಿಡ್ತು ಅನ್ಮಮ್ಮಾ ನಮಗೂ ಸರಿಯಾಗಿ ಗೊತ್ತಿಲ್ಲಾ, ಅವನು ತಪ್ಪಿಸಿಕೊಂಡು ಹೋದವನು ಇದುವರೆಗೂ ಸಿಕ್ಕೇ ಇಲ್ಲಮ್ಮಾ ಎಂದು ಅವರಮ್ಮ ಗದ್ಗದಿತರಾಗುತ್ತಾರೆ.
ಅಮ್ಮಾ ನನಗೊಬ್ಬ ಅಣ್ಣನಿದ್ದಾನೆಂದು ಇದುವರೆಗೂ ನನಗೇಕೆ ಹೇಳಿರಲಿಲ್ಲವೆಂದು ಆಶಾ ಗಂಭೀರವಾಗಿ ಆಕ್ಷೇಪಿಸಿದಾಗ
ನೀನು ಹುಟ್ಟುವುದಕ್ಕಿಂತ ಮುಂಚೆಯೇ ತಪ್ಪಿಸಿಕೊಂಡು ಹೋಗಿದ್ದ, ಅವನ ವಿಚಾರ ಹೇಳಿದರೆ ಅಣ್ಣನ ಬಗ್ಗೆ ಯೋಚಿಸುತ್ತಿರುತ್ತೀಯಾ ಎಂದು ಹೇಳಿರಲಿಲ್ಲ ಈ ದಿನ ಬಾಯಿತಪ್ಪಿ ನಿಮ್ಮಪ್ಪ ಹೇಳಿದ್ದಾರೆಂದು ಅವರಮ್ಮ ನುಡಿದಾಗ
ಅವಳಪ್ಪ ಮಾತನಾಡಿ ನಿಮ್ಮಣ್ಣ ಮನೆಬಿಟ್ಚು ಹೋಗಿ ಇಪ್ಪತ್ತೈದು ವರ್ಷಗಳ‌ ಮೇಲಾಯಿತಮ್ಮಾ ಎಲ್ಲಿದ್ದಾನೋ ಏನೋ ಗೊತ್ತಾಗಲೇ ಇಲ್ಲ ನಾವು ಪೋಲೀಸ್ ಕಂಪ್ಲೇಂಟ್ ಕೊಟ್ಟು ಎಲ್ಲಾ ಕಡೆಯೂ ಹುಡಿಕಿಸಿದೆವು, ಎಲ್ಲೂ ಸಿಗಲೇ ಇಲ್ಲಮ್ಮಾ ಎಂದು ವಿಷಾಧಿಸಿದಾಗ,
ಅಮ್ಮಾ ನನಗೂ ಒಂದು ಮಾತು ಹೇಳಿದ್ದರೆ ನಾನೂ ಕೂಡಾ ಹುಡುಕುತ್ತಿದ್ದೆ ಎಂಬ ಆಶಾಳ‌ ಮಾತಿಗೆ
ಅವರಪ್ಪ ನಗುತ್ತಾ ಅವನು ಹೋಗಿ ಎಷ್ಚು ವರ್ಷಗಳಾಯಿತೋ ಹೇಗಮ್ಮಾ ಹುಡುಕುತ್ತೀಯಾ ಎಂದಾಗ
ಅಪ್ಪಾ ಅಣ್ಣನ ಫೋಟೋ ಇದ್ದರೆ ಕೊಡಿ ನಾಳೆಯಿಂದಲೇ ನಮ್ಮಣ್ಣನನ್ನು ಹುಡುಕುವ ಕಾರ್ಯ ಮಾಡುತ್ತೇನೆ ಸಿಕ್ಕರೂ ಸಿಗಬಹುದೆಂದಾಗ
ಇಲ್ಲಮ್ಮಾ ಅವನು ಏನಾಗಿದ್ದಾನೋ ಗೊತ್ತಿಲ್ಲ, ಬದುಕಿದ್ದರೆ ತಿಳಿಯುತ್ತಿತ್ತೆಂದು ಅವರಪ್ಪನ ಮಾತಿಗೆ
ಮೃತನಾಗಿದ್ದಾನೆಂದು ಹೇಗೆ ಹೇಳುತ್ತೀಯಾ? ಆ ವಿಚಾರ ನಿಮಗೆ ಯಾರಾದರೂ ಹೇಳಿದ್ದಾರಾ ಎಂದು ಆಶಾ ಪ್ಪಶ್ನಿಸಲು
ಅವಳಮ್ಮನು ಮಾತನಾಡಿ, ಛೇ ಅಪ್ಪ ಮಗಳು ಏನು ಮಾತಾಡುತ್ತಿದ್ದೀರೀ? ಬಿಡ್ತು ಎನ್ನಿ, ನನ್ನ ಮಗ ಬದುಕಿದ್ದಾನೆಂಬ ನಂಬಿಕೆ ನನಗಿದೆ ಎನ್ನುತ್ತಾರೆ
ನಾನು ನಮ್ಮಣ್ಣನನ್ನು ಹುಡುಕಲು ಪ್ರಯತ್ನಿಸುತ್ತೇನೆ ಅಲ್ಲಿಯವರೆಗೂ ನಾನೇ ಮದುವೆ ಮಾಡೆಂದು ಕೇಳುವವರೆಗೂ ನನ್ನ ಮದುವೆ ವಿಷಯ ಮಾತನಾಡಬೇಡಾ ಎಂದಾಗ
ಆಯ್ತು ಬಿಡಮ್ಮಾ ನಿನಗೇಕೆ ಬೇಸರ ಮಾಡಲೆಂದು ಹೇಳಿ ಕೈ ತೊಳೆಯಲು ಹೋಗುತ್ತಾರೆ.
ಆಶಾ ಕೂಡಾ ಕೈ ತೊಳೆದು ಮಲಗಲು ತನ್ನ ರೂಮಿಗೆ ಹೋದರೂ, ತನಗೊಬ್ಬ ಅಣ್ಣನಿದ್ದ ಎಂಬ ತಂದೆ ಹೇಳಿದ ಮಾತುಗಳೇ ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತದೆ.

  • ಈ ಸಂಚಿಕೆಯಲ್ಲಿ ತಿಳಿದು ಬರುವ ಮುಖ್ಕನಾದ ಅಂಶವೇನೆಂದರೆ

ನಿಸ್ವಾರ್ಥದಿಂದ ದೇಶಸೇವೆ ಮಾಡುವವರಿಗೆ ಎಲ್ಲರೂ ಗೌರವ ನೀಡುತ್ತಾರೆ. ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ದೇಶದ ಹಿತಕ್ಕಾಗಿ ತಮಗೇನಾದರೂ ಪರವಾಗಿಲ್ಲ ಎಂಬ ಉದಾರ ಮನಸ್ಸಿದ್ದವರನ್ನು ಪಡೆದ ದೇಶವು ಧನ್ಯಳಾಗುತ್ತಾಳೆ.

ಹಣದಿಂದ ಪಡೆದ ವಿಶ್ವಾಸ‌ ಬಹಳ ದಿನ ಉಳಿಯುವುದಿಲ್ಲ. ಹಣ ಕರಗುವಂತೆ ವಿಶ್ವಾಸವೂ ಕರಗುತ್ತಾ ಹೋಗುತ್ತದೆ. ಕೆಲವರು ಹಣದ‌ ಆಸೆಗಾಗಿ ಬ್ಲಾಕ್ ಮೇಲ್ ಮಾಡಬಹುದು.

ಸತ್ಯ ಯಾವತ್ತಿದ್ದರೂ ಹೊರಗೆ ಬಂದೇ ಬರುತ್ತದೆ. ಅದನ್ನು ಬಹಳ‌ ದಿನ ಮುಚ್ಚಿಡಲು ಸಾಧ್ಯವೇ ಇಲ್ಲ. ನಂಬಿಕೆಯಿದ್ದರೆ ಹಲವು ದಾರಿ ತಾನಾಗಿಯೇ ಕಾಣುತ್ತದೆ.

ಮುಂದುವರೆಯುತ್ತದೆ……

 

ಅಭಿಲಾಷ ಕಾದಂಬರಿ ಸಂಚಿಕೆ- 03

ಹಿಂದಿನ ಸಂಚಿಕೆಯಲ್ಲಿ

ಆಶಾಳ ತಂದೆ ಬಾಯಿ ತಪ್ಪಿ ನಿನಗೊಬ್ಬ ಅಣ್ಣನಿದ್ದ ಅವನು ಚಿಕ್ಕಂದಿನಲ್ಲಿಯೇ ತಪ್ಪಿಸಿಕೊಂಡು ಹೋದ ಎಂದು ಹೇಳಿದ ಮಾತಿಗೆ, ನಾನು ನಮ್ಮಣ್ಣನನ್ನು ಹುಡುಕುತ್ತೇನೆ ಅಲ್ಲಿಯವರೆಗೆ ನನ್ನ ಮದುವೆ ವಿಚಾರ ಪ್ರಸ್ತಾಪ ಮಾಡಬಾರದೆಂದು ಷರತ್ತು ವಿಧಿಸಿ ಆಶಾ ರೂಮಿಗೆ ಬರುತ್ತಾಳೆ

  • ಕಥೆಯನ್ನು ಮುಂದುವರೆಸುತ್ತಾ

ಆಶಾ ರೂಮಿಗೆ ಬಂದರೂ ತನಗೊಬ್ಬ ಅಣ್ಣನಿದ್ದ ಎಂಬ ಅಪ್ಪನ ಮಾತುಗಳೇ ಕಿವಿಯಲ್ಲಿ ಗುಂಯ್ ಗುಟ್ಟುತ್ತಿದ್ದು, ಅಯ್ಯೋ ಅಣ್ಣನ ಹೆಸರೇನೆಂದು ಕೇಳಲೇ ಇಲ್ಲವೆಂದುಕೊಂಡು ಪುನಃ ತನ್ನಪ್ಪನ ಬಳಿ ಬಂದು ಅಪ್ಪಾ ಅಣ್ಣನ ಹೆಸರೇನು ಎಂದಾಗ
ಮಗಳೇ ಮುಗಿದು ಹೋದ ಕಥೆಗೆ ನೀನೇಕೆ ತಲೆಕೆಡಸಿಕೊಳ್ಳುತ್ತೀಯಾ? ನಿನ್ನ ಜೀವನ ಭವಿಷ್ಯವನ್ನು ನೋಡಿಕೊಳ್ಳಮ್ಮಾ ಎಂಬ ಅವರಪ್ಪನ ಮಾತಿಗೆ
ಅಪ್ಪಾ ನಿನಗೆ ಮಗನ ಹೆಸರು ಹೇಳಲೇನು ಅಡ್ಜಿ ಎಂದು ಆಶಾ ಖಾರವಾಗಿ ಪ್ಪಶ್ನಿಸಿದಾಗ
ನಿಮ್ಮಣ್ಣನಿಗೆ ಎರಡು ಹೆಸರಿತ್ತಮ್ಮ ಒಂದು ಹೆಸರು ಸಮರ್ಥ್ ಇನ್ನೊಂದು ಹೆಸರು ಎನ್ನುತ್ತಾ‌ ನಿಮ್ಮಮ್ಮನ ಕರಿ ಅವಳಿಗೆ ಗೊತ್ತು ಎಂದಾಗ
ಅಮ್ಮಾ ಅಮ್ಮಾ ಇಲ್ಲಿ ಬಾಮ್ಮಾ ಎಂದು ಕುಳಿತಲ್ಲಿಂದಲೇ ಆಶಾ ಕರೆದಾಗ
ಪಾತ್ರೆ ತೊಳೆಯುತ್ತಿದ್ದ ಅವರಮ್ಮನು ಬಂದು ಏನಮ್ಮಾ ಅಂತಹ ಅರ್ಜಂಟ್ ಕೆಲಸ‌ ಎಂದು ಸೆರಗಿನಲ್ಲಿ ಕೈ‌ ಒರೆಸಿಕೊಂಡು ಕೇಳಲು
ಅಮ್ಮಾ ನಿನ್ನ ಮಗನ ಹೆಸರೇನಮ್ಮಾ ಎಂದು ಆಶಾ ಪ್ರಶ್ನಿಸುತ್ತಾಳೆ
ಯಾಕೆ ನಿಮ್ಮಫ್ಪನಿಗೆ ಗೊತ್ತಿಲ್ಲವಂತಾ ಅಥವಾ ಮಗ ಹೊರಟುಹೋದ ಅವನ ಹೆಸರೇಕೆಂದು ಮರೆತು ಬಿಟ್ರಾ ಎಂದು ಹಂಗಿಸಿದಾಗ
ನನ್ನ ಸ್ಕೂಲಿನಲ್ಲಿ ನೂರಾರು ಹುಡುಗರಿದ್ದಾರೆ, ಅದಕ್ಕೆ ನನ್ನ ಮಗನ ಹೆಸರು ಸ್ವಲ್ಪ ಕನ್ಫ್ಯೂಸ್ ಆಯ್ತು ಎನ್ನುತ್ತಾರೆ ಅವಳಪ್ಪ‌
ಸಮರ್ಥ್ ಅಂತಾನೂ ಕರೆಯುತ್ತಿದ್ದೆವು ರಘುವೀರ್ ಅಂತಾನೂ ಕರೆಯುತ್ತಿದ್ದೆವೆಂದು ಅವರಮ್ಮ ಹೇಳಲು
ಓ ಎರಡು ಹೆಸರು ಚೆನ್ನಾಗಿದೆ ಜೈ ರಘುವೀರ ಸಮರ್ಥಾ ಎಂದು ಒಟ್ಟಿಗೆ ಕರೆಯಬಹುದು ಎಂದಾಗ
ಹೌದು ಕಣೇ ಅವನ ಸ್ನೇಹಿತರು ಜೈ‌ ರಘುವೀರ‌ ಸಮರ್ಥ ಎಂದೇ ಕರೆಯುತ್ತಿದ್ದರೆಂದಾಗ
ನೋಡು ಈಗ ಜ್ಞಾಪಕಕ್ಕೆ ಬಂತು ನಿಮ್ಮಣ್ಣ ಚಿಕ್ಕವನಿದ್ದಾಗ ನಾನೂ ಸೈನ್ಯಕ್ಕೆ ಸೇರುತ್ತೇನೆ, ಶತ್ರುಗಳು ನನ್ನ ಮೇಲೆ ಅಟ್ಯಾಕ್ ಮಾಡಿದರೆ ನಾನು ಮೇಲೆ ನಿಂತುಕೊಂಡು ಜೈ ರಘುವೀರ ಸಮರ್ಥ ಎಂದು ಜೋರಾಗಿ ಕೂಗಿ ಅವರ ತಲೆಗೆ ಗದೆಯಿಂದ ಹೊಡೆಯುತ್ತೇನೆ ಎನ್ನುತ್ತಿದ್ದ ಕಣಮ್ಮಾ ,ಚಿಕ್ಕಂದಿನಿಂದಲೇ ರೋಷಾವೇಶ‌ ಬಹಳ ಇತ್ತು ಎಂದು ಅವರಪ್ಪ ನುಡಿದಾಗ
ಅಮ್ಮಾ ಅಣ್ಣನನ್ನು ಹುಡುಕಲು ಒಳ್ಳೆಯ ಸ್ಲೋಗನ್ ಸಿಕ್ಕಿತಮ್ಮಾ ಎಂದು ಆಶಾ ಹೇಳಲು
ಹೌದೌದು ನೀನು ನಿಮ್ಮಣ್ಣನ ವಯಸ್ಸಿನ ಹುಡುಗರ ಮುಂದೆ ಹೋಗಿ ಜೈ ರಘುವೀರ ಸಮರ್ಥ ಎಂದು ಹೇಳು ಅವರಲ್ಲಿ ಯಾರಾದರೂ ನಿಮ್ಮಣ್ಣನಾಗಿದ್ದರೆ ಬರುತ್ತಾನೆ ಎಂಬ ಅವರಪ್ಪನ ಕೊಂಕು ಮಾತಿಗೆ
ಅಪ್ಪಾ ಈ ವಿಷಯದಲ್ಲಿ ಹಾಸ್ಯ ಮಾಡಬೇಡಪ್ಪಾ ನಾನು ಇದೇ ಸ್ಲೋಗನ್ ಇಟ್ಟುಕೊಂಡು ನಮ್ಮಣ್ಣನನ್ನು ಹುಡುಕುತ್ತೇನೆ ಎಂದು ಆಶಾ ಗಂಭೀರವಾಗಿ ಹೇಳಿದ ಮಾತಿಗೆ
ಹುಚ್ಚು ಹುಡುಗಿ ನಿಮ್ಮಣ್ಣ ಇದ್ದಿದ್ದರೆ ಮನೆಗೆ ಬರಲು ಇಷ್ಟು ವರ್ಷ ಬೇಕಾ‌ಗಿತ್ತಾ? ಎಂಬ ಅವರಪ್ಪನ ಪ್ರಶ್ನೆಗೆ
ರೀ ಇನ್ನೊಂದು ಸಲ ಮಗನ ವಿಚಾರವಾಗಿ ಕೆಟ್ಟ ಮಾತು ಆಡಬೇಡ್ರೀ ನನ್ನ ಮಗ ಎಲ್ಲೋ ಚೆನ್ನಾಗಿ ಬದುಕಿದ್ದಾನೆಂಬ ನಂಬಿಕೆ ನನಗಿದೆ ಎಂದು ಅವರ ಪತ್ನಿಯು ಹೇಳುತ್ತಾರೆ
ನಿನ್ನ ನಂಬಿಕೆ ನಿಜವಾಗಿ ನಮ್ಮ ಮಗ ಮನೆಗೆ ಬಂದರೆ ನನಗೂ ಖುಷಿಯಲ್ಲವೇನೇ ಎಂದು ಆಶಾಳ‌ ತಂದೆ ನುಡಿದಾಗ
ಅಮ್ಮಾ ಇದರಲ್ಲಿ ಸ್ಕೂಲಿಗೆ ಯಾವ ಹೆಸರು ಕೊಟ್ಟಿದ್ರೀ ಅದನ್ನು ಹೇಳು ಎನ್ನಲು
ಅವನು ಓದುತ್ತಿದ್ದ ಸ್ಕೂಲಿನಲ್ಲಿ‌ ಕೇಳಿದರೆ ಹೇಳುತ್ತಾರೆಂಬ ಅವಳಮ್ಮನ ಮಾತಿಗೆ
ಅದು ನನಗೂ ಗೊತ್ತು, ಶಿಕ್ಷಕನಾಗಿ ಅಷ್ಟೂ ಗೊತ್ತಿಲ್ಲವಾ? ದೊಡ್ಡದಾಗಿ ನನ್ನ ಹಂಗಿಸಿದೆ ಈಗ ನಿನಗೇ ಗೊತ್ತಿಲ್ಲವೆಂದು ಅವಳಪ್ಪನ ಹೇಳಿದಾಗ
ಆಯ್ತಮ್ಮಾ ಹೋಗಲೀ ಅಣ್ಣ ಓದುತ್ತಿದ್ದ ಸ್ಕೂಲ್ ಹೆಸರೇನು? ಯಾವ ಊರಿನಲ್ಲಿದೆ ಎಂದು ಪುನಃ ಆಶಾ ಪ್ರಶ್ನಿಸಲು
ನಾನು ಹಿಂದೆ ದೇವನಹಳ್ಳಿಯಲ್ಲಿ ಶಿಕ್ಷಕನಾಗಿ ಕೆಲಸ‌ ಮಾಡುತ್ತಿದ್ದೆ, ನನ್ಮ ಸ್ಕೂಲಿಗೆ ಮಗನನ್ನು ಸೇರಿಸಿಕೊಂಡರೆ ತಮ್ಮ ಮಗನಿಗೆ ಮಾತ್ರ ಚೆನ್ನಾಗಿ ಪಾಠ ಹೇಳಿಕೊಡುತ್ತಾರೆಂಬ ಆರೋಪ ಬರಬಾರದೆಂದು ಬೇರೆ ಸ್ಕೂಲಿಗೆ ಸೇರಿಸಿದ್ದೆ, ನನ್ನ ಮಗ ತಪ್ಪಿಸಿಕೊಂಡು ಹೋದ ನಂತರ ನನಗೂ ಬೇರೆ ಕಡೆ ವರ್ಗನಾಯಿತು ಅಲ್ಲಿ ಐದು ವರ್ಷ ಇದ್ದೆ.‌ ರಿಟೈರ್ ಆಗೋ ಕಾಲಕ್ಕೆ ಇಲ್ಲಿಗೆ ಬಂದಿದ್ದೇನೆಂದು ಅವರಪ್ಪ ಹೇಳಲು
ನೀನು ಮಾಡಿದ ತಪ್ಪಿನಿಂದ ನಿನ್ನ ಮಗ ವಾಪಸ್ ಬರಲು ಆಗಿಲ್ಲ ಎನಿಸುತ್ತದೆಂದು ಆಶಾ‌ ನುಡಿದಾಗ
ನಾನೇನು ಮಾಡಲಿ? ಸರ್ಕಾರ ಟ್ರಾನ್ಸ್ ಫರ್ ಮಾಡ್ತು, ಮನೆಯಲ್ಲಿ ನಿಮ್ಮಮ್ಮ ಒಬ್ಬಳೇ ಇರುತ್ತಾಳೆಂದು ವರ್ಗವಾದ‌ ಜಾಗಕ್ಕೆ ಶಿಫ್ಟ್ ಆದೆ ಎಂದಾಗ
ಅದೆಲ್ಲಾ ಹಳೇ ಕಥೆಯಾಯ್ತು, ಈಗ ನಮ್ಮಣ್ಣ ಓದಿದ ಸ್ಕೂಲಿಗೆ ಹೋಗಿ ಕೇಳಿದರೆ ಡೀಟೈಲ್ಸ್ ಕೊಡುತ್ತಾರಾ ಎಂದು ಆಶಾ ಕೇಳಲು
ಮಗಳೇ ತಲೆ ಏಕೆ ಕೆಡಿಸಿಕೊಳ್ಳುತ್ತೀಯಾ? ರಘುನೀರ್ ಉರುಫ್ ಸಮರ್ಥ್ ಎಂದು ತಿಳಿದುಕೊಂಡು ಮುಂದುವರಿ, ನಿನ್ನಾಸೆಗೆ ನಾನೇಕೆ ತಣ್ಣೀರೆರಚಲಿ? ಅದೃಷ್ಟವಶಾತ್ ಮಗ ಸಿಕ್ಕಿದರೆ ನಮಗಿಂತ ಖುಷಿ ಪಡುವವರು ಯಾರಿದ್ದಾರೆ ಹೇಳು ಎಂದು ಆಶಾಳ ಅಪ್ಪ ನುಡಿದಾಗ
ತುಂಬಾ ಥ್ಯಾಂಕ್ಸ್ ಕಣಪ್ಪಾ ನಾನು ಈಗಿನಿಂದಲೇ ಅಣ್ಣನನ್ಮು ಹುಡುಕಲು ಶುರು ಮಾಡುತ್ತೇನೆಂದು ಹೇಳಿ ತನ್ನ ರೂಮಿಗೆ ಬಂದು ತನ್ನ ಕಾಲೇಜಿನ ಸಹಪಾಠಿ ವಿಕ್ರಂ ಗೆ ಫೋನ್ ಮಾಡಿ ತನ್ನಣ್ಣನ ವಿಷಯ ತಿಳಿಸಿ, ಈಗ ನಮ್ಮಣ್ಣನು ಐದು ವರ್ಷದವನಿದ್ದಾಗ‌ ತೆಗೆದ. ಫೋಟೋ ಇದೆ. ನೀನು ಫೋಟೋಗ್ರಫಿಯಲ್ಲಿ ಪದವಿ ಪಡೆದಿದ್ದೀಯಲ್ಲಾ ಎಂದು ಆಶಾ ಪ್ರಶ್ನಿಸಿದಾಗ
ಹೌದು ನಾನು ಫೋಟೋಗ್ರಫಿಯಲ್ಲಿ ಡಿಗ್ರೀ ಪಡೆದಾಕ್ಷಣ ಐದು ವರ್ಷದವನಿದ್ದಾಗಿನ ನಿಮ್ಮಣ್ಣನ ಫೋಟೋವನ್ನು ಮುವ್ವತ್ತು ವರ್ಷದ ಯುವಕನಂತೆ ಮಾಡಿಬಿಡಲಾ‌ ಎಂದು ಛೇಡಿಸಿದಾಗ
ನೀನು ಫೋಟೋಗ್ರಫಿಯಲ್ಲಿ ಡಿಗ್ರಿ ತೆಗೆದುಕೊಂಡಿರುವುದು ದಂಡ ಎಂದು ಆಶಾ ತಿರುಗೇಟು ನೀಡಿದ್ದಕ್ಕೆ
ಅಯ್ಯೋ ಮಾರಾಯ್ತಿ ಏನಾಗಬೇಕು ಹೇಳಮ್ಮಾ ನನ್ನ ಡಿಗ್ರಿ ಮಾನ ತೆಗೀಬೇಡವೆನ್ನಲು
ಒಂದು ಫೋಟೋ ಸಾಫ್ಟ್ ವೇರ್ ಇದೆಯಂತೆ ಅದರಲ್ಲಿ ಚಿಕ್ಕ‌ಮಗುವಿನ ಫೋಟೋ ಹಾಕಿದರೆ, ಆ ಮಗು ದೊಡ್ಡದಾಗಿ ಹಿರಿಯನಾಗುವವರೆಗೂ ವಯಸ್ಸಿಗೆ ತಕ್ಕಂತೆ ಮುಖದ ಚಹರೆ ಬದಲಾಗುತ್ತಾ ಹೋಗುತ್ತದೆ ಅದು ನಿನಗೆ ಗೊತ್ತಿಲ್ಲವಾ ಎಂದು ಆಶಾ‌ ತನ್ನ ಸಹಪಾಠಿಯನ್ನು ಪ್ರಶ್ನಿಸಿದಾಗ
ಅದು ನನಗೂ ಗೊತ್ತು, ನಿಮ್ಮಣ್ಣನ ಫೋಟೋ ಕಳುಹಿಸು ಈಗ ಅವರಿಗೆ ವಯಸ್ಸು ಎಷ್ಟಾಗಿರಬಹುದು ತಿಳಿಸೆಂದಾಗ
ಆಶಾ ತನ್ನಣ್ಣನ ಫೋಟೋ ಕಳುಹಿಸಿ ವಯಸ್ಸು ಸುಮಾರು ಮುವ್ವತ್ತು ವರ್ಷ ಇರಬಹುದು ಎನ್ನುತ್ತಾಳೆ.
ಓಕೆ ನಾನು ಸಾಫ್ಚ್ ವೇರ್ ನಲ್ಲಿ ನಿಮ್ಮಣ್ಣನ ಫೋಟೋ ಹಾಕಿ ನೋಡಿ ಪ್ರಯತ್ನಿಸುತ್ತೇನೆ. ಒಳ್ಳೆಯ ರಿಸಲ್ಟ್‌ ಬಂದರೆ ಅರ್ಧಗಂಟೆಯಲ್ಲಿ ಕಳುಹಿಸಿಕೊಡುತ್ತೇನೆಂದು ಹೇಳಿ ಫೋನ್ ಕಚ್ ಮಾಡುತ್ತಾನೆ
ಆಶಾ ಮೊಬೈಲನ್ನು ಟೇಬಲ್ ಮೇಲಿಡುತ್ತಾ, ಅಣ್ಣನ ಫೋಟೋ ಸಿಕ್ಕಿದರೆ ಮುಂದೆ ಹುಡುಕಬಹುದೆಂದುಕೊಂಡು ತನ್ನ ಕೆಲಸದಲ್ಲಿ ನಿರತಳಾಗುತ್ತಾಳೆ
ಒಂದು ಗಂಟೆಯ ನಂತರ ಆಶಾಳ‌ ಸಹಪಾಠಿಯು ಒಂದು ಫೋಟೋ ಕಳುಹಿಸಿ ಈ ಫೋಟೋ ನಿಮ್ಮಣ್ಣನ ವಯಸ್ಲಿಗೆ ತಕ್ಕಂತೆ ಇರಬಹುದೆಂದು ಹೇಳಿದಾಗ
ಆ ಫೋಟೋ ನೋಡಿ ಆಶ್ಚರ್ಯಗೊಂಡು ನಮ್ಮಣ್ಣ ಯಾವ ಸಿನಿಮಾ ಹೀರೋಗು ಕಡಿಮೆ ಇಲ್ಲವೆಂದುಕೊಂಡು ನಮ್ಮಣ್ಣ ಪರ್ಪೆಕ್ಟಾಗಿ ಹೀಗೇ ಇರಬಹುದಾ ಎಂದು ಪುನಃ ಅಶಾ ಪ್ರಶ್ನಿಸಿದಾಗ
ಮುಖದ ಚಹರೆ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು, ಸೇಮ್ ಟು ಸೇಮ್ ಬರುವುದಿಲ್ಲವೆಂದು ವಿಕ್ರಮ್ ಹೇಳುತ್ತಾನೆ
ನಾಳೆ ನನ್ನ ಜೊತೆ ಪೋಲೀಸ್ ಸ್ಟೇಷನ್ ಗೆ ಬರುತ್ತೀಯಾ ಎಂದು ಆಶಾ ಕೇಳಿದಾಗ
ಅಯ್ಯೋ ಪೋಲೀಸ್ ಸ್ಚೇಷನ್ ಗೇಕೆ ಕರೆಯುತ್ತಿದ್ದೀಯಾ? ಏನಾದರೂ ಕಂಪ್ಲೇಂಟ್ ಕೊಡುವುದು ಇದೆಯಾ ಎಂದು ಸಹಪಾಠಿ ಪ್ರಶ್ನಿಸಲು
ಹ್ಞೂಂ ಈ ಫೋಟೋ ತೋರಿಸಿ ನಮ್ಮಣ್ಣನನ್ನು ಹುಡುಕಿ ಕೊಡಿ ಎಂದು ಕೇಳಬೇಕು ಎಂದ ತಕ್ಷಣ
ನಿನಗೆ ಹುಚ್ಚು ಹಿಡಿದಿಲ್ಲ ತಾನೇ? ಎಂದು ಆಶಾ ಸಹಪಾಠಿ ಕೇಳಿದ‌ ಪ್ರಶ್ನೆಗೆ
ಯಾಕೋ ನನ್ನನ್ಮು ನೋಡಿದ್ರೆ ಹುಚ್ಚಿತರ ಕಾಣಿಸುತ್ತೇನಾ ? ಹೇಳು ಎಂದು ಆಶಾ ನುಡಿಯಲು
ಇಲ್ಲಪ್ಪಾ ಸುಮ್ಮನೆ ಹೇಳಿದೆ ನೀನು ನೋಡಲು ಕರ್ಪೂರದ‌ ಬೊಂಬೆ ತರ ಇದ್ದೀಯಾ ನಿನ್ನನ್ನು ಹುಚ್ಚಿ ಎನ್ನುವವರು ಹುಚ್ಚರಷ್ಟೇ
ಪೋಲೀಸ್ ರವರು ಕೇಳುವ ಪ್ರಶ್ನೆ ನಾನು ಕೇಳಿದೆ ಅಷ್ಚೇ ಎಂದಾಗ
ಪ್ರಯತ್ನಿಸುವುದರಲ್ಲಿ ತಪ್ಪೇನಿದೆ ಎಂಬ ಆಶಾ‌ ಪ್ರಶ್ನೆಗೆ
ಅವಳ ಸ್ನೇಹಿತ ಕಂಪ್ಲೇಂಟ್ ಕೊಡುವುದಕ್ಕೂ ಸರಿಯಾದ ಕಾರಣ ಇರಬೇಕು ಎನ್ನುತ್ತಾನೆ
ನೀನು ಬರದೇ ಇದ್ದರೆ ನಾನೇ ಹೋಗುತ್ತೇನೆಂದಾಗ
ಆಯ್ತು ಬರದಿದ್ದರೆ ನೀನೆಲ್ಲಿ ಬಿಡುತ್ತೀಯಾ? ನಾಳೆ ಹನ್ನೊಂದು ಗಂಟೆಗೆ ಸ್ಚೇಷನ್ ಬಳಿ ಬಂದಿರುತ್ತೇನೆ ನೀನೂ ಬಾ ಎಂದು ಹೇಳಿ ಆಶಾ ಸಹಪಾಠಿ ಫೋನ್ ಕಟ್ ಮಾಡ್ತಾನೆ.
ತನ್ನ ಮೊಬೈಲಿಗೆ ತನ್ನ ಸಹಪಾಠಿ ಕಳುಹಿಸಿದ್ದ ಫೋಟೋವನ್ನು ಅಪ್ಪನಿಗೆ ತೋರಿಸಿ ಇದು ಯಾರ ಫೋಟೋ ಇರಬಹುದಪ್ಪಾ ನೀನೇ ಹೇಳು ಎಂದು ಆಶಾ ಪ್ರಶ್ನಿಸಲು
ಅವಳ ತಂದೆ ಕೆಲವು ಸೆಕೆಂಡು ಫೋಟೋ ನೋಡಿ ಯಾವ ಸಿನಿಮಾ ಹೀರೋನಮ್ಮಾ ಇವನು ಎಂದು ಪ್ರಶ್ನಿಸಲು
ನಿನ್ನ ಮಗ ಕಣಪ್ಪಾ, ಈಗ ನಿನ್ನ ಮಗ ಹೀಗೇ ಇರುತ್ತಾನೆ ಎಂದು ಆಶಾ ನುಡಿಯಲು
ಇದನ್ನು ಹೇಗೆ ತೆಗೆದೆ ಎಂದು ಅವಳಪ್ಪ ಪ್ರಶ್ನಿಸಿದಾಗ
ಅಪ್ಪಾ ಇದು ಸಾಫ್ಟ್ ವೇರ್ ಯುಗ ಕಣಪ್ಪಾ ಏನು ಬೇಕಾದರೂ ಮಾಡಬಹುದು, ನೀನು ಕೊಟ್ಟಿದ್ದ ಐದು ವರ್ಷದ ಹುಡುಗನ ಫೋಟೋ ವನ್ನು ಒಂದು ಸಾಫ್ಟ್ ವೇರ್ ಗೆ ಹಾಕಿದ್ದಕ್ಕೆ ಈ ರೀತಿ ಬಂತು ಎಂದು ಆಶಾ ಹೇಳಲು
ನೀನು ಏನೇ ಹೇಳು ಅಷ್ಟೊಂದು ಪರ್ ಫೆಕ್ಟಾಗಿ ಬರುವುದಿಲ್ಲ ಹೀಗಿರಬಹುದೆಂದು ಊಹಿಸಿಕೊಳ್ಳಬಹುದೆಂಬ ಅವರ ಅಪ್ಪನ ಮಾತಿಗೆ
ಈಗ ಈ ಫೋಟೋ ಪೋಲೀಸ್ ಸ್ಟೇಷನ್ ಗೆ ಕೊಟ್ಚು ನಮ್ಮಣ್ಣನನ್ನು ಹುಡುಕಿಕೊಡಿ ಎಂದು ಕೇಳುತ್ತೇನೆ ಎಂದು ಆಶಾ‌ ಹೇಳಿದಾಗ
ಅಯ್ಯಯ್ಯೋ ಅಂತಾ ಕೆಲಸ ಮಾಡಬೇಡಾ ತಪ್ಪಾಗುತ್ತದೆಂದು ಅವರಪ್ಪನ ಮಾತಿಗೆ
ಪ್ರಯತ್ನಿಸಿ ಎಂದು ಹೇಳಿ ಕೊಟ್ಚು ಬರುತ್ತೇನಪ್ಪಾ ಎಂದು ಆಶಾ ನುಡಿಯಲು
ಇದೇ ರೀತಿಯ ಮನುಷ್ಯ ಬಂದು ನಾನೇ ನಿಮ್ಮಣ್ಣನೆಂದು ಹೇಳಿ ಮೋಸ‌ ಮಾಡಿದರೇನು ಮಾಡುತ್ತೀಯಾ ಎಂಬ ಆಶಾಳ ಅಪ್ಪನ ಪ್ರಶ್ನಿಸಿದಾಗ
ಯಾರೂ ಅಷ್ಟು ಸುಲಭವಾಗಿ ಬರುವುದಿಲ್ಲಪ್ಪಾ ನಿನ್ನಲ್ಲಿ ಕೋಟ್ಯಾಂತರ ರೂಪಾಯಿ ಇದ್ದರೆ ಬರಬಹುದು ಎನ್ನುತ್ತಾ ಅವಳಮ್ಮನ ಬಳಿ ಹೋಗಿ ಅಮ್ಮಾ ನಿನ್ನ ಮಗ ಈಗ ಈರೀತಿ ಇರಬಹುದೆಂದು ಹೇಳಿ ಅವಳಮ್ಮನು ಏನು ಹೇಳುತ್ತಾರೋ ಎಂದು ಉತ್ತರದ ನಿರೀಕ್ಷೆ ಯಲ್ಲಿರುವಾಗ
ಅವಳಮ್ಮನು ನಿಜಾ ಆಶಾ, ನನ್ನ ಮಗ ಹೀಗೇ ಇದ್ದಾನೆ ಇದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ
ತಾಯಿಯ ಕಣ್ಣಿಗೆ ಮಕ್ಕಳು ಸರಿಯಾಗಿಯೇ ಕಾಣುತ್ತಾರೆ ಎನ್ನುವುದು ನೀನು ನಿಜ ಮಾಡಿಬಿಟ್ಚೆ ಕಣಮ್ಮಾ ಎಂದು ಆಶಾ ಹೇಳಿದಾಗ
ಈಗಲೂ ನಿಮ್ಮಣ್ಣ ಎಲ್ಲೋ ಇದ್ದಾನೆಂದು ನನ್ನ ಮನಸ್ಸು ಹೇಳುತ್ತಿದೆ ಆಶಾ ಆದರೆ ಎಲ್ಲಿದ್ದಾನೆ? ಹೇಗಿದ್ದಾನೆ ಎಂದು ಗೊತ್ತಾಗುತ್ತಿಲ್ಲಮ್ಮಾ ನಾನಂತೂ ಅವನನ್ನು ನೆನಸಿಕೊಳ್ಳದ ದಿನವೇ ಇಲ್ಲವೆಂದು ಅವಳಮ್ಮ ಕಣ್ಣನ್ನು ಒರೆಸಿಕೊಂಡಾಗ
ಅಣ್ಣ ಎಲ್ಲಿದ್ದರೂ ಬರಲೇ ಬೇಕು ಹಾಗೆ ಮಾಡುತ್ತೇನೆಮ್ಮಾ ನೋಡುತ್ತಿರೆಂದು ಹೇಳಿ ಆಶಾ‌ ತನ್ನ ರೂಮಿಗೆ ಹೋಗುತ್ತಾಳೆ

