ವಾತಾಪಿ ಜೀರ್ಣೋಭವ (ಬಾದಾಮಿ)
ಬಾದಾಮಿ ಎಂದಾಕ್ಷಣ ನೆನಪಾಗುವದು ಸಹಸ್ರಾರು ವರ್ಷಗಳ ಹಿಂದೆಯೇ ನಿಸರ್ಗದಲ್ಲಿ ಬಿಡಿಸಿದ ಮೋಹಕ ‘ಮೇಣ ಬಸದಿ ಇಂದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ತಾಲೂಕ ಸ್ಥಳವಾಗಿದೆ. ಆರನೇಯ ಶತಮಾನದ ಅರಸ ಮೊದಲನೇಯ ಪುಲಕೇಶಿಯು ಬಾದಾಮಿಯನ್ನು ಮಾಡಿಕೊಂಡು ಆಳ್ವಿಕೆ ತನ್ನರಾಜಧಾನಿಯನ್ನಾಗಿ ಮಾಡುವ ಮೊದಲೆಸುಪ್ರಸಿದ್ದವಾಣಿಜ್ಯ ನಗರವಾಗಿತ್ತು.
ಗ್ರೀಕ ದೇಶದ ಭೂಗೋಳ ತಜ್ಞಟೊಲೆಮಿ ಕ್ರಿ.ಶ. ಸುಮಾರು 2ನೇಯ ಶತಮಾನದಲ್ಲಿ ತನ್ನ ಪುಸ್ತಕದಲ್ಲಿ ಬಾದಾಮಿಯನ್ನು ‘ಬದೊಮೊಯಿ’ ಎಂದು ಉಲ್ಲೇಖಿಸಿದ್ದಾನೆ. ವಾತಾಪಿ ಬಾದಾಮಿಯ ಪ್ರಾಚೀನ ಹೆಸರು. ಹಾಗೆ ಚಾಲುಕ್ಯರ ರಾಜ ಧಾನಿಯೂ ಕೂಡಾ ಆಗಿತ್ತು. ವಾತಾಪಿ ಅಥವಾ ವಾತಾಪಿಪುರ ಎಂದು ಹೆಸರು ಬರಲು ಒಂದು ದಂತಕಥೆ ಈ ರೀತಿಯಾಗಿದೆ. ಒಂದಾನೊಂದು ಕಾಲದಲ್ಲಿ ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ರಾಕ್ಷಸ ಸಹೋದರರಿದ್ದರು. ಅವರಿಬ್ಬರೂ ಎಂದು ಆಹಾರದ ಹುಡುಕಾಟಕ್ಕೆ ಹೋಗುತ್ತಿರಲಿಲ್ಲ. ತಮ್ಮ ಮನೆಬಾಗಿಲಿಗೇ ಬಲಿಯನ್ನು ಕರೆತರುವ ಅಸಾಧಾರಣ ತಂತ್ರ ಅವರಲ್ಲಿತ್ತು. ಇಲ್ವಲ ಅತಿಥಿಯೊಬ್ಬರನ್ನು ಕರೆತಂದು ಅವರಿಗೆ ವಾತಾಪಿಯ ದೇಹದಿಂದ ತಯಾರಿಸಿದ ಅಡುಗೆ ಮಾಡಿ ಬಡಿಸುತ್ತಿದ್ದ. ಅತಿಥಿ ಉಂಡ ಬಳಿಕ ಇಲ್ವಲ ‘ವಾತಾಪೀ ಹೊರಗೆ ಬಾ’ ಎಂದು ಜೋರಾಗಿ ಕೂಗುಹಾಕುತ್ತಿದ್ದ ತಕ್ಷಣ ವಾತಾಪಿ ಆ ಅತಿಥಿ ಹೊಟ್ಟೆ ಬಗೆದು ಹೊರ ಬರುತ್ತಿದ್ದ ಸತ್ತುಬಿದ್ದ ಆ ಅತಿಥಿಯನ್ನು ಇಬ್ಬರೂ ಸೇರಿ ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು.
ಅವರ ದಿನಚರಿ ಹೀಗಿರುವಾಗ ಒಮ್ಮೆ ಅಗತ್ಯಮುನಿ ಅತಿಥಿಯಾಗಿ ಬಂದರು.
