ಜೀವನ ಚಕ್ರ

ನಿನ್ನೆ ಇಂದಾಗುವ ಇಂದು ನಾಳೆಯಾಗುವ ತೆರದಿ ಸುತ್ತುವ ಜೀವನ ಚಕ್ರದ ಪರಿಧಿಯಲ್ಲಿ ತಿರುಗುತ..
“ಆ ನಾಳೆ” ಚೆಂದವಾದೀತು ಎನ್ನುವ ಭರವಸೆಯಲಿ..

ಆ ಚಕ್ರ ಎಲ್ಲಿ ನಿಲ್ಲುವುದೊ ಅನ್ನುವ ಭೀತಿಯಲೇ ಉರುಳಿಹೋಗುವುದೇ ಜೀವನ…!!!.

ಜೀವನ ಚಕ್ರ ದಿ ಒಮ್ಮೆ ನಾನು ಮೇಲೇ ಒಮ್ಮೆ ನೀನು!!…. ನಿನ್ನದೀಗ ಮೌನದ ಜೊತೆ ಗಾಢ ಸ್ನೇಹ!…
ನನಗೆ ನಿನ್ನ ಜೊತೆ ಮಾತಾಡುವ ಮೋಹ!
ಕಾಲ ಉರುಳುವುದು!!!
ಅದಲುಬದಲಾಗದೆಂದು ತಿಳಿದಿರುವೆಯಾ? ಎಂದು ಕಷ್ಟ ಸುಖಗಳು ಮಾತಾನಾಡಿಕೊಳ್ಳುತ್ತವೆಯಂತೆ!!!!…

ಎಲ್ಲ ಮುಗಿಯಿತು ಏನಿದು ಬರೀ ಕಷ್ಟ
ಎನ್ನುವಾಗಲೇ ಬರುವ ಸುಖ!!!.

ಇನ್ನೇನು ನಿಶ್ಚಿಂತೆ, ಎಲ್ಲ ಸುಖ ನನ್ನದೇ…ನನಗೇಕೆ ಭಯ?
ಎಂದಾಗಲೇ ಕಷ್ಟ ಬರುವುದು ಸ್ಪಷ್ಟ!.

ಚಿಂತಿಸದಿರಿ…..!

ಕಷ್ಟಕ್ಕೂ ಸಾವಿದೆ!!!….
ಸುಖಕ್ಕೂ ಮರುಜನ್ಮವಿದೆ!!!…
ಬಂದಂತೆ ಸ್ವೀಕರಿಸುವನೇ ಜಾಣ,

ಸ್ವರ್ಗ ಅವ ನಿಂತ ತಾಣ!.
ಜೀವನ ಒಂದು ಚಕ್ರ
ಪ್ರತೀ ಭಾಗ ಕಾಣುವುದು ವಕ್ರ!.

ಒಂದೆಡೆ ನಿಲ್ಲದೆ,
ನಿರಂತರ ಚಲಿಸುವ ಈ ಜೀವನ,
ಅನಿವಾರ್ಯತೆಯ ಯಾನ.
ಇಂದು ನೀನಿರುವ ಸ್ಥಿತಿ ಸ್ತಿರವಲ್ಲ,..

ಮುಂದೆ ನೋಡು ಅಲ್ಲಿಹುದು ಸುಖ,
ಅಂದಿನ ಸುಖಕ್ಕೆ ಇಂದು ನೀ ಜೀವಿಸಲೇಬೇಕು,
ಆ ಭರವಸೆಯಲ್ಲೇ ಸಾಗಿದೆ ಜೀವನ ಪಯಣ.

ಸುಖ-ದುಃಖ ಚಕ್ರದ ತೆರದಿ
ಒಂದರನಂತೊಂದರ ಸರದಿ!.

ಅ ದೇ ಉವಾಚ