  • ಈ ಸಂಚಿಕೆಯಲ್ಲಿ ತಿಳಿದುಬರುವ ಮುಖ್ಯವಾದ‌‌ ಅಂಶವೇನೆಂದರೆ

  1. ಮೊದಲನೆಯದಾಗಿ, ಈಗಿನ ವೈಜ್ಞಾನಿಕ ಡಿಜಿಟಲ್ ಯುಗದಲ್ಲಿ ಅಸಾಧ್ಯವಾದುದು ಏನೂ ಇಲ್ಲ. ಆದರೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೇ ಹೊರತು ದುರುಪಯೋಗಪಡಿಸಿಕೊಂಡು ತಾವೂ ಕಷ್ಟಕ್ಕೆ ಸಿಲುಕಿ ಹೆತ್ತವರಿಗೂ ಚಿಂತೆ ಉಂಟುಮಾಡಬಾರದು. ಹಾಗೆಯೇ ಹಲವಾರು ಸಾಮಾಜಿಕ ಜಾಲತಾಣಗಳಿಂದ ಪರಿಚಯವಾದವರನ್ನು ನಂಬಿ ಮೋಸ‌ ಹೋಗಬಾರದು.
  2. ಎರಡನೆಯದಾಗಿ, ಯಾವುದೇ ಕೆಲಸವಾದರೂ ದಿಟ್ಟತನದಿಂದ ಪ್ರಯತ್ನಿಸಿದರೆ ಗೆಲುವು ಶತಃಸಿದ್ದ, ಆದರೆ ಪ್ರಯತ್ನಿಸಿ ಅರ್ಧಕ್ಕೆ ಬಿಡಬಾರದು. ತಾಳ್ಮೆಯಿಂದ ಗುರಿ ತಲುಪುವವರೆಗೂ ತಮ್ಮ ಕಾರ್ಯವನ್ನು ಮುಂದುವರೆಸಬೇಕು. ಯಾವುದಾದರೂ ಕ್ಲಿಷ್ಟಕರವಾದ ಕಾರ್ಯವನ್ನು ಮಾಡಲು ಕೈಗೆತ್ತಿಕೊಂಡರೆ ಕೆಲವರು ಅಪಹಾಸ್ಯ ಮಾಡಬಹುದು. ಅಪಹಾಸ್ಯ ಮಾಡುತ್ತಾರೆಂದು ನಮ್ಮ ಪ್ರಯತ್ನ ನಿಲ್ಲಿಸದೆ ಕೈ ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿ ಅಪಹಾಸ್ಯ‌ಮಾಡಿದವರು ಪುನಃ ನಮ್ಮ ಕಡೆ ತಿರುಗಿ ನೋಡುವಂತೆ ಮಾಡುವುದೇ ಬುದ್ದಿವಂತರ ಲಕ್ಷಣ.

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ- 04

ಹಿಂದಿನ ಸಂಚಿಕೆಯಲ್ಲಿ

ಐದು ವರ್ಷದ ಅಣ್ಣನ ಫೋಟೋವನ್ನು ಫೋಟೋ ಸಾಫ್ಟ್ ವೇರ್ ಗೆ ಹಾಕಿ ಮುವ್ವತ್ತು ವರ್ಷದ ಯುವಕನಂತೆ ಬದಲಿಸಿ ಏನಾದರೂ ಮಾಡಿ ಅಣ್ಣನನ್ನು ಹುಡುಕುತ್ತೆನೆಂದು ಆಶಾ‌ ಅವಳಮ್ಮನಿಗೆ ಹೇಳಿರುತ್ತಾಳೆ

  • ಕಥೆಯನ್ನು ಮುಂದುವರೆಸುತ್ತಾ

ಐದು ವರ್ಷದ ತನ್ನಣ್ಣನ ಫೋಟೋವನ್ನು ಫೋಟೋ ಸಾಫ್ಟ್ ವೇರ್ ಗೆ ಅಳವಡಿಸಿ ಮುವ್ವತ್ತರ ವಯಸ್ಸಿನ ಯುವಕನಂತೆ ಚಹರೆ ಬದಲಿಸಿರುವ ಫೋಟೋವನ್ನು ಆಶಾ ತನ್ನ ಸಹಪಾಠಿಯಿಂದ ಪಡೆದು, ತನ್ನಣ್ಣ ಹೀಗೇ ಇರಬಹುದೆಂದುಕೊಂಡು ತನ್ನ ರೂಮಿಗೆ ಹೋಗಿ ತನ್ನಣ್ಣ ಈಗ ಎಲ್ಲಿದ್ದಾನೋ? ಹೇಗಿದ್ದಾನೋ? ಅವನಿಗೆ ಅಪ್ಪ ಅಮ್ಮನ ಗುರುತು ಇದೆಯೋ ಇಲ್ಲವೋ? ಅವನನ್ನು ಯಾರು ಸಾಕಿ ದೊಡ್ಡವನನ್ನಾಗಿ ಮಾಡಿದ್ದಾರೆಯೋ? ಈಗ ಯಾವ‌ ಕೆಲಸದಲ್ಲಿದ್ದಾನೆಯೋ? ಬುದ್ದಿವಂತನಾಗಿದ್ದರೆ ಯಾರು ಸಾಕುತ್ತಿದ್ದರೂ ಒಳ್ಳೆಯ ವಿದ್ಯಾವಂತನಾಗಿರುತ್ತಾನೆ. ಅಕಸ್ಮಾತ್ ಒಳ್ಳೆಯವರು ಶ್ರೀಮಂತರಿಗೇನಾದರೂ ಸಿಕ್ಕಿ ಅವರೇ ಸಾಕುತ್ತಿದ್ದರೆ ಒಳ್ಳೆಯ ಪೊಸಿಷನ್ ನಲ್ಲಿ ಇರುತ್ತಾನೆ. ಚಿಕ್ಕಂದಿನಲ್ಲಿಯೇ ಏನಾದರೂ ಜೀವಕ್ಕೆ ಅಪಾಯವಾಗಿದೆಯಾ ಎಂದು ಒಂದು ಕ್ಷಣ ಯೋಚಿಸಿ, ಛೇ ಹಾಗಿರಲಾರದು, ಅಮ್ಮನ ನಂಬಿಕೆಯಂತೆ ಎಲ್ಲೋ ಚೆನ್ನಾಗಿ ಇದ್ದಾನೆ ಈಗ ಅವನನ್ನು ಹುಡುಕುವುದೇ ಸವಾಲಾಗಿದೆ ‍ಎಂದುಕೊಂಡು ಹಾಗೇ ನಿದ್ದೆಗೆ ಜಾರಿ ಏಳುವ ವೇಳೆಗೆ ಬೆಳಗಾಗಿರುತ್ತದೆ.

ಬೆಳಿಗ್ಗೆ ಹನ್ನೊಂದು ಗಂಟೆಗೆ ಅವಳ ಸ್ನೇಹಿತ ವಿಕ್ರಮ್ ಫೋನ್ ಮಾಡಿ ನಾನು ಸ್ಟೇಷನ್ ಬಳಿ ಬಂದು ಕಾಯುತ್ತಿದ್ದೇನೆ, ನೀನೇಕೆ ಇನ್ನೂ ಬರಲಿಲ್ಲವೆಂದಾಗ
ನಾನು ಆನ್ ದ ವೇ ಇದ್ದೇನೆ ಜಸ್ಟ್ ಫೈವ್ ಮಿನಿಟ್ಸಲ್ಲಿ ಅಲ್ಲಿಗೆ ಬರುತ್ತೇನೆಂದು ಹೇಳಿ ಫೋನ್ ಕಟ್ ಮಾಡಿ ಐದು ನಿಮಿಷದಲ್ಲಿ ಸ್ಟೇಷನ್ ಬಳಿ ಬಂದ ತಕ್ಷಣ
ಆಶಾ ನೀನು ತಪ್ಪು ಮಾಡುತ್ತಿದ್ದೀಯಾ, ಇದು ಹುಡುಗಾಟವಲ್ಲಾ ಆಶಾ, ಯಾರದ್ದೋ ಫೋಟೋ ತೋರಿಸಿ ನಮ್ಮಣ್ಣನನ್ನು ಹುಡುಕಿಕೊಡಿ ಎಂದು ಕೇಳುವುದು ಎಷ್ಟರ ಮಟ್ಟಿಗೆ ಸರಿ ಇದೆ. ವಿಷಯ ತಿಳಿದು ಇನ್ಸ್ ಪೆಕ್ಟರ್ ಗೇನಾದರೂ ಕೋಪ ಬಂದರೇನು ಮಾಡುವುದೆಂದು ವಿಕ್ರಮ್ ಹೇಳಲು
ನೀನೇನೂ ಮಾತನಾಡಬೇಡ ಎಲ್ಲವನ್ನೂ ನಾನೇ ತಿಳಿಸುತ್ತೇನೆ. ಅಕಸ್ಮಾತ್ ಬೈದರೆ ನಾನೇ ಬೈಸಿಕೊಳ್ಳುತ್ತೇನೆ. ನೀನು ನನ್ನ ಸಪೋರ್ಟ್ ಗೆ ಇರು ಅಷ್ಚೇ ಸಾಕು. ನೀನೇನೂ ಉತ್ತರಿಸಬೇಡ ತೆಪ್ಪಗೆ ನನ್ನ ಹಿಂದೆ ನಿಂತಿರು ಎಂದು ಆಶಾ ಹೇಳಲು,
ನಿನ್ನ ಕೈಲಿ ಸಿಕ್ಕಿಕೊಂಡಿದ್ದೇನೆ ಏನಾಗುತ್ತದೋ ಆಗಲಿ ನಡೀ ಹೋಗೋಣವೆಂದು ಹೇಳುತ್ತಾನೆ.
ವಿಕ್ರಮ್ ಸುಮ್ಮನೆ ನನ್ನ ಜೊತೆ ಬರುವುದನ್ನು ಕಲಿತುಕೋ ಎನ್ನುತ್ತಾ, ಆಶಾ ಮುಂದೆ ನಡೆಯುತ್ತಿರುವಾಗ
ವಿಕ್ರಮ್ ಕೂಡಾ ಅವಳನ್ನು ಹಿಂಬಾಲಿಸುತ್ತಿದ್ದು,
ಇಬ್ಬರೂ ಸ್ಟೇಷನ್ ಒಳಗೆ ಹೋಗಿ ಕೆಲಸದಲ್ಲಿ ನಿರತರಾಗಿದ್ದ ದೆಫೇದಾರರನ್ನು ಕಂಡು ನಮಸ್ಕಾರಾ ಸಾರ್ ಎಂದಾಗ.
ದೆಫೇದಾರರು ಪ್ರತಿ ನಮಸ್ಕಾರ ಹೇಳಿದ ನಂತರ
ಆಶಾ ಗಂಟಲು ಸರಿಪಡಿಸಿಕೊಂಡು ಸಾರ್ ಎಂದ ತಕ್ಷಣ
ನೀವೇನೂ ಹೇಳಬೇಕಾಗಿಲ್ಲ , ನನಗೆ ಎಲ್ಲಾ ವಿಷಯ ಗೊತ್ತಿದೆ, ಸಾಹೇಬರು ಹೊರಗೆ ಹೋಗಿದ್ದಾರೆ. ಅವರು ಬಂದ ತಕ್ಷಣ ನಮಸ್ಕಾರ ಹೇಳಿದರೆ ಸಾಕು ಎಲ್ಲಾ ಏರ್ಪಾಡು ಅವರೇ ಮಾಡುತ್ತಾರೆ ಎಂದಾಗ
ವಿಷಯ ನಿಮಗೆ ಹೇಗೆ ತಿಳಿಯಿತು ಸಾರ್ ಎಂದು ವಿಕ್ರಮ್ ಪ್ರಶ್ನಿಸಲು
ನಿಮ್ಮ ಸ್ನೇಹಿತರು ನಮ್ಮ ಮನೆಯ ಬಳಿ ಇದ್ದಾರೆ ಅವರೇ ಎಲ್ಲಾ ವಿಷಯವನ್ನು ಹೇಳಿದ್ದಾರೆ. ಸ್ವಲ್ಪ ಹೊತ್ತು ಇಲ್ಲೇ ಕುಳಿತುಕೊಳ್ಳಿ ಎಂದು ದೆಫೇದಾರ್ ಹೇಳಿದಾಗ
ಆಶಾ ಹಾಗೂ ವಿಕ್ರಮ್ ಅಲ್ಲೇ ಇದ್ದ ಬೆಂಚಿನ ಮೇಲೆ ಕುಳಿತುಕೊಂಡ‌ ನಂತರ
ಆಶಾ ಮಾತನಾಡಿ, ವಿಕ್ರಮ್ ಈ ವಿಚಾರ‌ವನ್ನು ದೆಫೇದಾರರಿಗೆ ಯಾರು ಹೇಳಿದ್ರು? ನಿನ್ನ ಸ್ನೇಹಿತನಿಗೇನಾದರೂ ವಿಷಯ‌ ತಿಳಿಸಿದ್ಯಾ ಎಂದು ಆಶಾ ಪ್ರಶ್ನಿಸಲು
ಹೌದು ನಾನೇ ನನ್ನ ಫ್ರೆಂಡ್ ಗೆ ಹೇಳಿದ್ದೆ. ಹೊಸ ವರ್ಷನ್ ಫೋಟೋ ಸಾಫ್ಚ್ ವೇರನ್ನು ನನ್ನ ಫ್ರೆಂಡ್ ನಿಂದ‌ ಶೇರ್ ಮಾಡಿಸಿಕೊಳ್ಳುವಾಗ ನಿಮ್ಮಣ್ಣನ ವಿಷಯ ತಿಳಿಸಿದ್ದೆ, ಅವನೂ ಕೂಡಾ ಸುಮಾರು ನೈಂಟಿ ಪರ್ಸಂಟ್ ಮ್ಯಾಚ್ ಆಗಬಹುದೆಂದು ತಿಳಿಸಿದ್ದ ಎನ್ನುತ್ತಾನೆ.
ನೈಂಟಿ ಪರ್ಸಂಟ್ ಎಂದರೆ ಆಲ್ ಮೋಸ್ಟ್ ಮ್ಯಾಚ್ ಆಗುತ್ತದೆ ಎಂದು ಆಶಾ ಹೇಳಿದಾಗ
ಸದ್ಯ ನನ್ನ ಸ್ನೇಹಿತನೇ ವಿಷಯ ತಿಳಿಸಿರುವುದರಿಂದ ನಾವು ಇನ್ಸ್ ಪೆಕ್ಟರ್ ಗೆ ಕನ್ ವೀನ್ಸ್ ಮಾಡುವುದು ತಪ್ಪಿತು. ಇನ್ನು ನಾವು ಧೈರ್ಯ ವಾಗಿ ಮಾತನಾಡಬಹುದು ಎನ್ನುತ್ತಾ ನಿನಗೆ ಕಳುಹಿಸಿರುವ ಫೋಟೋಗಳ ಪ್ರಿಂಟ್ ತೆಗೆದುಕೊಂಡು ಬಂದಿದ್ದೀಯಾ ಎಂದು ವಿಕ್ರಮ್ ಕೇಳಲು
ಅಯ್ಯೋ ಮರೆತೇ ಬಿಟ್ಟೆ ವಿಕ್ರಮ್, ಎಂದು ಆಶಾ ಹೇಳಲು
ಎದುರಿಗೆ ಫೋಟೋ ಸ್ಟುಡಿಯೋ ಇದೆ ಪ್ರಿಂಟ್ ಹಾಕಿಸಿಕೊಂಡು ಬರೋಣ ಬಾ ಎಂದು ಹೇಳಿ ಇಬ್ಬರೂ ಎದ್ದಾಗ
ಇವರನ್ನು ನೋಡಿದ ದೆಫೇದಾರರು
ಎಲ್ಲಿಗೆ ಹೋಗುತ್ತಿದ್ದೀರಾ? ಇನ್ಮೇನು ಸಾಹೇಬರು ಬರುವ ಹೊತ್ತಾಯ್ತು ಎಂದಾಗ
ಸಾರ್ ಎದುರುಗಡೆ ಇರುವ ಸ್ಟುಡಿಯೋದಲ್ಲಿ ಫೋಟೋ ಪ್ರಿಂಟ್ ಹಾಕಿಸಿಕೊಂಡು ಬರುತ್ತೇವೆ ಎಂದು ಆಶಾಳ ಮಾತಿಗೆ
ದೆಫೇದಾರರು ಸಾಹೇಬರು ಬರುವುದರೊಳಗೆ ಬನ್ನಿ ಎಂದು ಹೇಳಿ‌ ತಮ್ಮ ಕೆಲಸದಲ್ಲಿ ಮಗ್ನರಾಗುತ್ತಾರೆ
ಆಶಾ ವಿಕ್ರಮ್ ಇಬ್ಬರೂ ಸ್ಟುಡಿಯೋಗೆ ಬಂದು ಫೋಟೋ ಪ್ರಿಂಟ್ ಹಾಕಿಸುತ್ತಿರುವಾಗ
ಈ ಕಡೆ ಇನ್ಲ್ ಪೆಕ್ಚರ್ ರವರು ಬಂದು ತನ್ನ ಛೇಂಬರಿನಲ್ಲಿ ಕುಳಿತು ದೆಫೇದಾರರನ್ನು ಕರೆದು ಯುವಕ ಯುವತಿ ಬಂದ್ರಾ‌ ಎಂದು ಪ್ರಶ್ನಿಸಿದಾಗ
ಬಂದಿದ್ದಾರೆ ಸಾರ್ ಫೋಟೋ ಪ್ರಿಂಟ್ ಹಾಕಿಸಲು ಹೋಗಿದ್ದಾರೆ ಎನ್ನುತ್ತಾರೆ.
ಬೇಗ‌ ಅವರಿಬ್ಬರನ್ನು ಕರೆಯಿರಿ ಎನ್ನುವ ವೇಳೆಗೆ‌ ಆಶಾ ವಿಕ್ರಮ್ ಇಬ್ಬರೂ ಸ್ಟೇಷನ್ ಒಳಗೆ ಬಂದಾಗ
ಅಲ್ಲಿದ್ದ ಸಿಬ್ಬಂದಿಯು
ಸಾಹೇಬರು ಕರೆಯುತ್ತಿದ್ದಾರೆಂದಾಗ
ಇಬ್ಬರೂ ಕೂಡಾ ಇನ್ಸ್ ಪೆಕ್ಟರ್ ಛೇಂಬರ್ ಗೆ ಹೋಗಿ ನಮಸ್ಕಾರಾ ಸಾರ್ ಎಂದ‌ ತಕ್ಷಣ
ನಿಮ್ಮ ತಂದೆ ತಾಯಿಯವರು ಬರಲಿಲ್ಲವಾ‌ ಎಂದು ಇನ್ಸ್‌ಪೆಕ್ಟರ್ ಪ್ರಶ್ನಿಸಿದಾಗ
ಏಕೆ ಸಾರ್‌ ಎಂದು ಇಬ್ಬರೂ ಕಕ್ಕಾಬಿಕ್ಕಿಯಾಗಿ ಕೇಳಲು
ದೆಫೇದಾರ್ ಕಡೆ ತಿರುಗಿ ಫೈನಲ್ ಆಗಿ ಇವರ ತಂದೆ ತಾಯಿಗೆ ಫೋನ್ ಮಾಡಿ ಬಂದರೇ ಬರಲಿ ಎನ್ನುತ್ತಾ, ನಾನು ಹೇಳಿದ್ದೆಲ್ಲಾ ರಡಿ ಮಾಡಿದ್ದೀರಾ ಎಂದು ಇನ್ಸ್ ಪೆಕ್ಟರ್ ಕೇಳಿದಾಗ
ದಫೇದಾರರು ಎಲ್ಲವೂ ರಡಿಯಾಗಿದೆ ಸಾರ್ ಎನ್ನುತ್ತಾರೆ
ಇವರಪ್ಪ ಅಮ್ಮ ಬರುವುದಿಲ್ಲ ನೀವಿಬ್ಬರೂ ಹಾರ ಬದಲಿಸಿ‌ಕೊಳ್ಳಿ ದೆಫೇದಾರರೇ ನಿಮ್ಮ ಮೊಬೈಲಿನಲ್ಲಿ ಸರಿಯಾಗಿ ಫೋಟೋ‌ ಹಿಡಿದುಕೊಳ್ಳಿ ಒಂದು ಫೋಟೋ ಕೂಡಾ ಮಿಸ್ ಆಗಕೂಡದು ಎನ್ನುತ್ತಾ, ಬೇಗ‌ ನೀವಿಬ್ಬರೂ ಹಾರ ಬದಲಿಸಿಕೊಳ್ಳಿ ನಂತರ ನೀನು ತಾಳಿ ಕಟ್ಟಪ್ಪಾ ಎಂದು ಇನ್ಸ್ ಪೆಕ್ಟರ್ ವಿಕ್ರಮ್ ಗೆ ಹೇಳುದಾಗ

ಇಲ್ಲಿ ಏನು ನಡೆಯುತ್ತಿದೆಯೆಂದು ತಿಳಿಯದೆ ಆಶಾ ವಿಕ್ರಮ್ ಇಬ್ಬರೂ ಗೊಂದಲಕ್ಕೆ‌ ಒಳಗಾಗಿ‌‌ ಸಾರ್ ಏನು ಮಾಡುತ್ತಿದ್ದೀರಾ ಎಂದು ಆಶಾ ಪ್ರಶ್ನಿಸಲು
ನಿನಗೆ ಹದಿನೆಂಚು ವರ್ಷವಾಗಿದೆ ತಾನೇ? ನಿನ್ನ‌ ಡೇಟ್ ಆಫ್ ಪ್ರೂಪ್ ಗೆ ಏನು ತಂದಿದ್ದೀಯಾ ಎಂದು ಆಶಾಳನ್ನು ಕೇಳಿ, ಪುನಃ ವಿಕ್ರಮ್ ಕಡೆ ತಿರುಗಿ ನಿನಗೆ ಇಪ್ಪತ್ತೊಂದು ವರ್ಷವಾಗಿರುವುದಕ್ಕೆ ಪ್ರೂಫ್ ಇದೆಯಾ ಎಂದು ಪ್ರಶ್ನಿಸಿದಾಗ
ಇಬ್ಬರೂ ಕಕ್ಕಾಬಿಕ್ಕಿಯಾಗಿ, ಸಾರ್ ಇದೆಲ್ಲಾ ಯಾಕೆ ಸಾರ್ ಎಂದು ಇಬ್ಬರೂ ಒಟ್ಟಿಗೆ ಕೇಳಿದಾಗ
ಏನ್ರೀ ಪುನಃ ಪುನಃ ನಮ್ಮನ್ನೇ ಪ್ರಶ್ನಿಸುತ್ತಿದ್ದೀರಾ ? ನೀವಿಬ್ಬರೂ ಲವ್ ಮಾಡಿರುವುದರಿಂದ ನಿಮ್ಮಿಬ್ಬರ ಮದುವೆ ಮಾಡಿಸುವುದಕ್ಕೆ ಎಂದ ತಕ್ಷಣ
ಇಬ್ಬರಿಗೂ ಶಾಕ್ ಆಗಿ ಸಾರ್ ನಾವು ಬಂದಿರುವುದು‌ ಅದಕ್ಕಲ್ಲಾ ಸಾರ್ ಎಂದು ಒಟ್ಟಿಗೆ ಹೇಳಲು
ನಾವಿಬ್ಬರೂ ಲವ್ ಮಾಡುತ್ತಿದ್ದೇವೆ ನಮ್ಮ ಅಪ್ಪ ಅಮ್ಮ ಒಪ್ಪುತ್ತಿಲ್ಲ ನಮಗೆ ಸೆಕ್ಯೂರಿಟಿ ಕೊಡಿ ಎಂದು ಕೇಳಿದ್ರೀ? ಈಗ ಪ್ಲೇಟ್ ಬದಲಿಸುತ್ತಿದ್ದೀರಾ? ಎಂದು ಇನ್ಸ್‌ ಪೆಕ್ಚರ್ ಕೋಪದಿಂದ ಪ್ರಶ್ನಿಸಲು
ಸಾರ್ ನೀವು ಕನ್ಫ್ಯೂಸ್ ಮಾಡಿಕೊಂಡಿದ್ದೀರಾ ನಾವು ಬಂದಿರುವುದು ನಮ್ಮಣ್ಣನನ್ನು ಹುಡುಕಿಕೊಡಿ ಎಂದು ಕೇಳಲು ಸಾರ್‌ ಎಂದಾಗ
ರೀ ದೆಫೇದಾರ್ರೇ ಇದೇನ್ರೀ ಇವರು ಉಲ್ಟಾ‌ ಹೊಡೆಯುತ್ತಿದ್ದಾರೆ ಎಂದು ಪ್ರಶ್ನಿಸುತ್ತಿರುವಾಗ
ಆ ವೇಳೆಗೆ ಸೆಕ್ಯೂರಿಟಿ ಕೇಳಿದ್ದ ಜೋಡಿ ಬಿರ ಬಿರನೆ ಸ್ಟೇಷನ್ ಒಳಗೆ ಬಂದಾಗ
ಆ ಜೋಡಿಯನ್ನು ನೋಡಿದ ದೆಫೇದಾರರು ಅಯ್ಯೋ ಇವರೇ ಬೇರೆ, ಎಂದು ತಲೆ ಕೆರೆದುಕೊಳ್ಳುತ್ತಾ, ಸಾರ್ ಆ ಜೋಡಿ ಈ ಜೋಡಿಯಲ್ಲಾ ಸಾರ್, ಮದುವೆ ಮಾಡಿಸಲು ಕೇಳಿದ ಜೋಡಿ ಈಗ‌ ಬರುತ್ತಿದೆ ಎಂದಾಗ
ನಿಮ್ಮ ಮಾತು ಕೇಳಿ ಯಾರ್ಯಾರಿಗೋ ಮದುವೆ ಮಾಡಿಸಿ ನಾವು ಕೋರ್ಟಿಗೆ ಅಲೆಯುವಂತಾಗುತ್ತಲ್ರೀ‌ ಛೇ ಎನ್ನುತ್ತಾ, ಆಶಾ ಕಡೆ ತಿರುಗಿ ನಿಮ್ಮದೇನ್ರೀ ಪ್ರಾಬ್ಲಮ್ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಲು
ಸಾರ್ ನಮ್ಮಣ್ಣನನ್ನು ಹುಡುಕಿ ಕೊಡಬೇಕು ಸಾರ್ ಎಂದು ಆಶಾ‌ ಹೇಳುತ್ತಾಳೆ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಕವಾದ ಅಂಶವೇನೆಂದರೆ

ಎಷ್ಟೇ ಕೆಲಸವಿದ್ದರೂ ಗಡಿಬಿಡಿ ಮಾಡಿಕೊಳ್ಳಬಾರದು, ವಿಷಯ ಎಷ್ಚೇ ತಿಳಿದಿದ್ದರೂ ಪುನಃ ಅವಲೋಕಿಸಿ ವ್ಯವಹರಿಸಿದರೆ, ಆಗುವ ಅಚಾತುರ್ಯ ತಪ್ಪುತ್ತದೆ. ಆತುರಗಾರನಿಗೆ ಬುದ್ದಿ ಮಟ್ಟ ಎನ್ನುವಂತೆ ಕೆಲಸ‌ವನ್ನು ಸಮಾಧಾನದಿಂದ‌ ಮಾಡದೆ ಆತುರಾತುರವಾಗಿ ನಿರ್ವಹಿಸಿದರೆ ಗೊಂದಲ ಉಂಟಾಗಿ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತದೆಯಲ್ಲವೇ?

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ- 05

ಹಿಂದಿನ ಸಂಚಿಕೆಯಲ್ಲಿ

ಆಶಾ ವಿಕ್ರಮ್ ಇಬ್ಬರಿಗೂ ಮದುವೆ ಮಾಡಿಸಲು ಹೋಗಿ ನಂತರ ಇವರಿಬ್ಬರು ಬೇರೆ ಜೋಡಿ ಎಂದು ತಿಳಿದು,ಇನ್ಸ್‌ಪೆಕ್ಟರ್ ರವರು
ನಿಮ್ಮ ಮಾತು ಕೇಳಿ ಯಾರ್ಯಾರಿಗೋ ಮದುವೆ ಮಾಡಿಸಿ ನಾವು ಕೋರ್ಟಿಗೆ ಅಲೆಯುವಂತಾಗುತ್ತಲ್ರೀ‌ ಛೇ ಎಂದು ದೆಫೇದಾರರಿಗೆ ಹೇಳಿ, ಆಶಾ ಕಡೆ ತಿರುಗಿ ನಿಮ್ಮದೇನ್ರೀ ಪ್ರಾಬ್ಲಮ್ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಲು
ಸಾರ್ ನಮ್ಮಣ್ಣನನ್ನು ಹುಡುಕಿ ಕೊಡಬೇಕು ಸಾರ್ ಎಂದು ಆಶಾ‌ ಕೇಳುತ್ತಾಳೆ

  • ಕಥೆಯನ್ನು ಮುಂದುವರೆಸುತ್ತಾ….

