ಸಿಗದ ಶಾಂತಿಯ ಬೆನ್ನು ಹತ್ತಿ
ಹೌದು ದುಬಾರಿ ಈ ಶಾಂತಿ ಎಂಬೋ ಸರಕು!.ಸಿಗದೇ ಹೋಗುವುದು ಅರ್ಥಕ್ಕೂ!.
ತೂರಿ ಹೋದರೆ ಶಾಂತಿಯ ಪಟ್ಟಕದಿ
ಮುಂದೆ ಕಾಣುವವು ಸಂತಸ, ಸಮೃದ್ಧಿ,ತೃಪ್ತಿಗಳ ವಿವಿಧ ವರ್ಣಗಳು.
ನಿಸ್ವಾರ್ಥ ಸೇವೆಯ ದಿನ! ನಮ್ಮನ್ನರಿತ ಜನ!
ಗೆಲುವಿನ ಮನ! ದೈವದ ಧ್ಯಾನ! …
ಇವೆಲ್ಲವುಗಳು ಶಾಂತಿಯ ಪಡೆಯಲು ಸಹಕಾರಿ.
ಮನ-ಮನಗಳ ನಡುವಿನ ಚಿಂತನೆಯ ಪರಿ ಯಲ್ಲಿನ ವ್ಯತ್ಯಾಸ, ತರಾತುರಿಯ ಜೀವನ ಶೈಲಿ, ನನ್ನದು ಎನ್ನುವ ಅಹಂ, ಸೌಹಾರ್ದತೆಯ ಕೊರತೆ ಎಲ್ಲವೂ ಶಾಂತಿಯ ಕದಡುವವು.. ಆ ಮೇಲಿನ ಜಾಗೆಗಳಲ್ಲಿ ಶಾಂತಿಗೂ ಅಂಜಿಕೆ!.
ಆದಷ್ಟು ಮನವನ್ನು ನಿಸರ್ಗದ ಸಮೀಪವಿರಿಸೆ ತುಸು ವಾದರೂ ದೊರೆಕೀತು ಶಾಂತಿ…
ಅಲ್ಲಿ ಎಲ್ಲವೂ ಅಡಗಿದೆ, ಪ್ರಕೃತಿಯಲ್ಲಿ!..
ರಮ್ಯ, ರುದ್ರ, ಶಾಂತಿ ಮಿಶ್ರಣದ ರಂಗವಲ್ಲಿ.
ಪ್ರಕೃತಿಯ ಪ್ರೀತಿಸೆೇ ವೃದ್ಧಿ ಮನದ ಕಾಂತಿ!.
ಹುಡುಕಬೇಕು ರಮ್ಯ ಶಾಂತಿಯ,
ಹಂಚುತ, ನಮಿಸುತ ಉಳಿಸುತ
ಕಾಪಾಡುತ ಪ್ರಕೃತಿಯ ಮುಂದಿನ ಪೀಳಿಗೆಗಾಗಿ. ಅವರ ಶಾಂತಿಗಾಗಿಯೂ ಸಹ!.
– ಅ ದೇ ಉವಾಚ