ಸಾಹಿತಿ ಹಾಲೇಶ್ ಹಕ್ಕಂಡಿ ಅವರ ಕಿರು ಪರಿಚಯ

  • ಹೆಸರು :- ಹಾಲೇಶ್ ಹಕ್ಕಂಡಿ
    ಸ್ಥಳ :- ವರಕನಹಳ್ಳಿ
    ಜನನ :- 01- 06- 1985
    ವಿಧ್ಯಾಭ್ಯಾಸ :- ಡಿ.ಇಡಿ.ಬಿಎ
    ಉದ್ಯೋಗ :- ಮುಖ್ಯೋಪಾಧ್ಯಾಯರು.
    ದಿವ್ಯ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಸೋಗಿ.
    2006 ರಿಂದ ಪ್ರಸ್ತುತ ಶೈಕ್ಷಣಿಕ ವರ್ಷದ ಸಾಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  • ಕೃತಿಗಳು :- 1) “ಭಾವನೆಗಳ ಬಾವುಟ”
    2) “ಸಿಂಧೂರ ಸಿರಿ”
    ಇನ್ನು ಎರಡು ಕೃತಿಗಳು ಮುದ್ರಣ ಹಂತದಲ್ಲಿವೆ.
    ಬಿರುದು :- “ಮಲ್ಲಿಗೆ ನಾಡಿನ ಪ್ರೇಮ ಕವಿ”

★ ರಾಷ್ಟ್ರ ಪ್ರಶಸ್ತಿ

1) “ಕವಿ ವಿಭೂಷಣ” ರಾಷ್ಟ್ರ ಪ್ರಶಸ್ತಿ. ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿ.

★ ರಾಜ್ಯ ಪ್ರಶಸ್ತಿಗಳು :-

1) “ಕರುನಾಡ ವಿವೇಕ ರತ್ನ” ಸ.ವಿ.ವಿ.ವೇ.ಬಳ್ಳಾರಿ.
2) “ಉತ್ತಮ ಬರಹಗಾರ” ಕ.ರಾ.ಬ.ಸಂ ಹೂ.ಹಡಗಲಿ.
3) “ಸಂಘಟನಾ ಶಿಕ್ಷಕ ಪ್ರಶಸ್ತಿ” ಚಿತ್ರ ಕಲಾ ಸ್ಪರ್ಧೆ ಮಂಡ್ಯ.
4) “ಕಾವ್ಯ ಚೇತನ” ಕ.ರಾ.ಬ.ಸಂ.ಹೂವಿನ ಹಡಗಲಿ.
5) “ಕವಿ ಭೂಷಣ ರತ್ನ” ಸಾ.ಮಂ.ವೇ.ಬೀದರ್.
6) “ಸಾಹಿತ್ಯ ಚೇತನ” ಕ.ರಾ.ಬ.ಸಂ.ಹೂ.ಹಡಗಲಿ.
7) “ಕರುನಾಡ ಕುವೆಂಪು ರತ್ನ” ಕರುನಾಡ ಹಣತೆ
ಬಳಗ ಚಿತ್ರದುರ್ಗ.
8) “ಶಿಕ್ಷಣ ಸಿರಿ” ಕ.ರಾ.ಬ.ಸಂ.ತಾ.ಘ.ಹಡಗಲಿ
9) “ಶ್ರೀ ಗುರುಕುಲ ತಿಲಕ” ಪುರಸ್ಕಾರ ಕ.ಸಿ ವೇ ಬೆಳಗಾವಿ.
10)”ಸಂತ ಶಿಶುನಾಳ ಷರೀಫ್” ಕ.ಸಾ.ಸಾ.ಸಂ ಚಿತ್ರದುರ್ಗ
11) “ಕನ್ನಡ ನುಡಿ ಸೇವಕ”ರಾಜ್ಯ ಪ್ರಶಸ್ತಿ.
12) “ಶಂಕರ ಸಿರಿ ಗ್ರಾಮೀಣ ರತ್ನ” ಕ.ಗ್ರಾ.ಯು.ಕ. ಸಾ.ಕ್ರಿ.ಸ.ಮೈಲಾರ.
13) “ಕಾವ್ಯ ಭೂಷಣ” ರಾಜ್ಯ ಪ್ರಶಸ್ತಿ. ತನುಶ್ರೀ ಪ್ರಕಾಶನ ತುಮಕೂರು.
14) “ಗುರುಶ್ರೇಷ್ಟ ಪ್ರಶಸ್ತಿ” ಘಟಕ ಹೂವಿನ ಹಡಗಲಿ.
15) “ಶಿಕ್ಷಕ ರತ್ನ” ಸುಜ್ಞಾನ ವಿದ್ಯಾಪೀಠ ಹೆಚ್ ಹಳ್ಳಿ.
16) “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಕರ್ನಾಟಕ ಸೋಷಿಯಲ್ ಕ್ಲಬ್ ಹುಬ್ಬಳ್ಳಿ.

* ಸಂಘ ಸಂಸ್ಥೆಗಳಲ್ಲಿ ಸಂಘಟಕರಾಗಿ:-

1) ಅಧ್ಯಕ್ಷರು :- ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹೂವಿನ ಹಡಗಲಿ.
2)ಅಧ್ಯಕ್ಷರು :- ಗುರುಕುಲ ಕಲಾ ಪ್ರತಿಷ್ಠಾನ. ತಾಲೂಕು ಘಟಕ ಹೂವಿನ ಹಡಗಲಿ.
3) ವಿಜಯನಗರ ಜಿಲ್ಲಾ ಅಧ್ಯಕ್ಷ :- ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
4) ಪ್ರಧಾನ ಕಾರ್ಯದರ್ಶಿ – ಸಾಧಕರ ವೇದಿಕೆ ಇಟ್ಟಿಗಿ.
5) ಸಹ ಕಾರ್ಯದರ್ಶಿ – ಅ.ಮ.ಸಾ.ವೇ ಹೂ.ಹಡಗಲಿ.
6) ರಾಜ್ಯ ಸಂಚಾಲಕರು – ಕ.ರಾ.ಬ.ಸಂ.ಹೂ.ಹಡಗಲಿ.
7) ಸಲಹಾ ಮಂಡಳಿ ಸದಸ್ಯ – ಕ.ಸಾ.ಪ ಹೋಬಳಿ ಘಟಕ ಇಟ್ಟಿಗಿ.

  • “ಅಲ್ಪ ಸೇವೆಗಾಗಿ ಸಂದ ಗೌರವ”

* ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ ಬೆಂಗಳೂರು ಚಕೋರ 441 ಕಾರ್ಯಕ್ರಮದಲ್ಲಿ ಕವಿ – ಕಾವ್ಯ ಕುರಿತು ವಿಮರ್ಶೆಗಾಗಿ ವಿಶೇಷ ಗೌರವ ಸನ್ಮಾನ.
* “ಮುತ್ತು ರಾಜ್” ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಇವರಿಗೆ ಸನ್ಮಾನಿಸಲಾಯಿತು, ಇವರ ಎರಡು ಕವನಗಳು ಆ ಕೃತಿಯಲ್ಲಿ ಮುದ್ರಣಗೊಂಡಿವೆ.
* ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದಾವಣಗೇರಿ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಸನ್ಮಾನ
* ಕ.ಸಾ.ಪ ನಡಿಗೆ ಕವಿ ಮನೆ ಕಡೆಗೆ ವಿಶೇಷ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ.
* ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದಲ್ಲಿ ಇವರ ಶಾಲಾ ಮಕ್ಕಳಿಂದ ಜಾನಪದ ನೃತ್ಯಕ್ಕೆ ಪ್ರಥಮ ಸ್ಥಾನಕ್ಕೆ ಗೌರವ ಸನ್ಮಾನ.
* ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದ ವತಿಯಿಂದ ಸನ್ಮಾನ
* ಶೈಕ್ಷಣಿಕ ಕ್ಷೇತ್ರದ ಸೇವೆಗೆ ಸಂಘ ಸಂಸ್ಥೆಗಳಿಂದ ಸನ್ಮಾನ.
* ಭಾರತೀಯ ಪತ್ರಕರ್ತರ ಕಲ್ಯಾಣ ವೇದಿಕೆಯಿಂದ ವಿಶೇಷ ಸನ್ಮಾನ.
* ಮಕ್ಕಳ ಬೌದ್ಧಿಕ ವಿಕಾಸದ ಕುರಿತು ಉಪನ್ಯಾಸಕ್ಕೆ ಗುರುಕುಲ ಟ್ಯುಟೋರಿಯಲ್ಸ್ ಹೂವಿನ ಹಡಗಲಿ ಇವರಿಂದ ಗೌರವ ಸನ್ಮಾನ.
* ಸೂರನಹಳ್ಳಿ ನಾಗರಾಜ್ ರವರ “ಉರಿ ನಾಲಿಗೆ” ಕವನ ಸಂಕಲನ ವಿಮರ್ಶೆ.
* ಅಂಕಲಿ ಬಸಮ್ಮನವರ “ಒಡಲ ನೆರಳು” ಕವನ ಸಂಕಲನದ ವಿಮರ್ಶೆ
ಇವರ ನೇತೃತ್ವದಲ್ಲಿ ನಮ್ಮ ಶಾಲಾ ಆವರಣದಲ್ಲಿ ಮೂರು ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ.
1) ಬಿಸಿಲು ಮಲ್ಲಿಗೆ – ಸಂಪಾದನಾ ಕವನ ಸಂಕಲನ 2018
2) ವಿವೇಕ ವಾಣಿ – ಶ್ರೀ ಚನ್ನವೀರಗೌಡರ ಕವನ ಸಂಕಲನ2019
3) ಭಾವನೆಗಳ ಬಾವುಟ – ಕವನ ಸಂಕಲನ ಚೊಚ್ಚಲ ಕೃತಿ. 2019
* ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ (ರಿ) ಸುಕ್ಷೇತ್ರ ಮೈಲಾರ ಇವರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೌರವ ಸನ್ಮಾನ ಸ್ವೀಕಾರ.
* “ಪ್ರಸ್ತುತ ದಿನಮಾನಗಳಲ್ಲಿ ತಂದೆ ತಾಯಿಗಳ ಪಾತ್ರ” ಕುರಿತು ಉಪನ್ಯಾಸಕ್ಕಾಗಿ ಜ್ಞಾನ ಬೆಳಕು ಅಕಾಡಮಿ ಇವರಿಂದ ಸನ್ಮಾನ.
* ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ( ರಿ) ಚಿತ್ರದುರ್ಗ. 2 ನೇ ಕರುನಾಡ ಸಾಹಿತ್ಸೋವ ಸಮ್ಮೇಳನ ಕಾರ್ಯಕ್ರಮದಲ್ಲಿ ಕವಿತೆ ವಾಚನಕ್ಕಾಗಿ ಸನ್ಮಾನ.
* ಕನ್ನಡ ಶಾಲೆ ಕವಿ ಬಳಗ ಭಾವ ಸಂಗಮ ಕೃತಿ ಲೋಕಾರ್ಪಣೆ ಸಂದರ್ಭದಲ್ಲಿ ವಿಶೇಷ ಸನ್ಮಾನ.
* 21 ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಸನ್ಮಾನ.
ಹವ್ಯಾಸ :- ಕವನಗಳ ರಚನೆ
* ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ
ಕವಿಗೋಷ್ಠಿಯಲ್ಲಿ ಭಾಗವಹಿಸುವುದು. ಸ್ವರಚಿತ ಕವನಗಳ ಗಾಯನ ಇತ್ಯಾದಿ.

ಸಂಗ್ರಹ: ಕವಿತ್ತ ಕರ್ಮಮಣಿ, ಕರ್ನಾಟಕ