ಬಿಡುಗಡೆ-೧
ಏನೆಂದು ಬರೆಯಲಿ ಹರಿದು ಹೋಗುವ ಹಾಳೆಗಳ ಮೇಲೆ ಭಾವನೆಗಳ ಹೋಲಿಯನ್ನು ಕನ್ನಡ ಒಂದು ಪರಿಶುದ್ಧ ಭಂಡಾರ ಕೋಶ ಕಲ್ಪನೆಯ ಗಂಟು ಬಿಡಿಸಲಾರದೆ ಉಳಿದರೆ ಕವಲು ದಾರಿಗಳು ನೂರೆಂಟು ಬದುಕಿನ ಭವಣೆಗಳು ಬರಿದಾದರೆ ಬದುಕಿನ ಕನಸಿನ ದಾರಿ ಬರಿ ಕತ್ತಲೆ. ಬೆಳಕಿಗೆ ಭೇದವಿಲ್ಲ ಕತ್ತಲೆಗೆ ನಾಚಿಕೆ ಇಲ್ಲ ಇವೆರಡರ ಮಧ್ಯೆ ಬಂದು ಹೋಗುವ ಮಧ್ಯಾಹ್ನಕ್ಕೆ ಸಂಕೋಚ ಎಂಬ ಬಿಂಕವಿಲ್ಲ ಹಣವೆಂಬ ಪಲ್ಲಂಗ ಹೆಣ್ಣೆಂಬ ನಾಚಿಕೆ ಹೋನ್ನು ಎಂಬ ಶೃಂಗಾರ ಈ ತ್ರಿಮೂರ್ತಿಗಳ ಸಂಗಮ ಸಂಸಾರ ಸರಸ ವಿರಸ ಗಳನ್ನು ವೇಷಗಳನ್ನು ಸೃಷ್ಟಿ ಮಾಡಿ ಮತ್ತೆ ವಂಶವೃಕ್ಷವನ್ನು ಬೆಳೆಸಿ ಸಮರಸ ಜೀವನವನ್ನು ತಂದುಕೊಡುವ ನೆನ್ನೆ ನಾಳೆಗಳೆ ನಿಮಗೆ ಥ್ಯಾಂಕ್ಸ್ ಎನ್ನುವ ನಾಡಿನೊಳಗೆ ನಾವಿರಲು ಅದ್ಬುತ. ಅನುಭವ ಎನ್ನುವುದು ಜೀವನದಲ್ಲಿ ಕಲಿಸುವ ಒಂದು ಪಾಠ ಆ ಪಾಠದ ಆಟದಲ್ಲಿ ಜಯ ನಮ್ಮ ಪಾಲಿಗೆ ಒಂದು ಮಹಾ ವರದಾನವಾಗಬೇಕು ಜೀವನದ ಒಂದೊಂದು ಹೆಜ್ಜೆಯೂ ಹುಲಿ ಹೆಜ್ಜೆ ಆಗಿರಬೇಕು ಮೊದಲು ಅಚಲವಾದ ನಂಬಿಕೆ ದೃಢವಾದ ಆತ್ಮವಿಶ್ವಾಸ ನಮ್ಮ ಸಾಧನೆ ಎಂದಿಗೂ ಆಗದಿರಲಿ ವೇದನೆ. ಕಾಯಕವೇ ಕೈಲಾಸ ಕೈ ಕೆಸರಾದರೆ ಬಾಯಿ ಮೊಸರು ಎಂಬ ತತ್ವ ಮರೆತರೆ ಯಾವುದಕ್ಕೂ ಮೋಕ್ಷವಿಲ್ಲ ದಿಕ್ಕು ಇಲ್ಲದ ದಾರಿಯಲ್ಲಿ ಪಯಣ ಸಾಧ್ಯವೇ?
ಗುರಿ ಇಲ್ಲದ ಬಾಣ ಬಿಟ್ಟರೆ ಗಿರಿ ಸೇರಲು ಸಾಧ್ಯವೇ ? ಶರಣ ಅಂದವರಿಗೆ ಮರಣವಿಲ್ಲ ಅಂದರೆ ನಮ್ಮ ಗುರಿ ಜೀವನದ ನಗುವಿನ ಗೆಲುವಿನ ಕಡೆ ಇರಲಿ ಎಂದರ್ಥ. ಬಂಧುಗಳೇ ನಮ್ಮ ಒಲವಿನ ಹಾದಿಗೆ ಗೆಲುವಿನ ಪಯಣ ನಿರಂತರ ಸಾಗಲಿ ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಿನ ಗುಳ್ಳೆ ನರಹರಿಯೆ, ಪ್ರೀತಿಯೆಂಬ ನೋವಿನಲ್ಲಿ ಶಾಂತಿ ಇಲ್ಲದ ಜೀವನದಲ್ಲಿ ಏನೆಂದು? ಗೀಚಿದನು ಆ ಬ್ರಹ್ಮ ಸೋಲು ಹತಾಶೆ ಜಿಗುಪ್ಸೆ ಜಿಜ್ಞಾಸೆ ನೋವು ನಿರಾಸೆ ಇವುಗಳಿಗಿಂತ ದೊಡ್ಡ ವೈರಿ ಯಾರಿರಲು ಸಾಧ್ಯ? ಹೆಜ್ಜೆ ಹೆಜ್ಜೆಗೂ ಹಿಂಸೆ ನೋವು ಅವಮಾನಗಳಂತಾದರೆ ಜೀವನ ಹೇಗೆ ಮತ್ತೆ ಎಂಬ ಪ್ರಶ್ನೆ?
ಹೀಗೆ ಸುಮ್ಮನೆ:
ಓ ನನ್ನ ಮಧುರ ಮುದ್ದಿನ ಗೆಳತಿ ಜೀವನದಲ್ಲಿ ಕಳೆದ ಸಂಗತಿಗಳನ್ನೆಲ್ಲ ಮರೆತು ನೀ ಬಾಳು ನನಗಷ್ಟೇ ಸಾಕು ನೆನಪುಗಳನ್ನು ತೊಟ್ಟಿಲಂಬ ಬಟ್ಟಲದೊಳಗೆ ಸುಖವಾಗಿ ನಿನ್ನ ಸಖನೊಂದಿಗೆ ಬಾಳು ನನಗಷ್ಟೇ ಸಾಕು ಒಂದು ಯುಗಕ್ಕಿಂತ ಹೆಚ್ಚು ನಿನ್ನೊಂದಿಗೆ ಕಳೆದ ಆ ಸುಂದರ ಕ್ಷಣಗಳು ಸಾಕು ನನ್ನ ಬದುಕಿನ ಕಲ್ಪನೆಯ ಕನಸಿಗೆ ಕಣ್ಣು ಕೊಟ್ಟ ದೇವತೆ ನೀನು ಯಾವಾಗಲೂ ನಗುನಗುತ್ತ ಇರು ನನಗಷ್ಟೇ ಸಾಕು ಗಾಳಿಗೆ ಹಾರದಿರಲಿ ಚಳಿಗೆ ಮಳೆಗೆ ತಾಗದಿರಲಿ ಸೆಖೆಗೆ ಬೆವರದಿರಲಿ ನಿನ್ನ ಬದುಕಿನ ದೀಪ.
