ಕಾಯಕವೇ ಕೈಲಾಸ
ನಮ್ಮ ಯುವಕರಿಗೆ ಸೋಮಾರಿತನ ಆಲಸ್ಯ ತನ ಬಿಡಲು ಹಾಗೂ ಸಮಯ ಪಾಲನೆ ಜೀವನದಲ್ಲಿ ಅಳವಡಿಸಿಕೊಳ್ಳಲು ಹೇಳುತ್ತಾ ಇರಬೇಕು.
ಈ ಸೃಷ್ಟಿಯಲ್ಲಿ ಪಶು ಪಕ್ಷಿ ಸೂರ್ಯ ಚಂದ್ರ ಎಲ್ಲವೂ ನಿಯಮ ಕೆ ಸರಿಯಾಗಿ ಕೆಲಸ ಮಾಡುತ್ತವೆ, ಎಲ್ಲವೂ ಸಮಯ ಪಾಲನೆ ಇಂದ ಜೀವಿಸುತ್ತವೆ , ಆದರೆ ಕೆಲ ಮನುಷ್ಯರ ಜೀವನ ಈ ಸೋಮಾರಿತನದಿಂದ ಸಮಯ ಪಾಲನೆ ಇಲ್ಲದೆ ಅಸ್ತವ್ಯಸ್ತವಾಗಿರುತ್ತದೆ.
ಸೋಮಾರಿತನ, ಆಲಸ್ಯ, ಸ್ವಭಾವ ಸಮಯ ಪಾಲನ ಇಲ್ಲದಿರುವುದು ಇವುಗಳು ಮನುಷ್ಯನಿಗೆ ಎಷ್ಟು ಹಾನಿಕಾರಕ ಎಂದರೆ ನಮ್ಮ ಶಾಸ್ತ್ರದಲ್ಲಿ ಹೇಳುತ್ತಾರೆ ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವುಗಳು ಇದ್ದರೂ ಮನುಷ್ಯ ನಿಗೆ ಅಷ್ಟು ಹಾನಿಕಾರಕ ಅಲ್ಲ, ಆದರೆ ಇವೆಲ್ಲದಕ್ಕಿಂತ ಈ ಆಲಸ್ಯತನ ಈ ಸೋಮಾರಿತನ ಸಮಯ ಪಾಲನೆ ಇಲ್ಲದಿರುವುದು ಬಹಳ ಹಾನಿಕಾರಕ ಎಂದು ಹೇಳುತ್ತಾರೆ,
ಸೋಮಾರಿ ಆಲಸ್ಸಿ ಮನುಷ್ಯ ಜೀವನದಲ್ಲಿ ಬಹಳಷ್ಟು ಕಳೆದುಕೊಳ್ಳುತ್ತಾನೆ, ಸಮಯ ಪಾಲನೆ ಇಲ್ಲದಿರುವುದು ಎಲ್ಲ ಕೆಲಸಗಳನ್ನು ಮುಂದಕ್ಕೆ ದೂಡುವುದು ನೋಡೋಣ, ಆಗಲಿ ಎನ್ನುತ್ತಾ ಇರುವುದು ಬಹಳ ಹಾನಿಕಾರಕ. ಈ ವಿಷಯವಾಗಿ ಒಂದೆರಡು ಚಿಕ್ಕ ಜೀವಂತ ಘಟನೆ ಗಳನ್ನು ನೋಡೋಣ ಬನ್ನಿ.