ಅಗಸ್ತರು ತಮ್ಮ ಊಟವಾದ ತಕ್ಷಣ ‘ವಾತಾಪಿ ಜೀರ್ಣೋಭವ’ ಎಂದು ಹೇಳಿ ಜೋರಾಗಿ ತೇಗಿದರು. ಆ ಮೂಲಕ ವಾತಾಪಿ ತನ್ನ ಅಣ್ಣನಿಂದಲೇ ಸಾವಿಗೀಡಾದ ಅವರಿಬ್ಬರೂ ಇದ್ದ ಊರಿಗೆ ‘ವಾತಾಪಿ’ – ಬಾದಾಮಿ ಎಂಬ ಹೆಸರು ಬಂತು.
ಬದಾಮಿಯ ಬೆಟ್ಟದ ಕೆಳಗೆ ಇರುವ ವಿಶಾಲವಾದ ಜಲಾಶಯಕ್ಕೆ ಇಂದಿಗೂ ಅಗಸ್ಯ ತೀರ್ಥ ಮಹಾ ಸರೋವರವೆಂದು ಕರೆಯಲಾಗಿದೆ.
_ಚಾಲುಕ್ಯ ಪೂರ್ವ ಬಾದಾಮಿ_
ಹಿಂದಿನ ಕಾಲದಿಂದಲೂ ಮಲಪ್ರಭಾ ನದಿಯ ಬಯಲು ಸಂಸ್ಕೃತಿಯ ತೊಟ್ಟಿಲಾಗಿದೆ. ಬಾದಾಮಿಯ ಸಾಬರ ಫಡಿಯ ಹತ್ತಿರ ಹಳೆ ಶಿಲಾಯುಗದ ಕೈಕೊಡಲಿ, ಮಚ್ಚುಗಳು ದೊರೆತಿವೆ ಮತ್ತು ದಕ್ಷಿಣ ಭಾಗದಲ್ಲಿರುವ ರಂಗನಾಥ ಬೆಟ್ಟದ ಬಂಡೆಯೊಂದರ ಮೇಲೆ ಸೂಕ್ಷ್ಮಶಿಲಾಯುಗದ ವರ್ಣಚಿತ್ರಗಳಿರುವದನ್ನು ಕಾಣಬಹುದು.
_ಸಿಡಿಲಫಡಿ_
ಇದು ಬಾದಾಮಿಯಂದ 4 ಕಿ.ಮೀ. ದೂರದಲ್ಲಿದೆ. ಇದೊಂದು ನೈಸರ್ಗಿಕ ಶಿಲಾ ಗುಹೆಯಂತಿರುವ ಸಿಡಿಲಫಡಿ ಒಂದು ಮಹತ್ವದ ಪ್ರಾಗೈತಿಹಾಸಿಕ ನೆಲೆಯಾಗಿರುತ್ತದೆ. ಈ ಸಿಡಿಲಫಡಿಯು ಶಿಲಾಯುಗದ ಕಾಲದಿಂದಲೂ ಮನಷ್ಯನ ನಿತ್ಯ ನಡೆಯುವ ದೈನಂದಿನ ಚಟುವಟಿಕೆಯ ಸ್ಥಳವಾಗಿತ್ತು. ಬಾದಾಮಿಯು ಮೊದಲ ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತು. ನಂತರ ಶಾತವಾಹನರ ಪಾಲಾಯಿತು. ಶಾತವಾಹನರ ಸಾಂಸ್ಕೃತಿಕ ಅವಶೇಷಗಳಾದ ಇಟ್ಟಿಗೆಗಳು, ಮಣ್ಣಿನ ಪಾತ್ರೆಗಳ ಚೂರುಗಳು ಮತ್ತು ನಾಣ್ಯಗಳು ಕೂಡಾ ಸಿಕ್ಕಿರುತ್ತವೆ. ಅಗತ್ಯ ತೀರ್ಥ.