ನಮ್ಮಣ್ಣನನ್ನು ಹುಡುಕಿಕೊಡಿ ಸಾರ್ ಎಂದು ಇನ್ಸ್‌ಪೆಕ್ಟರ್ ರವರನ್ನು ಆಶಾ‌ ಕೇಳಿದಾಗ
ನಿಮ್ಮಣ್ಣಎಷ್ಟು ದಿನದಿಂದ ಕಾಣೊಯಾಗಿದ್ದಾರೆ? ಅವರ ವಯಸ್ಸೆಷ್ಟು? ಅವರ ಫೋಟೋ ಇದೆಯಾ ಎಂದು ಇನ್ಸ್‌ಪೆಕ್ಟರ್ ಕೇಳಿದ ಪ್ರಶ್ನೆಗೆ
ಆಶಾ ತಬ್ಬಿಬ್ಬುಗೊಂಡು ಸಾರ್ ನಮ್ಮಣ್ಣ ತಪ್ಪಿಸಿಕೊಂಡು ಹೋಗಿ ಇಪ್ಪತ್ಕೈದು ವರ್ಷಗಳಾಗಿದೆ ಸಾರ್ ಎಂದ ತಕ್ಷಣ
ಎದ್ದೇಳ್ರೀ ಮೇಲೆ? ನಿಮಗೆ ಜೋಕ್ ಮಾಡಲು ಬೇರೆ ಯಾರೂ ಸಿಗಲಿಲ್ಲವಾ? ಇದು ಪೋಲೀಸ್ ಸ್ಟೇಷನ್ ರೀ ,,,,,ಪೋಲೀಸ್ ಸ್ಟೇಷನ್ ,,,,,ಜೋಕ್ ಮಾಡೋ ಸ್ಥಳವಲ್ಲ ನನಗೆ ಕೋಪ ಬರುವುದರ ಮುಂಚೆ ಜಾಗ‌ ಖಾಲಿ ಮಾಡಿ ಇಲ್ಲದಿದ್ದರೆ ನಿಮ್ಮ ಮೇಲೆ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ. ನಾವು ಯಾವುದೋ ಟೆನ್ಷನ್ ನಲ್ಲಿರುತ್ತೇವೆ, ಇವರು ಜೋಕ್ ಮಾಡಲು ಬರುತ್ತಾರೆ ಎಂದು ಕೋಪಿಸಿಕೊಂಡು ತನ್ನ ಕೆಲಸದಲ್ಲಿ ನಿರತರಾದಾಗ
ಆಶಾ ವಿಕ್ರಮ್ ಇಬ್ಬರೂ ಮುಖ ಮುಖ ನೋಡುತ್ತಾ ಈಗೇನು ಮಾಡುವುದೆಂದು ಕಣ್ಣಿನಲ್ಲೇ ಪ್ರಶ್ನಿಸಿಕೊಂಡು ಇನ್ಸ್ ಪೆಕ್ಟರ್ ಗೆ ಯಾವ ರೀತಿ ಹೇಳಬೇಕೆಂದು ತಿಳಿಯದೆ ಅಲ್ಲೇ ನಿಂತಿರುವಾಗ
ನಿಮಗೇ‌ ಹೇಳಿದ್ದು ಜಾಗ‌ ಖಾಲಿ ಮಾಡುತ್ತೀರೋ ಇಲ್ಲವೋ ಎಂದು ಏರುಧ್ವನಿಯಲ್ಲಿ ಇನ್ಸ್‌ಪೆಕ್ಟರ್ ‌ಕೇಳಲು
ಸಾರ್ ಅದೂ ನಮ್ಮಣ್ಣ ಚಿಕ್ಕಂದಿನಲ್ಲಿ ಮನೆ ಬಿಟ್ಚು ಹೋದ, ಈಗ ಅವನ ಫೋಟೋ ಈಗಿನ ವಯಸ್ಸಿಗೆ ತಕ್ಕಂತೆ ಸಾಫ್ಟ್ ವೇರ್ ನಲ್ಲಿ ಡೆವಲಪ್ ಮಾಡಿದ್ದೇವೆ ಈಗ‌ ಎಲ್ಲಿದ್ದಾನೋ ಗೊತ್ತಿಲ್ಲದೆ‌ ನಮ್ಮ ಅಪ್ಪ ಅಮ್ಮ ಅಂದಿನಿಂದಲೂ ಕಣ್ಣೀರಲ್ಲಿ ಕೈ‌ತೊಳೆಯುತ್ತಿದ್ದಾರೆ ಪ್ಲೀಸ್‌ ಹೆಲ್ಪ್ ಮಾಡಿ ಸಾರ್ ಎಂದು ಆಶಾ‌ ಗದ್ಗದಿತಳಾದಾಗ
ಈ ಹೆಣ್ಣು ಮಕ್ಕಳು ಪೋಲಿಸ್ ಠಾಣೆಗೆ ಬಂದು ಕಣ್ಣೀರು ಹಾಕಿದರೆ ನಮಗೆ ಸಹಿಸಲು ಆಗುವುದಿಲ್ಲ, ಏನಾದರೂ ಸಹಾಯ ಮಾಡಬೇಕು ಎನಿಸುತ್ತದೆ ಎಂದಾಗ
ಸಾರ್ ಕಂಪ್ಲೇಂಟ್ ತೆಗೆದುಕೊಂಡು ನಮ್ಮಣ್ಣನನ್ನು ಹುಡುಕಿಕೊಡಿ ಸಾರ್ ಎನ್ನಲು
ಆ ಸಾಫ್ಟ್‌ವೇರ್ ನಲ್ಲಿ ಡೆವಲಪ್ ಮಾಡಿದ ಫೋಟೋವನ್ನು ಎಲ್ಲರೂ ಸುಮ್ಮನೆ ತಿಳಿದುಕೊಳ್ಳಲೆಂದು ಅಷ್ಚೇ ರೀ, ಅದರ‌ ಮೇಲೆ ನಿಮ್ಮಣ್ಣನನ್ನು ಹುಡುಕುವುದಕ್ಕೆ ಆಗುವುದಿಲ್ಲ. ನಮ್ಮ ಸಬ್ ಇನ್ಸ್ ಪೆಕ್ಟರ್ ಬರುತ್ತಾರೆ ಅವರನ್ನು ಕೇಳಿ ಎಂದಾಗ
ಥ್ಯಾಂಕ್ಸ್ ಸಾರ್ ಎಂದು ಇಬ್ಬರೂ ಹೇಳಿ ಇನ್ಸ್‌ಪೆಕ್ಟರ್ ಛೇಂಬರಿನಿಂದ ಹೊರ ಬರುತ್ತಿರುವಾಗ
ಆಶಾ ದಯವಿಟ್ಟು ಮನಸ್ಸು ಮಾಡು ಇಲ್ಲಿಂದ ಹೊರಟರೆ ನಮಗೆ ಮರ್ಯಾದೆ ಬರುತ್ತದೆ. ನಾವೇ ನಮ್ಮಲ್ಲಿರುವ ಸೋಸಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಏನು ಪ್ಪತಿಕ್ರಿಯೆ ಬರುತ್ತದೆಂದು ನೋಡೋಣವೆಂದು ವಿಕ್ರಮ್ ಮಾತಿಗೆ
ಒಂದು ಸಲ ಅವರನ್ನೂ ಕೇಳೋಣವೆಂದು ಆಶಾ ನುಡಿದಾಗ
ನಿನ್ನಿಷ್ಟ ನಡಿ ಎಂದು ಹೊರಬರುತ್ತಿರುವಾಗ
ಸಹಾಯಕ ಸಬ್ ಇನ್ಸ್‌ಪೆಕ್ಟರ್ ರವರು ಅವರಿಗೆ ಎದುರಾಗಿ ಬರಲು
ಇಬ್ಬರೂ ನಮಸ್ಕಾರ ಸಾರ್‌ ಎನ್ನುತ್ತಾರೆ.
ಸಹಾಯಕ ‌ಇನ್ಸ್‌ಪೆಕ್ಚರ್ ಪ್ರತಿ ನಮಸ್ಕಾರ ಹೇಳಿ ತನ್ನ ಛೇಂಬರ್ ಗೆ ಹೋಗುತ್ತಿರುವಂತೆ
ಇಬ್ಬರೂ ಅವರನ್ನು ಹಿಂಬಾಲಿಸಿ ಪುನಃ‌ ನಮಸ್ಕಾರ‌ ಸಾರ್‌ ಎಂದಾಗ
ಏನು ನಿಮ್ಮ ಪ್ಪಾಬ್ಲಮ್ ಎಂದು ಸಹಾಯಕ ಇನ್ಸ್‌ಪೆಕ್ಟರ್ ಪ್ರಶ್ನಿಸಲು
ವಿಕ್ರಮ್ ಮಾತನಾಡಿ, ತನ್ನ ಜೇಬಿನಿಂದ ಎರಡು ಫೋಟೋ ತೆಗೆದು ತೋರಿಸುತ್ತಾ, ಸಾರ್ ಇದು ಇವರ ಅಣ್ಣನು ಚಿಕ್ಕವರಿದ್ದಾಗ ತೆಗೆದ. ಫೋಟೋ, ಆಗಲೇ ತಪ್ಪಿಸಿಕೊಂಡು ಹೋದನಂತೆ ಎನ್ನಲು
ಎಷ್ಚು ವರ್ಷವಾಗಿದೆ ಎಂದು ಸಹಾಯಕ ಇನ್ಸ್ ಪೆಕ್ಟರ್ ಪ್ರಶ್ನೆಗೆ
ಇಪ್ಪತ್ತೈದು ವರ್ಷವಾಗಿದೆ ಎಂದು ವಿಕ್ರಮ್ ಉತ್ತರಿಸಲು
ಅಂದರೆ ಇಪ್ಪತ್ಕೈದು ವರ್ಷಗಳ ನಂತರ ಕಂಪ್ಲೇಂಟ್ ಕೊಡಲು ಬಂದಿದ್ಜೀರಾ ಎಂಬ ಇನ್ಸ್ ಪೆಕ್ಟರ್ ಪ್ರಶ್ನೆಗೆ
ಇವರ ತಂದೆ ಇಪ್ಪತ್ತೈದು ವರ್ಷಗಳ‌ ಹಿಂದೆಯೇ ಕಂಪ್ಲೇಂಟ್ ಕೊಟ್ಟಿದ್ದರು ಸಾರ್ ಸಿಗಲೇ ಇಲ್ಲ. ಈಗ ಇಪ್ಪತ್ತೈದು ವರ್ಷಗಳ‌ ನಂತರ ಇವರಣ್ಣ ಯಾವ‌ರೀತಿ ಇರಬಹುದೆಂದು ಫೋಟೋಸಾಫ್ಟ್ ವೇರ್ ಗೆ ಹಾಕಿ ಫೋಟೋ ಎನ್ ಲಾರ್ಜ್ ಮಾಡಿದ್ದೇವೆಂದು ಆಶಾ‌ ಅಣ್ಣನು ದೊಡ್ಡವನಾಗಿರುವ ಫೋಟೋ ತೋರಿಸಿದಾಗ
ನೋ ನೋ ಇದನ್ನೆಲ್ಲಾ ನಂಬುವುದಕ್ಕೆ ಆಗುವುದಿಲ್ಲ . ಈ ರೀತಿ ನಾವು ಹುಡುಕುವುದಕ್ಕೂ ಆಗುವುದಿಲ್ಲ. ಮುಖದ ಚಹರೆ ಸ್ವಲ್ಪ ವ್ಯತ್ಯಾಸವಾದರೂ ಮನುಷ್ಯನೇ ಬದಲಾಗುತ್ತಾನೆ. ಹೇಗೆ ಕಂಡು ಹಿಡಿಯುತ್ತೀರಾ ಎಂದು ಸಹಾಯಕ‌ ಇನ್ಸ್ ಪೆಕ್ಟರ್ ಇವರನ್ನೇ ಪ್ರಶ್ನಿಸಿದಾಗ
ಅದೃಷ್ಟವಶಾತ್ ಪರ್ಫೆಕ್ಚಾಗಿ ಸಿಕ್ಕಿಬಿಟ್ಟರೆ ಅನುಕೂಲ ವಾಗುತ್ತದಲ್ಲಾ ಸಾರ್ ಎಂದು ವಿಕ್ರಮ್ ಹೇಳಲು
ನಾನೊಂದು ವಿಷಯ ಹೇಳುತ್ತೇನೆ ಬೇಜಾರು ಮಾಡಿಕೊಳ್ಳಬೇಡಿರಿ ಇವರು ಬದುಕಿದ್ದರೆ ಮನೆಗೆ ವಾಪಸ್ ಬರದೇ ಇರುತ್ತಿದ್ದರಾ ಹೇಳಿ ಎಂದು ಇನ್ಸ್ ಪೆಕ್ಟರ್ ಕೇಳಲು
ನಮ್ಮಪ್ಪ ಶಿಕ್ಷಕರಾಗಿದ್ದಾರೆ ಮೂರು ಕಡೆ ಟ್ರಾನ್ಲ್‌ಫರ್ ಆಗಿ ಈ ಊರಿಗೆ ಬಂದಿದ್ದಾರೆ, ನಮ್ಮಣ್ಣನಿಗೆ ವಿಳಾಸ‌ ಗೊತ್ತಿಲ್ಲದೆ ಹೋಗಿರಬಹುದಲ್ಲವಾ ಸಾರ್ ಎಂದು ಆಶಾ‌ ಪ್ರಶ್ನಿಸಿದಾಗ
ನೀವು ಹೇಳುವುದರಲ್ಲಿಯೂ ಸತ್ಯಾಂಶವಿದೆ. ಆದರೂ ನಾವು ಈಗ ಕಂಪ್ಲೇಂಟ್ ತೆಗೆದುಕೊಂಡು ಅದರ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಬಹಳ‌ ಜನಪ್ರಿಯವಾಗಿವೆ ನೀವು ಬೇಕಾದರೆ ಸಾಮಾಜಿಕ‌ ಜಾಲತಾಣದಲ್ಲಿ ಪ್ರಕಟಿಸಿಕೊಳ್ಳಬಹುದು ಎಂದಾಗ
ಸಾರ್ ನೀವಾದರೆ ದೇಶಾದ್ಯಂತ ಎಲ್ಲಾ ಸ್ಟೇಷನ್ ಗಳಿಗೂ ಕಳುಹಿಸುತ್ತೀರಿ ನಾವು ನಮ್ಮ ಸಾಮಾಜಿಕ ‌ಜಾಲತಾಣದಲ್ಲಿ ಲಿಮಿಟೆಡ್ ಆಗಿ ಪ್ರಕಟಿಸಬೇಕಾಗುತ್ತದೆ ಎಂದು ವಿಕ್ರಮ್ ಹೇಳಲು
ನೀವು ತಪ್ಪು ತಿಳಿದಿದ್ದೀರೀ ನೀವು ನಿಮ್ಮ ಗ್ರೂಪ್ ನಲ್ಲಿ ಪ್ರಕಟಿಸಿದರೆ ಅದು ಎಲ್ಲಾ‌ ಗ್ರೂಪ್ ಗಳಿಗೂ ಶೇರ್ ಆಗಿ ಹೆಚ್ಚಿನ ರೆಸ್ಪಾನ್ಸ್ ಸಿಗಬಹುದು ಟ್ರೈಮಾಡಿ ನೋಡಿ ಎಂದು ಸಹಾಯಕ ಇನ್ಸ್ ಪೆಕ್ಟರ್ ಹೇಳಿದಾಗ
ಪ್ರಯತ್ನಿಸುತ್ತೇವೆಂದು ಹೇಳಿ ಹೊರಗೆ ಬಂದಾಗ
ಆಶಾ ಮಾತನಾಡಿ ನನಗಂತೂ ತಲೆ‌ಕೆಟ್ಟು ಹೋಗಿದೆ ಹೋಟೆಲ್ ಗೆ ಹೋಗಿ ಕಾಫಿ ಕುಡಿಯೋಣವೆಂದು‌ ಹೇಳಲು
ಇಲ್ಲಿ ಒಳ್ಳೆಯ ಹೋಟೆಲ್ ಯಾವುದೂ ಇಲ್ಲ. ಮುಂದೆ ಒಳ್ಳೆಯ ಹೋಟೆಲ್‌ ಸಿಗಬಹುದು ಬೈಕಿನ ಹಿಂದೆ ಕುಳಿತುಕೋ ಹೋಗಣವೆಂದು ವಿಕ್ರಮ್ ಹೇಳಲು
ಆಶಾ ಮಾತನಾಡದೆ ಬೈಕಿನ ಹಿಂದೆ ಕುಳಿತಾಗ
ಒಂದು ದೊಡ್ಡ ಹೋಟೆಲ್ ಮುಂದೆ ವಿಕ್ರಮ್ ಬೈಕ್ ನಿಲ್ಲಿಸಿದ ನಂತರ
ಇಬ್ಬರೂ ಇಳಿದು ಹೋಟೆಲ್‌ ಒಳಗೆ ಹೋಗಿ ಕುಳಿತ ತಕ್ಷಣ
ಮಾಣಿಯು ತಿಂಡಿಯ ಲಿಸ್ಟ್ ತಂದು ಕೊಟ್ಟಾಗ
ನನಗೀಗ ಏನೂ ಬೇಡ ಕಾಫಿ ಸಾಕೆಂದು ಆಶಾ ಹೇಳಿ ಇಬ್ಬರೂ ಕಾಫಿಗೆ ಆರ್ಡರ್ ಮಾಡಿದ ನಂತರ
ಆಶಾ ಮಾತು ಮುಂದುವರೆಸಿ ಛೇ ಇಲ್ಲಿ ಬಂದಿದ್ದಕ್ಕೆ ಏನೂ ಪ್ರಯೋಜನವಾಗಲಿಲ್ಲವೆನ್ನುತ್ತಾಳೆ
ಯಾಕಾಗಲಿಲ್ಲಾ ಆಶಾ ಎಂದು ವಿಕ್ರಮ್ ಪ್ರಶ್ನಿಸಲು
ಸೋಸಿಯಲ್ ಮೀಡಿಯಾದಲ್ಲಿ ಪ್ರಕಟಿಸಲು ಇವರೇ ಹೇಳಬೇಕಿತ್ತಾ? ಆ ಮಾತು ಕೇಳಲು ಇಲ್ಲಿಗೆ ಬಂದಂತಾಯಿತು ಎಂಬ ಆಶಾಳ‌ ಮಾತಿಗೆ
ಇನ್ನೊಂದು ವಿಷಯ ಮರೆತೆಯಾ ಎಂದು ವಿಕ್ರಮ್ ಕೇಳಲು
ಇನ್ನೇನು ಆಯ್ತೆಂದು ಆಶಾ‌ ಪ್ರಶ್ನಿಸಿದಾಗ
ನಾವಿಬ್ಬರೂ ಸುಮ್ಮನೆ ಇದ್ದಿದ್ದರೆ,,,,,
ಇದ್ದಿದ್ದರೆ ಏನಾಗುತ್ತಿತ್ತು ಹೇಳು ವಿಕ್ರಮ್? ಎಂದು ಆಶಾ‌ ಪ್ರಶ್ನಿಸಲು
ಇಬ್ಬರಿಗೂ ಖರ್ಚಿಲ್ಲದೆ ಇನ್ಸ್‌ಪೆಕ್ಟರ್ ರವರು ಮದುವೆ ಮಾಡಿಸುತ್ತಿದ್ದರು ಎಂದಾಗ
ವಿಕ್ರಮ್ ಪ್ಲೀಸ್ ಜೋಕ್ ಮಾಡಬೇಡಾ, ಈಗ ನಮಗೆ ಅರ್ಜಂಟಾಗಿ ಮದುವೆ ಮಾಡಿಸಲು ನಾವೇನು ಕಾದು ಕುಳಿತಿದ್ದೀವಾ? ನನಗಂತೂ ಭಯವೇ ಆಗಿತ್ತೆಂದು ಆಶಾಳ‌ ಮಾತಿಗೆ,
ಅಪ್ಪ ಅಮ್ಮನಿಗೆ ಹೇಳದೆ ಇನ್ನೆಲ್ಲಿ ಮದುವೆ ಮಾಡಿಸುತ್ತಾರೋ ಎಂದು ನನಗೂ ಭಯವಾಗಿತ್ತು ಆಶಾ ಎಂದು ವಿಕ್ರಮ್ ಹೇಳಲು.
ಅಂದರೆ ನಿಮ್ಮಪ್ಪ ಅಮ್ಮ ಬಂದಿದ್ದರೆ ಮದುವೆರಾಗಲು ರಡಿಯಾಗಿದ್ದೆಯಾ ವಿಕ್ರಮ್? ದಯವಿಟ್ಟು ಜೋಕ್ ಮಾಡಬೇಡ, ನಮ್ಮಣ್ಣ ಸಿಗುವವರೆಗೆ ನಾನು ಮದುವೆಯಾಗುವುದಿಲ್ಲವೆಂದು ನಮ್ಮಪ್ಪ ಅಮ್ಮನಿಗೆ ಹೇಳಿದ್ದೇನೆ ಎಂದು ಆಶಾ ನುಡಿಯಲು
ನಿಮ್ಮಣ್ಣ ಸಿಕ್ಕಿದ ತಕ್ಷಣ ಮದುವೆಯಾಗುತ್ತೀಯಾ ಎಂದು ವಿಕ್ರಮ್ ಪುನರ್ ಪ್ರಶ್ನಿಸಿದಾಗ
ಆಗ ನೋಡೋಣವೆಂಬ ಆಶಾ ಮಾತಿಗೆ,
ವಿಕ್ರಮ್ ಮನಸ್ಸಿನಲ್ಲಿ ಹೇಗಿದ್ದರೂ ಇನ್ಸ್ ಪೆಕ್ಟರ್ ನಮ್ಮ ಮದುವೆಗೆ ಪೀಠಿಕೆ ಹಾಕಿದ್ದಾರೆ. ಇದೇ ಸಮಯದಲ್ಲಿ ನನ್ನ ಅಭಿಲಾಷೆ ಯನ್ನು ಆಶಾಳಿಗೆ ಧೈರ್ಯದಿಂದ ತಿಳಿಸಬೇಕು. ಈ ಸಮಯ ಬಿಟ್ಚರೆ ಪುನಃ ಈ ಅವಕಾಶ ಯಾವಾಗ ಬರುತ್ತದೋ ಎಂದುಕೊಳ್ಳುತ್ತಾನೆ
ನಂತರ ಇಬ್ಬರೂ ಕಾಫಿ ಕುಡಿದು ಲೋಟವನ್ನು ಟೇಬಲ್ ಮೇಲಿಟ್ಟು ಹೊರಗೆ ಬರುತ್ತಿರುವಾಗ

ವಿಕ್ರಮ್ ಮಾತನಾಡಿ, ನಿನಗೊಂದು ವಿಷಯ ಹೇಳಬೇಕು ಆಶಾ ಎನ್ನುತ್ತಾನೆ.

ಈ ಸಂಚಿಕೆಯಲ್ಲಿ ತಿಳಿದುಬರುವ ಮುಖ್ಯವಾದ ಅಂಶವೇನೆಂದರೆ

ನಾವು ಏನು ಮಾಡಿದರೂ ಅದನ್ನು ಕೇಳುವವರು ಮಾಡಲೇಬೇಕೆಂದು ಪಟ್ಟು ಹಿಡಿಯಬಾರದು. ಕೆಲವರಿಗೆ ಅವರದ್ದೇ ಆದ ಇತಿ ಮಿತಿಗಳಿರುತ್ತವೆ. ಅದನ್ನು ದಾಟಿ ಯಾರೊಬ್ಬರೂ ಬೇರೆಯವರಿಗೆ ಸಹಾಯ ಮಾಡಲು ಹೋಗುವುದಿಲ್ಲ. ತಮ್ಮ ಅಧಿಕಾರ‌ ವ್ಯಾಪ್ತಿಯನ್ನು ಮೀರಿ ಸಹಾಯ ಮಾಡಲು ಹೋದರೆ ಕಷ್ಟಕ್ಕೆ ಸಿಲುಕುವುದು ನಿಶ್ಚಿತ.

ಮುಂದುವರೆಯುತ್ತದೆ……

 

“ಅಭಿಲಾಷೆ” ಕಾದಂಬರಿ ಸಂಚಿಕೆ- 06

ಹಿಂದಿನ ಸಂಚಿಕೆಯಲ್ಲಿ

ವಿಕ್ರಮ್ ಹಾಗೂ ಆಶಾ‌ ಇಬ್ಬರೂ ಹೋಟೆಲಿನಲ್ಲಿ ಕಾಫಿ ಕುಡಿದು, ಹೊರಬಂದಾಗ, ನಿನ್ನ ಬಳಿ ಸ್ವಲ್ಪ ಮಾತಾಡಬೇಕೆಂದು ವಿಕ್ರಮ್ ಹೇಳಿರುತ್ತಾನೆ

  • ಕಥೆಯನ್ನು ಮುಂದುವರೆಸುತ್ತಾ

ನಿನ್ನ ಬಳಿ ಮಾತನಾಡಹೇಕೆಂದು ವಿಕ್ರಮ್ ಆಶಾಗೆ‌ ಹೇಳಿದಾಗ
ಏನು ಹೇಳು ವಿಕ್ರಮ್ ಎಂದು ಆಶಾ ಉತ್ಸುಕತೆಯಿಂದ ಪ್ರಶ್ನಿಸುತ್ತಾಳೆ
ಇನ್ಸ್ ಪೆಕ್ಚರ್ ರವರು ನಮ್ಮಿಬ್ಬರ ಮದುವೆಗೆ ಪೀಠಿಕೆ ಹಾಕಿದ್ದಾರೆ ನಾವಿಬ್ಬರೂ ಏಕೆ ಮದುವೆಯಾಗಬಾರದೆಂಬ ವಿಕ್ರಮ್ ಮಾತಿಗೆ,
ಪ್ಲೀಸ್ ವಿಕ್ರಂ ನನಗೆ ನಿನ್ನ ಮೇಲೆ ಆ ರೀತಿಯ ಭಾವನೆ ಇಲ್ಲವೆಂದು ಆಶಾ ನುಡಿದಾಗ
ನನಗೂ ಆ ಭಾವನೆ ಇರಲಿಲ್ಲ. ಇನ್ಸ್ ಪೆಕ್ಟರ್ ಹೇಳಿದ ನಂತರ ನಾವೇಕೆ ಮದುವೆಯಾಗಬಾರದು ಎನ್ನಿಸಿದೆ. ನಾವಿಬ್ಬರೂ ಮದುವೆಯಾದರೆ ನಮ್ಮಿಬ್ಬರ. ಸ್ನೇಹ ಶಾಶ್ವತನಾಗಿ ಉಳಿಯುತ್ತದೆ ಪ್ಲೀಸ್ ಆಶಾ ಬೇಡ ಎನ್ನಬೇಡವೆಂದು ವಿಕ್ರಮ್ ಮನದಾಳದಿಂದ‌ ಹೇಳಿದಾಗ
ಇಲ್ಲಾ ವಿಕ್ರಮ್ ನೀನು ತಪ್ಪು ತಿಳಿದಿದ್ದೀಯಾ ನಾನೀಗಲೇ‌ ಮದುವೆಯಾಗುವುದಿಲ್ಲವೆಂದು ನನ್ನ ತಂದೆಗೆ ಹೇಳಿದ್ದೇನೆಂಬ ಆಶಾ‌ಳ ಮಾತಿಗೆ
ಹಾಗಾದರೆ ನಾನು ನಿನಗೆ ಬೇಡವಾ ಹಾಗೆಯೇ‌ ನನ್ನ ಸಹಾಯವೂ ಬೇಡವಾ? ಎಂಬ ವಿಕ್ರಂ ಪ್ರಶ್ನೆಗೆ
ಆಶಾ ನಿರುತ್ತರಳಾಗುತ್ತಾಳೆ.
ಪ್ಲೀಸ್ ಆಶಾ‌ ಮಾತನಾಡು, ನೀನು ಮೌನವಾದರೆ ನಾನೀಗಲೇ‌ ಹೊರಟು ಹೋಗುತ್ತೇನೆಂದು ವಿಕ್ರಮ್ ಹೇಳಿದಾಗ
ಹುಡುಗಿ ಏನಾದರೂ ಚೆನ್ನಾಗಿ ಮಾತನಾಡಿದಳು ಎಂದ ತಕ್ಷಣ ನಿಮ್ಮ ಆಸೆ ಎಲ್ಲೆಲ್ಲೋ ಹೋಗುತ್ತದೆ ಅಲ್ಲವಾ? ವಿಕ್ರಮ್ ಎಂದು ಆಶಾ‌ ಪ್ರಶ್ನಿಸಲು
ಆಶಾ ಪ್ಲೀಸ್ ನನ್ನನ್ನು ಆ ಗುಂಪಿಗೆ ಸೇರಿಸಬೇಡ. ನಾನು ಮನಸ್ಸು ಮಾಡಿದರೆ ಕೋಟ್ಯಾಧೀಶ್ವರನ ಅಳಿಯ ಆಗಬಹುದು, ಆದರೆ ನನಗೆ ಅದು ಇಷ್ಟವಿಲ್ಲ. ನಾನು ಮನಸಾರೆ ಇಷ್ಟಪಟ್ಟು ಮದುವೆಯಾಗಬೇಕೆಂದು ಬಯಸಿ, ಮದುವೆಯಾಗೆಂದು ಕೇಳುತ್ತಿದ್ದೇನೆ. ಐ ಲವ್ ಯೂ ವೆರಿಮಚ್ ಆಶಾ‌ ಎಂದ‌ ತಕ್ಷಣ
ನೋ ನೋ ವಿಕ್ರಮ್ ಪ್ಲೀಸ್‌ ನನ್ನ ಮಾತು ಕೇಳು, ನಮ್ಮಣ್ಣ ಸಿಗುವವರೆಗೂ ನಾನು ಮದುವೆ ಮಾಡಿಕೊಳ್ಳುವುದಿಲ್ಲವೆಂದು ಹೇಳಲಿಲ್ಲವಾ ಎಂದು ಆಶಾ‌ ನುಡಿದಾಗ
ನನ್ನನ್ನು ಲೌವ್ ಮಾಡುತ್ತಿದ್ದೀಯಾ ಎಂದು ಹೇಳು ಸಾಕು, ನಾನು ಕೂಡಾ ನಿಮ್ಮಣ್ಣ ಸಿಗುವವರೆಗೂ ಕಾಯುತ್ತೇನೆಂದು ವಿಕ್ರಮ್ ಮಾತಿಗೆ
ಸಡನ್ನಾಗಿ ಕೇಳಿದರೆ ಹೇಗೆ ವಿಕ್ರಮ್ ನಾನಿನ್ನೂ ಡಿಸೈಡ್ ಮಾಡಿಲ್ಲವೆಂದು ಆಶಾ ನುಡಿಯುತ್ತಾಳೆ.
ಆಯ್ತು ಎರಡು ದಿನ ಟೈಂ ತೆಗೆದುಕೊಂಡು ನಿಧಾನವಾಗಿಯೇ ಹೇಳು ಆಶಾ ಎಂದು ವಿಕ್ರಮ್ ಹೇಳಿದಾಗ
ನನ್ನ ಟಾರ್ಗೆಟ್‌ ಈಡೇರಲು ನೀನು ಸಹಕರಿಸುತ್ತೀಯಾ‌ ಎಂದು ಆಶಾ ಪ್ರಶ್ನಿಸಲು
ನಿನ್ನ ಟಾರ್ಗೆಟ್ ಏನೆಂದು ನನಗೆ ತಿಳಿಸಿದರೆ ನಾನೂ ಸಹಾಯ ಮಾಡಲು ಪ್ರಯತ್ನಿಸಬಹುದೆಂಬ ವಿಕ್ರಮ್ ಮಾತಿಗೆ
ನಮ್ಮಣ್ಣ ನನಗೆ ಸಿಗಬೇಕು ಅದಕ್ಕೆ ಸಹಕರಿಸುತ್ತೀಯಾ ಎಂದು ಆಶಾ ದೈನ್ಯತೆಯಿಂದ ಕೇಳಲು
ವಿಕ್ರಮ್ ಆಶಾ‌ ಕೈಮೇಲೆ ಕೈಯ್ಯಿಟ್ಟು ಪ್ರಾಮೀಸ್ ನಿಮ್ಮಣ್ಣನನ್ನು ಹುಡುಕಲು ನಿನ್ನ ಬೆಂಬಲವಾಗಿ ನಿಂತು ನಿಮ್ಮಣ್ಣ ಎಲ್ಲಿದ್ದರೂ ಕರೆದುಕೊಂಡು ಬರುತ್ತೇನೆ ಎಂದಾಗ
ತುಂಬಾ ಥ್ಯಾಂಕ್ಸ್ ವಿಕ್ರಮ್ ಎನ್ನುತ್ತಾಳೆ
ನನ್ನ ಪ್ರೀತಿಗೆ ನಿನ್ಮ ಡಿಸಿಷನ್ ಏನೆಂದು ಹೇಳಲೇ ಇಲ್ಲವೆಂದು ವಿಕ್ರಮ್ ಮಾತಿಗೆ
ಐ ಲವ್ ಯೂ ಟೂ ಎಂದ‌ ತಕ್ಷಣ ವಿಕ್ರಮ್ ಆಶಾಳನ್ನು ತನ್ನ ಕೈಯ್ಯಿಂದ ಮೇಲೆಕ್ಕೆತ್ತಿಕೊಂಡು ತಿರುಗುವಂತೆ ಭಾಸವಾಗಿ ಅದೇರೀತಿ ಕನಸು ಕಾಣುತ್ತಾ. ಒಂದು ನಿಮಿಷದ ನಂತರ ಕಣ್ಣು ಬಿಟ್ಟು ತೂರಾಡುತ್ತಾ ನಿಂತಾಗ
ಏಯ್ ವಿಕ್ರಮ್ ಏನಾಯ್ತು? ಏನು ಕನಸು ಕಾಣುತ್ತಿದ್ದೀಯಾ ? ಸಮಾಧಾನ ಮಾಡಿಕೋ ಎಂದು ಆಶಾ ಹೇಳಲು
ವಿಕ್ರಮ್ ಗೆ ನಾಚಿಕೆಯಾದಂತಾಗಿ ಸೋ‌ ಸಾರಿ ಆಶಾ ನಿನ್ನ ಮಾತಿಗೆ ಸಂತೋಷದಿಂದ ನನಗೆ ಭೂಮಿಯೇ ತಿರುಗುವಂತಾಯಿತು ಎನ್ನುತ್ತಾನೆ
ಈಗಲೇ ಅಷ್ಟೊಂದು ಕನಸು ಕಾಣಬೇಡಾ ವಿಕ್ರಮ್ ಮೊದಲು ನಮ್ಮಣ್ಣ ಸಿಗಲಿ ಸದ್ಯಕ್ಕೆ ಈಗ ಮನೆಗೆ ಹೋಗೋಣವೆಂದು ಆಶಾ‌ ಹೇಳಿದಾಗ
ನೋಡು ನೋಡು ಈ ಮಾತು ಹೇಳಿ ನನಗೆ ಪುನಃ ನಿರಾಸೆ ಮಾಡಬೇಡಾ ಆಶಾ ಎಂಬ ವಿಕ್ರಮ್ ನ ಮಾತಿಗೆ
ಆಶ ಮಾತನಾಡಿ,ಓಕೆ ಓಕೆ ನಾನು ನಿನಗೆ ಮನಸ್ಸು ಕೊಟ್ಟಿದ್ದೇನೆ ಅದರಂತೆ ನಡೆಯುತ್ತೇನೆ ಎನ್ನುತ್ತಾಳೆ
ತುಂಬಾ ಥ್ಯಾಂಕ್ಸ್ ಆಶಾ ಎನ್ನುತ್ತಾ, ಈಗ ನಿನ್ನನ್ನು ಬೈಕಿನಲ್ಲಿ ಮನೆಯವರೆಗೂ ಬಿಡ್ಲಾ ಎಂದು ವಿಕ್ರಮ್ ಕೇಳಲು
ಬೇಡಾ ನಾನು ಆಟೋದಲ್ಲಿ ಬಂದೆ ಆಟೋದಲ್ಲಿಯೇ ಹೋಗುತ್ತೇನೆಂದು ಆಶಾ ಹೇಳಿ, ಬರುತ್ತಿದ್ದ ಆಟೋಗೆ ಕೈ ಹಿಡಿದಾಗ
ಆ ಆಟೋ ನಿಲ್ಲಿಸದೆ ಹೋಗುತ್ತದೆ.
ವಿಕ್ರಮ್ ಮಾತನಾಡಿ, ನೀನು ನಿನ್ನ ಸೋಸಿಯಲ್ ಮೀಡಿಯಾ ಗ್ರೂಪಿನಲ್ಲಿ ನಿನ್ನಣ್ಣನ ವಿಚಾರವನ್ನು ಪ್ರಕಟಿಸುವುದನ್ನು ಮರೆಯಬೇಡವೆಂದು ಹೇಳಿದಾಗ
ಮನೆಗೆ ಹೋಗಿ ಯಾವ ರೀತಿ ಕಳುಹಿಸಬೇಕೆಂದು ಹೇಳು ನಂತರ ಡಿಸೈಡ್ ಮಾಡೋಣ ಎನ್ನುತ್ತಾ ಆಶಾ ಅಲ್ಲೇ ಬರುತ್ತಿದ್ದ ಆಟೋ ನಿಲ್ಲಿಸಿ ಹತ್ತಿ ಮನೆಗೆ ಬರುತ್ತಾಳೆ.