ಒಂದು ಮಹಾನಗರದಲ್ಲಿ ಒಬ್ಬ ವ್ಯಕ್ತಿ ಒಂದು ಆಫೀಸ್ ನಲ್ಲಿ ಕೆಲಸ ಮಾಡುತ್ತಾ ಇರುತ್ತಾನೆ, ಇತ ಸೋಮಾರಿ ಸಮಯ ಪಾಲನೆ ಇಲ್ಲದೆ ಇರುವ ಅಸ್ತವ್ಯಸ್ತ ವಾಗಿ ಜೀವಿಸುವ ವ್ಯಕ್ತಿ . ಅಂದು ಆಫೀಸ್ ನಿಂದ ಮನೆಗೆ ಸ್ವಲ್ಪ ತಡವಾಗಿ ನಿಧಾನವಾಗಿ ಬರುತ್ತಾನೆ. ರಾತ್ರಿ ಬಹಳ ಹೊತ್ತು ಟಿವಿ ನೋಡುತ್ತಾ ಸಮಯ ಪಾಲನೆ ಇಲ್ಲದೆ ರಾತ್ರಿ ಒಂದು ಗಂಟೆಗೆ ಮಲಗಿಕೊಳ್ಳುತ್ತಾನೆ, ಬೆಳಿಗ್ಗೆ ತೀವ್ರ ಎಚ್ಚರಾಗದೆ ಎಂಟು ಗಂಟೆಗೆ ಎಳುತ್ತಾನೆ, ಸಮಯ ನೋಡಿದರೆ ಎಂಟು ಗಂಟೆ ಆಗಿರುತ್ತದೆ, ಅಂದು ಒಂಬತ್ತು ಗಂಟೆಗೆ ಆಫೀಸ್ ನಲ್ಲಿ ಇರಬೇಕು ಮನೆಯಿಂದ ಆಫೀಸ್ ೧೦ ಕಿಲೋಮೀಟರ ದೂರ ಟ್ರಾಫಿಕ್ ನಲ್ಲಿ ಹೋಗಬೇಕು ಒಂದು ಇಂಪಾರ್ಟೆಂಟ್ ಫೈಲ್ ಈತನ ಆಫೀಸ್ ಅಲಮಾರಿಯಲ್ಲಿ ಇದೆ ಇವರ ಬಾಸ್ ಅದನ್ನು ತೆಗೆದುಕೊಂಡು ಅರ್ಜೆಂಟಾಗಿ ದಿಲ್ಲಿಗೆ ಹೋಗಬೇಕು ಆ ಫೈಲ್ನನ ಎಲ್ಲ ಕೆಲಸ ಪೂರ್ತಿ ಮಾಡಿ ಹಿಂದಿನ ದಿನ ತನ್ನ ಸೇಫ್ ಅಲ್ಮಾರಿಯಲ್ಲಿ ಇಟ್ಟಿರುತ್ತಾನೆ ಬಾಸ್ ಹೇಳಿರುತ್ತಾನೆ ನಾಳೆ ಸರಿಯಾಗಿ 9 ಗಂಟೆಗೆ ಆ ಫೈಲ್ ನನ್ನ ಟೇಬಲ್ ಮೇಲೆ ಇರಬೇಕು ಎಂದು, ಈಗ ಸಮಯ ನೋಡಿದರೆ ಎಂಟಾಯಿತು ಆ ವ್ಯಕ್ತಿ ಬಹಳ ಅವಸರದಿಂದ ಗಾಬರಿಯಿಂದ ಕೇವಲ ಎರಡು ನಿಮಿಷದಲ್ಲಿ ಸ್ನಾನ ಮುಗಿಸಿ ಡ್ರೆಸ್ ಮಾಡಿಕೊಂಡು ಚಹಾ ಕಾಫಿ ಏನು ಕುಡಿಯದೆ ಬಹಳ ಗಡಿಬಿಡಿಯಿಂದ ಸ್ಕೂಟರ್ ಹೊರಗೆ ತೆಗೆಯುತ್ತಾನೆ, ಹೆಂಡತಿ ಮಗುಗೆ ಶಾಲೆಗೆ ಬಿಡುತ್ತಾ ಹೋಗಿ ಎಂದು ಹೇಳಿದರು ಕೋಪಿಸಿಕೊಂಡು ಏನು ತಿನ್ನದೇ ಚಹಾ ಕಾಫಿ ಕುಡಿಯದೆ ಹೆಂಡತಿ ಜೊತೆ ಜಗಳವಾಡುತ್ತಾ ಸ್ಕೂಟರ್ ಹೊರಗೆ ತೆಗೆದು 50, 60 ಕಿಲೋಮೀಟರ್ ಸ್ಪೀಡ್ ಆಗಿ ಆಫೀಸಿಗೆ ಬಂದು ತಲುಪುತ್ತಾನೆ ಆಗ ಸಮಯ ನೋಡಿದರೆ ಒಂಬತ್ತು ಗಂಟೆ ಆಗಿರುತ್ತದೆ, ಅಮ್ಮಯ್ಯ ಅಂತೂ ಆಫೀಸಿಗೆ ಬಂದು ಮುಟ್ಟಿದೆ ಎಂದು ನಿಟ್ಟುಸಿರು ಬಿಡುತ್ತಾನೆ, ಅಟೆಂಡರ್ ಬಂದು ಸಾಹೇಬ್ರು ಕರೆಯುತ್ತಿದ್ದಾರೆ ಎಂದು ಹೇಳುತ್ತಾನೆ, ಸಾಹೇಬ್ರ ಕೋಣಿಗೆ ಹೋಗಿ ನಮಸ್ಕರಿಸಿ ನಿಲ್ಲುತ್ತಾನೆ, ಸಾಹೇಬ್ರು ಹೇಳುತ್ತಾರೆ ತಕ್ಷಣ ನಿನ್ನೆ ಹೇಳಿದ ಆ ಫೈಲ್ ತೆಗೆದುಕೊಂಡು ಬಾ ನಾನು ಅರ್ಜೆಂಟಾಗಿ ದಿಲ್ಲಿಗೆ ಆ ಫೈಲ್ ತೆಗೆದುಕೊಂಡು ಹೋಗಬೇಕು ಎನ್ನುತ್ತಾರೆ, ಸರಿ ಸರ್ ಒಂದು ನಿಮಿಷದಲ್ಲಿ ತರುತ್ತೇನೆ ಎಂದು ಹೊರಗಡೆ ಬರುತ್ತಾನೆ, ಪ್ಯಾಂಟ್ ಜೇಬಿನಲ್ಲಿ ಕೈ ಹಾಕಿ ಅಲ್ಮಾರಿಯಕೀಲಿಗಾಗಿ ಹುಡುಕುತ್ತಾನೆ, ಗಡಿಬಿಡಿ ಯಲ್ಲಿ ಅಲಮಾರಿ ಕಿಲಿಕೈ ಮನೆಯಲ್ಲಿ ಬಿಟ್ಟು ಬಂದಿರುತ್ತಾನೆ, ಮೈಯಲ್ಲ ಬೆವರು ಬಿಡುತ್ತದೆ ಏನು ಮಾಡಬೇಕು ಅರ್ಥ ಆಗುತ್ತಿಲ್ಲ, ಹುಡುಕಾಟದಲ್ಲಿ ಹತ್ತು ನಿಮಿಷ ಆಗಿಬಿಡುತ್ತದೆ, ಮತ್ತೆ ಅಟೆಂಡರ್ ಬಂದು ಮತ್ತೆ ಸಾಹೇಬರು ತೀವ್ರ ಫೈಲ್ ತರಲಿಕ್ಕೆ ಹೇಳಿದ್ದಾರೆ ಎನ್ನುತ್ತಾನೆ, ಏನು ಮಾಡಬೇಕು ಅರ್ಥ ಆಗುತ್ತಿಲ್ಲ, ಪಕ್ಕದಲ್ಲಿದ್ದ ಸಹ ಉದ್ಯೋಗಿ ಎಲ್ಲಾ ಪರಿಸ್ಥಿತಿಯನ್ನು ಗಮನಿಸಿ ಅಲ್ಮರಿ ಲಾಕ್ ಮುರಿಯುತ್ತಾನೆ, ಸಾಹೇಬರಿಗೆ ಫೈಲ್ ಕೊಡುತ್ತಾರೆ, ಅಲ್ಲಿಗೆ ಆ ವಿಷಯ ಮುಗಿಯಿತು.
ಆದರೆ ಇಲ್ಲಿ ಆಲೋಚಿಸಬೇಕಾದ ವಿಷಯ ವೆೇನೆಂದರೆ, ವ್ಯಕ್ತಿ ಯ ಸೋಮಾರಿತನ ಸಮಯ ಪಾಲನೆ ಇಲ್ಲದಿರುವುದು ರಾತ್ರಿ ಟಿವಿ ನೋಡುತ್ತಾ ಒಂದು ಗಂಟೆಯವರೆಗೆ ಎಚ್ಚರ ಇರುವುದು ಬೆಳಗ್ಗೆ 8:00ಗೆ ತಡವಾಗಿ ಎಳುವುದು ಅಸ್ತವ್ಯಸ್ತ ಜೀವನ ಪದ್ಧತಿ ಇವೆಲ್ಲ ಈತ ಮಾಡಿದ ತಪ್ಪುಗಳು. ಅದರಿಂದ ಮನೆಯಲ್ಲಿ ಹೆಂಡತಿ ಜೊತೆ ಜಗಳವಾಯಿತು, ಮಕ್ಕಳನ್ನು ಶಾಲೆಗೆ ಬಿಡಲಿಲ್ಲ, 50, 60 ಕಿಲೋಮೀಟರ್ ಸ್ಪೀಡ್ ಸ್ಕೂಟರ್ ನಡೆಸುತ್ತಾ ಆಫೀಸಿಗೆ ಬರಬೇಕಾಯಿತು, ಹಾದಿಯಲ್ಲಿ ಎಕ್ಸಿಡೆಂಟ್ ಅನಾಹುತ ಏನಾದರೂ ಆಗಬಹುದಾಗಿತ್ತು, ಆಫೀಸ್ ನಲ್ಲಿ ಅಲ್ಮಾರಿ ಕೀಲಿ ಲಾಕ್ ಮುರಿಯಬೇಕಾಯಿತು, ಆಫೀಸ್ ನಲ್ಲಿ ಬೇರೆಯವರ ಮುಂದೆ ತನ್ನ ಮರ್ಯಾದೆ ಕಡಿಮೆ ಮಾಡಿಕೊಂಡ.
