ನನ್ನ ಸಾಧನೆ

ಗೆಲುವು ನಿಲುಕದೆ ಸೋತಿದ್ದೆ ನಾನು
ನನ್ನ ವಿಧಿಯಾಟಕ್ಕೆ ನಗುತ್ತಿತ್ತು ಬಾನು..
ಇರುಳು ದಾರಿಯ ಅರಿಯದೆ ಏನು
ಕಣ್ಣಿದ್ದೂ ಕುರುಡಾಗಿ ಕುಳಿತಿದ್ದೆ ನಾನು…..೧

ಮನಸಿನ ಮನೆಯಲ್ಲಿ ಮಲಗಿತ್ತು ಮೌನ
ದೇವರಲ್ಲಿ ನಿತ್ಯ ನನ್ನ ಕಣ್ಣೀರಿನ ಗಾನ..
ಸಿಕ್ಕಿತು ಅದೊಂದು ಅವಕಾಶ ದಾನ
ಶುರುವಾಯ್ತು ನನ್ನ ಗೆಲುವಿನ ಯಾನ…..೨

ಸಿಗಲಿಲ್ಲ ನನ ನನಗೆ ಸರಿಯಾದ ಸ್ಪಂದನೆ
ಪ್ರತಿಯೊಬ್ಬರ ಬಾಯಲ್ಲೂ ನಿಂದನೆ..
ಅವರೆಲ್ಲರಿಗೂ ನನ್ನ ಹೃದಯದ ವಂದನೆ
ಅವರ ಸ್ಫೂರ್ತಿಯಿಂದಲೆ ಈ ನನ್ನ ಸಾಧನೆ…..೩

ಕಷ್ಟದ ಕಾಲಕ್ಕೆ ಕೈ ಮುಗಿದು ಕರೆದೆ
ಆಗದೆಂದು ಯಾರೊಬ್ಬರೂ ಬರದೆ
ನೊಂದು,ಕೆಲಕಾಲ ಗೋಗರೆದೆ
ಇವೆಲ್ಲ ಮೆಟ್ಟಿನಿಂತು ನಾ ಮೇರೆದೆ…..೪

ನಾನಿಡುವ ಪ್ರತಿ ಕಾರ್ಯದ ಹೆಜ್ಜೆ
ಕಟ್ಟಿಕೊಂಡು ನೋಡಲಿ ಇವರೆಲ್ಲಾ ಕೈಬಳೆ, ಕಾಲೆಜ್ಜೆ…..

– ಅಮಾನುಲ್ಲಾ ಪೆಂಡಾರಿ, ನಾಗರಮುನ್ನೋಳಿ