ಆಶಾ ಮನೆಗೆ ಬಂದ ತಕ್ಷಣ, ಮಗಳ ಬರುವನ್ನೇ ಎದುರು ನೋಡುತ್ತಿದ್ದ ಅವಳಪ್ಪನು ಮಾತನಾಡಿ,
ಹೋದ ಕೆಲಸ‌ ಏನಾಯಿತು? ಕಂಪ್ಲೇಂಟ್ ಜೊತೆಗೆ ನಿಮ್ಮಣ್ಣನ ಫೋಟೋ ಕೊಟ್ಟು ಬಂದೆಯಾ ಎಂದು ಪ್ರಶ್ನಿಸಿದಾಗ
ಸ್ಟೇಷನ್ ನಲ್ಲಿ‌ ಇನ್ಸ್‌ಪೆಕ್ಟರ್ ರವರು ನೀಡಿದ ಸಲಹೆಯನ್ನು ಆಶಾ ಅವಳಪ್ಪನಿಗೆ ತಿಳಿಸಿದಾಗ
ಇದೆಲ್ಲಾ ಆಗುವುದಿಲ್ಲವೆಂದು ನಾನು ಹೇಳಲಿಲ್ಲವಾ ಮಗಳೇ? ನೀನು ತೆಗೆದಿರುವ ಫೋಟೋವನ್ನು ಅಧಿಕೃತವಾಗಿ ಇವರೇ ರಘುವೀರ ಸಮರ್ಥ ಎಂದು ಯಾರೂ ಹೇಳುವುದಿಲ್ಲಮ್ಮಾ, ನಿಮ್ಮ ಸಮಾಧಾನಕ್ಕೆ ಇಟ್ಟುಕೊಳ್ಳಬಹುದಷ್ಚೇ, ಎಂದು ಅವಳ‌ ತಂದೆ ಪುನಃ ಹೇಳಿದಾಗ
ಈಗ ನಾನು ಎಲ್ಲಾ ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುತ್ತೇನೆ. ಅನುಕೂಲವಾದರೂ ಆಗಬಹುದೆಂದು ಹೇಳಿ ಫ್ರೆಶ್ ಅಪ್ ಆಗಿ ಊಟ‌ ಹಾಕಮ್ಮಾ ತುಂಬಾ ಹಸಿವಾಗುತ್ತಿದೆಯೆಂದು ಹೇಳಿ ಮೇಜಿನ ಮುಂದೆ ಕುಳಿತುಕೊಳ್ಳುತ್ತಾಳೆ
ಆ ವೇಳೆಗೆ ನಾನೇನು ಪಾಪ ಮಾಡಿದ್ದೀನಿ ನನಗೂ ತಟ್ಟೆ ಹಾಕಿದರೆ ಊಟ ಮಾಡಲ್ಲಾ ಎನ್ನುತ್ತೇನಾ ಎಂಬ ಅವಳಪ್ಪನ ಮಾತಿಗೆ,
ಸಾರೀ ಕಣಪ್ಪಾ, ಮೂರುಗಂಟೆಯಾಗಿತ್ತಲ್ಲಾ ಊಟ ಮಾಡಿದ್ದೀಯಾ ಎಂದು ತಿಳಿದು ನಾನೊಬ್ಬಳೇ ಊಟಕ್ಕೆ ಕುಳಿತೆ ಎನ್ನುತ್ತಾ , ಅವಳಪ್ಪನಿಗೂ ತಟ್ಚೆ ಹಾಕಿದಾಗ
ಅವಳಮ್ಮ ಅಪ್ಪ ಮಗಳು ಇಬ್ಬರಿಗೂ ಊಟ ಬಡಿಸಿದ ನಂತರ
ಆಶಾ ತನ್ನಣ್ಣನನ್ನು ಹೇಗೆ ಹುಡುಕುವುದೆಂದು ಚಿಂತಿಸುತ್ತಾ ಒಂದು ತುತ್ತು ಬಾಯಲ್ಲಿ ಇಟ್ಟುಕೊಳ್ಳುವುದು ಅದಾದ ಸ್ವಲ್ಪ ಹೊತ್ತಿನ ನಂತರ ಇನ್ನೊಂದು ತುತ್ತನ್ನು ಬಾಯಿಗಿಟ್ಟುಕೊಂಡು ನಿಧಾನವಾಗಿ ಊಟ ಮಾಡುತ್ತಿರುವಾಗ
ಇದೇನೇ ತುಂಬಾ ಹಸಿವು ಎಂದೆ ಈಗ ನೀನು ಊಟ ಮಾಡುವುದನ್ನು ನೋಡಿದರೆ ನಿನಗೆ ಹಸಿವೇ ಇಲ್ಲದಂತಿಲ್ಲ ಎಂಬ ಅವರಮ್ಮನ ಮಾತಿಗೆ
ಹೌದಮ್ಮಾ ಅಣ್ಣನ ವಿಚಾರ ಹೇಳಿದಾಗಿನಿಂದ ನನಗೆ‌ ತುಂಬಾ ಹಸಿವಾದರೂ ಊಟ ಮಾಡಲು ಮನಸ್ಸೇ ಬರುತ್ತಿಲ್ಲಮ್ಮಾ ಎಂದು ಆಶಾ ವಿಷಾದಿಸುತ್ತಾ ನುಡಿದಾಗ
ನಮಗೂ ಹಾಗೆ ಎನಿಸುತ್ತದೆ ಕಣಮ್ಮಾ, ಏನು ಮಾಡುವುದು? ಇರುವ ನೀನೊಬ್ಬಳಾದರೂ ಚೆನ್ನಾಗಿರಲೆಂದು ನಮಗೆ ಬೇಸರನಾದರೂ ಭಂಡತನದಿಂದ ತಿಂದು ಬದುಕಿದ್ದೇವೆಂದು ಅವರಮ್ಮನು ಗದ್ಗದಿತರಾಗಲು
ಅಮ್ಮಾ ಇಷ್ಟು ದಿನ ನನ್ನಣ್ಣನ ವಿಷಯ ಹೇಳದೆ ಬಹಳ ತಪ್ಪು ಮಾಡಿದ್ರೀ. ಮೊದಲೇ ಹೇಳಿದ್ದರೆ ಈ ವೇಳೆಗೆ ನಿಮ್ಮ ಮಗನನ್ನು ಹುಡುಕಿರುತ್ತಿದ್ದೆ ಎಂದು ಆಶಾ ನುಡಿದಾಗ
ಈಗಲೂ ಪ್ರಯತ್ನಿಸು ಮಗಳೇ ನಾವು ನಿನ್ನ ಸಪೋರ್ಟ್ ಗೆ ಇರುತ್ತೇವೆಂಬ ಅವಳಪ್ಪನ ಮಾತಿಗೆ
ನೀವೆಲ್ಲಾ ನನ್ನ ಸಪೋರ್ಟ್ ಗೆ ಇದ್ದೀರಾ ಎಂದರೆ ಹಂಡ್ರೆಡ್ ಪರ್ಸಂಟ್ ನಮ್ಮಣ್ಣ ಸಿಕ್ಕೇಸಿಕ್ಕುತ್ತಾನೆ ಎನ್ನುತ್ತಾ ಆಶಾ ಕೈ ತೊಳೆಯಲು ಹೋಗುತ್ತಾಳೆ

ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ವಿಕ್ರಮ್ ಫೋನ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅವಳಣ್ಣನ ವಿಚಾರವನ್ನು ಯಾವ ರೀತಿ ಪ್ರಕಟಿಸಬೇಕೆಂಬುದನ್ನು ಟೈಪ್ ಮಾಡಿ ಆಶಾಗೆ ಕಳುಹಿಸಿದಾಗ
ಆಶಾ ಅದನ್ನು ನೋಡಿ ತುಂಬಾ ಚೆನ್ನಾಗಿದೆ ಎನ್ನುತ್ತಾಳೆ.

  • ಈ ಸಂಚಿಕೆಯಲ್ಲಿ ತಿಳಿದುಬರುವ ಮುಖ್ಯವಾದ ಅಂಶವೇನೆಂದರೆ

ಸ್ನೇಹವನ್ನು ತಮ್ಮ ಸ್ವಾರ್ಥದ ಅಭಿಲಾಷೆಯನ್ನು ಈಡೇರಿಸಿಕೊಳ್ಳಲು ಹೋಗಬಾರದು. ತಮಗೆ ಇಷ್ಟವಿದೆಯೆಂದು ಬೇರೆಯವರೂ ಮೆಚ್ಚಲೇಬೇಕೆಂಬ ನಿಯಮವಿಲ್ಲ. ತಮ್ಮ ಅಭಿಲಾಷೆ ಯನ್ನು, ಯಾರಿಗಾದರೂ ಹೇಳಬೇಕಾದರೆ ಅವರ ಮಾತುಗಳನ್ನು ಕೇಳಬೇಕು. ಹಾಗೆಯೇ ಅವರು ಹೇಳುವ ನಿಯಮಗಳನ್ನು ಪಾಲಿಸಬೇಕು. ತಮ್ಮ ಮಾತು ಕೇಳಿದರೆ ಮಾತ್ರ ಅವರು ಒಳ್ಳೆಯವರೆಂದು ಬಿಂಬಿಸಿ ಆಕಾಶಕ್ಕೆ ಏರಿಸುವುದು, ಅಕಸ್ಮಾತ್ ಒಪ್ಪದಿದ್ದರೆ ಅವರನ್ನು ನಿಷ್ಠೂರ ಮಾಡಿ ಹಗೆ ಸಾಧಿಸುವುದು ಸಲ್ಲ.
ಒಡಹುಟ್ಟಿದವರೇನಾದರೂ ಮೃತರಾಗಿ ನೆನಪಾದರೆ ಊಟ ಮಾಡುತ್ತಿದ್ದರೂ ರುಚಿಸುವುದಿಲ್ಲ.ಆಯಸ್ಸು ಮುಗಿದಾಗ‌ ನಾವೂ ಹೋಗಲೇಬೇಕೆಂಬ ಕಹಿಸತ್ಯವನ್ನು ತಿಳಿದು ಅಯ್ಯೋ ನಾವು ಹೋಗುತ್ತೇವಾ ಎಂಬುದು ಮನಸ್ಸಿಗೆ ಬಂದಾಗ ಒಂದು ಕ್ಷಣ ನಿರಾಸೆಯ ಜೊತೆ ಒಂದು ರೀತಿಯ ಭಯವೂ ಮೂಡುತ್ತದೆ. ಆದರೆ ನೆಮ್ಮದಿಯ ಜೀವನ ಸಾಗಿಸುತ್ತಾ ಎಷ್ಚೇ ವಯಸ್ಸಾಗಿದ್ದರೂ ಚೆನ್ನಾಗಿ ಓಡಾಡಿಕೊಂಡಿದ್ದರೆ ಮಾತ್ರ ಇನ್ನೂ ಬದುಕಿರಬೇಕೆಂಬ ಆಸೆ ಮನದಲ್ಲಿರುತ್ತದೆ. ವಯಸ್ಸಾದಂತೆ ನಡೆಯಲಾಗದೆ ಬೇರೆಯವರ ಆಶ್ರಯ ಪಡೆಯಬೇಕಾದರೆ ಮಾತ್ರ ದೇವರೇ ಈ ಜನ್ಮ ಸಾಕಪ್ಪಾ ನನ್ನನ್ನು ಬೇಗ ಕರೆದುಕೋ ಎಂದು ಹಲಬುವವರು ಸಾಕಷ್ಟು ಮಂದಿ ಇರಬಹುದು.

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ -07

ಹಿಂದಿನ ಸಂಚಿಕೆಯಲ್ಲಿ

ಸಾಮಾಜಿಕ ಜಾಲತಾಣದಲ್ಲಿ ಆಶಾಳ‌ ಅಣ್ಣನ ಬಗ್ಗೆ ಪ್ರಕಟಿಸಲು, ಡ್ರಾಫ್ಟ್ ರೆಡಿ ಮಾಡಿ ವಿಕ್ರಮ್ ಆಶಾಳಿಗೆ ಕಳುಹಿಸಿದಾಗ
ಬಹಳ ಚೆನ್ನಾಗಿದೆ ಎನ್ನುತ್ತಾಳೆ.

  • ಕಥೆಯನ್ನು ಮುಂದುವರೆಸುತ್ತಾ

ವಿಕ್ರಮ್ ಕಳುಹಿಸಿದ ಡ್ರಾಫ್ಟ್ ನೋಡಿದ ಆಶಾ ಇದನ್ನೇ ಪ್ರಕಟಿಸೋಣವೆಂದು ಮೆಸೇಜ್ ಮಾಡಿದಾಗ‌
ವಿಕ್ರಮ್ ಓ ಕೆ ಎನ್ನುತ್ತಾನೆ.
ಆಶಾ ಗಡಿಯಾರ ನೋಡಿದಾಗ ಹತ್ತೂವರೆಯಾಗಿದ್ದರಿಂದ ಬೆಳಿಗ್ಗೆ ಕಳುಹಿಸೋಣವೆಂದು ಸುಮ್ಮನಾಗುತ್ತಾಳೆ.
ಮಾರನೇ ದಿನ ಬೆಳಿಗ್ಗೆ ಆಶಾಳ ಅಪ್ಪನು ಕಾಫಿ ಕುಡಿಯುತ್ತಿರುವಾಗ
ಆಶಾಳು ತಾನೂ ಕೂಡಾ ಕಾಫಿಯ ಲೋಟವನ್ನು ತೆಗೆದುಕೊಂಡು ಅಪ್ಪನ ಎದುರಿಗೆ ಕುಳಿತು, ತಾನು ಅಣ್ಣನ ಬಗ್ಗೆ ಸೋಸಿಯಲ್‌ ಮೀಡಿಯಾದಲ್ಲಿ ಪ್ರಕಟಿಸುವುದನ್ನು ಅವಳಪ್ಪನಿಗೆ ತೋರಿಸಿದಾಗ
ಅವಳಪ್ಪನು ಆಶಾಳಿಂದ ಮೊಬೈಲ್ ಪಡೆದು ಓದುತ್ತಾ
ಕಾಣೆಯಾಗಿರುವವರು ಸಮರ್ಥ ಉರುಫ್ ರಘುವೀರ್ ಅಲ್ಲಮ್ಮಾ‌ ರಘುವೀರ್ ಉರುಫ್ ಸಮರ್ಥ್ ಎಂದು ಬದಲಾಯಿಸಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಕಾಣೆಯಾಗಿದ್ದಾರೆ, ಈಗ‌ ಇವರು ಫೋಟೋದಲ್ಲಿ ತೋರಿಸಿರುವಂತೆ ಇರಬಹುದೆಂದು ಹೇಳು. ಇವರದ್ದೇ ಈಗಿನ ಫೋಟೋ ಎಂದು ಹೇಳಲು ಬರುವುದಿಲ್ಲವೆಂದಾಗ
ತನ್ನಪ್ಪನು ಹೇಳಿದಂತೆ ಆಶಾಳು ಮಾಹಿತಿಯನ್ನು ಸರಿಪಡಿಸಿದ ನಂತರ. ಈಗ ಕಳುಹಿಸಲಾ ಅಪ್ಪಾ ಎಂದು ಕೇಳಲು
ಓಕೆ ಮಗಳೇ ಈ ವಿಚಾರ‌ ನಿಮ್ಮಣ್ಣ ಎಲ್ಲಿದ್ದರೂ ಅವನಿಗೆ ತಲುಪಿ ಆದಷ್ಟೂ ಬೇಗ ನಮ್ಣ ಮನೆಗೆ ಬರುವಂತಾಗಲಿ ಎನ್ನುತ್ತಾರೆ.
ಈ ಮಾಹಿತಿಯನ್ನು ವಿಕ್ರಮ್ ಗೆ ಕಳುಹಿಸಿ ಇದನ್ನು ನೀನು ಸದಸ್ಯನಾಗಿರುವ ಸೋಸಿಯಲ್ ಮೀಡಿಯಾ ದಲ್ಲಿ ಪ್ರಕಟಿಸು, ನಾನೂ ಕೂಡಾ ಪ್ರಕಟಿಸುತ್ತೇನೆಂದು ಹೇಳಿದ ನಂತರ ಆಶಾ ಸಹ ಸೋಸಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಾಳೆ
ಸೋಸಿಯಲ್ ಮೀಡಿಯಾಗಳಲ್ಲಿ ಪ್ರಕಟಿಸಿದ ಸ್ವಲ್ಪ‌ ಹೊತ್ತಿನ ನಂತರ
ಆಶಾಳ ಮೊಬೈಲ್‌‌ ರಿಂಗ್ ಆದಾಗ, ಮನಸ್ಸಿನಲ್ಲಿ ಅಣ್ಣನ ಬಗ್ಗೆ ಮಾಹಿತಿ ಬಂದಿರಬೇಕೆಂದು ನೋಡಿದಾಗ
ಮೊಬೈಲಿನಲ್ಲಿ ಆಶಾಳ‌ ಸ್ನೇಹಿತಳ ಹೆಸರು ಇದ್ದುದ್ದರಿಂದ, ಹಲೋ‌ ಎಂದಾಗ
ಆ ಕಡೆಯಿಂದ ಆಶಾ ನಿನಗೊಬ್ಬ ಅಣ್ಣ ಇದ್ದಾನೆಂಬ ವಿಚಾರವನ್ನು ಹೇಳಿರಲೇ ಇಲ್ಲವಲ್ಲೇ. ನಿಮ್ಮಣ್ಣ ನೋಡಲು ಹೀರೋವಿನಂತೆ ಇದ್ದಾರೆ ಎಂದು ಹೇಳಿ ನಿಮ್ಮಣ್ಣ ಯಾವಾಗನಿಂದ ಕಾಣೆಯಾಗಿದ್ದಾರೆಂದು ಪ್ರಶ್ನಿಸಿದಾಗ
ಸುಮಾರು ಇಪ್ಪತ್ತೈದು ವರ್ಷಗಳಾಯ್ತು, ಇಲ್ಲಿವರೆಗೂ ಬಂದಿಲ್ಲ‌ ಎಂಬ ಆಶಾಳ ಮಾತಿಗೆ
ಅಯ್ಯೋ‌ ಇಪ್ಪತ್ತೈದು ವರ್ಷಗಳಿಂದ ಕಾಣೆಯಾಗಿದ್ದಾರಾ ಎಂದು ಆಶ್ಚರ್ಯದಿಂದ ಕೇಳಿ, ಇಪ್ಪತ್ತೈದು ವರ್ಷಗಳಿಂದ ಸುಮ್ಮನಿದ್ದು ಈಗ ಹುಡುಕಲು ಹೋಗಿದ್ದೀಯಲ್ಲಾ ನಿನಗೆ ಬುದ್ದಿ ಇದೆಯಾ ? ಎಂದು ಪ್ರಶ್ನಿಸಿದಾಗ
ನನಗೆ ಇಲ್ಲಿವರೆಗೂ ತಿಳಿದಿರಲಿಲ್ಲ, ಮೊನ್ನೆಯೇ ತಿಳಿದಿದ್ದು ಅದಕ್ಕೆ ಹುಡುಕುತ್ತಿದ್ದೇನೆ ಎಂದು ಆಶಾ ಹೇಳಲು
ಇಷ್ಟು ವರ್ಷಗಳ ನಂತರ ನಿಮ್ಮಣ್ಣ ಸಿಗುತ್ತಾರೆಂಬ ನಂಬಿಕೆ ನನಗಂತೂ ಇಲ್ಲವೆಂದಾಗ
ಆಶಾಳಿಗೆ ಕೋಪ ಬಂದು ನಿನ್ನನ್ನು ಹುಡುಕಿಕೊಡುವಂತೆ ಕೇಳಿದ್ದೀನಾ ಎಂದು ಪ್ರಶ್ನಿಸಲು
ನಾನೂ ಕೂಡಾ ನನ್ನ ಸೋಸಿಯಲ್ ಮೀಡಿಯಾ ಗ್ರೂಪ್‌ಗಳಲ್ಲಿ ಪ್ರಕಚಿಸೋಣವೆಂದುಕೊಂಡಿದ್ದೆ. ಆದರೆ ಇಪ್ಪತ್ತೈದು ವರ್ಷಗಳ‌ ಹಳೆಯ ನ್ಯೂಸ್ ಹಾಕಿದರೆ ಜನಗಳು ನನಗೇ ಛೀಮಾರಿ ಹಾಕಬಹುದೆಂದು ಸುಮ್ಮನಾದೆ ಎಂದಾಗ
ಪ್ಲೀಸ್ ಫೋನ್ ಕಟ್ ಮಾಡೆಂದು ಆಶಾ ಅವಳ‌ ಸ್ನೇಹಿತಳಿಗೆ ಹೇಳಿ, ಅವಳ‌ ಉತ್ತರಕ್ಕೂ ಕಾಯದೆ ತಾನೇ ಫೋನ್ ಕಟ್ ಮಾಡುತ್ತಾಳೆ.
ಇದೇರೀತಿ ಹಲವಾರು ಸ್ನೇಹಿತರು ಫೋನ್ ಮಾಡಿ ಪಶ್ಚಾತ್ತಾಪ ಪಟ್ಟು ತಮ್ಮ ಸೋಸಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತೇವೆಂದರೆ, ಇನ್ನೂ ಕೆಲವರು ಇದರಿಂದ ಟೈಮ್ ವೇಸ್ಟ್ ಎಂದು ಹೇಳಿ ಹೀಗಳೆಯ್ಯುತ್ತಿರುವುದನ್ನು ಹಾಗೂ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿರುವುದನ್ನು ಕಂಡ ಆಶಾಳಿಗೆ ಇನ್ನು ಯಾರು ಫೋನ್ ಮಾಡಿದರೂ ರಿಸೀವ್ ಮಾಡಲೇಬಾರದೆಂದೆನಿಸಿರುತ್ತದೆ.

ಎರಡು ದಿನಗಳ ನಂತರ ಯಾರೋ ಫೋನ್ ಮಾಡಿ ನಾವು ಹೈದರಾಬಾದ್ ನಿಂದ ಮಾತನಾಡುತ್ತಿದ್ದೇವೆ. ನೀವು ಕಳುಹಿಸಿರುವ ಮೆಸೇಜ್ ಓದಲು ಕನ್ಮಡ ನಮಗೆ ಬರುವುದಿಲ್ಲ. ಇಂಗ್ಲೀಷ್ ಅಥವಾ‌ ತೆಲುಗಿನಲ್ಲಿ ಮೆಸೇಜ್ ಕಳುಹಿಸಿರೆಂದು ಹೇಳಿದಾಗ
ಓಕೆ ಎಂದು ಹೇಳಿ ಆಶಾ ಪುನಃ ಕನ್ನಡದಲ್ಲಿದ್ದ ಮೆಸೇಜನ್ನು ಇಂಗ್ಲೀಷ್ ಹಾಗೂ ಹಿಂದಿಗೆ ತರ್ಜುಮೆ ಮಾಡಿ ಪುನಃ ಪ್ರಕಟಿಸುತ್ತಾಳೆ.

ಸೋಸಿಯಲ್ ಮೀಡಿಯಾದಲ್ಲಿ ತನ್ನಣ್ಣ ಕಾಣೆಯಾಗಿದ್ದಾನೆಂದು ಪ್ರಕಟಿಸಿ ಹಲವಾರು ವಾರಗಳಾಗಿದ್ದರೂ ಅಣ್ಣನ ಇರುವಿಕೆಯ ಸುಳುಹಿನ ಬಗ್ಗೆ ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಬರದೇ ಇದ್ದುದ್ದರಿಂದ ಸಹಜವಾಗಿಯೇ ಆಶಾ ನಿರಾಶೆಗೊಂಡು, ತನ್ನಪ್ಪನು ಈ ವಿಚಾರ‌ ಮೊದಲೇ ಹೇಳಿದ್ದರೆ ಹುಡುಕಲು ಅನುಕೂಲವಾಗಿರುತ್ತಿತ್ತೆಂದು ತನ್ನಪ್ಪನ ಮೇಲೆ ಬೇಸರಗೊಂಡಿದ್ದು,
ರಾತ್ತಿ ಅಪ್ಪ ಮಗಳು ಊಟ‌ ಮಾಡುತ್ತಿರುವಾಗ, ಆಶಾ ಮಾತನಾಡಿ, ಅಪ್ಪಾ ಅಣ್ಣ ಕಾಣೆಯಾಗಿದ್ದಾನೆಂದು ಪೇಪರ್ ನಲ್ಲಿ ಅಡ್ವರ್ಟೈಸ್ ಕೊಟ್ಟಿದ್ದೆಯಾ ಎಂದು ಕೇಳಲು
ಇಲ್ಲಮ್ಮಾ ಎಂದ ತಕ್ಷಣ, ಆಶಾಳಿಗೆ ಕೋಪ ಬಂದು, ಅಪ್ಪಾ ಪೇಪರ್ ಗೆ ಜಾಹೀರಾತು ಕೊಡುವ ವಿಚಾರದಲ್ಲಿ ಏಕೆ ಉದಾಸೀನ ಮಾಡಿದೆ ಎಂದು ಆಶಾ ಪ್ರಶ್ನಿಸಲು
ಪೋಲೀಸ್ ರವರೇ ಪೇಪರಿನಲ್ಲಿ ನ್ಯೂಸ್ ಹಾಕಿಸಿದ್ದರು ಆದರೆ ನಿನ್ನಣ್ಣನ ಫೋಟೋ‌ ಹಾಕಿಸಿರಲಿಲ್ಲವೆಂದಾಗ
ಅಂದೇ ಫೋಟೋ ಸಮೇತ ಹಾಕಿಸಿದ್ದರೆ ನಮ್ಮಣ್ಣ ಸಿಕ್ಕುತ್ತಿದ್ದನೇನೋ ನೀನೇ ತಪ್ಪು ಮಾಡಿ ಈಗ ದುಃಖ ಪಡುತ್ತಿದ್ದೀಯಾ ಎಂಬ ಆಶಾಳ ಮಾತಿಗೆ,
ಹೌದಮ್ಮಾ ನಾನು ಅಂದು ತಪ್ಪು ಮಾಡಿದೆ ನಿಮ್ಮಣ್ಣನ ಫೋಟೋ ಪೇಪರಿನಲ್ಲಿ ಹಾಕಿಸಬೇಕಿತ್ತು, ನನಗೆ ಹೊಳೆಯಲೇ ಇಲ್ಲವೆಂದು ಅವಳಪ್ಪ ಪಶ್ಚಾತ್ತಾಪ ಪಡುತ್ತಾರೆ.
ಅಪ್ಪಾ ಈಗ ಪಶ್ಚಾತ್ತಾಪ ಪಟ್ಟು ಏನೂ ಪ್ರಯೋಜನವಿಲ್ಲಪ್ಪಾ ಎಂದು ಹೇಳಿದ ಆಶಾ ಮಾತಿಗೆ
ಮಗಳೇ ತಲೆ ಕೆಡಿಸಿಕೊಳ್ಳಬೇಡಾ ನಿಮ್ಮಣ್ಣನನ್ನು ಹುಡುಕುವುದನ್ನು ಬಿಟ್ಟು ಬಿಡಮ್ಮಾ ನೀನೊಬ್ಬಳೇ ಮಗಳೆಂದು ತಿಳಿದು ಈ ಜೀವ ಇರುವವರೆಗೂ ಸುಮ್ಮನಾಗುತ್ತೇವೆಂದು ಅವಳಪ್ಪ ಹೇಳಿದಾಗ
ನೀನು ಅಣ್ಣನ ವಿಚಾರ ಹೇಳದೇ ಇದ್ದಿದ್ದರೆ ನಾನು ಇಲ್ಲಿಯವರೆಗೆ ಹೇಗಿದ್ದೆನೋ ಹಾಗೇ ಇರುತ್ತಿದ್ದೆ.‌ ನನ್ನ ಮನಸ್ಸಿನಲ್ಲಿ ಅಣ್ಣನಿದ್ದನೆಂಬ ಆಸೆಯನ್ನು ಚಿಗುರೊಡೆಸಿದ್ದೀಯಾ, ಈಗ ಸುಮ್ಮನಿರಲು ಆಗುತ್ತದಾ‌ ಅಪ್ಪಾ? ಅಣ್ಣನ ಬಗ್ಗೆ ಕಡೇವರೆಗೂ ಹುಡುಕುತ್ತಲೇ ಇರುತ್ತೇನೆ. ಎಲ್ಲಿದ್ದರೂ ಒಂದು ದಿನ ಸಲ ಸಿಗಲೇಬೇಕೆಂದು ಆಶಾಳ ಮಾತಿಗೆ,
ನಿನ್ನ ಪ್ಪಯತ್ನಕ್ಕೆ ಯಶಸ್ಲು ಸಿಗಲಿ ಮಗಳೇ ನಾನೂ ಕೂಡಾ‌ ಇಂದಿನಿಂದ ಪುನಃ ನನ್ನ ಮಗನ ಬಗ್ಗೆ ಎಲ್ಲರಿಗೂ ಹೇಳುತ್ತೇನೆ. ಎಲ್ಲಿದ್ದರೂ ನಿಮ್ಮಣ್ಣ ಬರಲೇಬೇಕೆಂದು ಅವಳಪ್ಪ ಹೇಳುತ್ತಾರೆ.
ಒಂದೆರಡು ದಿನಗಳ ನಂತರ ತೆಲುಗಿನಲ್ಲಿ ಮಾತನಾಡಿದ್ದವರು ಪುನಃ ಮಾತನಾಡಿ, ನೀವು ನಿಮ್ಮಣ್ಣನು ಮಿಸ್ಸಿಂಗ್ ಬಗ್ಗೆ ಹೇಳಿದ್ದೀರಿ, ಆದರೆ ಈ ಟೌನ್ ಪೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನೀವು ಕಳುಹಿಸಿರುವ ಫೋಟೋ ರೀತಿ ಇರುವವರು ಮೃತನಾಗಿದ್ದಾನೆಂದು ಒಂದು ವರ್ಷದ ಹಿಂದೆಯೇ ಅನೌನ್ಸ್ ಮಾಡಿದ್ದರು. ಯಾರೂ ಬರದೇ ಇದ್ದದ್ದಕ್ಕೆ ಪೋಲೀಸ್ ರವರೇ ಕ್ರಿಮೇಷನ್ ಮಾಡಿದರು ಎಂದ ತಕ್ಷಣ
ಆಶಾ‌ ಜೋರಾಗಿ ನೋ ಎನ್ನುತ್ತಾಳೆ. ಮಗಳು ಜೋರಾಗಿ ನೋ ಎಂದು ಕೂಗಿದ್ದ ಕಂಡ ಅವಳಪ್ಪನು ಮಗಳೇ ಆಶಾ,,,,, ಯಾಕಮ್ಮಾ ಕೂಗಿದೆ? ಏನಾಯಿತಮ್ಮಾ ಎಂದು ಕೇಳಿದಾಗ
ಆಶಾ ಏನೂ ಮಾತನಾಡದೆ ಅಪ್ಪನ ಕೈಗೆ ಮೊಬೈಲ್ ಕೊಟ್ಟಾಗ
ಅವಳಪ್ಪನು ಹಲೋ ಹಲೋ ಎನ್ನಲು
ಆ ಕಡೆಯಿಂದ ಮಾತನಾಡಿದವರು ಅದೇ ವಿಚಾರವನ್ನು ಆಶಾಳ ಅಪ್ಪನಿಗೆ ಹೇಳಿದಾಗ
ಇದನ್ನು ನಂಬುವುದಕ್ಕೆ ಆಗುತ್ತಿಲ್ಲ. ಕರ್ನಾಟಕದಲ್ಲಿದ್ದವನು ಅಲ್ಲಿಗೇಕೆ ಹೋದ ? ಆ ಯುವಕ‌ ನಮ್ಮವನಲ್ಲವೆಂದು ಹೇಳಿ ಫೋನ್ ಕಟ್ ಮಾಡಿ, ಆಶಾಳ‌ ತಲೆ ನೇವರಿಸುತ್ತಾ, ಈ ವಿಚಾರದಲ್ಲಿ ಇದೆಲ್ಲವೂ ಸಾಮಾನ್ಯ ಕಣಮ್ಮಾ, ಇದಕ್ಕೆಲ್ಲಾ ತಲೆ ಕೆಡಸಿಕೊಳ್ಳಬಾರದು, ನಮ್ಮ ಪ್ರಯತ್ನವನ್ನು ನಾವು ಮುಂದುವರೆಸಬೇಕೆಂದು ಹೇಳಿ ಸಮಾಧಾನ ಮಾಡಿದಾಗ
ಆಶಾ ಅಳುತ್ತಲೇ‌ ಅಪ್ಪಾ ಆದರೂ ಈ ವಿಚಾರ‌ ನಿಜವಾಗಿದ್ದರೆ ಅಣ್ಣನನ್ನು ಹುಡುಕುವುದನ್ನು ಬಿಟ್ಟು ಬಿಡಬೇಕಾ? ಎಂದು ಅಳುತ್ತಾ ಪ್ರಶ್ನಿಸಲು
ಇಷ್ಟು ಬೇಗ ನಿರಾಸೆಯಾಗಬಾರದಮ್ಮಾ ನಿನಗೆ ಫೋನ್ ಮಾಡಿದವರಿಗೆ ಪುನಃ ಫೋನ್ ಮಾಡು ನಾನು ಮಾತನಾಡುತ್ತೇನೆಂದು ಹೇಳಲು
ಆಶಾ ಪುನಃ ಅದೇ ನಂಬರಿಗೆ ಫೋನ್ ಮಾಡಿ ತನ್ನಪ್ಪನಿಗೆ ಕೊಟ್ಚಾಗ
ಅವಳಪ್ಪನು ಮಾತನಾಡಿ ಹಲೋ ಸಾರ್‌ ಎಂದಾಗ
ಆ ಕಡೆಯಿಂದ ಹಲೋ ಎನ್ನಲು
ಆಶಾಳ ಅಪ್ಪ ವಿಷಯ ತಿಳಿಸಿ, ಮೃತನಾದ‌ ಯುವಕನ ಬಗ್ಗೆ ಕೇಳಿ ಆ ಯುವಕ ಯಾವ ಭಾಷೆ ಮಾತನಾಡುತ್ತಿದ್ದನೆಂದು ಕೇಳಲು
ಸಾರ್ ಆ ಯುವಕನಿಗೆ ಯಾವುದೋ ವೆಹಿಕಲ್‌ ಡಿಕ್ಕಿ ಹೊಡೆಯಿತು, ಅವನನ್ನು ಆಸ್ಪತ್ರೆಗೆ ಸೇರಿಸುವದರೊಳಗೆ ಮೃತನಾಗಿದ್ದ, ಅಲ್ಲಿದ್ದವರು ಆ ಯುವಕ ತೆಲುಗಿನಲ್ಲಿ ಮಾತನಾಡುತ್ತಿದ್ದನೆಂದು ಹೇಳಿದ್ದರು, ನಾನು ಅದೇ ಏರಿಯಾ ಪೋಲೀಸ್‌ ಸ್ಟೇಷನ್ ನಲ್ಲಿ ದೆಫೇದಾರನಾಗಿದ್ದೇನೆ. ಆ ಯುವಕನು ನೀವು ಕಳುಹಿಸಿರುವ ಫೋಟೋದಲ್ಲಿರುವಂತೆ ಇದ್ದ ಅದನ್ನು ನೋಡಿ ಹಳೇ ಕಡತ‌ ತೆಗೆದು‌ ನೋಡಿ ಹೇಳಿದೆ ಸಾರೀ ಸಾರ್ ಎನ್ನುತ್ತಾರೆ
ಆಶಾಳ‌ ಅಪ್ಪ ಓಕೆ ಸಾರ್‌ ಎಂದು ಹೇಳಿ ಸದ್ಯ ಮನಸ್ಸಿಗೆ ಈಗ ರಿಲೀಫ್ ಆಯ್ತು. ಆ ಯುವಕ ತೆಲುಗು ಮಾತನಾಡುತ್ತಿದ್ದನಂತೆ. ನನ್ನ ಮಗನು ಮನೆ ಬಿಟ್ಟು ಹೋದಾಗ‌ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲವೆಂದಾಗ
ಅಪ್ಪಾ ಅಲ್ಲಿಗೆ ಹೋಗಿ ಕಲಿತಿರಬಹುದಲ್ಲವಾ ಎಂದು ಆಶಾ ಪ್ರಶ್ನಿಸಿದಾಗ
ಇಲ್ಲಮ್ಮಾ ಆ ರೀತಿ ಆಗಿರುವ ಛಾನ್ಸೇ ಇಲ್ಲಾ, ನೀನು ಕಳಿಹಿಸಿದ್ದ‌ ಫೋಟೋ ರೀತಿ ಇದ್ದನೆಂದು ಹೇಳಿದ್ದಾರೆ. ನೀನು ಕಳುಹಿಸಿರುವುದು ನಿಜವಾದ‌ ಅಣ್ಣನ ಫೋಟೋ‌ ಅಲ್ಲವಲ್ಲಮ್ಮಾ , ಈ ರೀತಿಯ ಫೋಟೋ ಕಳುಹಿಸಿದರೆ ಅಭಾಸವಾಗುತ್ತದೆಂದು ಅದಕ್ಕೇ ಹೇಳಿದ್ದು ಎಂದು ಅವಳಪ್ಪ ನುಡಿಯಲು
ಹಾಗಾದರೆ ಏನು ಮಾಡಬೇಕು ನೀನೇ ಹೇಳಪ್ಪಾ ಎಂದು ಆಶಾ ತನ್ನಪ್ಪನನ್ನೇ ಪ್ರಶ್ನಿಸುತ್ತಾಳೆ.

ಮುಂದುವರೆಯುತ್ತದೆ

ಡಾ. ಎನ್. ಮುರಳೀಧರ್ ವಕೀಲರು ಹಾಗೂ ಸಾಹಿತಿ ನೆಲಮಂಗಲ

ಈ ಸಂಚಿಕೆಯಲ್ಲಿ ತಿಳಿದು ಬರುವ ಅಂಶವೇನೆಂದರೆ

ಯಾವುದಾದರೂ ಕೆಲಸ‌ ಮಾಡಲು ಹೋಗುವಾಗ ಟೀಕೆ ಟಿಪ್ಪಣಿ ಮಾಡುವುದು, ಹಿಂದೆ ಎಳೆಯುವುದು, ಮುಂದೆ ಹೋಗದಂತೆ ತಡೆಯುವುದು ಸರ್ವೇ‌ ಸಾಮಾನ್ಯ. ಆದರೆ ಇದು ಯಾವುದಕ್ಕೂ ಕಿವಿಗೊಡದೆ ನಮ್ಮ ಪ್ರಯತ್ನ ಮುಂದುವರೆಸಿದರೆ ಮಾತ್ರ ಗೆಲ್ಲಬಹುದು.
ಯಾವುದಾದರೂ ಕೆಲಸ ನಿರ್ವಹಿಸುವಾಗ ಪೂರ್ಣಮಾಡಿ ಫಲಿತಾಂಶಕ್ಕಾಗಿ ಕಾಯಬೇಕು. ಕೆಲಸ‌ ಪೂರ್ಣ ಮಾಡದೆ‌ ಯಶಸ್ಸು ಸಿಗಲೆಂದು ಆಶಿಸುವುದು ಬಹಳ ತಪ್ಪಾಗುತ್ತದೆ.

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ -08

ಹಿಂದಿನ ಸಂಚಿಕೆಯಲ್ಲಿ

ಆಶಾಳಿಗೆ ಒಬ್ಬ ವ್ಯಕ್ತಿಯು ಫೋನ್ ಮಾಡಿ,ನೀವು ಕಳುಹಿಸಿರುವ ಫೋಟೋದಲ್ಲಿರುವ ವ್ಯಕ್ತಿ ಒಂದು ವರ್ಷಗಳ ಹಿಂದೆಯೇ ಮೃತಪಟ್ಚಿದ್ದಾರೆಂದು ತೆಲುಗಿನಲ್ಲಿ ಹೇಳಿದ್ದರಿಂದ ಆಶಾ ಕಂಗಾಲಾದಾಗ, ಅವಳಪ್ಪ ಸಮಾಧಾನ ಮಾಡಿರುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಸೋಸಿಯಲ್ ಮೀಡಿಯಾ ಮೂಲಕ‌ ನೀನು ಕಳುಹಿಸಿರುವ ನಿಮ್ಮಣ್ಣನ ಫೋಟೋ‌ ಸರಿ ಇಲ್ಲವೆಂದು ಅವಳಪ್ಪ‌ ನುಡಿದಾಗ
ಇನ್ನೇನು ಮಾಡಬೇಕೆಂದು ಅವಳಪ್ಪನನ್ನೇ ಆಶಾ ಪ್ರಶ್ನಿಸಲು
ನನಗೆ ಎರಡು ದಿನ ಕಾಲಾವಕಾಶ ಕೊಡೆಂದು ಅವಳಪ್ಪನು ಹೇಳಿದಾಗ
ನೀನು ಏನು ಮಾಡುತ್ತೀಯಪ್ಪಾ ಎಂಬ ಮಗಳ‌ ಮಾತಿಗೆ
ಎರಡು ದಿನ ಕಾಲಾವಕಾಶ‌ ಕೊಡೆಂದು ಕೇಳಿರುವಿನಲ್ಲಾ, ನಂತರ ಹೇಳುತ್ತೇನೆಂದು ಅವಳಪ್ಪ ನುಡಿದಾಗ
ಆಗಲಪ್ಪಾ ಒಟ್ಟಿನಲ್ಲಿ ನಮ್ಮಣ್ಣ ಮನೆಗೆ ಬಂದರೆ ಸಾಕೆನ್ನುತ್ತಾಳೆ.

ಮಾರನೇ ದಿನವೇ ಕೋದಂಡರಾಮ್ ಕವರು ಇಪ್ಪತ್ತೈದು ವರ್ಷಗಳ ಹಿಂದೆ ಮಗನು ಕಾಣೆಯಾಗಿರುವ ಬಗ್ಗೆ ತಂಪ್ಲೇಂಟ್ ಕೊಟ್ಟಿದ್ದ ಠಾಣೆಗೆ ಬಂದು
ದೆಫೇದಾರರು ತನ್ನ ಕೆಲಸದಲ್ಲಿ ನಿರತರಾಗಿರುವುದನ್ನು ನೋಡಿ
ನಮಸ್ಕಾರ ಸಾರ್ ಎನ್ನುತ್ತಾರೆ.
ದೆಫೇದಾರರು ಕೋದಂಡರಾಮ್ ಮುಖವನ್ನು ಉದಾಸೀನತೆಯಿಂದ ಒಂದು ಸಲ ನೋಡಿ, ಯಾರು ನೀವು? ಏನು ಕೆಲಸ‌ ಮಾಡುತ್ತೀರಿ? ಏತಕ್ಕೆ ಇಲ್ಲಿಗೆ ಬಂದ್ರೀ? ಎಂದು ಪ್ರಶ್ನಿಸಿದಾಗ
ನಾನು ಈ ಊರಿನ ಶಾಲೆಯಲ್ಲಿ ಶಿಕ್ಷಕ‌ನಾಗಿದ್ದೆ ಎಂದ ತಕ್ಷಣ
ದೆಫೇದಾರರು ಎದ್ದುನಿಂತು ಗುರುಗಳೇ ಕುಳಿತುಕೊಳ್ಳಿ ಎಂದು ಹೇಳಿ ಕೋದಂಡರಾಮ್ ರವರನ್ನು ಕೂಡಿಸಿ ನಂತರ ಏನಾಗಬೇಕಿತ್ತೆಂದು ದೆಫೇದಾರ್ ಪ್ರಶ್ನಿಸಲು
ಇಪ್ಪತ್ತೈದು ವರ್ಷಗಳ‌ ಹಿಂದೆ ನನ್ನ ಮಗ ಕಾಣೆಯಾಗಿದ್ದಾನೆಂದು ಈ ಸ್ಟೇಷನ್ ಗೆ ಕಂಪ್ಲೇಂಟ್ ಕೊಟ್ಟಿದ್ದೆ. ಇದುವರೆಗೂ ಪತ್ತೆಯೇ ಆಗಿಲ್ಲ ಎಂದಾಗ
ನೀವು ಗುರುಗಳು ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವವರು, ಈಗಲೂ ಮಾಡುತ್ತಿರುವವರು, ನಿಮ್ಮ ನೋವು ನನಗೆ ಅರ್ಥವಾಗುತ್ತದೆ, ಆದರೂ ಕಂಪ್ಲೇಂಟ್ ಕೊಟ್ಟು ಇಪ್ಪತ್ತೈದು ವರ್ಷಗಳ‌ ನಂತರ ಬಂದಿರುವುದರಿಂದ ನಿಮ್ಮ ಮಗನನ್ನು ಹುಡುಕಲು ಹೇಗೆ ಸಾಧ್ಯ ನೀವೇ ಹೇಳಿ ಗುರುಗಳೇ ಎಂದು ದೆಫೇದಾರರು ಪ್ರಶ್ನಿಸಿದಾಗ
ನನ್ನ ಮಗ ಬರುತ್ತಾನೇನೋ ಎಂಬ ನಂಬಿಕೆಯಿಂದ ನಾನು ಇಲ್ಲಿವರೆಗೂ ಕಾದೂ ಕಾದೂ ಸಾಕಾಯಿತು, ಆದರೆ ಈಗ ನನ್ನ ಮಗ ಬರುತ್ತಾನೆಂಬ ನಂಬಿಕೆಯೇ ಹೊರಟು ಹೋಗಿದೆ ಎನ್ನುತ್ತಾ, ತೇವವಾದ ಕಣ್ಣುಗಳನ್ನು ತಮ್ಮ ಕರ್ಚೀಪಿನಿಂದ ಒರೆಸಿಕೊಂಡು, ಆದರೂ ನನ್ನ ಮಗಳ ಬಲವಂತದಿಂದ ಪುನಃ ಇಲ್ಲಿಗೆ ಬರಬೇಕಾಯಿತು ಎನ್ನಲು
ಸಾಹೇಬರು ಬರುತ್ತಾರೆ ಅವರಿಗೆ ನಿಮ್ಮ ನೋವು ಹೇಳಿದರೆ ಏನಾದರೂ ಮಾಡಬಹುದೆಂದು ದೆಫೇದಾರರ ಮಾತಿಗೆ
ಸಾಹೇಬರು ಬರುವುದು ಎಷ್ಟು ಹೊತ್ತಾಗುತ್ತದೆಂದು ಕೋದಂಡರಾಮ್ ಪ್ರಶ್ನಿಸುತ್ತಿರುವಂತೆ
ಇನ್ಸ್ ಪೆಕ್ಟರ್ ರವರು ಬಿರ ಬಿರನೆ ಒಳಗೆ ಬಂದು ತನ್ನ ಛೇಂಬರ್ ನಲ್ಲಿ ಕುಳಿತಾಗ
ಗುರುಗಳೇ ಬನ್ನಿ ನನ್ನ ಜೊತೆ ಎಂದು ಹೇಳಿ ದೆಫೇದಾರರು ಇನ್ಸ್ ಪೆಕ್ಟರ್ ಛೇಂಬರ್ ಗೆ ಹೋಗಲು
ಕೋದಂಡರಾಮ್ ಕೂಡಾ ಅವರನ್ನು ಹಿಂಬಾಲಿಸಿ ಇನ್ಸ್‌ ಪೆಕ್ಟರ್ ಛೇಂಬರ್ ನ ಬಳಿ ನಿಲ್ಲುತ್ತಾರೆ
ದೆಫೇದಾರರು ಗುರುಗಳೇ ಒಳಗೆ ಬನ್ನಿ ಎಂದು ಕರೆದಾಗ
ದೆಫೇದಾರರೇ ಯಾರ್ರೀ ಅದು ಎಂದು ಕೇಳುತ್ತಿರುವ ವೇಳೆಗೆ
ಕೋದಂಡರಾಮ್ ರವರು ಇನ್ಸ್‌ಪೆಕ್ಟರ್ ಛೇಂಬರ್ ಒಳಗೆ‌ ಕಾಲಿಟ್ಟಾಗ
ಇನ್ಸ್ ಪೆಕ್ಟರ್ ರವರು ಕೋದಂಡರಾಮ್ ರವರನ್ನು ಕಂಡು ಸ್ಥಂಬೀಭೂಕರಾಗಿ, ಕೋದಂಡರಾಮ್ ರವರ ಬಳಿ ಬಂದು ನಮಸ್ಕರಿಸಿ ,ಸಾರ್ ನೀವು ಇಲ್ಲಿ ಏಕೆ ಬಂದ್ರಿ ನಾನು ನಿಮ್ಮ ಶಿಷ್ಯ ಅಶ್ವಥ್ ಕುಮಾರ್ ಜ್ನಾಪಕ ಇದೆಯಾ ಎಂದ ತಕ್ಷಣ
ಕೋದಂಡರಾಮ್ ರವರಿಗೆ ಮಾತೇ ಹೊರಡುವುದಿಲ್ಲ, ತನ್ನ ಶಿಷ್ಯ ಈ ದಿನ ಇನ್ಸ್ ಪೆಕ್ಟರ್ ಆಗಿರುವುದನ್ನು ನೋಡಿದಾಗ ಬಹಳ ಸಂತೋಷಗೊಂಡು ಅಂದರೆ ಶಿಸ್ತಿನ ಸಿಪಾಯಿಯಂತಿದ್ದ ಅಶ್ವಥ್ ನೀನೇನಾ ಸಾರ್ ಎನ್ನಲು
ನೋ ನೋ ನೋ ನೋ ನನ್ನನ್ನು ನೀವು ಸಾರ್‌ ಎನ್ನಬಾರದು, ನಾನು ಎಷ್ಚೇ ದೊಡ್ಡ ಹುದ್ದೆಯಲ್ಲಿದ್ದರೂ ನಾನು ನಿಮ್ಮ ಶಿಷ್ಯ‌ ಅಷ್ಟೇ, ಎನ್ನುತ್ತಾ, ಇನ್ಸ್ ಪೆಕ್ಟರ್ ರವರು ಕೋದಂಡರಾಮ್ ರವರ ಕೈ ಹಿಡಿದು ತಮ್ಮ ಎದುರಿನ ಕುರ್ಚಿಯಲ್ಲಿ ಕೂಡಿಸಿ, ನನಗೆ ಅಕ್ಷರ‌ ಕಲಿಸಿದ ಗುರುಗಳು ಬಂದಿದ್ದು ನನಗೆ ತುಂಬಾ ಸಂತೋಷನಾಗಿದೆ‌ ಎನ್ನುತ್ತಾ, ಆಫೀಸ್ ಬಾಯ್ ನ ಕರೆದು ನನ್ನ ಗುರುಗಳು ಬಂದಿದ್ದಾರೆ ಬೇಗ ಹೋಗಿ ತುಪ್ಪದಲ್ಲಿ ಮಾಡಿರುವ ಒಂದು ಕೆಜಿ ಸ್ವೀಟ್ ಖಾರ ತೆಗೆದುಕೊಂಡು ಬಾ‌ ಅದರ ಜೊತೆಗೆ ಕಾಫಿ ತೆಗೆದುಕೊಂಡು ಬಾ ಎಂದಾಗ
ಆಯ್ತು ಸಾರ್ ಎಂದು ಆಫೀಸ್ ಬಾಯ್ ಹೋದ ನಂತರ
ಸಾರ್ ಇಷ್ಟು ದೂರ ಬಂದಿದ್ದೀರಾ ನನ್ನಿಂದ ಏನಾಗಬೇಕಿತ್ತೆಂದು ಕೇಳಲು
ಸಾರ್ ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಮಗ ಕಾಣೆಯಾಗಿದ್ದಾನೆಂದು ಈ ಸ್ಟೇಷನ್ ಗೆ ಕಂಪ್ಲೇಂಟ್ ಕೊಟ್ಟಿದ್ಜೆ ಆದರೆ ಏನೂ ಪ್ರಯೋಜನವಾಗಲಿಲ್ಲ. ಈ ವರೆಗೂ ನನ್ನ ಮಗ ಮನೆಗೆ ಬರಲೇ ಇಲ್ಲ ಎಂದಾಗ
ಗುರುಗಳೇ ಇಪ್ಪತ್ತೈದು ವರ್ಷಗಳ ಹಿಂದೆ ಕಂಪ್ಲೇಂಟ್ ಕೊಟ್ಟು ಈಗ ಬಂದು ಕೇಳಿದರೇನು ಮಾಡುವುದು ಹೇಳಿ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಿದಾಗ
ನನ್ನ ಮಗ ಸಿಕ್ಕಿದ ತಕ್ಷಣ ಪೋಲೀಸ್ ರವರೇ ತಿಳಿಸುತ್ತಾರೆಂದು ಸುಮ್ಮನಿದ್ದೆ ಎಂದಾಗ
ಇನ್ಸ್ ಪೆಕ್ಚರ್ ರವರು ಒಂದು ಕ್ಷಣ ಯೋಚಿಸಿ, ಗುರುಗಳೇ ನಿಮ್ಮ ಮಗನ ಫೋಟೋ ತಂದಿದ್ದೀರಾ ಎಂದು ಕೇಳಲು
ತಂದಿದ್ದೇನೆ ಸಾರ್ ಎಂದು ಹೇಳಿ ತಮ್ಮ ಜೇಬಿನಿಂದ ಮಗನ ಫೋಟೋ ತೆಗೆದು ಟೇಬಲ್ ಮೇಲಿಡುವ ವೇಳೆಗೆ
ಆಫೀಸ್ ಬಾಯ್ ಸ್ವೀಟ್‌‌ಖಾರ‌‌ ಕಾಫಿ ತಂದು ಕೊಟ್ಚಾಗ
ಗುರುಗಳೇ ಮೊದಲು ಸಿಹಿ ತಿಂದು ಕಾಫಿ ಕುಡಿದು ನಂತರ ಮಾತಾಡೋಣವೆಂದಾಗ
ನನ್ನ ಶಿಷ್ಯ ಪ್ರೀತಿಯಿಂದ ಸ್ವೀಟ್ ಕೊಟ್ಟಿರುವಾಗ ಬೇಡ‌ ಎನ್ನಲು ಆಗುವುದಿಲ್ಲಲಸವೆಂದು ಹೇಳಿ ಒಂದು ಸ್ವೀಟ್ ಪೀಸ್‌ ತೆಗೆದುಕೊಂಡು ತಿಂದು, ಅದರ ಜೊತೆಗೆ ಸ್ವಲ್ಪ ಖಾರ‌ ತಿಂದು
ಇನ್ಸ್‌ ಪೆಕ್ಟರ್ ಕಾಫಿ ಕುಡಿಯುತ್ತಾ, ರೀ ದೆಫೇದಾರರೇ ಒಳ್ಳೆಯ ಫೋಟೋ ಗ್ರಾಫರ್ ನ ಕರೆಸಿರಿ ಎಂದು ಹೇಳಲು
ದೆಫೇದಾರರು ಫೋಟೋ ಗ್ರಾಫರ್ ಗೆ ಫೋನ್ ಮಾಡಿದ ಐದು ನಿಮಿಷದಲ್ಲಿ
ಫೋಟೋ ಗ್ರಾಫರ್ ಬಂದು ಇನ್ಸ್ ಪೆಕ್ಟರ್ ಗೆ ನಮಸ್ಕಾರ ಸಾರ್ ಎಂದು ಹೇಳಲು
ಇನ್ಸ್ ಪೆಕ್ಟರ್ ರವರು ಕೋದಂಡರಾಮ್ ರವರ ಮಗನ ಫೋಟೋ ಕೊಡುತ್ತಾ, ಈಗ ಈ ಹುಡುಗನಿಗೆ ಸುಮಾರು ಮುವ್ವತ್ತು ವರ್ಷವಾಗಿದೆ, ಈ ಚಿಕ್ಕ ಹುಡುಗನನ್ನು ಮುವ್ವತ್ತು ವರ್ಷದವನಂತೆ ಫೋಟೋ ಬರುವಂತೆ ಮಾಡ್ರೀ ಎಂದು ಇನ್ಸ್ ಪೆಕ್ಟರ್ ಹೇಳಲು
ಸಾರ್ ಇದಕ್ಕಾಗಿಯೇ ಒಂದು ಸಾಫ್ಟ್ ವೇರ್ ಇದೆಯೆಂದು ಫೋಟೋಗ್ರಾಫರ್ ಹೇಳುತ್ತಾನೆ.
ಆ ಸಾಫ್ಟ್ ವೇರಿಂದ ಫೋಟೋ ಬದಲಾಯಿಸಿ ಕೊಡಿ ಎಂದು ಇನ್ಸ್‌ಪೆಕ್ಟರ್ ‌ ಹೇಳುತ್ತಿರುವಾಗ.
ಸಾರ್ ನನ್ನ ಮಗಳು ಅದೇ ಸಾಫ್ಟ್‌ ವೇರಿಂದ ಫೋಟೋ ಬದಲಾಯಿಸಿದ್ದಾಳೆಂದು ತಮ್ಮ. ಜೇಬಿನಿಂದ ತೆಗೆದುಕೊಟ್ಟಾಗ
ಈಫೋಟೋ ನಿಮ್ಮಲ್ಲೇ‌ ಇರಲಿ ಗುರುಗಳೇ ಈಗ ನಮ್ಮ ಫೋಟೋ‌ ಗ್ರಾಫರ್ ತೆಗೆದುಕೊಂಡು ಬರುತ್ತಾರೆಂದು ಹೇಳಿದಾಗ
ಕೋದಂಡರಾಮ್ ರವರು ಫೋಟೋವನ್ನು ಜೇಬಿನಲ್ಲಿಟ್ಚುಕೊಳ್ಳುತ್ತಾ, ಆಶಾ ತನ್ನ ಸೋಸಿಯಲ್ ಮೀಡಿಯಾದಲ್ಲಿ ಫೋಟೋ ಕಳುಹಿಸಿದ್ದಕ್ಕೆ ಹೈದರಾಬಾದಿನಿಂದ‌ ಬಂದ ಮಾಹಿತಿಯನ್ನು ಹೇಳಲು
ಈ ಫೋಟೋ ಗ್ರಾಫರ್ ಕೈ ಚಳಕ ನೋಡುವಿರಂತೆ ಹತ್ತು ನಿಮಿಷ ಸುಮ್ಮನಿರಿ ಎಂದು ಹೇಳಿ ಉಭಯ ಕುಶಲೋಪರಿ ಮಾತನಾಡುತ್ತಿರುವಾಗ
ಸ್ವಲ್ಪ ಹೊತ್ತಿನ ನಂತರ ಫೋಟೋ ಗ್ರಾಫರ್ ಕೋದಂಡರಾಮ್ ರವರ ಐದು ವರ್ಷದ ಮಗನ ಫೋಟೋವನ್ನು ಮುವ್ವತ್ತು ವರ್ಷದ‌ವನ ಯುವಕನಂತೆ ಮಾಡಿ ತಂದುಕೊಟ್ಟಾಗ
ಇನ್ಸ್ ಪೆಕ್ಟರ್ ರವರು ಆ ಫೋಟೋವನ್ನು ಕೋದಂಡರಾಮ್ ರವರಿಗೆ‌ ತೋರಿಸುತ್ತಾ, ಇದೇನಾ ನಿಮ್ಮ ಮಗನ ಫೋಟೋ‌ ಎಂದು ಕೇಳಲು
ಈಗ ಹೇಗಿದ್ದಾನೋ ಯಾರಿಗೆ ಗೊತ್ತು ಸಾರ್ ಫೋಟೋ ಗ್ರಾಫರ್ ಪೋಟೋ ಡೆವಲಪ್ ಮಾಡಿರುವುದನ್ನು ನಾವು ನಮ್ಮ ಮಗ ಹೀಗಿರಬಹುದೆಂದು ಒಪ್ಪಿಕೊಳ್ಳಬೇಕಷ್ಟೇ ಎಂದು ಕೋದಂಡರಾಮ್ ಹೇಳಲು
ಇನ್ಸ್ ಪೆಕ್ಟರ್ ರವರು ಎರಡೂ ಫೋಟೋಗಳನ್ನು ನೋಡಿ, ಗುರುಗಳೇ ನೀವು ತಂದಿರುವ ಫೋಟೋಗೆ ನಮ್ಮ ಫೋಟೋ ಗ್ರಾಫರ್ ಡೆವಲಪ್ ಮಾಡಿರುವ ಫೋಟೋಗೆ ಎಷ್ಟು ವ್ಯತ್ಯಾಸ‌ ಇದೆ ನೋಡಿ ಎನ್ನಲು
ಹೌದು ಸಾರ್ ನನ್ನ ಮಗಳು ಸಿನಿಮಾ ಹೀರೋನಂತೆ ಡೆವಲಪ್ ಮಾಡಿದ್ದಾಳೆ, ನಿಮ್ಮ ಫೋಟೋಗ್ರಾಫರ್ ಕೈ ಚಳಕವೇ‌ ಬೇರೆ ಇದೆ ಎಂದಾಗ
ಈಗ ನಾನು ನಮ್ಮ ಎಲ್ಲಾ ಸ್ಟೇಷನ್ ಗೂ ಕಳುಹಿಸಿ ನಿಮ್ಮ ಮಗನನ್ನು ಹುಡುಕಿಸುತ್ತೇನೆ ಎಂದಾಗ
ಸಾರ್ ನಮ್ಮ ಏರಿಯಾ ಇನ್ಸ್‌ ಪೆಕ್ಟರ್ ಈ ರೀತಿ ಮಾಡಲು ಆಗುವುದಿಲ್ಲವೆಂದು ಹೇಳಿದ್ರು ಎಂದು ಕೋದಂಡರಾಮ್ ರವರು ಹೇಳಲು
ಅವರು ಹೇಳಿರುವುದು ಸರಿ ಇದೆ ಆದರೆ ನಾನು ಬೇರೆ ರೀತಿಯಲ್ಲಿ ಪ್ರಕಟಿಸುತ್ತೇನೆಂದು ಹೇಳಿ, ದೆಫೇದಾರರನ್ನು ಕರೆದು ಈ ಎರಡೂ ಫೋಟೋಗಳನ್ನು ನಮ್ಮ ಎಲ್ಲಾ ಸ್ಟೇಷನ್ ಗಳಿಗೆ ಕಳುಹಿಸಿ, ಐದು ವರ್ಷದವನಿದ್ದಾಗ ಕಾಣೆಯಾಗಿದ್ದು, ಈಗ ಹೀಗೆ ಇರಬಹುದೆಂದು ಅಂದಾಜಿಸಲಾಗಿದೆ ಎಂದು ಅನೌನ್ಸ್‌ ಮಾಡಿಸಿರೆಂದು ಹೇಳಿದಾಗ
ದೆಫೇದಾರರು ಆಯ್ತು ಸಾರ್ ಎಂದು ಹೇಳಿ ತನ್ನ‌ ಸೀಟಿಗೆ ಹೋಗಿ ಕುಳಿತ ನಂತರ
ಕೋದಂಡರಾಮ್ ರವರು ನಾನಿನ್ನು ಬರುತ್ತೇನೆ ಎಂದಾಗ
ಧನ್ಯವಾದಗಳು ಗುರುಗಳೇ ನಿಮ್ಮ ಮಗ ಸಿಗುವವರೆಗೆ ಬಿಡುವುದಿಲ್ಲ. ನಿಮ್ಮ ಮಗನನ್ನು ಹುಡುಕಿಕೊಡುವುದೇ ನಾನು ನಿಮಗೆ ಕೊಡುವ ಗುರು ದಕ್ಷಿಣೆ ಎಂದು ಮತ್ತೊಮ್ಮೆ ಇನ್ಸ್ ಪೆಕ್ಟರ್ ರವರು ಕೋದಂಡರಾಮ್ ರವರಿಗೆ ನಮಸ್ಕರಿಸಿ‌ ಸ್ವೀಟ್ ಬಾಕ್ಸನ್ನು ಕೋದಂಡರಾಮ್ ರವರಿಗೆ ನೀಡಿದಾಗ
ಕೋದಂಡರಾಮ್ ರವರಿಗೆ ಹೃದಯ ತುಂಬಿ ಬಂದು, ನಿಮಗೆ ದೇವರು ಒಳ್ಳೆಯದು ಮಾಡಲಿ ಉನ್ನತ ಹುದ್ದೆಗಳು ಬೇಗ ಬೇಗನೇ ಸಿಗಲೆಂದು ಹಾರೈಸುತ್ತಾರೆ.
ಗುರುಗಳೇ ನಿಮ್ಮ ಮಗನನ್ನು ಹುಡುಕುತ್ತಿರುವ ಕಾರ್ಯದ ಪ್ರೋಗ್ರೆಸ್ ಬಗ್ಗೆ ನಾನೇ ನಿಮಗೆ ಕಾಲ್ ಮಾಡುತ್ತೇನೆಂಬ ಇನ್ಸ್ ಪೆಕ್ಟರ್ ಮಾತಿಗೆ
ತುಂಬಾ ಥ್ಯಾಂಕ್ಸ್ ಎಂದು ಹೇಳಿ ಬಸ್‌ ಹತ್ತಿ ಮನೆಗೆ ಬರುತ್ತಾರೆ

  • ಈ ಕಥೆಯಲ್ಲಿ ಕಂಡು ಬರುವ ಮುಖ್ಯಾಂಶವೇನೆಂದರೆ

  1. ಮೊದಲನೇ ವಿಚಾರ
    ವಿದ್ಯೆ ಕಲಿಸುವ ಗುರುಗಳು ಎಲ್ಲಿಹೋದರೂ ಅವರಿಗೆ ಗೌರವ ಮರ್ಯಾದೆ ನೀಡದ ಮನುಷ್ಯನೇ ಇಲ್ಲ. ಶಿಕ್ಷಕರು ಎಂದ ತಕ್ಷಣ ಯಾರಿಗಾದರೂ ವಿದ್ಯೆ ಕಲಿಸುವ ಗುರುಗಳೆಂದು ಧನ್ಯತಾ‌ ಙಾವ ಮೂಡುತ್ತದೆ. ಮನುಷ್ಯ ಸಮಾಜದಲ್ಲಿ ಎಷ್ಟೇ ದೊಡ್ಡ‌ವ್ಯಕ್ತಿಯಾಗಿದ್ದರೂ ಅವನಿಗೆ ವಿದ್ಯೆ ಕಲಿಸಿದ ಗುರುವನ್ನು ನೋಡಿದ ತಕ್ಷಣ ತನ್ನ‌ ಹೃದಯದಲ್ಲಿ ಎರಡಕ್ಷರವನ್ನು ಹೇಳಿಕೊಟ್ಟವರೆಂದು ಇದರಿಂದ ನಾನು ಈ ಹುದ್ದೆಗೆ ಬಂದಿರುವೆನೆಂದು ಮನವರಿಕೆಯಾಗಿ ಗುರುಭಕ್ತಿ ತಾನಾಗಿಯೇ ಬರುತ್ತದೆಯಲ್ಲವೇ?
  2. ಎರಡನೇ ವಿಚಾರ
    ಯಾವ ಕೆಲಸವನ್ನು ಮಾಡಿದರೂ ಅದನ್ನು ಪೂರ್ಣಗೊಳಿಸಲೇ ಬೇಕು. ಇಲ್ಲದಿದ್ದರೆ ಈ ಕಾದಂಬರಿಯಲ್ಲಿ ಬಂದಿರುವಂತೆ ಕೋದಂಡರಾಮ್ ರವರು ತನ್ನ ಮಗನ ಫೋಟೋ ಸಹಿತ ಪೇಪರ್ ನಲ್ಲಿ ಪ್ರಕಟಿಸದೆ ದೊಡ್ಡ ತಪ್ಪು ಮಾಡಿದಂತಾಗುತ್ತದೆ.
  3. ಮೂರನೇ ವಿಚಾರ

ಯಾರು ಯಾವ‌ ಕೆಲಸದಲ್ಲಿ ನುರಿತರಾಗಿರುತ್ತಾರೋ‌ ಅವರೇ ಆ ಕೆಲಸವನ್ನು ಮಾಡಬೇಕು.‌ ಅರ್ದಂಬರ್ಧ ಕಲಿತು ನಾನೂ ಮಾಡುತ್ತೇನೆಂದು ಹೋದರೆ, ಆ ಕೆಲಸ‌ ಯಾವತ್ತೂ‌ ಸರಿ ಇರುವುದಿಲ್ಲ ,ಆಶಾಳ‌ ಅಣ್ಣನ ಫೋಟೋವನ್ನು ಅವಳ‌ ಸ್ನೇಹಿತ ವಿಕ್ರಮ್ ಮುವ್ವತ್ತು ವರ್ಷದ ವ್ಯಕ್ತಿಯನ್ನಾಗಿ ರೂಪಾಂತರ ಮಾಡಿದಂತಾಗುತ್ತದೆಯಲ್ಲವೇ? ಅದೇ ಫೋಟೋ ಗ್ರಾಫರ್ ಅಚ್ಚುಕಟ್ಟಾಗಿ ಮಾಡಿದ ಅಲ್ಲವೇ?

