ಬಿಡುಗಡೆ
(ಮುಂದುವರಿದ ಭಾಗ 5)

ಬಡತನದ ರಥವನ್ನು ಸಾಗಿಸಲೇಬೇಕು ಬಡತನ ಬಡವನ ಕೋಪ ದವಡಿಗೆ ಮೂಲ ನಿಜವಾಗಿ ಸತ್ಯ. ಮನಸ್ಸು ಯಾವಾಗಲೂ ನಮ್ಮಂತಿರಬೇಕು ಎನ್ನುವುದು ಇಷ್ಟರ ಮಟ್ಟಿಗೆ ಸತ್ಯವೋ!… ಗೊತ್ತಿಲ್ಲ? ಅವಮಾನ ಅನುಮಾನ ಎಲ್ಲವನ್ನು ಸ್ವೀಕರಿಸಿ ಇಲ್ಲಿಯ ವೃತ್ತಿಯನ್ನು (ಜೀವನ) ಗೆಲ್ಲಬೇಕು ಅಂದಾಗ ನಮ್ಮ ಬದುಕಿಗೊಂದು ಸಾರ್ಥಕತೆ ಬಂದಂತೆ ಅಭಿವೃದ್ಧಿ ಸಾಧಿಸಲು ಗೆಲ್ಲಿಸುವುದು ಸೋಲಿನ ಸವಾಲು ಆಟವೇ ಬಡವರ ಪಾಲಿಗೆ ಬಹುಮಾನ. ಶುದ್ಧ ಸಾಮರ್ಥ್ಯ ನಿನ್ನಲ್ಲಿದ್ದರೆ? ಯಾರು ಸೋಲಿಸಲು ಸಾಧ್ಯವಿಲ್ಲ ಅದು ನಿನ್ನೊಂದಿಗೆ ಯಾವಾಗಲೂ ಇರುವ ಸಲೆ, ಬೆಲೆ ಶಾಶ್ವತವಾದದ್ದು. ಕೆಲವೊಂದು ಪದವಿ ಬಿರುದುಗಳು ನಾವುಗಳು ಪ್ರಪಂಚದಿಂದಲೇ ಕಣ್ಮರೆಯಾದಾಗ ಲಭಿಸುತ್ತದೆ. ಇದರರ್ಥ ನಮ್ಮ ಸಾಧನೆಗಳೇನು? ಇಲ್ಲಿ ನಾವು ಕೊಟ್ಟ ಒಲವಿನ ಕಾಣಿಕೆಗಳೇನು? ಶೋಧಿಸುತ್ತಾ ಹೋದಾಗ ಲಭಿಸುವ ಕೊಡುಗೆಗಳು ಸಾಲು ಸಾಲು ಆದರೂ ನಾನೇನು ಅಲ್ಲ ಎನ್ನುವ ಮೆಲುಕು ಅಸ್ಮಿತಾ ವಾಗಿರುತ್ತದೆ. ನನಗೆ ಗೊತ್ತಿಲ್ಲದು ಯಾವುದು ಇಲ್ಲ ಎನ್ನುವ ಅಹಂಕಾರ ಮನುಷ್ಯನ ಬದುಕಿನ ವಿನಾಶಕ್ಕೆ ಕಾರಣ.
ತಗ್ಗಿ ಬಗ್ಗಿ ಕುಗ್ಗಿ ನಡೆದರೆ ಎಂದಿಗೂ ಶ್ರೇಯಸ್ಸು ಯಶಸ್ಸು ಇದೆ. ಮನುಷ್ಯನಲ್ಲಿ ಒಂದು ಸಾಮಾನ್ಯ ಗುಣ ಆಗಿರಬೇಕು.
ದಾನ ಧರ್ಮದಲ್ಲಿ ಧಣಿ
ಆಗೂ ನ್ಯಾಯ ನೀತಿಯಲ್ಲಿ ಶ್ರೇಣಿಯಾಗು ಭಕ್ತಿ ಭಾವದಲ್ಲಿ ಹೃದಯ ತ್ಯಾಗಿ ಆಗು ಎಲ್ಲಾರ ಜೀವನದಲ್ಲಿ
ನಕ್ಕು ನಲಿಸುವ ವಿಶೇಷ ಮಾನವ ನೀನಾಗು
ಮಾನವೀಯ ತತ್ವಗಳ ಮೆರವಣಿಗೆಯ ಮಾಡುತ್ತ ಸಾಗೂ ನಿಜಗುಣ ಅರಿವಿನ ಜ್ಞಾನ ಬರುವವರೆಗೂ ನೀವು ಹೋಗು ಭಾಗ್ಯದ ಜ್ಞಾನ ಅರಿತರೇ ಸುಜ್ಞಾನ ಭಾವನೆಯ ಈ ಜೀವನ ಹಲವು ರೀತಿಯ ಕಡಲುಗಳು. ಇದು ಯಾರ ನಿರೀಕ್ಷೆಗೂ ನಿಲುಕದ ಒಂದು ಯಜ್ಞ ಪರೀಕ್ಷೆ