ಈ ಎಲ್ಲ ಅನಾಹುತಗಳಿಗೆ ಕಾರಣ ಕೇವಲ ಆ ವ್ಯಕ್ತಿ ಸಮಯ ಪಾಲನೆ ಇಲ್ಲದಿರುವುದು ಸೋಮಾರಿತನ ಅಸ್ತವ್ಯಸ್ತ ಜೀವನ ಪದ್ಧತಿ ಕಾರಣ. ಇಂತಹ ಬಹಳ ಜನರನ್ನು ನಾವು ಎಲ್ಲ ಕ್ಷೇತ್ರಗಳಲ್ಲಿ ನೋಡುತ್ತಾ ಇರುತ್ತೆವೆ. ವಿಶೇಷವಾಗಿ ನಮ್ಮ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆರಾಧನೆ ಉತ್ಸವಗಳಲ್ಲಿ ಸಮಯ ಪಾಲನೆ ಬಹಳ ಕಡೆ ಪಾಲಿಸುವದಿಲ್ಲ.
ನಮ್ಮ ಪೂರ್ವಜರು ನಮ್ಮ ಋಷಿಮುನಿಗಳು ನಮ್ಮ ಹಿರಿಯರು ಬಹಳ ಸಮಯ ಪಾಲನೆ ವ್ಯವಸ್ಥಿತ ಜೀವನ ಪದ್ಧತಿಯಲ್ಲಿ ಜೀವಿಸುತ್ತಾ ಇದ್ದರು. ಅವರು ಯಾರು ಸೋಮಾರಿಗಳಾಗಿರಲಿಲ್ಲ.
ಜಪಾನಿಯರ ಸಮಯ ಪಾಲನೆ ನೋಡಿ. ನನ್ನ ಒಬ್ಬ ಮಿತ್ರರು ತಾವು ಜಾಪನಿಗೆ ಹೋಗಿ ಬಂದ ಅನುಭವ ಹೇಳಿದರು, ಅವರು ಒಂದು ಕಂಪನಿ ಕೆಲಸಕ್ಕಾಗಿ ಜಾಪನಿಗೆ ಹೋಗಿದ್ದರು, ಜಪಾನ್ ಏರ್ಪೋರ್ಟ್ ನಿಂದ ಹೊರಗೆ ಬಂದ ತಕ್ಷಣ ಒಬ್ಬ ವ್ಯಕ್ತಿ ಕೈಯಲ್ಲಿ ಇವರ ಹೆಸರಿನ ಚಿಕ್ಕ ನಾಮ ಫಲಕ ಹಿಡಿದುಕೊಂಡು ನಿಂತಿರುತ್ತಾನೆ, ಆತ ಒಂದು ಹೋಟೆಲ್ ಗೆ ಇವರನ್ನು ಕರೆದುಕೊಂಡು ಹೋಗಿ ಇವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಾನೆ, ಹಾಗೂ ಹೇಳುತ್ತಾನೆ ನಾಳೆ ತಾವು ರೈಲ್ವೆ ಮುಖಾಂತರ ಫಲಾನ ರೈಲ್ವೇ ಸ್ಟೇಷನ್ ಗೆ ಬರಬೇಕು ಅಲ್ಲಿ ನಾನು ಇದೇ ತರ ನಿಮಗೆ ರಿಸಿವ್ ಮಾಡಿಕೊಳ್ಳುತ್ತೇನೆ. ಇಲ್ಲಿಂದ ನೀವು ಟ್ಯಾಕ್ಸಿಯಲ್ಲಿ ಹತ್ತಿರದಲ್ಲಿ ಇದ್ದ ಫಲಾನ ರೈಲ್ವೆ ಸ್ಟೇಷನ್ ಗೆ ಹೋಗಿ ಅಲ್ಲಿಂದ ಟ್ರೈನ್ ಹತ್ತಿ ಎಂದು ಎಲ್ಲ ವಿವರಣೆ ಕೊಟ್ಟು ಹೋಗುತ್ತಾನೆ, ಅದೆ ಪ್ರಕಾರ ಮಾರನೇ ದಿನ ಇವರು ರೈಲ್ವೆ ಸ್ಟೇಷನ್ ಗೆ ಹೋಗುತ್ತಾರೆ, ಆ ರೈಲ್ವೆ ಸ್ಟೇಷನ್ ನಲ್ಲಿ ಯಾವ ಸ್ಟೇಷನ್ ಗೆ ಹೋಗಬೇಕು ಆ ಸ್ಟೇಷನ್ ಟಿಕೆಟ್ ತೆಗೆದುಕೊಳ್ಳುತ್ತಾರೆ ಆದರೆ ಇವರಿಗೊಂದು ಸಮಸ್ಯೆ ಅಲ್ಲಿ ಎಲ್ಲಾ ರೈಲ್ವೆ ಬೋರ್ಡಿನ ಅಕ್ಷರಗಳನ್ನು ಜಪಾನಿ ಭಾಷೆಯಲ್ಲಿ ಬರೆದಿರುತ್ತಾರೆ ಇಂಗ್ಲಿಷ್ ನಲ್ಲಿ ಬರೆದಿರುವುದಿಲ್ಲ ಅವರು ಯಾವ ಸ್ಟೇಷನ್ ಗೆ ಹೋಗಬೇಕು ಆ ಸ್ಟ್ರೇಷನ್ ಹೆಸರು ಕೂಡ ಜಪಾನಿ ಭಾಷೆಯಲ್ಲಿರುತ್ತದೆ, ಇತನಿಗೆ ಜಪಾನಿ ಭಾಷೆ ಬರುವುದಿಲ್ಲ ಏನು ಮಾಡಬೇಕು ಎಂದು ಅಲ್ಲಿ ಸ್ಟೇಷನ್ ಮಾಸ್ಟರ್ ಗೆ ಕೇಳುತ್ತಾನೆ, ಆಗ ಅಲ್ಲಿ ಸ್ಟೇಷನ್ ಮಾಸ್ಟರ್ ಹೇಳುತ್ತಾನಂತೆ ನೋ ಪ್ರಾಬ್ಲಮ್ ನೀವು ನಿಮ್ಮ ಗಡಿಯಾರವನ್ನು ನಮ್ಮ ಜಪಾನ್ ರೈಲ್ವೆ ಟೈಮಿಗೆ ಅಡ್ಜಸ್ಟ್ ಮಾಡಿಕೊಳ್ಳಿ, ಈಗ ಸರಿಯಾಗಿ 8:00 ಆಗಿದೆ ನೀವು ಹೋಗಬೇಕಾದ ಸ್ಟೇಷನ್ 9:00, ಗಂಟೆ 13 ನಿಮಿಷಕ್ಕೆ ಬರುತ್ತದೆ ನಿಮ್ಮ ಗಡಿಯಾರದಲ್ಲಿ 9:00 ಗಂಟೆ, 13 ನಿಮಿಷ ಆದ ತಕ್ಷಣ ನೀವು ಜಂಪ್ ಮಾಡಿ ಖಚಿತವಾಗಿ ನೀವು ಅದೇ ಸ್ಟೇಷನ್ನಲ್ಲಿ ಇಳಿದಿರುತ್ತೀರಿ, ಎಂದು ಸ್ಟೇಷನ್ ಮಾಸ್ಟರ್ ಹೇಳುತ್ತಾರಂತೆ, ಅವರು ಅದೇ ರೀತಿ ಆ ಸ್ಟೇಷನ್ ತಲುಪುತ್ತಾರೆ , ನೋಡಿ ಜಪಾನಿಯವರ ಸಮಯ ಪಾಲನೆ, ಆ ರೀತಿ ಏನಾದರೂ ನಾವು ನಮ್ಮ ಗಡಿಯಾರ ನಮ್ಮ ಭಾರತದಲ್ಲಿ ರೈಲ್ವೆ ಗೆ ಸೆಟ್ ಮಾಡಿಕೊಂಡು ಜಂಪ್ ಮಾಡಿದರೆ ನಾವು ಕೃಷ್ಣಾ ನದಿಯಲ್ಲೇ ಬೀಳುತ್ತೇವೆ, ಒಂದು ಟ್ರೈನ್ ಮೊನ್ನೆ ಜಪಾನ್ ನಲ್ಲಿ ಒಂದು ನಿಮಿಷ 30 ಸೆಕೆಂಡ್ ಲೇಟಾಗಿ ಬಂದದ್ದಕ್ಕೆ ಅಲ್ಲಿ ರೈಲ್ವೆ ಮಂತ್ರಿ ಕ್ಷಮೆ ಕೇಳುತ್ತಾರೆ.
