ಬದುಕಿನ ಕದನ

ನಾನಾ, ನೀನಾ ಎಂಬ ನಡಿಗೆ
ಹೊರಡುತಿದೆ ಗೋರಿಯ ಕಡೆಗೆ
ಕಾರಣವಾಯ್ತಾ ಈ ಕದನದ ಸೇಡಿಗೆ
ಅನ್ಯಾಯ, ಮೋಸದ ಸಮಾಜ ಮಳಿಗೆ…..೧

ವಂದನಾ ಮುದ್ರೆ ಮರೆತಿದೆ ಮನ ಧನ ನಿದ್ರೆಯಲ್ಲಿ ಜಾರಿರುವರು ಜನ
ಭಿನ್ನ ಧರ್ಮಗಳ ಈ ಒಡಕು ಬನ,
ಸೇರಿಸಲು ಬರಬಹುದಾ ಆ ಸುದಿನ….೨

ದ್ವೇಷದ ದವಡೆಯಲ್ಲಿ ಸಿಲುಕಿದೆ ದೇಹ ಆದರೂ ತುಂಬದ ಮೊದಲೆಂಬ ದಾಹ ತೊಲಗಬೇಕಿದೆ ಸಾಕೆನ್ನದ ಬರೆ ಹೊತ್ತ ಮೋಹ
ಬದಲಾಗಿ ಬೇಕು ಎಲ್ಲರನು ಮುನ್ನುಗ್ಗಿಸೊ ಸ್ನೇಹ…೩

ಆದಷ್ಟು ಬೀರು ಒಳ್ಳೆತನ ಎಲ್ಲರಿಗೆ
ಎಲ್ಲರ ಮನದಲ್ಲಿ ಸ್ಥಳವಿರಲಿ ತಮ್ಮ ಹೆಸರಿಗೆ
ಶಾಶ್ವತ ಬದುಕಿಲ್ಲಾ ಇಲ್ಲಿ ಯಾರಿಗೆ
ಕೊನೆಗೆ ಎನಿಲ್ಲದೆ ಬೆತ್ತಲಾಗಿ ಗೋರಿಗೆ..೪

– ಅಮಾನುಲ್ಲಾ ಪೆಂಡಾರಿ