ಓ ನನ್ನ ಒಲವಿನ ಗೆಳೆಯ ನನ್ನ ಜೀವನದ ಪ್ರಥಮ ಹಂತದಲ್ಲಿ ಮೊದಲ ಚುಂಬನ ನೀಡಿದ ಕನಸುಗಾರ ನೀನು ನೆನಪು ಮಾತ್ರ ಶಾಶ್ವತ ಎಂದಿಗೂ ಮರೆಯಲು ಆಭ್ಯಧ್ಯೆ ಮತ್ತೆ ನೆನಪಿಸುವ ಹಸಿರು ಆ ಪ್ರೇಮೋತ್ಸವದ ಮೆರವಣಿಗೆ. ಪ್ರಥಮ. ನನ್ನ ಭಾವನೆಗಳ ಜೊತೆಯಲ್ಲಿ ಭಾವನೆಗಳ ಬೆಸೆದು ಹೃದಯ ನಿವಾಸಿಯಾದ ದೊರೆ ನೀನು. ಸವಿ ಸವಿ ನೆನಪುಗಳು ಕೊಟ್ಟ ಶೃಂಗಾರ ಕವಿ ನೀನಾದೆ ನಿನ್ನೊಂದಿಗೆ ಕಳೆದ ಒಂದೊಂದು ಕ್ಷಣಗಳು ಮೈ ಜುಂ ಎನಿಸುವ ರೋಮಾಂಚನಗಳು ನನ್ನ ಕಲ್ಪನೆಯ ಕನಸಿನ ನಾಯಕನು ನೀನಾಗಿ, ನನ್ನ ಮನದಾಸಿಯ ಕನವರಿಕೆಯ ಬಿಡಿಸುವ ಯುಗಪುರುಷ ನೀನಾಗಿ, ನನ್ನ ಜೊತೆ ಜೊತೆಗೂ ಹೆಜ್ಜೆ ಹಾಕುವ ನವಯುಗದ ನಾಯಕನು ನೀನಾಗಿ, ಬಾ ಅಂತರಾಳದಿಂದ ಕೈಬೀಸಿ ಕರೆಯುವೆ ನೀನಾಗು ಜೊತೆಯಾಗಿ.

ನನ್ನ ಅಂತರಾಳದಲ್ಲಿ ಬಚ್ಚಿಟ್ಟುಕೊಂಡು ಬ್ಯೂಟಿ ಎಂಬ ಸ್ವೀಟನ್ನು ಸೈಲೆಂಟಾಗಿ ವೈಲೆಂಟ್ ಮಾಡಿಕೊಂಡ ಹಾರ್ಟ್ ಬೀಟ್ ನೀನು

ಮುಂಜಾನೆಯ ಮಂಜಿನ ಹನಿ ಹನಿಯಾಗಿ ಚುಂಬಿಸಿದ ನನ್ನ ಕನಸುಗಾರ ನೀನು ಆ ನಿನ್ನ ಮೊದಲ ನೋಟ ಮೊದಲ ಸ್ಪರ್ಶ ಮೊದಲ ಮಾತು ಮೊದಲ ಚುಂಬನ ಹೊಸತು ಎಲ್ಲಾ ಹೊಸದು ನನ್ನ ಜೀವನಕ್ಕೆ ಮೊದಲ ಹೊಸ ಅಧ್ಯಾಯ ಬರೆದ ಉಪಾಧ್ಯಾಯರು ನೀನು ಬರಿ ಪ್ರೀತಿಗೆ ಮಾತ್ರ ನಾಯಕನು ಅಲ್ಲ ಜೀವನದ ಹಾದಿಗು ಜೀವನದ ಸ್ಪೂರ್ತಿಗೂ ಸಾಧನೆಗೂ ಸಾಧಕ ಪಾದಕಗಳನ್ನು ಸೆರೆದೂಗಿಸಿಕೊಂಡು ನಡೆಸುವಂತಹ ವೀರ ಹೆಜ್ಜೆ ಹೇಳಿಕೊಟ್ಟ ಗುರು ನೀನು ನಾಲ್ಕು ಕೋಣೆಯೊಳಗೆ ಬಂಧಿಯಾಗಿದ್ದ ಅಬಲೆ ಮಹಿಳೆ ನಾನಾಗಿದ್ದೆ ಈ ಸಮಾಜದಲ್ಲಿ ಬಾಳುವಂತ ತತ್ವಗಳನ್ನ ಸಾರಿ ಸಾರಿ ಹೇಳಿಕೊಟ್ಟ ಮೊದಲ ಗೆಳೆಯ ನೀನು, ಅಂಜದೆ ಹೆದರದೆ ಹಳುಕದೆ ಶಿಕ್ಷೆಗಳಿಗೆ ಗುರಿಯಾಗದೆ ಉಪಾಯದಿಂದ ಯಾರಿಗೂ ಅಪಾಯವಾಗದಂತೆ ದಡ ಸೇರುವ ಸಲಹೆ ಎಂಬ ಸೇತುವೆ ಹಾಕುವ ಕಲೆಯನ್ನು ಹೇಳಿಕೊಟ್ಟ ಸ್ನೇಹ ಜೀವಿ ನೀನು ನಿನ್ನಂತ ಪ್ರೇಮ ಪೋಷಕನ ಪಾತ್ರದಲ್ಲಿ ನಿಂತು ನಿಷ್ಠೆಯಿಂದ ಕಾರ್ಯನಿರ್ವಹಿಸುವ ನವಯುಗದ ನಾಯಕನಿಗೆ ನನ್ನ ಹೃದಯಪೂರ್ವ ಅಭಿನಂದನೆಗಳು 💐🫀🌹

ಹಣ್ಣಿಗೂ ಹೆಣ್ಣಿಗೂ ವ್ಯತ್ಯಾಸ ಗೊತ್ತಿರದ ಕಾಮಾಂಧರಿಗೆ ಪಾಠ ಕಲಿಸಿದ ನನ್ನ ಭಾವನೆಯ ಪೂಜ್ಯರು ನೀವು ಪ್ರೇಮದ ಹೆಸರಿನಲ್ಲಿ ನಮ್ಮಂತ ಅಮಾಯಕರನ್ನು ಸುಲಭವಾಗಿ ಯಾಮಾರಿಸಿ ತಮ್ಮ ಸುಖಕ್ಕಾಗಿ ಬಳಸಿಕೊಳ್ಳುವ ರೀತಿಯನ್ನು ಸ್ವಾರ್ಥ ಅಂತ ಕರೆದರೆ ಅದು ನಿಜವಾಗಿ ತಪ್ಪಾಗುತ್ತೆ ಅದು ಪ್ರೀತಿ ಎನ್ನುವ ದೇವತೆಯನ್ನು ಕೊಲೆ ಮಾಡುವ ಗೋಮುಖ ವ್ಯಾಘ್ರ ಎಂದು ಹೆಸರು. ಪ್ರೇಮದ ಹೂ ಎಂದಿಗೂ ಬಾಡದು.

ಸಮಾಧಾನ ತಾಳ್ಮೆ ಕಳೆದುಕೊಂಡು ಚಿಂತೆ ವೆಸನಗಳಿಗೆ ಗುರಿ ಮಾಡುವವರು ಬೇಕಾ? ಬದುಕುವುದನ್ನು ಪರಿಪರಿಯಾಗಿ ಹೇಳಿಕೊಟ್ಟ ನಾಯಕನನ್ನು ಮಾತ್ರ ಪೂಜಿಸಲು ನಾ ಮರೆಯುವುದಿಲ್ಲ. ಏಕೆಂದರೆ ಈಗ ನನ್ನ ಬದುಕು ಹೇಳಿ ಸುಖವಿಲ್ಲ. ಇದಕ್ಕೆ ಮಾಡಿದ ಮೋಸಕ್ಕೆ ಈಗ ನನಗೆ ಸಿಗುತ್ತಿರುವ ಉತ್ತರ ಇದು.
*************************

ಮುಂದುವರಿಯುವುದು
🩷🩷🩷🩷🩷🩷🩷🩷
ಭಾವನೆಗಳ ಆರಾಧಕ ಪ್ರೀತಿಯಿಂದ ✍️ ಚನ್ನವೀರಸ್ವಾಮಿ ಹೀರೆಮಠ ಹೊಳಗುಂದಿ