ಜಪಾನಿನ ಹಿರೋಶಿಮಾ ನಾಗಸಾಕಿ ಮೇಲೆ ಅಣು ಬಾಂಬ ಹಾಕಿ ಲಕ್ಷಗಟ್ಟಲೆ ಜನರನ್ನು ಸಾಯಿಸುತ್ತಾರೆ, ಆ ಬಾಂಬ್ ಹಾಕಿದ ಸ್ಥಳದಲ್ಲಿ ಸಾವಿರ ವರ್ಷ ಹುಲ್ಲುಕಡ್ಡಿ ಬೆಳೆಯದಂತೆ ಮಾಡಿರುತ್ತಾರೆ, ನೋಡಿ ಜಪಾನಿಯರ ಕರ್ಮ ಯೋಗ ಇಂದು ಅಲ್ಲಿ ಒಂದು ಶಾಂತಿವನ ಎಂದು ಸ್ಥಾಪಿಸಿದ್ದಾರೆ ಜಗತ್ತಿನ ಎಲ್ಲ ದೇಶದಲ್ಲಿ ಬೆಳೆಯುವ ಹೂಗಳು ಆ ಜಪಾನಿನ ಶಾಂತಿವನದಲ್ಲಿ ಇವೆ, ಅವರು ಅಷ್ಟು ಕರ್ಮಯೋಗಗಳಾಗಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಈ ಕರ್ಮ ಯೋಗ ಸಮಯ ಪಾಲನೆ ಆಲಸ್ಯತನ ಬಿಡುವುದು ಇದನ್ನೇ ಹೇಳಿದ್ದಾರೆ, ಪ್ರತಿ ಅಧ್ಯಾಯದ ಹೆಸರು ಯೋಗದಿಂದಲೇ ಪ್ರಾರಂಭವಾಗುತ್ತದೆ, ಅದಕ್ಕಾಗಿ ಶ್ರೀ ಕೃಷ್ಣ ಪರಮಾತ್ಮನನ್ನು ಯೋಗೇಶ್ವರ ಕೃಷ್ಣ ಎನ್ನುತ್ತಾರೆ, ಆತ ವೈಶ್ವ ನರಾಗ್ನಿ ಉಪಾಸನೆ ಮಾಡುತ್ತಿದ್ದನಂತೆ, ವೈಶ್ವ ನರಾಗ್ನಿ ಅಂದರೆ ಪ್ರತಿ ಜೀವಿಯ ಹೊಟ್ಟೆಯಲ್ಲಿ ಉದ್ಭವಿಸುವ ಅಗ್ನಿ ಎಂದು ಅರ್ಥ, ಅದಕ್ಕಾಗಿ ಶ್ರೀ ಕೃಷ್ಣ ಪರಮಾತ್ಮ ಸರಿಯಾಗಿ ಹನ್ನೆರಡು ಗಂಟೆಗೆ ಊಟ ಮಾಡುತ್ತಿದ್ದ, ಆತನ ಎಲ್ಲ ಕೆಲಸಗಳು ಸಮಯ ಬದ್ಧ ವ್ಯವಸ್ಥೆ ವಾಗಿ ಇರುತ್ತಿದ್ದವು, ತಮ್ಮೆಲ್ಲ ಕೆಲಸವನ್ನು ಶ್ರೀ ಕೃಷ್ಣ ಪರಮಾತ್ಮ ಸ್ವತಹ ಮಾಡಿಕೊಳ್ಳುತ್ತಿದ್ದರು.
ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು ಯಾವ ಮನುಷ್ಯ ಹಣ ಕೊಡುವುದು ತೆಗೆದುಕೊಳ್ಳುವುದರಲ್ಲಿ ಅವ್ಯವಸ್ಥಿತ ಆಗಿರುತ್ತಾನೋ ಅವನು ಎಂದು ಧಾರ್ಮಿಕ ವ್ಯಕ್ತಿ ಆಗಲಾರ. ಹಣದ ವ್ಯವಹಾರದಲ್ಲಿ ನಾವು ಬಹಳ ಪ್ರಾಮಾಣಿಕವಾಗಿರಬೇಕು ಇದೇ ಧರ್ಮ.
ಇಂದು ಜೀವನದಲ್ಲಿ ಉನ್ನತ ಸ್ಥಾನ ದಲ್ಲಿರುವ ಎಲ್ಲ ವ್ಯಕ್ತಿಗಳು ರಹಸ್ಯ ಎಂದರೆ ಅವರ ಸಮಯ ಪಾಲನೆ ಇಂದ ಇರುತ್ತಾರೆ.ನಾವೆಲ್ಲ ಪ್ರತಿನಿತ್ಯ ನಮ್ಮ ಜೀವನವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು, ಬೆಳಿಗ್ಗೆ 5:00 ಗಂಟೆಗೆ ತಪ್ಪದೇ ಎಳಬೇಕು, ಸ್ವಲ್ಪ ಧ್ಯಾನ ಸ್ವಲ್ಪ ವ್ಯಾಯಾಮ ಎರಡು ಗ್ಲಾಸ್ ಬಿಸಿನೀರು ಕುಡಿಯುವದು, ದೇಹ ಶುದ್ದಿ ಸ್ವಲ್ಪ ಸಮಯ ದೇವರ ಪ್ರಾರ್ಥನೆ, ನಂತರ ನಮ್ಮ ಎಲ್ಲ ಕೆಲಸಗಳನ್ನು ಮುಗಿಸಿ ಸಾಯಂಕಾಲ 10 ಗಂಟೆ ಒಳಗೆ ಮಲಗಿಕೊಳ್ಳಬೇಕು, ರಾತ್ರಿ ಮಲಗುವಾಗ ನಮ್ಮ ದಿನಚರಿ ನಮಗೆ ತೃಪ್ತಿ ತಂದಿರಬೇಕು, ಹಾಯಾಗಿ ನಿದ್ದೆ ಬರಬೇಕು ಅಂತಹ ದಿನಚರಿ ನಮ್ಮದಾಗಿರಬೇಕು, ಬೆಳಗ್ಗೆ ಏಳುವಾಗ ನಮ್ಮ ಮುಖದಲ್ಲಿ ನಗು ಇರಬೇಕು ಇದೇ ಯೋಗ ಜೀವನ. ಬನ್ನಿ ಇಂತಹ ವಿಷಯಗಳನ್ನು ನಮ್ಮ ಮಕ್ಕಳಿಗೆ ಹೇಳೋಣ ನಾವು ಆಚರಿಸೋಣ.
ಮನುಷ್ಯ ಏನಾದ್ರೂ ಕೆಲಸ ಮಾಡುತ್ತಾ ಇರಬೇಕು ಸುಮ್ಮನೆ ಕೂತಿರುವುದು ಬಹಳ ಹಾನಿಕಾರಕ. ಒಬ್ಬ ಹಿಂದಿ ಸಂತರು ಹೇಳುತ್ತಾರೆ-
“ಖಾಲಿಯಾಗಿ ಸುಮ್ಮನೆ ಕೂತಿರಬೇಡಿ, ಏನಾದರೂ ಕೆಲಸ ಮಾಡುತ್ತ ಇರಿ, ಒಂದು ವೇಳೆ ಏನು ಕೆಲಸ ಇಲ್ಲ ಎಂದರೆ ನಿಮ್ಮ ಹೊಸ ಪೈಜಾಮ ಹರಿಯಿರಿ ಮತ್ತು ಹೂಲಿಯಿರಿ”, ಅಂದರೆ ನೋಡಿ ಕೆಲಸ ಮಾಡುತ್ತಾ ಇರಬೇಕು ಎಂಬ ಸಂದೇಶ.
~ ವಿಶ್ವಾಸ್. ಡಿ .ಗೌಡ
ಸಕಲೇಶಪುರ