ಎಚ್ಚರಾಗು ಮತದಾರ ಪ್ರಭು

ಏಳಿ ಅಕ್ಕ ತಂಗಿಯರೇ
ಏಳಿ ಅಣ್ಣ ತಮ್ಮದಿರೆ
ಎದ್ದೇಳಿ ತಂದೆ ತಾಯಿ ಸಮಾನರೇ
ಕಣ್ಣ ತೀಡಿ ಎದ್ದೇಳಿ ನವ ಭಾರತದ ಯುವಕ ಯುವತಿಯರೆ

ದೇಶದ ಹಬ್ಬ ಮಾಡೋಣ ಬನ್ನಿ
ನಮ್ಮೆಲ್ಲ ಹಕ್ಕನ್ನು ಪಡೆಯೋಣ ಬನ್ನಿ
ದೇಶದ ಕರೆ ಕೇಳೆ ಓ ಗೊಟ್ಟು ಬನ್ನಿ
ಮತದಾನ ಮಾಡಲು ಮರೆಯದೇ ಬನ್ನಿ

ಅಂದು ಬಂಗಾಳ ಹಿಂದೆ ಕಾಶ್ಮೀರ
ಮೊನ್ನೆ ಮಲಯಾಳ ತೀರ
ನೆನ್ನೆ ಅಕ್ಕಪಕ್ಕದೂರ
ಹೆಂಗೆಳೆಯರು ಬಲಿಯಾಗುತಿಹರ

ಎಚ್ಚರಾಗಬೇಕಿದೆ ನಾವು ಈಗಿಂದೀಗಲೇ
ಇಲ್ಲದಿರೆ ಕಣ್ಣೀರು ವರ್ಷಾನುಗಟ್ಟಲೆ
ಎಚ್ಚರದೀ ನೀವ್ ಮತ ಚಲಾಯಿಸ್ರಲೇ
ರಜವೆಂದು ಕೂರದಿರಿ ಮನೆಯಲ್ಲೇ

ಯೋಗ್ಯ ನಾಯಕನ ಆರಿಸೋಣ
ದೇಶವನು ಪಣಕೆ ಇಡದಿರೋಣ
ನಾಡು ನುಡಿ ಸಂಸ್ಕೃತಿಯ ಮರೆಯದಿರೋಣ
ರಾಮರಾಜ್ಯದ ಕನಸು ನನಸು ಮಾಡೋಣ

ಜಾತಿ ಪಂತ ಮತ ಗಳ ಬದಿಗಿಟ್ಟು
ದೇಶದ ಹಿತವನು ಮನದೊಳಿಟ್ಟು
ದೂರದೃಷ್ಟಿ ಕಡೆಗೆ ಲಕ್ಷ್ಯ ಕೊಟ್ಟು
ಹಾಕೋಣ ಮರೆಯದೇ ನಮ್ಮ ಓಟು

✍️ ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು