ಹಿರೇಮಳಗಾವಿಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ

ಹಿರೇಮಳಗಾವಿಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ
ಹಿರೇಮಳಗಾವಿಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮವು ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ನೆರವೇರಿತು. ಮೊದಲಿಗೆ ಎಲ್ಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಸರಸ್ವತಿ ಪೂಜೆಯನ್ನು ನೆರವೇರಿಸಿ ವಿದ್ಯಾರ್ಥಿಗಳ ಜೊತೆಗೆ ಇಡೀ ಊರಿನ ತುಂಬೆಲ್ಲ ಘೋಷವಾರು ಪಲಕಗಳ ಜೊತೆಗೆ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿದರು. ತದನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕೆಲವು ವಿದ್ಯಾರ್ಥಿಗಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಯಿತು. ಮೊದಲ ದಿನವೇ ಶಾಲೆಗೆ ಸುಮಾರು 50 ಜನ ವಿದ್ಯಾರ್ಥಿಗಳು ಬಂದಿದ್ದು ಸಂತಸಕರ ವಿಷಯ. ವಿದ್ಯಾರ್ಥಿಗಳಿಗೆ ಸಿಹಿ ಊಟ ನೀಡಿ ಮೊದಲ ದಿನದ ಸಂಭ್ರಮವನ್ನು ಯಶಸ್ವಿಗೊಳಿಸಲಾಯಿತು.
ಮುಖ್ಯ ಗುರು ಮಾತೆಯರಾದ ಶ್ರೀಮತಿ ಬಿ. ಬಿ ದೇವದುರ್ಗ, ಹಿರಿಯ ಶಿಕ್ಷಕರಾದ ಶ್ರೀ ಬಿ. ಎಂ ಅಂಗಡಿ ಹಾಗೂ ಶ್ರೀ ಎಮ್ ಹೆಚ್ ಪೂಜಾರಿ ಗುರುಗಳು ಮತ್ತು ಶ್ರೀ ಮುತ್ತು ಯ.ವಡ್ಡರ, ಶ್ರೀ ಹೆಚ್ ಬಿ ಮಾದರ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದರು ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರು,ಸದಸ್ಯರು ಮತ್ತು ಊರಿನ ಗುರು ಹಿರಿಯರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.