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ -09

ಹಿಂದಿನ ಸಂಚಿಕೆಯಲ್ಲಿ

ಆಶಾಳ ತಂದೆ ಕೋದಂಡರಾಮ್ ರವರು ತನ್ನ ಮಗನು ಇಪ್ಪತ್ಕೈದು ವರ್ಷಗಳಿಂದ ಕಾಣೆಯಾಗಿರುವ ವಿಚಾರವನ್ನು ಇನ್ಸ್ ಪೆಕ್ಟರ್ ಗೆ ಹೇಳಿ ಮನೆಗೆ ವಾಪಸ್ಸಾಗುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಕೋದಂಡರಾಮ್ ಮನೆಗೆ ಬಂದು ಕಾಫಿ ಕೊಡೆಂದು ತನ್ನ ಪತ್ನಿಗೆ ಹೇಳಲು
ಅವರ ಪತ್ನಿಯು ಕಾಫಿಯ ಲೋಟವನ್ನು ಕೋದಂಡರಾಮ್ ರವರಿಗೆ ಕೊಡುತ್ತಾ, ಇಷ್ಟು ಹೊತ್ತು ಎಲ್ಲಿ ಹೋಗಿದ್ರೀ ಎಂದು ಪ್ರಶ್ನಿಸಲು
ನಾನು ಇಪ್ಪತ್ತೈದು ವರ್ಷಗಳ ಹಿಂದೆ ಕಂಪ್ಲೇಂಟ್ ಕೊಟ್ಟಿದ್ದ ಸ್ಚೇಷನ್ ಗೆ ಹೋಗಿದ್ದೆ , ಅಲ್ಲಿ ನನ್ನ ಶಿಷ್ಯನೇ ಇನ್ಸ್ ಪೆಕ್ಟರ್ ಆಗಿದ್ದಾರೆ. ‌ನನ್ನ ನೋಡುದ ತಕ್ಷಣ ಬಹಳ‌ ಅಭಿಮಾನ ಗೌರವದಿಂದ ನನಗೆ ಸ್ವೀಟ್ ಕಾಫಿ ತರಿಸಿ ಸ್ವೀಟ್ ಪ್ಯಾಕೆಟ್ ಕಳುಹಿಸಿದ್ದಾರೆ ಎಂದಾಗ
ಬಹಳ ಒಳ್ಳೆಯದೇ ಆಯಿತು, ನಮ್ಮ ಮಗನನ್ನು ಹುಡುಕಿಕೊಡುತ್ತಾರಂತಾ‌? ಎಂದು ಅವರ ಪತ್ನಿ ಪ್ರಶ್ನಿಸಲು
ಸ್ಚೇಷನ್ ನಲ್ಲಿ ನಡೆದ‌ ಸಂಭಾಷಣೆ ಯನ್ನೆಲ್ಲಾ ಹೇಳಿದಾಗ
ಹೋಗಲಿ ನಿಮ್ಮ ಶಿಷ್ಯರಾಗಿದ್ದಕ್ಕೆ ಇಂಟರೆಸ್ಟ್ ತೊಗೊಂಡು ಹುಡುಕಿಕೊಡುತ್ತೇನೆಂದು ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಹಾಗೇ ನಮ್ಮ ಮಗ ಬೇಗ‌ ಸಿಗಲೆಂದು ಹೇಳುತ್ತಿರುವ ವೇಳೆಗೆ
ಹೊರಗೆ ಹೋಗಿದ್ದ ಆಶಾ‌ ಬಂದು ಇದೇನಪ್ಪಾ ಸ್ವೀಟ್ ಬಾಕ್ಸ್‌ ಎನ್ನಲು
ಮಗಳಿಗೂ ನಡೆದ ವಿಚಾರವನ್ನು ಹೇಳಿದಾಗ
ಇನ್ಸ್ ಪೆಕ್ಟರ್ ಹೇಳಿದ ಮೇಲೆ ಅಣ್ಣ‌ಸಿಕ್ಕೇ ಸಿಗುತ್ತಾನಪ್ಪಾ ಎಂದು ಆಶಾ ತನ್ನ ಆಶಾಭಾವನೆ ವ್ಯಕ್ತಪಡಿಸುತ್ತಾಳೆ.
ನಿನ್ನ ಬಾಯ ಹರಕೆಯಿಂದ ಬೇಗ‌ ಸಿಗಲಮ್ಮಾ ಎಂದು ಅವಳಪ್ಪನು ಹೇಳಿ ಊಟಕ್ಕೆ ಹಾಕುತ್ತೀಯಾ ಅಥವಾ ಸುಮ್ಮನೆ ಮಾತನಾಡುತ್ತಿರುತ್ತೀಯಾ ಎನ್ನಲು
ನೀವೊಳ್ಳೆ ಚೆನ್ನಾಗಿ ಹೇಳುತ್ತಿದ್ದೀರಲ್ಲಾ? ಮಾತನಾಡಿಸುತ್ತಾ ಇದ್ದದ್ದು ನೀವಲ್ಲವೇ? ಕೈಕಾಲು ತೊಳೆದು ಬನ್ನಿ ಊಟ ಹಾಕುತ್ತೇನೆ ಎನ್ನುತ್ತಾ, ಆಶಾ ನಿನಗೆ ಅಪ್ಪನಿಗೆ ತಟ್ಟೆ ಹಾಕಮ್ಮಾ ಎಂದು ಹೇಳಿ‌ ಅವಳಮ್ಮ ಅಡಿಗೆ ಮನೆಗೆ ಹೋಗುತ್ತಾರೆ
ಆಶಳ ಅಪ್ಪ ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳಲು ತನ್ನ ರೂಮಿಗೆ ಹೋದಾಗ
ಆಶಾಳೂ ತನ್ನ ರೂಮಿಗೆ ಹೋದ ತಕ್ಷಣ ತನ್ನ ಸ್ನೇಹಿತೆಯು ಪುೋನ್ ಮಾಡುತ್ತಿರುವುದನ್ನು ನೋಡಿ ಹಲೋ‌ ಎನ್ನಲು
ಆಶಾಳ‌ ಸ್ನೇಹಿತೆ ಮಾತನಾಡಿ,ನಿಮ್ಮಣ್ಣನ ಬಗ್ಗೆ ನೀನು ಕಳುಹಿಸಿದ್ದ ಮೆಸೇಜ್ ನೋಡಿದೆ ತುಂಬಾ ಬೇಜಾರಾಯ್ತು ಎನ್ನುತ್ತಾಳೆ
ಏನು ಮಾಡೋದು ಈಗ ಎಚ್ಚೆತ್ತುಕೊಂಡು ಹುಡುಕುತ್ತಿದ್ದೇವೆ. ಯಾವಾಗ ಸಿಗುತ್ತಾನೋ ನೋಡೋಣವೆನ್ನುತ್ತಾಳೆ ಆಶಾ
ಒಂದು ಕೆಲಸ ಮಾಡೋಣ ನಾವು ಮೊನ್ನೆ ಹೋಟೆಲ್ ಗೆ ಹೋಗಿದ್ದಾಗ ಒಬ್ಬ ಆರ್ಮಿ ಮೆನ್ ನೀನಿರುವ ಕಡೆ ಬಂದು ಬಿದ್ದುಬಿಟ್ಚರಲ್ಲಾ ಅವರನ್ನು ನಿಮ್ಮಣ್ಣನ ಬಗ್ಗೆ ವಿಚಾರಿಸು ಅಕಸ್ಮಾತ್ ಏನಾದರೂ ನಿಮ್ಮಣ್ಣ ಸೈನ್ಯಕ್ಕೆ ಸೇರಿರಬಹುದಾ ಕೇಳು ಎನ್ನಲು
ನನ್ನ ಬಳಿ ಅವರ ಫೋನ್ ನಂಬರಿಲ್ಲ ಎಂದು ಆಶಾ‌ ನುಡಿದಾಗ
ನಾನು ಆ ದಿನ ಅವರ ಫೋನ್ ನಂಬರ್ ಪಡೆದಿದ್ದೇನೆ, ಅದನ್ನು ನಿನಗೆ ಕೊಡುತ್ತೇನೆ. ವಿಚಾರಿಸೆಂದು ಆಶಾಳ‌ ಸ್ನೇಹಿತಳು ಹೇಳಿದಾಗ
ಒಂದು ಕೆಲಸ ಮಾಡು ನೀನೇ ಫೋನ್ ಮಾಡಿ ವಿಷಯ ತಿಳಿಸು ನಂತರ‌ ನಾನು ಮಾತನಾಡುತ್ತೇನೆಂಬ ಆಶಾಳ‌ ಮಾತಿಗೆ,
ಆಶಾ ಸ್ನೇಹಿತಳು ಪ್ರಯತ್ನಿಸುತ್ತೇನೆಂದು ಹೇಳಿ ಫೋನ್ ಕಟ್ ಮಾಡಿ, ನಂತರ ಹೋಟೆಲ್‌ ನಲ್ಲಿ ಪರಿಚಯವಾಗಿದ್ದ ನಿವೃತ್ತ ಯೋಧರಿಗೆ ಫೋನ್ ಮಾಡಿ ರಘುವೀರ್ ಎಂಬುವರು ನನ್ನ ಸ್ನೇಹಿತೆಯ ಅಣ್ಣನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದು, ರಘುವೀರ್ ಎಂಬ ಹೆಸರಿನವರು ಸ ಸೈನ್ಯದಲ್ಲೇನಾದರೂ ಇದ್ದಾರಾ ಎಂದು ಕೇಳಿದಾಗ
ನಿವೃತ್ತ‌ ಯೋಧರು ಒಂದು ನಿಮಿಷ ಯೋಚಿಸಿ ರಘುವೀರ್ ಎಂಬುವವರು ಇರಲಿಲ್ಲ. ರಣವೀರ್ ಎಂಬುವವರು ಈಗಲೂ ಇದ್ದಾರೆಂದಾಗ
ಸಾರಿ ಸಾರ್‌‌ ಎಂದು ಆಶಾಳ‌ ಸ್ನೇಹಿತಳು ಹೇಳಿ ಫೋನ್ ಕಟ್‌ ಮಾಡಿ ಆಶಾಗೆ ಫೋನ್ ಮಾಡಿ ವಿಷಯ ತಿಳಿಸಿದಾಗ
ಆಶಾ ನಿರಾಸೆಯಿಂದ ಓಕೆ ಎಂದು ಹೇಳಿ ಫೋನ್ ಕಟ್ ಮಾಡಿ ಮುಖ‌‌ಸಪ್ಪಗೆ ಮಾಡಿಕೊಂಡು ಕುಳಿತುಕೊಂಡಿರಲು
ಅವಳಪ್ಪ ಬಂದು ಯಾಕಮ್ಮಾ ಸಪ್ಪಗೆ ಕುಳಿತಿದ್ದೀಯಾ ಎಂದು ಪ್ರಶ್ನಿಸಿದಾಗ
ತನ್ನ ಸ್ನೇಹಿತೆ ನಿವೃತ್ತ ಯೋಧರಿಗೆ ಫೋನ್ ಮಾಡಿದ ವಿಷಯವನ್ನು ಹೇಳಲು
ಮಗಳೇ ಸೈನ್ಯ ಎಂದರೆ ಎಷ್ಟು ಜನ ಇರುತ್ತಾರೆ? ಎಲ್ಲರ ಪರಿಚಯ ಮಾಡಿಕೊಳ್ಳಲು ಆಗುತ್ತದಾ? ಎಂದು ಪ್ರಶ್ನಿಸಿದಾಗ
ಸೈನ್ಯದಲ್ಲಿರಬಹುದೆಂದು ಹೇಗೆ ಕಂಡು ಹಿಡಿಯುವುದು ಎಂದು ಆಶಾ ಪ್ರಶ್ನಿಸಲು
ಈ ವಿಚಾರವನ್ನು ಇನ್ಸ್ ಪೆಕ್ಟರ್ ಗೆ ತಿಳಿಸುತ್ತೇನೆ ಅವರೆ ಏನಾದರೂ ವ್ಯವಸ್ಥೆ ಮಾಡಬಹುದೆಂದು ಹೇಳಲು,
ಆಗಲಪ್ಪಾ ಈಗಲೇ ಫೋನ್ ಮಾಡಿ ಹೇಳು ಎಂದು ಆಶಾ‌ ಪ್ರೇರೇಪಿಸಿದಾಗ
ಕೋದಂಡರಾಮ್ ರವರು ತಕ್ಷಣ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ವಿಷಯ ತಿಳಿಸಲು
ಬೇರೆ ಕಡೆ ಎಲ್ಲಾ ಹುಡುಕುತ್ತೇವೆ ಅಕಸ್ಮಾತ್ ಸಿಗದಿದ್ದರೆ ಆ ಪ್ರಯತ್ನವನ್ನೂ ಮಾಡುತ್ತನೇಂದು ಇನ್ಸ್ ಪೆಕ್ಟರ್ ಹೇಳಲು
ಥ್ಯಾಂಕ್ಸ್ ಎಂದು ಹೇಳಿ ಕೋದಂಡರಾಮ್ ರವರು ಫೋನ್ ಕಟ್ ಮಾಡುತ್ತಾರೆ.
ಅಣ್ಣನ ಹುಡುಕುವ ಭರದಲ್ಲಿ ತನಗೆ ಬಂದಿದ್ದ ನೇಮಕದ‌ ವಿಷಯವನ್ಮೇ ಮರೆತು ಬಿಟ್ಟಿರುತ್ತಾಳೆ
ಅವಳ‌ ಸ್ನೇಹಿತೆ ಫೋನ್ ಮಾಡಿ ಕಂಗ್ರಾಟ್ಸ್‌ ಕಣೇ ನಿನಗೆ ಕೆಲಸ‌ ಸಿಕ್ಕಿದ್ದಕ್ಕೆ ಎಂದ ತಕ್ಷಣ ಥ್ಯಾಂಕ್ಸ್ ಎಂದು ಹೇಳಿ ಬಿರ ಬಿರನೆ ತನ್ನ ರೂಮಿಗೆ ಹೋಗಿ ತನಗೆ ಬಂದಿದ್ದ ನೇಮಕದ ಆದೇಶವನ್ನು ನೋಡಲು , ಕಂಪೆನಿಯ ನೇಮಕದ ಆದೇಶದಲ್ಲಿ ಒಂದು ವಾರದೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ, ಬೇರೆಯವರನ್ನು ನೇಮಿಸಿಕೊಳ್ಳಲಾಗುವುದೆಂದು ಷರತ್ತು ವಿಧಿಸಿದ್ದರಿಂದ ತನಗೆ ಬಂದಿರುವ ದಿನಾಂಕಕ್ಕೂ ಆ ದಿನಕ್ಕೂ ಲೆಕ್ಕ ಹಾಕಿದಾಗ ಮಾರನೇ ದಿನಕ್ಕೆ ಒಂದು ವಾರ ಪೂರ್ಣಗೊಳ್ಳುವುದನ್ನು ನೋಡಿ ಅಬ್ಬಾ ಬದುಕಿತು ಬಡಜೀವ, ನಾಳೆ ನಾನು ಕೆಲಸಕ್ಕೆ ಹೋಗದಿದ್ದರೆ, ಬಂದಿರುವ ಕೆಲಸ ಕೈತಪ್ಪಿ ಹೋಗುತ್ತದೆಂದು ಆತಂಕಗೊಂಡು ಕಂಪೆನಿಯ ಆದೇಶದಂತೆ ಮಾರನೇ ದಿನ ಬೇಗ‌ ಎದ್ದು ರಡಿಯಾಗಿ, ಅಪ್ಪಾ ಅಮ್ಮಾ ಈದಿನದಿಂದ ಕೆಲಸಕ್ಕೆ ಹೋಗಿ ಬರುತ್ತೇನೆಂದಾಗ
ಅವಳ ಅಪ್ಪ ಅಮ್ಮನಿಗೆ ಮಗನ ಬಗ್ಗೆ ಹೃದಯದಲ್ಲಿ ಸಂಕಟವಿದ್ದರೂ, ಮಗಳಿಗೆ ಕೆಲಸ‌ ಸಿಕ್ಕಿದೆಯಲ್ಲಾ, ಅವಳ‌ ಜೀವನಕ್ಕೆ ಆಧಾರವಾಯಿತಲ್ಲಾ ಎಂದು ಸಂಕಟದಲ್ಲೂ ಸ್ವಲ್ಪ ಖುಷಿಪಡುವಂತಾಗಿರುತ್ತದೆ.
ಆಶಾ ಕೆಲಸಕ್ಕೆ ಹಾಜರಾಗಿದ್ದರಿಂದ ತನ್ನ ಕಾಲ ಮೇಲೆ ನಿಂತಿರುವ ಸಮಾಧಾನವಾಗಿರುತ್ತದೆ‌

ಸುಮಾರು ತಿಂಗಳುಗಳು ಕಳೆದರೂ ಕೋದಂಡರಾಮ್ ರವರ ಮಗನ‌ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದುದ್ದರಿಂದ, ಮನೆಯವರೆಲ್ಲರಿಗೂ ಸಹಜವಾಗಿಯೇ ‌ನಿರಾಸೆಯುಂಟಾಗಿರುತ್ತದೆ.
ಹೀಗೇ ಇರಲು ಒಂದು ದಿನ ರಾತ್ರಿ ಅಪ್ಪ ಮಗಳು ಊಟ‌ಮಾಡುತ್ತಿರುವಾಗ
ಕೋದಂಡರಾಮ್ ರವರು ಮಾತನಾಡಿ, ನಾವು ನಮ್ಮ ಮಗನನ್ನು ಮರೆಯುವುದೇ ಒಳ್ಳೆಯದು ಎಂಬ ಮಾತಿಗೆ
ಆಶಾಳಿಗೆ ಶಾಕ್ ಆಗಿ ಯಾಕಪ್ಪಾ ಆ ರೀತಿ ಹೇಳುತ್ತಿದ್ದೀಯಾ ಎಂದು ಪ್ರಶ್ನಿಸಲು
ನಿಮ್ಮಣ್ಣನೇನೂ ಇನ್ನೂ ಚಿಕ್ಕಮಗುವಲ್ಲ, ಅವನಿಗೂ ಮುವ್ವತ್ತು‌ ವರ್ಷಗಳಾಗಿರುತ್ತದೆ. ಅಕಸ್ಮಾತ್ ನಿಮ್ಮಣ್ಣ ಸಿಕ್ಕಿದರೂ ಅವನನ್ನು ಚಿಕ್ಕಂದಿನಿಂದ ಸಾಕಿ ಸಲಹುತ್ತಿರುವ ಜೀವಗಳು, ಏಕ್ ದಂ ಬಿಟ್ಟು ಬಿಡುತ್ತಾರಾ? ಮಗನನ್ನು ಪಡೆಯುವ ಅಭಿಲಾಷೆ ನಮಗಿದ್ದರೆ, ಇಲ್ಲಿಯವರೆಗೂ ಸಾಕಿ ಸಲಹಿದವನನ್ನು ಬಿಟ್ಟು ಬಿಡಬೇಕಾ ಎಂದು ಎನಿಸುತ್ತದೆಯಲ್ಲವೇ ಮಗಳೇ ಎಂದು ಕೋದಂಡರಾಮ್ ಪ್ರಶ್ನಿಸಿದಾಗ
ಹಾಗಾದರೆ ನಿನ್ನ ಮಾತಿನ ಅರ್ಥ ಏನಪ್ಪಾ? ಅಣ್ಣನನ್ನು ಹುಡುಕುವುದನ್ನು ಬಿಟ್ಚು ಬಿಡಬೇಕಾ ಎಂದು ಆಶಾ ಪ್ರಶ್ನಿಸಿದಾಗ
ಹೌದಮ್ಮಾ ನನಗೀಗ ಅದೇ ಯೋಚನೆ ಬಂದಿದೆಯೆಂದು ಕೋದಂಡರಾಮ್ ಹೇಳುತ್ತಾರೆ.
ನಿನ್ನ ಮಾತು ಒಪ್ಪುವುದಿಲ್ಲವೆಂದು ಆಶಾ ನುಡಿದಾಗ
ಮಗಳೇ ಈ ಮಾತಿನಿಂದ ನಿನಗೆ ನಿರಾಸೆಯಾಗಬಹುದಮ್ಮಾ ಆದರೆ, ಅವನನ್ನು ಇಲ್ಲಿವರೆಗೂ ಸಾಕಿರುವವರ ಬಗ್ಗೆಯೂ ನೋಡಬೇಕಲ್ಲಮ್ಮಾ ಎಂಬ ಅವಳಪ್ಪನ ಮಾತಿಗೆ
ಆಗ ನಾವು ನಿಜವಾದ‌ ತಂದೆ ತಾಯಿಯಾಗುತ್ತೇವೆ, ಇದುವರೆಗೂ ಸಾಕಿರುವವರು ಸಾಕು ತಂದೆಯಾಗಿರುತ್ತಾರೆ. ಅವನಿಗೂ ಈ ವಿಷಯ ತಿಳಿದೇ ಇರುತ್ತದೆಯಲ್ಲವೇ? ಹೆತ್ತವರನ್ನು ಕಂಡಾಗ ಅವನೂ ತನ್ನ ತಂದೆ ತಾಯಿ ಸಿಕ್ಕಿದರೆಂದು ಬಹಳ ಖುಷಿಪಡಬಹುದು‌. ಅಲ್ಲೂ ಇರಲೀ ಅವರಿಗೂ ನಿರಾಸೆ‌ ಮಾಡುವುದು ಬೇಡ ನಾವೂ ದುಃಖಿಸುವುದು ಬೇಡ. ಅವನು ಎಲ್ಲಿರುತ್ತೇನೆಂದು ಹೇಳುತ್ತಾನೋ ಅಲ್ಲೇ ಇರಲಿ. ನಮಗೂ ಮಗ‌ ಸಿಕ್ಕಿದ್ದಾನೆಂಬ ಕೊರಗಾದರೂ ಹೋಗುತ್ತದೆ ಎಂದು ಆಶಾಳ‌ ಅಮ್ಮ ನುಡಿದಾಗ
ಅವನ ಮನಸ್ಥಿತಿ ನೋಡಿಕೊಂಡು ಮುಂದುವರೆಯಬೇಕೆಂದು ಅವಳಪ್ಪ ನುಡಿಯಲು
ಈ ವಿಚಾರದಿಂದ ಯಾರಿಗೂ ನೋವಾಗುವುದು ಬೇಡವಷ್ಟೇ ಎಂದು ಆಶಾಳ ಅಮ್ಮ ಹೇಳಿದಾಗ
ಆಗ ಅಣ್ಣನ ಮನಸ್ಥಿತಿ ಹೇಗಿರುತ್ತದೋ ಅದೇರೀತಿ ಮಾಡೋಣವೆನ್ನುತ್ತಾಳೆ.
ಬೇಡಮ್ಮಾ ಈಗ ಹೇಗಿರುವೆವೋ ಹಾಗೇ ಇದ್ದುಬಿಡೋಣವೆಂದು ಅವಳಪ್ಪನ ಮಾತಿಗೆ
ಏಕಪ್ಪಾ? ಈ ದಿನ ಈ‌ ರೀತಿ ದಿಢೀರ್ ನಿರ್ಧಾರ ತೊಗೊಂಡೆ? ಮೊನ್ನೆ ನೀನೇ ಸ್ಟೇಷನ್ ಗೆ ಹೋಗಿ ಮಗನನ್ನು ಹುಡುಕಿಕೊಡಿ ಎಂದು ಇನ್ಸ್ ಪೆಕ್ಟರ್ ರವರಲ್ಲಿ ಕೇಳಿಬಂದಿದ್ದೀಯಾ ಎಂದು ಆಶಾ ಪ್ರಶ್ನಿಸಲು
ನಾನು ಹೋಗದೇ ಇದ್ದಿದ್ದರೆ ಬಹಳ‌ ಚೆನ್ನಾಗಿರುತ್ತಿತ್ತಮ್ಮಾ ಎಂದು ಕೋದಂಡರಾಮ್ ಹೇಳಲು
ಏನಾಯ್ತು ಸರಿಯಾಗಿ ಹೇಳಪ್ಪಾ ಎಂದು ನಿರಾಸೆಯಿಂದ ಕೇಳುತ್ತಾಳೆ

  • ಈ ಸಂಚಿಕೆಯಿಂದ ಕಂಡು ಬರುವ ಮುಖ್ಯ ಅಂಶವೇನೆಂದರೆ

ಎಷ್ಟೇ ಬೇರೆ ಕೆಲಸವಿದ್ದರೂ ಬಹು ಮುಖ್ಯವಾದ ಜೀವನಕ್ಕೆ ಅತ್ಯವಶ್ಯಕವಾಗಿ ಬೇಕಿರುವುದನ್ನು ಮರೆಯಲೇ ಬಾರದು. ಅಕಸ್ಮಾತ್ ಮರೆತು ಹೋದರೆ ಪುನಃ ಅವಕಾಶ‌ ಸಿಗುವುದಿಲ್ಲ. ಈ ಸಂಚಿಕೆಯಲ್ಲಿ ಅದೃಷ್ಟವಶಾತ್ ಆಶಾಳ ಸ್ನೇಹಿತೆ ಜ್ನಾಪಿಸಿದ್ದಕ್ಕೆ ಆಶಾ ಕರ್ತವ್ಯಕ್ಕೆ ಹಾಜರಾಗಲು ಅನುಕೂಲವಾಯ್ತು.

ಇಲ್ಲದೇ ಇದ್ದಿದ್ದರೆ ಆಶಾ‌ ಅವಕಾಶ‌ವಂಚಿತಳಾಗುತ್ತಿದ್ದಳು
ಕೆಲವೊಮ್ಮೆ ಮನದಲ್ಲಿ ಚಿಂತೆ ದುಃಖ ಮಡುಗಟ್ಟಿದ್ದಾಗ, ಯಾವುದಾದರೂ ಸಂತೋಷದ ವಿಚಾರ‌ ಕೇಳಿದರೆ ಸಂಕಟದಲ್ಲೂ ಖುಷಿಯೆಂಬುದು ಮಿಂಚಿ ಮರೆಯಾಗುತ್ತದೆ. ಸಂತೋಷಕ್ಕೆ ದುಃಖವನ್ನು ಅಳಿಸುವ ಶಕ್ತಿಯಿಲ್ಲ. ಇದಕ್ಕೆ ವಿರುದ್ಧವೆಂಬಂತೆ ದುಃಖದ‌ ಸಮಾಚಾರವು ಮನುಷ್ಯನು ಎಷ್ಟೇ ಸಂತೋಷದಿಂದ್ದರೂ ಕೂಡಾ ಒಂದು ಕ್ಷಣದಲ್ಲೇ ಮರೆಯಾಗಿಸುತ್ತದೆ.

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ -10

ಹಿಂದಿನ ಸಂಚಿಕೆಯಲ್ಲಿ

ನಿಮ್ಮಣ್ಣನ ಹುಡುಕುವಿಕೆಯನ್ನು ಬಿಟ್ಟು ಬಿಡಬೇಕೆಂದು ಆಶಾಳ‌ ಅಪ್ಪ ವಿಷಾದದಿಂದ ಹೇಳಿದಾಗ
ದಿಢೀರೆಂದು ಏಕೆ ಈ ರೀತಿ ನಿರ್ಧಾರ ತೆಗೆದುಕೊಂಡ್ರಿ ಎಂದು ಆಶಾ ಳ ಪ್ರಶ್ನೆಗೆ
ನಾನು ಪೋಲೀಸ್ ಸ್ಟೇಷನ್ ಗೆ ಹೋಗಬಾರದಿತ್ತೆಂದು ಪಶ್ಚಾತ್ತಾಪ ಪಡುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ನಿಮ್ಮಣ್ಣನನ್ನು ಹುಡುಕುವುದನ್ನು ಬಿಟ್ಟು ಬಿಡಬೇಕೆಂಬ ಅಪ್ಪನ ನಿರ್ಧಾರಕ್ಕೆ ಆಶಾ‌ ಕಂಗಾಲಾಗಿ, ಏಕಪ್ಪಾ ಇಂತಹ‌ ದಿಡೀರ್ ನಿರ್ಧಾರ‌ ತೆಗೆದುಕೊಂಡ್ರಿ ಎಂದು ಆಶಾ‌ ಕೇಳಲು
ನಾನು ಸ್ಟೇಷನ್ ಗೆ ಹೋಗದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತಮ್ಮ ಎಂದು ಅವಳಪ್ಪ ಹೇಳಲು
ಅಂತಾದ್ದು ಏನಾಯಿತಪ್ಪಾ ಎಂಬ ಆಶಾ ಪ್ರಶ್ನೆಗೆ,
ನಾನು ಸ್ಟೇಷನ್ ಗೆ ಹೋಗಿ ಬಂದ ನಂತರ ಇನ್ಸ್ ಪೆಕ್ಟರ್ ರವರು ನಾನು ಇಪ್ಪತ್ತೈದು ವರ್ಷಗಳ ಹಿಂದೆ ಕಂಪ್ಲೇಂಟ್ ನೀಡಿದ್ದ, ಫೈಲನ್ನು ತೆಗೆಸಿ ನೋಡಿದರಂತಮ್ಮಾ ಎನ್ನುತ್ತಾ ಒಂದು ಕ್ಷಣ ಮೌನವಾಗಲು
ಆ ಪೈಲಿನಲ್ಲಿ ಏನಿತ್ತಂತೆ ಹೇಳಪ್ಪಾ ಎಂಬ ಆಶಾ‌ ಪ್ರಶ್ನೆಗೆ,
ನಿಮ್ಮಣ್ಣ ಚಿಕ್ಕಂದಿನಲ್ಲೇ ಇರುವಾಗ,,,,,,
ಇರುವಾಗ ಏನಾಯ್ತಂತೆ ಎಂದು ಪುನಃ ಆಶಾ ಕೇಳಲು
ಏನೂಂತ ಹೇಳಲಮ್ಮಾ? ನಿಮ್ಮಣ್ಣ ಕಾಣೆಯಾಗಿದ್ದ ಪೈಲಿನಲ್ಲಿ ಒಂದು ಪೇಪರ್ ಇತ್ತು, ಆ ಪೇಪರಿನಲ್ಲಿ, ಐದು ವರ್ಷದ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಮೃತನಾದನೆಂದು ಇತ್ತಂತೆ ಕಣಮ್ಮಾ , ಆ ಪೇಪರಿನಲ್ಲಿದ್ದ ಫೋಟೋ ನಿಮ್ಮಣ್ಣನ ಫೋಟೋದಂತೆ ಇತ್ತಂತೆ, ಈ ಬಗ್ಗೆ ಪೇಪರಿನಲ್ಲಿಯೂ ಪ್ರಕಟಿಸಿದ್ದರಂತೆ, ಯಾರೂ ಬರದೇ ಇದ್ದದ್ದಕ್ಕೆ ಅನಾಥ‌ ಶವವೆಂದು ತೀರ್ಮಾನಿಸಿ, ಅವರೇ ಸಂಸ್ಕಾರ ಮಾಡಿದರಂತೆ, ನಂತರ ಕಾಣೆಯಾಗಿರುವವರ ಬಗ್ಗೆ ಕಂಪ್ಲೇಂಟ್‌ ಫೈಲ್ ನೋಡಿದಾಗ ನಿಮ್ಮಣ್ಣನ ಫೈಲ್ ಸಿಕ್ಕಿತಂತೆ. ಅದಕ್ಕೆ ನಿಮ್ಮಣ್ಣನೇ ಮೃತನಾಗಿರುವನೆಂದು ತೀರ್ಮಾನಿಸಿ ಆ ಫೈಲ್ ಕ್ಲೋಸ್‌ ಮಾಡಿಬಿಟ್ಟಿದ್ದಾರೆಂದು ಇನ್ಸ್‌ ಪೆಕ್ಟರ್ ಹೇಳಿದ್ರು ಎಂದಾಗ
ಅಪ್ಪಾ ಅದು ಹೇಗೆ ಸಾಧ್ಯನಪ್ಪಾ? ನಿನ್ನ ಬಗ್ಗೆ ಸಂಬಂಧಿಸಿದ ಶಾಲೆಯಲ್ಲಿ ವಿಚಾರಿಸಿದ್ದರೆ ಆಗುತಿತ್ತಲ್ಲವಾ ಎಂದು ಆಶಾ ಪ್ಪಶ್ನಿಸಲು.
ಹೌದಮ್ಮಾ ಆದರೇನು ಮಾಡೋದು ನಾನು ಮನೆಯ ವಿಳಾಸ‌ ಕೊಟ್ಟಿದ್ದೆ,ಶಾಲೆಯ ವಿಳಾಸ‌ ಕೊಟ್ಟಿರಲಿಲ್ಲ. ಮನೆಯ‌ ವಿಳಾಸಕ್ಕೆ ಬಂದು ವಿಚಾರಿಸಿದ್ದರಂತೆ,ಮನೆಯನ್ನು ನಮಗೆ ಮಾರಾಟ‌ ಮಾಡಿ ಎಲ್ಲಿ ಹೇದರೋ ಗೊತ್ತಿಲ್ಲವೆಂದು ಹೇಳಿರಬಹುದು, ಅದಕ್ಕೆ ಆ ಮಗುವಿಗೆ ಆಕ್ಸಿಡೆಂಟ್ ಆದಾಗ ಮುಖ ಬಿಟ್ಟು ದೇಹ ,,,,, ,,,ಬೇಡ ಬಿಡಮ್ಮಾ ಹೇಳುವುದಕ್ಕೆ ತುಂಬಾ ಸಂಕಟವಾಗುತ್ತದೆ ಎನ್ನುತ್ತಾರೆ. ಮುಖ ಇದ್ದಿದ್ದಕ್ಕೆ ಗುರುತು ಹಿಡಿಯಲು ಯಾರಾದರೂ ಬರುತ್ತಾರೆ ಎಂದುಕೊಂಡು ಪೇಪರಿನಲ್ಲಿ ಅನೌನ್ಸ್‌ ಮಾಡಿಸಿದ್ದರಂತೆ ನಾವು ಅದನ್ನು ನೋಡುವುದಕ್ಕೆ ಹೋಗಲಿಲ್ಲ. ಅದಕ್ಕೆ ಅವರೇ ಕರ್ಮ ಮುಗಿಸಿದರಂತೆ‌ ಎನ್ನುವಾಗ ಕೋದಂಡರಾಮ್ ರವರ ಕಣ್ಣು ತೇವವಾಗಿದ್ದು, ಕರ್ಚೀಪಿನಿಂದ ಕಣ್ಣೊರೆಸಿಕೊಂಡು ಕುಳಿತಾಗ
ಅಪ್ಪಾ ನನಗೆ ಇದರಲ್ಲಿ ನಂಬಿಕೆ ಇಲ್ಲಪ್ಪಾ, ನಮ್ಮಣ್ಣ ಬದುಕಿದ್ದಾನೆ ಎನ್ನುವುದೇ ದೃಢವಾದ ನಂಬಿಕೆ ಇದೊ ಎಂದು ಆಶಾ ಹೇಳಲು
ನಿನ್ನ ನಂಬಿಕೆ ನಿಜವಾಗಲಿ ಮಗಳೇ, ಮೃತನಾದ‌ ಹುಡುಗ ಬೇರೆ ಯಾರೋ ಆಗಿದ್ದು, ನೀನು ಪಡುತ್ತಿರುವ ಶ್ರಮಕ್ಕೆ ನಿಮ್ಮಣ್ಣ ಮನೆಗೆ ವಾಪಸ್ ಬರಲಿ ಎನ್ನುತ್ತಾರೆ.
ಅಪ್ಪಾ ಪ್ರಪಂಚವು ಎಷ್ಟೇ ವಿಶಾಲವಾಗಿದ್ದರೂ ಈಗಿನ ಡಿಜಿಟಲ್‌ ಟೆಕ್ನಾಲಜಿಯಲ್ಲಿ ಕ್ಷಣ ಮಾತ್ರದಲ್ಲಿ ಸುದ್ದಿಗಳು ಹರಡುತ್ತವೆ. ನಮ್ಮಣ್ಣ ಎಲ್ಲಿದ್ದರೂ ಬಂದೇ ಬರುತ್ತಾನೆ. ನಮ್ಮ ಪ್ರಯತ್ನವನ್ನು ಮುಂದುವರೆಸುತ್ತೇನೆ. ಬದುಕಿದ್ದರೆ ಬಂದೇ ಬರುತ್ತಾನೆ. ಸ್ಟೇಷನ್ ನಲ್ಲಿ ತಿಳಿಸಿರುವಂತೆ ಏನಾದರೂ ಆಗಿದ್ದರೆ ಏನೂ ಮಾಡುವುದಕ್ಕೆ ಆಗುವುದಿಲ್ಲವೆಂದು ಹೇಳಿ, ಕೆನ್ನೆಯ ಮೇಲೆ ಬರುತ್ತಿದ್ದ‌ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಅಪ್ಪಾ ಈ ವಿಷಯ ಅಮ್ಮನಿಗೆ ಹೇಳಬೇಡಪ್ಪಾ , ಈ ವಿಚಾರ ಕೇಳಿದರೆ ಬಹಳವಾಗಿ ನೊಂದುಕೊಳ್ಳುತ್ತಾಳೆ ಎಂಬ ಆಶಾ ಮಾತಿಗೆ,
ಛೇ,,,ಛೇ,,,ಛೇ ,,,ಎಲ್ಲಾದರೂ ಉಂಟಾ ನಾವು ಕಂಡಿಲ್ಲ‌ ಕೇಳಿಲ್ಲ ಇದು ಸುಳ್ಳೋ ನಿಜವೋ ಗೊತ್ತಿಲ್ಲ, ಯಾರ ಮಗುವೋ ಏನೋ? ಅದನ್ನು ನಿನ್ನ ಮಗ ಎಂದು ಹೇಳಿ ನಿಮ್ಮಮ್ಮನನ್ನು ದುಃಖದ ಮಡುವಿನಲ್ಲಿ ಮುಳುಗಿಸಲಾ? ಖಂಡಿತಾ ನಾನು ಹೇಳುವುದಿಲ್ಲ ನೀನೂ ಹೇಳಬೇಡಾ ಮಗ ಯಾವತ್ತಾದರೂ ಬರುತ್ತಾನೆಂಬ ಅಭಿಲಾಶೆ ಅವಳ ಮನಸ್ಸಿನಲ್ಲೇ ಇರಲಿ ಎನ್ನುತ್ತಾರೆ.
ಓ ಕೆ ಅಪ್ಪಾ ಎಂದು ಹೇಳಿ ಆಶಾ ರೂಮಿಗೆ ಹೋಗಿ ತನ್ನ ಪ್ರಿಯತಮ ವಿಕ್ರಮ್ ಗೆ ಈ ವಿಚಾರವನ್ನು ಹೇಳಿದಾಗ
ನೋ ನೋ ನಾನೂ ಇದನ್ನು ನಂಬುವುದಿಲ್ಲ ಆಶಾ, ಯಾವತ್ತೂ ಹೆತ್ತಕರುಳಿಗೆ ಮೋಸವಾಗುವುದಿಲ್ಲ. ಆಕ್ಸಿಡೆಂಟಾಗಿ ನಿಮ್ಮಣ್ಣ ನೇ ಏನಾದರೂ ಮೃತರಾಗಿದ್ದರೆ, ಹೆತ್ತ ಕರುಳಿಗೆ ಹೇಗೋ ತಿಳಿದೇ ತಿಳಿಯುತ್ತಿತ್ತು, ಈ ರೀತಿಯಾಗಲು ಸಾಧ್ಯವೇ ಇಲ್ಲವೆಂದು ವಿಕ್ರಮ್ ಹೇಳಲು
ಹಾಗಾದರೆ ನಮ್ಮಣ್ಣ ಬದುಕಿದ್ದಾನೆಂದು ಹೇಳುತ್ತಿದ್ದೀಯಾ ಎಂದು ಆಶಾಳು ಆಶಾಭಾವನೆಯಿಂದ ಕೇಳಲು
ಹೌದು ಆಶಾ, ನಮ್ಮ ಪ್ರಯತ್ನ ನಾವು ಮುಂದುವರೆಸೋಣ ವೆನ್ನುತ್ತಾನೆ
ಥ್ಯಾಂಕ್ಸ್ ವಿಕ್ರಮ್ ನಿನ್ನ ಸ್ನೇಹ ಮಾಡಿದ್ದಕ್ಕೂ ಸಾರ್ಥಕವಾಯ್ತು ಎಂದು ಆಶಾ ನುಡಿದಾಗ
ಸ್ನೇಹ ಮಾತ್ರ ಅಷ್ಟೇನಾ ಅಥವಾ ,,,,,,, ಎಂದು ವಿಕ್ರಮ್ ರಾಗ ಎಳೆದಾಗ
ಸ್ನೇಹವಾಗಿ ಪ್ರೀತಿಮಾಡಿದ್ದಕ್ಕೆ ಎಂಬ ಆಶಾಳ ಮಾತಿಗೆ
ಒಕೇ ಥ್ಯಾಂಕ್ಸ್ ಆಶಾ ಎಂದು ಹೇಳಿ ವಿಕ್ರಮ್ ಫೋನ್ ಕಟ್ ಮಾಡುತ್ತಾನೆ.

ಹಲವಾರು ತಿಂಗಳಾದರೂ ಆಶಳ ಅಣ್ಣನ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ. ತನ್ನಣ್ಣನನ್ನು ಹುಡುಕಲು ಹೋದ ಹೊಸದರಲ್ಲಿ, ಮೊಬೈಲ್ ರಿಂಗ್ ಆದ ತಕ್ಷಣ ಓ ನಮ್ಮಣ್ಣನ ಬಗ್ಗೆ ಏನಾದರೂ ಇನ್ಫರ್ಮೇಷನ್ ಬಂದಿದೆಯಾ ಎಂದು ಆಸೆಯಿಂದ ಫೋನ್ ರಿಸೀವ್ ಮಾಡುತ್ತಿದ್ದ ಆಶಾ‌ ಬರು ಬರುತ್ತಾ ಅದರಲ್ಲಿ ವಿಶ್ವಾಸವನ್ನೇ ಕಳೆದುಕೊಂಡಿರುತ್ತಾಳೆ. ಆಶಾ ಹಾಗೂ ಅವಳಪ್ಪ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ.
ಆಶಾ ಕೆಲಸಕ್ಕೆಂದು ಕಂಪೆನಿಗೆ ಹೋದರೆ, ಕೋದಂಡರಾಮ್ ರವರು ಶಾಲೆಗೆ ಹೋಗಿ ಮಕ್ಕಳಿಗೆ ಪಾಠ‌ ಹೇಳಿಕೊಡುವುದರಲ್ಲಿ ತಲ್ಲೀನರಾಗಿರುತ್ತಾರೆ.

ಹೀಗಿರುವಾಗ ಒಂದು ದಿನ ಕೋದಂಡರಾಮ್ ರವರು ಸ್ಕೂಲ್ ಮುಗಿಸಿಕೊಂಡು ಮನೆಗೆ ಬಂದು ಫ್ರೆಶ್ ಅಪ್ ಆಗಿ ನಡುಮನೆಯ ಸೋಫಾ ಮೇಲೆ ಕುಳಿತುಕೊಂಡ ನಂತರ
ಅವರ ಪತ್ನಿ ಕಾಫಿಯನ್ನು ತಂದು ಕೊಡುತ್ತಾ ರೀ ಈ ಕಡೆ ನಮ್ಮ ಮಗನೂ ಸಿಗಲಿಲ್ಲ ಮಗಳ ಮದುವೆಯನ್ನೂ ಮಾಡಲು ಪ್ಪಯತ್ನಿಸುತ್ತಿಲ್ಲ ಎಂದು ಹೇಳಿದಾಗ
ನಾನೇನು ಮಾಡಲಿ? ನಮ್ಮಣ್ಣ ಸಿಗುವವರೆಗೂ ಮದುನೆಯಾಗುವುದಿಲ್ಲವೆಂದು ಮಗಳು ಹಠ‌ ಹಿಡಿದಿದ್ದಾಳೆ ಎಂದು ತಮ್ಮ ಅಸಹಾಯಕತೆಯ ಅವರ ಪತಿಯ ಮಾತಿಗೆ
ಮಗನನ್ನು ಹುಡುಕಲು ಪ್ರಯತ್ನಿಸಿ ಸುಮಾರು ತಿಂಗಳುಗಳೇ ಕಳೆದು ಹೋದವು, ಅವನು ಬದುಕಿದ್ದರೆ ಖಂಡಿತ ಸಿಗುತ್ತಿದ್ದ, ಇನ್ಸ್ ಪೆಕ್ಟರ್ ಹೇಳಿದಂತೆ ಆಕ್ಸಿಡೆಂಟಾಗಿ ಮೃತನಾಗಿರುವವನು ನಮ್ಮ ಮಗನೇ ಇರಬೇಕ್ರೀ ಎನ್ನುತ್ತಾ ಗಳ‌ ಗಳನೆ ಅತ್ತಾಗ
ಲೇ ನಿನಗೆ ಈ ವಿಚಾರ ಯಾರು ಹೇಳಿದ್ರು? ಎಲ್ಲಾ ಸುಳ್ಳು ಕಣೇ ಎಂದು ಕೋದಂಡರಾಮ್ ಸಮಾಧಾನ ಮಾಡಲು ಹೋದಾಗ
ಆದಿನ ನೀವು ಮಗಳು ಮಾತನಾಡುತ್ತಿರುವುದನ್ನು ಕೇಳಿಸಿಕೊಂಡೆ ರೀ,ನನಗೆಲ್ಲಾ ವಿಷಯ ತಿಳಿದಿದೆ. ನಾನು ದುಃಖಿಸುತ್ತೇನೆ ನನಗೆ ಹೇಳಬಾರದೆಂದು ಇಬ್ಬರೂ ನಿಶ್ಚಯಿಸಿರುವುದೂ ಕೂಡಾ ತಿಳಿದಿದೆ. ಎಂದಾಗ, ಹಾಳಾದ್ದು ಯಾವ ವಿಷಯ ಹೇಳಬಾರದೆಂದು ಮುಚ್ಚಿಡಲು ಪ್ಪಯತ್ನಿಸುತ್ತೇವೋ ಅದೇ ವಿಷಯವೇ ವೈರಲ್ ಆಗಿರುತ್ತದೆ, ನೋಡು ಇದನ್ನು ನೀನು ನಂಬಬೇಡ ನಮ್ಮ ಮಗನು ಬದುಕಿದ್ದಾನೆ ಖಂಡಿತ‌ ಇಂದಲ್ಲಾ ನಾಳೆ ಬಂದೇ ಬರುತ್ತಾನೆ ಯೋಚಿಸಬೇಡವೆಂದಾಗ
ಯಾವಾಗ‌ ಬರುತ್ತಾನೋ ಬರಲಿ, ಅಲ್ಲಿಯವರೆಗೆ ಮನೆಯಲ್ಲಿ ನಡೆಯಬೇಕಾದ ಕೆಲಸಗಳನ್ನು ಮುಂದೂಡುವುದು ಸರಿಯಲ್ಲಾ‌ ರೀ. ಯಾವುದಾದರೂ ಗಂಡನ್ನು ನೋಡಿ ಮಗಳ‌ ಮದುವೆ ಮುಗಿಸಿ, ಮಗ ಯಾವಾಗ ಬೇಕಾದರೂ ಬರಬಹುದು, ಆದರೆ ಮಗಳ‌ ವಯಸ್ಸು ನಿಲ್ಲುತ್ತದಾ‌ ಅಥವಾ ನಮ್ಮ ಆಯಸ್ಸು ಹೆಚ್ಚುತ್ತದಾ? ನಾವು ಬದುಕಿರುವಾಗಲೇ ನಮ್ಮ ಮುಂದೆ ಮಗಳ‌ ಮದುವೆ ಮಾಡಿ ಮುಗಿಸಿದರೆ ಒಂದು ಚಿಂತೆಯಿಂದ ಹೊರಗೆ ಬರಬಹುದು, ನಂತರ ಮಗ ಬರುತ್ತಾನೆಂಬ ಆಸೆಗಣ್ಣಿನಿಂದಲೇ ನೋಡುತ್ತಾ, ಆಯಸ್ಸು ಮುಗಿದ ಮೇಲೆ ಹೋದರೆ ಯಾವ ಚಿಂತೆಯೂ ಇರುವುದಿಲ್ಲವೆಂದಾಗ
ನನಗಿಂತ ಹೆಚ್ಚಾಗಿ ಜೀವನದ ಬಗ್ಗೆ ಹೇಳುತ್ತಿದ್ದೀಯಲ್ಲಾ ಇದನ್ನೆಲ್ಲಾ‌ ಯಾರು ಹೇಳಿಕೊಟ್ಟರೆಂದು ಕೋದಂಡರಾಮ್ ಕೇಳಲು
ಇದನ್ನು ಯಾರು ಹೇಳಿಕೊಡಲು ಬರುತ್ತಾರೆ? ಜೀವನ ಸಾಗುತ್ತಿರುವಂತೆ ಅನುಭವ ತಾನಾಗಿ ಬರುತ್ತದೆ. ಜೊತೆಗೆ ಪುಸ್ತಕಗಳನ್ನು ಓದುವುದರಿಂದ ಜ್ಞಾನ ತನ್ನಷ್ಟಕ್ಕೇ ತಾನೇ ಹೆಚ್ಚಾಗುತ್ತದೆ ಇದನ್ನು ಒಬ್ಬ ನುರಿತ ಅನುಭವಿ ಶಿಕ್ಷಕರಿಗೆ ಹೇಳಬೇಕಾ‌? ಎನ್ನುತ್ತಾ ಈಗ‌ ಸುಮ್ಮನೆ ಮಾತುಬೇಡ ಮಗಳಿಗೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡುವುದನ್ನು ಕಲಿಯಿರಿ ಎಂದು ಹೇಳಿ ಅವರ ಪತ್ನಿ ಒಳಗೆ ಹೋಗುತ್ತಾರೆ.

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ‌ ಅಂಶವೇನೆಂದರೆ

ಒಂದೊಂದು ಸಲ‌ ಮನಸ್ಸಿನ ಬಲನಾದ‌ ನಂಬಿಕೆಯಿದ್ದಾಗ ಬೇರೆ ಯಾರು ಏನೇ ಹೇಳಿದರೂ ಕೇಳಲು ತಯಾರಿರುವುದಿಲ್ಲ. ಇದು ಆಶಾಳಿಗೆ ಅವಳಪ್ಪ ಇನ್ಸ್ ಪೆಕ್ಟರ್ ಹೇಳಿದರೆಂದರೂ ಕೂಡಾ ಆಶಾ ತನ್ನ ನಂಬಿಕೆಯಿಂದ ಹಿಂದೆ ಸರಿಯುವುದಿಲ್ಲ

ಯಾವುದಾದರೂ ಹೊಸ‌ ವಿಷಯವಾಗಲೀ ಕೆಲಸವಾಗಲೀ ಆರಂಭಿಸಿದಾಗ ಇರುವ‌ ಕುತೂಹಲ‌ ಆ ಕೆಲಸ ಬೇಗ ಮುಗಿದು ಒಳ್ಳೆಯ ರಿಸಲ್ಟ್ ಬಂದರಂತೂ ಡಬಲ್ ಖುಷಿಯಾಗಿರುತ್ತದೆ.
ಕೆಲಸವಾಗುವುದು ತಡನಾಗುತ್ತಾ ಹೋದಷ್ಟೂ ಅದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ. ಹತ್ತರಲ್ಲಿ ಹನ್ನೊಂದು ಎನ್ಮುವ ರೀತಿಯಲ್ಲಿ ಜೀವನದ ಜೊತೆಗೆ ಅದೊಂದು ವಿಷಯ ಸೇರಿಕೊಂಡಂತಾಗಿರುತ್ತದೆ. ಇಲ್ಲಿ ಆಶಾಳ ಅಣ್ಣನನ್ನು ಹುಡುಕುವ ರೀತಿಯೂ ಅದೇ ಆಗಿದೆ.

ಮುಖ್ಯವಾದ ವಿಚಾರವಾಗಿದ್ದರೆ ಅಯ್ಯೋ ಇನ್ನೂ ಕೆಲಸವಾಗಿಲ್ಲವಲ್ಲಾ ಎಂದು ಮನಸ್ಸಿನಲ್ಲಿ ತಳಮಳ ಉಂಟಾಗುತ್ತಿದ್ದರೂ ಏನೂ ಮಾಡದ‌ ಅಸಹಾಯಕತ ಪರಿಸ್ಥಿತಿ ಉಂಟಾಗುತ್ತದೆ. ಬಹಳ ತಡವಾಗಿ ಕೆಲಸವಾದರೆ ಅಬ್ಬಾ ಆಯ್ತಪ್ಪಾ ಎಂದು ನಿಟ್ಟುಸಿರು ಬಿಡಬಹುದು. ಬೇಗ ಮುಗಿದಾಗ ಇರುವಷ್ಟು ಖುಷಿ ಇರುವುದಿಲ್ಲ. ಆದರೆ ಕಳೆದುಹೋಗಿದ್ದ‌ ತಮ್ಮವರಾಗಲೀ ಅತೀ ಬೆಲೆಬಾಳುವ ‌ವಸ್ತುಗಳಾಗಲೀ ಎಷ್ಟೇ ದಿನವಾದ ನಂತರವೂ ಸಿಕ್ಕಿದರೆ ಮಾತ್ರ ಖುಷಿ ಎಂದಿಗೂ ಕಡಿಮೆಯಾಗುವುದಿಲ್ಲ.

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ -11

ಹಿಂದಿನ ಸಂಚಿಕೆಯಲ್ಲಿ

ಮಗಳ‌ಿಗೆ ಗಂಡು ನೋಡಿ ಮದುವೆ ಮಾಡಲು ವ್ಯವಸ್ಥೆ‌ ಮಾಡಿ ಮಗ ಯಾವತ್ತಾದರೂ ಬರುತ್ತಾನೆಂಬ ತನ್ನ ಪತ್ನಿಯ ಮಾತಿಗೆ ಕೋದಂಡರಾಮ್ ಸಮ್ಮತಿ ಸೂಚಿಸುತ್ತಾರೆ.

  • ಕಥೆಯನ್ನು ಮುಂದುವರೆಸುತ್ತಾ

ತನ್ನ ಪತ್ನಿಯ ಮಾತಿನಂತೆ ಕೋದಂಡರಾಮ್ ರವರು ಮಗಳಿಗೆ ಸೂಕ್ತವಾದ ವರನನ್ನು ಹುಡುಕಲು ಪ್ರಯತ್ನಿಸಿದ್ದು, ತಮ್ಮ ಕೆಲವು ಸ್ನೇಹಿತರಿಗೆ ಮಗಳ ಮದುವೆ ಮಾಡುವ ವಿಷಯ ತಿಳಿಸಿದಾಗ
ನಿಮ್ಮ ಮಗಳಿಗೇನು ಬಿಡಪ್ಪಾ ಕರ್ಪೂರದ ಗೊಂಬೆಯಂತೆ ಇದ್ದಾಳೆ, ಯೋಚನೆಯಿಲ್ಲದೆ‌ ಒಳ್ಳೆಯ ಶ್ರೀಮಂತನಾದ ವರ ಸಿಗುತ್ತಾನೆಂದು ಅವರ ಸ್ನೇಹಿತರ ಮಾತಿಗೆ
ನಾವು ಶ್ರೀಮಂತಿಕೆ ಇಟ್ಟುಕೊಂಡು ಆಕಾಶದಲ್ಲೇ ಹಾರಾಡಬೇಕಾ? ನನ್ನ ಮಗಳಿಗೆ ಒಳ್ಳೆಯ ಮನೆ ಸಿಕ್ಕಿ, ನೆಮ್ಮದಿಯಿಂದ ಜೀವನ ನಡೆಸಿಕೊಂಡು ಹೋದರೆ ಸಾಕು. ನೆಮ್ಮದಿಯಿಲ್ಲದ‌ ಶ್ರೀಮಂತಿಕೆ ಯಾರಿಗೆ ಬೇಕು? ಅವಳ‌ ಅದೃಷ್ಟ‌ದಂತೆ ಮನೆ ಸಿಗಲಿ ಎಂದು ಕೋದಂಡರಾಮ್ ಹೇಳುತ್ತಾರೆ.
ಆಗಬಹುದು ಕೋದಂಡರಾಮ್ ನಮಗೆ ತಿಳಿದಿರುವ ಹುಡುಗನನ್ನು ಹೇಳುತ್ತೇವೆ ಎಂದು ಅವರ ಸ್ನೇಹಿತರು ಹೇಳಿದಾಗ
ಆದಷ್ಟೂ ಬೇಗ ನೋಡಿ ಎಂದು ಹೇಳಿ ಕೋದಂಡರಾಮ್ ಪೋನ್ ಕಟ್ ಮಾಡುತ್ತಾರೆ

ಎರಡು ದಿನಗಳ ನಂತರ ಆಶಾ ಹಾಗೂ ಅವಳಪ್ಪ ಕೋದಂಡರಾಮ್ ರವರು ರಾತ್ರಿ ಊಟ ಮಾಡುತ್ತಿರುವಾಗ
ಕೋದಂಡರಾಮ್ ರವರು ಮಾತನಾಡಿ, ಮಗಳೇ ಒಳ್ಳೆಯ ಸಂಬಂಧ ಬಂದಿದೆ. ನೀನು ಒಪ್ಪಿದರೆ ಹುಡುಗನನ್ನು ಕರೆಸುತ್ತೇನೆ. ನಿನಗೆ ಒಪ್ಪಿಗೆಯಾದರೆ ಮದುವೆಯ ಮಾತುಕತೆ ಮುಂದುವರೆಸೋಣವಾ ಎಂಬ ಅವಳಪ್ಪನ ಪ್ರಶ್ನೆಗೆ
ಅಪ್ಪಾ ಬೆಳಿಗ್ಗೆ ತರಾತುರಿಯಲ್ಲಿ ತಿಂಡಿ ತಿಂದು ಅದನ್ನೇ ಬಾಕ್ಸ್‌ಗೆ ಹಾಕಿಕೊಂಡು ಹೋಗಿ ಕಂಪೆನಿಯಲ್ಲೂ ಅದನ್ನೇ ತಿಂದು ಬಂದಿರುತ್ತೇನೆ. ರಾತ್ರಿ ಬಂದು ಫ್ರೆಶ್ ಆಗಿ ಊಟ‌ ಮಾಡೋಣವೆಂದು ಕುಳಿತಾಗ ನೀನು ಈ ರೀತಿ ಕಿರಿಕಿರಿ ಮಾಡಿದರೇನು ಮಾಡಲಿ? ಅರ್ಧಕ್ಕೆ ಊಟ ಬಿಟ್ಟು ಹೋಗಲಾ? ಎಂದು ಆಶಾ ಖಾರವಾಗಿ ಪ್ರಶ್ನಿಸಿದಾಗ
ಅಯ್ಯಯ್ಯೋ ಹಾಗೆಲ್ಲಾ ಮಾಡಬೇಡಮ್ಮಾ, ನಿನ್ನ ಬಳಿ ಮಾತನಾಡಲು ನನಗೆ ಯಾವಾಗ ಟೈಮ್ ಸಿಗುತ್ತದೆ? ಊಟಕ್ಕೆ ಕುಳಿತಾಗ ಎರಡು ಮಾತನಾಡಲು ಅವಕಾಶ‌ ಸಿಗುತ್ತದೆ.‌ ಉಳಿದಂತೆ ನೀನು ನಿನ್ನ ಕೆಲಸದಲ್ಲಿ ಮಗ್ನಳಾಗಿರುತ್ತೀಯಾ ಎಂದು ಅವಳಪ್ಪ ಹೇಳಲು
ಅಪ್ಪಾ ಮದುವೆ ವಿಚಾರ ಬಿಟ್ಟು ಬೇರೆ ಮಾತನಾಡಿದರೆ ನಾನೂ‌ ಕೇಳುತ್ತೇನೆ ಎಂದು ಆಶಾಳ ಮಾತಿಗೆ
ವಯಸ್ಸು ಬರಬರುತ್ತಾ ಜಾಸ್ತಿಯಾಗುತ್ತದೆ ವಿನಾ ಕಡಿಮೆಯಾಗುತ್ತದೇನಮ್ಮಾ ಎಂದು ಅವಳಮ್ಮ ನುಡಿದಾಗ
ಅಣ್ಣ ಸಿಗುವವರೆಗೂ ನಾನು ಮದುವೆಯಾಗಲ್ಲವೆಂದು ಅಪ್ಪನಿಗೆ ಹೇಳಿದ್ದೇನಮ್ಮಾ ಎಂಬ ಆಶಾಳ ಮಾತಿಗೆ
ಮದುವೆಯಾದ ನಂತರವೂ ಅಣ್ಣನನ್ನು ಹುಡುಕುವ ಕೆಲಸ‌ ಮುಂದುವರೆಸಬಹುದಲ್ಲಮ್ಮಾ ಎಂದು ಅವಳಪ್ಪ ನುಡಿಯಲು
ಒಟ್ಟಿನಲ್ಲಿ ನಾನು ಈ ಮನೆಯಲ್ಲಿರುವುದು ನಿಮಗೆ ಇಷ್ಟವಿಲ್ಲ ಬೇಗ ತೊಲಗಿಸಿದರೆ ನಿಮಗೆ ನೆಮ್ಮದಿ ಅಲ್ಲವೇನಪ್ಪಾ ಎನ್ನುತ್ತಾ, ಅರ್ಧಕ್ಕೇ ಊಟ ಬಿಟ್ಟು ಕೈ ತೊಳೆಯಲು ಹೋಗುತ್ತಾಳೆ
ಛೇ ನಾನು ಮದುವೆಯ ಪ್ರಸ್ತಾಪ ಮಾಡಬಾರದಿತ್ತು, ಮಗಳ ಅನ್ನಕ್ಕೆ ಕಂಟಕನಾದೆ ಎಂದು ಆಶಾಳ ಅಪ್ಪನು ವಿಷಾಧಿಸಿದಾಗ
ಕೋಪಿಸಿಕೊಳ್ಳುತ್ತಾಳೆಂದು ಸುಮ್ಮನಿದ್ದರೆ ಮಗಳ‌ ಮದುವೆ ಹೇಗೆ ಮಾಡುತ್ತೀರಿ ಎಂದು ಅವರ ಪತ್ನಿಯ ಮಾತಿಗೆ
ಊಟ ಮಾಡುವಾಗ ಪ್ರಸ್ತಾಪಿಸಬಾರದಿತ್ತು ಎನಿಸುತ್ತದೆಂದು ಕೋದಂಡರಾಮ್ ಹೇಳುತ್ತಾರೆ.
ನೀವು ಈಗ ಪ್ರಸ್ತಾಪಿಸಿದ್ದೇ ಸರಿಯಾಗಿದೆ. ಮಗಳು ಬಂದ ತಕ್ಷಣ ಏನೇನೋ ತಿಂಡಿ ತಿಂದಿದ್ದಳು ಹಸಿವಿರಲಿಲ್ಲ‌ ಇದೊಂದು ನೆಪ ಊಟ‌ಬಿಟ್ಟು ಹೋಗಿದ್ದಾಳೆ ಅಷ್ಟೇ ಎಂದು ಅವಳಮ್ಮನ ಮಾತಿಗೆ
ಆದರೂ ಅರ್ಧದಲ್ಲಿ ಊಟ‌ ಬಿಟ್ಟು ಹೋಗಿದ್ದು ಬೇಜಾರಾಗುತ್ತಿದೆ ಕಣೇ ಎನ್ನುತ್ತಾರೆ ಕೋದಂಡರಾಮ್
ಅಯ್ಯೋ ಮಕ್ಕಳು ಹಠ ಮಾಡುತ್ತಾರೆಂದು ಸ್ಕೂಲಿಗೆ ಕಳುಹಿಸದೆ ಸುಮ್ಮನೆ ಇರುವುದಕ್ಕೆ ಆಗುತ್ತದಾ? ಇದೂ ಹಾಗೆಯೇ ಮಗಳು ಹಠ ಮಾಡುತ್ತಾಳೆಂದು ಮದುವೆ ಮಾಡದೆ ಇರುವುದಕ್ಕೆ ಆಗುತ್ತದಾ? ಎರಡು ದಿನ ಹಾರಾಡುತ್ತಾಳೆ. ನಂತರ ನಮ್ಮ ದಾರಿಗೆ ಬರುತ್ತಾಳೆ ಬಿಡಿ ಅದಕ್ಕೇಕೆ ಯೋಚಿಸುತ್ತೀರಿ ಎಂದು ಅವರ ಪತ್ನಿ ನುಡಿಯಲು
ನೀವು ಬೇಜಾರು ಆಗುವುದು ಬೇಡ, ಮಗಳು ಮಲಗುವಾಗ ಒಂದು ದೊಡ್ಜ ಲೋಟದಲ್ಲಿ ಬಿಸಿ ಬಿಸಿ ಬಾದಾಮಿ ಹಾಲು ತೆಗೆದುಕೊಂಡು ಹೋಗಿ ಕೊಡುತ್ತೇನೆಂದು ಅವರ ಪತ್ನಿ ಹೇಳಿದಾಗ
ಮೊದಲು ಆ ಕೆಲಸ‌ ಮಾಡು ಎಂದು ಹೇಳಿ ಕೋದಂಡರಾಮರವರು ಕೈ ತೊಳೆಯಲು ಹೋಗುತ್ತಾರೆ

ರಾತ್ರಿ ಹತ್ತು ಗಂಟೆಗೆ ಆಶಾಳ ಅಮ್ಮನು ಒಂದು ಲೋಟ ಬಾದಾಮಿ ಹಾಲನ್ನು ತೆಗೆದುಕೊಂಡು ಆಶಾ ಆಶಾ ಎನ್ನುತ್ತಾ ಮಗಳ‌ ರೂಮಿಗೆ ಬಂದಾಗ
ರೂಮಿನಲ್ಲಿ ಕುಳಿತು ತನ್ನ ಮೊಬೈಲಿನಲ್ಲಿ ವಿಕ್ರಮ್ ನೊಂದಿಗೆ ಚಾಟ್‌ ಮಾಡುತ್ತಿದ್ದ ಆಶಾ ಸರ್ರನೆ ಮೊಬೈಲ್ ಆಫ್ ಮಾಡಿ, ಏನಮ್ಮಾ ನೀನು ನನ್ನ ತಲೆ ತಿನ್ನಲು ಇಲ್ಲಿಗೂ ಬಂದೆಯಾ? ಅಪ್ಪನು ಸರಿಯಾಗಿ ಊಟ ಮಾಡಲು ಬಿಡಲಿಲ್ಲ ಈಗ ನೀನು ನನ್ನ ನಿದ್ದೆ ಹಾಳು ಮಾಡಲು ಬಂದೆಯಾ ಎಂದು ಆಶಾ ಖಾರವಾಗಿ ಪ್ರಶ್ನಿಸಿದಾಗ
ಅಪ್ಪ ಅಮ್ಮ ಯಾವತ್ತೂ ಮಕ್ಕಳ ಊಟ ನಿದ್ದೆ ಹಾಳುಮಾಡುವುದಿಲ್ಲ. ನೀನಾಗೇ ಕೋಪಿಸಿಕೊಂಡು ಊಟ‌ ಬಿಟ್ಟು ಬಂದರೆ ಯಾರೇನು ಮಾಡಲಾಗುತ್ತದೆ. ಅಪ್ಪ ಏನಾದರೂ ಬೇರೆ ವಿಷಯ ಹೇಳಿದ್ರಾ? ಅಪ್ಪನ ಕರ್ತವ್ಯದ ಬಗ್ಗೆ ಹೇಳಿದ್ರು. ಅಷ್ಟಕ್ಕೇ ನೀನು ಕೋಪಿಸಿಕೊಂಡು ಊಟ‌ ಬಿಟ್ಟು ಬಂದರೆ ಏನು ಮಾಡೋದು? ಹೋಗಲೀ ಈಗ ಬಾದಾಮಿ ಹಾಲು ತಂದಿದ್ದೇನೆ ಕುಡಿದು ಮಲಗಿಕೋ ನಾನೇನು ನಿನ್ನ ತಲೆ‌ ತಿನ್ನಲು ಬಂದಿಲ್ಲವೆಂಬ ಅವಳಮ್ಮನ ಮಾತಿಗೆ
ಇದಕ್ಕೇನೂ ಕಡಿಮೆಯಿಲ್ಲ‌ ನನಗೆ ಏನೂ ಬೇಡಾ‌ ಹೋಗಮ್ಮಾ ಎಂದು ಆಶಾ ಕೋಪದಿಂದ ಹೇಳಲು.
ಆಶಾ ನಿಂದೇಕೋ ಅತಿಯಾಯ್ತು ಕಣೇ, ನಾನೇ ನಿಮ್ಮಪ್ಪನಿಗೆ ಮಗಳ‌ ಮದುವೆ ಮಾಡುವುದಿಲ್ಲವಾ ಎಂದು ಕೇಳಿದ್ದೆ ಅದಕ್ಕೆ ನಿನ್ನನ್ನು ಕೇಳಿದ್ಜು ತಪ್ಪಾ? ಹೇಳು ಎಂದು ಆಶಾಳ‌ ಅಮ್ಮನ ಮಾತಿಗೆ
ನೀನೆಲ್ಲಿ ನಿನ್ನ ಗಂಡನನ್ನು ಬಿಟ್ಟು ಕೊಡುತ್ತೀಯಾ ಅಲ್ಲವಾ? ಎಂದು ಆಶಾ ಅವಳಮ್ಮನನ್ನು ಛೇಡಿಸಿದಾಗ
ಅವರು ನಿನ್ನ ಅಪ್ಪ ಕಣೇ ಹಾಗೆಲ್ಲಾ ಹೇಳಬಾರದು ಎಂಬ ಅವಳಮ್ಮನ ಮಾತಿಗೆ
ಮೊದಲು ನಿನ್ನ ಗಂಡ ನಂತರ ನನಗೆ ಅಪ್ಪ ಅಲ್ಲವೇನಮ್ಮಾ ಎಂದು ಆಶಾ‌ ನುಡಿಯಲು
ಏಯ್ ನಿನ್ನ ತಲೆಹರಟೆ ಸಾಕು ಈಗ ತಂದಿರುವ ಬಾದಾಮಿ ಹಾಲನ್ನು ಬಿಸಿಯಾಗಿರುವಾಗಲೇ ಕುಡಿದು ಮಲಗಿಕೋ‌ ಬೆಳಿಗ್ಗೆ ನೋಡೋಣವೆಂದು ಹೇಳಿ ಅವಳಮ್ಮ ತನ್ನ ರೂಮಿಗೆ ಬರುವ‌ ವೇಳೆಗೆ
ಅವರ ಗಂಡ ಕೋದಂಡರಾಮ್ ರವರು ಯಾರ ಜೊತೆಯಲ್ಲ್ಲೋ ಫೋನಿನಲ್ಲಿ ಮಾತನಾಡುತ್ತಿರುವಾಗ
ಆಶಾಳ ಅಮ್ಮ ಮೌನವಾಗಿ ಕುಳಿತಿರುತ್ತಾರೆ.
ಕೋದಂಡರಾಮ್ ರವರು ಫೋನಿನ ಸಂಭಾಷಣೆ ಮುಗಿಸಿ, ನಂತರ ಮೊಬೈಲನ್ನು ಟೇಬಲ್ ಮೇಲಿಡುತ್ತಾ, ತಮ್ಮ ಪತ್ನಿಯ ಕಡೆ ತಿರುಗಿ ಈಗ‌ ಏನು ಮಾಡೋದೆಂದು ಪತ್ನಿಯನ್ನು ಪ್ರಶ್ನಿಸಿದಾಗ
ವಿಷಯವನ್ನೇ ಹೇಳದೆ ಈಗೇನು ಮಾಡುವುದು ಎಂದರೆ ನಾನೇನು ಉತ್ತರ ಹೇಳಲಿ ಎಂದು ಲಘು ಹಾಸ್ಯದಿಂದ ಅವರ ಪತ್ನಿ ಪ್ರಶ್ನಿಸಲು
ನೀನು ನನ್ನ ಫೋನಿನ ಸಂಭಾಷಣೆ ಕೇಳಿಸಿಕೊಂಡಿದ್ದೀಯಾ ಎಂದುಕೊಂಡು ಕೇಳಿದೆ ಎಂದು ಕೋದಂಡರಾಮ್ ಹೇಳಿದಾಗ
ಅದೇನೋ ಭಾನುವಾರ ಬನ್ನಿ ಪರವಾಗಿಲ್ಲ ‌ಎಂದು ಹೇಳಿದನ್ನು ಮಾತ್ರ ಕೇಳಿಸಿಕೊಂಡೆ, ಏನು ವ್ಯವಹಾರವೋ‌ ಎಂದುಕೊಂಡಿದ್ದೆ, ಈಗ ಹೇಳಿ ಭಾನುವಾರ ಏನು ಕಾರ್ಯಕ್ರಮ? ಯಾವ ವಿಷಯಕ್ಕೆ ಏನು ಮಾಡುವುದೆಂದು ಕೇಳಿದ್ರೀ ಎಂಬ ಅವರ ಪತ್ನಿಯ ಮಾತಿಗೆ
ಭಾನುವಾರ ಗಂಡಿನ ಕಡೆಯವರು ಬರುತ್ತಾರಂತೆ, ಮಗಳು ಇದೇರೀತಿ ಹಠ ಮಾಡಿದ್ರೇನು ಮಾಡೋದು ಅಂತ ಕೇಳಿದ್ದು. ಈಗಲಾದರೂ ಅರ್ಥವಾಯ್ತಾ ಎಂದು ಕೋದಂಡರಾಮ್ ಪ್ರಶ್ನಿಸಿದಾಗ
ಈ ರೀತಿ ಪೂರ್ತಿ ವಿಷಯ ಹೇಳಿದ್ರೆ ಗೊತ್ತಾಗುತ್ತದೆ. ಎಂಬ‌ ಅವರ ಪತ್ನಿ ಮಾತಿಗೆ
ಇದನ್ನೇ ಜಾಣ ಕಿವುಡು ಎನ್ನುವುದು, ನಿನಗೆ ಬೇಕಾಗಿರುವ ವಿಷಯವಾದರೆ ಆ ಅನ್ನುವುದಕ್ಕೆ ಮುಂಚೆ ಎಲ್ಲಾ ನೀನೇ ಹೇಳುತ್ತೀಯಾ ಈಗ ಮಾತ್ರ ಬಿನ್ನಾಣ ಅಲ್ಲವಾ ಎಂದು ವ್ಯಂಗ್ಕವಾಗಿ ಅವರ ಗಂಡ ಪ್ರಶ್ನಿಸಲು
ನನಗೆ ನಿದ್ದೆ ಬರುತ್ತಿದೆ ಹೆಚ್ಚಿಗೆ ಮಾತನಾಡಲು ತಾಳ್ಮೆ ಇಲ್ಲ ಎಂಬ ಆಶಾಳ ಅಮ್ಮನ ಮಾತಿಗೆ,
ಮಗಳಿಗೆ ಹೇಳಿದ್ರೆ ಊಟ‌ ಬಿಟ್ಟು ಹೋಗುತ್ತಾಳೆ, ನಿನಗೆ ಹೇಳೋಣವೆಂದರೆ ನಿದ್ದೆ ಬರುತ್ತದೆ ಎಂದು ಹೇಳುತ್ತೀಯಾ ನಂತರ ನೀನೇ ಮಗಳ ಮದುವೆ ಮಾಡಲ್ಲವೇ ಎಂದು ನನ್ನನ್ನೇ ಪ್ಪಶ್ನಿಸುತ್ತೀಯಾ‌ ಎಂದು ಕೋದಂಡರಾಮ್ ಹೇಳಲು
ಭಾನುವಾರ ಗಂಡಿನ ಕಡೆಯವರು ಬರುವ‌ ವಿಷಯವಲ್ವವೇ ಅದನ್ನು ಬೆಳಿಗ್ಗೆ ಮಾತನಾಡಿದರಾಯಿತೆಂದು ಅವರ ಪತ್ನಿ ಹೇಳಲು
ಭಾನುವಾರ ಗಂಡಿನ ಕಡೆಯವರು ಬಂದಾಗ , ಮಗಳು ಇದೇರೀತಿ ಹಠ ಹಿಡಿದರೆ ಏನು ಮಾಡೋದೆಂದು ಅದಕ್ಕೆ ಕೇಳಿದೆ ಎಂಬ ಕೋದಂಡರಾಮ್ ಮಾತಿಗೆ
ಯಾರೂ ತಕ್ಷಣಕ್ಕೆ ಒಪ್ಪುವುದಿಲ್ಲ ನಿಧಾನವಾಗಿ ಒಪ್ಪಿಸಬೇಕು, ಭಾನುವಾರದವರೆಗೂ ಟೈಮ್ ಇದೆಯಲ್ಲಾ ಈಗ ನೀವು ನೆಮ್ಮದಿಯಾಗಿ ಮಲಗಿಕೊಳ್ಳಿ ಹೇಗೋ ಒಪ್ಪಿಸಿದರೆ ಆಗುತ್ತದೆಂದು
ಅವರ ಪತ್ನಿ ಜೋರಾಗಿ ಆಕಳಿಸುತ್ತಾ ಹೇಳಿದಾಗ
ಮಗಳನ್ನು ಒಪ್ಪಿಸುವುದು ನಿನಗೆ ಬಿಟ್ಚಿದ್ದು ಎಂದು ಹೇಳಿ ಅವರ ಗಂಡನೂ ಮಲಗುತ್ತಾರೆ.