ಸದಾ ನಗುತಿರಲಿ ನಿನ್ನ ಹಣೆಯಲ್ಲಿ ಕುಂಕುಮ ನಿನ್ನ ಬದುಕು ನಗುತ್ತಿದ್ದರೇ ನನ್ನ ಬದುಕು ಸುಂದರ ಪ್ರೀತಿ ನಿಜವಾದ ಒಂದು ನೀತಿ ಜೀವನದಲ್ಲಿ ತ್ಯಾಗ ಒಂದು ದೊಡ್ಡ ಸಾಧನೆ ಆದರೆ ಅದು ಒಂದು ರೋಗವು ಹೌದು ಮನವೆಂಬ ನಿರ್ಮಲ ಜಲದೊಳಗೆ ಧುಮುಕಿಸಿ ದಡ ಸೇರದಿದ್ದರು ಚೂರು ಕರಗಲಾರದ ರೂಪವೇ ನಿನ್ನಷ್ಟು ಚಂದ ಸಮೃದ್ಧಿ ಸದ್ಗುಣಗಳನ್ನು ಬೆಳೆಸಿಕೊಂಡ ಓ ಮನಸೇ ನೀನೆಷ್ಟು ಚಂದ ಸೋಲಿನಲ್ಲಿ ನಗು ನಗುತ ಹೊಸ ಹೆಜ್ಜೆಯನ್ನಾಕಲು ಅನಿವಾರ್ಯ ಅದೇ ಜೀವನ. ಮಾನ ಅಪಮಾನಗಳ ನಡುವೆ ಈ ಜೀವನ ನಡೆಯುತ್ತಿರುವಾಗ ಎಲ್ಲವೂ ಅನಿವಾರ್ಯ ದಯೆ ದಾಕ್ಷಿಣ್ಯ ಇಲ್ಲದೆ ಕರುಣೆ ಅನುಕಂಪ ವಿಲ್ಲದೆ ಮಮಕಾರ ಮಾನವೀಯ ಮೌಲ್ಯಕ್ಕೆ ಬೆಲೆ ಎಲ್ಲಿದೆ? ನಮ್ಮನ್ನು ಸೃಷ್ಟಿ ಮಾಡಿ ಭೂಮಿಗೆ ತರುವ ತಾಯ ಗರ್ಭವನ್ನು ಹಲ್ಲೆಗಳದು ಅವಮಾನ ಮಾಡಿ ಮೂರು ಕಾಸಿಗೆ ಹರಾಜು ಹಾಕಿಬಿಟ್ಟರು ಸಹಿಸಿಕೊಂಡಳು ಈ ಶ್ರೀ ಮಾತೆ ಕರುಣಾಮಯಿ ಭೂತಾಯಿ ಎಚ್ಚೆತ್ತುಕೊಳ್ಳುವ ಎಷ್ಟೊಂದು ಸದಾ ಅವಕಾಶಗಳನ್ನು ಕೊಟ್ಟು ಕಾಪಾಡಿದರು ಅರಿವು ಎಂಬ ಜ್ಞಾನ ಮರೆತುಬಿಟ್ಟೆವೇ ಮಾಡಿರುವ ಮತ್ತು ಮಾಡುತ್ತಿರುವ ದೌರ್ಜನ್ಯಗಳ ದರ್ಪಗಳ ಕಥೆ ಹೇಳುತ್ತಾ ಹೋದರೆ ಕೊನೆಯಿಲ್ಲ ನೆವರ್ ಹೆಂಡ್. ಸೃಷ್ಟಿ ಎಂಬ ಪರ್ವತವನ್ನು ನಾಶ ಮಾಡುತ್ತಿರುವ ಹೇ ಮಾನವ ನೀ ಎಚ್ಚರ ಎಂದಷ್ಟೇ ನೊಂದ ಜೀವಿಯ ಒಂದು ಸಣ್ಣ ಮನವಿ.
ಅಡಿಗಲ್ಲು ನೀನಾದರೆ ನಿನ್ನ ಮಡಿ ಮಾಡುವವರು ಯಾರು ಸ್ವಾಮಿ ನಾನು ನಿರ್ವಿಕಾರ ನನಗೆ ಯಾವ ಮಾಡಿ ನನಗೆ ಯಾವ ಮೈಲಿಗೆ ನಿಮಗೆ ಬೇಕಾಗಿ ನಾನು ಬಂದನೆ ಹೊರತು ನನಗಾಗಿ ನಾನು ಬರಲಿಲ್ಲ ಎಂದ ಕೂಡಲೇ ಚುಮುಚುಮು ಬೆಳಗಾಯಿತು ಕಣ್ ಬಿಟ್ಟರೆ ಕನಸು ಒಂದು ಸಂಸಾರ ದಡ ಸೇರದೆ ನಿಂತರೆ ಬಾಳೊಂದು ಶೊಚನಿಯ ಅಲ್ಲವೇ !?
ಓದುಗರು ಗಮನಕ್ಕೆ ಯಾವ ಅರ್ಥವಾಗದೆ ಗೊಂದಲ ಶುರುವಾಗುತ್ತೆ ಪ್ರೀತಿಯ ಬಂದುಗಳೇ ಕ್ಷಮಿಸಿ ಗೊಂದಲಕ್ಕೆ ಗುರಿ ಮಾಡುವುದು ಈ ಬರವಣಿಗೆಯದಲ್ಲ ಈ ಜೀವನದಲ್ಲಿ ಊಹ ಪೂಹಗ
ಳಿಗೆ ಬೆಲೆ ಇದ್ದಷ್ಟು ಕೊಡುವಷ್ಟು ನಾವುಗಳು ಬೇರೆ ಯಾವುದಕ್ಕೂ ಅಷ್ಟೊಂದು ಸಮರ್ಪಕವಾಗಿ ಬೆಲೆ ತರುವುದಿಲ್ಲ ಎನ್ನುವುದು ನನ್ನ ಅನಿಸಿಕೆ. ಇನ್ನೂ, ಮುಂದೆ ಗೊಂದಲ ಮಾಯವಾದ ಜೀವನದಲ್ಲಿ ಗೋವಿಂದನ ನಾಮವು ಕಾಣೆಯಾಗಿದೆ ಅಂದ್ರೆ ನಾವುಗಳು ಯಾವ ಹಂತಕ್ಕೆ ತಲುಪಿದ್ದೇವೆ ಎನ್ನುವುದನ್ನು ಲೆಕ್ಕ ಹಾಕಬೇಕಾಗಿಲ್ಲ ಇರಲಿ, ಆಸೆ ಎಂಬ ಗೋಪುರ ಪ್ರೀತಿ ಎಂಬ ಸಾಗರ ಕನಸು ಎಂಬುದು ಸುಂದರ ನಾವಿಬ್ಬರು ಬೆರೆತು ಬಾಳಿದರೆ ಅತಿ ಮಧುರ.
ಹೀಗೆ ದಾರಿಯಲ್ಲಿ ಒಬ್ಬನೇ ಸಾಗುತ್ತಿರುವಾಗ ಆಲೋಚನೆಗಳು ಒಂದ ಎರಡ ಅಥವಾ ಸುಮ್ಮನೆ ಕುಳಿತಾಗ ಹೀಗೆ ಸ್ನೇಹಿತರೇ ನನ್ನ ಬದುಕು ನಡು ನೀರಿನಲ್ಲಿ ಇಟ್ಟ ದೀಪವಾಯಿತು. ನಾವಿಬ್ಬರು ಮಕ್ಕಳ ಬಗ್ಗೆ ಆಲೋಚನೆ ಮಾಡಿದ್ದು ಹೀಗೆ
ಅಜ್ಜ:- ಅಲ್ಲೇ ಯಾಕೆ ಕೊರಗುತ್ತಾ ಮನದಲ್ಲಿ ಮಾಡುತ್ತಿರುವೆ ಮಕ್ಕಳ ಚಿಂತೆ ಗಂಜಿಗೂ ಗತಿಯಿಲ್ಲದ ಹೊತ್ತಿನಲ್ಲಿ ನಮ್ಮ ಹೊಟ್ಟೆ ಕಟ್ಟಿ ಮಕ್ಕಳ ನಮಗೆ ಸಂಪತ್ತು ಎಂದು ಭಾವಿಸಿ ಬೆಳೆಸಿದ ನಮ್ಮ ಭಾವನೆಗಳೆಲ್ಲ ಭ್ರಮೆಯೆಂದು ಭಾವಿಸು, ಸಂಪತ್ತು ಇಲ್ಲದಿರುವಾಗ ನಮ್ಮನೆಯಲ್ಲಿ ಆರೋಗ್ಯ ನೆಮ್ಮದಿ ಇತ್ತು ಕಳೆದ ನಮ್ಮ ಜೀವನವೆಲ್ಲ ಕನಸೆಂದು ತಿಳಿಸ ಕಸದಂತೆ ಕಾಣುವ ನಮ್ಮ ಮಕ್ಕಳು ಮಸಣದ ಹೂವೆಂದು ಭಾವಿಸು ಹಡೆದವರನ್ನು ಧಿಕ್ಕರಿಸಿ ಜೂಜು ಮೋಜುನ ಮಸ್ತಿಯಲ್ಲಿ ಝೆಂಕರಿಸುವ ಅವರಿಗೀಗ ನಮ್ಮ ಕರುಳಿನ ವೇದನೆಯ ಕೂಗು ಮಂಜು ಕವಿದ ಮುಸುಕಿನಂತಾಗಿದೆ ಹಸು ಕರುವಿನಂತಿರುವ ನಮ್ಮ ಮುದ್ದು ಮಗನಿಗೊಂದು ಹುಡುಗಿ ನೋಡಿ ಮದುವೆ ಮಾಡಿ ವೈಭವದಲ್ಲಿ ಜೋಡಿ ಮೆರವಣಿಗೆ ಮಾಡಿ ಅಬ್ಬರದ ಕೊಪ್ಪರಿಗೆಯಲ್ಲಿ ಬಾರಿ ಭೋಜನ ಮಾಡಿ ನೀಡಿ ಶೃಂಗಾರದಂತಿರುವ ಬಂಗಾರದ ಸೊಸೆಗೆ ಒಡವೆ ತಂದು ಮಗನಿಗೊಂದು ಮದುವೆ ಮಾಡಿದ್ದಕ್ಕೆ ಅವರು ನಮಗೆ ಕೊಟ್ಟ ಒಲವಿನ
ಉಡುಗೊರೆ ಇದು. ಬೇಕಾದಷ್ಟು ಸಂಪತ್ತಿದ್ದರು ನೆಮ್ಮದಿಯಾಗಿ ಅನುಭವಿಸುವ ನಿಜವಾದ ಸಂಪತ್ತೆ ನಮ್ಮಿಂದ ದೂರ ಆಗಿದೆ ಅಷ್ಟೇ.
ಅಜ್ಜಿ:- ರಿ ನೀವು ಎಷ್ಟೇ ಆದರೂ ಗಂಡಸರು ದುಃಖ ಸಂಕಟ ತೆಗೆದುಕೊಳ್ಳುವ ಶಕ್ತಿ ದೇವರು ನಿಮಗೆ ಕೊಟ್ಟ ಒಂದು ವರದಾನ ಆದರೆ ನಾವಾಗಲ್ಲ ಕರುಳಿನ ಮಿಡಿತ ಹೃದಯದ ಸೆಳೆತ ಮನಸ್ಸಿನ ತವಕ ಸದಾ ಎದೆಯಲ್ಲಿ ಕೂಗುತ್ತಿರುತ್ತೆ ಅಳುವಾಗ ಕೈ ಬೀಸಿ ಕರೆದು ಮುದ್ದು ಮಾಡಿ ಎದೆ ಹಾಲುಣಿಸಿ ಲಾಲಿ ಹಾಡಿ ನಿದ್ದೆ ಮಾಡಿಸುವ ಮಕ್ಕಳಿಗೆ ಹೆತ್ತವರೆಂದು ಆಗಬಾರದು ಶಾಪ. ಮಡಿಲಂಬ ಒಡಲಿನಲಿ ಕರುಣೆಯಿಂದ ಪಡೆದ ಮಗನಿದ್ದರೂ ಬರಿದಾದ ಬಂಜಿಯ ಬಾಳಿನಂತೆ ಬರುಡಾದ ಬಡಬಾಳು ನಮ್ಮದಾಗಿದೆ. ಕರುಳ ಬಳ್ಳಿ ಹಬ್ಬಿಸುವ ಮಗ ಸೊಸೆಗೆ ಶುಭ ಹಾರೈಸೋಣ ರಿ,.
ಅಜ್ಜ:- ಹೆತ್ತವರ ಆಶೀರ್ವಾದ ಸದಾ ಕಾಲ ಚಿರವಾಗಿರುತ್ತೆ ಆದರೆ ತಿಳುವಳಿಕೆ ಇಲ್ಲದೆ ಮಾಡಿದ ತಪ್ಪುಗಳನ್ನ ಎಚ್ಚರ ಮಾಡುವ ಒಂದಲ್ಲ ಒಂದು ರೂಪದಲ್ಲಿ ಬಂದು ತಿಳಿ ನೀಡುತ್ತದೆ ಆಗಲು ನಾವು ಹಠ ದ್ವೇಷ ಬಿಡದೆ ಕವಲು ದಾರಿಯಲ್ಲಿ ಮುಳ್ಳು ಕಲ್ಲುಗಳೆ ಹೆದ್ದಾರಿ ಎಂದು ಭಾವಿಸಿ ಹೊರಟರೆ ಪೆಟ್ಟು ಯಾರಿಗೆ? ಇದು ಜಗತ್ತಿನಲ್ಲಿ ಯಾರನ್ನು ಬಿಟ್ಟಿಲ್ಲ ಎನ್ನುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ ಮರೆಯಬಾರದು.(ಮುಂದುವರೆಯುತ್ತದೆ)
*************************🩷🩷🩷🩷🩷🩷🩷🩷
ಭಾವನೆಗಳ ಆರಾಧಕ ಪ್ರೀತಿಯಿಂದ ✍️ ಚನ್ನವೀರಸ್ವಾಮಿ ಹೀರೆಮಠ ಹೊಳಗುಂದಿ