ಅಗತೀರ್ಥ ಪೌರಾಣಿಕವಾಗಿ, ಐತಿಹಾಸಿಕವಾಗಿ ಮಹತ್ವದ ಸ್ಥಾನದಲ್ಲಿದೆ. ಕಳೆದ 2-3 ವರ್ಷಗಳ ಹಿಂದೆ (2001-2004) ವರುಣನ ಅವಕೃಪೆಯಿಂದಾಗಿ ಅಗಸ್ಕೃತೀರ್ಥ ತನ್ನ ಕಳೆ ಕಳೆದುಕೊಂಡಿತ್ತು. ಈಗ ಇದು ಭರಪೂರ ಜಲಾಮಯ ನೋಡಲು ಎರಡು ಕಣ್ಣು ಸಾಲವು ಎಂಬಂತಿದೆ. ಪ್ರವಾಸಿಗರ ಮನಸ್ಸೆಳೆಯಲು ಸರಕಾರ ಈಚೆಗಷ್ಟೆ ಮತ್ತೊಂದು ಆಕರ್ಷಕ ಕಾರ್ಯಕ್ಕೆ ಕೈಹಾಕಿ ಯಶಸ್ವಿಯಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾಡಳಿತಗಳು ವಿಶಾಲ ನೀರಿನ ಪರಿಸರವನ್ನು ದೋಣಿ
ವಿಹಾರ ತಾಣವನ್ನಾಗಿ ಪರಿವರ್ತಿಸಿರುವುದು ಆಕರ್ಷಣೀಯವಾಗಿದೆ. ಮೈ ಮನಸ್ಸುಗಳಿಗೆ ಮುದ ನೀಡುವ ಈ ಜಲವಿಹಾರದ ಸವಿ ಅನುಭವಿಸಲು ಈಗ ಸಾವಿರಾರು ಪ್ರವಾಸಿಗರು ಬರುತ್ತಾರೆ. ಏಳು ದೋಣಿಗಳು ಅಗತೀರ್ಥದಲ್ಲಿ ತೇಲುತ್ತವೆ. ಅಕ್ಕ-ತಂಗಿ ಹೆಸರಿನ ಜೋಡಿ ಜಲಧಾರೆ, ನೋಡುಗರ ಕಣ್ಮನ ಸೆಳೆಯುತ್ತದೆ.
ಒಟ್ಟಾರೆ ಕಣ್ಣು ಹಾಸಿದೆಡೆ ಮನಸೆಳೆಯುವ ಹಳದಿ, ಕೆಂಪು, ನಸುಗೆಂಪು ಶಿಲೆಗಳ ಚಿತ್ತಾರ ಶಿಲ್ಪಗಳು ಅಲ್ಲದೆ ಬೆಟ್ಟಗಳ ಅಪೂರ್ವ ನೋಟಗಳು ದೋಣಿ ವಿಹಾರದ ವೇಳೆ ಕಂಡುಬರುತ್ತದೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಕಿರಣಗಳ ದೃಶ್ಯಾವಳಿ ನೋಡುವುದೇ ಒಂದು ಸಂಭ್ರಮ.
_ಮೇಣ ಬಸದಿಗಳು_
ಅಖಂಡವಾದ ಬಂಡೆಯನ್ನು ಕೊರೆದು ನಿರ್ಮಿಸಲಾದ ಕಲ್ಪನೆಗಳಾಗಿವೆ. ಬಾದಾಮಿಯಲ್ಲಿ ನಾಲ್ಕು ಗುಹಾಂತರ ದೇವಾಲಯಗಳಿದ್ದು ಅವೆಲ್ಲ ಉತ್ತರಾಭಿಮುಖವಾಗಿವೆ. ರೂಡಿಯಲ್ಲಿ ಮೇಣ ಬಸದಿಗಳೆಂದು ಕರೆಯಲಾಗುತ್ತಿದೆ. ನಿಜವಾಗಿ ಇವು ಮೇಗಣ ಬಸದಿಗಳು ಅಥವಾ ಮೇಲಣ ಬಸದಿಗಳಾಗಿವೆ.
……. ಮುಂದುವರೆಯುತ್ತದೆ
– ವಿಶ್ವಾಸ್. ಡಿ.ಗೌಡ
ಸಕಲೇಶಪುರ