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ವಿಷಯವೇನೆಂದರೆ

ನೀರು ಕುದಿಯುತ್ತಿರುವಾಗ ಅದನ್ನು ಮುಟ್ಟಿದರೆ ಕೈ ಸುಡುತಿತದೆ. ಸ್ವಲ್ಪ ಆರಿದ ಮೇಲೆ ಕುಡಿಯಬಹುದಾಗಿರುತ್ತದೆಯೋ ಹಾಗೆಯೇ ಮನುಷ್ಯನು ಕೋಪದಿಂದಿರುವಾಗ ಅವನಿಗೆ ಬುದ್ದಿ ಹೇಳಿದರೆ ಬುದ್ದಿ ಹೇಳಿದವರ ಮೇಲೆಯೇ ರೇಗಾಡುವ ಸಂಭವ ಇರುತ್ತದೆ. ಕೋಪ ಇಳಿದ ಮೇಲೆ ಬುದ್ದಿವಾದ ಹೇಳಿದರೆ ಕೇಳಬಹುದು. ಈ ಸಂಚಿಕೆಯಲ್ಲಿ ಆಶಾಳಿಗೆ ತನ್ನ ಅಣ್ಣ ಸಿಗುವವರೆಗೆ ಮದುವೆಯಾಗುವುದಿಲ್ಲವೆಂದು ಹಠ ಹಿಡಿದಿದ್ದು, ಇದರ ಜೊತೆಗೆ ತಾನು ಪ್ರೀತಿಸುತ್ತಿರುವ ವಿಷಯ ಹೇಳಲಾಗದೆ‌ ಎಲ್ಲರ ಮೇಲೂ ಕೋಪ ತೋರುತ್ತಿದ್ದಾಳೆ. ಸ್ವಲ್ಪ ಸಮಾಧಾನ ಹೊಂದಿದ ಮೇಲೆ ಮದುವೆಗೆ ಒಪ್ಪಬಹುದು.
ಇನ್ನೊಂದು ವಿಚಾರ ಯಾವುದೇ ಮುಖ್ಯ ವಿಚಾರವನ್ನು ಊಟ ಮಾಡುತ್ತಿರುವ ಸಮಯದಲ್ಲಿ ಪ್ರಸ್ತಾಪಿಸಬಾರದು. ಹೇಳುವ ವಿಷಯ ಅವರಿಗೆ ಅಪಥ್ಯವಾದರೆ ಆಶಾಳಂತೆ ಊಟವನ್ನೇ ಬಿಟ್ಟು ಹೋಗಬಹುದು.
ಮಕ್ಕಳು ಎಷ್ಟೇ ಕೋಪದಲ್ಲಿದ್ದರೂ ಅಮ್ಮನ ಮಾತಿಗೆ ಅವರ ರೋಪ ಬೆಣ್ಣೆಯಂತೆ ಕರಗುತ್ತವೆ. ಇದಕ್ಕೆ ತದ್ವಿರುದ್ಧವಾಗಿ ಅಪ್ಪ ಹೇಳಲು ಬಂದರೆ ಕೆಲವೊಮ್ಮೆ ಕೋಪ ಹೆಚ್ಚಲೂ ಬಹುದು. ಕಾರಣ ಅಪ್ಪನ ಮೇಲಿನ ಭಯ‌ ಒಂದೊಂದು ಸಲ ಹಾಗೆ ಮಾಡಿಸುತ್ತದೆ.

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ -12

ಹಿಂದಿನ ಸಂಚಿಕೆಯಲ್ಲಿ

ಮದುವೆ ವಿಷಯ ಪ್ರಸ್ತಾಪಿಸಿದ್ದಕ್ಕೆ ಕೋಪಗೊಂಡು ಅರ್ಧದಲ್ಲೇ ಊಟ ಬಿಟ್ಟು ಹೋದ ಮಗಳನ್ನು ಭಾನುವಾರ ಗಂಡಿನ ಕಡೆಯವರು ಬರುತ್ತಾರೆ. ಮದುವೆಗೆ ಹೇಗೆ ಒಪ್ಪಿಸಬೇಕೆಂದು ತಿಳಿಯದೆ ಕೋದಂಡರಾಮ್ ರವರು ತನ್ನ ಪತ್ನಿಗೆ ಆ ಜವಾಬ್ದಾರಿಯನ್ನು ವಹಿಸುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಭಾನುವಾರ ಗಂಡಿನವರು ಬರುತ್ತಾರೆಂದು ಮದುವೆಗೆ ಮಗಳನ್ನು ಒಪ್ಪಿಸುವಂತೆ ಹೇಳಿ ಕೋದಂಡರಾಮ್ ರವರು ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ.
ಭಾನುವಾರದ ದಿನ ಬೆಳಿಗ್ಗೆ ಕೋದಂಡರಾಮ್ ರವರು ಬೇಗ ಎದ್ದು,ಮನೆಯನ್ನು ಶುಚಿಗೊಳಿಸಿ ರಡಿಯಾಗುವ ವೇಳೆಗೆ ಒಂಬತ್ತು ಗಂಟೆಯಾಗಿರುತ್ತದೆ. ನಂತರ ಇಷ್ಟು ಹೊತ್ತಾದರೂ ಮಗಳು ಏಳಲಿಲ್ಲ ಗಂಡಿನವರು ಬರುವ ವೇಳೆಗೆ ಏನು ರಾದ್ಧಾಂತ ಮಾಡುತ್ತಾಳೋ ಎಂಬ ಆತಂಕದಿಂದ ತನ್ನ ಪತ್ನಿಗೆ ಮಗಳನ್ನು ಎಬ್ಬಿಸಿ ರಡಿ ಮಾಡಿಸೆಂದು ಹೇಳಿದಾಗ
ನಿನ್ನೆ ರಾತ್ರಿಯೇ ಎಲ್ಲಾ ಹೇಳಿದ್ದಕ್ಕೆ ಮಗಳು ಆಗಲೇ ಎದ್ದು ಅಂಗಡಿಗೆ ಹೋಗಿದ್ದಾಳೆ. ಬಂದ ತಕ್ಷಣ ರಡಿಯಾಗುವಂತೆ ಹೇಳುತ್ತೇನೆಂದು ಅವರ ಪತ್ನಿ ನುಡಿಯಲು
ಸದ್ಯ ಮಗಳಿಗೆ ಇಷ್ಚು ಒಳ್ಲೆ ಬುದ್ದಿ ಬಂದಿದೆಯಲ್ಲಾ ಸಾಕೆಂದು ತಮ್ಮ ಮೇಲಿನ ಭಾರ ಕಳಚಿದಂತಾಗಿ ಸೋಫಾ ಮೇಲೆ ಬಂದು ಕುಳಿತುಕೊಳ್ಳುತ್ತಾರೆ.
ಗಂಡಿನವರು ಬಂದು ಹೋದ‌ಮೇಲೆ ಆಶಾಳ ಅಮ್ಮನು ಮಗಳ ಅಭಿಪ್ರಾಯ ಕೇಳಿದಾಗ
ಅಮ್ಮಾ ನನಗೆ ಈ ಗಂಡು ಇಷ್ಟವಿಲ್ಲವೆಂದು ಆಶಾ ಹೇಳಲು
ಹೋಗಲಿ ಬಿಡಮ್ಮಾ ಸದ್ಯ ನೀನು ಮದುವೆ ಮಾಡಿಕೊಳ್ಳುತ್ತೇನೆಂದು ಹೇಳಿದ್ದೀಯಲ್ಲಾ ಈ ಹುಡುಗ ಇಲ್ಲದಿದ್ದರೆ ಬೇರೆ ಹುಡುಗನನ್ನು ನೋಡಿದರೆ ಆಯಿತೆಂದುಕೊಂಡು ತಮ್ಮ ಕೆಲಸಕ್ಕೆ ಹೋಗುತ್ತಾರೆ
ಹೀಗೆ ವಾರಕ್ಕೆ ಹದಿನೈದು ದಿನಕ್ಕೆ ಗಂಡುಗಳು ಬಂದು ಹೋಗುತ್ತಿದ್ದು, ಇದರ ಜೊತೆಗೆ ಗಂಡುಗಳ ಅನೇಕ ಫೋಟೋಗಳನ್ನು ತೋರಿಸಿದರೂ ಆಶಾ ಮಾತ್ರ ನಾ ಒಲ್ಲೆ ಎಂದೇ ಹೇಳುತ್ತಾ‌ ಬಂದಿದ್ದರಿಂದ
ಸಹಜವಾಗಿ ಕೋದಂಡರಾಮ್ ರವರನ್ನು ಕೆರಳಿಸಿರುತ್ತದೆ.‌ ಜೋರಾಗಿ ಮಾತನಾಡಿದರೆ ಇನ್ನೆಲ್ಲಿ ಗಂಡುಗಳನ್ನೇ ನೋಡುವುದಿಲ್ಲವೋ ಎಂಬ ಆತಂಕದಿಂದ ಸುಮ್ಮನಿರುತ್ತಾರೆ
ಒಂದು ದಿನ ಕೋದಂಡರಾಮ್ ರವರು ಸ್ಕೂಲ್ ಮುಗಿಸಿಕೊಂಡು ಮನೆಗೆ ಬಂದ ನಂತರ,
ಅವರ ಪತ್ನಿ ಕಾಫಿ ಕೊಟ್ಟಿದ್ದನ್ನು ಹೀರುತ್ತಾ, ನಾನು ಮಗಳ‌‌ ವರ್ತನೆಯಿಂದ ರೋಸಿ ಹೋಗಿದ್ದೇನೆ, ರಿಟೈರ್ಡ್ ಆಗುವುದಕ್ಕಿಂತ ಮುಂಚೆ ಮಗಳ ಮದುವೆ ಮಾಡೋಣ, ಅಕಸ್ಮಾತ್‌ ಸಾಲ‌ ಜಾಸ್ತಿಯಾದರೂ ಹೇಗೋ ಸಂಬಳದಿಂದ ತೀರಿಸಬಹುದೆಂದುಕೊಂಡಿದ್ದರೆ ಇವಳು ಯಾವ‌ ಗಂಡು ಬಂದರೂ ಬಡಪೆಟ್ಟಿಗೂ ಒಪ್ಪುತ್ತಿಲ್ಲ. ಅವಳ‌ ಮನಸ್ಸಿನಲ್ಲಿ ಬೇರೆ ಯಾರಾದರೂ ಇದ್ದಾರಾ? ಬೇರೆ ಯಾರನ್ನಾದರೂ ಲೌವ್ ಮಾಡುತ್ತಿದ್ದಾಳಾ ಕೇಳೆಂದು ಕೋದಂಡರಾಮ್ ನುಡಿಯಲು
ಮಕ್ಕಳು ಕೆಲವು ಹುಡುಗರನ್ನು ಮದುವೆಗೆ ಒಪ್ಪದಿದ್ದರೆ ಈ ಹಳೇ ಡೈಲಾಗ್ ಬಂದೇ ಬರತ್ತೆ ಅಲ್ಲವೇ ಎಂದು ಅವರ ಪತ್ನಿ ಮಾತಿಗೆ
ಇದು ಹಳೇ ಡೈಲಾಗ್ ಅಲ್ಲವೇ, ನಿತ್ಯ ಜೀವನದ ಸಾಮಾನ್ಯ ಮಾತು, ಕೇಳಿದರೇನು ತಪ್ಪು ಎಂದು ಕೋದಂಡರಾಮ್ ರವರು ಹೇಳಲು
ನೀವೇ‌ ಮಗಳನ್ನು ಕೇಳಬಾರದಾ? ಎಂದು ಆಶಾಳ‌ ಅಮ್ಮನ ಮಾತಿಗೆ
ಅಯ್ಯೋ ಬೇಡಾ ಬೇಡಾ ನಾನು ಮಾತ್ರ ಕೇಳುವುದಿಲ್ಲ ಅಂದು ಮದುವೆ ಮಾಡಿಕೊಳ್ಳಲು ಗಂಡನ್ನು ನೋಡೋಣ ಎಂದಿದ್ದಕ್ಕೆ ಊಟವನ್ನೇ ಬಿಟ್ಟು ಹೋದಳು, ಈಗ ಈ ಮಾತು‌ಕೇಳಿದರೆ ಮದುವೆಯೇ ಆಗುವುದಿಲ್ಲವೆಂದು ಹೇಳಿಬಿಟ್ಚರೇನು ಮಾಡಲಿ ಎಂದು ಕೋದಂಡರಾಮ್ ಹೇಳಿದಾಗ
ಆ ರೀತಿ ಇದ್ದಿದ್ದರೆ ಅಮ್ಮನ ಬಳಿ ಸೂಕ್ಷ್ಮವಾಗಿ ‌ಹೇಳಿರುತ್ತಿದ್ದಳಲ್ಲವೇ ಎಂದು ಅವರ ಪತ್ನಿಯ ಮಾತಿಗೆ,
ಅಮ್ಮ ಮಗಳ ಗುಟ್ಚು ಯಾರಿಗೆ ಗೊತ್ತು ಈಗ ಇಕ್ಕಟ್ಟಿನಲ್ಲಿ ಸಿಕ್ಕಿರುವವನು ನಾನಷ್ಚೇ ಎಂದುಕೊಂಡು ಕೋದಂಡರಾಮ್ ರವರು ಟಿವಿ ಆನ್ ಮಾಡಿ ನೋಡುತ್ತಿದ್ದಾಗ
ಟಿವಿಯಲ್ಲಿ ಇಪ್ಪತ್ಕೈದು ವರ್ಷಗಳ‌ ಹಿಂದೆ ಕಾಣೆಯಾಗಿರುವ ಮಗನನ್ನು ಹುಡುಕಿಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆಂಬ ವಾರ್ತೆ ಬರುತ್ತಿರುವುದನ್ನು ಆಶ್ಚರ್ಯದಿಂದ ನೋಡುತ್ತಿರುವಾಗ
ಪಕ್ಕದಲ್ಲೇ ಕುಳಿತಿದ್ದ ಪತ್ನಿಯು ಮಾತನಾಡಿ ಇದೇನ್ರೀ ನಮ್ಮ ಮಗನ ವಿಷಯವೇ ಟಿವಿಯಲ್ಲಿ ಬರುತ್ತಿದೆ ಎಂದು ನುಡಿಯಲು.
ತದೇಕ‌ ಚಿತ್ತದಿಂದ ನ್ಯೂಸ್ ನೋಡುತ್ತಿದ್ದ ಕೋದಂಡರಾಮ್ ರವರು ಗಲಾಟೆ ಮಾಡಬೇಡ ಏನು ಹೇಳುತ್ತಾರೋ ಸೀರಿಯಸ್ಸಾಗಿ ಕೇಳು. ಮಗ ಸಿಕ್ಕಿರುವುದನ್ನು ಹೇಳುತ್ತಾರೋ ಕೇಳೋಣ .ಮದ್ಯದಲ್ಲಿ ವಟ‌ ವಟ‌ ಮಾತಾಡಬೇಡವೆಂದು ಹುಸಿಕೋಪ ತೋರಿದಾಗ
ಅವರ ಪತ್ನಿ ಈ ನ್ಯೂಸ್ ಮುಗಿಯಲಿ ನಂತರವೇ ಮಾತನಾಡುತ್ತೇನೆಂದುಕೊಂಡು ಸುಮ್ಮನಾಗುತ್ತಾರೆ.
ಟಿವಿಯ ನ್ಯೂಸ್ ನಲ್ಲಿ ಐದು ವರ್ಷದ ಫೋಟೋವನ್ಮು ತೋರಿಸುತ್ತಾ ಈ ಹುಡುಗನ ಹೆಸರು ರಘುವೀರ್ ಉರುಫ್ ಸಮರ್ಥ್ ಇವನು ಐದು ವರ್ಷದವನಿದ್ದಾಗ ಕಾಣೆಯಾಗಿ ಇಂದಿಗೆ ಇಪ್ಪತ್ತೈದು ವರ್ಷಗಳು ಕಳೆದು ಹೋಗಿರುವುದಾಗಿ ಅವರ ಕುಟುಂಬದವರು ತಿಳಿಸಿದ್ದು, ನಂತರ ಅದರ ಪಕ್ಕದಲ್ಲಿ ದೊಡ್ಡ ಹುಡುಗನ ಫೋಟೋ ತೋರಿಸುತ್ತಾ ಐದು ವರ್ಷದವನಿದ್ದಾಗ ಕಳೆದು ಹೋಗಿದ್ದ ಹುಡುಗನು ಅಂದಾಜು ಈ ರೀತಿ ಇರಬಹುದೆಂದು ಅಂದಾಜು ಮಾಡಿರುತ್ತಾರೆ. ಪಾಪ ಮಗನು ಕಾಣೆಯಾಗಿ ಇಪ್ಪತ್ಕೈದು ವರ್ಷಗಳೇ ಕಳೆದಿವೆ. ಪಾಪ ಆ ಹೆತ್ತ ಕರುಳು ಇಂದಿನವರೆಗೂ ಎಷ್ಟು ನೊಂದಿವೆಯೋ ಯಾರಿಗಾದರೂ ಸಿಕ್ಕಿದರೆ ಕೆಳಗೆ ನಮೂದಿಸಿರುವ ಫೋನ್ ನಂಬರನ್ನು ಸಂಪರ್ಕಿಸಬಹುದೆಂದು ಪಶ್ಚಾತ್ತಾಪ ಪಡುತ್ತಾ ನ್ಯೂಸ್ ಬಿತ್ತರಿಸುತ್ತಿರುವುದನ್ನು ನೋಡಿದ ಆಶಾಳ ಅಪ್ಪ ಅಮ್ಮನಿಗೆ ಕಣ್ಣು ತೇವವಾಗಿದ್ದು,
ಎಂದಿಗೆ ಸಿಗುತ್ತಾನೋ ಏನೋ? ಇದ್ದಾನೋ ಇಲ್ಲವೋ ಎಂದು ಕೋದಂಡರಾಮ್ ವಿಷಾದಿಸಿದಾಗ.
ಆಶಾಳ ಅಮ್ಮ ಮಾತನಾಡಿ ನೀವು ಸುಮ್ಮನಿರಿ ಕೆಟ್ಚದ್ದನ್ನು ಮಾತಾನಾಡಬೇಡಿರಿ, ನಾವಿರುವವರೆಗೂ ನಮ್ಮ ಮಗ ಬದುಕಿದ್ದಾನೆ ಎಲ್ಲೋ ಇದ್ದಾನೆಂದು ತಿಳಿದುಕೊಂಡಿರೋಣ ಎನ್ನುತ್ತಾರೆ
ನಿನ್ನ ನಂಬಿಕೆಯನ್ನು ನಾನೇಕೆ ಹಾಳುಮಾಡಲಿ ಮಗ ಎಲ್ಲಿದ್ದರೂ ಮನೆಗೆ ಬರಲೆಂದು ಕೋದಂಡರಾಮ್ ಹೇಳಿದಾಗ
ಅಲ್ಲಾ ರೀ ಮಗಳು ತನ್ನಣ್ಣನ ವಿಚಾರವನ್ನು ಸಾಮಾಜಿಕ ಜಾಲತಾಣಗಳಿಗೆ ಕಳುಹಿಸಿ ಎಷ್ಟು ತಿಂಗಳಾಗಿದೆ ಈಗ ನ್ಯೂಸ್ ನಲ್ಲಿ ಬರುತ್ತಿದೆಯೆಂದು ಅವರ ಪತ್ನಿಯ ಮಾತಿಗೆ
ಕೋದಂಡರಾಮ್ ವ್ಯಂಗ್ಯವಾಗಿ ನಗುತ್ತಾ ಅಲ್ಲವೇ ನಾನು ವಿಐಪೀನಾ ಅಥವಾ ನನ್ನ ಮಗ ವಿಐಪಿನಾ? ಸಿನಿಮಾ ನಟರು ರಾಜಕೀಯದವರಾಗಿದ್ದರೆ ನ್ಯೂಸ್ ಕೊಟ್ಟ ತಕ್ಷಣ 24×7 ಎಡೆಬಿಡದೆ ಎಲ್ಲರಿಗೂ ತಲೆ‌ ಚಿಟ್ಟು ಹಿಡಿದು ಟಿವೀ ಆಫ್ ಮಾಡುವ ತನಕ ಪ್ರಸಾರ ಮಾಡುತ್ತಿದ್ದರು. ನಾನು ಶಿಕ್ಷಕ ಅಷ್ಟೇ ಕಣೇ ನಮ್ಮಂತಹವರ ಬಗ್ಗೆ ಈಗಲಾದರೂ ನ್ಯೂಸ್ ಬಂದಿದ್ದಕ್ಕೆ ಖುಷಿಪಡು, ಟಿವೀಲಿ ಬಂದ ನ್ಯೂಸ್ ನಿಂದಲಾದರೂ ನಮ್ಮ ಮಗನಿಗೆ ಗೊತ್ತಾಗಿ ಎಲ್ಲಿದ್ದರೂ ಮನೆಗೆ ಬರಲಿ ಎಂದು ಕೋದಂಡರಾಮ್ ನುಡಿದಾಗ
ನನಗೂ ಹಾಗೆ ಎನಿಸಿದೆ ಎನ್ನುತ್ತಾರೆ ಅವರ ಪತ್ನಿ.

ಮಾರನೇ ದಿನ ಕೋದಂಡರಾಮ್ ರವರಿಗೆ ಮೈಸೂರಿನಿಂದ ಒಬ್ಬರು ಫೋನ್ ಮಾಡಿ ನಿಮ್ಮ ಮಗ ಐದು ವರ್ಷದವನಿದ್ದಾಗ ಕಾಣೆಯಾಗಿದ್ದಾನೆಂದು ನಿನ್ನೆ ಟಿವೀ ನೋಡಿದಾಗ ತಿಳಿಯಿತು. ಪಾಪ ನೀವು ಇಪ್ಪತ್ಕೈದು ವರ್ಷಗಳಿಂದ ಮಗನ ನೆನಪಲ್ಲೇ‌ ನೊಂದಿರುತ್ತೀರಿ, ನಮ್ಮ ಮನೆಯ ಬಳಿ ಸುಮಾರು ಇಪ್ಪತ್ಕೈದು ವರ್ಷಗಳ ಹಿಂದೆ ಒಬ್ಬರು ಐದು ವರ್ಷದ ಮಗುವನ್ನು ಕರೆದುಕೊಂಡು ಬಂದು ಅವರೇ ಸಾಕುತ್ತಿದ್ದಾರೆ, ಈಗ ಆ ಹುಡುಗನನ್ನು ನೋಡಿದರೆ ಟಿವಿಯಲ್ಲಿ ತೋರಿಸುತ್ತಿರುವ ಯುವಕನಂತೆ ಇದ್ದಾನೆ. ಆದರೆ ಸುಮಾರು ಒಂದು ವರ್ಷದಿಂದ ಕಾಣಿಸುತ್ತಿಲ್ಲ ಬೇರೆ ಎಲ್ಲಿಗಾದರೂ ಓದುವುದಕ್ಕೋ ಅಥವಾ‌ ಕೆಲಸಕ್ಕೆ ಹೋದನೋ ತಿಳಿಯುತ್ತಿಲ್ಲವೆಂದು ಹೇಳಿದಾಗ
ಆ ಹುಡುಗನ ಹೆಸರೇನಾದರೂ ಗೊತ್ತಾ ಎಂದು ಕೋದಂಡರಾಮ್ ಪ್ಪಶ್ನಿಸಲು
ಆ ಹುಡುಗನ ಹೆಸರು ಟಿವೀಯಲ್ಲಿರುವಂತೆ ರಘುನೀರನೂ ಅಲ್ಲ ಸಮರ್ಥನೂ ಅಲ್ಲ ಸಾರ್ ಬೇರೆ ಹೆಸರು ಗೌತಮ್ ಎಂದು ಕರೆಯುತ್ತಿದ್ದರೆಂದಾಗ
ಹಾಗಾದರೆ ನಮ್ಮ ಮಗ ಆಗಿರಲು ಸಾಧ್ಯವಿಲ್ಲಾ ಬಿಡಿ ಎಂದು ಕೋದಂಡರಾಮ್ ಹೇಳಲು
ಓಕೆ ಸಾರ್ ಪ್ರಪಂಚದಲ್ಲಿ ಒಬ್ಬರು ಇರುವಂತೆ ಏಳು ಜನ ಇರುತ್ತಾರೆಂದು ಹೇಳುತ್ತಾರೆ, ನೋಡೋಣ ಬಿಡಿ ಎಂದು ಹೇಳಿ
ಫೋನ್ ಆಫ್ ಮಾಡುತ್ತಾರೆ
ಕೋದಂಡರಾಮ್ ರವರು ಫೋನ್ ಆಫ್ ಮಾಡಿ ಮೊಬೈಲನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಿರುವಾಗ
ಅವರ ಪತ್ನಿ ಬಂದು ಯಾರದ್ರೀ ಫೋನ್ ಎಂದು ಕೇಳಲು
ಕೋದಂಡರಾಮ್ ರವರು ಮಾತನಾಡಿ, ಮೈಸೂರಿನಿಂದ ಯಾರೋ ಫೋನ್ ಮಾಡಿದ್ದರೆಂದು ಹೇಳಿ ನಡೆದ ಮಾತುಕತೆಯನ್ನು ವಿವರಿಸಿದಾಗ
ರೀ ಅಕಸ್ಮಾತ್ ನಮ್ಮ ಮಗನ ಹೆಸರು ಬದಲಿಸಿ ಬೇರೆ ಹೆಸರು ಇಟ್ಟಿರಬಹುದಲ್ಲಾ ಸ್ವಲ್ಪ ವಿಚಾರಿಸಿ ನೋಡಿ ಎಂಬ ಅವರ ಪತ್ನಿಯ ಮಾತಿಗೆ
ಅಯ್ಯೋ ನನಗೆ ಈ ಐಡಿಯಾ ಹೊಳೆಯಲೇ ಇಲ್ಲವೆಂದು ವಿಷಾಧಿಸುತ್ತಾರೆ
ಈಗಲೇ ಅದೇ ನಂಬರಿಗೆ ಫೋನ್ ಮಾಡಿ ಅವರ ವಿಳಾಸ‌ ತೆಗೆದುಕೊಳ್ರೀ ಒಂದು ದಿನ ಅವರ ಮನೆಗೆ ಹೋಗಿ ಬರೋಣವೆಂದು ಅವರ ಪತ್ನಿ ನುಡಿದ‌ ತಕ್ಷಣ
ಕೋದಂಡರಾಮ್ ರವರು ಮೈಸೂರಿನಿಂದ ಬಂದಿದ್ದ ಅದೇ ನಂಬರಿಗೆ ಫೋನ್ ಮಾಡಿದಾಗ‌ ಸ್ವಿಚ್ ಆಫ್ ಬರುತ್ತದೆ
ಛೇ ಸ್ವಿಚ್ ಆಫ್ ಬರುತ್ತಿದೆ ಮಗಳು ಬಂದ ಮೇಲೆ ಟ್ರೈ ಮಾಡೋಣವೆಂದು ಹೇಳಿದಾಗ
ಛೇ ನೀವು ಯಾವಾಗಲೂ ಹೀಗೆಯೇ ಸ್ವಲ್ಪವಾದರೂ ಸ್ವಂತ ಬುದ್ದಿ ಉಪಯೋಗಿಸುವುದಿಲ್ಲವೆಂದಾಗ
ಏನು ಮಾಡಲಿ? ಟೆನ್ಷನ್ ನಿಂದ ತಕ್ಷಣ ಏನೂ ಹೊಳೆಯುವುದಿಲ್ಲ. ಇರಲಿ ಹೇಗಿದ್ದರೂ ನಂಬರ್ ಇದೆಯಲ್ಲಾ ಆಮೇಲೆ ಫೋನ್ ಮಾಡಿ ವಿಷಯ ತಿಳಿಯೋಣವೆನ್ನುತ್ತಾರೆ.

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ

ಮಕ್ಕಳು ತಾವು ಯಾರನ್ನಾದರೂ ಲೌವ್ ಮಾಡುತ್ತಿದ್ದರೆ ಹೆತ್ತವರಿಗೆ ಹೇಳಲು ಭಯವಾಗಿರುತ್ತದೆ.‌ ಸದ್ಯಕ್ಕೆ ಹೇಳುವುದು ಬೇಡ ಸ್ವಲ್ಪ ದಿನದ ನಂತರ ಹೇಳೋಣವೆಂದು ಹೆತ್ತವರು ತೋರಿಸಿದ ಹುಡುಗ/ಹುಡುಗಿಯನ್ನು ತಿರಸ್ಕರಿಸಿಕೊಂಡೇ ಬಂದಿರುತ್ತಾರೆ. ಕಡೆಗೆ ಮಕ್ಕಳು ಕರೆದುಕೊಂಡು ಬಂದವರನ್ನು ಯಾರನ್ನೂ ಒಪ್ಪುತ್ತಿಲ್ಲವೆಂದು ತಾವು ನೋಡಿದ ಹುಡುಗನನ್ನು ಮದುವೆಯಾಗಲೇಬೇಕೆಂದು ಹಠ‌ ಹಿಡಿದಾಗ ಮಾತ್ರ ಮೆಲ್ಲಗೆ ಬಾಯಿ ಬಿಡುತ್ತಾರೆ..
ಹೇಗಿದ್ದರೂ ಒಂದಲ್ಲಾ ಒಂದು ದಿನ ಹೇಳಲೇಬೇಕು ವರ/ವಧುವನ್ನು ಹುಡುಕುವ ಕಷ್ಟ‌ ಹೆತ್ತವರಿಗೇಕೆ ಕೊಡಬೇಕೆಂದು ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೆತ್ತವರಿಗೆ ಹೇಳಿಬಿಟ್ಟರೆ ಅವರಿಗೆ ಟೆನ್ಷನ್ ಕಡಿಮೆಯಾಗುತ್ತದೆ.

ಯಾವತ್ತೂ ನಮಗೆ ಬೇರೆಯವರ ವಿಚಾರ ತಿಳಿಯದಿದ್ದರೆ ಕೆಟ್ಟ ಇರುವನೇ ಹೋಗಿಬಿಟ್ಚಿದ್ದಾನೋ ಎಂದು ಕೆಟ್ಟ ಭವಿಷ್ಯ ನುಡಿಯಬಾರದು.
ಕೆಲವೊಮ್ಮೆ ಮಾನಸಿಕ ಒತ್ತಡದಿಂದ ಯಾವ ಉಪಾಯಗಳೂ ಹೊಳೆಯುವುದಿಲ್ಲ. ಯಾವುದಾದರೂ ಪದಾರ್ಥ‌ ತಕ್ಷಣ ನೋಡಲು ಕಾಣದಾದಾಗ ಅಯ್ಯೋ ಎಲ್ಲಿ ಹೋಯಿತೋ ಎಂದು ಟೆನ್ಷನ್ ಆಗಿ ಕಣ್ಣಿನ ಮುಂದೆ ಇದ್ದರೂ ಗುರುತಿಸಲು ಆಗುವುದಿಲ್ಲ.‌ ಯಾವುದಾದರೂ ವಸ್ತು ಕಳೆದು ಹೋದರೆ ಟೆನ್ಷನ್ ಮಾಡಿಕೊಳ್ಳಗೆ ಸಾವಕಾಶದಿಂದ ಹುಡುಕಬೇಕು.

ಮುಂದುವರೆಯುತ್ತದೆ……

ಡಾ. ಎನ್. ಮುರಳೀಧರ್ ವಕೀಲರು ಹಾಗೂ ಸಾಹಿತಿ ಕಾದಂಬರಿಕಾರರು ನೆಲಮಂಗಲ