ಬಾ ಬಾರೆ ಮೆಲ್ಲಗೆ
ಕಾಲ್ಗೆಜ್ಜೆ ನಾದಕೆ
ಮನಸೋತೆ ನಾಟ್ಯಕೆ
ಹೆಜ್ಜೆ ಹಾಕಿ ತಾಳಕೆ
ಲಗ್ಗೆ ಇಟ್ಟೆ ಹೃದಯಕೆ
ನಿನ್ನ ಮೊಗದಿ ಕಿರುನಗೆ
ಬಿರಿದ ಅರಳು ಮಲ್ಲಿಗೆ
ಬಾ ಬಾರೆ ಮೆಲ್ಲಗೆ
ಉಸಿರು ನೀಡು ಬಾಳಿಗೆ
ನೀ ನಾಟ್ಯ ರಾಣಿಯೋ
ಚಂದ್ರ ಚಕೋರಿಯೋ
ಹುಣ್ಣಿಮೆಯ ಬೆಳಕನು
ನಾಚಿಸುವ ದೇವಿಯೋ
ಕುಣಿ ಕುಣಿದು ಬಾ ನವಿಲೇ
ನಾ ಹಾಡುವೆ ಕೋಗಿಲೆ
ಮಾಮರದ ಇಂಚರಕೆ
ದನಿಯಾಗುತ ಹಾಡಲೇ
ಮುಂಗಾರಿನ ಚೆಲುವಲಿ
ಮೈದುಂಬಿಹ ಕೆರೆಯಲಿ
ಈಜಾಡುತ ಬಾನಾಡಿ
ಸಾಗುತಲಿವೆ ಜೊತೆಗೂಡಿ
ಜೀವನದ ಪಯಣದಲಿ
ಜೊತೆ ಸಾಗುವ ನೌಕೆಯಲಿ
ಕಾಪಿಡುವೆ ಎನ್ನೊಲುಮೆಯಲ್ಲಿ
ನನ್ನ ಕಣ್ರೆಪ್ಪೆಯಲಿ
✍️ ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು