ಪತ್ರ ಪ್ರೀತಿ ಸಂಸ್ಕೃತಿ
“””””””””””””””””””””””””
ಪತ್ರ ಬರಹ ಸಂಸ್ಕೃತಿ ಸರಿದು
ಓದು ಬರಹಕ್ಕೆ ಮೊಬೈಲ್ ಮಾಹಿತಿ
ವಿಶ್ವಕೋಶ ತುಂಬಿದ ಬೇಕು ಬೇಡಗಳ ಮಗ್ನತೆ
ಗ್ರಹಿಕಾ ನೀತಿಯಷ್ಟೇ ಅಡಗಿಹ ದುರ್ನೀತಿ
ಕುಳಿತಲ್ಲೇ ಬೇಕಾದ್ದು ಕಣ್ಣಾಡಿಸಿ ಒತ್ತುತ
ಕಾಸಿದ್ರೆ ಕೈಲಾಸ ಬಳಿಯಲ್ಲಿ ಬರುತ್ತಾ
ಕೊರಿಯರ್ ಹೊತ್ತು ಬೀದಿ ಬೀದಿ ಸುತ್ತುತ
ಬರುವ ಮನೆಮನೆಗೂ ಪ್ಯಾಕೇಜ್ ತಲುಪಿಸುತ್ತ
ಕಾಂಚಾಣದ ಕುಣಿತ ಜೀವನವು ಸುಲಲಿತ
ಸುತ್ತುತ್ತಾ ಅಂಗಡಿ ಮಾಲ್ನಿಂದ ಭಾರ ಹೊತ್ತು
ತರುವ ವಸ್ತುಗಳ ತಾಪತ್ರಯ ವಿಂದು ಸ್ಥಗಿತ
ಕಾಲ್ನಡಿಗೆ ಸರಿದು ಜಡತ್ವ ಮನುಜನಿಗೆ ಆವರಿಸುತ
ಸ್ನೇಹಸಂಘ ನಡೆದುಬಂದ ದಾರಿಯ ಮರೆಯುತ
ರಕ್ತ ಸಂಬಂಧಿಗಳ ದೂರಿಕರಿಸುತ
ದೂರದರ್ಶನ ಜಂಗಮವಾಣಿಯ ತಲ್ಲಿನತೆ
ಆಧುನಿಕ ಶೈಲಿಯ ಬಿಡಲಾಗದ ಸಂಗಾತಿ
ಬದಲಾದ ಜೀವನ ಮಾದರಿಯ ವೈಶಿಷ್ಟ್ಯತೆ
ಯಾಂತ್ರಿಕ ಜೀವನಕ್ಕೆ ಕಟ್ಟುಬಿದ್ದ ಅವಶ್ಯಕತೆ
ಒಗ್ಗಟ್ಟಿನ ಕುಟುಂಬ ಮಮಕಾರ ಸರಿಯುತ
ಪರದೇಶಿಗಳಂತೆ ಒಂಟಿತನ ಕಾಡುತ
ಜೀವನ ಸಹಗೂಡಿದ ಮೌಲ್ಯವರಿಯದ ಅಂಧತ್ವ
ಭಾವನಾತ್ಮಕ ಪ್ರೀತಿ ಬಾಂಧವ್ಯವೇ ಮೇಲು
ಧನ ಹೊನ್ನು ಸಂಪತ್ತಿಗೂ ಮಿಗಿಲು
ಜೇನುಗೂಡಂತ ಒಗ್ಗಟ್ಟಿನಲ್ಲಿದೆ ಬಲ
ಕಲ್ಪನೆ ಕನಸಿನಲ್ಲಿ ಓಡುತ್ತಿದೆ ಕಾಲ
ಸಂಸಾರವೆಂಬ ಸಂತೆಯ ತೊಳಲಾಟದಲ್ಲಿ
ಬದುಕು ನಿಂತ ನೀರಂತೆ ನೀರಸವಾಗದೆ
ಹರಿವ ಜಲದಂತೆ ಬೆರತ ಜೇನಾಗಲಿ
Yashodaramakrishna